Tag: ಬಾಲಕಿ

  • ಬೆಂಗ್ಳೂರು ರಿಕ್ಷಾ ಚಾಲಕನಿಗೆ ಜೀವಾವಧಿ ಶಿಕ್ಷೆ!

    ಬೆಂಗ್ಳೂರು ರಿಕ್ಷಾ ಚಾಲಕನಿಗೆ ಜೀವಾವಧಿ ಶಿಕ್ಷೆ!

    ಬೆಂಗಳೂರು: 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಿಕ್ಷಾ ಚಾಲಕನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

    54 ವರ್ಷದ ಲಕ್ಷ್ಮಣ್ ಎಂ ಗೆ ಸಿಟಿ ಕೋರ್ಟ್ ಗುರುವಾರ ಈ ಶಿಕ್ಷೆ ವಿಧಿಸಿದೆ. ಈತ ದಕ್ಷಿಣ ಬೆಂಗಳೂರಿನ ಇಟ್ಟಮಾಡು ನಿವಾಸಿಯಾಗಿದ್ದು, 2015ರಲ್ಲಿ ಈ ಪ್ರಕರಣ ನಡೆದಿತ್ತು. ಶಿಕ್ಷೆಯ ಜೊತೆಗೆ ಲಕ್ಷ್ಮಣ್ ಗೆ ಕೋರ್ಟ್ 50,000ರೂ ದಂಡ ವಿಧಿಸಿದೆ.

    2015ರ ಡಿಸೆಂಬರ್ ತಿಂಗಳಿನಲ್ಲಿ ಬಾಲಕಿ ಆಂಟಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಲಕ್ಷ್ಮಣ್, ಬಾಲಕಿ ಬಳಿ ತಿಂಡಿ ಕೊಡಿಸುವುದಾಗಿ ಹೇಳಿ ಆಕೆಯನ್ನು ಬೆಡ್ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕೆ ಅಚ್ಚುಕಟ್ಟು ಠಾಣೆಯ ಪೊಲೀಸರು ಲಕ್ಷ್ಮಣ್ ನನ್ನು ಬಂಧಿಸಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶೆ ಎಂ ಲತಾ ಕುಮಾರು ಅವರು ಬಾಲಕಿಗೆ 3 ಲಕ್ಷ ಪರಿಹಾರ ಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಗಡಿಗೆ ತಿಂಡಿ ತರಲು ಹೋಗಿದ್ದ ಬಾಲಕಿಯ ಮೇಲೆ ಬೀದಿನಾಯಿಗಳ ದಾಳಿ

    ಅಂಗಡಿಗೆ ತಿಂಡಿ ತರಲು ಹೋಗಿದ್ದ ಬಾಲಕಿಯ ಮೇಲೆ ಬೀದಿನಾಯಿಗಳ ದಾಳಿ

    ಬೆಂಗಳೂರು: ಅಂಗಡಿಗೆ ಹೋಗಿದ್ದ ಒಂದನೇ ತರಗತಿ ಓದುತ್ತಿರುವ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಗಂಭೀರ ಗಾಯಗೊಳಿಸಿರುವಂತಹ ಘಟನೆ ಹೊಸಕೋಟೆ ಗೌತಮ್ ಕಾಲೋನಿಯಲ್ಲಿ ನಡೆದಿದೆ.

    ಮಾನಸ ದಾಳಿಗೆ ಒಳಗಾದ ಬಾಲಕಿ. ಹೊಸಕೋಟೆಯ ಓಂ ಶ್ರೀ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಮಾನಸ ಎಂದಿನಂತೆ ಮಂಗಳವಾರ ಬೆಳಗ್ಗೆ ಶಾಲೆಗೆ ಬಂದು ಪರೀಕ್ಷೆ ಮುಗಿಸಿ ಹತ್ತಿರದ ಅಂಗಡಿಗೆ ತಿಂಡಿ ತರಲು ಹೋಗಿದ್ದಾಳೆ. ಇದೇ ವೇಳೆ ಅಲ್ಲಿದಂತಹ ಬೀದಿ ನಾಯಿಗಳು ದಾಳಿ ನಡೆಸಿ ಮಾನಸಾಳ ತೊಡೆ ಸೇರಿದಂತೆ ದೇಹದ ನಾನಾ ಕಡೆ ಮನಬಂದಂತೆ ಕಚ್ಚಿವೆ. ಇದನ್ನು ಓದಿ: ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದ ಬಾಲಕನ ಸಾವು

    ಗಂಭೀರವಾಗಿ ಗಾಯಗೊಂಡ ಮಾನಸಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಈಗ ದಾಖಲು ಮಾಡಲಾಗಿದೆ. ಹೊಸಕೋಟೆ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಕಡಿವಾಣ ಹಾಕಿಲ್ಲ. ಇನ್ನಾದರೂ ಈ ಪ್ರಕರಣದಿಂದ ಎಚ್ಚೆತ್ತು ನಗರಸಭೆ ಬೀದಿನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಿದೆ. ಇದನ್ನು ಓದಿ: ಪುರಸಭೆ ಸಿಬ್ಬಂದಿಯನ್ನ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು

    ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಹಿಂದೆ ಶೌಚಾಲಯಕ್ಕೆ ಹೋಗಿದ್ದ ಬಾಲಕನ ಮೇಲೆ 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿ ಗಾಯಗೊಳಿಸಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಮದ್ವೆ ನಿಲ್ಲಿಸಲು ಸಹಾಯ ಮಾಡಿ: ಪೊಲೀಸ್ ಠಾಣೆಯ ಮೆಟ್ಟಿಲೇರಿದ 12ರ ಬಾಲೆ

    ನನ್ನ ಮದ್ವೆ ನಿಲ್ಲಿಸಲು ಸಹಾಯ ಮಾಡಿ: ಪೊಲೀಸ್ ಠಾಣೆಯ ಮೆಟ್ಟಿಲೇರಿದ 12ರ ಬಾಲೆ

    ಕೋಲ್ಕತ್ತ: 13 ವರ್ಷದ ಬಾಲಕಿಯೊಬ್ಬಳು ಶಾಲಾ ಉಡುಪಿನಲ್ಲೇ ನನ್ನ ಮದುವೆ ನಿಲ್ಲಿಸಲು ಸಹಾಯ ಮಾಡಿ, ನಾನಿನ್ನು ಓದಬೇಕು ಎಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

    ನನ್ನ ತಂದೆ ನನಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ನನಗೆ ಈ ಮದುವೆ ಇಷ್ಟವಿಲ್ಲ. ನಾನು ಓದಬೇಕು ಎಂದು ಓಸಿ ಸುಭಾಷ್ ಚಂದ್ರ ಘೋಷ್ ಅವರ ಬಳಿ 6ನೇ ತರಗತಿ ಓದುತ್ತಿದ್ದ ಬಾಲಕಿ ಕಣ್ಣೀರು ಹಾಕಿದ್ದಾಳೆ. ಬಾಲಕಿಯ ಅಕ್ರಂದನವನ್ನು ಆಲಿಸಿದ ಪೊಲೀಸರು, ಈಗ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಪೋಷಕರಿಗೆ ಬುದ್ಧಿವಾದ ಹೇಳಿಸಿ ಮದುವೆಯನ್ನು ನಿಲ್ಲಿಸಿದ್ದಾರೆ.

    ಏನಿದು ಘಟನೆ?
    ಬಾಲಕಿಯ ತಂದೆ ಮದುವೆ ಮಾಡಲು 6 ತಿಂಗಳಿಂದ ವರನನ್ನು ಹುಡುಕುತ್ತಿದ್ದರು. ಕೊನೆಗೆ ಪೋಷಕರು ಬಾಂಗರ್ ನಲ್ಲಿದ್ದ ಚಂದ್ರನೇಶ್ವರ ಹಳ್ಳಿಯಲ್ಲಿ ವರನನ್ನು ಹುಡುಕಿ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಬಾಲಕಿ ನಾನು ಮದುವೆ ಆಗುವುದಿಲ್ಲ ಎಂದು ಎಷ್ಟೇ ಹಠ ಮಾಡಿದರೂ ತಂದೆ ಮದುವೆ ಮಾಡಿಸಿಯೇ ಸಿದ್ಧ ಎಂದು ಹೇಳುತ್ತಿದ್ದ.

    ತನ್ನ ಕಷ್ಟವನ್ನು ಸ್ನೇಹಿತೆಯ ಜೊತೆ ಹೇಳಿ ಠಾಣೆಗೆ ಬರುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಆ ಸ್ನೇಹಿತೆ ಭಯಗೊಂಡು ನಾನು ಠಾಣೆಗೆ ಬರುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಶನಿವಾರ ಧೈರ್ಯದಿಂದ ತಾನೊಬ್ಬಳೇ ಹೋಗುವುದಾಗಿ ನಿರ್ಧರಿಸಿ 2.5 ಕಿ.ಮೀ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದು ಓಸಿ ಅವರನ್ನು ಭೇಟಿ ಮಾಡಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ದಯಮಾಡಿ ಮದುವೆಯನ್ನು ನಿಲ್ಲಿಸಿ ಎಂದು ಬೇಡಿಕೊಂಡಿದ್ದಾಳೆ.

