Tag: ಬಾಲಕಿ

  • ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ!

    ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ!

    ಪಾಟ್ನಾ: ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಸಾಮಾಹಿಕ ಅತ್ಯಾಚಾರ ನಡೆದಿದ್ದು, ಈ ವೇಳೆ ಕಾಮುಕರಿಂದ ತಪ್ಪಿಸಿಕೊಳ್ಳಲು ಬಾಲಕಿ ಕಟ್ಟಡದಿಂದ ಜಿಗಿದ್ದಾಳೆ. ಪರಿಣಾಮ ಹೈ ವೋಲ್ಟೇಜ್ ವಿದ್ಯುತ್ ತಂತಿಗಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾಳೆ.

    ಈ ಘಟನೆ ಬಿಹಾರದ ಲಖಿಸರಯಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿತ್ರಂಜನ್ ಎಂಬಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಳಿಕ ಆಕೆ ಕಾಮುಕರಿಂದ ತಪ್ಪಿಸಿಕೊಳ್ಳಲು ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದಿದ್ದಾಳೆ. ಪರಿಣಾಮ ಹೈ ವೋಲ್ಟೇಜ್ ತಂತಿ ಮೇಲೆ ಬಿದ್ದಿದ್ದು, ಸದ್ಯ ಬಾಲಕಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಅಂತ ಪೊಲೀಸ್ ಆಯುಕ್ತ ಕಾರ್ತಿಕ್ ಶರ್ಮಾ ತಿಳಿಸಿದ್ದಾರೆ.

    ಗುರುವಾರ ಬಾಲಕಿ ತನ್ನ ಸಹಪಾಠಿ ಜೊತೆ ದುರ್ಗಾ ನವಮಿ ಹಬ್ಬಕ್ಕೆ ತೆರಳಿದ್ದಾಳೆ. ಆದ್ರೆ ಆಕೆಗೆ ಕಟ್ಟಡದ 3ನೇ ಮಹಡಿಗೆ ಹೇಗೆ ಹೋಗಿರುವುದಾಗಿ ತಿಳಿದಿಲ್ಲ ಅಂತ ಶರ್ಮಾ ಹೇಳಿದ್ದಾರೆ.

    ಕಾಮುಕರು ಬಾಲಕಿಗೆ ಒತ್ತಾಯಪೂರ್ವಕವಾಗಿ ಮತ್ತು ಬರುವ ಪಾನೀಯವನ್ನು ಕುಡಿಸಿದ್ದಾರೆ. ಪರಿಣಾಮ ಆಕೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಸ್ವಲ್ಪ ಸಮಯದ ಬಳಿಕ ಆಕೆಗೆ ಪ್ರಜ್ಞೆ ಬಂದಿದ್ದು, ಆಕೆ ಅರೆ ನಗ್ನವಾಗಿದ್ದಳು. ಇದರಿಂದ ಗಾಬರಿಗೊಂಡು ಮೂರನೇ ಮಹಡಿಯಿಂದ ಜಿಗಿದಿದ್ದಾಳೆ ಅಂತ ಅವರು ತಿಳಿಸಿದ್ದಾರೆ.

    ಘಟನೆಯಿಂದ ಬಾಲಕಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಬಾಲಕಿ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನಲ್ಲಿ ಸುಧಾರಣೆಯಾದ ಬಳಿಕ ಆಕೆಯ ಬಳಿಯಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಅಂತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಗೆಳತಿ, ಕಟ್ಟಡದ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಕಟ್ಟಡದಲ್ಲಿದ್ದ ಬಾಲಕಿಯ ಬಟ್ಟೆ, ಆಲ್ಕೋಹಾಲ್ ಬಾಟಲಿ ಹಾಗೂ ಗ್ಲಾಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನೆಗಳು ನಡೆದವು. 100ಕ್ಕೂ ಹೆಚ್ಚು ಮಂದಿ ರಸ್ತೆ ತಡೆದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 7ರ ಬಾಲೆಯನ್ನು ಅಪಹರಿಸಿ ಅತ್ಯಾಚಾರಗೈದ 38ರ ಕಾಮುಕ!

