Tag: ಬಾಲಕಿ

  • ಪ್ರಿಯಕರನ ಜೊತೆಗೆ ಕುಳಿತಿದ್ದ ಬಾಲಕಿಯನ್ನು ಹೆದರಿಸಿ ಯುವಕನಿಂದ ರೇಪ್

    ಪ್ರಿಯಕರನ ಜೊತೆಗೆ ಕುಳಿತಿದ್ದ ಬಾಲಕಿಯನ್ನು ಹೆದರಿಸಿ ಯುವಕನಿಂದ ರೇಪ್

    ಹುಬ್ಬಳ್ಳಿ: ಪ್ರಿಯಕರನ ಜೊತೆಗೆ ಪಾರ್ಕ್ ನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಯನ್ನು ಹೆದರಿಸಿ ಅತ್ಯಾಚಾರ ಎಸಗಿದ್ದ ಆರೋಪಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಮೂವರು ಸಹಚರರನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ರೈಲ್ವೇ ಕ್ವಾಟರ್ಸ್ ಸಮೀಪ ಸೆಲ್ಟಮೆಂಟ್ ಪ್ರದೇಶದ ಕಿರಣ್ ಚಂದ್ರಶೇಖರ್ ಗೋಕಾಕ್ (28) ಅತ್ಯಾಚಾರ ಎಸಗಿದ ಕಾಮುಕ. ಆರೋಪಿಗೆ ಸಹಾಯ ಮಾಡಿದ ಅಭಿಷೇಕ್ ಬಳ್ಳಾರಿ (23), ರಾಹುಲಾ ಜಾಧವ್ (33) ಹಾಗೂ ಕನ್ನಯ್ಯ ಕೊರವರ (24) ಬಂಧಿತ ಆರೋಪಿಗಳು. ಅತ್ಯಾಚಾರ ಸಂತ್ರಸ್ತ ಬಾಲಕಿ 15 ವರ್ಷದವಳಾಗಿದ್ದು, ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

    ಏನಿದು ಪ್ರಕರಣ?:
    ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕಿಗೆ ತನ್ನ ಸಹಪಾಠಿಯ ಜೊತೆಗೆ ಪ್ರೇಮಾಂಕುರವಾಗಿದೆ. ಈ ಜೋಡಿ ಹಳೇ ಹುಬ್ಬಳ್ಳಿಯ ಮಂಟೂರು ರಸ್ತೆಯ ಪಾರ್ಕ್ ಒಂದರಲ್ಲಿ ಏಕಾಂತದಲ್ಲಿ ಕುಳಿತಿತ್ತು. ಈ ವೇಳೆ ಅಲ್ಲಿಗೆ ಬಂದ ಕಿರಣ್ ಚಂದ್ರಶೇಖರ್ ಗೋಕಾಕ್ ಹಾಗೂ ಆತನ ಸಹಚರರು ಇಬ್ಬರನ್ನು ರೇಗಿಸಿದ್ದಾರೆ. ಬಳಿಕ ಬಾಲಕಿಯನ್ನು ಬೆದರಿಸಿ ಎತ್ತಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಿರಣ್ ಗೋಕಾಕ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು, ಇನ್ನುಳಿದ ಮೂವರು ಆತನಿಗೆ ಸಹಾಯ ಮಾಡಿದ್ದಾರೆ.

    ತನ್ನ ಮೇಲೆ ಅತ್ಯಾಚಾರ ಮಾಡಿರುವ ಕುರಿತು ಸಂತ್ರಸ್ತ ಬಾಲಕಿ ಪೋಷಕರಿಗೆ ತಿಳಿಸಿದ್ದಾರೆ. ಈ ಸಂಬಂಧ ಅತ್ಯಾಚಾರ ಸಂತ್ರಸ್ತ ಬಾಲಕಿ ಪೋಷಕರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಯಲ್ಲೇ ಬಾಲಕಿ ಮುಂದೆ ಪ್ಯಾಂಟ್ ಬಿಚ್ಚಿದ – ಸ್ಟಂಟ್‍ಮ್ಯಾನ್ ಸಮಯಪ್ರಜ್ಞೆಯಿಂದ ಕಾಮುಕ ಅರೆಸ್ಟ್