    ಬಾಲಕಿಯ ಅಳಲನ್ನು ಕೇಳಿದ ಓಸಿ, ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ಬಾಲಕಿಯ ಮನೆಗೆ ಕಳುಹಿಸಿದ್ದಾರೆ. ಸಿಬ್ಬಂದಿ ಮನೆಗೆ ಬಂದು ಮದುವೆ ನಿಲ್ಲಿಸಲು ಹೇಳಿದಾಗ ಬಾಲಕಿಯ ತಂದೆ ಒಪ್ಪಿಕೊಳ್ಳುವುದಿಲ್ಲ. ಈ ವೇಳೆ ಬಾಲಕಿಯನ್ನು ಮದುವೆ ಮಾಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಂತರ ತಂದೆ 18 ವರ್ಷದವರೆಗೂ ನಾನು ಆಕೆಯನ್ನು ಮದುವೆ ಮಾಡಿ ಕೊಡುವುದಿಲ್ಲ ಎಂದು ಪತ್ರದಲ್ಲಿ ಬರೆದು ಸಹಿ ಹಾಕಿ ಕೊಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಜಗಳವಾಡಿ ಪತ್ನಿ ಮಲಗಿದ ನಂತ್ರ 13ರ ಮಗಳನ್ನು ಕರೆದುಕೊಂಡು ಹೋಗಿ ರೇಪ್ ಮಾಡ್ದ!

    ಜಗಳವಾಡಿ ಪತ್ನಿ ಮಲಗಿದ ನಂತ್ರ 13ರ ಮಗಳನ್ನು ಕರೆದುಕೊಂಡು ಹೋಗಿ ರೇಪ್ ಮಾಡ್ದ!

    ನೊಯ್ಡಾ: ಇಲ್ಲಿನ ಗೌತಮ್ ಬುದ್ಧ್ ನಗರದ ದಾದ್ರಿ ಪ್ರದೇಶದಲ್ಲಿ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಪತ್ನಿ ನೀಡಿದ ದೂರಿನಂತೆ ದಾದ್ರಿ ಪೊಲೀಸರು 40 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.

    ದಂಪತಿ ಮಧ್ಯೆ ಮದುವೆಯಾದಾಗಿಂದಲೂ ಸಣ್ಣ ಪುಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿತ್ತು. ಅಂತೆಯೇ ಶನಿವಾರ ರಾತ್ರಿಯೂ ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಹೀಗಾಗಿ ಪತ್ನಿ ನಿದ್ರೆಗೆ ಜಾರಿದ ಬಳಿಕ ಪತಿ ತಮ್ಮ 13 ವರ್ಷದ ಮಗಳನ್ನು ಕರೆದುಕೊಂಡು ಮಧ್ಯರಾತ್ರಿ ಹೊರಗೆ ಹೋಗಿದ್ದಾನೆ. ಅಲ್ಲದೇ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವಿಚಾರವನ್ನು ಸಂತ್ರಸ್ತೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಪತಿಯ ನೀಚ ಕೃತ್ಯದಿಂದ ಗಾಬರಿಗೊಂಡ ತಾಯಿ ಕೂಡಲೇ ದಾದ್ರಿ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಸದ್ಯ ಆರೋಪಿ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಅಂತ ಅವರು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರುದ್ಯೋಗದಿಂದ ಯುವಕರು ಅತ್ಯಾಚಾರ ಮಾಡ್ತಾರೆ – ಬಿಜೆಪಿ ಶಾಸಕಿ

    ನಿರುದ್ಯೋಗದಿಂದ ಯುವಕರು ಅತ್ಯಾಚಾರ ಮಾಡ್ತಾರೆ – ಬಿಜೆಪಿ ಶಾಸಕಿ

    ಚಂಡೀಗಢ: ನಿರುದ್ಯೋಗಿ ಯುವಕರು ಹತಾಶೆಗೆ ಒಳಗಾಗಿ ಸಾಮೂಹಿಕ ಅತ್ಯಾಚಾರಕ್ಕೆ ಮುಂದಾಗುತ್ತಾರೆ ಎಂದು ಹರ್ಯಾಣದ ಬಿಜೆಪಿ ಶಾಸಕಿ ಪ್ರೇಮಲತಾ ವಿವದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಿಬಿಎಸ್‍ಎ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ರಾಜ್ಯದ ಯುವತಿಯೊಬ್ಬಳನ್ನು ಅಪಹರಿಸಿ ಕೆಲ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣದ ಕುರಿತು ಪ್ರೇಮಲತಾ ಅವರು ಪ್ರತಿಕ್ರಿಯೆ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪ್ರೇಮಲತಾ ಅವರು ಕೇಂದ್ರ ಸಚಿವ ಬಿರೇಂದ್ರ ಸಿಂಗ್ ಪತ್ನಿಯಾಗಿದ್ದಾರೆ.

    ಪ್ರೇಮಲತಾ ಹೇಳಿದ್ದು ಏನು?
    ಯುವತಿಯನ್ನ ನೋಡುತ್ತಿದ್ದಂತೆ ಯುವಕರ ದೃಷ್ಟಿಕೋನ ಬದಲಾಗುತ್ತಿದೆ. ಸಮಾಜದಲ್ಲಿ ಬದಲಾವಣೆ ಕಾಣುತ್ತಿದ್ದು, ಉದ್ಯೋಗ ಇಲ್ಲದ ಕಾರಣ ಯುವಕರು ಮಾನಸಿನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರು ಭವಿಷ್ಯದ ಬಗ್ಗೆ ಯೋಚಿಸದೆ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಹೇಳಿದ ಅವರು, ಕೃತ್ಯ ಎಸಗಿದವರನ್ನು ತಕ್ಷಣವೇ ಗಲ್ಲಿಗೆ ಏರಿಸುವಂತೆ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ಅದಕ್ಕೆ ಕಾನೂನು ರಚನೆ ಆಗಲು ಸಮಯಬೇಕಾಗುತ್ತದೆ ಎಂದು ಪ್ರೇಮಲತಾ ಹೇಳಿದ್ದಾರೆ. ಇದನ್ನು ಓದಿ: ಗ್ಯಾಂಗ್ ರೇಪ್- ಪ್ರಮುಖ ಆರೋಪಿ ಓರ್ವ ರಕ್ಷಣಾ ಸಿಬ್ಬಂದಿ

    ಏನಿದು ಪ್ರಕರಣ?:
    ಹರಿಯಾಣದ ಮಹೇಂದ್ರಗಢ ಎಂಬಲ್ಲಿ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ, ರಾಷ್ಟ್ರಪತಿಯವರಿಂದ ಬಹುಮಾನ ಸ್ವೀಕರಿಸಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಬಳಿಕ ಅತ್ಯಾಚಾರವೆಸಗಿರುವ ಘಟನೆ ಬುಧವಾರ ನಡೆದಿತ್ತು. ಸಂತ್ರಸ್ತೆ 12ನೇ ತರಗತಿಯಲ್ಲಿ ಓದುತ್ತಿದ್ದಳು. ಈಕೆ ರಿವಾರಿಯಲ್ಲಿಯಲ್ಲಿರೋ ತನ್ನ ಗ್ರಾಮಕ್ಕೆ ಕೋಚಿಂಗ್ ಗೆಂದು ತೆರಳುತ್ತಿದ್ದಳು. ಈ ವೇಳೆ 3 ಮಂದಿ ಯುವಕರ ಗುಂಪೊಂದು ಕಾರಿನಲ್ಲಿ ಬಂದು ಆಕೆಯನ್ನು ಅಡ್ಡಹಾಕಿತ್ತು. ಅಲ್ಲದೇ ಬಳಿಕ ವಿದ್ಯಾರ್ಥಿನಿಯನ್ನು ತಮ್ಮ ಕಾರಿನೊಳಗೆ ಎಳೆದು ಹಾಕಿದ್ದಾರೆ. ಹೀಗೆ ಅಪಹರಣ ಮಾಡಿದ ಬಳಿಕ ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು ಅಂತ ವರದಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10ರ ಬಾಲೆಯ ಮೇಲೆ ಅತ್ಯಾಚಾರ ಎಸಗಿ, ರಸ್ತೆ ಬದಿ ಎಸೆದು ಹೋದ ದುಷ್ಕರ್ಮಿಗಳು!

    10ರ ಬಾಲೆಯ ಮೇಲೆ ಅತ್ಯಾಚಾರ ಎಸಗಿ, ರಸ್ತೆ ಬದಿ ಎಸೆದು ಹೋದ ದುಷ್ಕರ್ಮಿಗಳು!

    ನವದೆಹಲಿ: 10 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ರಸ್ತೆ ಬದಿ ಎಸೆದು ಹೋಗಿರುವ ಅಮಾನವೀಯ ಘಟನೆ ದೆಹಲಿಯ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಗುರುವಾರ ರಾತ್ರಿ 10 ಗಂಟೆಗೆ ಸುಮಾರು ಮಯೂರ್ ವಿಹಾರದ ರಸ್ತೆ ಬದಿ ಬಾಲಕಿಯೊಬ್ಬಳು ಪ್ರಜ್ಞಾಹೀನವಾಗಿ ಬಿದ್ದಿದ್ದಳು. ಇದನ್ನು ನೋಡಿದ್ದ ಸ್ಥಳೀಯರೊಬ್ಬರು ಫೋನ್ ಕರೆ ಮಾಹಿತಿ ನೀಡಿದ್ದಾರೆ.

    ಘಟನಾ ಸ್ಥಳಕ್ಕೆ ಬಂದ ನ್ಯೂ ಅಶೋಕ್ ನಗರ ಠಾಣೆ ಪೊಲೀಸರು, ಬಾಲಕಿಯನ್ನು ಲಾಲ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಪಾಸಣೆ ಬಳಿಕ ವೈದ್ಯರು ತಿಳಿಸಿದ್ದಾರೆ.

    ಬಾಲಕಿಯ ಕೊಲೆ ಯತ್ನಿಸಿದ್ದ ದುಷ್ಕರ್ಮಿಗಳು, ಕಣ್ಣು ಹಾಗೂ ಮುಖದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಪೂರ್ವ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿದ್ದಾರೆ.

    ಈ ಕುರಿತು ಪೊಲೀಸ್ ತನಿಖೆ ಆರಂಭಿಸಿದ್ದು, ಅಶೋಕ ನಗರ ಪೊಲೀಸ್ ಠಾಣೆ ಸಮೀಪದ ಮದ್ಯದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕನ ನೀಚ ಕೃತ್ಯ

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕನ ನೀಚ ಕೃತ್ಯ

    ಭುವನೇಶ್ವರ್: 6 ವರ್ಷದ ಬಾಲಕಿಯನ್ನು ಆತನ 13 ವರ್ಷದ ಸಂಬಂಧಿಕನೊಬ್ಬ ಅತ್ಯಾಚಾರವೆಸಗಿದ ಘಟನೆ ಬುಧವಾರ ಓಡಿಶಾದ ಭುವನೇಶ್ವರ್ ನಲ್ಲಿ ನಡೆದಿದೆ.

    ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿದೆ. ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದಾಗ ಆಕೆಯ ಪೋಷಕರಿಗೆ ತನ್ನ ಮಗಳು ಅತ್ಯಾಚಾರಕ್ಕೆ ಒಳಗಾಗಿರುವ ವಿಷಯ ತಿಳಿದು ಬರುತ್ತದೆ.

    ಆಗ ಬಾಲಕಿಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ನಂತರ ಆರೋಗ್ಯ ತೀರ ಹದಗೆಟ್ಟಿದ್ದಾಗ ಬಾಲಕಿಯನ್ನು ಕತಕ್‍ನ ಎಸ್‍ಸಿಬಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿ ವಿರುದ್ಧ ಸುಮೋಟೋ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದೇವೆ. ಆರೋಪಿ ಬಾಲಕಿಯ ಸಂಬಂಧಿಕನಾಗಿದ್ದು, ಆತ ಕೂಡ ಅಪ್ರಾಪ್ತನಾಗಿದ್ದಾನೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಕಮಿಷನರ್ ಸತ್ಯಜೀತ್ ಮೋಹ್ನಾಟಿ ಹೇಳಿದ್ದಾರೆ.

    ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಆಕೆಯ ಸ್ಥಿತಿ ಆರೋಗ್ಯ ಹದಗೆಟ್ಟಿತ್ತು. ಆದರೆ ಈಗ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಎಸ್‍ಸಿಬಿ ಮೆಡಿಕಲ್ ಕಾಲೇಜ್ ಆಸ್ಪೆತ್ರೆಯ ಡಾ. ಭುಬನಂದ ಮಹರಾಣಾ ತಿಳಿಸಿದ್ದಾರೆ.

    ಸದ್ಯ ಬಾಲಕಿ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಲೂ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಗೆ ಉಚಿತವಾಗಿ ಚಿಕಿತ್ಸೆ ಮಾಡಲಾಗುತ್ತಿದೆ. ಅಲ್ಲದೇ ಆಕೆಯ ಚಿಕಿತ್ಸೆಗೆ ಯಾವುದೇ ಹಣವನ್ನು ಪಡೆಯುತ್ತಿಲ್ಲ. ಆಕೆಯ ಚಿಕಿತ್ಸೆಗಾಗಿ ಸ್ಪೆಷಲಿಸ್ಟ್ ತಂಡ ನಿರಂತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಡಾ. ಮಹಾರಾಣಾ ಹೇಳಿದ್ದಾರೆ.

    ಸದ್ಯ ಆರೋಪಿ ಬಾಲಕನ ವಿರುದ್ಧ ಐಪಿಸಿ ಸೆಕ್ಷೆನ್ ಹಾಗೂ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಯಚೂರಿನ ಬಾಲಕಿಯ ಬಾಳಲ್ಲಿ ಬೆಳಕು ತಂದ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರೆಟ್ ಲೀ

    ರಾಯಚೂರಿನ ಬಾಲಕಿಯ ಬಾಳಲ್ಲಿ ಬೆಳಕು ತಂದ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರೆಟ್ ಲೀ

    ರಾಯಚೂರು: ಆಸ್ಟ್ರೇಲಿಯಾ ಅಲ್‍ರೌಂಡರ್ ಕ್ರಿಕೆಟ್ ಆಟಗಾರ ಬ್ರೆಟ್ ಲೀ ರಾಯಚೂರಿನ ಬಾಲಕಿಗೆ ಹಣದ ಸಹಾಯ ಮಾಡಿ ಆಕೆಯ ಬಾಳಿಗೆ ಬೆಳಕು ನೀಡಿದ್ದಾರೆ.

    ಸಾಕ್ಷಿ ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಬಾಲನಗೌಡ ಕವಿತಾ ದಂಪತಿಯ ಪುತ್ರಿಯಾಗಿದ್ದು, ಈಕೆಗೆ ಒಂದು ವರ್ಷದವಳಿದ್ದಾಗಲೇ ಕಿವಿ ಕೇಳಿಸಲ್ಲ ಹಾಗೂ ಮಾತು ಬರಲ್ಲ ಎನ್ನುವುದು ಪೋಷಕರಿಗೆ ಸ್ಪಷ್ಟವಾಗಿತ್ತು. ಆದರೆ ಏನಾದರೂ ಪ್ರಯತ್ನ ಮಾಡಿ ಮಗಳಿಗೆ ಮಾತು ಬರುವ ಹಾಗೇ ಮಾಡಬೇಕು ಅಂತ ಬಾಲನಗೌಡ ಇನ್ನಿಲ್ಲದ ಪ್ರಯತ್ನಗಳನ್ನ ಮಾಡಿದ್ದರು.

    ಮೂರು ವರ್ಷಗಳ ಸತತ ಪ್ರಯತ್ನದಿಂದ ನಾಲ್ಕು ವರ್ಷದ ಸಾಕ್ಷಿ ಈಗ ಮಾತನಾಡುತ್ತಿದ್ದಾಳೆ. ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾಳೆ. ಸಾಕ್ಷಿಯ ಇಂದಿನ ಈ ಖುಷಿಗೆ ಆಸ್ಟ್ರೇಲಿಯನ್ ಕ್ರಿಕೆಟಿಗ ಬ್ರೆಟ್ ಲೀ ಕಾರಣವಾಗಿದ್ದಾರೆ. ಸಾಕ್ಷಿ ಚಿಕಿತ್ಸೆಗೆ ಬ್ರೆಟ್ ಲೀ 16 ಲಕ್ಷ ರೂ. ಸಹಾಯ ಮಾಡಿದ್ದಾರೆ.

    ಮಗಳಿಗೆ ಮಾತು ಬರುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಬಾಲನಗೌಡ ಸಿಂಧನೂರು, ರಾಯಚೂರಿನ ಆಸ್ಪತ್ರೆಗಳಲ್ಲಿ ತೋರಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮೈಸೂರಿನ ಮಾನಸ ಗಂಗೋತ್ರಿ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಅಲ್ಲಿ ಹಿಯರಿಂಗ್ ಏಡ್ ಅಳವಡಿಸಿದರಾದರೂ ಶೇಕಡಾ 85ರಷ್ಟು ಕಿವುಡುತನ ಹಾಗೇ ಉಳಿದಿತ್ತು.

    ಕೊನೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ನೀಡಿದ ಚಿಕಿತ್ಸೆ ಫಲಕಾರಿಯಾಗಿದೆ. ಯೋಜನೆಯಡಿ ಶಿಫಾರಸ್ಸು ಮಾಡಿದ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಿರುವ ಬ್ರೆಟ್ ಲೀ ಶಸ್ತ್ರ ಚಿಕಿತ್ಸೆಯ ಖರ್ಚನ್ನು ಸಂಪೂರ್ಣ ಭರಿಸಿ ಸಾಕ್ಷಿಗೆ ಮಾತು ಕೊಟ್ಟಿದ್ದಾರೆ. ಮೊದಲೆಲ್ಲಾ ಕೇವಲ ಕೈಸನ್ನೆ ಮಾಡುತ್ತಿದ್ದ ಸಾಕ್ಷಿ ಈಗ ಹರಳು ಹುರಿದಂತೆ ಮಾತನಾಡುತ್ತಿದ್ದಾಳೆ.

    ಕಳೆದ ವರ್ಷವೇ ಶಸ್ತ್ರ ಚಿಕಿತ್ಸೆಯಾಗಿದ್ದು ಸಾಕ್ಷಿಗೆ ಮೆದುಳಿನಲ್ಲೊಂದು ಯಂತ್ರವನ್ನು ಅಳವಡಿಸಲಾಗಿದೆ. ಹೊರಗಡೆ ಒಂದು ಯಂತ್ರ ಜೋಡಿಸಲಾಗಿದೆ. ಇತ್ತೀಚೆಗೆ ಸಾಕ್ಷಿಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಬ್ರೆಟ್ ಲೀ ಅವಳ ಮಾತುಗಳನ್ನು ಕೇಳಿ ಖುಷಿ ವ್ಯಕ್ತಪಡಿಸಿದ್ದಾರೆ. ಮಗಳ ಸ್ಥಿತಿ ಕಂಡು ಮರಗುತ್ತಿದ್ದ ಪೋಷಕರು ಈಗ ಖುಷಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4ನೇ ಅಂತಸ್ತಿನ ಕಿಟಕಿಯಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ್ರು ಸೂಪರ್ ಹೀರೋಗಳು

    4ನೇ ಅಂತಸ್ತಿನ ಕಿಟಕಿಯಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ್ರು ಸೂಪರ್ ಹೀರೋಗಳು

    ಬೀಜಿಂಗ್: ಕಟ್ಟಡದ ನಾಲ್ಕನೇ ಅಂತಸ್ತಿನ ಫ್ಲ್ಯಾಟ್ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಇಬ್ಬರು ಯುವಕರು ರಕ್ಷಣೆ ಮಾಡಿದ್ದಾರೆ. ಬಾಲಕಿಯನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಯುವಕರನ್ನು ‘ಸೂಪರ್ ಹೀರೋ’ ಅಂತಾ ಕೊಂಡಾಡುತ್ತಿದ್ದಾರೆ.

    ಚೀನಾದ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಸು ಎಂಬಲ್ಲಿ ಸೆಪ್ಟೆಂಬರ್ 7ರಂದು ಈ ಘಟನೆ ನಡೆದಿದೆ. ಅಪಾಯದಲ್ಲಿ ಸಿಲುಕಿದ್ದ ಬಾಲಕಿಯನ್ನು ನೋಡಿದ ಯುವಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಆಕೆಯನ್ನು ರಕ್ಷಿಸಿದ್ದಾರೆ. ಒಂದು ವೇಳೆ ಯುವಕರು ಕೊಂಚ ಆಯತಪ್ಪಿದ್ರೂ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು.

    ಏನದು ವಿಡಿಯೋ?
    ಐದು ಅಂತಸ್ತಿನ ಕಟ್ಟಡದಲ್ಲಿ ಬಾಲಕಿ 4ನೇ ಫ್ಲೋರ್ ಮನೆಯ ಕಿಟಕಿಯಿಂದ ಹೊರ ಬಿದ್ದು ಎಸಿಯ ಕಂಡೆನ್ಸರ್ ಯೂನಿಟ್ (AC Condenser Unit) ಮೇಲೆ ನೇತಾಡುತ್ತಿದ್ದಳು. ಸ್ಥಳದಲ್ಲಿ ಜನರು ಚೀರಾಡುತ್ತಿದ್ದಂತೆ ಯುವಕರಿಬ್ಬರು ಹಾಗೇ ನೇರವಾಗಿ ಏಣಿಯನ್ನು ಸಹ ಬಳಸದೇ ನೋಡ ನೋಡುತ್ತಿದ್ದಂತೆ ಕಟ್ಟಡವನ್ನು ಹತ್ತಿದ್ದಾರೆ. ಬಾಲಕಿಯ ಬಳಿ ತಲುಪಿದ ಇಬ್ಬರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.

    ಈ ಘಟನೆ ನಡೆದಾಗ ಬಾಲಕಿ ಮನೆಯಲ್ಲಿ ಯಾರು ಇರಲಿಲ್ಲ. ಆಕೆ ಮಲಗಿದ್ದರಿಂದ ಬಾಗಿಲು ಹಾಕಿಕೊಂಡು ಪೋಷಕರು ಹೊರ ಹೋಗಿದ್ದರು. ನಿದ್ದೆಯಿಂದ ಎಚ್ಚರಗೊಂಡ ಬಾಲಕಿ ಮಂಪರಿನಲ್ಲಿ ಕಿಟಕಿ ಬಳಿ ಬಂದಿದ್ದರಿಂದ ಆಯತಪ್ಪಿ ಬಿದ್ದಿದ್ದಾಳೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

    ನನ್ನ ಮಗಳ ಜೀವವನ್ನು ಉಳಿಸಿದ ಇಬ್ಬರು ಸೂಪರ್ ಹೀರೋಗಳಿಗೆ ನಾನು ಚಿರಋಣಿ ಆಗಿದ್ದೇನೆ. ಯುವಕರು ತಮ್ಮ ಜೀವವನ್ನ ಪಣಕ್ಕಿಟ್ಟು ನನ್ನ ಮಗಳನ್ನು ರಕ್ಷಿಸಿದ್ದಾರೆ. ಇನ್ನು ಮುಂದೆ ಮಗಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಎಲ್ಲಿಯೂ ಹೋಗಲಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 9ರ ಬಾಲಕಿ ಮೇಲೆ ಮಲ ಸಹೋದರ, ಸ್ನೇಹಿತರಿಂದ ಗ್ಯಾಂಗ್‍ರೇಪ್, ಕೊಲೆ

    9ರ ಬಾಲಕಿ ಮೇಲೆ ಮಲ ಸಹೋದರ, ಸ್ನೇಹಿತರಿಂದ ಗ್ಯಾಂಗ್‍ರೇಪ್, ಕೊಲೆ

    ಶ್ರೀನಗರ: 9 ವರ್ಷದ ಬಾಲಕಿ ಮೇಲೆ ಮಲ ಸಹೋದರ ಸೇರಿದಂತೆ ಆತನ ಸ್ನೇಹಿತರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ ತಾಯಿ ಮತ್ತು ಮಲ ಸಹೋದರ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಅಗಸ್ಟ್ 23 ರಂದು ಉರಿ ನಿವಾಸಿಯಾಗಿರುವ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಭಾನುವಾರ ಬಾಲಕಿಯ ಮೃತದೇಹ ಹತ್ತಿರದ ಅರಣ್ಯ ಪ್ರದೇಶದ ಪತ್ತೆಯಾಗಿದ್ದು, ಈ ಸಂಬಂಧ ಈ ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ಮಿರ್ ಹೇಳಿದ್ದಾರೆ.

    ಎಸ್‍ಐಟಿ ಈ ಕುರಿತು ಮಲ ತಾಯಿಯನ್ನು ನಿರಂತರ ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿರುವ ವಿಚಾರ ಬಳಕಿಗೆ ಬಂದಿದೆ.

    ಪತಿಯ ಎರಡನೆಯ ಹೆಂಡತಿ ಮತ್ತು ಆಕೆಯ ಮಕ್ಕಳ ಮೇಲೆ ಮಲತಾಯಿ ದ್ವೇಷ ಹೊಂದಿದ್ದಳು. ಹರಿತವಾದ ಚಾಕುವನ್ನು ತಯಾರಿ ಮಾಡಿ ಬಾಲಕಿಯನ್ನು ಹತ್ತಿರವಾದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಲ ತಾಯಿಯ 14 ವರ್ಷದ ಮಗ ಹಾಗೂ ಆತನ ಸ್ನೇಹಿತರು ಸೇರಿ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ಬಾಲಕಿಯನ್ನು ಕಟ್ಟಿ ಹಾಕಿ ಸಹೋದರ ಕೊಡಲಿಯಿಂದ ತಲೆ ಹೊಡೆದಿದ್ದಾನೆ. ಮತ್ತೊಬ್ಬ ಆರೋಪಿ ಬಾಲಕಿಯ ಕಣ್ಣುಗಳ ಮೇಲೆ ಚಾಕುವಿನಿಂದ ಇರಿದಿದ್ದಾನೆ. ನಂತರ ಮೃತ ದೇಹವನ್ನು ಪೊದೆಯೊಳಗೆ ಎಸೆದು ಕೊಂಬೆಗಳಿಂದ ಮರೆಮಾಡಿದ್ದಾರೆ. ಈ ಎಲ್ಲ ಕೃತ್ಯ ನಡೆಯುವಾಗ ಸ್ಥಳದಲ್ಲೇ ಮಲತಾಯಿ ನಿಂತಿದ್ದಳು ಎಂದು ಪೊಲೀಸರು ತಿಳಿಸಿದರು.

    ಕೃತ್ಯಕ್ಕೆ ಬಳಸಿದ್ದ ಕೊಡಲಿ ಮತ್ತು ಚಾಕುವನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv