Tag: ಬಾಲಕಿ

  • ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.

    ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.

    ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.

  • ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ- 25ರ ಯುವಕನ ಬಂಧನ

    ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ- 25ರ ಯುವಕನ ಬಂಧನ

    ಶಿಮ್ಲಾ: ಮೂರೂವರೆ ವರ್ಷದ ಕಂದಮ್ಮನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ ಹಿಮಾಚಲಪ್ರದೇಶದಲ್ಲಿ ಸೋಮವಾರ ನಡೆದಿದೆ.

    ಪ್ರಕರಣ ಸಂಬಂಧ ಇದೀಗ ಸ್ಥಳೀಯ ಪೊಲೀಸರು 25 ವರ್ಷದ ಬಂಟಿ ಎಂಬಾತನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಬಾಲಕಿಯ ಪೋಷಕರು ಹರಿಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ ಬಳಿಕ ಬೆಳಕಿಗೆ ಬಂದಿದೆ.

    ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಪರೀಕ್ಷೆಗಾಗಿ ತಂಡಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇತ್ತ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಶಾಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ರಕ್ತಸ್ರಾವವಾಗ್ತಿದ್ದ ಮಗಳನ್ನು ಎತ್ತಿಕೊಂಡೇ ಆಸ್ಪತ್ರೆಗೆ ಓಡಿದ ತಂದೆ!

    ಶಾಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ರಕ್ತಸ್ರಾವವಾಗ್ತಿದ್ದ ಮಗಳನ್ನು ಎತ್ತಿಕೊಂಡೇ ಆಸ್ಪತ್ರೆಗೆ ಓಡಿದ ತಂದೆ!

    ಪಾಟ್ನಾ: 11 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿರೋ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಭೋಜ್ ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಕಾಮುಕ 5 ರೂ. ಕೊಡುವ ಆಮಿಷ ಒಡ್ಡಿ ಬಳಿಕ ಬಾಲಕಿಯನ್ನ ಹತ್ತಿರದ ಹೊಲದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಇದರಿಂದಾಗಿ ಬಾಲಕಿ ತೊಟ್ಟ ಬಟ್ಟೆ ರಕ್ತಸಿಕ್ತವಾಗಿತ್ತು. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅರಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಪೂನಮ್ ಹೇಳಿದ್ದಾರೆ.

    ಈ ಕುರಿತು ಬಾಲಕಿಯಿಂದ ಹೇಳಿಕೆಯನ್ನು ಪಡೆದುಕೊಂಡಿದ್ದು, ಸುಮಾರು 11 ಗಂಟೆ ವೇಳೆಗೆ ಶಾಲೆಯ ಬಾತ್ ರೂಮ್ ಗೆ ತೆರಳಿದಾಗ ಈ ಘಟನೆ ನಡೆದಿದ್ದಾಗಿ ಹೇಳಿದ್ದಾಳೆ. ಶಾಲೆಯ ಹಿರಿಯ ವಿದ್ಯಾರ್ಥಿ ಅಪು ಸಾಹ್ ಈ ಕೃತ್ಯವೆಸಗಿದ್ದು, ಬಳಿಕ ಬಾಲಕಿ ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ.

    ಘಟನೆಯಿಂದಾಗಿ ನಡೆಯಲಾರದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಕೆಯ ತಂದೆ ಎತ್ತಿಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ. ತಂದೆಯ ದುಃಖ ಎಷ್ಟಿತ್ತೆಂಬುದು ಫೋಟೋಗಳಿಂದ ತಿಳಿಯುತ್ತದೆ.

  • ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ರುಂಡವನ್ನು ಕತ್ತರಿಸಿದ!

    ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ರುಂಡವನ್ನು ಕತ್ತರಿಸಿದ!

    ಭೋಪಾಲ್: ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಶಾಲೆಯ ಆವರಣದಲ್ಲೇ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿಯಿಂದ ರುಂಡವನ್ನು ಕತ್ತರಿಸಿ ಕೊಲೆಗೈದ ಘಟನೆ ಮಧ್ಯಪ್ರದೇಶದಲ್ಲಿ ಅನುಪ್ಪುರ್ ನಲ್ಲಿ ನಡೆದಿದೆ.

    11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂಜಾ ಪನೀಕ(17) ತನ್ನ ಜೀವಶಾಸ್ತ್ರ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಲು ಮಧ್ಯಾಹ್ನ 12.30 ರ ಸುಮಾರಿಗೆ ಶಾಲೆಯ ತರಗತಿಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯೊಬ್ಬ ಶಿಕ್ಷಕಿಯ ಎದುರಲ್ಲೇ ಕತ್ತಿಯಿಂದ ಕೊಲೆ ಮಾಡಿದ್ದಾನೆ.

    63 ವರ್ಷದ ಆ ಶಿಕ್ಷಕಿಯೂ ಘಟನೆಯನ್ನು ನೋಡಿ ಆಘಾತಗೊಂಡಿದ್ದಾರೆ. ಕಣ್ಣಿಗೆ ಕನ್ನಡಕವನ್ನು ಧರಿಸಿರದ ಕಾರಣ ಕೊಲೆ ಮಾಡಿದವನನ್ನು ಗುರುತು ಹಿಡಿಯಲಾಗಲಿಲ್ಲ ಎಂದು ಶಿಕ್ಷಕಿಯೂ ಪೊಲೀಸರಿಗೆ ತಿಳಿಸಿದ್ದಾರೆ.

    ಶಿಕ್ಷಕಿಯ ಪ್ರಕಾರ ಆ ವ್ಯಕ್ತಿಯು ಬಾಲಕಿಯ ಹಿಂದೆ ಓಡಿ ಬಂದು ತನ್ನ ಕೈಯಲಿದ್ದ ಕತ್ತಿಯಿಂದ ಮೂರು ಬಾರಿ ಕುತ್ತಿಗೆಗೆ ಚುಚ್ಚಿದ್ದಾನೆ. ನಂತರ ಆ ಕತ್ತಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

    ನಗರ ಪ್ರದೇಶದಿಂದ ಶಾಲೆ ಸ್ವಲ್ಪ ದೂರ ಇರುವುದರಿಂದ ಸುತ್ತ ಮುತ್ತ ಕಮ್ಮಿ ಜನರಿದ್ದರು. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯ ಶವವನ್ನು ಮತ್ತು ಆ ಕತ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ.

    ಪೊಲೀಸರು ಬಾಲಕಿಯ ಕುಟುಂಬದವರಿಗೆ ಈ ಘಟನೆಯ ಬಗ್ಗೆ ಪ್ರಶ್ನಿಸಿದಾಗ, ಬಾಲಕಿಯ ಪೋಷಕರು ತಮ್ಮ ಕುಟುಂಬದವರಿಂದಲೇ ಯಾರೋ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

    ಆದರೆ ಪೊಲೀಸರಿಗೆ ಮತ್ತೊಂದು ಸಾವಿನ ಸುದ್ದಿಯಿಂದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆಯಾದ ಬಾಲಕಿಯ ಊರಿನ ಹತ್ತಿರ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ನೇಣು ಹಾಕಿಕೊಂಡ ಯುವಕನಿಗೂ ಮತ್ತು ವಿದ್ಯಾರ್ಥಿನಿಯ ಕೊಲೆ ಪ್ರಕರಣಕ್ಕೆ ಏನಾದರೂ ಸಂಬಂಧ ಇದ್ಯಾ ಎನ್ನುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

  • ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ತುಮಕೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಂದಿನಿ ಧಾರಾವಾಹಿಯ ಪಾತ್ರ ಅನುಕರಣೆ ಮಾಡಿ ಬಾಲಕಿಯೊರ್ವಳು ಬಲಿಯಾದ ಘಟನೆ ಮಾಸುವ ಮುನ್ನವೇ `ಯಾರೇ ನೀ ಮೋಹಿನಿ’ ಯ ಕಥೆ ಕೇಳಿ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ.

    ಹೌದು. ತುಮಕೂರು ನಗರದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಇಂಡೋಕಿಟ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಧಾರಾವಾಹಿಯಲ್ಲಿನ ಭೂತದ ಕಥೆ ಕೇಳಿ ಇಬ್ಬರು ಮಕ್ಕಳು ಹೆದರಿ ಅದರಲ್ಲಿ ಓರ್ವ ಬಾಲಕಿ ಚಳಿ ಜ್ವರದಿಂದ ಅಸ್ವಸ್ಥಳಾಗಿದ್ದಾಳೆ. ಇದನ್ನೂ ಓದಿ: ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

    ಯಾರೇ ನೀ ಮೋಹಿನಿ ಧಾರವಾಹಿ ವೀಕ್ಷಿಸಿದ ಬಾಲಕಿ ಪುಷ್ಮಿತಾ ಶಾಲೆಗೆ ಬಂದು ತನ್ನ ಸಹಪಾಠಿ ಪ್ರತಿಕ್ಷಾಗೆ ಹೇಳಿದ್ದಾಳೆ. ಧಾರಾವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರಿದ್ದಲ್ಲದೇ ಪ್ರತಿಕ್ಷಾಗೂ ಹೆದರಿಸಿದ್ದಾಳೆ.

    ಈ ಭಯದಲ್ಲೇ ಮನೆಗೆ ಹೋಗಿದ್ದ ಪ್ರತಿಕ್ಷಾಗೆ ಚಳಿ-ಜ್ವರ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಚಿಕಿತ್ಸೆ ನೀಡಿ ವಿಚಾರಿಸಿದಾಗ ಪ್ರತಿಕ್ಷಾ ಧಾರಾವಾಹಿಯಲ್ಲಿನ ಭೂತದ ಕಥೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

  • ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಬೇಕೆಂದು 8ನೇ ಕ್ಲಾಸ್ ಬಾಲಕಿಯನ್ನ ವಿವಸ್ತ್ರಗೊಳಿಸಿದ ಪ್ರಿನ್ಸಿಪಾಲ್ ಬಂಧನ

    ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಬೇಕೆಂದು 8ನೇ ಕ್ಲಾಸ್ ಬಾಲಕಿಯನ್ನ ವಿವಸ್ತ್ರಗೊಳಿಸಿದ ಪ್ರಿನ್ಸಿಪಾಲ್ ಬಂಧನ

    ಲಕ್ನೋ: ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಳಬೇಕು ಎಂದು ಹೇಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯನೊಬ್ಬ 6ನೇ ತರಗತಿಯ ಬಾಲಕಿಯನ್ನ ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ ನೀಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಜಬಲ್‍ಪುರ್ ಕತ್ರಿ ಬಂಜರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಪೋಷಕರು ಸದಾರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಖ್ಯೋಪಾಧ್ಯಾಯನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.

    ಬಾಲಕಿಯ ತಂದೆ ದೂರು ನೀಡಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ ಎಂದು ಎಸ್‍ಪಿ ಕನೌಜ್ ಹರೀಶ್ ಚಂದ್ರ ಹೇಳಿದ್ದಾರೆ. ಮಂಗಳವಾರದಂದು ಬಾಲಕಿಯ ಪೋಷಕರು ಮುಖ್ಯೋಪಾಧ್ಯಾಯನ ವಿರುದ್ಧ ದೂರು ದಾಖಲಿಸಿದ್ದು, ಘಟನೆ ನಡೆದಾಗ ಬಾಲಕಿಯ ಜೊತೆ ಇದ್ದ ಶಾಲೆಯ ಇತರೆ ವಿದ್ಯಾರ್ಥಿನಿಯರು ಘಟನೆ ಬಗ್ಗೆ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

    ಪೊಲೀಸರು ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡಿದ್ದು, ಆಕೆಯನ್ನ ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದಾರೆ.

  • ಪೋಷಕರ ಸಣ್ಣ ಬೇಜವಾಬ್ದಾರಿತನದಿಂದ 9ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

    ಪೋಷಕರ ಸಣ್ಣ ಬೇಜವಾಬ್ದಾರಿತನದಿಂದ 9ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

    ಲಕ್ನೋ: 4 ವರ್ಷದ ಬಾಲಕಿಯೊಬ್ಬಳು 9ನೇ ಮಹಡಿಯಲ್ಲಿದ್ದ ತನ್ನ ಮನೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರೋ ದಾರುಣ ಘಟನೆ ಉತ್ತರಪ್ರದೇಶದ ಇಂದೆರಾಪುರಂನಲ್ಲಿ ನಡೆದಿದೆ.

    ಇಲ್ಲಿನ ಸನ್‍ರೈಸ್ ಸೊಸೈಟಿಯಲ್ಲಿ 9ನೇ ಮಹಡಿಯಲ್ಲಿದ್ದ ಮನೆಯ ಬಾಲ್ಕನಿಯಿಂದ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಸೊಸೈಟಿಯ ಇತರೆ ನಿವಾಸಿಗಳು ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದ್ರೂ ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಳು.

    ಬಾಲ್ಕನಿಯಲ್ಲಿ ಇಡಲಾಗಿದ್ದ ಸ್ಟೂಲ್ ಈ ದುರ್ಘನೆಗೆ ಕಾರಣವೆಂದು ಹೇಳಲಾಗಿದೆ. ಸೊಸೈಟಿಯ ಫ್ಲಾಟ್ ನಂಬರ್ 1001ರಲ್ಲಿ ಮನೀಷ್ ಸಚ್‍ದೇವಾ ಎಂಬವರು ಕುಟುಂಬದೊಂದಿಗೆ ವಾಸವಿದ್ದಾರೆ. ಸೋಮವಾರ ಸಂಜೆ ಮನೀಷ್ ಪತ್ನಿ ಟ್ಯೂಷನ್ ಕ್ಲಾಸ್ ತೆಗೆದುಕೊಳ್ಳಲು ಹೊರಗಡೆ ಹೋಗಿದ್ದರು. ಈ ವೇಳೆ ಬಾಲಕಿ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಳು. ಬಾಲಕಿ ಸ್ಟೂಲ್ ಮೇಲೆ ಹತ್ತಿ ಕೆಳಗೆ ಇಣುಕಿ ನೋಡಿದ್ದಾಳೆ. ಹೀಗೆ ಮಾಡುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ.

    ಬಾಲಕಿ ಸಾವಿಗೆ ಪೋಷಕರ ಬೇಜವಾಬ್ದಾರಿತನವೇ ಪ್ರಾಥಮಿಕ ಕಾರಣ ಎಂದು ಹೇಳಲಾಗಿದೆ. ಬಾಲಕಿ ಸಾವಿನಿಂದ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇಲ್ಲ.

    ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಪ್ರತ್ಯಕ್ಷದರ್ಶಿಗಳು ಹಾಗೂ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‍ಗಳನ್ನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • 7 ವರ್ಷದ ಬಾಲಕಿಯನ್ನ ರೇಪ್ ಮಾಡಿ ಕೊಂದಿದ್ದ ಎಂಜಿನಿಯರ್‍ ಗೆ ಗಲ್ಲು ಶಿಕ್ಷೆ

    7 ವರ್ಷದ ಬಾಲಕಿಯನ್ನ ರೇಪ್ ಮಾಡಿ ಕೊಂದಿದ್ದ ಎಂಜಿನಿಯರ್‍ ಗೆ ಗಲ್ಲು ಶಿಕ್ಷೆ

    ಚೆನ್ನೈ: ಸುಮಾರು 1 ವರ್ಷದ ಹಿಂದೆ 7ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನ ಕೊಲೆ ಮಾಡಿದ್ದ ಎಂಜಿನಿಯರ್‍ಗೆ ತಮಿಳುನಾಡಿನ ಕಂಚೀಪುರಂನ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಜೊತೆಗೆ ಆತನಿಗೆ 46 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.

    ಚೆನ್ನೈನ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ಬಳಿ ತನ್ನ ನಾಯಿಮರಿಯೊಂದಿಗೆ ಆಟವಾಡಲು ಬರುತ್ತಿದ್ದ ಬಾಲಕಿ ಮೇಲೆ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಎಸ್. ದಶ್‍ವಂತ್(23) ಅತ್ಯಾಚಾರವೆಸಗಿದ್ದ. ನಂತರ ಮೃತದೇಹವನ್ನ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದ. ಕಳೆದ ವರ್ಷ ಈತ ತಂದೆಯಿಂದ ಜಾಮೀನು ಪಡೆದು ಹೊರಬಂದಾಗ ತನ್ನ ತಾಯಿಯನ್ನೂ ಕೊಲೆ ಮಾಡಿದ್ದ ಎಂದು ವರದಿಯಾಗಿದೆ.

    ಇಂದಿನಿಂದ ನಾವು ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಅವನೊಬ್ಬ ರಾಕ್ಷಸ ಎಂದು ಮೃತ ಬಾಲಕಿಯ ತಂದೆ ಬಾಬು ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಏನಿದು ಪ್ರಕರಣ?: 2017ರ ಫೆಬ್ರವರಿಯಲ್ಲಿ ದಶ್‍ವಂತ್, ನಾಯಿಮರಿಯನ್ನ ತೋರಿಸಿ ಬಾಲಕಿಯನ್ನ ತನ್ನ ಪಾರ್ಟ್‍ಮೆಂಟ್‍ಗೆ ಕರೆದೊಯ್ದಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನ ಬ್ಯಾಗ್‍ನಲ್ಲಿ ತುಂಬಿ ಹೆದ್ದಾರಿ ಬಳಿ ಸುಟ್ಟು ಹಾಕಿದ್ದ.

    ಘಟನೆಗೆ ಸಾಕ್ಷಿಗಳು ಇಲ್ಲದಿದ್ದರಿಂದ ಈ ಪ್ರಕರಣ ದೊಡ್ಡ ಸವಾಲಾಗಿತ್ತು. ಕೇವಲ ಸಾಂದರ್ಭಿಕ ಪುರಾವೆಗಳನ್ನ ಅವಲಂಬಿಸಬೇಕಿತ್ತು. ವೈಜ್ಞಾನಿಕವಾಗಿ ಆರೋಪ ಸಾಬೀತು ಮಾಡಬೇಕಿತ್ತು. ಬಾಲಕಿಯ ಬಟ್ಟೆಯಿಂದ ಸಂಗ್ರಹಿಸಲಾದ ವೀರ್ಯ ದಶವಂತ್‍ನದ್ದು ಎಂದು ಡಿಎನ್‍ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಆರೋಪಿಯ ಬೆಡ್‍ರೂಮಿನಲ್ಲಿ ಬಾಲಕಿಯ ಆಭರಣ ಕೂಡ ಪತ್ತೆಯಾಗಿತ್ತು ಎಂದು ಬಾಲಕಿಯ ಪೋಷಕರ ಪರ ವಕೀಲರಾದ ಕಣ್ಣದಾಸನ್ ಹೇಳಿದ್ದಾರೆ.

    ಪೊಲೀಸರು ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.

    ಡಿಸೆಂಬರ್‍ನಲ್ಲಿ ದಶವಂತ್ ಜಾಮೀನಿನ ಮೇಲೆ ಹೊರಬಂದಾಗ ತನ್ನ ತಾಯಿ ಸರಳಾ ಅವರನ್ನು ಕೂಡ ಕೊಲೆ ಮಾಡಿದ್ದಾನೆ ಎಂಬ ಆರೋಪವಿದೆ. ದಶವಂತ್ ತಾಯಿಯನ್ನ ಕೊಂದು, ಅವರ ಒಡವೆಗಳನ್ನ ದೋಚಿ ಮುಂಬೈಗೆ ಪರಾರಿಯಾಗಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

    ಚೆನ್ನೈ ಪೊಲೀಸರಿಗೆ ಮಂಕುಬೂದಿ ಎರಚಿ ಓಡಿಹೋಗಿದ್ದ ಆತ ನಂತರ ಮುಂಬೈನಲ್ಲಿ ಸಿಕ್ಕಿಬಿದ್ದಿದ್ದ. ಒಂದು ದಿನದ ಬಳಿಕ ಆತನನ್ನು ಬಂಧಿಸಲಾಗಿತ್ತು.

    ಆರೋಪಿ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣ ಇನ್ನೂ ಬಾಕಿ ಇದೆ.

  • 13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    ಗಾಂಧಿನಗರ: ಶಿಕ್ಷಕನೊಬ್ಬ ನೋಟ್ಸ್ ಚೆಕ್ ಮಾಡುವುದಾಗಿ ಹೇಳಿ ಸ್ಟಾಫ್ ರೂಮಿನಲ್ಲೇ 6ನೇ ಕ್ಲಾಸ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಇಲ್ಲಿನ ವಲ್ಸದ್ ಜಿಲ್ಲೆಯ ಗಾಂಧಿವಾಡಿಯ ಸರಸ್ವತಿ ಹಿಂದಿ ಹೈಸ್ಕೂಲ್‍ನಲ್ಲಿ ಸೋಮವಾರದಂದು ಶಿಕ್ಷಕ ಈ ಕೃತ್ಯವೆಸಗಿದ್ದಾನೆ. ಇವತ್ತು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಶಿಕ್ಷಕ ಚುಂಬಿಸಿದ್ದಾನೆ. ಈ ಬಗ್ಗೆ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ ಬಳಿಕ ಶಿಕ್ಷಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಘಟನೆ ನಡೆದಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.

    ಬಾಲಕಿಯ ಪೋಷಕರು ಉಮರ್‍ಗಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 6ನೇ ಕ್ಲಾಸ್‍ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯನ್ನ ವಿಜ್ಞಾನ ವಿಭಾಗದ ಶಿಕ್ಷಕ ಓಂ ಪ್ರಕಾಶ್ ಯಾದವ್ ಸೋಮವಾರ ಮಧ್ಯಾಹ್ನ 2.30ರ ವೇಳೆಯಲ್ಲಿ ಸ್ಟಾಫ್ ರೂಮಿಗೆ ಕರೆಸಿದ್ದ. ಕ್ಲಾಸ್ ನೋಟ್ಸ್‍ಗಳನ್ನ ಚೆಕ್ ಮಾಡ್ತೀನಿ, ಎಲ್ಲರೂ ನೋಟ್ ಪುಸ್ತಕಗಳನ್ನ ಕಳಿಸಬೇಕೆಂದು ಹೇಳುವಂತೆ ಮತ್ತೊಬ್ಬ ವಿದ್ಯಾರ್ಥಿಯನ್ನ ಕಳಿಸಿದ್ದ.

    ಬಾಲಕಿ ಎಲ್ಲರ ಪುಸ್ತಕಗಳನ್ನ ಸಂಗ್ರಹಿಸಿ ಸ್ಟಾಫ್ ರೂಮಿಗೆ ಹೋಗಿದ್ದಳು. ಈ ವೇಳೆ ಶಿಕ್ಷಕ ಓಂ ಪ್ರಕಾಶ್ ಎಲ್ಲಾ ಪುಸ್ತಕಗಳನ್ನ ನೋಡಲು ಸಾಧ್ಯವಿಲ್ಲ ಎಂದು ಹೇಳಿ ಬಾಗಿಲು ಹಾಕಿದ್ದ. ನಂತರ ಇಂದು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಕಿಸ್ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿ ಮನೆಗೆ ಬಂದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಹಲವಾರು ಪೋಷಕರು ಶಾಲೆಗೆ ಹೋಗಿ ಪ್ರಿನ್ಸಿಪಾಲ್‍ಗೆ ಈ ಬಗ್ಗೆ ತಿಳಿಸಿದ್ದಾರೆ. ನಂತರ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಸಂಭ್ರಮಾಚರಣೆಯ ವೇಳೆ ಗುಂಡೇಟಿಗೆ 7ರ ಬಾಲಕಿ ಬಲಿ

    ಸಂಭ್ರಮಾಚರಣೆಯ ವೇಳೆ ಗುಂಡೇಟಿಗೆ 7ರ ಬಾಲಕಿ ಬಲಿ

    ಭೋಪಾಲ್: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯಲ್ಲಿ ನಡೆಯುವ ಗುಂಡು ಹಾರಿಸಿ ಸಂಭ್ರಮಾಚರಿಸುವುದಕ್ಕೆ ಹಲವಾರು ಮಂದಿ ಬಲಿಯಾಗುತ್ತಿದ್ದಾರೆ. ಇಂತಹದ್ದೇ ಘಟನೆಯೊಂದು ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

    ಹೌದು. ಮದುವೆ ಸಂಭ್ರಮಾಚರಣೆಯ ವೇಳೆ ನಡೆಸಿದ ಗುಂಡೇಟಿಗೆ 7 ವರ್ಷದ ಬಾಲಕಿ ಸೆಜಲ್ ಜಾದೌನ್ ಎಂಬಾಕೆ ಬಲಿಯಾಗಿದ್ದಾಳೆ. ಇದನ್ನೂ ಓದಿ: ವಧುವಿನ ತಂದೆ ಹಾರಿಸಿದ ಗುಂಡಿಗೆ ಟೆರೇಸ್ ಮೇಲಿದ್ದ ನೆರೆಮನೆಯ ಯುವತಿ ಬಲಿ!

    ಸಂಬಂಧಿಕರ ಮನೆಯಲ್ಲಿನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಾಲಕಿ ತನ್ನ ತಂದೆಯ ಜೊತೆ ತೆರಳಿದ್ದಳು. ಎಲ್ಲರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಾಲಕಿ ತನ್ನ ತಂದೆ ಸತೇಂದ್ರ ಜಾದೌನ್ ಜೊತೆ ನಿಂತಿದ್ದಳು. ಸಂಭ್ರಮಚಾಚರಣೆಯಲ್ಲಿ ಭಾಗಿಯಾಗಿದ್ದವರು ಸಂಭ್ರಮವನ್ನು ಇಮ್ಮಡಿಗೊಳಿಸಲು ಗುಂಡು ಹಾರಿಸಿದ್ದಾರೆ. ಈ ವೇಳೆ ಅವುಗಳಲ್ಲಿ ಒಂದು ಗುಂಡು ಬಾಲಕಿ ಹೊಟ್ಟೆಗೆ ಬಂದು ಬಿದ್ದಿದೆ.

    ಘಟನೆ ನಡೆದ ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಕುರಿತು ಸೊಂಡ ಕೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!


    ಕೆಲ ದಿನಗಳ ಹಿಂದೆಯಷ್ಟೇ 28 ವರ್ಷದ ಯೋಧರೊಬ್ಬರು ತನ್ನ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಗುಂಡೇಟು ತಗುಲಿ ಗಂಭೀರ ಗಾಯಗೊಂಡಿದ್ದರು.