    ರಸ್ತೆಯಲ್ಲೇ ಬಾಲಕಿ ಮುಂದೆ ಪ್ಯಾಂಟ್ ಬಿಚ್ಚಿದ – ಸ್ಟಂಟ್‍ಮ್ಯಾನ್ ಸಮಯಪ್ರಜ್ಞೆಯಿಂದ ಕಾಮುಕ ಅರೆಸ್ಟ್

    – ಕಾಮುಕನನ್ನು ಪೊಲೀಸರಿಗೆ ಒಪ್ಪಿಸಿದ ಬಾಲಿವುಡ್ ಸ್ಟಂಟ್ ಮ್ಯಾನ್

    ಮುಂಬೈ: ಅಪ್ರಾಪ್ತೆಗೆ ಪೋರ್ನ್ ವಿಡಿಯೋ ತೋರಿಸಿ ಆಕೆಯ ದೇಹ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಬಾಲಿವುಡ್ ಸಾಹಸ ನಿರ್ದೇಶಕ, ಸಹ ನಿರ್ದೇಶಕ ಅಸೀಫ್ ರಶೀದ್ ಮೆಹ್ತಾ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಭಾನುವಾರ ಅಸೀಫ್ ಮನೆಯ ಹೊರಗೆ 20 ವರ್ಷದ ಯುವಕನೊಬ್ಬ 9 ವರ್ಷದ ಬಾಲಕಿಗೆ ತನ್ನ ಮೊಬೈಲಿನಲ್ಲಿ ಪೋರ್ನ್ ವಿಡಿಯೋ ತೋರಿಸುತ್ತಿದ್ದನು. ಈ ವೇಳೆ ಅಸೀಫ್ ತನ್ನ ಮನೆಗೆ ಹೋಗುತ್ತಿದ್ದಾಗ ಯುವಕ ಬೈಕಿನ ಮೇಲೆ ಕುಳಿತುಕೊಂಡಿರುವುದನ್ನು ಗಮನಿಸಿದ್ದಾರೆ. ಅಲ್ಲದೇ ಬಾಲಕಿ ಯುವಕನ ಪಕ್ಕದಲ್ಲೇ ನಿಂತು ಆತನ ಮೊಬೈಲ್‍ನಲ್ಲಿ ಇಣುಕಿ ನೋಡುತ್ತಿದ್ದಾಗ ಅವರಿಗೆ ಅನುಮಾನ ಬಂದಿದೆ.

    ನಾನು ಮನೆಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ನಿಂತಿದ್ದ ಯುವಕ ಹಾಗೂ ಬಾಲಕಿಯನ್ನು ನೋಡಿ ಅನುಮಾನ ಬಂತು. ಬಳಿಕ ನಾನು ಮನೆಗೆ ಹೋಗಿ ಕಿಟಕಿಯಿಂದ ಹೊರಗೆ ನೋಡಿದ್ದಾಗ ಯುವಕ ಬಾಲಕಿಯ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದನು. ನಾನು ಆತನ ಬಳಿ ಹೋಗಿ ನಿನಗೆ ಈ ಬಾಲಕಿ ಗೊತ್ತಾ ಎಂದು ಪ್ರಶ್ನಿಸಿದೆ. ಆಗ ಯುವಕ ಈಕೆ ನನ್ನ ತಂಗಿ ಎಂದು ಹೇಳಿದ್ದಾನೆ ಅಂತಾ ಅಸೀಫ್ ಹೇಳಿದ್ದಾರೆ.

    ನಾನು ಯುವಕನನ್ನು ವಿಚಾರಿಸುತ್ತಿದ್ದಾಗ ಆತನ ಪ್ಯಾಂಟ್ ಜಿಪ್ ಓಪನ್ ಇರುವುದನ್ನು ಗಮನಿಸಿದೆ ಹಾಗೂ ಬಾಲಕಿ ಕೂಡ ಆಘಾತಕ್ಕೊಳಗಾಗಿದ್ದಳು. ಬಳಿಕ ಬಾಲಕಿಗೆ ಆಕೆಯ ತಾಯಿ ಬಗ್ಗೆ ಕೇಳಿದ್ದಾಗ ನನ್ನ ತಾಯಿ ಇಲ್ಲಿಯೇ ಎಲ್ಲೋ ಇದ್ದಾರೆ ಎಂದು ಹೇಳಿದ್ದಳು. ನಂತರ ಈತ ನಿನ್ನ ಸಹೋದರನಾ ಎಂದು ಕೇಳಿದ್ದಾಗ ಆಕೆ ಇಲ್ಲ ಎಂದು ಹೇಳಿದ್ದಾಳೆ. ಆಗ ನನಗೆ ಅನುಮಾನ ಬಂದು ಆತನ ಮೊಬೈಲ್ ಪರಿಶೀಲಿಸಿದ್ದಾಗ ಕೇವಲ ಪೋರ್ನ್ ವಿಡಿಯೋಗಳಿತ್ತು.

