Tag: ಬಾಲಕಿ

  • ಚಂದನ್ ಶೆಟ್ಟಿಗಾಗಿ ರ‍್ಯಾಪ್ ಹಾಡು ಹಾಡಿದ 7ರ ಬಾಲೆ!

    ಚಂದನ್ ಶೆಟ್ಟಿಗಾಗಿ ರ‍್ಯಾಪ್ ಹಾಡು ಹಾಡಿದ 7ರ ಬಾಲೆ!

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ತಮ್ಮ ಸಹಸ್ಪರ್ಧಿಯರಿಗೆ ಹಾಡು ಬರೆದು ಅವರಿಗಾಗಿ ಹಾಡುತ್ತಿದ್ದರು. ಆಶಿತ, ನಿವೇದಿತಾ, ಅನುಪಮ, ಕೃಷಿ ತಾಪಂಡ, ಶೃತಿ ಪ್ರಕಾಶ್ ಅವರಿಗೆ ಹಾಡುಗಳನ್ನು ಬರೆದು ಹಾಡುತ್ತಿದ್ದರು. ಇದೀಗ ಚಂದನ್ ಶೆಟ್ಟಿಗೆ 7 ವರ್ಷದ ಬಾಲಕಿ ರ‍್ಯಾಪ್ ಸಾಂಗ್ ಹಾಡಿದ್ದಾರೆ.

    7ರ ಬಾಲಕಿ ಮಾನ್ಯ ಹರ್ಷ ಗೆ ಚಂದನ್ ಎಂದರೆ ತುಂಬಾ ಇಷ್ಟ. ಚಂದನ್ ಶೆಟ್ಟಿಗಾಗಿಯೇ ಒಂದು ಹಾಡನ್ನು ಮಾಡಿ ಅದನ್ನ ರ‍್ಯಾಪ್ ಸ್ಟೈಲ್‍ನಲ್ಲೇ ಹಾಡಿ ಯೂಟ್ಯೂಬ್‍ನಲ್ಲಿ ಹೊಸ ಸೆನ್ಸೇಶನ್ ಸೃಷ್ಟಿ ಮಾಡಿದ್ದಾಳೆ.

    ಮಾನ್ಯ ಸ್ವತಃ ಸಾಹಿತ್ಯ ರಚಿಸಿ ಚಂದನ್‍ಗಾಗಿ ರ‍್ಯಾಪ್ ಸ್ಟೈಲ್‍ನಲ್ಲಿಯೇ ಹಾಡನ್ನು ಹಾಡಿದ್ದಾರೆ. ಮಾನ್ಯಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಂದರೆ ತುಂಬ ಇಷ್ಟ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಹಾಗೂ ನಿವೇದಿತಾ ಗೌಡರನ್ನು ನೋಡಿ ಅವರಂತೆಯೇ ಮಿಮಿಕ್ರಿ ಮಾಡುತ್ತಾಳೆ.

    ಸದ್ಯ ಮಾನ್ಯ 2ನೇ ತರಗತಿ ಓದುತ್ತಿದ್ದು, ಇಂಗ್ಲೀಷ್ ಪದ್ಯಗಳನ್ನು ಬರೆಯುತ್ತಾಳೆ. ಅಷ್ಟೇ ಅಲ್ಲದೇ ಡ್ಯಾನ್ಸ್, ಆ್ಯಕ್ಟಿಂಗ್, ಫ್ಯಾಶನ್ ಹಾಗೂ ಮಿಮಿಕ್ರಿಯಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾಳೆ. ಮಿಮಿಕ್ರಿ ಮಾಡುವುದರಿಂದ ಈಕೆಗೆ ಜೂನಿಯರ್ ನಿವೇದಿತಾ ಎಂದು ಕರೆಯುತ್ತಾರೆ.

    https://www.youtube.com/watch?v=p6hllcCTRWM

  • ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ- ಡೆತ್‍ನೋಟ್ ಬರೆದು 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ- ಡೆತ್‍ನೋಟ್ ಬರೆದು 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ಫೀಸ್ ಕಟ್ಟದ ಕಾರಣ ಪರೀಕ್ಷೆ ನಡೆಯುತ್ತಿದ್ದ ವೇಳೆಯೇ ಕ್ಲಾಸ್ ರೂಮಿನಿಂದ ಹೊರಹಾಕಿದ್ದಕ್ಕೆ ಮನನೊಂದು 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ ನಲ್ಲಿ ನಡೆದಿದೆ.

    ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 9ನೇ ತರಗತಿ ಬಾಲಕಿಯನ್ನ ಕ್ಲಾಸ್‍ನಿಂದ ಹೊರಹಾಕಿ ಎಲ್ಲರ ಮುಂದೆ ಅವಮಾನಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕಿಯ ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿದ್ದು, “ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ” ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿ 2 ಸಾವಿರ ರೂ. ಫೀಸ್ ಕಟ್ಟುವುದು ಬಾಕಿ ಇತ್ತು ಎಂದು ಪೊಲೀಸರು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ಶಾಲೆಯವರು ನನ್ನ ಹೆಸರು ಕರೆದು ಕ್ಲಾಸ್‍ನಿಂದ ಹೊರಹಾಕಿದಾಗ ನನಗೆ ಅವಮಾನವಾಯಿತು ಎಂದು ಬಾಲಕಿ ಮನೆಗೆ ಬಂದ ನಂತರ ತನ್ನ ಸಹೋದರಿಯೊಂದಿಗೆ ಹೇಳಿಕೊಂಡಿದ್ದಳು. ಆದ್ರೆ ಬಳಿಕ ಮಲ್ಕಜ್ಗಿರಿಯ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಕುಟುಂಬಸ್ಥರ ದೂರಿನನ್ವಯ ಪೊಲೀಸರು ಶಾಲೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಆಗ ತಾನೇ ಶಾಲೆಯಿಂದ ಬಂದ 9ರ ಬಾಲಕಿ ಮೇಲೆ 16ರ ಬಾಲಕನಿಂದ ರೇಪ್!

    ಆಗ ತಾನೇ ಶಾಲೆಯಿಂದ ಬಂದ 9ರ ಬಾಲಕಿ ಮೇಲೆ 16ರ ಬಾಲಕನಿಂದ ರೇಪ್!

    ಕೋಲ್ಕತ್ತಾ: ಅಪ್ರಾಪ್ತ ಬಾಲಕಿ ಮೇಲೆ 16 ವರ್ಷದ ಬಾಲಕನೊಬ್ಬ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದ ಮಲ್ಡಾದ ಇಂಗ್ಲಿಷ್ ಬಜಾರ್ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿದೆ.

    3ನೇ ತರಗತಿ ಓದುತ್ತಿರೋ 9ರ ಬಾಲಕಿ ಮೇಲೆ 10ನೇ ತರಗತಿ ಓದುತ್ತಿರೋ 16 ವರ್ಷದ ಬಾಲಕ ಈ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧ ಸಂತ್ರಸ್ತ ಬಾಲಕಿ ಪೋಷಕರು ಆರೋಪಿ ಬಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.

    ಘಟನೆ ವಿವರ: ಸಂತ್ರಸ್ತ ಬಾಲಕಿಯ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ತಾಯಿ ಸರ್ಕಾರೇತರ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸದ ನಿಮಿತ್ತ ಇವರಿಬ್ಬರೂ ಮನೆಯಿಂದ ಹೊರ ಹೋಗಿದ್ದರು. ಹೀಗಾಗಿ ಸಂಜೆ ಶಾಲೆಯಿಂದ ಬಂದ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಇದನ್ನು ಗಮನಿಸಿದ ಅದೇ ಪ್ರದೇಶದ ಬಾಲಕ ಆಕೆಯನ್ನು ಮಾವಿನ ತೋಟಕ್ಕೆ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಗೆ ಚಾಕು ತೋರಿಸಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಈ ವಿಚಾರವನ್ನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.

