Tag: ಬಾಲಕಿ

  • ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನನ್ನು ಥಳಿಸಿ ಕೊಂದ್ರು!

    ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನನ್ನು ಥಳಿಸಿ ಕೊಂದ್ರು!

    ನವದೆಹಲಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನನ್ನು ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯರು ಸೆರೆ ಹಿಡಿದು ಥಳಿಸಿ ಕೊಲೆ ಮಾಡಿರುವ ಘಟನೆ ಘಜಿಯಾಬಾದ್ ಚಾಮನ್ ವಿಹಾರ್ ಪ್ರದೇಶದಲ್ಲಿ ನಡೆಸಿದೆ.

    ಜಿತೇಂದ್ರ ಕುಮಾರ್ ಸ್ಥಳೀಯರಿಂದ ಥಳಿತಕ್ಕೆ ಒಳಗಾಗಿ ಮೃತಪಟ್ಟ ಕಾಮುಕ. ಈತ ಹಳೆಯ ವಸ್ತುಗಳ ವ್ಯಾಪಾರ ನಡೆಸುತ್ತಿದ್ದ. ಶುಕ್ರವಾರ ಸಂಜೆ ನೆರೆ ಮನೆಯ ಬಾಲಕಿಯನ್ನು ಸ್ಥಳೀಯ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿ ಕರೆದುಕೊಂಡು ಹೋಗಿದ್ದ. ಆದರೆ ಕಾರ್ಯಕ್ರಮ ಮುಗಿದ ಬಳಿಕ ಬಾಲಕಿಯನ್ನು ಬೇರೆಡೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಅಲ್ಲದೇ ತನ್ನ ಕೃತ್ಯದ ಕುರಿತು ಪೋಷಕರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

    ಬಾಲಕಿ ಮನೆಗೆ ಬಂದ ಬಳಿಕ ತನ್ನ ಮೇಲೆ ನಡೆದ ಅತ್ಯಾಚಾರದ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ತಿಳಿದ ತಕ್ಷಣ ಬಾಲಕಿಯ ಸಹೋದರ ಹಾಗೂ ಸ್ಥಳೀಯರು ಆತನ್ನು ಹಿಡಿದು ಥಳಿಸಿದ್ದಾರೆ.

    ಬಾಲಕಿಯ ತಂದೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿಗ್ಗಾಮುಗ್ಗ ಥಳಿಸಿಕೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ವೇಳೆ ಕಾಮುಕ ಜಿತೇಂದ್ರ ಮೃತಪಟ್ಟಿದ್ದಾನೆ. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನೆಯ ಸಂಬಂಧ ಬಾಲಕಿಯ ಸಹೋದರ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದು, ಮತ್ತಿಬ್ಬರಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • 5ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಎಸಗಿ ಬೆಂಕಿ ಇಟ್ಟ ಅಪ್ರಾಪ್ತ ಬಾಲಕರು

    5ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಎಸಗಿ ಬೆಂಕಿ ಇಟ್ಟ ಅಪ್ರಾಪ್ತ ಬಾಲಕರು

    ಅಸ್ಸಾಂ: 5ನೇ ತರಗತಿಯ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರು ಗ್ಯಾಂಗ್ ರೇಪ್ ನಡೆಸಿ, ಬಳಿಕ ಬೆಂಕಿ ಹಚ್ಚಿರುವ ಘಟನೆ ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾರೆ. ಆದರೆ ಶೇ. 90 ರಷ್ಟು ಸುಟ್ಟಗಾಯಗಳಾದ ಕಾರಣ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಬಾಲಕಿ ಸಾವನ್ನಪ್ಪಿದ್ದಾಳೆ.

    ಘಟನೆ ಕುರಿತು ಪೊಲೀಸರು ಮಾಹಿತಿ ಪಡೆದು ಆಸ್ಪತ್ರೆಗೆ ಧಾವಿಸಿದ್ದು, ಬಾಲಕಿಯ ಹೇಳಿಕೆಯನ್ನು ಪಡೆದಿದ್ದರು. ಬಾಲಕಿ ತನ್ನ ಹೇಳಿಕೆಯಲ್ಲಿ ತನಗೆ ಪರಿಚಯ ಇರುವ ಐವರು ಅತ್ಯಾಚಾರ ಎಸಗಿ ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ತಿಳಿಸಿದ್ದಳು.