    ನಾನು ಯುವಕನನ್ನು ವಿಚಾರಿಸುತ್ತಿದ್ದಾಗ ಅಲ್ಲಿ ಜನರೆಲ್ಲರು ಸೇರಿದ್ದರು. ಅದರಲ್ಲಿ ನನ್ನ ಪರಿಚಯಸ್ಥರು ಇದ್ದರು. ಜನರು ಸೇರುತ್ತಿದ್ದಂತೆ ಬಾಲಕಿ ತನ್ನ ತಾಯಿಯನ್ನು ಹುಡುಕಲು ಅಲ್ಲಿಂದ ಹೋಗುತ್ತಿದ್ದಳು. ನಾನು ಕೂಡ ಯುವಕನನ್ನು ಬಾಲಕಿ ಜೊತೆ ಕರೆದುಕೊಂಡು ಹೋಗಿ ಆಕೆಯ ತಾಯಿಗೆ ಈ ವಿಷಯವನ್ನು ತಿಳಿಸಿದೆ. ಈ ವಿಷಯ ಜನರಿಗೆ ತಿಳಿಯುತ್ತಿದ್ದಂತೆ ಅವರು ಯುವಕನನ್ನು ಮಹೀಮ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ಅಸೀಫ್ ತಿಳಿಸಿದ್ದಾರೆ.

    ಬಳಿಕ ಪೊಲೀಸ್ ಠಾಣೆಗೆ ಬಾಲಕಿ ಹಾಗೂ ಆಕೆಯ ತಾಯಿ ಭೇಟಿ ಭೇಟಿ ನೀಡಿದ್ದಾರೆ. ಸಾಕ್ಷಿಗಾಗಿ ನಾನು ಯುವಕನ ಜೊತೆ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಅದನ್ನು ಪೊಲೀಸರಿಗೆ ನೀಡಿದೆ. ಪೊಲೀಸರು ಬಾಲಕಿಯನ್ನು ವಿಚಾರಿಸಿದರು. ಆಗ ಬಾಲಕಿ ಯುವಕ ತನ್ನ ಖಾಸಗಿ ಅಂಗವನ್ನು ಮುಟ್ಟು ಎಂದು ಹೇಳುತ್ತಿದ್ದ ಎಂದು ಹೇಳಿದ್ದಾಳೆ. ಬಾಲಕಿಯ ಹೇಳಿಕೆ ಪಡೆದ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಂಡಿದ್ದಾರೆ. ಸೋಮವಾರ ಆತನನ್ನು ನ್ಯಾಯಲಕ್ಕೆ ಹಾಜರುಪಡಿಸಿದ್ದಾರೆ.

    ಅಸೀಫ್ ‘ಜೋಧಾ ಅಖ್ಬರ್’, ‘ರೇಸ್-3’ ಚಿತ್ರ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ‘ಚೀಟ್ ಇಂಡಿಯಾ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೂವು ಕಿತ್ತಿದ್ದಕ್ಕೆ ಬಾಲಕಿ ಬಾಯಿಗೆ ಬರೆ ಇಟ್ಟ ನೀಚ!

    ಹೂವು ಕಿತ್ತಿದ್ದಕ್ಕೆ ಬಾಲಕಿ ಬಾಯಿಗೆ ಬರೆ ಇಟ್ಟ ನೀಚ!

    ಹಾಸನ: ಮನೆಯಲ್ಲಿದ್ದ ಹೂವನ್ನು ಕಿತ್ತಿದ್ದಕ್ಕೆ ವ್ಯಕ್ತಿಯೊಬ್ಬ 8 ವರ್ಷದ ಪುಟ್ಟ ಬಾಲಕಿಯ ಬಾಯಿಗೆ ಬರೆ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಶನಿವಾರದಂದು ನಡೆದಿದೆ.

    ಬಾಲಕಿಯ ನೆರೆ ಮನೆಯ ನಿವಾಸಿ ಜಯಕುಮಾರ್ ಈ ಕೃತ್ಯವೆಸಗಿದ್ದಾನೆ. ಶನಿವಾರದಂದು ಐಸ್‍ಕ್ರೀಮ್ ತರಲು ಬಾಲಕಿ ತನ್ನ ಮನೆ ಬಳಿ ಇದ್ದ ಅಂಗಡಿಗೆ ಹೋಗಿದ್ದಾಳೆ. ಆಗ ದಾರಿಯಲ್ಲಿ ಜಯಕುಮಾರ್ ಮನೆಯ ಆವರಣದಲ್ಲಿದ್ದ ಹೂವನ್ನು ಕಿತ್ತಿದ್ದಾಳೆ. ಈ ಚಿಕ್ಕ ವಿಷಯಕ್ಕೆ ಮನೆ ಮಾಲೀಕ ಬಾಲಕಿಯ ಬಾಯಿಗೆ ಬರೆ ಇಟ್ಟಿದ್ದಾನೆ.

    ತನ್ನ ಮನೆಯಲ್ಲಿ ಬೆಳೆದಿದ್ದ ಹೂವನ್ನು ನೆರೆಮನೆಯ ಬಾಲಕಿ ಕಿತ್ತಿದನ್ನು ಕಂಡು ಜಯಕುಮಾರ್ ಕೋಪಗೊಂಡಿದ್ದಾನೆ. ಬಳಿಕ ಬಾಲಕಿಯನ್ನು ಮನೆಯೊಳಗೆ ಎಳೆದೊಯ್ದು ಮಗಳ ಕೈಯಲ್ಲಿ ಹಂಚಿನ ಕಡ್ಡಿ ಕಾಯಿಸಿಕೊಂಡು ಬರಲು ಹೇಳಿದ್ದಾನೆ. ನಂತರ ಬಾಲಕಿಯ ಬಾಯಿಗೆ ಬರೆ ಇಟ್ಟಿದ್ದಲ್ಲದೆ, ಬೆಲ್ಟ್ ನಿಂದ ಹೊಡೆದಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದ ಬಾಲಕಿ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಬಾಲಕಿಯ ಮೇಲೆ ಹಲ್ಲೆ ಮಾಡಿರುವ ಆರೋಪಿ ಮೇಲೆ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸದ್ಯ ಬಾಲಕಿಯ ಪೋಷಕರು ಆರೋಪಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 7 ವರ್ಷದ ಬಾಲಕಿ ಮೇಲೆ 9ರ ಬಾಲಕನಿಂದ ಅತ್ಯಾಚಾರ..!

    7 ವರ್ಷದ ಬಾಲಕಿ ಮೇಲೆ 9ರ ಬಾಲಕನಿಂದ ಅತ್ಯಾಚಾರ..!

    ರಾಂಚಿ: ಜಾರ್ಖಂಡ್‍ನ ಸಿಂಗ್ಬಾಮ್ ಜಿಲ್ಲೆಯಲ್ಲಿ 9 ವರ್ಷದ ಬಾಲಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸಿಂಗ್ಬಾಮ್ ಜಿಲ್ಲೆಯ ಬ್ಯಾಗ್ಬೆರಾ ಪ್ರದೇಶದಲ್ಲಿ ಡಿ. 12ರಂದು ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯ ಅಜ್ಜ-ಅಜ್ಜಿ ಪೊಲೀಸರಿಗೆ ಕಳೆದ ಭಾನುವಾರದಂದು ದೂರು ನೀಡಿದ್ದಾರೆ. ಕೆಲವು ದಿನಗಳಿಂದ ಬಾಲಕಿಯ ವರ್ತನೆಯಲ್ಲಿ ವ್ಯತ್ಯಾಸ ಕಂಡು ಅಜ್ಜಿ ವಿಚಾರಿಸಿದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಅಪ್ರಾಪ್ತ ಬಾಲಕನ ಮೇಲೆ ಬ್ಯಾಗ್ಬೆರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈಗಾಗಲೇ ಆರೋಪಿ ಬಾಲಕನನ್ನು ಜುವೆನೈಲ್ ನ್ಯಾಯಾಂಗ ಮಂಡಳಿ(Juvenile Justice Board) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪುಷ್ಪಾ ರಾಣಿ ಟಿರ್ಕಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಸದ್ಯ ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ಬಾಲಕನಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿ ಆಲೋಕ್ ರಾಜನ್ ತಿಳಿಸಿದ್ದಾರೆ.

    ಈ ಹಿಂದೆ ಬೋಪಾಲ್‍ನಲ್ಲಿ ಕೂಡ 8 ವರ್ಷದ ಬಾಲಕಿ ಮೇಲೆ ಆಕೆಯ ತರಗತಿಯಲ್ಲಿ ಓದುತ್ತಿದ್ದ ಬಾಲಕ ಹಾಗೂ ಇನ್ನೋರ್ವ ಸೇರಿ ಆಕೆಯ ಮನೆಯ ಬಳಿಯೇ ಅತ್ಯಾಚಾರ ಮಾಡಿದ್ದ ಪ್ರಕರಣ ದಾಖಲಾಗಿತ್ತು. ಅಲ್ಲದೆ ಇಬ್ಬರು ಆರೋಪಿ ಬಾಲಕರ ವಿರುದ್ಧ ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಪ್ಪು ಮಾಡಿದಳೆಂದು ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿದ್ರು..!

    ತಪ್ಪು ಮಾಡಿದಳೆಂದು ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿದ್ರು..!

    ನವದೆಹಲಿ: ಸರ್ಕಾರೇತರ ಸಂಸ್ಥೆಯೊಂದು(ಎನ್‍ಜಿಓ) ನಡೆಸುವ ಬಾಲಕಿಯರ ಆಶ್ರಯ ನಿವಾಸದಲ್ಲಿ ಸಿಬ್ಬಂದಿ ತಪ್ಪು ಮಾಡಿದಳು ಅಂತ ಬಾಲಕಿಯೊಬ್ಬಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಅಮಾನವಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಶುಕ್ರವಾರದಂದು ದೆಹಲಿಯ ಮಹಿಳಾ ಆಯೋಗದ(ಡಿಡಬ್ಲ್ಯೂಸಿ) ಅಧಿಕಾರಿಗಳು ನೈಋತ್ಯ ದೆಹಲಿಯ ದ್ವಾರಕಾದಲ್ಲಿರುವ ಎನ್‍ಜಿಓವೊಂದು ನೋಡಿಕೊಳ್ಳುವ ಬಾಲಕಿಯರ ಆಶ್ರಯ ನಿವಾಸಕ್ಕೆ ದಿಢೀರ್ ಪರಿಶೀಲನೆ ನಡೆಸಲು ತೆರೆಳಿದ್ದರು. ಈ ವೇಳೆ ಆಶ್ರಯ ನಿವಾಸದಲ್ಲಿ ಇರುವ ಬಾಲಕಿಯರಿಗೆ ಅಲ್ಲಿನ ಸಿಬ್ಬಂದಿ ಕಿರುಕುಳ ಕೊಡುತ್ತಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

    ಈ ಆಶ್ರಯ ನಿವಾಸದಲ್ಲಿ 6 ವರ್ಷದಿಂದ 15 ವರ್ಷ ವಯಸ್ಸಿನ ಒಟ್ಟು 22 ಬಾಲಕಿಯರು ಇರುತ್ತಾರೆ. ಇಲ್ಲಿ ಇರುವ ಬಾಲಕಿಯರ ಕೈಯಲ್ಲಿ ಸಿಬ್ಬಂದಿ ಮನೆಯ ಎಲ್ಲಾ ಕೆಲಸ ಮಾಡಿಸುತ್ತಾರೆ. ಅಲ್ಲದೆ ಕೋಣೆಗಳನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ನಮಗೆ ಶಿಕ್ಷೆ ನೀಡುತ್ತಾರೆ. ಸ್ಕೇಲ್‍ನಿಂದ ಹೊಡೆಯುತ್ತಾರೆ, ರಜಾ ದಿನಗಳಲ್ಲಿ ಪೋಷಕರ ಬಳಿ ಹೋಗಲು ಬಿಡುವುದಿಲ್ಲ. ಹಾಗೆಯೆ ಇಲ್ಲಿ ಸಿಬ್ಬಂದಿ ಕಡಿಮೆ ಇರುವುದರಿಂದ ಮಕ್ಕಳ ಕೈಯಲ್ಲೇ ಅಡುಗೆ ಮಾಡಸ್ತಾರೆ. ಶೌಚಾಲಯ ಹಾಗೂ ಮನೆಯನ್ನು ಸ್ವಚ್ಛ ಮಾಡಿಸ್ತಾರೆ. ಸರಿಯಾದ ಗುಣಮಟ್ಟದ ಊಟ ಕೂಡ ನೀಡಲ್ಲ ಅಂತ ಬಾಲಕಿಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಅಷ್ಟೆ ಅಲ್ಲದೆ ಕೆಲವು ದಿನಗಳ ಹಿಂದೆ ಬಾಲಕಿಯೊಬ್ಬಳು ಹೇಳಿದ ಮಾತನ್ನು ಕೇಳಿಲ್ಲ ಅಂತ ಸಿಬ್ಬಂದಿ ಅವಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಡಿಡಬ್ಲ್ಯೂಸಿ ಅಧಿಕಾರಿಗಳು ಆರೋಪಿಗಳ ಮೇಲೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ಮಕ್ಕಳ ರಕ್ಷಣೆ ಹಾಗೂ ಲೈಂಗಿಕ ಅಪರಾಧ ಕಾಯ್ದೆ ಹಾಗೂ ಜುವೆನೈಲ್ ನ್ಯಾಯಾಂಗ ಕಾಯ್ದೆ (Juvenile Justice Act) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 17ರ ಬಾಲೆಯನ್ನ ಅತ್ಯಾಚಾರಗೈದ ಅಂಕಲ್ – ಅಪ್ರಾಪ್ತೆಯ ಮಡಿಲಲ್ಲಿ ಕಂದಮ್ಮ