    ಅತ್ಯಾಚಾರದಿಂದಾಗಿ ಬಾಲಕಿ ನೋವಿನಿಂದ ಕಿರುಚಿಕೊಳ್ಳುತ್ತಿರುವುದನ್ನು ಇನ್ನೊಬ್ಬಳು ಅಪ್ರಾಪ್ತೆ ಕೇಳಿಸಿಕೊಂಡಿದ್ದಾಳೆ. ಅಲ್ಲದೇ ಆಕೆ ಅಲ್ಲಿ ನಡೆದ ಘಟನೆಯನ್ನು ನೋಡಿದ್ದಾಳೆ. ನಾನು ಆಡುಗಳನ್ನು ಕಟ್ಟಿ ಹಾಕಲು ಮಾವಿನ ತೋಟಕ್ಕೆ ಬಂದಿದ್ದೆ. ಈ ವೇಳೆ ಬಾಲಕಿಯ ಗುಂಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದು, ನೋವಿನಿಂದ ಒದ್ದಾಡುತ್ತಿದ್ದಳು. ಅಲ್ಲದೇ ಸ್ಥಳೀಯ ಬಾಲಕನೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾಳೆ ಅಂತ ಬಾಲಕಿಯ ಆಂಟಿ ಹೇಳಿದ್ದಾರೆ.

    ಕೂಡಲೇ ಬಾಲಕಿಯ ಕುಟುಂಬಸ್ಥರು ಪಂಚಾಯತ್ ಅಧ್ಯಕ್ಷರ ಸಹಾಯದಿಂದ ಮಾಲ್ಡಾ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಂಚಾಯತ್ ಕಚೇರಿಯಲ್ಲಿದ್ದಾಗ ಸಂತ್ರಸ್ತೆ ಪೋಷಕರು ಬಂದು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ಕೂಡಲೇ ನಾವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಅಂತ ಘಟನೆ ಬಗ್ಗೆ ಕಜಿಗ್ರಾಮ್ ಗ್ರಾಮದ ಪಂಚಾಯತ್ ಅಧ್ಯಕ್ಷ ಗೌತಮ್ ಚೌಧರಿ ಹೇಳಿದ್ದಾರೆ.

    ಸಭೆಯ ನಿಮಿತ್ತ ನಾನು ನಗರಕ್ಕೆ ಹೋಗಿದ್ದೆ. ಸಭೆ ಮುಗಿಸಿಕೊಂಡು ಮನೆಗೆ ಬರುವಾಗ ಮಗಳು ಅತ್ಯಾಚಾರವಾಗಿ ನೋವಿನಿಂದ ಒದ್ದಾಡುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ಬಾಲಕಿಯ ತಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಆರೋಪಿ ಬಾಲಕನ ವಿರುದ್ಧ ಬಾಲಕಿಯ ಪೋಷಕರು ಇಂಗ್ಲಿಷ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

  • ಹದಿಹರೆಯದ ಬಾಲಕಿಯರೇ ಎಚ್ಚರ- ಫೇಸ್ ಬುಕ್ ಬಳಸೋ ಮುನ್ನ ಈ ಸ್ಟೋರಿ ಓದಿ

    ಹದಿಹರೆಯದ ಬಾಲಕಿಯರೇ ಎಚ್ಚರ- ಫೇಸ್ ಬುಕ್ ಬಳಸೋ ಮುನ್ನ ಈ ಸ್ಟೋರಿ ಓದಿ

    ಬೆಂಗಳೂರು: ಬಾಲಿವುಡ್ ಫಿಲಂನಲ್ಲಿ ಚಾನ್ಸ್ ಕೊಡಿಸುವುದಾಗಿ ಶ್ರೀಲಂಕಾ ಬಾಲಕಿಯನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

    ಸತೀಶ್ ಪಾಟೀಲ್ (35) ರಮೇಶ್ (40) ಶಂಭು (20) ಬಂಧಿತ ಆರೋಪಿಗಳು. ಸತೀಶ್ ಪಾಟೀಲ್, ಬಾಲಕಿಗೆ ಫೇಸ್ ಬುಕ್‍ನಲ್ಲಿ ಪರಿಚಯವಾಗಿದ್ದು, ಎರಡು ವರ್ಷಗಳಿಂದ ಸತೀಶ್ ಜೊತೆ ಚಾಟಿಂಗ್ ನಲ್ಲಿದ್ದಳು. ಈ ವೇಳೆ ನನಗೆ ಬಾಲಿವುಡ್ ಫಿಲಂ ಇಂಡಸ್ಟ್ರಿ ಪರಿಚಯವಿದೆ ನಿನಗೆ ಚಾನ್ಸ್ ಕೊಡಿಸುತ್ತೇನೆ ಎಂದು ಸತೀಶ್ ಹೇಳಿದ್ದಾನೆ.

    ಸತೀಶ್ ಮಾತನ್ನು ನಂಬಿದ ಬಾಲಕಿ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿಗೆ ಬಂದ ನಂತರ ಆ ಶೂಟಿಂಗ್, ಫೋಟೋಶೂಟ್ ಎಂದು ಹಣ ಸತೀಶ್ ಪೀಕುತ್ತಿದ್ದನು. ಅಷ್ಟೇ ಅಲ್ಲದೇ ಆರೋಪಿ ಬಾಂಬೆ, ಹಾವೇರಿ, ಬೆಂಗಳೂರು ಎಂದು ಬಾಲಕಿಯನ್ನು ಓಡಾಡಿಸಿದ್ದನು. ಅಲ್ಲದೇ ಬಾಲಕಿಯನ್ನು ಬೇರೆ ತರಹ ಬಳಸಿಕೊಳ್ಳಲು ನೋಡುತ್ತಿದ್ದ, ಆದರೆ ಬಾಲಕಿ ತನ್ನ ತಾಯಿ ಜೊತೆಗೆ ಇದ್ದುದರಿಂದ ರಕ್ಷಣೆಯಾಗಿದ್ದಳು.

    ಸತೀಶ್ ಹೆಚ್ಚಿನ ಹಣ ಕೊಡದಿದ್ದಾಗ ಅವರನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಮಾನವ ಕಳ್ಳ ಸಾಗಣೆಕೆಯಲ್ಲಿ ಸಿಲುಕಿದ್ದ ಯುವತಿ ರಕ್ಷಿಸಿದ ಸ್ವಯಂ ಸೇವಕ ಸಂಘಟನೆ ತಲಾಶ್ ಅಸೋಸಿಯಷನ್ ಎನ್‍ಜಿಓ ಮೂಲಕ ಬಾಲಕಿಯನ್ನು ರಕ್ಷಣೆ ಮಾಡಿ, ಉಪ್ಪಾರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತಾಯಿ ಜೊತೆ ಬಾಲಕಿಯನ್ನು ಶ್ರೀಲಂಕಾಗೆ ವಾಪಸ್ ತೆರಳಿಸಿದ್ದರು.

  • ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ 7 ವರ್ಷ ಜೈಲು

    ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ 7 ವರ್ಷ ಜೈಲು

    ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ ತುಮಕೂರಿನ 3 ನೇ ಅಧಿಕ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    2016ರಲ್ಲಿ 50 ವರ್ಷದ ರಮೇಶ್ ಎಂಬಾತ ವಸತಿ ಶಾಲೆಯಿಂದ ಬಾಲಕಿಯೋರ್ವಳನ್ನು ಕರೆದುಕೊಂಡು ಹೋಗಿ ಲಾಡ್ಜ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು. ಲೈಂಗಿಕ ದೌರ್ಜನ್ಯ ಎಸೆಗುವ ವೇಳೆ ವಿಡಿಯೋ ಮಾಡಿಕೊಂಡಿದ್ದ ರಮೇಶ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ವಿಷಯ ತಿಳಿದ ಬಾಲಕಿ ತಾಯಿ 2017ರಲ್ಲಿ ತುಮಕೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು.

