Tag: ಬಾಲಕಿ

  • 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 13ರ ಬಾಲಕ ಅರೆಸ್ಟ್!

    9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 13ರ ಬಾಲಕ ಅರೆಸ್ಟ್!

    ಲಕ್ನೋ: 13 ವರ್ಷದ ಬಾಲಕ ನೆರೆ ಮನೆಯ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೈನ್ಪುರ ನಗರದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಬಾಲಕಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಬಾಲಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಕುರಿತು ಪೋಷಕರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಘಟನೆ ನಡೆದ ಎರಡು ದಿನಗಳ ಬಳಿಕ ಬಾಲಕಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ವೇಳೆ ಪೋಷಕರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾಳೆ. ತಮ್ಮ ಮಗಳ ಮೇಲೆ ನಡೆದ ಕೃತ್ಯದ ಕುರಿತು ಮಾಹಿತಿ ಪಡೆದ ಪೋಷಕರು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

    ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಬಾಲಕನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಕೆಲ ದಿಗಳ ಹಿಂದೆ ಉತ್ತರ ಪ್ರದೇಶದ ಸೀಧೀ ಜಿಲ್ಲೆಯಲ್ಲಿ ಮದುವೆಗೆ ತೆರಳಿದ್ದ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಘಟನೆಯ ಕುರಿತು ಚಿಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  • ರಸ್ತೆ ಬದಿಯಲ್ಲಿ ಹೆತ್ತವರೊಂದಿಗೆ ಮಲಗಿದ್ದ 8 ತಿಂಗ್ಳ ಕಂದಮ್ಮನನ್ನು ಅಪಹರಿಸಿ ರೇಪ್ ಮಾಡಿ ಕೊಲೆಗೈದ!

    ರಸ್ತೆ ಬದಿಯಲ್ಲಿ ಹೆತ್ತವರೊಂದಿಗೆ ಮಲಗಿದ್ದ 8 ತಿಂಗ್ಳ ಕಂದಮ್ಮನನ್ನು ಅಪಹರಿಸಿ ರೇಪ್ ಮಾಡಿ ಕೊಲೆಗೈದ!

    ಇಂದೋರ್: ಕಾಮುಕನೊಬ್ಬ ನಗರದ ರಸ್ತೆ ಬದಿಯಲ್ಲಿ ಹೆತ್ತವರ ಜೊತೆ ಮಲಗಿದ್ದ 8 ತಿಂಗಳ ಮಗುವನ್ನು ಹೊತ್ತೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಹೆತ್ತವರೊಂದಿಗೆ ನಿದ್ದೆಗೆ ಜಾರಿದ್ದ ಕಂದಮ್ಮನನ್ನು ಕಾಮುಕ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಘಟನೆಯ ವಿವರ: ಪುಟ್ಟ ಕಂದಮ್ಮನ ಹೆತ್ತವರು ಬಲೂನ್ ಮಾರಿ ಜೀವನ ನಡೆಸುತ್ತಿದ್ದು, ನಗರದ ರಾಜ್ ವಾಡ ಕೋಟೆಯ ರಸ್ತೆ ಬದಿಯಲ್ಲಿ ನಿದ್ದೆ ಮಾಡುತ್ತಿದ್ದರು. ಇದನ್ನು ಗಮನಿಸಿದ 21 ವರ್ಷದ ಕಾಮುಕ ನವೀನ್ ಎಂಬಾತ ಮುಗ್ದ ಕಂದಮ್ಮನನ್ನು ಹೆತ್ತವರ ಬಳಿಯಿಂದ ಅಪಹರಿಸಿ 200 ಮೀಟರ್ ದೂರದಲ್ಲಿರೋ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಕೊಲೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆರೋಪಿ ಅತ್ಯಾಚಾರಕ್ಕೊಳಗಾದ ಮಗುವಿನ ಹೆತ್ತವರಿಗೆ ತಿಳಿದವನಾಗಿದ್ದು, ಹೀಗಾಗಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ವಿಡಿಯೋದಲ್ಲೇನಿದೆ?: ಮಗುವಿನ ದೂರದ ಸಂಬಂಧಿಯಾಗಿರೋ ಆರೋಪಿ ನವೀನ್ ಗಡ್ಕೆ, ತನ್ನ ದ್ವಿಚಕ್ರ ವಾಹನದಲ್ಲಿ ಬೆಳಗಿನ ಜಾವ 4.45ರ ಸುಮಾರಿಗೆ ಮಗು ಮಲಗಿದ್ದ ಸ್ಥಳಕ್ಕೆ ಬಂದಿದ್ದಾನೆ. ಮಗುವನ್ನು ಅಲ್ಲಿಂದ ಅಪಹರಿಸುತ್ತಾನೆ. ನಂತ್ರ ಹತ್ತಿರದಲ್ಲಿರೋ ವಾಣಿಜ್ಯ ಸಂಕೀರ್ಣವೊಂದರ ನೆಲಮಾಳಿಗೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಮೃತದೇಹ ಮಧ್ಯಾಹ್ನ ದೊರೆತಿದೆ ಗುಪ್ತಾಂಗ, ತಲೆ ಸೇರಿದಂತೆ ಬಾಲಕಿಯ ದೇಹದಲ್ಲಿ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಎಸೆದಿರಬೇಕು ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.

     

    ಪ್ರಕರಣ ಬೆಳಕಿಗೆ: ಕಟ್ಟಡದ ನೆಲ ಮಾಳಿಗೆಯಲ್ಲಿರುವ ತನ್ನ ಅಂಗಡಿಯ ಬಾಗಿಲು ತೆರೆಯಲು ಮಾಲೀಕ ಬಂದಾಗ, ಒಂದು ಬದಿಯಲ್ಲಿ ಪುಟ್ಟ ಕಂದಮ್ಮ ಶವವಾಗಿ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯ ಪೊಲೀಸರು ದ್ವಿ-ಚಕ್ರ ವಾಹನದ ಜೊತೆಗೆ ರಕ್ತಸಿಕ್ತವಾದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಖಂಡಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಅವರು ತಿಳಿಸಿದ್ದಾರೆ.

  • ಚಿಕ್ಕಮಗಳೂರಲ್ಲಿ ಆಲಿಕಲ್ಲು ಮಳೆ- ಪುತ್ತೂರಲ್ಲಿ ಸಿಡಿಲು ಬಡಿದು ಬಾಲಕಿಗೆ ಗಾಯ!

    ಚಿಕ್ಕಮಗಳೂರಲ್ಲಿ ಆಲಿಕಲ್ಲು ಮಳೆ- ಪುತ್ತೂರಲ್ಲಿ ಸಿಡಿಲು ಬಡಿದು ಬಾಲಕಿಗೆ ಗಾಯ!

    ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಲಿಕಲ್ಲು ಮಳೆಯಾಗಿದೆ. ಸಂಜೆ ಸುರಿದ ಭಾರಿ ಮಳೆಯಲ್ಲಿ 10 ರಿಂದ 15 ಕೆಜಿಯ ಬೃಹತ್ ಗಾತ್ರದ ಆಲಿಕಲ್ಲು ಗಡ್ಡೆಗಳು ಬಿದ್ದಿದೆ.

    ಸುಮಾರು ಒಂದು ಗಂಟೆಯ ಕಾಲ ಎಡೆಬಿಡದೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರುಳಿದೆ. ವಿಟ್ಲಾಪುರ ಗ್ರಾಮದಲ್ಲಿ ಮದುವೆಗೆ ಹಾಕಿದ್ದ ಸ್ಟೇಜ್ ಸೆಟ್ ಕುಸಿದಿದ್ದು, ಶಾಮಿಯಾನ ಹಾರಿ ಹೋಗಿದೆ. ಬಳಿಕ ಮದುವೆ ಬೇರೆಡೆಗೆ ಸ್ಥಳಾಂತರಿಸಲಾಯಿತು. ಇನ್ನೂ ಲಕ್ಕವಳ್ಳಿ ಭಾಗದಲ್ಲೂ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

    ಸಿಡಿಲು ಬಡಿದು 8 ವರ್ಷದ ಬಾಲಕಿ ಗಾಯಗೊಂಡಿರುವ ಘಟನೆ ಕಡಬ ಸಮೀಪದ ಅಲಂಕಾರಿನ ಪಲ್ಲತ್ತಡ್ಕ ಎಂಬಲ್ಲಿ ನಡೆದಿದೆ. ಭವ್ಯ (8) ಗಾಯಗೊಂಡ ಬಾಲಕಿ. ಸದ್ಯ ಭವ್ಯ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪರಿಸರದಾದ್ಯಂತ ಭಾರೀ ಮಳೆ, ಗಾಳಿ, ಬೀಸಿದ್ದು, ಗಾಳಿಗೆ ಹಲವು ಮರಗಳು, ವಿದ್ಯುತ್ ಕಂಬಗಳು ಧರೆ ಉರುಳಿವೆ.

    ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದೆ. ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿದಿದ್ದು, ಪಾದಾಚಾರಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇನ್ನೂ ಜಡಿಮಳೆಗೆ ಉಡುಪಿಯಲ್ಲಿ ಪವರ್ ಕಟ್ ಆಗಿದ್ದು, ಮೋಡ ಆವರಿಸಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರ್ಕಳ, ಕುಂದಾಪುರದಲ್ಲೂ ವಿಪರೀತ ಮಳೆ ಸುರಿದಿದೆ.

  • ಮದ್ವೆಗೆ ಬಂದ 8ರ ಬಾಲಕಿಯನ್ನು ಎಳೆದುಕೊಂಡು ಹೋಗಿ ರೇಪ್ ಮಾಡಿ ಕೊಲೆಗೈದ!

    ಮದ್ವೆಗೆ ಬಂದ 8ರ ಬಾಲಕಿಯನ್ನು ಎಳೆದುಕೊಂಡು ಹೋಗಿ ರೇಪ್ ಮಾಡಿ ಕೊಲೆಗೈದ!

    ಲಕ್ನೋ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ತೀವ್ರ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಈ ಘಟನೆ ಉತ್ತರಪ್ರದೇಶದ ಈಟಾ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ. ಬಾಲಕಿ ತನ್ನ ಪೋಷಕರ ಜೊತೆ ಗ್ರಾಮದ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಳು. ಈ ವೇಳೆ ಅಲ್ಲಿ ಅದೇ ಗ್ರಾಮದ 18 ವರ್ಷದ ಯುವಕನೋರ್ವ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.

    ಕುಡಿದ ಮತ್ತಿನಲ್ಲಿದ್ದ ಆರೋಪಿ ಬಾಲಕಿಯ ಶವದ ಪಕ್ಕದಲ್ಲೇ ಬಿದ್ದಿದ್ದನು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಸುಲಭವಾಗಿ ಕಂಡುಹಿಡಿಯಲಾಗಿದೆ. ಈ ಘಟನೆ ಮಧ್ಯರಾತ್ರಿ 1.30ರ ಸುಮಾರಿಗೆ ನಡೆದಿರುವುದಾಗಿ ರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಕುಡಿದ ಮತ್ತಿನಲ್ಲಿ ಆರೋಪಿ ಸೋನು, ಬಾಲಕಿಯನ್ನು ನೋಡಿ ಆಕರ್ಷಿತನಾಗಿದ್ದಾನೆ. ಬಳಿಕ ಆಕೆಯನ್ನು ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಕೆಲ ಸಮಯದ ಬಳಿಕ ಬಾಲಕಿ ಕಾಣದಿದ್ದಾಗ ನೆರೆದಿದ್ದವರೆಲ್ಲ ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಬಾಲಕಿ ಕೊಲೆಯಾಗಿ ಹೋಗಿದ್ದಳು. ಅಲ್ಲದೇ ಆಕೆಯ ಶವದ ಪಕ್ಕದಲ್ಲೇ ಕುಡುಕನೊಬ್ಬ ಬಿದ್ದರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆತನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆಂದು ಶಂಕೆ ವ್ಯಕ್ತವಾಗಿತ್ತು.

    ನಾವು ವಧುವಿನ ಹತ್ತಿರದ ಸಂಬಂಧಿಕರಾಗಿದ್ದರಿಂದ ಮದುವೆ ಮನೆಯಲ್ಲಿ ಬ್ಯುಸಿಯಾಗಿದ್ದೆವು. ಹೀಗಾಗಿ ನಾವು ಬಾಲಕಿಯ ಕಡೆ ಗಮನಹರಿಸಿಲ್ಲ. ಈ ಸಮಯವನ್ನೇ ಉಪಯೋಗಿಸಿಕೊಂಡ ಆರೋಪಿ ರಾತ್ರಿ 1.30ರ ವೇಳೆಗೆ ಯಾರಿಗೂ ತಿಳಿಯದಂತೆ ಬಾಲಕಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಅಂತ ಮೃತ ಬಾಲಕಿಯ ತಂದೆ ಹೇಳಿದ್ದಾರೆ.

    ಸೋನು ಮದುವೆ ಇನ್ನಿತರ ಶುಭಕಾರ್ಯಗಳಿಗೆ ಡೆಕೋರೇಷನ್ ಮಾಡುತ್ತಿದ್ದನು. ಸದ್ಯ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಅಂತ ಪೊಲೀಸ್ ಅಧಿಕಾರಿ ಚೌರಾಸಿಯಾ ತಿಳಿಸಿದ್ದಾರೆ.

  • ಬಾಲಕಿಯ ಮೇಲೆ ರೇಪ್: ಗುರುತು ಪತ್ತೆಗೆ ಸಾಮಾಜಿಕ ಜಾಲತಾಣ ಮೊರೆ ಹೋದ ಪೊಲೀಸರು

    ಬಾಲಕಿಯ ಮೇಲೆ ರೇಪ್: ಗುರುತು ಪತ್ತೆಗೆ ಸಾಮಾಜಿಕ ಜಾಲತಾಣ ಮೊರೆ ಹೋದ ಪೊಲೀಸರು

    ಸೂರತ್: ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದ ಬಾಲಕಿಯ ಮೃತ ಪತ್ತೆಯಾಗಿ 10 ದಿನಗಳು ಕಳೆದರೂ ಆಕೆಯ ಗುರುತು ಪತ್ತೆ ಹಚ್ಚುವಲ್ಲಿ ಸೂರತ್ ಪೊಲೀಸರು ವಿಫಲರಾಗಿದ್ದಾರೆ.

    ಘಟನೆ ಬೆಳಕಿಗೆ ಬಂದು ಹತ್ತು ದಿನಗಳು ಕಳೆದರು ಮಾಹಿತಿ ನೀಡಲು ಯಾರು ಬಾರದ ಕಾರಣ ಸೂರತ್ ಪೊಲೀಸರು ಬಾಲಕಿಯ ಮಾಹಿತಿ ಕಲೆ ಹಾಕಲು ಸಾಮಾಜಿಕ ಜಾಲತಾಣ ಮೊರೆ ಹೋಗಿದ್ದಾರೆ. ದುರ್ಷಮಿಗಳ ಈ ಕೃತ್ಯದ ವಿರುದ್ಧ ಸೂರತ್ ನಗರದಲ್ಲಿ ಸಾವಿರಾರು ಜನರು ಭಾನುವಾರ ಪ್ರತಿಭಟನೆ  ನಡೆಸಿದ್ದರು. ಬಳಿಕ ಸೋಮವಾರ ಬೆಳಗ್ಗೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.

    ಬಾಲಕಿಯ ಬಗ್ಗೆ ಮಾಹಿತಿ ಪಡೆಯಲು ನೆರೆಯ ರಾಜ್ಯಗಳ ಪೊಲೀಸರ ಸಹಾಯ ಪಡೆಯಲಾಗುತ್ತಿದೆ. ಬಾಲಕಿಯ ಡಿಎನ್‍ಎ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಮುಖ್ಯ ಅಧಿಕಾರಿ ಸತೀಶ್ ಶರ್ಮಾ ತಿಳಿಸಿದ್ದಾರೆ.

    ಬಾಲಕಿಯ ವಿವರಗಳನ್ನು ಪಡೆಯಲು ಈಗಾಗಲೇ ಗುಜರಾತ್ ಹಾಗೂ ನೆರೆಯ ರಾಜ್ಯಗಳ 8 ಸಾವಿರಕ್ಕೂ ಬಾಲಕಿಯರ ನಾಪತ್ತೆ ದೂರುಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲದೇ ಘಟನೆ ನಡೆದ ಸ್ಥಳದಿಂದ 1.5 ಕಿಮೀ ದೂರದ ಎಲ್ಲಾ ವಸತಿ ಪ್ರದೇಶ ಪ್ರತಿ ಮನೆ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕಿ ಕುಟುಂಬ ಬಂಗಾಳ ಅಥವಾ ಒಡಿಸ್ಸಾ ದಿಂದ ನಗರಕ್ಕೆ ವಲಸೆ ಬಂದಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 6 ರಂದು ಬಾಲಕಿಯ ಮೃತ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಲಕಿಯ ದೇಹದ ಮೇಲೆ 86 ಗಾಯದ ಗುರುತು ಪತ್ತೆಯಾಗಿತ್ತು.

  • ಗುಪ್ತಾಂಗ ಸೇರಿ ದೇಹದಲ್ಲಿ 86 ಗಾಯಗಳನ್ನು ಮಾಡಿ 9ರ ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ್ರು!

    ಗುಪ್ತಾಂಗ ಸೇರಿ ದೇಹದಲ್ಲಿ 86 ಗಾಯಗಳನ್ನು ಮಾಡಿ 9ರ ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ್ರು!

    ಗಾಂಧಿನಗರ: ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರೋ ಬೆನ್ನಲ್ಲೇ ಇದೀಗ ಸೂರತ್ ನಲ್ಲಿ ಅಂತಹದ್ದೇ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಗುಜರಾತ್ ರಾಜ್ಯದ ಸೂರತ್‍ನ ಭೆಸ್ತಾನ ಪ್ರದೇಶದಲ್ಲಿ ಏಪ್ರಿಲ್ 6ರಂದು 9 ವರ್ಷದ ಬಾಲಕಿಯ ಶವ ಸಿಕ್ಕಿದ್ದು, ಆಕೆಯ ಮೇಲೆ ನಿರಂತರ 5 ದಿನ ಅತ್ಯಾಚಾರ ಮಾಡಿ, 8 ದಿನ ಚಿತ್ರಹಿಂಸೆ ನೀಡಿ, ನಂತರ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

    ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಸಿದಾಗ, ಆಕೆಯ ಮೇಲೆ ನಿರಂತರವಾಗಿ 5 ದಿನ ಅತ್ಯಾಚಾರ ಮಾಡಿ, ಮರದ ಆಯುಧಗಳಿಂದ ಚುಚ್ಚಿ ಚಿತ್ರ ಹಿಂಸೆ ನೀಡಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗದಲ್ಲಿ 80 ಗಾಯಗಳಾಗಿವೆ ಎಂದು 5 ಗಂಟೆ ನಡೆಸಲಾದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

    ಏಳು ದಿನಗಳಿಂದಲೇ ನಿರಂತರವಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದು, ದೇಹದ ಹೊರಭಾಗದಲ್ಲಿ ಸುಮಾರು 86 ಗಾಯಗಳಿವೆ ಎಂದು ಸಿವಿಲ್ ಆಸ್ಪತ್ರೆಯ ಫಾರೆನ್ಸಿಸ್ ಮುಖ್ಯಸ್ಥ ಗಣೇಶ ಗೊವೇಕರ್ ತಿಳಿಸಿದ್ದಾರೆ.

    ಆದರೆ, ಮೃತ ಬಾಲಕಿಯ ಕುರಿತಾಗಿದೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಲೈಂಗಿಕ ಕ್ರಿಯೆಗೆ ವಿರೋಧಿಸಿದ 5ರ ಬಾಲಕಿಯನ್ನ ಕೊಂದ 19ರ ಯುವಕ

    ಲೈಂಗಿಕ ಕ್ರಿಯೆಗೆ ವಿರೋಧಿಸಿದ 5ರ ಬಾಲಕಿಯನ್ನ ಕೊಂದ 19ರ ಯುವಕ

    ರಾಂಚಿ: ಲೈಂಗಿಕ ಕ್ರಿಯೆ ಬಾಲಕಿ ಸಹಕರಿಸಲಿಲ್ಲ ಅಂತಾ ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ರಾಜ್ಯದ ಜಮ್‍ಶೆಡ್‍ಪುರನಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    19 ವರ್ಷದ ಯುವಕ ತನ್ನ ಸೋದರ ಸಂಬಂಧಿಯ 5 ವರ್ಷದ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಬಾಲಕಿಯನ್ನು ಪಾಳು ಬಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯ ಕತ್ತು ಸೀಳಿ, ಕಟ್ಟದ ಮೇಲಿಂದ ಎಸೆದು ಕೊಲೆ ಮಾಡಿದ್ದಾನೆ. ಶವ ಯಾರಿಗೂ ಸಿಗಬಾರದು ಕಸದ ಬುಟ್ಟಿಯಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ.

    ಇತ್ತ ಬಾಲಕಿ ಕಾಣೆಯಾದ ವಿಷಯ ತಿಳಿದ ಪೋಷಕರು ಹುಡುಕಾಟ ನಡೆಸಿದ್ದಾರೆ. ಅನುಮಾನ ಬಾರದಿರಲಿ ಅಂತಾ ಆರೋಪಿ ಸಹ ಪೋಷಕರ ಜೊತೆ ಬಾಲಕಿಯನ್ನು ಹುಡುಕುವಂತೆ ನಾಟಕ ಮಾಡಿದ್ದಾನೆ. ಪೊಲೀಸರ ತನಿಖೆ ವೇಳೆ ಯುವಕ ಕಟ್ಟಡದಿಂದ ಅನುಮಾನಾಸ್ಪದವಾಗಿ ಹೊರ ಬಂದಿರುವ ವಿಚಾರವನ್ನು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

    ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಯ ಆರಂಭದಲ್ಲಿ ಆರೋಪಿ ತಪ್ಪನ್ನು ಒಪ್ಪಿಕೊಂಡಿಲ್ಲ. ಪೊಲೀಸರು ವಿಚಾರಣೆಯನ್ನ ತೀವ್ರಗೊಳಿಸಿದಾಗ ಆರೋಪಿ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಅಂತಾ ಸಬ್ ಇನ್ಸಪೆಕ್ಟರ್ ಅನೂಪ್ ಬಿರ್ತೆರೈ ತಿಳಿಸಿದ್ದಾರೆ.

    ಇನ್ನು ಘಟನಾ ಸ್ಥಳದಲ್ಲಿ ಬಾಲಕಿಯ ಎರಡು ಬೆಳ್ಳಿಯ ಬಳೆ, ತಾಯತ್ ಮತ್ತು ಹತ್ಯೆಗೆ ಬಳಸಲಾಗಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

  • ಕಥುವಾ ರೇಪ್ ಪ್ರಕರಣ- ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದ ಬ್ಯಾಂಕ್ ಮ್ಯಾನೇಜರ್ ಅಮಾನತು

    ಕಥುವಾ ರೇಪ್ ಪ್ರಕರಣ- ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದ ಬ್ಯಾಂಕ್ ಮ್ಯಾನೇಜರ್ ಅಮಾನತು

    ಕೊಚ್ಚಿ: ದೇಶದೆಲ್ಲೆಡೆ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೇಳೆ ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದ ಕೇರಳ ಖಾಸಗಿ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅಮಾನತು ಮಾಡಲಾಗಿದೆ.

    ಕೇರಳದ ಕೊಚ್ಚಿಯ ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಯ ಮ್ಯಾನೇಜರ್ ಆಗಿರುವ ವಿಷ್ಣು ನಂದಕುಮಾರ್ ಕೆಲಸ ಕಳೆದುಕೊಂಡ ವ್ಯಕ್ತಿ. ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಈತ ನೀಡಿರುವ ಪ್ರತಿಕ್ರಿಯೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರರಕಣದ ಸಂಬಂಧ ವಿಷ್ಣು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದ. ಚಿಕ್ಕ ವಯಸ್ಸಿನಲ್ಲೇ ಆಕೆಯನ್ನು ಕೊಲೆ ಮಾಡಿರುವುದು ಒಳ್ಳೆದಾಯಿತು, ಇಲ್ಲವಾದರೆ ಆಕೆ ದೊಡ್ಡವಳಾದ ಮೇಲೆ ಭಾರತದ ಮೇಲೆ ಬಾಂಬ್ ಎಸೆಯುತ್ತಿದ್ದಳು ಎಂದು ತನ್ನ ಕಾಮೆಂಟ್ ನಲ್ಲಿ ಬರೆದುಕೊಂಡಿದ್ದ. ಈತ ಎಂದು ಈ ಕಾಮೆಂಟ್ ಮಾಡಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಆತನ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ತನ್ನ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎಂದು ವರದಿಯಾಗಿದೆ.

    ಬಾಲಕಿಯ ಕುರಿತು ವಿಷ್ಣು ಮಾಡಿದ್ದ ಕಾಮೆಂಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು, ಅಲ್ಲದೇ ಆತನನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಟ್ವಿಟ್ಟರ್ ನಲ್ಲೂ ಆತನ ವಿರುದ್ಧ ವ್ಯಾಪಕ ಟೀಕೆ ಮಾಡಿ ಹಲವರು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ #Dismiss_your_manager ಎಂದು ಟ್ರೆಂಡ್ ಮಾಡಿ ಟ್ರೋಲ್ ಮಾಡಿದ್ದರು.

    ಘಟನೆ ತೀವ್ರತೆ ಕುರಿತು ಎಚ್ಚೆತ್ತ ಕೋಟಕ್ ಬ್ಯಾಂಕ್ ಆಡಳಿತ ಮಂಡಳಿ ಶುಕ್ರವಾರ ಸಂಜೆ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಏಪ್ರಿಲ್ 11 ಕ್ಕೆ ಅನ್ವಯ ಆಗುವಂತೆ ವಿಷ್ಣು ನಂದಕುಮಾರ್ ನನ್ನು ಸೇವೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ನೀಡಿ ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ಆತನ ಹೇಳಿಕೆಯನ್ನು ಖಂಡಿಸುತ್ತಿರುವುದಾಗಿ ತಿಳಿಸಿದೆ.

    https://www.facebook.com/KotakBank/photos/a.214267861951331.59019.210520628992721/1949907218387378/?type=3&theater

  • ಸಿಲಿಂಡರ್ ಬ್ಲಾಸ್ಟ್ ನಲ್ಲಿ ಗಂಭೀರ ಗಾಯಗೊಂಡಿದ್ದ 3 ವರ್ಷದ ಬಾಲಕಿ ದುರ್ಮರಣ!

    ಸಿಲಿಂಡರ್ ಬ್ಲಾಸ್ಟ್ ನಲ್ಲಿ ಗಂಭೀರ ಗಾಯಗೊಂಡಿದ್ದ 3 ವರ್ಷದ ಬಾಲಕಿ ದುರ್ಮರಣ!

    ಬೆಂಗಳೂರು: ನಗರದ ಟಿ.ದಾಸರಹಳ್ಳಿಯಲ್ಲಿ ಗುರುವಾರ ಮುಂಜಾನೆ ನಡೆದ ಸಿಲಿಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಬಾಲಕಿ ದೇವಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿಂದು ಸಾವನ್ನಪ್ಪಿದ್ದಾಳೆ.

    ದೇವಿಕ ಸಿಲಿಂಡರ್ ಬ್ಲಾಸ್ಟ್ ನಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಳು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

    ಸಿಲಿಂಡರ್ ಬ್ಲಾಸ್ಟ್ ನಲ್ಲಿ ಒಟ್ಟು 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಲಕ್ಷ್ಮಮ್ಮ, ಮಹೇಶಮ್ಮ, ವೆಂಕಟೇಶಪ್ಪ, ಮಗ ಸೋಮಶೇಖರ್(16), ನಿರಂಜನ್(10), ಹೊನ್ನೂರಪ್ಪ, ಅಲುವೇಲು(7) ದೇವಿಕ (3) ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

    ಇದೀಗ ಗಾಯಾಳಗಳಲ್ಲಿ ಬಾಲಕಿ ದೇವಿಕಾ ಸಾವನ್ನಪ್ಪಿದ್ದರೆ, ಈ ಮಧ್ಯೆ ಆಕೆಯ ಅಕ್ಕ ಅಲವೇಲು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಉಳಿದ ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

    ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟವಾಗಿ ನಾಲ್ವರು ಮಕ್ಕಳು ಸೇರಿ 9 ಮಂದಿಗೆ ಗಂಭೀರ ಗಾಯಗಳಾಗಿತ್ತು. ಈ ಕುಟುಂಬ ಪಾವಗಡ ಮೂಲದಾಗಿದ್ದು, ಮನೆ ಯಜಮಾನ ದೇವರಾಜು ಅವರು ನಗರದಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಬುಧವಾರ ಮನೆಗೆ ನೆಂಟರು ಕೂಡ ಬಂದಿದ್ದು, ಎಲ್ಲರು ಮಲಗಿದ್ದರು. ದೇವರಾಜು ಕೂಡ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಿದ್ದರು. ಮನೆಗೆ ಬಂದು ಬಾಗಿಲು ತಟ್ಟೆದ ಸಮಯದಲ್ಲಿ ಒಳಗಿಂದ ಲೈಟ್ ಅನ್ ಮಾಡಿದಾಗ ಈ ಅವಘಡ ಸಂಭವಿಸಿತ್ತು. ಇದನ್ನೂ ಓದಿ: ಮುಂಜಾನೆ ಎದ್ದು ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡ ಸಿಲಿಂಡರ್- ನಾಲ್ವರು ಮಕ್ಕಳು ಸೇರಿ ಆರು ಜನರಿಗೆ ಗಾಯ!

  • ಯಾದಗಿರಿಯಲ್ಲಿ 13 ವರ್ಷದ ಬಾಲಕಿಯೊಬ್ಬಳ ನಿಗೂಢ ಸಾವು!

    ಯಾದಗಿರಿಯಲ್ಲಿ 13 ವರ್ಷದ ಬಾಲಕಿಯೊಬ್ಬಳ ನಿಗೂಢ ಸಾವು!

    ಯಾದಗಿರಿ: 13 ವರ್ಷದ ಬಾಲಕಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ ಯಾದಗಿರಿ ತಾಲೂಕು ಸೈದಾಪುರ ಸಮೀಪದ ಕಡೇಚೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ಮಗಳ ಮೇಲೆ ಹಾಡಹಗಲೇ ಅತ್ಯಾಚಾರಗೈದು ಕೊಲೆ ಮಾಡಿ ನಂತರ ನೇಣು ಬಿಗಿದು ಇದೊಂದು ಆತ್ಮಹತ್ಯೆ ಪ್ರಕರಣವೆಂಬಂತೆ ಬಿಂಬಿಸಲಾಗುತ್ತಿದ್ದು, ಇದನ್ನು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಾಲಕಿಯ ತಂದೆ ದೂರು ಸಲ್ಲಿಸಿದ್ದಾರೆ.

    ಫೆ. 2ರಂದು ಕಡೇಚೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ಬಡ- ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಳು. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿತ್ತು.

    ಈ ಬಗ್ಗೆ ಅಂದು ಯಾವುದೇ ದೂರು ದಾಖಲಿಸದೆ ಇತ್ತ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ತರಾತುರಿಯಲ್ಲಿ ಶವಸಂಸ್ಕಾರ ಮಾಡಲಾಗಿತ್ತು. ವಿಚಿತ್ರವೆಂದರೆ ಗ್ರಾಮದ `ಸಾಹುಕಾರ’ನ ಮಧ್ಯಸ್ಥಿಕೆಯಲ್ಲಿ ರಾಜೀ ಪಂಚಾಯ್ತಿ ನಡೆಸಿ ಒಂದಿಷ್ಟು ಪರಿಹಾರ ಕೊಟ್ಟು ಇಡೀ ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರಗಳು ನಡೆದಿವೆ ಎನ್ನಲಾಗಿದೆ.

    ಸದ್ಯ ಬಾಲಕಿಯ ತಂದೆಯ ದೂರನ್ನು ಆಧರಿಸಿ ಯಾದಗಿರಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತನಿಖೆಗೆ ಮುಂದಾಗಿದ್ದಾರೆ. ಮುದ್ದಿನ ಮಗಳು ಅಮಾನುಷ ಕೃತ್ಯವೊಂದಕ್ಕೆ ಬಲಿಯಾದರೂ ಸಹ ಆರೋಪಿಗಳು ಬಲಿಷ್ಠರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ಪೋಷಕರು ಧ್ವನಿ ಎತ್ತಿರಲಿಲ್ಲ.

    ಶಾಲೆಯ ಪಠ್ಯ ಚಟುವಟಿಕೆಗಳ ಜೊತೆಗೆ ಕಬಡ್ಡಿ ಹಾಗೂ ಗುಂಡು ಎಸೆತದಲ್ಲಿ ಚಾಂಪಿಯನ್ ಆಗಿದ್ದ ಬಾಲಕಿಯ ನಿಗೂಢ ಸಾವಿನ ಬಗ್ಗೆ ಗ್ರಾಮದಲ್ಲಿ ಬಹುತೇಕರು ಮೌನಕ್ಕೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನೋಸ್ಥಿತಿಯ ಹುಡುಗಿ ಆಕೆ ಅಲ್ಲವೇ ಅಲ್ಲ ಎಂಬ ಮಾತುಗಳು ಅಲ್ಲಿ ಕೇಳಿಬರುತ್ತವೆ. ಆದ್ರೆ ಘಟನೆಯ ಕುರಿತು ಮಾತನಾಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿರುವುದು ಮತ್ತಷ್ಟೂ ಅನುಮಾನಗಳಿಗೆ ಕಾರಣವಾಗಿದೆ.