    7ರ ಬಾಲೆಯನ್ನು ಅಪಹರಿಸಿ ಅತ್ಯಾಚಾರಗೈದ 38ರ ಕಾಮುಕ!

    ಚಂಡೀಗಢ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಏಳು ವರ್ಷದ ಅಪ್ರಾಪ್ತ ಬಾಲಕಿಯನ್ನು 39 ವರ್ಷದ ಕಾಮುಕ ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಹರ್ಯಾಣದ ರೆವಾರಿಯಲ್ಲಿ ನಡೆದಿದೆ.

    ಈ ಘಟನೆಯು ಮಂಗಳವಾರ ನಡೆದಿದ್ದು, ಬಾಲಕಿಯನ್ನು ಅಪಹರಿಸಿ ಹತ್ತಿರದ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಬಾಲಕಿ ಮನೆಗೆ ಹಿಂತಿರುಗಿದ್ದಾಳೆ. ಬಾಲಕಿಗೆ ರಕ್ತಸ್ರಾವವಾಗಿದ್ದ ಕಾರಣ ತಾಯಿಗೆ ತಿಳಿಸಿದ್ದಾಳೆ. ಬಳಿಕ ಕಾರ್ಮಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಂಗಳವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಈ ಕುರಿತು ಮತ್ತಷ್ಟು ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಪೊಲೀಸ್ ಉಪ ಅಧೀಕ್ಷಕ (ಡಿಎಸ್ಪಿ) ಸತ್ಪಾಲ್ ಕುಮಾರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಈ ಹಿಂದೆ ಅದೇ ಜಿಲ್ಲೆಯ ಕೋಸ್ಲಿ ಪ್ರದೇಶದ 19 ವರ್ಷದ ಸಿಬಿಎಸ್‍ಇ ಮೇಲಾಧಿಕಾರಿ ಮಹೇಂದ್ರಗಢದ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್ ನಡೆದ ಒಂದೇ ತಿಂಗಳಿಗೆ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಪತ್ರಿಕೆಯಲ್ಲಿ ಬಾಲಕಿ ಬರೆದಳು ಎಲ್ಲರೂ ಬೆಚ್ಚಿಬೀಳಿಸುವ ಸತ್ಯ

    ಉತ್ತರ ಪತ್ರಿಕೆಯಲ್ಲಿ ಬಾಲಕಿ ಬರೆದಳು ಎಲ್ಲರೂ ಬೆಚ್ಚಿಬೀಳಿಸುವ ಸತ್ಯ

    ಗುರುಗ್ರಾಮ: ಅಪ್ರಾಪ್ತೆಯೊಬ್ಬಳು ತನಗಾಗಿರುವ ಅತ್ಯಾಚಾರದ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ಎಲ್ಲರನ್ನು ಬೆಚ್ಚಿಬೀಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ

    15 ವರ್ಷದ ಅಪ್ರಾಪ್ತೆಯೊಬ್ಬಳು ತಾನೂ ಅತ್ಯಾಚಾರಕ್ಕೆ ಒಳಗಾಗಿರುವ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಳು. ಸದ್ಯ ಬಾಲಕಿಗೆ ಆದ ಅನ್ಯಾಯ ಈಗ ಬೆಳಕಿಗೆ ಬಂದಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

    ನಾನು ಈಗ 10ನೇ ತರಗತಿ ಓದುತ್ತಿದ್ದೇನೆ. ನನ್ನ ಅಪ್ರಾಪ್ತ ಸಹೋದರ ಹಾಗೂ 23 ವರ್ಷದ ಬಾದಶಾಪುರ ಯುವಕನೊಬ್ಬ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

    ಅಕ್ಟೋಬರ್ 1ರಂದು ಬಾಲಕಿ ತನ್ನ ಮೇಲೆ ಆಗಿರುವ ಅತ್ಯಾಚಾರದ ಬಗ್ಗೆ ಬರೆದಿದ್ದಳು. ಆಗ ಶಾಲೆಯ ಸಿಬ್ಬಂದಿಯವರು ಬಾಲಕಿಯ ಉತ್ತರ ಪತ್ರಿಕೆ ನೋಡಿ ಆಕೆಗೆ ಆಗಿರುವ ಅನ್ಯಾಯವನ್ನು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಪೊಲೀಸರು ಪೋಸ್ಕೋ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಪ್ರಾಪ್ತ ಬಾಲಕ ಹಾಗೂ ಯುವಕ ಈ ಕೃತ್ಯವೆಸಗಿದ್ದು, ಇಬ್ಬರಲ್ಲಿ ಒಬ್ಬ ಬಾಲಕಿಗೆ ಸಹೋದರ ಆಗಬೇಕು. ಬಾಲಕಿಯ ತಾಯಿ ಹಾಗೂ ಆರೋಪಿಯ ತಾಯಿ ಸಹೋದರಿಯರು ಎಂದು ತಿಳಿದು ಬಂದಿದೆ. ಸದ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಎಸಿಪಿ ಶಕುಂತಲಾ ಯಾದವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಗಳೂರಿನಲ್ಲಿ ಅವನಲ್ಲ, ಅವಳು ಪ್ರಕರಣ ಪತ್ತೆ

    ಜಗಳೂರಿನಲ್ಲಿ ಅವನಲ್ಲ, ಅವಳು ಪ್ರಕರಣ ಪತ್ತೆ

    ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಅವನಲ್ಲ, ಅವಳು ಪ್ರಕರಣವೊಂದು ಪತ್ತೆಯಾಗಿದೆ. ಹುಡುಗನ ವೇಷ ಹಾಕಿಕೊಂಡು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಾಲಕಿ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹುಡುಗರಂತೆ ಪ್ಯಾಂಟ್, ಶರ್ಟ್ ಮತ್ತು ಶೂ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದು, ಕ್ಷಣಾರ್ಧದಲ್ಲಿ ಜೇಬಿಗೆ ಕತ್ತರಿ ಹಾಕಿ ಹಣ ಎಗರಿಸುತ್ತಿದ್ದಳು. ಅಪ್ರಾಪ್ತ ಬಾಲಕಿಯ ಕೈಚಳಕ ಕಂಡು ಸಾರ್ವಜನಿಕರು ಶಾಕ್ ಆಗಿದ್ದರು. ಬಾಲಕಿ ಕೈಯಲ್ಲಿ ಕವರ್ ಹಿಡಿದುಕೊಂಡು ಜೇಬಿಗೆ ಕತ್ತರಿ ಹಾಕುತ್ತಿದ್ದಳು.

    ಬಾಲಕಿ ಮಾತ್ರವಲ್ಲದೇ ನಾಲ್ಕೈದು ಅಪ್ರಾಪ್ತರು, ಒಂದು ತಂಡ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಬಾಲಕನೊಬ್ಬನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಗುರುವಾರ ಜಗಳೂರು ಪಟ್ಟಣದ ಇಶಾನ್ ಬೇಕರಿಯಲ್ಲಿ ಬಾಲಕಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳತನಕ್ಕೆ ಹೊಂಚು ಹಾಕಿ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಹಿಡಿದಿದ್ದು, ಬಳಿಕ ಅಪ್ರಾಪ್ತ ಬಾಲಕಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರು ಬಾಲಕಿಯನ್ನು ವಿಚಾರಣೆ ಮಾಡುವ ವೇಳೆ ತಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದ್ದಾಳೆ. ಹಾಸನ ಜಿಲ್ಲೆಯ ಅರಸೀಕೆರೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಬಾಲಕಿ ವಿರುದ್ಧ ಪ್ರಕರಣ ದಾಖಲಾಗಿದ್ದವು. ಸದ್ಯಕ್ಕೆ ಜಗಳೂರಿನಲ್ಲಿ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಬಾಲಕಿಯನ್ನ ಅರಸೀಕೆರೆ ಠಾಣೆಗೆ ಒಪ್ಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 3ರ ಬಾಲಕಿ ಮೇಲೆ ಕರಾಟೆ ಶಿಕ್ಷಕನಿಂದಲೇ ಅತ್ಯಾಚಾರ!

