Tag: ಬಾಲಕಿ

  • ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ನಿರಂತರ 2 ಗಂಟೆ ಗ್ಯಾಂಗ್ ರೇಪ್!

    ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ನಿರಂತರ 2 ಗಂಟೆ ಗ್ಯಾಂಗ್ ರೇಪ್!

    ಚಂಡೀಗಢ: ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ಬಳಿಕ ಚಲಿಸುತ್ತಿದ್ದ ಕಾರಿನಲ್ಲಿಯೇ ನಿರಂತರ 2 ಗಂಟೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

    ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಆರೋಪಿಯ ಬಂಧನವಾಗಿಲ್ಲ.

    ನಡೆದಿದ್ದೇನು?:
    ಮಹಿಳೆ ಶನಿವಾರ ಸಂಜೆ 7 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ತನ್ನ ಕಚೇರಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎಸ್‍ಯುವಿ ವಾಹನದಲ್ಲಿ ಬಂದ ಕಾಮುಕರು, ಈಕೆಯ ಮುಂದೆ ವಾಹನ ನಿಲ್ಲಿಸಿ, ಆಕೆಯನ್ನು ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ವಾಹನ ಚಲಿಸುತ್ತಿದ್ದಂತೆಯೇ ಕಾಮುಕರು ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಹಿಳೆ ಇದ್ದ ಸ್ಥಳದಿಂದ ಸುಮಾರು 20 ಕಿಮೀ ದೂರದಲ್ಲಿರೋ ಸಿಕ್ರಿ ಗ್ರಾಮದ ಪೆಟ್ರೋಲ್ ಪಂಪ್ ಬಳಿಕ ಆಕೆಯನ್ನು ಎಸೆದು ಹೋಗಿದ್ದಾರೆ.

    ಕ್ರೈಂ ಬ್ರ್ಯಾಂಚ್ ಅಧಿಕಾರಿ ಹೇಳಿದ್ದೇನು?
    ಮಹಿಳೆಯ ದೇಹದಲ್ಲಿ ಗಾಯಗಳಾಗಿವೆ. ಇದೊಂದು ಗ್ಯಾಂಗ್ ರೇಪ್ ಪ್ರಕರಣವಾಗಿದ್ದು, ಈ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಇದೇ ದಿನ ಈ ಘಟನೆ ನಡೆದ ಸ್ಥಳದಿಂದ 175 ಕಿಮೀ ದೂರದಲ್ಲಿ ವಾರದ ಹಿಂದೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಶ್ವಾಸಕೋಶ ಮತ್ತು ಕಿಡ್ನಿ ಛಿದ್ರವಾಗಿದ್ದ ರೀತಿಯಲ್ಲಿ ಶವ ಸಿಕ್ಕಿತ್ತು. ಈ ಕೃತ್ಯ 2 ಅಥವಾ ಮೂರು ಮಂದಿಯಿಂದ ನಡೆದಿದೆ ಎಂದು ಶಂಕಿಸಲಾಗಿದ್ದು, ಬಾಲಕಿಯ ಗುಪ್ತಾಂಗ ಸೇರಿದಂತೆ ದೇಹದ ಇತರ ಅಂಗಗಳು ಹಾನಿಗೊಳಗಾಗಿವೆ ಅಂತ ರೊಹ್ಟಕ್ ಪಿಜಿಐ ಡಾ. ಎಸ್ ಕೆ ದತ್ತಾರ್ವಾಲ್ ಹೇಳಿದ್ದಾರೆ.

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳನ್ನು ಗುರುತಿಸಿ ಶೀಘ್ರವೇ ಬಂಧಿಸುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಭರವಸೆ ನೀಡಿದ್ದಾರೆ.