    ದೂರು ದಾಖಲಿಸಿಕೊಂಡ ಮಹಿಳಾ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಮೇಶ್‍ನನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಕೇವಲ 6 ತಿಂಗಳಲ್ಲಿ ತೀರ್ಪು ನೀಡಿದೆ. ಅಪರಾಧಿ ರಮೇಶ್‍ನಿಗೆ 7 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.

  • 8ರ ಬಾಲಕಿ ಮೇಲೆ ಅತ್ಯಾಚಾರಕ್ಕೆತ್ನಿಸಿದ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು

    8ರ ಬಾಲಕಿ ಮೇಲೆ ಅತ್ಯಾಚಾರಕ್ಕೆತ್ನಿಸಿದ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು

    ಗದಗ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

    ನಗರದ ಭೂಮರಡ್ಡಿ ಸರ್ಕಲ್ ಬಳಿಯ ಸಾಲ ಓಣಿಯಲ್ಲಿ ಈ ಘಟನೆ ನಡೆದಿದೆ. ಬೆಟಗೇರಿ ನಿವಾಸಿಯಾದ ನಜೀರ್ ಹುಸೇನಸಾಬ್ ಎಂಬ ಸುಮಾರು 40 ವರ್ಷದ ವ್ಯಕ್ತಿ ಅತ್ಯಾಚಾರಕ್ಕೆ ಮುಂದಾಗಿದ್ದ ಎಂಬುದು ಸ್ಥಳೀಯರ ಆರೋಪವಾಗಿದೆ.

    8 ವರ್ಷದ ಬಾಲಕಿಯ ತಾಯಿ ಬೇರೆಯವರ ಮನೆ ಕೆಲಸಕ್ಕೆಂದು ಹೋಗಿದ್ದರು. ಮಗು ತಾಯಿ ಬಳಿ ಹೋಗುತ್ತಿದ್ದ ವೇಳೆ ಕತ್ತಲಲ್ಲಿ ಮಗುವನ್ನು ಹೊತ್ತೊಯ್ದು ಅಸಭ್ಯ ವರ್ತನೆಗೆ ಮುಂದಾಗಿದ್ದ ಎನ್ನಲಾಗಿದೆ. ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿ ನಿಂತಿದ್ದು ಬಾಲಕಿ ಎದುರು ಅಸಭ್ಯ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಗುವಿನ ಚೀರಾಟ ಕೇಳಿ ಸ್ಥಳೀಯರು ಓಡಿ ಬಂದು ಇವನನ್ನು ಹಿಡಿದು ಕಂಬಕ್ಕೆ ಕಟ್ಟಿ ನೀರು ಹಾಕಿ ಗೂಸಾ ನೀಡಿದ್ದಾರೆ.

    ನೆರೆದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದು, ನಂತರ ಸ್ಥಳಕ್ಕೆ ಬಂದ ಗದಗ ನಗರ ಠಾಣೆ ಪೊಲೀಸರು ನಜೀರ್ ನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

  • ಬಿಎಸ್‍ವೈ ಕಣ್ಣು ತೆರೆಸಿದ 9 ವರ್ಷದ ಬಾಲಕಿ

    ಬಿಎಸ್‍ವೈ ಕಣ್ಣು ತೆರೆಸಿದ 9 ವರ್ಷದ ಬಾಲಕಿ

    ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮದ ವೇಳೆ ಬಾಲಕಿಯೊಬ್ಬಳು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ ಪತ್ರ ನೀಡುವ ಮೂಲಕ ಕಣ್ಣು ತೆರೆಸಿದ್ದಾಳೆ.

    ಕಾರ್ಯಕ್ರಮ ನಡೆಯುವ ವೇಳೆ ಚಾಮರಾಜನಗರ ತಾಲೂಕಿನ ಬಂದಿಗೌಡನಹಳ್ಳಿ ಗ್ರಾಮದ ಕುಮಾರ್ ಎಂಬವರ 9 ವರ್ಷದ ಪುತ್ರಿ ಪ್ರೀತಿ ಯಡಿಯೂರಪ್ಪ ಅವರಿಗೆ ಪತ್ರವೊಂದನ್ನು ನೀಡಿದಳು. ನಂತರ ವೇದಿಕೆಯಲ್ಲಿ ಭಾಷಣ ಮಾಡುವ ವೇಳೆ ಬಿಎಸ್‍ವೈ ಬಾಲಕಿ ನೀಡಿದ ಪತ್ರವನ್ನು ಪ್ರಸ್ತಾಪಿಸಿದರು.

    ರಾಜ್ಯದಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿ ಕೆಲಸ, ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯನ್ನು ಪರಿವರ್ತನಾ ಯಾತ್ರೆಯಲ್ಲಿ ಏಕೆ ಹೇಳುತ್ತಿಲ್ಲ ಎಂದು ಬಾಲಕಿ ಪತ್ರದಲ್ಲಿ ಹೇಳಿದ್ದು. ಈ ಅಂಶಗಳನ್ನು ಬಿಜೆಪಿ ಪರಿವರ್ತನಾ ಯಾತ್ರೆಯ ವೇಳೆ ಹೇಳಿ ಜನರಿಗೆ ಮಾಹಿತಿ ನೀಡಿ ಎಂದು ಆ ಪುಟ್ಟ ಬಾಲಕಿ ಹೇಳಿದ್ದಾಳೆ. ಈ ಮೂಲಕ ನನ್ನ ಕಣ್ಣುಗಳನ್ನು ಆಕೆ ತೆರಸಿದ್ದಾಳೆ ಎಂದು ಬಿಎಸ್ ವೈ ಬಾವುಕರಾದರು.

    ಬಾಲಕಿಯ ಪತ್ರದ ಸಾರಾಂಶವನ್ನು ಸ್ಥಳದಲ್ಲೇ ಓದಿದ ಬಿಎಸ್‍ವೈ, ಸಿಎಂ ಸಿದ್ದರಾಮಯ್ಯ ಸರ್ಕಾರದ ವೈಪಲ್ಯಗಳ ಪಟ್ಟಿಯನ್ನು ತಿಳಿಸಿದರು. ಐಪಿಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣ, ಬಳ್ಳಾರಿ ಡಿವೈಎಸ್‍ಪಿ ಅನುಪಮಾ ಶಣೈ ರಾಜೀನಾಮೆ, ಮಡಿಕೇರಿ ಡಿವೈಎಸ್‍ಪಿ ಗಣಪತಿ ಹತ್ಯೆ, ಬಾಗಲಕೋಟೆ ಜಿಲ್ಲೆ ಎಸ್ ವೈ ಮೇಟಿ ಪ್ರಕರಣಗಳಲ್ಲಿ ನ್ಯಾಯವನ್ನು ನೀಡಿ. ಅಲ್ಲದೇ ಅನ್ನಭಾಗ್ಯ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿರುವ ಕುರಿತು ಯಾತ್ರೆಯಲ್ಲಿ ಪ್ರಸ್ತಾಪಿಸಿ ಎಂಬ ಹಲವು ಅಂಶಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಾಲಕಿಯ ಜಾಣ್ಮೆಯನ್ನು ಪ್ರಶಂಸಿದ ಬಿಎಸ್‍ವೈ ಅವರು ಮುಂದಿನ ಯಾತ್ರೆಗಳಲ್ಲಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸುದಾಗಿ ತಿಳಿಸಿದರು.

  • ವೈದ್ಯರ ಎಡವಟ್ಟಿನಿಂದಾಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

    ವೈದ್ಯರ ಎಡವಟ್ಟಿನಿಂದಾಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

    ಕೊಪ್ಪಳ: ವೈದ್ಯರ ಎಡವಟ್ಟಿನಿಂದಾಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಗಾಯಿತ್ರಿ(11) ಎಂದು ಗುರುತಿಸಲಾಗಿದೆ. ವೈದ್ಯ ಡಾ. ಸಂತೋಷ್ ಕುಮಾರ್ ಎಂಬವರು ಈ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.

    ಬಾಲಕಿ ಗಾಯಿತ್ರಿ ಜ್ವರದಿಂದ ಬಳಲುತ್ತಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಡಾ. ಸಂತೋಷ್ ಚುಚ್ಚು ಮದ್ದು ಕೊಟ್ಟಿದ್ದಾರೆ. ಆ ಬಳಿಕ ಬಾಲಕಿಯ ತೊಡೆಯ ಭಾಗದಲ್ಲಿ ಹಸಿರುಬಣ್ಣಕ್ಕೆ ತಿರುಗಿ ಊತವುಂಟಾಗಿದೆ. ಹೀಗಾಗಿ ಮೆಡಿಸಿನ್ ರಿಯಾಕ್ಷನ್ ನಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.

    ಇದೀಗ ಪೋಷಕರು ವೈದ್ಯನ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟಿದ್ದಾಳೆ ಅಂತ ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕಳೆದುಕೊಂಡ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

    ಈ ಘಟನೆ ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     

  • ಬಸ್ ನಿಂದ ಎಸೆಯಲ್ಪಟ್ಟು 1ನೇ ಕ್ಲಾಸ್ ಬಾಲಕಿ ದುರ್ಮರಣ

    ಬಸ್ ನಿಂದ ಎಸೆಯಲ್ಪಟ್ಟು 1ನೇ ಕ್ಲಾಸ್ ಬಾಲಕಿ ದುರ್ಮರಣ

    ಹೈದರಾಬಾದ್: ಶಾಲಾ ಬಸ್ ನಿಂದ ಬಿದ್ದು 1ನೇ ತರಗತಿಯ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಈ ಘಟನೆ ಸಾಹೇಬ್ ನಗರದಲ್ಲಿರೋ ವಸಂತಲಿಪುರಂನಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕಿಯನ್ನು ಅಂಜಲಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: ಮೃತ ಅಂಜಲಿ ಮನೆ ಶಾಹೇಬ್ ನಗರದಲ್ಲಿತ್ತು. ಈಕೆ ಪ್ರತೀ ದಿನ ಶಾಲೆಗೆ ಶಾಲಾ ಬಸ್ ನಲ್ಲೇ ಹೋಗಿ ಬರುತ್ತಿದ್ದಳು. ಅಂತೆಯೇ ಇಂದು ಕೂಡ ವಸಂತಪುರಂನಲ್ಲಿರೋ ಪ್ರಶಾಂತಿ ವಿದ್ಯಾನಿಕೇತನ್ ಶಾಲೆಗೆ ತೆರಳಿ ಮತ್ತೆ ಬಸ್ ನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಳು. ಈ ವೇಳೆ ಬಸ್ ನ ಡೋರ್ ಪಕ್ಕ ಅಂಜಲಿ ಕುಳಿತಿದ್ದಳು. ಅಂತೆಯೇ ಬಸ್ ಚಲಿಸುತ್ತಿದ್ದ ವೇಳೆ ಚಾಲಕ ಸ್ಪೀಡ್ ಬ್ರೇಕರ್ ನೋಡಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಾಲಕಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಚಕ್ರದಡಿ ಸಿಲುಕಿದ್ದಾಳೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಆದಾಗಲೇ ಆಕೆ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಬಾಲಕಿಯ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ನಾವು ಇಂದು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಅಂತ ಕಣ್ಣೀರು ಸುರಿಸುತ್ತಿದ್ದಾರೆ.

    ಕೆಲ ಖಾಸಗಿ ಶಾಲೆಯ ಬಸ್ ಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸುವುದಿಲ್ಲ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಅಲ್ಲದೇ ಪೋಷಕರಿಂದ ಭಾರೀ ಶುಲ್ಕ ಪಡೆದುಕೊಳ್ಳುತ್ತಾರೆ. ಆದ್ರೆ ಮಕ್ಕಳ ಸುರಕ್ಷತೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿಲ್ಲ. ಈ ಎಲ್ಲಾ ಹಿನ್ನೆಲೆಗಳಿಂದ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಘಟನೆ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

  • ಭಿಕ್ಷೆಯ ನೆಪದಲ್ಲಿ 20 ಸಾವಿರ ರೂ. ನೊಂದಿಗೆ ಬಾಲಕಿ ಎಸ್ಕೇಪ್!

    ಭಿಕ್ಷೆಯ ನೆಪದಲ್ಲಿ 20 ಸಾವಿರ ರೂ. ನೊಂದಿಗೆ ಬಾಲಕಿ ಎಸ್ಕೇಪ್!

    ಬೆಂಗಳೂರು: ಇನ್ಮುಂದೆ ಭಿಕ್ಷೆ ಬೇಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು. ಯಾಕಂದ್ರೆ ಭಿಕ್ಷೆ ಬೇಡುವ ನೆಪದಲ್ಲಿ ಇಲ್ಲೊಬ್ಬಳು ಬಾಲಕಿ 20 ಸಾವಿರ ರೂ. ಎಗರಿಸಿದ ಘಟನೆ ನಡೆದಿದೆ.

    ಹೌದು. ಆರ್ ಟಿ ನಗರದಲ್ಲಿರೋ ಟೆಂಡರ್ ಚಿಕನ್ ಅಂಗಡಿಯಲ್ಲಿ ಬಾಲಕಿ ತನ್ನ ಕೈಚಳಕ ತೋರಿಸಿದ್ದಾಳೆ. ಭಿಕ್ಷೆ ಬೇಡುವ ನೆಪದಲ್ಲಿ ಬಂದ ಬಾಲಕಿ 20 ಸಾವಿರಕ್ಕೂ ಹೆಚ್ಚು ಹಣ ದೋಚಿ ಪರಾರಿಯಾಗಿದ್ದಾಳೆ. ಭಿಕ್ಷುಕಿ ಬಾಲಕಿಯ ಕೈ ಚಳಕ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿಸಿಟಿವಿಯಲ್ಲೇನಿದೆ?: ಮಹಿಳೆಯೊಂದಿಗೆ ಅಂಗಡಿಗೆ ಬಂದ ಬಾಲಕಿ ಮೊದಲು ಡ್ರಾಯರ್ ಎಳೆದು ಹಣವನ್ನು ನೋಡುತ್ತಾಳೆ. ಕೂಡಲೇ ಇನ್ನೊಂದು ಡ್ರಾಯರ್ ಎಳೆದು ಅದರಲ್ಲೂ ಹಣವಿದೆಯಾ ಎಂದು ಪರೀಕ್ಷಿಸುತ್ತಾಳೆ. ಆ ನಂತರ ಮೊದಲು ತೆರೆದ ಡ್ರಾಯರ್ ನಲ್ಲಿದ್ದ ನೋಟುಗಳ ಕಂತೆಗಳನ್ನು ತನ್ನ ಜೋಳಿಗೆಗೆ ತುಂಬಿಸಿಕೊಂಡು ಯಾರಾದ್ರೂ ನೋಡುತ್ತಾರೆಯೇ ಅಂತ ಅತ್ತ ಇತ್ತ ನೋಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.

    https://www.youtube.com/watch?v=9inMbngzJQc&feature=youtu.be