Tag: ಬಾಲಕಿ

  • 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ದೇವಸ್ಥಾನದ ಹಿಂದೆ ಅತ್ಯಾಚಾರಗೈದ!

    10 ವರ್ಷದ ಬಾಲಕಿಯನ್ನು ಪುಸಲಾಯಿಸಿ ದೇವಸ್ಥಾನದ ಹಿಂದೆ ಅತ್ಯಾಚಾರಗೈದ!

    ತುಮಕೂರು: 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ತಮಕೂರಿನ ಶಿರಾ ಪಟ್ಟಣದಲ್ಲಿ ನಡೆದಿದೆ.

    ಪ್ರಭು(35) ಅತ್ಯಾಚಾರವೆಸಗಿದ ಆರೋಪಿಯಾಗಿದ್ದು, ಶಿರಾ ಪಟ್ಟಣದಲ್ಲಿ ಪಾನಿಪೂರಿ ಅಂಗಡಿ ಇಟ್ಟುಕೊಂಡಿದ್ದನು. ಸಂಬಂಧಿಕ ಬಾಲಕಿ ರಜೆ ನಿಮಿತ್ತ ಊರಿಗೆ ಬಂದಿದ್ದಳು. ಆಕೆಯನ್ನ ಪುಸಲಾಯಿಸಿ ದೇವಸ್ಥಾನವೊಂದರ ಹಿಂದೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಅತ್ಯಾಚಾರವೆಸಗಿ ಯಾರಿಗೂ ತಿಳಿಸದಂತೆ ಹೆದರಿಸಿ ಬಾಲಕಿಯನ್ನು ಮನೆಗೆ ಕಳುಹಿಸಿದ್ದಾನೆ. ಬಾಲಕಿ ನೋವು ತಾಳಲಾರದೇ ಅತ್ಯಾಚಾರದ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾಳೆ. ಆ ಬಳಿಕ ಶಿರಾ ಪಟ್ಟಣದ ಸಂತೇಪೇಟೆಯಲ್ಲಿದ್ದ ಪ್ರಭುವಿಗೆ ಸಂಬಂಧಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಲಕಿಯ ಪೋಷಕರ ಥಳಿತದಿಂದಾಗಿ ಅಸ್ವಸ್ಥನಾಗಿದ್ದ ಪ್ರಭುಗೆ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರಭು ವಿರುದ್ಧ ಶಿರಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ.

  • ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ಮುಂಬೈ: ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಎಂಬವರೇ ಬಾಲಕಿಯನ್ನು ರಕ್ಷಿಸಿದ ಯೋಧ. ಇವರು ಐದು ವರ್ಷದ ಬಾಲಕಿ ರೈಲಿನ ಅಡಿಯಲ್ಲಿ ಸಿಲುಕಿದಾಗ ಓಡಿ ಹೋಗಿ ಪ್ರಾಣಾಪಾದಿಂದ ಕಾಪಾಡಿದ್ದಾರೆ.

    ಘಟನೆಯ ವಿವರ: ಶುಕ್ರವಾರ ಮಹಾಲಕ್ಷ್ಮಿ ರೈಲ್ವೇ ನಿಲ್ದಾಣದಲ್ಲಿ ರೈಲು ಚಲಿಸಿದೆ, ಇದನ್ನು ನೋಡಿ ತಾಯಿಯೊಬ್ಬರು ಬಾಲಕಿಯ ಕೈ ಹಿಡಿದು ಓಡಿ ಬಂದಿದ್ದಾರೆ. ರೈಲಿನ ಬಾಗಿಲು ಬಳಿ ಬರುತ್ತಿದ್ದಂತೆ ಪೋಷಕರು ರೈಲನ್ನು ಹತ್ತಿದ್ದಾರೆ. ಈ ವೇಳೆ ಬಾಲಕಿ ರೈಲು ಹತ್ತಲು ಪ್ರಯತ್ನ ಮಾಡಿದ್ದಾಳೆ. ಆದರೆ ರೈಲು ಚಲಿಸುತ್ತಿದ್ದರಿಂದ ಹತ್ತಲಾಗದೇ ಕಾಲು ಜಾರಿ ರೈಲಿನ ಕೆಳಗೆ ಬಿದ್ದಿದ್ದಾಳೆ. ಅಲ್ಲೆ ಇದ್ದ ಯೋಧ ಇದನ್ನು ನೋಡಿ ಬಂದು ತನ್ನ ಪ್ರಾಣವನ್ನು ಲೆಕ್ಕಿಸದೆ ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ಎಳೆದು ಕೊಂಡು ಕಾಪಾಡಿದ್ದಾರೆ. ಸದ್ಯಕ್ಕೆ ಈ ಘಟನೆಯಿಂದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