    ಭಾನುವಾರವೂ ಈ ರೀತಿಯ ಘಟನೆ ನಡೆದಿದ್ದು, 11 ವರ್ಷದ ಬಾಲಕಿಯನ್ನು ಶನಿವಾರ ಸಂಜೆ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆಗೈದು ಬಳಿಕ ಆಕೆಯ ಮನೆ ಪಕ್ಕದಲ್ಲಿರೋ ಚರಂಡಿಗೆ ಎಸದೆಹೋಗಿದ್ದಾರೆ. ಈ ಘಟನೆ ಪಾನಿಪತ್ ನ ಗ್ರಾಮದಲ್ಲಿ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

  • ಏಳನೇ ತರಗತಿ ಓದಿತ್ತಿರೋ ಪುಟ್ಟ ಬಾಲಕಿ ಕಾಲು ಆಪರೇಷನ್ ಗೆ ಬೇಕಿದೆ ಸಹಾಯ

    ಏಳನೇ ತರಗತಿ ಓದಿತ್ತಿರೋ ಪುಟ್ಟ ಬಾಲಕಿ ಕಾಲು ಆಪರೇಷನ್ ಗೆ ಬೇಕಿದೆ ಸಹಾಯ

    ವಿಜಯಪುರ: ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯನ್ನು ಬೆಳಗಬೇಕಿದ್ದ ಬಾಲಕಿ ಪೋಲೀಯೋದಿಂದ ನರಳುವಂತಾಗಿದೆ. ಇತ್ತ ಶಾಲೆಗೂ ಹೋಗಲು ಆಗದೆ, ಅತ್ತ ಎಲ್ಲರಂತೆ ಆಟವಾಡಲು ಆಗದಂತೆ ಬಾಲಕಿ ನೋವು ಅನುಭವಿಸುತ್ತಿದ್ದಾಳೆ. ಇನ್ನು ಮಗಳ ನೋವು ನೋಡಿಯು ಕೈಯಿಂದ ಏನು ಮಾಡಲು ಆಗದ ಕುಟುಂಬಸ್ಥರು ಪ್ರತಿನಿತ್ಯ ಕಣ್ಣಿರಿನಲ್ಲೆ ಕೈ ತೊಳೆಯುವಂತಾಗಿದೆ.

    ಹೌದು. ಲತ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿಕೆ ಗ್ರಾಮದ ಪ್ರಕಾಶ್ ಮತ್ತು ಶ್ರೀದೇವಿ ದಂಪತಿಯ ಪುತ್ರಿ ಅಪೂರ್ವ ಇದೀಗ ಏಳನೇ ತರಗತಿ ಓದುತ್ತಿದ್ದಾಳೆ. ಅಪೂರ್ವ ಹುಟ್ಟಿದಾಗ ಚೆನ್ನಾಗಿಯೇ ಇದ್ದಳಂತೆ. ಆದ್ರೆ ಅಂಗನಾವಾಡಿಗೆ ಹೋಗುವಾಗ ಯಾವುದೋ ಒಂದು ಚುಚ್ಚು ಮದ್ದು ನೀಡಿದ್ದರ ಪರಿಣಾಮ ಆಕೆಯ ಎಡಗಾಲಿನಲ್ಲಿ ಒಂದು ಗಂಟಾಗಿದೆ. ಬಳಿಕ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಕುಟುಂಬಸ್ಥರು ಸುಮ್ಮನಾಗಿದ್ದಾರೆ. ಆದ್ರೆ ಅಪೂರ್ವ 5 ನೇ ತರಗತಿಗೆ ಬರುವಷ್ಟರಲ್ಲಿ ಎಡಗಾಲಿನ ಗಂಟು ಹೆಚ್ಚಾಗಿ ಒಳಗಡೆಯೇ ಕೊಳೆಯಲು ಆರಂಭವಾಯಿತು. ಇದರಿಂದ ಆಕೆಗೆ ಕುಳಿತಲ್ಲಿಂದ ಏಳಲು, ನಿಂತ್ರೆ ಕೂರಲು ಸಾಧ್ಯವಿಲ್ಲದಂತಾಯಿತು.


    ಈ ವೇಳೆ ಕುಟುಂಬಸ್ಥರು ಹಲವೆಡೆ ಚಿಕಿತ್ಸೆ ಕೊಡಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತದನಂತರ ಮೀರಜ್ ನ ಪ್ರತಿಷ್ಠಿತ ವೈದ್ಯ ಜಿ.ಎಸ್.ಕುಲಕರ್ಣಿ ಅವರ ಹತ್ತಿರ ಅಪೂರ್ವಗೆ ಚಿಕಿತ್ಸೆ ಕೊಡಿಸಿ ಒಂದು ಆಪರೇಷನ್ ಮಾಡಿಸಿದ್ದಾರೆ. ಈ ಆಪರೇಷನ್ ಆದ 6 ತಿಂಗಳ ನಂತರ ಮರಳಿ ಬಂದು ಇನ್ನೊಂದು ಆಪರೇಷನ್ ಮಾಡಿಸಿ. ಹೀಗೆ ಮಾಡಿದ್ದಲ್ಲಿ ಮಾತ್ರ ಆಕೆಯ ಕಾಲು ಸರಿ ಹೋಗುತ್ತೆ. ಅಲ್ಲದೇ ನಡೆದಾಡಲು ಬರುತ್ತೆ ಅಂತಾ ಹೇಳಿದ್ದರು. ಆದ್ರೆ ಅಪೂರ್ವಳದ್ದು ಬಡ ಕುಟುಂಬವಾದುದರಿಂದ ಮೊದಲನೇ ಆಪರೇಷನ್ ಆಗಿ 7 ತಿಂಗಳು ಕಳೆದ್ರೂ ಹಣವಿಲ್ಲದ ಕಾರಣ ಮತ್ತೊಮ್ಮೆ ಆಪರೇಷನ್ ಮಾಡಿಸದೆ ಕುಟುಂಬಸ್ಥರು ಸುಮ್ಮನಾಗಿ ಬಿಟ್ಟಿದ್ದಾರೆ.

    ಮೊದಲನೆ ಆಪರೇಷನ್ ಗೆ 65 ಸಾವಿರ ಹಣವನ್ನು ಕುಟುಂಬಸ್ಥರು ಹಾಕಿದ್ದು, ಈಗ 2ನೇ ಆಪರೇಷನ್ ಗೆ ಮತ್ತೆ 65 ಸಾವಿರ ಹಣ ಬೇಕಾಗಿದೆ. ಇಷ್ಟೊಂದು ಹಣವಿಲ್ಲದ ಕಾರಣ ಆಪರೇಷನ್ ಮಾಡದೆ ಕುಟುಂಬಸ್ಥರು ಚಿಕಿತ್ಸೆಯ ಹಣಕ್ಕಾಗಿ ಅಲ್ಲಿಲ್ಲಿ ಪರದಾಡುತ್ತಿದ್ದಾರೆ. ಸದ್ಯ ಅಪೂರ್ವ ಕುಟುಂಬ ಸಹಾಯ ಹಸ್ತ ಚಾಚಿ ಪಬ್ಲಿಕ್ ಟಿವಿಯ ಮೊರೆ ಬಂದಿದೆ.

    https://www.youtube.com/watch?v=UxkfpFSgYPo

  • ನೀರು ಕೇಳುವ ನೆಪದಲ್ಲಿ ಬಂದು ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ

    ನೀರು ಕೇಳುವ ನೆಪದಲ್ಲಿ ಬಂದು ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ

    ವಿಜಯಪುರ: ನೀರು ಕೇಳುವ ನೆಪದಲ್ಲಿ ತೋಟದ ಮನೆಯಲ್ಲಿದ್ದ 17 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರೋ ಆರೋಪ ಕೇಳಿಬಂದಿದೆ.

    ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಇದ್ದ ತೋಟದ ಮನೆಗೆ ಪರಿಚಯಸ್ಥನಾದ 45 ವರ್ಷದ ಕಂಠಪ್ಪ ಕೋಣೆಗೋಳ ತನ್ನ ಮೂವರು ಸ್ನೇಹಿತರೊಂದಿಗೆ ನೀರು ಕೇಳುವ ನೆಪದಲ್ಲಿ ಬಂದಿದ್ದಾನೆ. ಬಾಲಕಿ ನೀರು ತರಲು ಒಳಗೆ ಹೋದ ವೇಳೆ ಒಳನುಗ್ಗಿ, ಬಾಲಕಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ.

    ಈತನ ಕೃತ್ಯಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಮೂವರು ಸ್ನೇಹಿತರು ಕೂಡ ಸಹಕರಿಸಿದ್ದಾರೆ. ಅತ್ಯಾಚಾರದ ವೇಳೆ ಇತರೆ ಮೂವರು ಆರೋಪಿಗಳು ಬಾಲಕಿಯ ಕೈ, ಕಾಲು ಹಿಡಿದು ಹೆದರಿಸಿದ್ದಾರೆ. ಬಳಿಕ ಕಂಠೆಪ್ಪ ಸೇರಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

    ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • 10 ರೂ. ಆಸೆ ತೋರಿಸಿ 7ರ ಬಾಲಕಿಯ ಮೇಲೆ ಪೇದೆಯಿಂದಲೇ ರೇಪ್

    10 ರೂ. ಆಸೆ ತೋರಿಸಿ 7ರ ಬಾಲಕಿಯ ಮೇಲೆ ಪೇದೆಯಿಂದಲೇ ರೇಪ್

    ನೋಯ್ಡಾ: ಏಳು ವರ್ಷದ ಬಾಲಕಿಯ ಮೇಲೆ ಪೊಲೀಸ್ ಪೇದೆಯೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಸುಭಾಷ್ ಸಿಂಗ್ (45) ಎಂಬ ಪೊಲೀಸ್ ಪೇದೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ನೋಯ್ಡಾದ ಬುದ್ಧ ನಗರ ತೆರಿಗೆ ಇಲಾಖೆ ಬಳಿ ಕಾರ್ಯನಿರ್ವಹಣೆಗೆ ನಿಯೋಜಿಸಿದ್ದ ವೇಳೆ ಕೃತ್ಯ ಎಸಗಿದ್ದಾನೆ.

    ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ನೋಯ್ಡಾದ ಸೂರಜ್‍ಪುರ ಬಳಿ ಬಾಲಕಿಯನ್ನು ತನ್ನ ಆರ್ಪಾಟ್ ಮೆಂಟ್‍ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದು, ಬಾಲಕಿಯ ಅಳು ಕೇಳಿದ ಸಾರ್ವಜನಿಕರು ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಈ ವೇಳೆ ಪೊಲೀಸ್ ಪೇದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮರುದಿನ ಬೆಳಗ್ಗೆ 4 ಗಂಟೆ ವೇಳೆ ಆರೋಪಿ ಸುಭಾಷ್ ಮನೆಗೆ ವಾಪಸ್ ಆಗಿದ್ದು, ಇದನ್ನು ಗಮಸಿದ ಸಾರ್ವಜನಿಕರು ಆತನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಪೊಲೀಸ್ ಪೇದೆಗೆ ಜನರು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆಯ ತಾಯಿ ಆರೋಪಿಯ ವಿರುದ್ಧ ಬುಧವಾರ ಸಂಜೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ ಎಂದು ಸೂರಜ್‍ಪುರ ಪೊಲೀಸ್ ಠಾಣೆ ಅಧಿಕಾರಿ ಅಖಿಲೇಶ್ ಪ್ರಧಾನ್ ಹೇಳಿದರು.

    ಅತ್ಯಾಚಾರಕ್ಕೆ ಒಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ನೋಯ್ಡಾದ ಮೆಡಿಕಲ್ ಆಸ್ಪತ್ರಗೆ ದಾಖಲಿಸಲಾಗಿದ್ದು, ವೈದ್ಯರ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

  • ಸಾರ್ವಜನಿಕ ಶೌಚಾಲಯದಲ್ಲಿ ಬಾಲಕಿಯಿಂದ ನವಜಾತ ಗಂಡು ಶಿಶು ರಕ್ಷಣೆ

    ಸಾರ್ವಜನಿಕ ಶೌಚಾಲಯದಲ್ಲಿ ಬಾಲಕಿಯಿಂದ ನವಜಾತ ಗಂಡು ಶಿಶು ರಕ್ಷಣೆ

    ಕೊಪ್ಪಳ: ಸಾರ್ವಜನಿಕ ಶೌಚಾಲಯದಲ್ಲಿ ಬಾಲಕಿಯೊಬ್ಬಳು ನವಜಾತ ಗಂಡು ಶಿಶುವೊಂದನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದ ಘಟನೆ ಗಂಗಾವತಿಯ ಜಂಗಮರ ಕಲ್ಗುಡಿ ಗ್ರಾಮದಲ್ಲಿ ನಡೆದಿದೆ.

    ಬೆಳಿಗ್ಗೆ 6 ಗಂಟೆಗೆ ಗ್ರಾಮದ ಹೊರವಲಯದಲ್ಲಿರೋ ಸಾರ್ವಜನಿಕ ಶೌಚಾಲಯದಲ್ಲಿ ಶೌಚಕ್ಕೆ ಹೋದ ಬಾಲಕಿ ಭೀಮಾ ಹುಲ್ಲಿನಲ್ಲಿ ರಕ್ತ ಬರುವುದನ್ನು ನೋಡಿದ್ದಾಳೆ. ರಕ್ತ ಯಾಕೆ ಬರುತ್ತಿದೆ ಎಂದು ಅಚ್ಚರಿಗೊಂಡು ಹುಲ್ಲನ್ನು ತೆಗೆದು ನೋಡಿದಾಗ ಶಿಶು ಪತ್ತೆಯಾಗಿದೆ.

    ಶಿಶುವನ್ನು ವೇಲ್ ನಲ್ಲಿ ಹಾಕಿಕೊಂಡು ಮನೆಗೆ ತಂದು ರಕ್ಷಣೆ ಮಾಡಿದ್ದಾಳೆ. ಬಳಿಕ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತೆಯರಿಗೆ ತಿಳಿಸಿದ್ದಾಳೆ. ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಶಿಶುವನ್ನು ನಾವೇ ಜೋಪಾನ ಮಾಡುತ್ತೀವಿ ಎಂದು ಭೀಮಾ ಬಾಲಕಿ ಹೇಳುತ್ತಿದ್ದಾರೆ. ಇನ್ನು ನವಜಾತ ಶಿಶು ಶೌಚಾಲಯದಲ್ಲಿ ಯಾಕೆ ತಂದು ಹಾಕಿದ್ದಾರೆ ಎನ್ನುವುದನ್ನು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

  • 4ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    4ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಶಿವಮೊಗ್ಗ: ನಾಲ್ಕನೇ ತರಗತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನ ಸ್ಥಳೀಯರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

    ಮೂಲತಃ ಉಡುಪಿ ಜಿಲ್ಲೆಯವನಾದ ಜಾಕೀರ್ ಅತ್ಯಾಚಾರಕ್ಕೆ ಯತ್ನಿಸಿ, ಥಳಿತಕ್ಕೆ ಒಳಗಾದ ಯುವಕ. ಬಾಲಕಿಯ ತಂದೆ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದರು. ತಾಯಿ ತಿಂಡಿ ಅಂಗಡಿ ನಡೆಸುತ್ತಿದ್ದರು. ತಾಯಿ-ಮಗಳು ಮಾತ್ರ ಇರುವುದನ್ನು ಗಮನಿಸಿದ್ದ ಈತ ಕಳೆದ ಮೂರು ದಿನಗಳಿಂದ ಆಕೆಯ ಬೆನ್ನು ಬಿದ್ದಿದ್ದ.

    ಸೋಮವಾರ ರಾತ್ರಿ ಬಾಲಕಿಯನ್ನು ಹಿಡಿದು ಎಳೆದೊಯ್ಯಲು ಯತ್ನಿಸಿದಾಗ ಬಾಲಕಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ಸ್ಥಳೀಯರು ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ಜಾಕೀರ್ ಗೆ ತೀವ್ರವಾಗಿ ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೋಕ್ಸೋ ಕಾಯ್ದೆಯಡಿ ಜಾಕೀರ್ ನನ್ನು ಬಂಧಿಸಿರುವ ಪೊಲೀಸರು ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಗೆ ಒಳಪಡಿಸಿದ್ದಾರೆ.

  • 12 ವರ್ಷದ ಮಗಳ ಮೇಲೆ ತಂದೆಯಿಂದಲೇ 5 ವರ್ಷ ನಿರಂತರ ರೇಪ್, ಕೃತ್ಯಕ್ಕೆ ತಾಯಿ ಸಾಥ್!

    12 ವರ್ಷದ ಮಗಳ ಮೇಲೆ ತಂದೆಯಿಂದಲೇ 5 ವರ್ಷ ನಿರಂತರ ರೇಪ್, ಕೃತ್ಯಕ್ಕೆ ತಾಯಿ ಸಾಥ್!

    ಭೋಪಾಲ್: 12 ವರ್ಷದ ಬಾಲಕಿಯ ಮೇಲೆ ಸತತ 5 ವರ್ಷಗಳ ಕಾಲ ತಂದೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ ತನ್ನ ಪತಿ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿರುವ ಕುರಿತು ತಾಯಿಗೆ ಗೊತ್ತಿದ್ದರೂ ಆಕೆ ಹೀನಕೃತ್ಯಕ್ಕೆ ಅಡ್ಡಿಪಡಿಸಿಲ್ಲ. ಅಲ್ಲದೇ ತಾಯಿಯೆ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಲು ಸಹಾಯ ಮಾಡಿದ್ದಾಳೆ.

    ಕೃತ್ಯದ ಬಗ್ಗೆ ತಿಳಿದ ಬಾಲಕಿಯ ಸಹೋದರ ಒಂದು ವರ್ಷದ ಹಿಂದೆಯೇ ವಿರೋಧ ವ್ಯಕ್ತಪಡಿಸಲು ಮುಂದಾಗ ಆತನಿಗೆ ಸುಮ್ಮನಿರುವಂತೆ ತಂದೆ ಧಮ್ಕಿ ಹಾಕಿ ಸುಮ್ಮನಿರುವಂತೆ ಹೇಳಿದ್ದ. ಆದರೆ ಬಾಲಕಿ ಮನೆಯಿಂದ ತಪ್ಪಿಸಿಕೊಂಡು ಬಂದ ಸಂದರ್ಭದಲ್ಲಿ ತಂದೆಯ ಕೃತ್ಯದ ಕುರಿತು ತನ್ನ ಸಂಬಂಧಿಯೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ಈ ವಿಚಾರ ತಿಳಿದು ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ.

    ಬಾಲಕಿಯ ಹೇಳಿಕೆ ಪಡೆದ ಪೊಲೀಸರು ತಂದೆ ಹಾಗೂ ತಾಯಿ ಇಬ್ಬರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ತೆ ತನ್ನ ತಂದೆ ಹಾಗೂ ತಾಯಿ ಇಬ್ಬರಿಗೂ ಮರಣ ದಂಡನೆ ವಿಧಿಸುವಂತೆ ಕೇಳಿಕೊಂಡಿದ್ದಾಳೆ.

     

  • ಚಿಕ್ಕ ಮಕ್ಕಳಿಗೆ ಬೈಕ್ ನೀಡುವ ಮುನ್ನ ಈ ಸ್ಟೋರಿ ಓದಿ

    ಚಿಕ್ಕ ಮಕ್ಕಳಿಗೆ ಬೈಕ್ ನೀಡುವ ಮುನ್ನ ಈ ಸ್ಟೋರಿ ಓದಿ

    ಚಿಕ್ಕೋಡಿ: ಟಿವಿಎಸ್ ಎಕ್ಸೆಲ್ ಬೈಕ್ ಓಡಿಸುತ್ತಿದ್ದ ಬಾಲಕಿ ಆಯತಪ್ಪಿ ಟ್ರಾಕ್ಟರ್ ಗೆ ಡಿಕ್ಕಿ ಒಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.

    11 ವರ್ಷದ ನಮ್ರತಾ ಭೋಜೆ ಮೃತಪಟ್ಟ ಬಾಲಕಿಯಾಗಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಹಿಂಬದಿಯಲ್ಲಿ ಕುಳಿತು ಸಾಗುತ್ತಿದ್ದ 6 ವರ್ಷದ ಪುಟ್ಟ ಬಾಲಕಿ ಲಾವಣ್ಯ ಮಾಲಗಾಂವಿ ತೀವ್ರವಾಗಿ ಗಾಯಗೊಂಡಿದ್ದಾಳೆ.

    ಟ್ರಾಕ್ಟರ್ ಗೆ ಬಾಲಕಿ ಸಿಲುಕಿದ್ದನ್ನು ನೋಡಿದ ಕಂಡ ಸ್ಥಳೀಯರು ಕೂಡಲೇ ಟ್ರಾಕ್ಟರ್ ಜಾಕ್ ಹಾಕಿ ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಲಾವಣ್ಯಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಪೋಷಕರ ನಿರ್ಲಕ್ಷವೇ ಕಾರಣವಾಗಿದ್ದು, ಚಿಕ್ಕ ಮಕ್ಕಳ ಕೈ ಗೆ ಬೈಕ್ ಕೊಟ್ಟ ಪರಿಣಾಮ ದಾರುಣ ಘಟನೆ ಸಂಭವಿಸಿದೆ. ಈಗ ಮಕ್ಕಳ ಕೈಯಲ್ಲಿ ಬೈಕ್ ನೀಡಿದ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಚಿಕ್ಕ ಮಕ್ಕಳ ಕೈಯಲ್ಲಿ ಬೈಕ್ ಕೊಟ್ಟ ಪೋಷಕರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ 11 ವರ್ಷದ ಬಾಲಕಿ ಬಲಿ

    ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ 11 ವರ್ಷದ ಬಾಲಕಿ ಬಲಿ

    ಚಿಕ್ಕಬಳ್ಳಾಪುರ: ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ 11 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ದೇವನಹಳ್ಳಿ ತಾಲೂಕಿನ ಅವತಿ ಬಳಿ ನಡೆದಿದೆ.

    ಬುಳ್ಳಹಳ್ಳಿಯ ವೇಣುಗೋಪಾಲ್ ಎಂಬುವರ ಮಗಳು ಅಂಜು ಮೃತ ಬಾಲಕಿ. ಬೆಂಗಳೂರು ಮೂಲದ ನಿಕಿತ್ ಸ್ನೇಹಿತರೊಂದಿಗೆ ಬೈಕ್ ರೇಸಿಂಗ್ ಮಾಡುತ್ತಾ ಕೋಲಾರದ ಅಂತರಗಂಗೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಅಂಜು ಅವತಿಯಿಂದ ಕುಡಿಯುವ ನೀರು ತೆಗೆದುಕೊಂಡು ಗ್ರಾಮಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ.

    ಘಟನೆ ಬಳಿಕ ಸಾರ್ವಜನಿಕರು ಬೈಕ್ ಸವಾರನನ್ನು ಹಿಡಿದು ಥಳಿಸಿದ್ದಾರೆ. ಇನ್ನು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಸುಮಾರು 2 ಕಿ.ಮೀಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತು. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ತಾಯಿಯ ಕಣ್ಣೀರಿಗೆ ನ್ಯಾಯ ಕೊಡಿಸಿದ ದಿಟ್ಟ ಬಾಲಕಿ

    ತಾಯಿಯ ಕಣ್ಣೀರಿಗೆ ನ್ಯಾಯ ಕೊಡಿಸಿದ ದಿಟ್ಟ ಬಾಲಕಿ

    ಧಾರವಾಡ: 8ನೇ ತರಗತಿ ಓದುತ್ತಿರುವ ಬಾಲಕಿ ಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದ ನಂತರ ತನ್ನ ತಾಯಿಗೆ ನ್ಯಾಯ ಕೊಡಿಸಿ ದಿಟ್ಟ ಬಾಲಕಿ ಎಂಬ ಪ್ರಶಂಸೆಗೆ ಕಾರಣವಾಗಿದ್ದಾಳೆ.

    ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ನಿವಾಸಿಯಾಗಿರುವ ರೇಖಾ ಮೈಸೂರ ಎಂಬ ಬಾಲಕಿ ತನ್ನ ತಾಯಿಗೆ ನ್ಯಾಯ ಕೊಡಿಸಿದ್ದಾಳೆ. ಬಾಲಕಿ ರೇಖಾ ತಾಲೂಕಿನ ಪೆಸೆಂಟೆಷನ್ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿ ನಡೆಸುವ ಕಾನೂನು ಅರಿವು ಕಾರ್ಯಕ್ರಮದಲ್ಲಿ ತನ್ನ ತಾಯಿಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯಾಧೀಶರ ಗಮನ ಸೆಳೆದಿದ್ದಾಳೆ.

    ಏನಿದು ಘಟನೆ? ಬಾಲಕಿ ರೇಖಾ ಅವರ ತಾಯಿ ಸಾವಕ್ಕ ತಮ್ಮ 1 ಎಕರೆ 10 ಗುಂಟೆ ಜಮೀನನ್ನ ಅದೇ ಗ್ರಾಮದ ಅಜೀಜ್ ಎಂಬುವರಿಗೆ ಅಡವಿಟ್ಟು 3 ಲಕ್ಷ 20 ಸಾವಿರ ರೂ. ಹಣವನ್ನ ಪಡೆದಿದ್ದರು. ಆದರೆ ಇದನ್ನೇ ಅವಕಾಶವಾಗಿ ಬಳಿಸಿಕೊಂಡ ಆತ ಇಡೀ ಜಮೀನನ್ನು ಕಬಳಿಸಲು ಮುಂದಾಗಿದ್ದಾನು. ಇದರಿಂದ ಸಾವಕ್ಕ ಸಾಕಷ್ಟು ಮಾನಸಿಕವಾಗಿ ಕುಗ್ಗಿದ್ದರು. ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸರಿಗೆ ದೂರನ್ನು ನೀಡಿದ್ದರು. ಆದರೆ ಯಾವುದೇ ರೀತಿಯ ನ್ಯಾಯ ಸಿಕ್ಕಿರಲಿಲ್ಲ.

    ತಾಯಿಯ ಸಂಕಟವನ್ನು ನೋಡಿದ ಬಾಲಕಿ ರೇಖಾ, ಕಳೆದ 15 ದಿನಗಳ ಹಿಂದೆ ಧಾರವಾಡ ನಗರದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ದಿನದಂದು ಜಿಲ್ಲಾ ನ್ಯಾಯಾಧೀಶರ ಗಮನ ಸೆಳೆದಿದ್ದಳು. ನ್ಯಾಯಾಧೀಶರು ಬಾಲಕಿಯ ಸಮಸ್ಯೆಯನ್ನ ಅರಿತು ನ್ಯಾಯಾಲಯಕ್ಕೆ ಬಂದು ಭೇಟಿ ಮಾಡಲು ಹೇಳಿದ್ದರು. ಅದರಂತೆ ಈ ಬಾಲಕಿ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಅವರನ್ನ ಭೇಟಿ ಮಾಡಿದಾಗ ನ್ಯಾಯಾಧೀಶರು ಪೊಲೀಸರಿಗೆ ಪತ್ರ ಬರೆದು ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದರು.

    ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ಕಾರ್ಯ ಪ್ರವೃತ್ತರಾಗಿ ಅಜೀಜ್‍ಸಾಬ್ ಗೆ ಸಾವಕ್ಕ ಅವರು ನೀಡಬೇಕಿದ್ದ ಹಣವನ್ನು ಹಿಂದಿರುಗಿಸಿ ಅವರ ಜಮೀನನ್ನು ಮತ್ತೆ ವಾಪಸ್ ಕೊಡಿಸಿದ್ದಾರೆ. ಈ ಎಲ್ಲ ಸಮಸ್ಯೆ ಸುಖಾಂತ್ಯ ಕಾಣಲು ಬಾಲಕಿ ರೇಖಾ ಮೈಸೂರ ಮಾಡಿದ ದಿಟ್ಟ ಕಾರ್ಯ ಪ್ರಮುಖ ಕಾರಣವಾಗಿದ್ದು, ತನ್ನ ತಾಯಿಗೆ ನ್ಯಾಯ ಸಿಗುವಂತೆ ಮಾಡಿದ್ದಾಳೆ.

    ಪ್ರಸ್ತುತ ಬಾಲಕಿ ರೇಖಾ ಮೈಸೂರ ಹೋರಾಟ ಮುಂದುವರೆದಿದೆ. 6 ವರ್ಷಗಳ ಹಿಂದೆ ಬಾಲಕಿಯ ತಂದೆ ಮಲ್ಲಿಕಾರ್ಜುನ ಕುಟುಂಬವನ್ನು ಬಿಟ್ಟು ಹೋಗಿದ್ದು, ಮತ್ತೆ ತಂದೆಯನ್ನ ಮನೆಗೆ ಕರೆ ತಂದು, ತಾಯಿಗೆ ಆದ ಅನ್ಯಾಯವನ್ನು ಸರಿಪಡಿಸುವವರೆಗೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾಳೆ.