Tag: ಬಾಲಕಿ

  • ಬೆಂಗ್ಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್-ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

    ಬೆಂಗ್ಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್-ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

    ಬೆಂಗಳೂರು: 16 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂತೋಷ್, ಆಕಾಶ್ ಹಾಗೂ ಜೋಸೆಫ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆ ಬಾಲಕಿಯ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

    ಸಂತ್ರಸ್ತ ಬಾಲಕಿಗೆ ಬಂಧಿತ ಆರೋಪಿ ಜೋಸೆಫ್ ಪರಿಚಯವಿತ್ತು ಎನ್ನಲಾಗಿದ್ದು. ಬಾಲಕಿಗೆ ಮಾತನಾಡುಲು ಬರುವಂತೆ ಹೇಳಿ ಕಾರಿಗೆ ಹತ್ತಿಸಿಕೊಂಡು ಹೆಬ್ಬಾಳದ ಮನೋರಾಯನ ಪಾಳ್ಯ ಬಳಿ ಅಪಹರಣ ಮಾಡಿದ್ದಾರೆ. ಬಳಿಕ ಮೂವರು ಆರೋಪಿಗಳು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಬಳಿಕ ಆಕೆಯನ್ನು ವಾಪಸ್ ಕರೆತಂದು ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಬಳಿ ಬಿಟ್ಟು ತೆರಳಿದ್ದಾರೆ. ಬಾಲಕಿ ಮನೆಗೆ ವಾಪಸ್ ಆದ ವೇಳೆ ಅತ್ಯಾಚಾರ ಎಸಗಿದ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿ ನೀಡಿದ ಮಾಹಿತಿ ಮೇರೆಗೆ ಮೂರು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಘಟನೆಯ ಕುರಿತು ದೂರು ದಾಖಲಾಗಿದೆ.

  • ಅಪ್ರಾಪ್ತ ಮಗಳನ್ನ ರೇಪ್‍ಗೈದಿದ್ದ ಕಾಮುಕನನ್ನು ಹಿಡಿದು ಕೊಟ್ಟ ತಾಯಿ

    ಅಪ್ರಾಪ್ತ ಮಗಳನ್ನ ರೇಪ್‍ಗೈದಿದ್ದ ಕಾಮುಕನನ್ನು ಹಿಡಿದು ಕೊಟ್ಟ ತಾಯಿ

    ಭೋಪಾಲ್: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬೈಕಿನಲ್ಲಿ ಲಿಫ್ಟ್ ಕೊಡುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಸಂತ್ರಸ್ತೆಯ ತಾಯಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

    ಸಮೀರ್ ಖಾನ್ ಬಂಧಿತ ಆರೋಪಿ. ಸಮೀರ್ ವೃತ್ತಿಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದು, ಬಾಲಕಿಯ ನೆರೆಯ ಮನೆಯಲ್ಲಿಯೇ ವಾಸಿಯಾಗಿದ್ದನು. ಸಮೀರ್ ಬಾಲಕಿ ಶಾಲೆಗೆ ಹೋಗುವ ವೇಳೆ ಡ್ರಾಪ್ ಮಾಡುವ ನೆಪದಲ್ಲಿ ಬೈಕ್ ಹತ್ತಿಸಿಕೊಂಡಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಅಲ್ಲದೇ ಈ ಕುರಿತು ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

    ಆರೋಪಿಯ ಮಾತಿಗೆ ಹೆದರಿದ ಬಾಲಕಿ ತನ್ನ ಮೇಲೆ ನಡೆದ ಕೃತ್ಯವನ್ನು ಯಾರಿಗೂ ತಿಳಿಸದೆ ತೆರಳಿದ್ದಳು. ಆದರೆ ಮತ್ತೊಮ್ಮೆ ಆರೋಪಿ ದಾರಿಯಲ್ಲಿ ಅಡ್ಡಗಡ್ಡಿ ಜೊತೆ ಬರುವಂತೆ ಒತ್ತಾಯ ಮಾಡಿದ್ದನು. ಇದಾದ ಬಳಿಕ ಬಾಲಕಿ ಧೈರ್ಯ ಮಾಡಿ ನಡೆದ ಘಟನೆಯನ್ನು ತಾಯಿಗೆ ತಿಳಿಸಿದ್ದಳು. ಮಗಳ ಮೇಲೆ ನಡೆದ ಕೃತ್ಯದ ಕುರಿತು ಕೇಳಿ ಅತಂಕಗೊಂಡ ತಾಯಿ ಆರೋಪಿಯನ್ನು ಪೊಲೀಸರ ಬಲೆಗೆ ಬೀಳುವಂತೆ ಮಾಡುಲು ಪ್ಲಾನ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಎಂದಿನಂತೆ ಮಗಳಿಗೆ ಶಾಲೆಗೆ ತೆರಳುವಂತೆ ಹೇಳಿದ್ದಾರೆ.

    ಶಾಲೆಗೆ ತೆರಳುತ್ತಿದ್ದ ಬಾಲಕಿ ಬಳಿ ಬಂದ ಆರೋಪಿ ಮತ್ತೆ ಆಕೆಯನ್ನು ಬಲವಂತವಾಗಿ ಬೈಕ್ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆರೋಪಿಯನ್ನು ಹಿಂಬಾಲಿಸಿದ ಬಾಲಕಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿ ರೆಡ್ ಹ್ಯಾಂಡ್ ಆಗಿ ಹಿಡಿದು ಒಪ್ಪಿಸಿದ್ದಾರೆ.

    ಈ ಘಟನೆ ಕುರಿತು ಆರೋಪಿ ಸಮೀರ್ ಖಾನ್ ವಿರುದ್ಧ ಅಪಹರಣ, ಕಿರುಕುಳ, ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ಪತ್ರಕರ್ತೆಯ ಸ್ಟೈಲ್ ನಲ್ಲೇ ತನ್ನೂರಿನ ಸಮಸ್ಯೆ ಬಿಚ್ಚಿಟ್ಟ ಬಾಲಕಿ!

    ಪತ್ರಕರ್ತೆಯ ಸ್ಟೈಲ್ ನಲ್ಲೇ ತನ್ನೂರಿನ ಸಮಸ್ಯೆ ಬಿಚ್ಚಿಟ್ಟ ಬಾಲಕಿ!

    ಬಳ್ಳಾರಿ: ಮೊನ್ನೆಯಷ್ಟೇ ಕೊಡಗಿನ ಬಾಲಕನೊಬ್ಬ ತನ್ನೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದನು. ಇದೀಗ ಅದೇ ರೀತಿಯಾಗಿ ಮತ್ತೊಬ್ಬ ಬಾಲಕಿ ತನ್ನೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರಕರ್ತೆಯ ರೀತಿಯಲ್ಲೇ ವರದಿ ಮಾಡಿದ್ದಾಳೆ.

    ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಳಕಲ್ ಗ್ರಾಮದ 7ನೇ ತರಗತಿಯಲ್ಲಿ ಓದುತ್ತಿರುವ ರೋಜಾ ಎಂಬ ಬಾಲಕಿ ತನ್ನೂರಿನ ಕೆರೆಯ ಸಮಸ್ಯೆ ಬಗ್ಗೆ ವಿವರಿಸಿದ್ದಾಳೆ. ಈ ಭಾಗದ ರೈತರ ಪ್ರಮುಖ ಜೀವನಾಧಾರವಾದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೂಜೆ ಮಾಡಿ ಎರಡು ವರ್ಷವಾಗಿದೆ. ಆದರೆ ಇದುವರೆಗೂ ಕೆರೆಗೆ ಹನಿ ನೀರುಬ ಸಹ ಬಂದಿಲ್ಲ ಎಂದು ಹೇಳಿದ್ದಾಳೆ.

    ಶಾಸಕ ಪರಮೇಶ್ವರ ನಾಯ್ಕ್ ಭರವಸೆ ನೀಡಿ ಪೂಜೆ ಮಾಡಿ ಹೋದ ಕೆರೆಗೆ ಇನ್ನೂ ನೀರು ಬಂದಿಲ್ಲ. ಅಲ್ಲದೇ ಶಿಂಗಟಾಲೂರ ಬ್ಯಾರೇಜ್ ನಿಂದ ನಿತ್ಯ 40 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದುಹೋಗುತ್ತಿದೆ. ಆ ನೀರನ್ನ ಕೆರೆ ತುಂಬಿಸುವ ಯೋಜನೆಗೆ ಬಳಸಬೇಕಾದ ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯತನ ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಶಿಂಗಟಲೂರ ಬ್ಯಾರೇಜ್ ಬಳಿಯಿಂದ ಪೈಪ್ ಲೈನ್ ಕಾರ್ಯ ಆಳವಡಿಕೆ ಕಾರ್ಯ ನಡೆದಿದ್ದರು ಕೂಡ ಕೆರೆಗೆ ನೀರು ಹರಿದಿಲ್ಲ. ಅಲ್ಲದೇ ಕೆರೆಯ ನಿರ್ವಹಣೆ ಇಲ್ಲದೇ ಮುಳ್ಳುಗಂಟೆಗಳೇ ಹರಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾಳೆ.

  • 11ರ ಬಾಲಕಿಯ ಮೇಲೆ 22 ಮಂದಿಯಿಂದ ಗ್ಯಾಂಗ್‍ರೇಪ್: ಆರೋಪಿಗಳಿಗೆ ಕೋರ್ಟ್‍ನಲ್ಲಿ ಥಳಿತ

    11ರ ಬಾಲಕಿಯ ಮೇಲೆ 22 ಮಂದಿಯಿಂದ ಗ್ಯಾಂಗ್‍ರೇಪ್: ಆರೋಪಿಗಳಿಗೆ ಕೋರ್ಟ್‍ನಲ್ಲಿ ಥಳಿತ

    ಚೆನ್ನೈ: 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಂಧಿತರಾಗಿದ್ದ ಆರೋಪಿಗಳನ್ನು ಕೋರ್ಟ್‍ನಲ್ಲಿ ವಕೀಲರು, ಸಾರ್ವಜನಿಕರು ಥಳಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ಅತ್ಯಾಚಾರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದಂತೆ, ಅವರನ್ನು ವಕೀಲರು ಥಳಿಸಿ, ಆರೋಪಿಗಳ ಪರ ವಾದ ಮಾಡಲು ನಿರಾಕರಿಸಿದರು.

    ನಡೆದದ್ದು ಏನು?
    ಸಂತ್ರಸ್ತ ಬಾಲಕಿ ತನ್ನ ಪೋಷಕರೊಂದಿಗೆ 300 ಅಪಾರ್ಟ್ ಮೆಂಟ್ ಇರುವ ಕಾಂಪ್ಲೆಕ್ಸ್‍ನಲ್ಲಿ ವಾಸವಾಗಿದ್ದಳು. ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ತಡೆದು 66 ವರ್ಷದ ಲಿಫ್ಟ್ ಆಪರೇಟರ್ ಸಾಫ್ಟ್ ಡ್ರಿಂಕ್ಸ್‍ನಲ್ಲಿ ಅಮಲು ಬರುವ ಪದಾರ್ಥ ಹಾಕಿಕೊಟ್ಟಿದ್ದನು. ನಂತರ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದನು. ಇದಾದ ಬಳಿಕ ಮತ್ತೊಬ್ಬ ವ್ಯಕ್ತಿಯನ್ನು ಕರೆದಿದ್ದು, ವಿಡಿಯೋ ಮಾಡಲು ಹೇಳಿದ್ದನು. ವಿಡಿಯೋ ಮಾಡಲು ಬಂದಿದ್ದ ವ್ಯಕ್ತಿಯಿಂದಲೂ ಬಾಲಕಿಯ ಅತ್ಯಾಚಾರಕ್ಕೆ ಒಳಗಾಗಿದ್ದಳು. ಹೀಗೆ ನಿರಂತರವಾಗಿ ಸೆಕ್ಯುರಿಟಿ ಗಾರ್ಡ್, ವಿದ್ಯುತ್ ಕೆಲಸಗಾರರು, ಪ್ಲಂಬರ್ ಸೇರಿದಂತೆ 18 ಜನರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

    ವಿಡಿಯೋವನ್ನು ಬಹಿರಂಗ ಪಡಿಸುವುದಾಗಿ ಹೆದರಿಸಿ, ಬಾಲಕಿಯನ್ನು ಸುಮಾರು ವಾರಗಳಿಂದ ಕಾಂಪ್ಲೆಕ್ಸ್‍ನ ಬೆಸ್‍ಮೆಂಟ್, ಟೆರಸ್, ಜಿಮ್ ಮತ್ತು ಪಬ್ಲಿಕ್ ರೆಸ್ಟ್ ರೂಮ್‍ಗಳಿಗೆ ಸಾಗಿಸಲಾಗಿತ್ತು. ಬಾಲಕಿಯ ಅಕ್ಕ ಆಕೆಯನ್ನು ಪತ್ತೆ ಹಚ್ಚಿ ಮನೆಗೆ ಕರೆದು ತಂದಾಗ, ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಬಾಲಕಿಯ ಪೋಷಕರು ಭಾನುವಾರ ಪ್ರಕರಣ ದಾಖಲಿಸಿದ್ದರು. ಸದ್ಯ ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

  • ನೀವು ಅತ್ತರೆ ನಮಗೂ ಅಳು ಬರುತ್ತೆ – ಹೆಚ್‍ಡಿಕೆಗೆ ಧೈರ್ಯ ತುಂಬಿದ ಹಾಸನ ಬಾಲಕಿ

    ನೀವು ಅತ್ತರೆ ನಮಗೂ ಅಳು ಬರುತ್ತೆ – ಹೆಚ್‍ಡಿಕೆಗೆ ಧೈರ್ಯ ತುಂಬಿದ ಹಾಸನ ಬಾಲಕಿ

    ಹಾಸನ: ಕೊಡಗು ಜಿಲ್ಲೆಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಬಾಲಕ ಸಿಎಂ ಕುಮಾರಸ್ವಾಮಿ ಅವರ ಗಮನಸೆಳೆದ ಬೆನ್ನಲ್ಲೇ, ಹಾಸನ ಬಾಲಕಿಯೊಬ್ಬಳು ಎಚ್‍ಡಿಕೆ ಕಣ್ಣೀರು ಹಾಕಿದ್ದು ಕಂಡು ಧೈರ್ಯ ತುಂಬಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆ ಹೊಳೇನರಸೀಪುರ ತಾಲೂಕಿನ ಮಳಲಿ ಗ್ರಾಮದ ಬಾಲಕಿ ಅರುಂಧತಿ, ವಿಡಿಯೋದಲ್ಲಿ ತಮ್ಮ ಗ್ರಾಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾಳೆ. ಕರ್ನಾಟಕ ಸಿಎಂ ಆಗಿ ನೀವು ಅಧಿಕಾರ ವಹಿಸಿಕೊಂಡ ಬಳಿಕ ಉತ್ತಮ ಮಳೆಯಾಗಿದ್ದು, ನಮ್ಮ ಗ್ರಾಮದಲ್ಲೂ ಉತ್ತಮ ಬೆಳೆಯಾಗಿದೆ. ನಾನು ಹುಟ್ಟಿದ ಸಂದರ್ಭದಲ್ಲಿ ನಮ್ಮ ಗ್ರಾಮದ ಕೆರೆ ತುಂಬಿತ್ತು. ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕೆರೆ ತುಂಬಿದೆ. ನಿಮಗೆ ಅಧಿಕಾರ ಕೊಟ್ಟಿರುವುದು ಕನ್ನಡಿಗರು, ನಿಮ್ಮ ಪರ ಹೋರಾಟ ಮಾಡಲು ಕರ್ನಾಟಕ ರೈತ ಮಕ್ಕಳು ಜೊತೆಗಿರುತ್ತಾರೆ ಎಂದು ಅಭಯ ನೀಡಿದ್ದಾಳೆ.

    ಇದೇ ವೇಳೆ ರೈತ ಸಾಲಮನ್ನಾ ಕುರಿತು ಪ್ರಸ್ತಾಪ ಮಾಡಿರುವ ಬಾಲಕಿ, ಕರ್ನಾಟಕದ ಬಹುತೇಕ ಡ್ಯಾಂಗಳು ತುಂಬಿದ್ದು, ಉತ್ತಮ ಬೆಳೆ ಆಗುವ ನಿರೀಕ್ಷೆ ಇದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ನಿಮ್ಮ ಸಾಲಮನ್ನಾ ನಮಗೆ ಬೇಡ. ಸಾಲಮನ್ನಾ ಬೇಡ ನಮ್ಮ ಕುಟುಂಬ ತುಂಬ ಚೆನ್ನಾಗಿದೆ. ನೀವು ಆರೋಗ್ಯದಿಂದ ಇರುವುದು ನಮಗೇ ಬೇಕು. ನೀವು ಅತ್ತರೆ ನಮಗೆ ಬೇಜಾರಾಗುತ್ತೆ ನಮಗೂ ಆಳುಬರುತ್ತೆ. ನೀವು ಹೆದರಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ಆದ್ದರಿಂದ ಹೆಚ್ಚು ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ. ನಗರದಲ್ಲಿ ಉತ್ತಮ ವಾತಾವರಣ ಲಭ್ಯವಿಲ್ಲ. ಗ್ರಾಮಗಳು ಹಚ್ಚ ಹಸಿರಾಗಿದ್ದು, ಒಳ್ಳೆಯ ವಾತಾವರಣವಿದೆ ಎಂದು ಹೇಳಿದ್ದಾಳೆ.

  • ಪೊಲೀಸ್ ಠಾಣೆ ಒಳಗೆಯೇ ನೇಣು ಬಿಗಿದುಕೊಂಡ ಅಪ್ರಾಪ್ತೆ!

    ಪೊಲೀಸ್ ಠಾಣೆ ಒಳಗೆಯೇ ನೇಣು ಬಿಗಿದುಕೊಂಡ ಅಪ್ರಾಪ್ತೆ!

    ನವದೆಹಲಿ: ಅಪ್ರಾಪ್ತ ಬಾಲಕಿಯೊಬ್ಬಳು ಪೊಲೀಸ್ ಠಾಣೆಯೊಳಗೆ ನುಗ್ಗಿ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ತಿಲಕ್ ವಿಹಾರ್ ಠಾಣೆಯಲ್ಲಿ ನಡೆದಿದೆ.

    ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಬಾಲಕಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ನನ್ನ ಮಗಳಿಗೆ ನೆರೆಮನೆಯವರು ತನ್ನ ಮಗ ಹ್ಯಾಪಿ ಸಿಂಗ್ ನನ್ನು ಮದುವೆಯಾಗುವಂತೆ ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಾಯಿ ಆರೋಪಿಸಿದ್ದಾರೆ.

    ನನ್ನ ಮಗಳು ಇನ್ನೂ ಅಪ್ರಾಪ್ತಳಾಗಿದ್ದರಿಂದ ನಾವು ಕುಟುಂಬದವರು ಮದುವೆಗೆ ನಿರಾಕರಿಸಿದ್ದೆವು. ಆಗ ನನ್ನ ಮಗಳನ್ನು ಸಿಂಗ್ ಕಿಡ್ನಾಪ್ ಮಾಡಿದ್ದರು. ಅಲ್ಲದೇ ಆಕೆಯನ್ನು ಮದುವೆಯಾಗಲು ಒತ್ತಾಯಿಸಿದ್ದಾರೆ. ಶನಿವಾರ ರಾತ್ರಿ ಸುಮಾರು 10.30 ವರೆಗೂ ಮಗಳು ಎಲ್ಲೂ ಪತ್ತೆಯಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

    ಪೋಲೀಸರು ನನಗೆ ಸುಮಾರು ಶನಿವಾರ ರಾತ್ರಿ 2.30 ಕ್ಕೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದರು. ನಾನು ಪೊಲೀಸ್ ಠಾಣೆಗೆ ಹೋಗಿ ನೋಡಿದಾಗ ನನ್ನ ಮಗಳು ಒಂದು ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಳು. ಇನ್ನೊಂದು ಕೋಣೆಯಲ್ಲಿ ನನ್ನ ಮೂವರು ಗಂಡು ಮಕ್ಕಳನ್ನು ಕೂಡಿ ಹಾಕಲಾಗಿತ್ತು ಎಂದು ತಾಯಿ ತನ್ನ ಅಳಲು ತೋಡಿಕೊಂಡಿದ್ದಾರೆ.

    ಶನಿವಾರ ಸುಮಾರು 2 ಗಂಟೆಗೆ ಬಾಲಕಿ ಪೋಲೀಸ್ ಠಾಣೆಗೆ ಬಂದು ನಾನು ಮನೆಗೆ ಹೋಗಲ್ಲ ಎಂದು ಹೇಳಿದ್ದಳು. ಆಗ ವಿಚಾರಿಸಿದಾಗ ಆಕೆಯ ಮನೆಯವರಿಗೂ ಮತ್ತು ನೆರೆಮನೆಯವರ ನಡುವೆ ಜಗಳವಾಗಿದ್ದು ತಿಳಿದುಬಂತು. ಬಳಿಕ ನಾವೇ ಎರಡೂ ಕುಟುಂಬದವರನ್ನು ಪೊಲೀಸ್ ಠಾಣೆಗೆ ಕರೆಸಿ ಮಾತಣಾಡಿದೆವು ಎಂದು ಪೊಲೀಸ್ ಆಯುಕ್ತ (ಪಶ್ಚಿಮ) ವಿಜಯ್ ಕುಮಾರ್ ಹೇಳಿದ್ದಾರೆ.

    ಎರಡು ಕುಂಟುಂಬಗಳ ವಿವಾದದ ಬಳಿಕ ಬಾಲಕಿಯನ್ನು ಮನೆಗೆ ಕಳಿಸುವ ಬದಲಿಗೆ ನಾರಿ ನಿಕೇತನಕ್ಕೆ ಕಳಿಸಲು ನಿರ್ಧರಿಸಿದ್ದೆವು. ಆದರೆ ಠಾಣೆಯ ಕೋಣೆಯೊಳಕ್ಕೆ ಹೋಗಿದ್ದ ಬಾಲಕಿ ರೂಮಿನ ಒಳಗಡೆಯಿಂದ ಲಾಕ್ ಹಾಕಿಕೊಂಡಿದ್ದಳು. ನಂತರ ನಾವು ಬಾಗಿಲನ್ನು ಮುರಿದು ನೋಡಿದಾಗ ಬಾಲಕಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಘಟನೆ ಕುರಿತು ವಿಚಾರಣೆ ಪ್ರಾರಂಭಿಸಿದ್ದು, ಪೋಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

  • ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

    ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

    ಪಾಟ್ನಾ: ವಾಚ್‍ಮ್ಯಾನ್ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯವನ್ನು ನೋಡಿದ ಅಂತಾ 8 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾಗಿ, 16 ವರ್ಷದ ಬಾಲಕಿಯೊಬ್ಬಳು ಒಪ್ಪಿಕೊಂಡಿದ್ದಾಳೆ.

    ಜುಲೈ 9 ರಂದು ಬಿಹಾರದ ಪಾಟ್ನಾ ಜಿಲ್ಲೆಯ ಹಾಸ್ಟೆಲ್‍ವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಅಭಿಮನ್ಯು ಕೊಲೆಯಾದ ಬಾಲಕ. ಪ್ರಕರಣದ ಕುರಿತು ಬಾಲಕಿಯನ್ನು ಈ ಮೊದಲು ವಿಚಾರಣೆಗೆ ಒಳಪಡಿಸಿದಾಗ, ಅಭಿಮನ್ಯು ತನ್ನ ಪುಸ್ತಕದ ಹಾಳೆ ಹರೆದಿದ್ದ, ಹೀಗಾಗಿ ಆತನನ್ನು ಜೋರಾಗಿ ದೂಡಿದಾಗ ಕೆಳಗೆ ಬಿದ್ದು ಮೃತಪಟ್ಟಿದ್ದ ಎಂದು ಕಥೆ ಹೇಳಿದ್ದಳು. ಪೊಲೀಸರು ಬಾಲಕಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ.

    ಅಂದು ನಡೆದಿದ್ದು ಏನು..?
    ಅಭಿಮನ್ಯು ಹಾಗೂ ಕೊಲೆ ಮಾಡಿದ ಬಾಲಕಿ ಪಾಟ್ನಾ ಸಮೀಪದ ಫೂತುಹಾದನ ಸೆಫಾಲಿ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು. ಅಭಿಮನ್ಯು ಎಲ್‍ಕೆಜಿ ಹಾಗೂ ಬಾಲಕಿ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಒಂದೇ ಹಾಸ್ಟೆಲ್ ಹಾಗೂ ಒಂದೇ ರೂಮ್‍ನಲ್ಲಿ ಮತ್ತಿಬ್ಬರು ಬಾಲಕಿಯರೊಂದಿಗೆ ಇದ್ದರು. ಬಾಲಕಿ ವಾಚ್‍ಮ್ಯಾನ್ ಪಪ್ಪು ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿಂದೆಯೂ ಪಪ್ಪು ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದನು.

    ಜುಲೈ 6 ರಂದು ರಾತ್ರಿ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಪಪ್ಪು ಒತ್ತಾಯಿಸಿದ್ದ. ಆದರೆ ಹಾಸ್ಟೆಲ್‍ನಲ್ಲಿ ಎಲ್ಲರೂ ಇದ್ದಾರೆ ನಾನು ಬರುವುದಿಲ್ಲ ಎಂದು ಬಾಲಕಿ ನಿರಾಕರಿಸಿದ್ದಕ್ಕೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದನು. ಹೀಗಾಗಿ ಶೌಚಾಲಯಕ್ಕೆ ಹೋದ ಬಾಲಕಿ ಪಪ್ಪು ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾಗ ರೂಮಿನಲ್ಲಿದ್ದ ಅಭಿಮನ್ಯು ನೋಡಿದ್ದನು.

    ತನ್ನ ಕೃತ್ಯವನ್ನು ಅಭಿಮನ್ಯು ಬಯಲು ಮಾಡುತ್ತಾನೆ ಎಂದು ಅರಿತ ಬಾಲಕಿ, ಜುಲೈ 8ರಂದು ಅಭಿಮನ್ಯುನ ಕುತ್ತಿಗೆಯನ್ನು 10 ನಿಮಿಷ ಗಟ್ಟಿಯಾಗಿ ಹಿಡಿದು ಕೊಲೆ ಮಾಡಿದ್ದಳು. ಅಲ್ಲದೆ ದೇಹವನ್ನು ಸಾಗಿಸಲು ಪ್ರಯತ್ನಿಸಿ ವಿಫಲವಾಗಿ, ಆತನ ಹಾಸಿಗೆಯಲ್ಲಿ ಮಲಗಿಸಿದ್ದಳು.

    ಪ್ರಕರಣ ಗೊತ್ತಾಗುತ್ತಿದ್ದಂತೆ ಹಾಸ್ಟೆಲ್‍ಗೆ ಬಂದ ಪೊಲೀಸರು ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಟ್ಟು ಕತೆ ಹೇಳಿದ್ದಳು. ಕೊಲೆಯಾದ ದಿನದಿಂದ ಪಪ್ಪು ಕಾಣೆಯಾಗಿದ್ದರಿಂದ ಪೊಲೀಸರು ಬಾಲಕಿ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ತೀವ್ರ ತನಿಖೆಯ ನಂತರ, ತಾನು ಪಪ್ಪು ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ಅಭಿಮನ್ಯು ನೋಡಿದ್ದನು. ಅವನು ಎಲ್ಲಿ ನನ್ನ ಪೋಷಕರಿಗೆ ಹಾಗೂ ಇತರರಿಗೆ ಹೇಳುತ್ತಾನೆ ಎಂದು ಹೆದರಿ ಕೊಲೆ ಮಾಡಿದ್ದಾಗಿ ಬಾಲಕಿ ಸತ್ಯ ಒಪ್ಪಿಕೊಂಡಿದ್ದಾಳೆ.

    ಬಾಲಕಿ ನಡತೆ ಸರಿಯಿಲ್ಲ. ಪಪ್ಪು ಜೊತೆಗೆ ಎಲ್ಲಂದರಲ್ಲಿ ಓಡಾಡುತ್ತಾಳೆ ಎಂದು ಅಭಿಮನ್ಯು ನಮ್ಮ ಬಳಿ ದೂರು ನೀಡಿದ್ದ. ಹೀಗಾಗಿ ಬಾಲಕಿ ಬಗ್ಗೆ ಎಚ್ಚರ ವಹಿಸುವಂತೆ ಶಾಲಾ ಆಡಳಿತ ಮಂಡಳಿಯ ತಿಳಿಸಿದ್ದೇವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೃತ ಅಭಿಮನ್ಯು ಚಿಕ್ಕಪ್ಪ ಸಂತೋಷ್ ಸಿಂಗ್ ಆರೋಪಿಸಿದ್ದಾರೆ.

  • ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

    ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

    ಚಂಡೀಗಢ: 2 ವರ್ಷದ ಪುಟ್ಟ ಬಾಲಕಿಯೊಬ್ಬಳು ಭಾರತದ ದೇಶದ ಎಲ್ಲಾ ರಾಜ್ಯದ ರಾಜಧಾನಿಗಳನ್ನು ಪಟಾ ಪಟಾಂತ ಹೇಳೋ ಮೂಲಕ ಸುದ್ದಿಯಾಗಿದ್ದಾಳೆ.

    ಹೌದು, ಹರ್ಯಾಣ ಪಂಚಕುಲಾದ ಅಮಾರ್ಯಾ ಗುಲಾಟಿ ಎಂಬ ಬಾಲಕಿ ಕೇವಲ 1 ನಿಮಿಷದಲ್ಲಿ ಎಲ್ಲಾ ರಾಜ್ಯದ ರಾಜಧಾನಿಗಳ ಹೆಸರನ್ನು ಹೇಳುವಲ್ಲಿ ಯಶಸ್ವಿಯಾಗುತ್ತಾಳೆ. ಸದ್ಯ ಈಕೆ ರಾಜಧಾನಿಗಳ ಹೆಸರನ್ನು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಕೆಯ ತೊದಲು ಮಾತುಗಳಿಂದ ಎಲ್ಲರೂ ಪ್ರಭಾವಿತರಾಗಿದ್ದಾರೆ.

    ತೊದಲು ಮಾತಾಡುತ್ತಿರುವ ಈ ಪುಟ್ಟ ಬಾಲಕಿ ರಾಜ್ಯದ ರಾಜಧಾನಿಗಳ ಹೆಸರನ್ನು ಅಸ್ಪಷ್ಟವಾಗಿಯೇ ಹೇಳುತ್ತಾಳೆ. ಈಕೆಯ ಈ ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರನ್ನು ಆಕರ್ಷಿಸಿದ್ದಾಳೆ. ಅಮಾರ್ಯಾ 7 ತಿಂಗಳ ಮಗುವಿದ್ದಾಗಲೇ ಆಕೆಯ ತಾಯಿ ರಾಜಧಾನಿಗಳು ಹಾಗೂ ಕೆಲವೊಂದು ಸ್ಥಳಗಳ ಹೆಸರನ್ನು ಹೇಳಿಕೊಡಲು ಆರಂಭಿಸಿದ್ದರು. ಹೀಗಾಗಿ ಈಕೆ ಇಂದು ಇಷ್ಟೊಂದು ಸುಲಲಿತವಾಗಿ ರಾಜಧಾನಿಗಳ ಹೆಸರನ್ನು ಹೇಳಬಲ್ಲವಳಾಗಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇಷ್ಟು ಮಾತ್ರವಲ್ಲದೇ ಈಕೆ ಈಗಾಗಲೇ ದೇಶದ ವಿವಿಧ ನಗರಗಳ ಹೆಸರನ್ನು ಹೇಳುವ ಸ್ಥರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಒಟ್ಟಿನಲ್ಲಿ ಸದ್ಯ ಅಮಾರ್ಯ ತನ್ನ ತೊದಲು ಮಾತುಗಳಿಂದ ಸಾಮಾಜಿಕ ಜಾಲತಾಣಿಗರ ಮನಸ್ಸನ್ನು ಗೆದ್ದಿದ್ದಾಳೆ.

  • ಅಮ್ಮನ ಜೊತೆ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಬಾಲಕಿ ನೀರು ಪಾಲು!

    ಅಮ್ಮನ ಜೊತೆ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಬಾಲಕಿ ನೀರು ಪಾಲು!

    ಶಿವಮೊಗ್ಗ: ಕಾಲುವೆಗೆ ಜಾರಿ ಬಿದ್ದು ಶಾಲಾ ಬಾಲಕಿ ಕೊಚ್ಚಿ ಹೋದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಕೆಂದಾಳಬೈಲಿನಲ್ಲಿ ನಡೆದಿದೆ.

    ಗುಡ್ಡೆಕೇರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಆಶಿಕಾ ಕೊಚ್ಚಿ ಹೋದ ಬಾಲಕಿ. ಮಳೆಯ ಕಾರಣದಿಂದ ಶಾಲೆಗೆ ರಜೆ ನೀಡಲಾಗಿತ್ತು. ಮನೆಗೆ ಹೋಗಿ ಶಾಲೆ ಬ್ಯಾಗ್ ಇಟ್ಟು ಆಮ್ಮನ ಜೊತೆ ಮನೆಗೆ ಸಮೀಪ ಇರುವ ದೊಡ್ಲಮನೆ ಹಳ್ಳ ದಾಟುವಾಗ ಬಿದ್ದಿದ್ದಾರೆ. ಘಟನೆಯಲ್ಲಿ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

    ಕಳೆದ ಎರಡು ದಿನ ಬಿದ್ದ ಮಳೆಯಿಂದಾಗಿ ಹಳ್ಳದಲ್ಲಿ ನೀರು ವೇಗವಾಗಿ ಹರಿಯುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿ, ಕೊಚ್ಚಿಹೋದ ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ನಿನ್ನೆ ಸಂಜೆಯವರೆಗೂ ಬಾಲಕಿ ಪತ್ತೆ ಆಗಿಲ್ಲ.

  • ಪತಿಯ ಘನಘೋರ ಕೃತ್ಯ ತಡೆದು 10ರ ಬಾಲಕಿಯ ಮಾನ ಉಳಿಸಿದ ಪತ್ನಿ!

    ಪತಿಯ ಘನಘೋರ ಕೃತ್ಯ ತಡೆದು 10ರ ಬಾಲಕಿಯ ಮಾನ ಉಳಿಸಿದ ಪತ್ನಿ!

    ಭೋಪಾಲ್: ಅಪ್ತಾಪ್ತ ಬಾಲಕಿಯ ಡ್ರೆಸ್ ಬಿಚ್ಚಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಪತಿಯ ಕೃತ್ಯವನ್ನು ಪತ್ನಿಯೇ ತಡೆದ ಘಟನೆಯೊಂದು ಮಧ್ಯಪ್ರದೇಶದ ಬಲಘಾಟ್ ಜಿಲ್ಲೆಯ ಬಿರ್ಸಾ ಎಂಬ ಪ್ರದೇಶದಲ್ಲಿ ನಡೆದಿದೆ.

    25 ವರ್ಷದ ಸಕು ನೇತಮ್ ಎಂಬಾತ 5ನೇ ತರಗತಿ ಓದುತ್ತಿರುವ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.

    ಏನಿದು ಘಟನೆ:
    ಶುಕ್ರವಾರ ಸಂಜೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಸಕು ಬಾಲಕಿಯ ಮನೆಗೆ ನುಗ್ಗಿದ್ದಾನೆ. ಅಲ್ಲದೇ ಆಕೆಯ ಡ್ರೆಸ್ ಬಿಚ್ಚಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಸಕು ಬಾಲಕಿ ಮನೆಗೆ ಹೋಗುತ್ತಿದ್ದಂತೆಯೇ ಪತ್ನಿ ಆತನನ್ನು ಹಿಂಬಾಲಿಸಿದ್ದಾರೆ. ಅಲ್ಲದೇ ಆತ ಬಾಲಕಿಯ ಡ್ರೆಸ್ ಬಿಚ್ಚುತ್ತಿರುವುದನ್ನು ಕಂಡ ಪತ್ನಿ ಜೋರಾಗಿ ಕಿರುಚಿಕೊಂಡಿದ್ದಾರೆ ಅಂತ ಬಿರ್ಸಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಿಲೇಶ್ ಪಾರ್ಟೆಟಿ ಹೇಳಿದ್ದಾರೆ.

    ಆರೋಪಿ ಬಾಲಕಿಯ ಕುಟುಂಬಕ್ಕೆ ಗೊತ್ತಿರುವವನೇ ಆಗಿದ್ದಾನೆ. ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಆತನಿಗಾಗಿ ಬಲೆ ಬೀಸಲಾಗಿದೆ ಅಂತ ಅವರು ತಿಳಿಸಿದ್ದಾರೆ.

    ಸದ್ಯ ಪ್ರಕರಣ ಸಂಬಂಧ ಬಾಲಕಿಯ ಕುಟುಂಬ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.