    3ರ ಬಾಲಕಿ ಮೇಲೆ ಕರಾಟೆ ಶಿಕ್ಷಕನಿಂದಲೇ ಅತ್ಯಾಚಾರ!

    ಪಾಟ್ನಾ: ಕರಾಟೆ ಹೇಳಿಕೊಡಬೇಕಾದ ಶಿಕ್ಷಕನೇ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಸಂಜೆ 4.30ರ ವೇಳೆಗೆ ನಡೆದಿದೆ. ಮುಖೇಶ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ. ಈ ಪ್ರಕರಣ ಬೆಳಕಿಗೆ ಬಂದ ಪೊಲೀಸರು ತನಿಖೆಯನ್ನು ನಡೆಸಿ ಒಂದು ಗಂಟೆಯ ಒಳಗಡೆ ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಘಟನೆ?
    3 ವರ್ಷದ ಬಾಲಕಿ ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮರಳಿ ಬರುತ್ತಿರುವಾಗ ಮುಖೇಶ್ ಕರಾಟೆ ಹೇಳಿಕೊಡುವುದಾಗಿ ಬಾಲಕಿಯನ್ನು ನಂಬಿಸಿ ಮನೆಗೆ ಕರೆದುಕೊಂಡು ಹೋಗಿ ಕೃತ್ಯವನ್ನು ಎಸಗಿ ಅಲ್ಲಿಂದ ಪರಾರಿಯಾಗಿದ್ದ. ಮಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ಶಿಕ್ಷಕನ ಮನೆಯಲ್ಲಿ ಬಾಲಕಿ ಪ್ರಜ್ಞಾ ತಪ್ಪಿ ಬಿದ್ದಿರುವುದನ್ನು ಗಮನಿಸಿದ್ದಾರೆ.

    ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಬಾಲಕಿಯನ್ನು ದಾನಪುರದ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಪ್ರಜ್ಞೆ ಬಂದ ಮೇಲೆ ಏನಾಯ್ತು ಎಂದು ಬಾಲಕಿಯನ್ನು ಪ್ರಶ್ನಿಸಿದಾಗ ಕರಾಟೆ ಶಿಕ್ಷಕನ ಅಸಲಿ ಮುಖ ಬಯಲಾಗಿದೆ.

    ಈ ಘಟನೆಗೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರಾಟೆ ಶಿಕ್ಷಕ ಪಾಟ್ನಾದ ಅನೇಕ ಕಡೆ ಕರಾಟೆ ತರಬೇತಿ ನೀಡುತ್ತಿದ್ದ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಂಗಿಕ ಕಿರುಕುಳಕ್ಕೆ ಆಕ್ಷೇಪ -ಶಾಲೆಗೆ ನುಗ್ಗಿ 40 ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಪುಂಡರು

    ಲೈಂಗಿಕ ಕಿರುಕುಳಕ್ಕೆ ಆಕ್ಷೇಪ -ಶಾಲೆಗೆ ನುಗ್ಗಿ 40 ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಪುಂಡರು

    ಪಟ್ನಾ: ಬಾಲಕಿಯರ ಶಾಲೆಗೆ ನುಗ್ಗಿದ್ದ ದುಷ್ಕರ್ಮಿಗಳ ತಂಡವೊಂದು ಸುಮಾರು 40 ಬಾಲಕಿಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಬಿಹಾರದ ಸೂಪೌಲ್ ಜಿಲ್ಲೆಯಲ್ಲಿ ತ್ರಿವೇಣಿಗಂಜ್ ಗ್ರಾಮದಲ್ಲಿ ವರದಿಯಾಗಿದೆ.

    ಹಲ್ಲೆಗೊಳಗಾದ ಬಾಲಕಿಯರು ಕಸ್ತೂರ್ಬಾ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ 40 ಬಾಲಕಿಯರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯರು ಎಲ್ಲಾ ಬಾಲಕಿಯರು ಆರೋಗ್ಯವಾಗಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಆಸ್ಪತ್ರೆಯಲ್ಲೇ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಶಾಲೆಯ ಬಳಿ ಬರುತ್ತಿದ್ದ ಸ್ಥಳೀಯ ಪುಂಡ ಯುವಕರ ಗುಂಪು ಪ್ರತಿದಿನ ವಿದ್ಯಾರ್ಥಿನಿಗಳೊಂದಿಗೆ ಅಸಭ್ಯವಾಗಿ ವರ್ತಸುತಿತ್ತು. ಇದನ್ನು ಆಕ್ಷೇಪಿಸಿದ ಕಾರಣ ಪುಂಡರ ಗುಂಪು ನೇರ ಶಾಲೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಲ್ಲೆ ತಡೆಯಲು ಬಂದ ಇತರೇ ಬಾಲಕಿಯರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಶಾಲೆ ಮೇಲ್ವಿಚಾರಕರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ಹಿಂದೆಯೂ ಯುವಕರ ಅಸಭ್ಯ ವರ್ತನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

    ಘಟನೆಯಲ್ಲಿ ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 13ರ ಪೋರಿಗೆ ಕಿಸ್ ಕೊಟ್ಟ 16ರ ಪೋರನಿಗೆ ಶಿಕ್ಷೆ

    13ರ ಪೋರಿಗೆ ಕಿಸ್ ಕೊಟ್ಟ 16ರ ಪೋರನಿಗೆ ಶಿಕ್ಷೆ

    ಟರ್ಕಿ: 16 ವರ್ಷದ ಬಾಲಕನೊಬ್ಬ ತನ್ನ 13ರ ಗರ್ಲ್ ಫ್ರೆಂಡ್‍ಗೆ ಕಿಸ್ ಕೊಟ್ಟಿದ್ದಕ್ಕೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಕರಣವೊಂದು ಟರ್ಕಿಯಲ್ಲಿ ನಡೆದಿದೆ.

    ಬಾಲಕ ಶಾಲೆ ಆವರಣದಲ್ಲಿಯೇ ತನ್ನ ಗೆಳತಿಯನ್ನು ಅಪ್ಪಿಕೊಂಡು ಎಲ್ಲರ ಸಮ್ಮುಖದಲ್ಲೇ ಕಿಸ್ ಮಾಡಿದ್ದಾನೆ. ಇದನ್ನು ನೋಡಿದ ಆತನ ಸ್ನೇಹಿತರು ತಮ್ಮ ಮೊಬೈಲಿನಲ್ಲಿ ಆ ಪ್ರಸಂಗವನ್ನು ಸೆರೆ ಹಿಡಿದಿದ್ದಾರೆ. ನಂತರ ಆ ವಿಡಿಯೋವನ್ನು ಬೇರೆಯವರಿಗೆ ಶೇರ್ ಮಾಡಿ ವೈರಲ್ ಮಾಡಿದ್ದಾರೆ ಎಂದು ವರದಿಯಾಗಿದೆ.

    ಆ ಶಾಲೆಯ ಶಿಕ್ಷಕಿ ಬಾಲಕನ ಕಿಸ್ಸಿಂಗ್ ವೈರಲ್ ವಿಡಿಯೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕನ ವಿರುದ್ಧ ಕಾನೂನು ಕ್ರಮಗೈಕೊಂಡಿದ್ದಾರೆ. ಟರ್ಕಿಯಲ್ಲಿ ಈ ರೀತಿ ಮಾಡಿದರೆ ಅದು ಅಪರಾಧವಾಗುತ್ತದೆ. ಸದ್ಯ ಕೋರ್ಟ್ ಬಾಲಕನಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಪೊಲೀಸರು ಬಾಲಕನನ್ನು ಹಿಡಿದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಬಾಲಕನಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಈ ವಿಡಿಯೋ ಸೆರೆ ಹಿಡಿದ 5 ವಿದ್ಯಾರ್ಥಿಗಳನ್ನು ಕೂಡ ಆರೋಪಿಗಳು ಎಂದು ಹೇಳಲಾಗುತ್ತಿದೆ. ಸದ್ಯ ಆ ಐವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ.

    ಸದ್ಯ ವಕೀಲರು ಮುಖ್ಯ ಆರೋಪಿ ಆ ಬಾಲಕನನ್ನು ಶಿಕ್ಷೆಯಿಂದ ತಪ್ಪಿಸಲು ಪ್ರಯತ್ನಿಸಿದ್ದರು. ಈ ಮೊದಲು ಬಾಲಕನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ಹಾಗಾಗಿ ಬಾಲಕನಿಗೆ ಸಾಧಾರಣ ಶಿಕ್ಷೆ ವಿಧಿಸಬೇಕೆಂದು ವಕೀಲರು ಕೋರ್ಟ್‍ನಲ್ಲಿ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಸ್ಥಾನದಲ್ಲಿಯೇ ಪುರೋಹಿತರಿಂದ 5ರ ಬಾಲಕಿ ಮೇಲೆ ಅತ್ಯಾಚಾರ

    ದೇವಸ್ಥಾನದಲ್ಲಿಯೇ ಪುರೋಹಿತರಿಂದ 5ರ ಬಾಲಕಿ ಮೇಲೆ ಅತ್ಯಾಚಾರ

    ಭೋಪಾಲ್: ದೇವಸ್ಥಾನದ ಆವರಣದಲ್ಲಿಯೇ 5 ವರ್ಷದ ಬಾಲಕಿಯ ಮೇಲೆ ಎಸಗಿದ್ದ ಇಬ್ಬರು ಪುರೋಹಿತರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ರಾಜು ಪಂಡಿತ್ (55) ಹಾಗೂ ಬಟೋಲಿ ಪ್ರಜಾಪತಿ ಬಂಧಿತ ಆರೋಪಿಗಳು. ಇಬ್ಬರು ದಾಟಿಯಾ ಜಿಲ್ಲೆಯ ಗೋರ್‍ಘಾಟ್‍ದ ದೇವಸ್ಥಾನವೊಂದರ ಅರ್ಚಕಗಾರಿದ್ದು, ಇದೇ ತಿಂಗಳ 2ರಂದು ಕೃತ್ಯ ಎಸಗಿದ್ದಾರೆ.

    ಘಟನೆ ವಿವರ:
    ರಾಜು ಹಾಗೂ ಬಟೋಲಿ ಎಂಬ ಇಬ್ಬರು ಪುರೋಹಿತರು 5 ವರ್ಷದ ಬಾಲಕಿಗೆ ಸಿಹಿ ಪ್ರಸಾದ ನೀಡಲು ಕರೆದಿದ್ದಾರೆ. ಬಾಲಕಿ ದೇವಸ್ಥಾನದ ಒಳಗೆ ಬರುತ್ತಿದ್ದಂತೆ ಕೂಡಿಹಾಕಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಯಾರಿಗೂ ಅತ್ಯಾಚಾರ ಮಾಡಿದ ಕುರಿತು ತಿಳಿಸಿದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಯಾರಿಗೂ ಗೊತ್ತಾಗದಂತೆ ದೇವಸ್ಥಾನದಿಂದ ಬಾಲಕಿಯನ್ನು ಕರೆತಂದು ಆಕೆಯ ಮನೆಯ ಎದುರು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.

    ಬಾಲಕಿ ಅಸ್ವಸ್ಥವಾಗಿ ಕಾಣುತ್ತಿದ್ದರಿಂದ ತಾಯಿ ವಿಚಾರಿಸಿದ್ದಾರೆ. ಆದ್ರೆ ಬಾಲಕಿ ಮಾತ್ರ ಘಟನೆಯ ಕುರಿತು ವಿವರಿಸಲು ಹಿಂದೇಟು ಹಾಕಿದ್ದಾಳೆ. ಆದರೆ ಏನಾಗಿದೆ ನಿನಗೆ ಅಂತಾ ತಾಯಿ ಗದರಿಸಿದಾಗ, ತನ್ನ ಮೇಲೆ ಇಬ್ಬರು ಪುರೋಹಿತರು ಅತ್ಯಾಚಾರ ಎಸಗಿದ್ದಾರೆ ಅಂತಾ ಬಾಲಕಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೋಷಕರು ತಕ್ಷಣವೇ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ದಾಟಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿ ಪುರೋಹಿತರ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ವಿಧಿ 376 (ಅತ್ಯಾಚಾರ) ಅಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • 14ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಲಿದ್ದಾಳೆ ಬಾಗಲಕೋಟೆಯ ಬಾಲಕಿ

    14ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಲಿದ್ದಾಳೆ ಬಾಗಲಕೋಟೆಯ ಬಾಲಕಿ

    ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಬಾಲಕಿಯೋರ್ವಳು 14ನೇ ವಯಸ್ಸಿಗೆ ಪೈಲಟ್ ಆಗಿ ಹೊರ ಹೊಮ್ಮುತ್ತಿದ್ದಾಳೆ.

    ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ ನೆಲೆಸಿರುವ 9ನೇ ತರಗತಿ ವಿದ್ಯಾರ್ಥಿನಿ ಪ್ರೀತಿಕಾ ಗಾಣಿಗೇರ ಚಿಕ್ಕ ವಯಸ್ಸಿನಲ್ಲಿಯೇ ಪೈಲಟ್ ಆಗುತ್ತಿದ್ದಾಳೆ. ಎಂಟನೇ ವಯಸ್ಸಿನಲ್ಲೇ ಏರ್ ಲೀಗ್ ಎಂಬ ಪ್ರೈಮರಿ ಸ್ಕೂಲ್ ಆಪ್ ಏವಿಯೇಷನ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದು, ಸದ್ಯ ವಿಮಾನಗಳನ್ನು ಹಾರಾಡಿಸುವ ಸಾಮರ್ಥ್ಯ ಹೊಂದಿದ್ದಾಳೆ.

    ಪ್ರೀತಿಕಾ ಪೈಲಟ್ ಆಗುವ ಜೊತೆಗೆ ಬ್ರೈಟನ್ ಸೆಕೆಂಡರಿ ಸ್ಕೂಲ್‍ನಲ್ಲಿ 9ನೇ ತರಗತಿಯಲ್ಲಿಯೂ ಓದುತ್ತಿದ್ದಾಳೆ. ಇನ್ನೇನು ಎರಡು ವರ್ಷದಲ್ಲಿ ಅಧಿಕೃತವಾಗಿ ಪೈಲಟ್ ಲೈಸೆನ್ಸ್ ಹೊಂದಲಿದ್ದಾಳೆ. ಆಸ್ಟ್ರೇಲಿಯಾ ಸರ್ಕಾರದಿಂದ ಸ್ಕಾಲರ್ ಶಿಪ್ ಪಡೆದು ತರಬೇತಿ ಪಡೆಯುತ್ತಿರುವ ಪ್ರೀತಿಕಾ ಅತೀ ಚಿಕ್ಕ ವಯಸ್ಸಿನಲ್ಲಿ ಪೈಲಟ್ ಆಗಿ ಆಕಾಶದಲ್ಲಿ ಹಾರಾಡಲಿದ್ದಾರೆ.

    ಪ್ರೀತಿಕಾ ತಂದೆ- ತಾಯಿ ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ ಕೆಲಸ ಮಾಡುತ್ತಿದ್ದು, ಪ್ರೀತಿಕಾ ಆಡಿಲೇಡ್ ನಲ್ಲೇ ಹುಟ್ಟಿ ಬೆಳೆದಿದ್ದಾಳೆ. ಮುಂದಿನ ದಿನಗಳಲ್ಲಿ ಭಾರತ ದೇಶದ ಹೆಣ್ಣು ಮಕ್ಕಳಿಗಾಗಿ ಪೈಲಟ್ ತರಬೇತಿ ಶಾಲೆ ಆರಂಭಿಸಬೇಕು, ನಾಸಾದಲ್ಲಿ ಎರೋನಾಟಿಕಲ್ ವಿಭಾಗದಲ್ಲಿ ಕೆಲಸ ಮಾಡುವ ಕನಸು ಕಟ್ಟಿಕೊಂಡಿದ್ದಾಳೆ.

    ಸದ್ಯ ತಾಯಿಯ ತವರು ಮನೆ ಆಗಿರುವ ಬಾಗಲಕೋಟೆ ನಗರಕ್ಕೆ ಪ್ರೀತಿಕಾ ತನ್ನ ತಾಯಿ ಸಮೇತ ಭೇಟಿ ನೀಡಿದ್ದಾಳೆ. ಇತ್ತ ಪ್ರೀತಿಕಾ ಸಾಹಸ ಮತ್ತು ಸಾಧನೆ ಕುಟುಂಬಸ್ಥರಿಗೆ ಇನ್ನಿಲ್ಲದ ಹರ್ಷ ಮೂಡಿಸಿದೆ.

    https://www.youtube.com/watch?v=2kTyI3xPQ0g&feature=youtu.be

    https://www.youtube.com/watch?v=tYB1ZcC1f2s&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರ್ನಾಟಕದ ಬಾಲಕಿಗೆ ಮೋದಿಯಿಂದ ಹುಟ್ಟುಹಬ್ಬದ ಶುಭಾಶಯ

    ಕರ್ನಾಟಕದ ಬಾಲಕಿಗೆ ಮೋದಿಯಿಂದ ಹುಟ್ಟುಹಬ್ಬದ ಶುಭಾಶಯ

    ನವದೆಹಲಿ: ಹುಟ್ಟುಹುಬ್ಬದ ಸಂಭ್ರಮದಲ್ಲಿರುವ ಕರ್ನಾಟಕದ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

    “ಇಂದು ನನ್ನ ಮಗಳು ಬೆಳಕು ಜನ್ಮದಿನ. ಹೀಗಾಗಿ ನಿನ್ನ ಜನ್ಮದಿನಕ್ಕೆ ಏನು ಉಡುಗೊರೆ ಬೇಕು ಅಂತಾ ಕೇಳಿದ್ದೆ. ಅವಳು ತಕ್ಷಣವೇ ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವ ಕೇಕ್ ಬೇಕೆಂದು ಬೇಡಿಕೆ ಇಟ್ಟಿದ್ದಳು. ಮೋದಿ ಅವರು ಕಳ್ಳರು. ಮಕ್ಕಳ ಮನಸ್ಸು ಕಳ್ಳರು” ಎಂದು ಬರೆದು ಬಾಲಕಿಯ ತಂದೆ ಸೆಪ್ಟೆಂಬರ್ 30 ರಂದು ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್ ಮಾಡಿದ್ದರು.

    ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್‍ಗೆ ಅಕ್ಟೋಬರ್ 2 ರಂದು ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳಕು ಬಾಲಕಿಗೆ ಜನ್ಮದಿನದ ಶುಭಾಶಯ ತಿಳಿಸಿ. ಬಾಲಕಿಗೆ ಸಂತೋಷ ಹಾಗೂ ಆರೋಗ್ಯ ಸಿಗಲಿ ಅಂತಾ ಪ್ರಾರ್ಥಿಸುತ್ತೇನೆ ಎಂದು ಬರೆದು ಟ್ವೀಟ್ ಮೂಲಕ ಶುಭಕೋರಿದ್ದಾರೆ.

    ಮಹೇಶ್ ಹೆಗ್ಡೆ ಅವರ ಟ್ವೀಟ್ ಅನ್ನು 6 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 1800ಕ್ಕೂ ಅಧಿಕ ಮಂದಿ ರಿ ಟ್ವೀಟ್ ಮಾಡಿದ್ದರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv