Tag: ಬಾಲಕಿ

  • 7 ವರ್ಷದ ಬಾಲಕಿಯ ಮೇಲೆ ಕಾಮುಕನ ಅಟ್ಟಹಾಸ

    7 ವರ್ಷದ ಬಾಲಕಿಯ ಮೇಲೆ ಕಾಮುಕನ ಅಟ್ಟಹಾಸ

    ಬೆಂಗಳೂರು: 7 ವರ್ಷದ ಬಾಲಕಿಯ ಮೇಲೆ ಕಾಮುಕ ಅಟ್ಟಹಾಸ ತೋರಿದ ಘಟನೆ ಬೆಂಗಳೂರಿನ ಎಂ.ಎಸ್ ಪಾಳ್ಯದ ಜಾಮಿಯಾ ಮಸೀದಿ ಬಳಿ ನಡೆದಿದೆ.

    ಸೊಹೇಲ್(29) ಈ ಕೃತ್ಯವೆಸಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 7 ವರ್ಷದ ಬಾಲಕಿಯ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಸೊಹೇಲ್ ಈಗಾಗಲೇ ಎರಡು ಮದುವೆಯಾಗಿದ್ದರು ಈ ರೀತಿಯ ನೀಚ ಕೃತ್ಯವೆಸಗಿದ್ದಾನೆ.

    ಸದ್ಯ ಬಾಲಕಿ ಯಲಹಂಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ವಿದ್ಯಾರಣ್ಯಪುರ ಪೊಲೀಸರು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡಿರುವ ಆರೋಪಿ ಸೊಹೇಲ್‍ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

  • ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ತಿರುವನಂತಪುರಂ: 5ನೇ ತರಗತಿ ಓದುತ್ತಿದ್ದ ಬಾಲಕಿ ಬಿಂದಿ ಧರಿಸಿದ್ದಕ್ಕೆ ಮದರಸಾದಿಂದಲೇ ಹೊರ ಹಾಕಿದ ಘಟನೆ ಉತ್ತರ ಕೇರಾಳ ರಾಜ್ಯದಲ್ಲಿ ನಡೆದಿದೆ.

    ಕಿರು ಚಲನಚಿತ್ರದಲ್ಲಿ 10 ವರ್ಷದ ಬಾಲಕಿ ಬಿಂದಿ ಧರಿಸಿ ಅಭಿನಯಿಸಿದ್ದಕ್ಕಾಗಿ, 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಮದರಾಸದ ಆಡಳಿತ ಮಂಡಳಿ ಶಾಲೆಯಿಂದಲೇ ಹೊರಹಾಕಿದೆ.

    ಬಾಲಕಿಯನ್ನು ಮದರಸಾದಿಂದ ಹೊರಹಾಕಿದ ಹಿನ್ನೆಲೆಯಲ್ಲಿ ಆಕೆಯ ತಂದೆ ಉಮ್ಮರ್ ಮಲಾಯಿಲ್ ರವರು ಘಟನೆ ಕುರಿತು ತಮ್ಮ ಫೇಸ್ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದವರು ಬಾಲಕಿಯ ತಂದೆಗೆ ಬೆಂಬಲ ಸೂಚಿಸಿ, ಮದರಾಸ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಫೇಸ್ಬುಕ್ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಹಾಕಿದ್ದ ಪೋಸ್ಟನ್ನು ಸುಮಾರು 7,500 ಮಂದಿ ಲೈಕ್ ಮಾಡಿ 2,700 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರು.

    https://www.facebook.com/permalink.php?story_fbid=2009935685987809&id=100009141911364

    ಉಮ್ಮರ್ ರವರು ತಮ್ಮ ಫೇಸ್ಬುಕ್‍ನಲ್ಲಿ `ನನ್ನ ಮಗಳು ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಕೌಶಲ್ಯತೆಯನ್ನು ಹೊಂದಿದ್ದಾಳೆ. ಆಕೆ ನೃತ್ಯ, ಹಾಡುಗಾರಿಕೆ ಹಾಗೂ ಅಭಿನಯದಲ್ಲಿ ಆಸಕ್ತಿ ಹೊಂದಿದ್ದು, ಅನೇಕ ಸ್ಪರ್ಧೆಗಳಲ್ಲಿ ಸಹ ಸ್ಪರ್ಧಿಸಿ ಮದರಸಾಗೆ ಹೆಸರು ತಂದಿದ್ದಾಳೆ. ಅವಳ ನಿಷ್ಕಲ್ಮಶ ಪ್ರತಿಭೆಗೆ ಮದರಾಸವು ಅವಮಾನ ಮಾಡಿದೆ. ಆಕೆ ಮಾಡಿದ ತಪ್ಪಾದರೂ ಏನು?’ ಕೇವಲ ಗಂಧದ ಬಿಂದಿ ಧರಿಸಿದ್ದಕ್ಕೆ ಆಡಳಿತ ಮಂಡಳಿ ಮದರಾಸದಿಂದಲೇ ಹೊರಹಾಕಿದೆ ಎಂದು ಮಲಿಯಾಳಂ ಭಾಷೆಯಲ್ಲಿ ಪೋಸ್ಟ್ ಮಾಡಿದ್ದರು.

    ಘಟನೆ ಸಂಬಂಧ ಪ್ರತಿಕ್ರಿಯಿಸಿ ಮದರಸಾ ಆಡಳಿತ ಮಂಡಳಿಯು ಬಿಂದಿ ಧರಿಸಿವುದು ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಆದ್ದರಿಂದ ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

  • ಸ್ಕೂಲ್ ಬ್ಯಾಗಿನಲ್ಲಿ ಹಾವು ಪತ್ತೆ: ಹೌಹಾರಿದ ವಿದ್ಯಾರ್ಥಿಗಳು

    ಸ್ಕೂಲ್ ಬ್ಯಾಗಿನಲ್ಲಿ ಹಾವು ಪತ್ತೆ: ಹೌಹಾರಿದ ವಿದ್ಯಾರ್ಥಿಗಳು

    ಬೆಂಗಳೂರು: ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ ಬ್ಯಾಗ್ ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ತಮಿಳುನಾಡಿನ ಶಾಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

    ತಮಿಳುನಾಡಿನ ಹೊಸೂರಿನ ಕಾಮರಾಜ ನಗರದ ಖಾಸಗಿ ಶಾಲೆಯಲ್ಲಿ ಇಂತಹ ಘಟನೆ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯ ಬ್ಯಾಗ್ ನಲ್ಲಿ ಹಾವು ಕಾಣಿಸಿಕೊಂಡಿದೆ. ಹಾವಿನ ಮರಿಯನ್ನು ಕಂಡ ವಿದ್ಯಾರ್ಥಿನಿ ಬ್ಯಾಗನ್ನು ತೆಗೆದುಕೊಂಡು ಹೊರ ಹಾಕಿದಾಗ ಬ್ಯಾಗಿನಿಂದ ಹಾವಿನ ಮರಿ ಹೊರ ಬಂದಿದೆ.

    ಬಾಲಕಿ ಮನೆಯಿಂದ ಹೊರಡುವ ಮುನ್ನವೇ ಬ್ಯಾಗಿಗೆ ಹಾವು ಸೇರಿಕೊಂಡಿರುವ ಬಗ್ಗೆ ಅನುಮಾನವಿದ್ದು, ಶಾಲೆಯಲ್ಲಿ ಕಂಡ ಹಾವನ್ನು ಶಿಕ್ಷಕರು ರಕ್ಷಣೆ ಮಾಡಿ ಕೆರೆಗೆ ಬಿಟ್ಟಿದ್ದಾರೆ.

  • ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಬೆಳಗಾವಿ ಕುವರಿಯ ಮಿಂಚು!

    ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಬೆಳಗಾವಿ ಕುವರಿಯ ಮಿಂಚು!

    ಬೆಳಗಾವಿ: ಆರ್ಥಿಕ ಸಂಕಷ್ಟದ ನಡುವೆಯೂ ದೇಶದ ಪರವಾಗಿ ಸ್ಪೇನ್‍ಗೆ ತೆರಳಿದ್ದ ಕುಂದಾನಗರಿಯ ಬೆಳಗಾವಿ ಕುವರಿ ಅಂತಾರಾಷ್ಟ್ರೀಯ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ.

    ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೇರಣಾ ಗೋನ್ಬಾರೆ ಈ ಸಾಧನೆ ಮಾಡಿರುವ ಸಾಧಕಿ. ಚಿರ್ಲ್ಡ್ ನ್ ಸೋಲೋ ಶೋ ಡ್ಯಾನ್ಸ್ ವಿಭಾಗದಲ್ಲಿ ಪ್ರೇರಣಾ 8ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

    ನಗರದ ಗಣೇಶಪುರದಲ್ಲಿರುವ ಸ್ಟೈಲ್ ಡ್ಯಾನ್ಸ್ ಅಕಾಡೆಮಿಯಲ್ಲಿ ಕಳೆದ ಐದು ವರ್ಷಗಳಿಂದ ಪ್ರೇರಣಾ ನೃತ್ಯ ತರಬೇತಿ ಪಡೆಯುತ್ತಿದ್ದರು. ನೃತ್ಯ ಶಿಕ್ಷಕ ಮಹೇಶ್ ಜಾಧವ್ ಇವರಿಗೆ ತರಬೇತಿ ನೀಡಿದ್ದರು. ಕಳೆದ ಜೂನ್ 22ರಂದು ಸ್ಪೇನ್‍ನ ಬಾರ್ಸಿಲೋನಾ ನಗರದಲ್ಲಿ ನಡೆದಿದ್ದ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ 45 ದೇಶಗಳಿಂದ ಒಟ್ಟು 5,600 ನೃತ್ಯಪಟುಗಳು ಪಾಲ್ಗೊಂಡಿದ್ದರು.

    ಭಾರತ ದೇಶ ಪ್ರತಿನಿಧಿಯಾಗಿ ಬೆಳಗಾವಿಯ ಪ್ರೇರಣಾ ಗೋನ್ಬಾರೆ ಪಾಲ್ಗೊಂಡಿದ್ದರು. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಆಡಿಷನ್‍ನಲ್ಲಿ ಪ್ರೇರಣಾ ಪಾಲ್ಗೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಸ್ಪೇನ್‍ಗೆ ತೆರಳಲು ಆರ್ಥಿಕ ಸಂಕಷ್ಟ ಎದುರಾದಾಗ ಸ್ನೇಹಿತರು ಹಣ ಸಂಗ್ರಹಿಸಿ ನೀಡಿದ್ದರು.

    ಸ್ನೇಹಿತರ ಸಹಕಾರದಿಂದ ಸ್ಪೇನ್‍ಗೆ ತೆರಳಿದ್ದ ಪ್ರೇರಣಾ ಹಿಂದಿ, ತೆಲಗು ಹಾಗೂ ಮರಾಠಿ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ನೃತ್ಯ ಶಿಕ್ಷಕ ಮಹೇಶ್ ಜಾಧವ್, ಇಂಗ್ಲೇಂಡ್‍ನ ಜಾರ್ಜ್ ಶ್ರೀಮ್‍ಶಾ ಎಂಬುವವರು ಪ್ರತಿ ವರ್ಷ ಡ್ಯಾನ್ಸ್ ವರ್ಲ್ಡ್ ಕಪ್ ನೃತ್ಯ ಸ್ಪರ್ಧೆ ಆಯೋಜಿಸುತ್ತಾರೆ.

    ಈ ಬಾರಿ ಸ್ಪೇನ್ ದೇಶದಲ್ಲಿ ಈ ನೃತ್ಯ ಸ್ಪರ್ಧೆ ನಡೆಸಲಾಗಿತ್ತು. ದೇಶದ ಪ್ರತಿನಿಧಿಯಾಗಿದ್ದ ಬೆಳಗಾವಿಯ ಪ್ರೇರಣಾ ಅದ್ಭುತ ಪ್ರದರ್ಶನ ತೋರಿದ್ದು, ಮುಂದಿನ ಸಲ ಟ್ರೋಫಿ ಪಡೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ನೀರೆಂದು ಭಾವಿಸಿ ಥಿನ್ನರ್ ಕುಡಿದಿದ್ದ ಬಾಲಕಿ 22 ದಿನದ ಹೋರಾಟದ ಬಳಿಕ ಸಾವು

    ನೀರೆಂದು ಭಾವಿಸಿ ಥಿನ್ನರ್ ಕುಡಿದಿದ್ದ ಬಾಲಕಿ 22 ದಿನದ ಹೋರಾಟದ ಬಳಿಕ ಸಾವು

    ಕಲಬುರಗಿ: ತಂದೆ ತಂದಿದ್ದ ಥಿನ್ನರನ್ನು ನೀರೆಂದು ಭಾವಿಸಿ ಕುಡಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 7ರ ಬಾಲಕಿ ಸೌಮ್ಯ 22 ದಿನಗಳ ನಂತರ ಮೃತಪಟ್ಟಿದ್ದಾಳೆ.

    ಜಿಲ್ಲೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮನೆಗೆ ಹಿಂದಿರುಗಿದ್ದ ಸೌಮ್ಯ, ಭಾನುವಾರ ಮತ್ತೆ ಏಕಾಏಕಿ ಅಸ್ವಸ್ಥಳಾಗಿದ್ದಳು. ತಕ್ಷಣ ಪೋಷಕರು ಬಾಲಕಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಇಂದು ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

    ಏನಿದು ಘಟನೆ?
    ಜೂನ್ 03 ರಂದು ಸೌಮ್ಯ ತಂದೆ ಮನೆಗೆ ಪೇಂಟಿಂಗ್ ಮಾಡಿಸಲು ತಂದಿದ್ದ ವಸ್ತುಗಳಲ್ಲಿದ್ದ ಥಿನ್ನರನ್ನು ನೀರೆಂದು ಸೇವಿದ್ದಳು. ಸೇರಿದಂತೆ ಇನ್ನಿತರ ಸಾಮಾಗ್ರಿಗಳಲ್ಲಿದ್ದ ಥಿನ್ನರ್ ಅನ್ನು ಬಾಲಕಿ ನೀರೆಂದು ಸೇವಿಸಿದ್ದಳು. ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿತ್ತು. ತಕ್ಷಣ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಸೌಮ್ಯಳನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಅವರು ಕೆಲ ದಿನಗಳ ಹಿಂದೇಯಷ್ಟೇ ಮನೆಗೆ ಹಿಂದಿರುಗಿದ್ದಳು.

  • ಮುಂಬೈಯ 8ನೇ ಅಂತಸ್ತಿನ ಕಟ್ಟಡದಿಂದ ಜಿಗಿದು 14ರ ಬಾಲಕಿ ಆತ್ಮಹತ್ಯೆ

    ಮುಂಬೈಯ 8ನೇ ಅಂತಸ್ತಿನ ಕಟ್ಟಡದಿಂದ ಜಿಗಿದು 14ರ ಬಾಲಕಿ ಆತ್ಮಹತ್ಯೆ

    ಮುಂಬೈ: 14 ವರ್ಷದ ಬಾಲಕಿಯೊಬ್ಬಳು 8ನೇ ಅಂತಸ್ತಿನ ಅಪಾರ್ಟ್ ಮೆಂಟ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

    9ನೇ ತರಗತಿಯ ವಿದ್ಯಾರ್ಥಿನಿ ಗುರುವಾರ ಸಂಜೆ 6.30 ಗಂಟೆಯ ವೇಳೆ ಕಟ್ಟಡದಿಂದ ಜಿಗಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಾಲಕಿ ಬೀಳುತ್ತಿರುವ ದೃಶ್ಯವನ್ನು ಸ್ಥಳೀಯ ನಿವಾಸಿಗಳು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಮೃತ ಬಾಲಕಿಯ ಕುಟುಂಬ ಅಪಾರ್ಟ್ ಮೆಂಟ್‍ನ 8ನೇ ಮಹಡಿಯಲ್ಲಿ ವಾಸವಾಗಿತ್ತು. ಹೀಗಾಗಿ ಬಾಲಕಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಕಂಡ ಸ್ಥಳೀಯರು ಬೀಳದಂತೆ ವಿನಂತಿಸಿಕೊಂಡು, ರಕ್ಷಿಸಲು ಪ್ರಯತ್ನಿಸಿದ್ದಾರೆ. ಯಾರ ಮಾತನ್ನು ಆಲಿಸದ ಬಾಲಕಿ ಕೆಳಗಡೆ ಹಾರಿದ್ದಾಳೆ.

    ಕೆಳಗೆ ಬೀಳುತ್ತಿದ್ದಂತೆ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರೂ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಾಲಕಿಯ ಆತ್ಮಹತ್ಯೆಗೆ ಯಾವುದೇ ಕಾರಣಗಳು ತಿಳಿದುಬಂದಿಲ್ಲ. ಬಾಲಕಿ ಕೆಳಗೆ ಬೀಳುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/EOF01tiRk2U

  • ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!

    ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!

    ಹಾಸನ: ಪ್ರವಾಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನ ಕರೆದುಕೊಂಡು ಹೋಗಿದ್ದ ಐವರು ಯುವಕರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

    ಅರುಣ್, ಮಹೇಶ್, ಶರತ್ ರಾಜ್ ಹಾಗೂ ರಾಜೇಶ್ ಬಂಧಿತ ಆರೋಪಿಗಳು. ಓರ್ವನ ಹೆಸರು ತಿಳಿದು ಬಂದಿಲ್ಲ. ನಾಪತ್ತೆಯಾದ ಬಾಲಕಿ ಹಾಸನ ಪದವಿ ಪೂರ್ವ ಹಾಸ್ಟೆಲ್‍ನಲ್ಲಿದ್ದು, ಎಸ್‍ಎಸ್‍ಎಲ್‍ಸಿ ಓದುತ್ತಿದ್ದಳು.

    ಜೂನ್ 19 ರಂದು ಅರುಣ್, ಮಹೇಶ್, ಶರತ್ ರಾಜ್ ಹಾಗೂ ರಾಜೇಶ್ ಎಂಬವರು ಬಾಲಕಿಯನ್ನು ಪ್ರವಾಸಕ್ಕೆಂದು ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಪ್ರವಾಸದ ವೇಳೆ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಯುವಕರು ಹೇಳಿದ್ದರು. ಆದರೆ ಇತ್ತ ಬಾಲಕಿಯ ಪೋಷಕರು ಯುವಕರೇ ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಮಹಿಳಾ ಠಾಣೆ ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ.

  • ಕ್ಲಾಸಿಗೆ ಹೋಗದೆ ಯೂಟ್ಯೂಬ್ ನಲ್ಲೇ ಯೋಗ ನೋಡಿ, ಕಲಿತು ಗಿನ್ನೆಸ್ ದಾಖಲೆ ಮಾಡಿದ್ಳು ಉಡುಪಿಯ ಪುಟಾಣಿ!

    ಕ್ಲಾಸಿಗೆ ಹೋಗದೆ ಯೂಟ್ಯೂಬ್ ನಲ್ಲೇ ಯೋಗ ನೋಡಿ, ಕಲಿತು ಗಿನ್ನೆಸ್ ದಾಖಲೆ ಮಾಡಿದ್ಳು ಉಡುಪಿಯ ಪುಟಾಣಿ!

    ಉಡುಪಿ: ಒಂದು ದಿನನೂ ಯೋಗ ಕ್ಲಾಸಿಗೆ ಹೋಗದೆ ಎಲ್ಲರೂ ಹುಬ್ಬೇರಿಸುವ ಕೆಲಸ ಮಾಡಿದ್ದಾಳೆ ಉಡುಪಿಯ ಪೋರಿ ತನುಶ್ರೀ.

    9ರ ಹರೆಯದ ಈಕೆ ಇದೀಗ ವಿಶ್ವ ಮಟ್ಟದಲ್ಲಿ ದಾಖಲೆ ಮಾಡಿದ್ದಾಳೆ. ಯೋಗದ ಮೈ ನವಿರೇಳಿಸುವ ಭಂಗಿ ಪ್ರದರ್ಶಿಸಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ. ಗಿರಿಗಿಟ್ಲೆ ತರ ತಿರುಗೋ ಮೂಲಕ ಭಾರತ ಮಣ್ಣಿನ ವ್ಯಾಯಾಮ ಕಲೆಯಾದ ಯೋಗಾಸನ ಮೂಲಕ ಈಕೆ ಗಿನ್ನೆಸ್ ವಿಶ್ವದಾಖಲೆ ಮೆರೆದಿದ್ದಾಳೆ.

    ಉಡುಪಿ ಜಿಲ್ಲೆ ಪಿತ್ರೋಡಿಯ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ, ಯೋಗಾಸನದ ಅತೀ ಕ್ಲಿಷ್ಟಕರವಾದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ನೂತನ ದಾಖಲೆ ಬರೆದಿದ್ದಾಳೆ.

    ಪ್ಯಾಲೆಸ್ತೀನ್‍ನ ಮುಹಮ್ಮದ್ ಅಲ್ ಶೇಖ್ ಹೆಸರಲ್ಲಿದ್ದ ದಾಖಲೆಯನ್ನು ತನುಶ್ರೀ ಮುರಿದಿದ್ದಾಳೆ. ಮುಂಬೈಯಿಂದ ಆಗಮಿಸಿದ್ದ ಗಿನ್ನೆಸ್ ಅಧಿಕಾರಿ ಮುಂದೆ ತನುಶ್ರೀ ವಿಶ್ವ ದಾಖಲೆ ಯೋಗ ಮಾಡಿದ್ದಾಳೆ. ಒಂದು ದಿನವೂ ಯೋಗ ಕ್ಲಾಸಿಗೆ ಹೋಗದ ತನುಶ್ರೀ, ಕೇವಲ ಯೂಟ್ಯೂಬ್ ನೋಡಿ ಈ ವಿದ್ಯೆ ಕಲಿತಿದ್ದಾಳೆ ಅಂತ ತಂದೆ ಉದಯಕುಮಾರ್ ಹೇಳಿದ್ದಾರೆ.

    ಅಂದಹಾಗೆ ತನುಶ್ರೀ ಭರತನಾಟ್ಯ ಪಟು ಕೂಡ. ನಿರಾಲಂಬ ಪೂರ್ಣ ಚಕ್ರಾಸನ ಮಾಡಿ ಪಡೆದ ಗಿನ್ನೇಸ್ ರೆಕಾರ್ಡ್ ಅನ್ನು ಬಾಲೆ ತನುಶ್ರೀ ದೇಶಕ್ಕೆ ಸಮರ್ಪಿಸಿದ್ದಾಳೆ.

    ಒಟ್ಟಿನಲ್ಲಿ ಯೋಗಾಭ್ಯಾಸ ಅಂದ್ರೆ ಆರೋಗ್ಯ ಜೀವನಕ್ಕೆ ಇರುವ ವ್ಯಾಯಾಮ ಅಂದುಕೊಂಡೋರೆ ಜಾಸ್ತಿ. ಆದ್ರೆ ಅದ್ರಲ್ಲೂ ವಿಶ್ವದಾಖಲೆ ಮಾಡಲು ಸಾಧ್ಯ ಎಂದು ಈ ಪುಟ್ಟ ಬಾಲೆ ತೋರಿಸಿಕೊಟ್ಟಿದ್ದಾಳೆ. ಯೋಗದಿಂದ ರೋಗ ದೂರ ಎನ್ನುವ ಈ ಬಾಲೆ ಎಲ್ಲರೂ ಯೋಗ ಮಾಡಿ ಅಂತ ರಿಕ್ವೆಸ್ಟ್ ಮಾಡ್ಕೊಂಡಿದ್ದಾಳೆ.

  • ಅಪ್ರಾಪ್ತೆಯನ್ನು ಕಿಡ್ನಾಪ್‍ಗೈದು ರಿಯಾಲಿಟಿ ಶೋ ಸ್ಪರ್ಧಿ, ನೃತ್ಯ ನಿರ್ದೇಶಕನಿಂದ ರೇಪ್

    ಅಪ್ರಾಪ್ತೆಯನ್ನು ಕಿಡ್ನಾಪ್‍ಗೈದು ರಿಯಾಲಿಟಿ ಶೋ ಸ್ಪರ್ಧಿ, ನೃತ್ಯ ನಿರ್ದೇಶಕನಿಂದ ರೇಪ್

    ಮುಂಬೈ: ನೃತ್ಯ ನಿರ್ದೇಶಕ, ರಿಯಾಲಿಟಿ ಶೋ ಸ್ಫರ್ಧಿಯೋರ್ವ ಅಪ್ರಾಪ್ತೆಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಗೈದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಬಂಧಿಸಿಲಾಗಿದೆ. ಸದ್ಯ ಆರೋಪಿ ಆದಿತ್ಯ ಗುಪ್ತಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಏನಿದು ಘಟನೆ?
    17 ವರ್ಷದ ಸಂತ್ರಸ್ತೆಗೆ ಆರೋಪಿ ಆದಿತ್ಯಾ ಗುಪ್ತಾನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿತ್ತು. ಹೀಗೆ ಪರಿಚಯವಾಗಿ ಆದಿತ್ಯ ಒಂದು ದಿನ ಸಂತ್ರಸ್ತೆಯನ್ನು ಭೇಟಿ ಮಾಡುವಂತೆ ತಿಳಿಸಿದ್ದನು. ಹೀಗಾಗಿ ಆಕೆ ಭೇಟಿ ಮಾಡಲು ಬಂದಾಗ ಆದಿತ್ಯಾ ಆಕೆಗೆ ಮತ್ತು ಬರುವ ಪಾನೀಯವನ್ನು ನೀಡಿ ಬಳಿಕ ಅಪಹರಿಸಿ, ಅತ್ಯಾಚಾರವೆಸಗಿದ್ದಾನೆ.

    ಇತ್ತ ಕಾಲೇಜಿಗೆಂದು ಹೋದ ಮಗಳು ಮನೆಗೆ ವಾಪಸ್ಸಾಗದಿದ್ದಾಗ ಆತಂಕಗೊಂಡ ಪೋಷಕರು, ಮಗಳು ಅಪಹರಣವಾಗಿದ್ದಾಳೆಂದು ಅಂಧೇರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ದೂರು ದಾಖಲಿಸಿಕೊಂಡ ಕ್ರೈಂ ಬ್ರ್ಯಾಂಚ್ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸೋಮವಾರದಂದು ಸ್ಥಳೀಯ ರೆಸ್ಟೋರೆಂಟ್ ಒಂದರ ಬಳಿ ಬಾಲಕಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದ್ದಾಳೆ. ಕೂಡಲೇ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆನಂತರ ಆಕೆಯ ಹೇಳಿಕೆಯನ್ನು ಪಡೆದಿದ್ದಾರೆ. ಬಾಲಕಿಯ ಹೇಳಿಕೆಯಂತೆ ಪೊಲಿಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಪೊಲೀಸರು ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದು, ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಏನಿದು ಪೋಕ್ಸೋ ಕಾಯಿದೆ?
    ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣ ದಾಖಲಾದಾಗ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಮಕ್ಕಳ ರಕ್ಷಣೆಗೆಂದೆ ರೂಪಿತವಾಗಿರುವ ಕಾಯ್ದೆ ಇದಾಗಿದ್ದು, 18 ವರ್ಷದೊಳಗಿನ ಮಕ್ಕಳನ್ನು ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯಗಳಿಂದ ತಡೆದು ರಕ್ಷಣೆ ನೀಡುತ್ತದೆ. ನವೆಂಬರ್ 14, 2012ರಂದು ಈ ಕಾಯ್ದೆ ಜಾರಿಗೆ ಬಂದಿದೆ.

  • ಆಟವಾಡೋದಾಗಿ ರಿಯಲ್ ಗನ್‍ನಿಂದಲೇ ಶೂಟ್: ಐಸಿಯುನಲ್ಲಿ ತಾಯಿ

    ಆಟವಾಡೋದಾಗಿ ರಿಯಲ್ ಗನ್‍ನಿಂದಲೇ ಶೂಟ್: ಐಸಿಯುನಲ್ಲಿ ತಾಯಿ

    ಕೋಲ್ಕತ್ತಾ: ಆಟವಾಡೋ ಗನ್ ಎಂದು ತಿಳಿದು ಮಗಳು ತಾಯಿಗೆ ಶೂಟ್ ಮಾಡಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಕಾಕೋಲಿ ಜಾನಾ ಗುಂಡಿನ ಏಟಿನಿಂದ ಆಸ್ಪತ್ರೆಯಲ್ಲಿ ಬಳುತ್ತಿರುವ ಮಹಿಳೆ. ಆಟವಾಡೋ ಪಿಸ್ತೂಲ್ ಎಂದು ತಿಳಿದು ತಾಯಿಯೇ ಆ ಪಿಸ್ತೂಲ್‍ನನ್ನು ತನ್ನ ಮಗಳಿಗೆ ನೀಡಿದ್ದರು. ಬಾಲಕಿ ಆ ಪಿಸ್ತೂಲ್‍ನಲ್ಲಿ ಆಟವಾಡುವಾಗ ನಿಜವಾದ ಪಿಸ್ತೂಲ್ ಎಂದು ತಿಳಿಯದೇ ತನ್ನ ತಾಯಿಗೆ ಶೂಟ್ ಮಾಡಿದ್ದಾಳೆ.

    ಭಾನುವಾರ ಬೆಳಗ್ಗೆ ಕಾಕೋಲಿ ತನ್ನ ಮನೆಯ ಆವರಣದಲ್ಲಿ ಆ ಪಿಸ್ತೂಲ್ ಅನ್ನು ನೋಡಿದ್ದರು. ನಂತರ ಅದು ಆಟವಾಡೋ ಪಿಸ್ತೂಲ್ ಎಂದು ತಿಳಿದು ತನ್ನ ಮಗಳಿಗೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿ ಆ ಪಿಸ್ತೂಲ್‍ನಿಂದ ಆಟವಾಡುವಾಗ ಆಕಸ್ಮಿಕವಾಗಿ ತನ್ನ ತಾಯಿಯ ಬೆನ್ನಿಗೆ ಶೂಟ್ ಮಾಡಿದ್ದಾಳೆ. ತಕ್ಷಣ ಕಾಕೋಲಿ ಅವರನ್ನು ಆರಂಬಗ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಸದ್ಯ ಕಾಕೋಲಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ವಶಕ್ಕೆ ಪಡೆದಿದ್ದೇವೆ. ಬಾಲಕಿ ಆಕಸ್ಮಿಕವಾಗಿ ಗುಂಡನ್ನು ಹಾರಿಸಿದ್ದಾಳೆ. ಆ ಗುಂಡು ರೂಮಿನಲ್ಲಿ ಕುಳಿತ್ತಿದ್ದ ಆಕೆಯ ತಾಯಿಯ ಬೆನ್ನಿಗೆ ಬಿದ್ದಿದೆ. ಸದ್ಯ ಬಾಲಕಿ ಶಾಕ್ ನಲ್ಲಿದ್ದು, ಏನು ಹೇಳುವ ಸ್ಥಿತಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ಪೊಲೀಸರು ಆ ಪಿಸ್ತೂಲ್ ಮನೆಯ ಆವರಣದಲ್ಲಿ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.