    ಬಾಲಕಿ ಹೇಳಿಕೆ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಯಗಳನ್ನ ಬಂಧಿಸಿಲು ಹುಡುಕಾಟ ನಡೆಸಲಾಗಿದೆ. ಬಂಧಿತರು ಅಪ್ರಾಪ್ತರಾಗಿರುವ ಕಾರಣ ಅವರ ವಿರುದ್ಧ ಬಾಲಾಪರಾಧಿ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ. ಬಾಲಕಿ ಹೇಳಿಕೆ ಪಡೆಯಲಾಗಿದ್ದು, ಆಕೆಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತು ಗ್ರಾಮಸ್ಥರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಚ್ 17 ರಂದು 8 ಜನ ದುಷ್ಕರ್ಮಿಗಳು ಪತಿಯನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದ ಘಟನೆ ನಡೆದಿತ್ತು. ಘಟನೆ ಬಳಿಕ ಅಸ್ಸಾಂ ನ ಸ್ಥಳೀಯ ಶಾಸಕರು ವಿಧಾನಸಭೆಯಲ್ಲಿ ಮಹಿಳೆಯರ ರಕ್ಷಣೆ ಕುರಿತು ಪ್ರಶ್ನಿಸಿದ್ದರು.

  • ದಾಹ ತಣಿಸಿಕೊಳ್ಳಲು ಹೋಗಿ ನೀರೆಂದು ವಿಷ ಕುಡಿದು ಬಾಲಕಿ ಸಾವು

    ದಾಹ ತಣಿಸಿಕೊಳ್ಳಲು ಹೋಗಿ ನೀರೆಂದು ವಿಷ ಕುಡಿದು ಬಾಲಕಿ ಸಾವು

    ಯಾದಗಿರಿ: ನೀರಿನ ದಾಹ ತಣಿಸಿಕೊಳ್ಳಲು ನೀರೆಂದು ವಿಷ ಸೇವಿಸಿ ಬಾಲಕಿ ಸಾವನಪ್ಪಿರುವ ಘಟನೆಯು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನಡೆದಿದೆ.

    16 ವರ್ಷದ ಗೂಡುಮಾ ಮೃತ ದುರ್ದೈವಿ. ನೀರಿನ ದಾಹ ತಣಿಸಿಕೊಳ್ಳಲು ಗೂಡುಮಾ ನೀರಿನ ಬಾಟಲಿಯಿಂದ ಸಹಜವಾಗಿ ಕುಡಿದಿದ್ದಾಳೆ. ಆದರೆ ಪೋಷಕರು ಮನೆಯಲ್ಲಿ ನೀರಿನ ಬಾಟಲಿಯಲ್ಲಿ ಕ್ರಿಮಿನಾಶಕ ಇಟ್ಟಿರುವ ಅರಿವಿಲ್ಲದೆ ನೀರೆಂದು ವಿಷ ಸೇವಿಸಿ ಸಾವನಪ್ಪಿದ್ದಾಳೆ.

    ಪೋಷಕರು ಮಾಡಿದ ಎಡವಟ್ಟಿನಿಂದ ಮಗಳು ಸಾವಿನಪ್ಪಿದ್ದಾಳೆ. ಘಟನೆ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗುಡಿಸಲಿಗೆ ಬೆಂಕಿ- 7 ವರ್ಷದ ಬಾಲಕಿ ಸಜೀವ ದಹನ

    ಗುಡಿಸಲಿಗೆ ಬೆಂಕಿ- 7 ವರ್ಷದ ಬಾಲಕಿ ಸಜೀವ ದಹನ

    ಗದಗ: ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿ ಗುಡಿಸಲಲ್ಲಿ ಮಲಗಿದ್ದ 7 ವರ್ಷದ ಬಾಲಕಿ ಸಜೀವ ದಹನವಾಗಿರುವ ಘಟನೆ ಗದಗದ ನೀಲಗುಂದ ಗ್ರಾಮದಲ್ಲಿ ನಡೆದಿದೆ.

    ರೇಣುಕಾ ಶರಣಪ್ಪ ಚಿಂಚಲಿ(7) ಮೃತ ಬಾಲಕಿ. ಹೊಲದಲ್ಲಿನ ಗುಡಿಸಲಿನಲ್ಲಿ ಬಾಲಕಿ ಮಲಗಿದ್ದ ವೇಳೆ ಆಕಸ್ಮಿಕ ಈ ಅವಘಡ ಸಂಭವಿಸಿದೆ. ಗುಡಸಲಿಗೆ ಬೆಂಕಿ ತಗುಲಿ ಬಾಲಕಿ ಮೃತಪಟ್ಟಿದ್ದಾಳೆ.

    ಈ ಘಟನೆ ಸಂಬಂಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – `I Am failure’ ಎಂದು ಡೆತ್‍ನೋಟ್ ಬರೆದಿರುವ ಬಾಲಕಿ

    9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – `I Am failure’ ಎಂದು ಡೆತ್‍ನೋಟ್ ಬರೆದಿರುವ ಬಾಲಕಿ

    ನವದೆಹಲಿ: ಶಾಲೆಯಲ್ಲಿ ಶಿಕ್ಷಕನ ಲೈಂಗಿಕ ಕಿರುಕಳಕ್ಕೆ ಬೇಸತ್ತು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಬರೆದಿರುವ ಡೆತ್‍ನೋಟ್ ಸಿಕ್ಕಿದೆ.

    ಮಯೂರ್ ವಿಹಾರ್ ನಲ್ಲಿರೋ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 15 ವರ್ಷದ ಬಾಲಕಿ ಮಂಗಳವಾರದಂದು ಆತ್ಮಹತ್ಯೆಗೆ ಶರಣಾಗಿದ್ದಳು. ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್ ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    ಪೋಷಕರು ಮಾಡಿರುವ ಆರೋಪದ ಬಗ್ಗೆ ನೊಯ್ಡಾ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿಯ ನೋಟ್ ಪುಸ್ತಕ ದೊರೆತಿದೆ. ಬಾಲಕಿ ತನ್ನ ಪುಸ್ತಕದ ಪೇಜ್ ನಲ್ಲಿ `I Am failure’ ಎಂದು ಎರಡು ಬಾರಿ ಬರೆದಿದ್ದಾಳೆ. ಅದು ಬಾಲಕಿಯ ಕೈಬರಹವೇ ಎಂದು ಪೊಲೀಸರು ಮತ್ತು ಬಾಲಕಿಯ ಕುಟುಂಬದವರು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲದೇ “ನಾನು ಪೆದ್ದಿ” ಎಂದು ಒಮ್ಮೆ ಬರೆದಿದ್ದಾಳೆ. ಆ ಪೇಜ್ ನಲ್ಲಿ ಬಾಲಕಿ ಅನೇಕ ಬಾರಿ ಸಹಿಯನ್ನು ಕೂಡ ಮಾಡಿದ್ದಾಳೆ.

    ಏನಿದು ಪ್ರಕರಣ?: ಬಾಲಕಿ ನೊಯ್ಡಾದ ಸೆಕ್ಟರ್ 52ರ ನಿವಾಸಿಯಾಗಿದ್ದು, ಉತ್ತಮ ನೃತ್ಯಗಾರ್ತಿಯೂ ಕೂಡ ಆಗಿದ್ದಳು ಎಂದು ವರದಿಯಾಗಿದೆ. ಶಾಲೆಯ ಶಿಕ್ಷಕನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

    ಸಮಾಜ ವಿಜ್ಞಾನ ಶಿಕ್ಷಕರು ತನ್ನನ್ನು ಅಶ್ಲೀಲವಾಗಿ ಮುಟ್ಟುತ್ತಾರೆ ಎಂದು ನನ್ನ ಮಗಳು ಹೇಳಿದ್ದಳು. ಆದ್ರೆ ನಾನೂ ಕೂಡ ಶಿಕ್ಷಕನಾಗಿರೋದ್ರಿಂದ ಅವರು ಆ ರೀತಿ ಮಾಡಲು ಸಾಧ್ಯವಿಲ್ಲ, ಏನೋ ತಪ್ಪಾಗಿರಬಹುದು ಎಂದಿದ್ದೆ. ಆದ್ರೆ ಅವರನ್ನ ಕಂಡರೆ ನನಗೆ ಭಯ. ನಾನು ಎಷ್ಟೇ ಚೆನ್ನಾಗಿ ಬರೆದರೂ ಫೇಲ್ ಮಾಡುತ್ತಾರೆ ಎಂದು ಹೇಳಿದ್ದಳು. ಕೊನೆಗೂ ಸಮಾಜ ವಿಜ್ಞಾನ ವಿಷಯದಲ್ಲಿ ಫೇಲ್ ಮಾಡಿದ್ದಾರೆ. ಶಾಲೆಯೇ ಅವಳನ್ನ ಕೊಂದಿದೆ ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ.

    ಮಾರ್ಚ್ 16ರಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಾಲಕಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ಇದರಿಂದ ಮನನೊಂದು ಪೋಷಕರು ಹೊರಗಡೆ ಹೋದಾಗ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಪೋಷಕರು ಮನೆಗೆ ಬಂದು ಬಾಲಕಿಯ ರೂಮಿನ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.

    ಪೊಲೀಸರು ಐಪಿಸಿ ಸೆಕ್ಷನ್ 306, 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ- ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ

    9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ- ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ

     

    ನವದೆಹಲಿ: 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನೊಯ್ಡಾದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್ ಹಾಗು ಇಬ್ಬರು ಶಿಕ್ಷಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಇಲ್ಲಿನ ಮಯೂರ್ ವಿಹಾರ್‍ನಲ್ಲಿರೋ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 15 ವರ್ಷದ ಬಾಲಕಿ ಮಂಗಳವಾರದಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

    ಬಾಲಕಿ ನೊಯ್ಡಾದ ಸೆಕ್ಟರ್ 52ರ ನಿವಾಸಿಯಾಗಿದ್ದು, ಉತ್ತಮ ನೃತ್ಯಗಾರ್ತಿಯೂ ಕೂಡ ಆಗಿದ್ದಳು ಎಂದು ವರದಿಯಾಗಿದೆ. ಶಾಲೆಯ ಶಿಕ್ಷಕನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪ ಕೇಳಿಬಂದಿದೆ

    ಸಮಾಜ ವಿಜ್ಞಾನ ಶಿಕ್ಷಕರು ತನ್ನನ್ನು ಅಶ್ಲೀಲವಾಗಿ ಮುಟ್ಟುತ್ತಾರೆ ಎಂದು ನನ್ನ ಮಗಳು ಹೇಳಿದ್ದಳು. ಆದ್ರೆ ನಾನೂ ಕೂಡ ಶಿಕ್ಷಕನಾಗಿರೋದ್ರಿಂದ ಅವರು ಆ ರೀತಿ ಮಾಡಲು ಸಾಧ್ಯವಿಲ್ಲ, ಏನೋ ತಪ್ಪಾಗಿರಬಹುದು ಎಂದಿದ್ದೆ. ಆದ್ರೆ ಅವರನ್ನ ಕಂಡ್ರೆ ನನಗೆ ಭಯ. ನಾನು ಎಷ್ಟೇ ಚೆನ್ನಾಗಿ ಬರೆದರೂ ಫೇಲ್ ಮಾಡುತ್ತಾರೆ ಎಂದು ಹೇಳಿದ್ದಳು. ಕೊನೆಗೂ ಸಮಾಜ ವಿಜ್ಞಾನ ವಿಷಯದಲ್ಲಿ ಫೇಲ್ ಮಾಡಿದ್ದಾರೆ. ಶಾಲೆಯೇ ಅವಳನ್ನ ಕೊಂದಿದೆ ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ.

    ಮಾರ್ಚ್ 16ರಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಾಲಕಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವರದಿಯಾಗಿದೆ.

    ಪೋಷಕರು ಮಾಡಿರುವ ಆರೋಪದ ಬಗ್ಗೆ ನೊಯ್ಡಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಐಪಿಸಿ ಸೆಕ್ಷನ್ 306, 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ನೊಯ್ಡಾ ನಗರ ಎಸ್‍ಪಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

  • 5 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್

    5 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್

    ಥಾಣೆ: ಐದು ವರ್ಷದ ಬಾಲಕಿಯ ಮೇಲೆ ಕಾಮುಕರು ಗ್ಯಾಂಗ್ ರೇಪ್ ಎಸಗಿರೋ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಘಟನೆಯ ಬಳಿಕ ಬಾಲಕಿ ರಸ್ತೆ ಬದಿಯಲ್ಲಿ ಅಳುತ್ತಾ ನಿಂತಿದ್ದನ್ನು ಗಮನಿಸಿದ ದಾರಿಹೋಕರೊಬ್ಬರು ಆಕೆಯನ್ನು ವಿಚಾರಿಸಿ ನಂತರ ಪೊಲೀಸ್ ಠಾಣೆಗೆ ಕರೆದತಂದಿದ್ದಾರೆ.

    ಪೊಲೀಸರು ಬಾಲಕಿಯನ್ನು ವಿಚಾರಿಸಿ ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.

    ಥಾಣೆ ಪೊಲೀಸರು ಭಾನುವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಪ್ರಧಾನಿ ಮೋದಿಯಿಂದ ಪುಸ್ತಕ ಗಿಫ್ಟ್ ಪಡೆದ ಧಾರವಾಡದ ಬಾಲಕಿ

    ಪ್ರಧಾನಿ ಮೋದಿಯಿಂದ ಪುಸ್ತಕ ಗಿಫ್ಟ್ ಪಡೆದ ಧಾರವಾಡದ ಬಾಲಕಿ

    ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಧಾರವಾಡದ ಬಾಲಕಿಯೊಬ್ಬಳಿಗೆ ಪುಸ್ತಕ ಗಿಫ್ಟ್ ಮಾಡಿದ್ದಾರೆ. ರಾಜ್ಯದ ಹಲವು ಸಮಸ್ಯೆಗಳನ್ನ ಬರೆದು ಕಳಿಸಿದ್ದ ಯುವಕ ಯುವತಿಯರಿಗೆ ಪ್ರಧಾನಿ ಮೋದಿ ಪತ್ರದ ಮೂಲಕ ಪ್ರತಿಕ್ರಿಯೆಯನ್ನ ನೀಡಿದ್ದರು. ಆದರೆ ಈ ಬಾರಿ ಅವರು ಸ್ವತಃ ತಾವೇ ಬರೆದಿರುವ ಎಕ್ಸಾಂ ವಾರಿಯರ್ಸ್  ಪುಸ್ತಕವನ್ನ ಈ ಬಾಲಕಿಗೆ ಗಿಫ್ಟ್ ಮಾಡಿದ್ದಾರೆ.

    6ನೇ ತರಗತಿ ಓದುತ್ತಿರುವ ಧಾರವಾಡದ ಸಿರಿ ದೊಡಮನಿ, ಪ್ರಧಾನಿ ಮೋದಿ ಅವರಿಂದ ಪುಸ್ತಕವನ್ನ ಉಡುಗೊರೆಯಾಗಿ ಪಡೆದಿದ್ದಾಳೆ. ಧಾರವಾಡ ನಗರದ ಮಲ್ಲಸಜ್ಜನ ಶಾಲೆಯಲ್ಲಿ ಓದುತ್ತಿರುವ ಸಿರಿ, ಪ್ರಧಾನಿ ಮೋದಿ ತಂದಿರುವ ಯೋಜನೆಗಳನ್ನ ಚಿತ್ರಕಲೆ ಬಿಡಿಸುವ ಮೂಲಕ ಪುಸ್ತಕವನ್ನಾಗಿ ಮಾಡಿದ್ದಾಳೆ. ಈ ಪುಸ್ತಕದಲ್ಲಿ ಆಧಾರ್ ಕಾರ್ಡ್, ಬಡವರಿಗೆ ಮನೆ ನಿರ್ಮಾಣ, ರೇಡಿಯೋದಲ್ಲಿ ಬರುವ ಮನ್ ಕೀ ಬಾತ್, ಸ್ವಚ್ಛ ಭಾರತ ಅಭಿಯಾನ, ಮೋದಿ ವರ್ಲ್ಡ್ ಲಿಡರ್, ಮೋದಿ ಮುಸ್ಲಿಂ ಮಹಿಳೆಯರಿಗೆ ಮಾಡಿದ ಸಹಾಯ ಸೇರಿದಂತೆ ಹಲವು ಯೋಜನೆಗಳನ್ನ ಚಿತ್ರಗಳಲ್ಲಿ ಬಿಡಿಸಿದ್ದಾಳೆ.

    ಈ ಚಿತ್ರ ಬಿಡಿಸಿದ ಪುಸ್ತಕವನ್ನ ಸಿರಿ ಪ್ರಧಾನಿ ಮೋದಿಗೆ ಕಳಿಸಿಕೊಟ್ಟಿದ್ದಳು. ಈ ಪುಸ್ತಕ ಪಡೆದ ನರೇಂದ್ರ ಮೋದಿ, ವಿದ್ಯಾರ್ಥಿನಿಗೆ ಶ್ಲಾಘನಾ ಪತ್ರ ಹಾಗೂ ಎಕ್ಸಾಂ ವಾರಿಯರ್ಸ್ ಪುಸ್ತಕ ಕಳಿಸಿಕೊಟ್ಟಿದ್ದಾರೆ.

    ಪ್ರಧಾನಿ ಅವರಿಂದ ಈ ಪುಸ್ತಕ ಪಡೆದ ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದ್ದಾಳೆ. ಪ್ರಧಾನಿ ಕಳಿಸಿದ ಪುಸ್ತಕದಲ್ಲಿ ಪರೀಕ್ಷೆಗಳನ್ನ ಹೇಗೆ ಎದುರಿಸಬೇಕು ಎಂದು ಸರಳವಾಗಿ ತಿಳಿಸಲಾಗಿದೆ.

    ಸಿರಿ ದೊಡಮನಿಯ ತಂದೆ ತಾಯಿಯಾದ ಮಂಜುನಾಥ ಹಾಗೂ ಸಂಧ್ಯಾ ದಂಪತಿ ಕೂಡಾ ಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಕ್ಷಕರು ಕೂಡ ಸಿರಿ ಯ ಪುಸ್ತಕವನ್ನ ಪ್ರಧಾನಿಗೆ ಕಳಿಸಲು ಸಹಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶ್ಲಾಘನಾ ಪತ್ರದ ಜೊತೆ ಪುಸ್ತಕ ಪಡೆದ ಸಿರಿ ದೊಡಮನಿಗೆ ಶುಭಾಶಯ ಕೊರಿದ್ದಾರೆ.

  • ಆಟವಾಡುತ್ತಿದ್ದಾಗ ಸಂಪ್‍ಗೆ ಬಿದ್ದು 6 ವರ್ಷದ ಬಾಲಕಿ ಸಾವು

    ಆಟವಾಡುತ್ತಿದ್ದಾಗ ಸಂಪ್‍ಗೆ ಬಿದ್ದು 6 ವರ್ಷದ ಬಾಲಕಿ ಸಾವು

    ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಸಂಪ್‍ನಲ್ಲಿ ಬಿದ್ದು ಸಾವನ್ನಪಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದ ಹೆಗ್ಗನಹಳ್ಳಿಯ ಶ್ರೀಗಂಧ ಲೇಔಟ್‍ನಲ್ಲಿ ಈ ಘಟನೆ ನಡೆದಿದೆ. ವೆಂಕಟೇಶ ಎಂಬವರ ಪುತ್ರಿಯಾದ 6 ವರ್ಷದ ಹರಿಪ್ರಿಯ ಮೃತ ದುರ್ದೈವಿ. ಇಂದು ಬೆಳಿಗ್ಗೆ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಬಾಲಕಿ ತೆರೆದ ನೀರಿನ ಸಂಪ್‍ಗೆ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಹರಿಪ್ರಿಯಾ ನೀರಿಗೆ ಬಿದ್ದಾಗ ಯಾರು ನೋಡದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

    ಪೋಷಕರು ಮನೆ ಮುಂದೆ ಆಟವಾಡುತ್ತಿದ್ದ ಮಗಳು ತುಂಬಾ ಸಮಯವಾದರೂ ಕಾಣುತ್ತಿಲ್ಲ ಎಂದು ಹುಡುಕಾಟ ನಡೆಸಿದ್ದಾರೆ. ಆಗ ನೀರಿನ ಸಂಪ್‍ಗೆ ಬಿದ್ದು ಸಾವ್ನನಪ್ಪಿರುವುದು ಗೊತ್ತಾಗಿದೆ. ಈ ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • 11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ ಕ್ರೂರಿ ತಂದೆ!

    11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ ಕ್ರೂರಿ ತಂದೆ!

    ಅಂಬಾಲಾ: ಮಲತಂದೆಯೊಬ್ಬ ತನ್ನ 11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿ ಲೈಂಗಿಕ ಕಿರುಕುಳ ನೀಡಿದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ಆರೋಪಿ ತಂದೆ 11 ವರ್ಷದ ಬಾಲಕಿಗೆ ದೇಹದ ಮೇಲೆ ಗಾಯ ಮಾಡುವ ಮೂಲಕ ಹಾಗೂ ಆಕೆಯ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸದ್ಯ ಬಾಲಕಿಯನ್ನು ಮಹಿಳಾ ರಕ್ಷಣಾ ಇಲಾಖೆ ಮತ್ತು ಚೈಲ್ಡ್ ಲೈನ್ ತಂಡ ರಕ್ಷಣೆ ಮಾಡಿದೆ.

    ಬಾಲಕಿಗೆ ತನ್ನ ಮಲತಂದೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಚೈಲ್ಡ್ ಲೈನ್‍ಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಹಾಗೂ ಪೊಲೀಸರ ಜೊತೆ ಸೇರಿ ಚೈಲ್ಡ್ ಲೈನ್ ಹಿರಾನಗರ್ ನಲ್ಲಿರುವ ಆರೋಪಿ ಮನೆ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ್ದರು.

    ಆರೋಪಿ ಮನೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಮಲತಂದೆ ನೀಡಿದ ಕಿರುಕುಳದಿಂದ ಬಾಲಕಿಗೆ ಸರಿಯಾಗಿ ನಡಿಯಲು ಸಾಧ್ಯವಾಗುತ್ತಿರಲಿಲ್ಲ. ಆರೋಪಿ ಬಾಲಕಿಗೆ ತುಂಬ ಹೊಡೆಯುತ್ತಿದ್ದನು. ಹಾಗಾಗಿ ಬಾಲಕಿಗೆ ನಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅಕ್ಕಪಕ್ಕದ ಮನೆಯವರು ಆರೋಪಿಸಿದ್ದಾರೆ.

    ಬಾಲಕಿ ತಾಯಿ 3 ವರ್ಷದಿಂದ ತನ್ನ ಗಂಡನ ಜೊತೆ ಸಂಬಂಧವನ್ನು ಕಡಿತಗೊಂಡಿದ್ದಳು. ನಂತರ ಬಾಲಕಿಯ ಮಲತಂದೆ ಜೊತೆ ವಾಸಿಸುತ್ತಿದ್ದಳು. ಸ್ನಾನ ಮಾಡುವ ವೇಳೆ ಬಾಗಿಲು ಮುಚ್ಚಬಾರದು, ಅದನ್ನು ತೆರೆದಿರಬೇಕು ಎಂದು ಬಾಲಕಿಗೆ ಆರೋಪಿ ತಂದೆ ಎಚ್ಚರಿಸುತ್ತಿದ್ದನು.

    ವೈದ್ಯಕೀಯ ಪರೀಕ್ಷೆ ಹಾಗೂ ವಿಚಾರಣೆ ನಡೆಸಿದ ಮೇಲೆ ಆರೋಪಿ ತಂದೆ ವಿರುದ್ಧ ಕ್ರಮಕೈಗಳ್ಳಲಾಗುತ್ತದೆ ಎಂದು ಪೊಲೀಸ್ ಐಒ ಮೆಹಲ್ ಸಿಂಗ್ ತಿಳಿಸಿದ್ದಾರೆ.