    ಯೋಧ ಸಚಿನ್ ಪೋಲ್ ಬಾಲಕಿಯನ್ನು ರಕ್ಷಿಸಿರುವ ವಿಡಿಯೋ ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೋಧನ ಸಮಯ ಪ್ರಜ್ಞೆ ಮತ್ತು ಸಹಾಸದಿಂದ ಅದೃಷ್ಟವಶಾತ್ ಬಾಲಕಿ ಬಚಾವ್ ಆಗಿದ್ದಾಳೆ.

    ಯೋಧ ಸಚಿನ್ ಪೋಲ್ ಎರಡು ವರ್ಷಗಳಿಂದ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇವರ ಸಾಹಸಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

  • ಆಟವಾಡಲೆಂದು ಕರೆದುಕೊಂಡು ಹೋಗಿ 8 ತಿಂಗ್ಳ ಕಂದಮ್ಮನ ಮೇಲೆ ರೇಪ್!

    ಆಟವಾಡಲೆಂದು ಕರೆದುಕೊಂಡು ಹೋಗಿ 8 ತಿಂಗ್ಳ ಕಂದಮ್ಮನ ಮೇಲೆ ರೇಪ್!

    ಜೈಪುರ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಕೇಂದ್ರ ಅಸ್ತು ಅಂದರೂ ದೇಶದಲ್ಲಿ ರೇಪ್ ಪ್ರಕರಣಗಳ ಸಂಖ್ಯೆ ಕಡಿಮೆಯಗುವಂತೆ ಕಾಣುತ್ತಿಲ್ಲ. ಇಂತದ್ದೇ ಘಟನೆಯೊಂದು ಇದೀಗ ರಾಜಸ್ಥಾನದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ಎಂಟು ತಿಂಗಳ ಮುಗ್ಧ ಕಂದಮ್ಮನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಹೀನಾಯ ಘಟನೆ ರಾಜಸ್ಥಾನದ ಅಲ್ವಾರ್ ಜೆಲ್ಲೆಯ ಹರ್ಸಾನ ಗ್ರಾಮದಲ್ಲಿ ನಡೆದಿದೆ. ಮೊದಲೇ ಪ್ಲಾನ್ ಮಾಡಿದ್ದ ಕಾಮುಕ ಆಕೆಯನ್ನು ಆಟವಾಡಲು ಬಾ ಅಂತ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಅಪ್ರಾಪ್ತ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ – ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಅಸ್ತು

    ನೆರೆ ಮನೆಯ ವ್ಯಕ್ತಿಯೇ ಈ ಕೃತ್ಯ ಎಸಗಿದ್ದು, ಬುಧವಾರ ಬಾಲಕಿಯಿದ್ದ ಮನೆಗೆ ಬಂದ ಕಾಮುಕ ಆಟವಾಡೋಣ ಬಾ ಅಂತ ಅಲ್ಲಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ರಾತ್ರಿ ಬಾಲಕಿ ಅಸ್ವಸ್ಥಗೊಂಡಿರುವುದನ್ನು ಪೋಷಕರು ಗಮನಿಸಿದ್ದಾರೆ. ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

  • ಗಂಟಲು ನೋವು ಎಂದು ಆಸ್ಪತ್ರೆಗೆ ಸೇರಿಸಿದ್ರು – ಇಂಜೆಕ್ಷನ್ ಕೊಟ್ಟ ಒಂದೇ ದಿನದಲ್ಲಿ 13ರ ಬಾಲಕಿ ದುರ್ಮರಣ

    ಗಂಟಲು ನೋವು ಎಂದು ಆಸ್ಪತ್ರೆಗೆ ಸೇರಿಸಿದ್ರು – ಇಂಜೆಕ್ಷನ್ ಕೊಟ್ಟ ಒಂದೇ ದಿನದಲ್ಲಿ 13ರ ಬಾಲಕಿ ದುರ್ಮರಣ

    ಹೈದರಾಬಾದ್: ವೈದ್ಯರ ನಿರ್ಲಕ್ಷ್ಯದಿಂದ 13 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ನಡೆದಿದೆ.

    ಪ್ರೇಮಾಂಜಲಿ(13) ಮೃತ ದುರ್ದೈವಿ. ಈಕೆ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕಾಕಿನಾಡದ ರಾಯವರಂ ನಿವಾಸಿ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಬುಧವಾರ ಪ್ರೇಮಾಂಜಲಿ ಗಂಟಲು ನೋವಿನಿಂದ ಬಳಲುತ್ತಿದ್ದಳು. ಗಂಟಲು ಸಮಸ್ಯೆಯಿಂದ ಎರಡು ದಿನಗಳ ಕಾಲ ಅನ್ನ, ನೀರು ಏನು ತಿನ್ನಲು ಆಗುತ್ತಿರಲಿಲ್ಲ. ಬಳಿಕ ಆಕೆಯ ಪೋಷಕರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆಸ್ಪತ್ರೆಯಲ್ಲಿ ವೈದ್ಯರು ಆಕೆಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಮಾಡಿದ ಸ್ವಲ್ಪ ಸಮಯದ ಬಳಿಕ ಪ್ರೇಮಾಂಜಲಿಗೆ ವಾಂತಿ-ಭೇದಿ ಶುರುವಾಗಿದೆ. ಈ ವೇಳೆ ವೈದ್ಯರು ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೂ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಬಳಿಕ ಬಾಲಕಿಯ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದ ನನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.

    ಪೋಷಕರು ವೈದ್ಯರ ವಿರುದ್ಧ ದೂರು ನೀಡಿದ್ದು, ಕಾಕಿನಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇತ್ತ ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • 9ರ ಬಾಲಕಿ ಮೇಲೆ 50 ವರ್ಷದ ವ್ಯಕ್ತಿಯಿಂದ ಅತ್ಯಾಚಾರ- ಆರೋಪಿಯನ್ನು ನೇಣಿಗೇರಿಸುವಂತೆ ಪೋಷಕರ ಒತ್ತಾಯ

    9ರ ಬಾಲಕಿ ಮೇಲೆ 50 ವರ್ಷದ ವ್ಯಕ್ತಿಯಿಂದ ಅತ್ಯಾಚಾರ- ಆರೋಪಿಯನ್ನು ನೇಣಿಗೇರಿಸುವಂತೆ ಪೋಷಕರ ಒತ್ತಾಯ

    ಹೈದರಾಬಾದ್: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಕೇಂದ್ರ ಸಂಪುಟ ಅಸ್ತು ಅಂದ ಬಳಿಕವೂ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇಂತದ್ದೇ ಒಂದು ಘಟನೆ ಇದೀಗ ಆಂಧ್ರಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಹೌದು. ಆಂಧ್ರಪ್ರದೇಶದ ಗುಂಟೂರು ಎಂಬಲ್ಲಿ 9 ವರ್ಷದ ಬಾಲಕಿ ಮೇಲೆ 50 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ತಡೆದು ಆರೋಪಿಯನ್ನು ಬಂಧಿಸಿ ನೇಣಿಗೆ ಹಾಕುವಂತೆ ಪ್ರತಿಭಟನೆ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?: ಬುಧವಾರ ಮಧ್ಯಾಹ್ನ ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದು, ಹೊಟ್ಟೆ ನೋವಿನಿಂದ ಬಳುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯನ್ನು ಪರೀಕ್ಷೆ ಮಾಡಿದ ವೈದ್ಯರು, ಆಕೆಯ ದೇಹದಲ್ಲಿ ಗಾಯಗಳಾಗಿವೆ. ಹೀಗಾಗಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಅಂತ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಪೋಷಕರು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಆಗ ಬಾಲಕಿ ನೆರೆಮನೆಯ ಕೈಗಾಡಿ ಎಳೆಯುವ ವ್ಯಕ್ತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಯ್ಬಿಟ್ಟಿದ್ದಾಳೆ. ಸದ್ಯ ಬಾಲಕಿ ಗುಂಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಅಂತ ವೈದ್ಯರು ಹೇಳಿದ್ದಾರೆ.

    ಪ್ರಕರಣ ಸಂಬಂಧ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಕೂಡಲೇ ಆತನನ್ನು ಬಂಧಿಸಲಾಗುವುದು ಅಂತ ಗುಂಟೂರು ಪೊಲೀಸ್ ಅಧೀಕ್ಷಕ ಅಪ್ಪಲ ನಾಯ್ಡು ಹೇಳಿದ್ದಾರೆ.

    ಇತ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದನ್ನು ಖಂಡಿಸಿದ ಆಕೆಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ಬಂದ್ ಮಾಡಿ, ಟಯರ್ ಸುಡುವ ಮೂಲಕ ಮುಂಜಾನೆ 3 ಗಂಟೆಯವರೆಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿ, ನೇಣಿಗೇರಿಸುವಂತೆ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತವಾಗಿದ್ದ ತಂಡವೊಂದು ಆರೋಪಿಯ ಮಗನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಬಂದು ಆತನನ್ನು ಅಲ್ಲಿಂದ ಪಾರು ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

  • ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವು!

    ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವು!

    ಹಾವೇರಿ: ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕು ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಹೀನಾ ಬಾನು(12) ಎಂದು ಗುರುತಿಸಲಾಗಿದೆ. ಗೆಳತಿಯರೊಂದಿಗೆ ಮನೆಯಿಂದ ಆಟವಾಡಲು ತೆರಳಿದ್ದ ಬಾಲಕಿ ನೀರು ಕುಡಿಯಲೆಂದು ಕೆರೆಗೆ ಇಳಿಯುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

    ಕೆರೆ ಅಭಿವೃದ್ಧಿಗೆ ಕೆರೆಯಲ್ಲಿ ಗುಂಡಿ ತೋಡಿದ್ದರಿಂದ ಈ ಅನಾಹುತ ಸಂಭವಿಸಿದೆ. ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಡ್ರಾಪ್ ನೆಪದಲ್ಲಿ ಚಲಿಸುತ್ತಿರುವ ಕಾರಿನಲ್ಲೇ ಅತ್ಯಾಚಾರವೆಸಗಿದ ಕ್ಲಾಸ್ ಮೇಟ್!

    ಡ್ರಾಪ್ ನೆಪದಲ್ಲಿ ಚಲಿಸುತ್ತಿರುವ ಕಾರಿನಲ್ಲೇ ಅತ್ಯಾಚಾರವೆಸಗಿದ ಕ್ಲಾಸ್ ಮೇಟ್!

    ನೊಯ್ಡಾ: ಡ್ರಾಪ್ ಮಾಡುವ ನೆಪದಲ್ಲಿ ಚಲಿಸುತ್ತಿರುವ ಕಾರಿನಲ್ಲಿಯೇ 11ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಆಕೆಯ ಕ್ಲಾಸ್ ಮೇಟ್ ಸೇರಿ ಮೂವರು ಅತ್ಯಾಚಾರವೆಸಗಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

    ಈ ಘಟನೆ ಗ್ರೇಟರ್ ನೊಯ್ಡಾದಲ್ಲಿ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಕುರಿತು ಈಗಾಗಲೇ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದ್ವೆಯಾದ ಮೂರೇ ದಿನಕ್ಕೆ ಸ್ನೇಹಿತರ ಜೊತೆ ಸೇರಿ ಪತ್ನಿಯ ಮೇಲೆ ಗ್ಯಾಂಗ್‍ರೇಪ್

    ಕಳೆದ ಬುಧವಾರದಂದು ಶಾಲೆಯಿಂದ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಮಧ್ಯಾಹ್ನ 2.30 ರ ಸುಮಾರಿಗೆ ಶಾಲಾ ಬಸ್ ಮಿಸ್ ಆಗಿತ್ತು. ಈ ಸಂದರ್ಭದಲ್ಲಿ ನನ್ನ ಕ್ಲಾಸ್ ಮೇಟ್ ಸೇರಿ ಮೂವರು ಡ್ರಾಪ್ ಕೊಡುವುದಾಗಿ ಒತ್ತಡ ಹೇರಿದ್ರು. ಹೀಗಾಗಿ ನಾನು ಇದಕ್ಕೆ ಒಪ್ಪಿದೆ. ಕಾರಿನಲ್ಲಿ ಬರುತ್ತಿದ್ದ ವೇಳೆ ಅವರು ಮತ್ತು ಬರುವ ಪಾನೀಯವನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾರೆ. ಬಳಿಕ ಕೈ-ಕಾಲು ಕಟ್ಟಿ ಹಾಕಿ, ಬಾಯಿ ಮುಚ್ಚಿಸಿ ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಅಂತ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಪತ್ನಿಯ ಗುಪ್ತಾಂಗಕ್ಕೆ ಒದ್ದು, ಚಾಕು ಇರಿದ ಪತಿ

    ಇತ್ತ ಬಾಲಕಿ ಶಾಲೆಯಿಂದ ಮನೆಗೆ ವಾಪಸ್ಸಾಗದಿದ್ದರಿಂದ ಗಾಬರಿಗೊಂಡ ಹೆತ್ತವರು ಪೊಲೀಸರಿಗೆ ಏಪ್ರಿಲ್ 18 ರಂದು ದೂರು ನೀಡಿದ್ದರು. ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ ಅಂತ ಹಿರಿಯ ಪೊಲೀಸ್ ಅಧಿಕಾರಿ ಅವ್ನೀಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

    12 ವರ್ಷ ವಯಸ್ಸಿನ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಗಲ್ಲು ಶಿಕ್ಷೆ ಹಾಗೂ ಇಂತಹ ಪ್ರಕರಣಗಳ ವಿಚಾರಣೆ ವೇಗವಾಗಿ ನಡೆಯಲು ವಿಶೇಷ ಕ್ರಮಗೊಳ್ಳಲಾಗಿದೆ. 16 ಕೆಳಗಿನ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಇದುವರೆಗೂ ವಿಧಿಸುತ್ತಿದ್ದ 10 ವರ್ಷಗಳ ಕನಿಷ್ಠ ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಲಾಗಿದ್ದು, ಗರಿಷ್ಠ ಪ್ರಮಾಣದ ಶಿಕ್ಷೆಯಾಗಿ ಜೀವವಾಧಿ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ.

  • ಕುದುರೆ ಸವಾರಿ ವೇಳೆ ಬಿದ್ದು ಮೆದುಳಿಗೆ ಗಂಭೀರ ಗಾಯ- 7ರ ಬಾಲಕಿಯ ತಲೆಗೆ 8 ಸ್ಟಿಚ್!

    ಕುದುರೆ ಸವಾರಿ ವೇಳೆ ಬಿದ್ದು ಮೆದುಳಿಗೆ ಗಂಭೀರ ಗಾಯ- 7ರ ಬಾಲಕಿಯ ತಲೆಗೆ 8 ಸ್ಟಿಚ್!

    ಮುಂಬೈ: ಕುದುರೆ ಸವಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದು 7 ವರ್ಷದ ಬಾಲಕಿಯ ತಲೆಗೆ ಗಂಭೀರ ಗಾಯವಾಗಿರೋ ಆಘಾತಕಾರಿ ಘಟನೆ ನಡೆದಿದೆ.

    ರಶೀದಾ ಹಾಸನ್ ರೇಡಿಯೋವಾಲಾ ಗಾಯಗೊಂಡ ಬಾಲಕಿ. ಈಕೆ ನಗರದ ಲಮಿಂಗ್ಟನ್ ರಸ್ತೆಯ ನಿವಾಸಿಯಾಗಿದ್ದು, 2ನೇ ತರಗತಿ ಓದುತ್ತಿದ್ದಾಳೆ. ಸದ್ಯ ರಶೀದಾ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಘಟನೆ ವಿವರ: ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಶೀದಾ ಮತ್ತು ಆಕೆಯ ತಾಯಿ ಇಬ್ಬರೂ ಬೇರೆ ಬೇರೆ ಕುದುರೆಗಳ ಮೇಲೆ ಕುಳಿತುಕೊಂಡು ಸವಾರಿ ಮಾಡುತ್ತಿದ್ದರು. ಈ ವೇಳೆ ಕೋತಿಯೊಂದು ಮರದಿಂದ ಮರಕ್ಕೆ ಹಾರಿದೆ. ಪರಿಣಾಮ ರಶೀದಾ ಕೂತಿದ್ದ ಕುದುರೆ ತಬ್ಬಿಬ್ಬುಗೊಂಡಿದೆ. ಈ ವೇಳೆ ನಿಯಂತ್ರಕನಿಗೆ ಕುದುರೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರಶೀದಾ ಕುದುರೆ ಮೇಲಿಂದ ಎಸೆಯಲ್ಪಟ್ಟಿದ್ದಾಳೆ. ಪರಿಣಾಮ ತಲೆಗೆ ಗಂಭೀರವಾಗಿ ಏಟು ಬಿದ್ದಿದೆ.

    ಗಾಯಗೊಂಡ ರಶೀದಾಳನ್ನು ಕೂಡಲೇ ಆಕೆಯ ಕುಟುಂಬಸ್ಥರು ನಗರದ ಸೈಫೀ ಆಸ್ಪತ್ರೆಗೆ ದಾಖಲಿಸಿ, ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಮೆದುಳಿಗೆ ಗಂಭೀರ ಗಾಯಗಳಾಗಿವೆ. ಹೀಗಾಗಿ ತಲೆಗೆ 8 ಸ್ಟಿಚ್ ಹಾಕಲಾಗಿದೆ. ಅಲ್ಲದೇ ತಲೆಯ ಬಲ ಬದಿ ಊದಿಕೊಂಡಿದೆ ಅಂತ ಆಸ್ಪತ್ರೆಯ ವೈದ್ಯ ಡಾ. ಉದಯ್ ತಂಬೆ ತಿಳಿಸಿದ್ದಾರೆ.

    ತಾಯಿ ಸೇರಿ 10 ಜನರೊಂದಿಗೆ ಬಾಲಕಿ ಕುದುರೆ ಸವಾರಿಗೆ ಬಂದಿದ್ದಾಳೆ. ಘಟನೆಯ ಬಳಿಕ ಈ ಕುರಿತು ಯಾರೊಬ್ಬರು ಹೇಳಿಕೆ ನೀಡಿಲ್ಲ. ಕುದುರೆ ನಿಯಂತ್ರಕ 45 ವರ್ಷದ ಮುಸ್ತಾಫಾ ಶೇಖ್ ಮಾತ್ರ, ಕೋತಿಯೊಂದು ಮರದಲ್ಲಿ ಹಾರುವ ಮೂಲಕ ಕುದುರೆಯನ್ನು ತಬ್ಬಿಬ್ಬುಗೊಳಿಸಿತ್ತು ಅಂತ ಹೇಳಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.

    ಈ ಕುರಿತು ರಶೀದಾ ತಂದೆ ಮಾತನಾಡಿ, ನಮ್ಮ ಕುಟುಂಬ ಮಾಥೆರಾನ್ ಗೆ ಶುಕ್ರವಾರ ತೆರಳಿತ್ತು. ಶನಿವಾರ ಬೆಳಗ್ಗೆ ಎಂಜಾಯ್ ಮಾಡಲೆಂದು ಹೊರಗಡೆ ತೆರಳಿದ್ದೆವು ಅಂತ ಅಂದಿದ್ದಾರೆ.

  • ಕಲುಷಿತ ನೀರು ಸೇವಿಸಿ ಬಾಲಕಿ ಸಾವು- ಇಬ್ಬರು ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

    ಕಲುಷಿತ ನೀರು ಸೇವಿಸಿ ಬಾಲಕಿ ಸಾವು- ಇಬ್ಬರು ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

    ಗದಗ: ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡದ ಹಿನ್ನೆಲೆಯಲ್ಲಿ ಕಲುಷಿತ ನೀರನ್ನೇ ಸೇವಿಸಿ 9 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಸುಮಾರು 40ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರೋ ಘಟನೆ ಗದಗ ಜಿಲ್ಲೆಯ ತಂಗೋಡ ಗ್ರಾಮದಲ್ಲಿ ನಡೆದಿದೆ.

    ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮದಲ್ಲಿ ಕಳೆದ 15 ದಿನಗಳಿಂದ ತುಂಗಭದ್ರಾ ನೀರು ಸರಬರಾಜು ಮಾಡಿಲ್ಲ. ವಿಧಿಯಿಲ್ಲದೆ ಲಭ್ಯವಿರೋ ಕಲುಷಿತ ನೀರನ್ನೇ ಸೇವಿಸಬೇಕಾಗಿದೆ. ಹೀಗೆ ಈ ನೀರನ್ನು ಸೇವಿಸಿರೋ ಒಂಬತ್ತು ವರ್ಷದ ಕಾವ್ಯ ಮೃತಪಟ್ಟಿದ್ದಾಳೆ.

    ಅಲ್ಲದೆ ಈರಣ್ಣ ಕಮ್ಮಾರ(10), ಪೂರ್ಣಿಮಾ(5) ಸೇರಿದಂತೆ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಮರ್ಪಕ ಕುಡಿಯೋ ನೀರು ಸರಬರಾಜು ಮಾಡದ ತಾಲೂಕು ಆಡಳಿತವೇ ಈ ಘಟನೆಗೆ ಹೊಣೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

  • 8 ತಿಂಗಳ ಕಂದಮ್ಮನನ್ನ ಅತ್ಯಾಚಾರಗೈದಿದ್ದ ಕಾಮುಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು-ವಿಡಿಯೋ ನೋಡಿ

    8 ತಿಂಗಳ ಕಂದಮ್ಮನನ್ನ ಅತ್ಯಾಚಾರಗೈದಿದ್ದ ಕಾಮುಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು-ವಿಡಿಯೋ ನೋಡಿ

    ಇಂದೋರ್: 8 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನು ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ಜಿಲ್ಲಾ ನ್ಯಾಯಾಲಯದ ಮುಂದೆ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿದ್ದ ಪೊಲೀಸರು ಕಾಮುಕನನ್ನು ನ್ಯಾಯಾಲಯದ ಮುಂದೇ ಹಾಜರು ಪಡಿಸಲು ಕರೆತಂದಿದ್ದರು.

    ಕಾಮುಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ಆ ವೇಳೆ ಕೋರ್ಟ್ ಆವರಣದಲ್ಲಿ ಜಮಾವಣೆಗೊಂಡಿದ್ದರು. ಆರೋಪಿಯನ್ನು ಪೊಲೀಸರು ವಾಹನದಿಂದ ಕೆಳಗಿಳಿಸುತ್ತಿದಂತೆ ಸಾರ್ವಜನಿಕರು ಏಕಾಏಕಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಈ ವೇಳೆ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಪೊಲೀಸರು ಆರೋಪಿಯನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.

    ಘಟನೆಯ ವಿವರ: ಪುಟ್ಟ ಕಂದಮ್ಮನ ಹೆತ್ತವರು ಬಲೂನ್ ಮಾರಿ ಜೀವನ ನಡೆಸುತ್ತಿದ್ದು, ನಗರದ ರಾಜ್ ವಾಡ ಕೋಟೆಯ ರಸ್ತೆ ಬದಿಯಲ್ಲಿ ನಿದ್ದೆ ಮಾಡುತ್ತಿದ್ದರು. ಇದನ್ನು ಗಮನಿಸಿದ 21 ವರ್ಷದ ಕಾಮುಕ ನವೀನ್ ಎಂಬಾತ ಮುಗ್ದ ಕಂದಮ್ಮನನ್ನು ಹೆತ್ತವರ ಬಳಿಯಿಂದ ಅಪಹರಿಸಿ 200 ಮೀಟರ್ ದೂರದಲ್ಲಿರೋ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಕೊಲೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆರೋಪಿ ಅತ್ಯಾಚಾರಕ್ಕೊಳಗಾದ ಮಗುವಿನ ಹೆತ್ತವರಿಗೆ ತಿಳಿದವನಾಗಿದ್ದು, ಹೀಗಾಗಿ ಆತನನ್ನು ಬೇಗ ಬಂಧಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

    ಪ್ರಕರಣ ಬೆಳಕಿಗೆ: ಕಟ್ಟಡದ ನೆಲ ಮಾಳಿಗೆಯಲ್ಲಿರುವ ತನ್ನ ಅಂಗಡಿಯ ಬಾಗಿಲು ತೆರೆಯಲು ಮಾಲೀಕ ಬಂದಾಗ, ಒಂದು ಬದಿಯಲ್ಲಿ ಪುಟ್ಟ ಕಂದಮ್ಮ ಶವವಾಗಿ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.

    ಸದ್ಯ ಪೊಲೀಸರು ದ್ವಿ-ಚಕ್ರ ವಾಹನದ ಜೊತೆಗೆ ರಕ್ತಸಿಕ್ತವಾದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಖಂಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ವೇಗವಾಗಿ ನಡೆಸಲು ಸೂಚಿಸಿದ್ದರು.