    17ರ ಬಾಲೆಯನ್ನ ಅತ್ಯಾಚಾರಗೈದ ಅಂಕಲ್ – ಅಪ್ರಾಪ್ತೆಯ ಮಡಿಲಲ್ಲಿ ಕಂದಮ್ಮ

    ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಅಂಕಲ್ ನಿರಂತರವಾಗಿ 7 ತಿಂಗಳ ಕಾಲ ಅತ್ಯಾಚಾರ ಎಸಗಿದ್ದು, ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಪಿಂಪ್ರಿ ಚಿಂಚವಾಡ್‍ದಲ್ಲಿ ಘಟನೆ ನಡೆದಿದ್ದು, ಇಂದು ಹೊಟ್ಟೆನೋವು ಅಂತ ಆಸ್ಪತ್ರೆಗೆ ದಾಖಲಾಗಿದ್ದ 17 ವರ್ಷ ಬಾಲಕಿ ಅವಧಿಗೂ ಮುನ್ನ (Premature Baby) ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಆರೋಪಿಯ ವಿರುದ್ಧ ಬಾಲಕಿಯ ಪೋಷಕರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಬಾಲಕಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕಿ ಹಾಗೂ ಆರೋಪಿ ಅಂಕಲ್ ಒಂದೇ ಮನೆಯಲ್ಲಿ ವಾಸವಾಗಿದ್ದು, ಇದೇ ವರ್ಷ ಮೇ ತಿಂಗಳು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ಆರೋಪಿಗೆ ಮದುವೆಯಾಗಿದ್ದು, ಕೆಲ ದಿನಗಳ ಹಿಂದೆ ಆತನ ಪತ್ನಿ ಬಿಟ್ಟು ಹೋಗಿದ್ದಾಳೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 (ಬಲವಂತ ಸಂಭೋಗಕ್ಕೆ ದಂಡನೆ), 506 (ದಂಡನೆ) ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಡಿಸೆಂಬರ್ 25ರಿಂದ ನಾಪತ್ತೆಯಾಗಿದ್ದು, ನಮ್ಮ ಜೊತೆಗೆ ಬಾಲಕಿಯ ಪೋಷಕರು ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ- ಬಾಲಕಿ ಸ್ಥಳದಲ್ಲೇ ಸಾವು

    ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ- ಬಾಲಕಿ ಸ್ಥಳದಲ್ಲೇ ಸಾವು

    ಮೈಸೂರು: 13 ವರ್ಷದ ಬಾಲಕಿಯನ್ನು ಕೆಎಸ್‌ಆರ್‌ಟಿಸಿ ಬಸ್ ಬಲಿ ತೆಗೆದುಕೊಂಡಿದೆ. ಜಿಲ್ಲೆಯ ನಂಜನಗೂಡಿನ ಚಾಮರಾಜನಗರ ರಸ್ತೆಯ ಮೇದಿಗರ ಬೀದಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಅಶ್ವಿನಿ ಅಪಘಾತದಲ್ಲಿ ಮೃತಪಟ್ಟ ಬಾಲಕಿ. ಮೃತ ಅಶ್ವಿನಿ ನಂಜನಗೂಡು ಪಟ್ಟಣದ ಮೇದಿಗರ ಬೀದಿ ನಿವಾಸಿ ಸಿದ್ದರಾಜು ಎಂಬವರ ಪುತ್ರಿ. ಬಸ್ ಬಾಲಕಿಗೆ ಡಿಕ್ಕಿ ಹೊಡೆದ ವೇಳೆ ಆಕ್ರೋಶಗೊಂಡ ಜನರು ಕಲ್ಲು ತೂರಾಟ ನಡೆಸಿ ಬಸ್ಸಿನ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

    ಈ ವೇಳೆ ಗಾಯಗೊಂಡ ಬಸ್ ಚಾಲಕನನ್ನು ನಂಜನಗೂಡು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 13 ವರ್ಷದ ಬಾಲಕಿಯನ್ನು ಬಲಿ ಪಡೆದ ಚಿರತೆ!

    13 ವರ್ಷದ ಬಾಲಕಿಯನ್ನು ಬಲಿ ಪಡೆದ ಚಿರತೆ!

    – ಒಂದೇ ತಿಂಗಳಿನಲ್ಲಿ ಚಿರತೆ ದಾಳಿ ಇಬ್ಬರು ಮಕ್ಕಳು ಬಲಿ

    ಬಳ್ಳಾರಿ: ಗಣಿನಾಡಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಪೋಷಕರ ಜೊತೆ ಜಮೀನಿಗೆ ತೆರಳಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.

    ಜಯಸುಧಾ(13) ಬಾಲಕಿ ಮೃತ ದುರ್ದೈವಿ. ಶಾಲೆಗೆ ಕಿಸ್ಮಸ್ ಹಬ್ಬದ ರಜೆಯಿದ್ದ ಕಾರಣ ಜಮೀನಿಗೆ ಪೋಷಕರ ಜೊತೆ ಹೋಗುತ್ತಿದ್ದ ಜಯಸುಧಾ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಆಕೆಯನ್ನು ಹೊತ್ತೊಯ್ದಿದೆ. ಚಿರತೆ ದಾಳಿ ನಡೆಯುತ್ತಿದ್ದಂತೆ ಪೋಷಕರ ಚೀರಾಟ ಕೇಳಿ ಬಾಲಕಿಯನ್ನು ತುಸು ದೂರದಲ್ಲೇ ಬಿಟ್ಟು ಹೋಗಿದೆ. ತಕ್ಷಣ ಕಂಪ್ಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಜಯಸುಧಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.

    ಕಳೆದ 15 ದಿನಗಳ ಹಿಂದೆ ದೇವಲಾಪುರ ಗ್ರಾಮದ ಪಕ್ಕದಲ್ಲೇ ಇರುವ ಸೋಮಲಾಪುರ ಗ್ರಾಮದಲ್ಲೂ ಚಿರತೆ ದಾಳಿ ಮಾಡಿ ಮೂರು ವರ್ಷದ ಬಾಲಕನನ್ನು ಬಲಿ ಪಡೆದಿತ್ತು. ಸೋಮಲಾಪುರದ ದಾಳಿ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯೊಂದನ್ನು ಸೆರೆ ಹಿಡಿದಿದ್ದರು. ಆದರೂ ಇದೀಗ ಮತ್ತೆ ಚಿರತೆ ದಾಳಿ ಮುಂದುವರಿದ ಪರಿಣಾಮ ಸುತ್ತಮುತ್ತಲಿನ ಗ್ರಾಮಸ್ಥರು ಭಯಗೊಂಡಿದ್ದಾರೆ.

    ಘಟನೆಯ ಬಗ್ಗೆ ಮಾತನಾಡಿರುವ ಡಿಎಫ್‍ಓ ರಮೇಶ್ ಕುಮಾರ್, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲಿದೆ. ರೈತರು ಗ್ರಾಮಸ್ಥರು ಒಬ್ಬೊಬ್ಬರೆ ಜಮೀನಿಗೆ ತೆರಳದಂತೆ ಸೂಚನೆ ನೀಡಿದ್ದೇವೆ. ಅಲ್ಲದೇ ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮ ಶಾಲೆಗೆ ಕಳುಹಿಸುತ್ತಿಲ್ಲ- 3ರ ಪೋರಿಯಿಂದ ಪೊಲೀಸ್ ಠಾಣೆಯಲ್ಲಿ ದೂರು!

    ಅಮ್ಮ ಶಾಲೆಗೆ ಕಳುಹಿಸುತ್ತಿಲ್ಲ- 3ರ ಪೋರಿಯಿಂದ ಪೊಲೀಸ್ ಠಾಣೆಯಲ್ಲಿ ದೂರು!

    ಲಕ್ನೋ: ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯ ಮೂರು ವರ್ಷದ ಪೋರಿಯೊಬ್ಬಳು ತನ್ನ ತಾಯಿ ಶಾಲೆಗೆ ಕಳುಹಿಸುತ್ತಿಲ್ಲವೆಂದು ಪೊಲೀಸರ ಬಳಿಯೇ ದೂರನ್ನು ನೀಡಿದ್ದಾಳೆ.

    ಸಂತ ಕಬೀರ್ ನಗರದ ಮಕ್ಸೂದ್ ಖಾನ್ ಹಾಗೂ ಅಸ್ಮಾ ಖಾನ್ ದಂಪತಿಯ ಪುತ್ರಿ ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನು ನೀಡಿದ್ದಾಳೆ. ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನ ನೀಡಿದ್ದನ್ನು ಕಂಡ ಪೊಲೀಸರು ಬಾಲಕಿಯ ತೊದಲು ಮಾತಿಗೆ ಮರುಳಾಗಿದ್ದಾರೆ. ಅಲ್ಲದೇ ಆಕೆಯನ್ನು ಖುದ್ದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವರು ಅವರ ಮನೆಗೆ ಕರೆದುಕೊಂಡು ಹೋಗಿ, ಬಾಲಕಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

    ಬಾಲಕಿಯ ತಂದೆ ಮುಂಬಯಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ತಾಯಿಯೊಂದಿಗೆ ಕಬೀರ್‍ನಗರದಲ್ಲಿ ವಾಸವಾಗಿದ್ದಳು. ತಾಯಿ ಯಾವಾಗಲೂ ತನ್ನ 7 ತಿಂಗಳ ತಮ್ಮನ್ನನ್ನು ನೋಡಿಕೊಳ್ಳುತ್ತಾ, ತನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲವೆಂದು ಕೋಪಗೊಂಡು ಮನೆಯ ಹತ್ತಿರವಿರುವ ಪೊಲೀಸ್ ಠಾಣೆಗೆ ಒಬ್ಬಳೇ ಹೋಗಿದ್ದಾಳೆ. ಅಲ್ಲದೇ ದಾರಿಯಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎಂದು ಕೇಳುತ್ತಾ, ಸರಿಯಾಗಿ ಪಂಚಪೋಖ್ರಿ ಪೊಲೀಸ್ ಠಾಣೆಗೆ ಹೋಗಿ ದೂರುನ್ನು ನೀಡಿದ್ದಾಳೆ.

    ಈ ಕುರಿತು ಮಾತನಾಡಿದ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಯಾದವ್, ಮಕ್ಕಳು ಸಾಮಾನ್ಯವಾಗಿ ಪೊಲೀಸರೆಂದರೆ ಭಯಗೊಳ್ಳುತ್ತಾರೆ. ಆದರೆ ನನ್ನಲ್ಲಿಗೆ ಬಂದ ಬಾಲಕಿ, ನೀವು ನಮ್ಮ ಮನೆಗೆ ಬಂದು ಅಮ್ಮನಿಗೆ ಗದರಿಸಬೇಕು. ಆಕೆ ನನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ. ಒಣ ಹುಲ್ಲಿನ ಹಾಸಿಗೆ ಮೇಲೆ ಮಲಗಿಸುತ್ತಾಳೆ. ಅಷ್ಟೇ ಅಲ್ಲ ನನ್ನ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಸದಾ 7 ತಿಂಗಳ ತಮ್ಮನ ಕಡೆಗೆ ಕಾಳಜಿ ವಹಿಸುತ್ತಾಳೆ ಎಂದು ದೂರಿದ್ದಳು. ನನ್ನ ಜೀವನದ ಅತಿ ಚಿಕ್ಕ ದೂರುದಾರಳನ್ನು ಕಂಡು ನನಗೆ ರೋಮಾಂಚನವಾಯಿತು ಎಂದು ಹೇಳಿದ್ದಾರೆ.

    ಬಾಲಕಿಯೊಂದಿಗೆ ಆಕೆಯ ಮನೆಗೆ ಹೋಗಿ, ಆಕೆಯನ್ನು ಪ್ರತಿದಿನ ಶಾಲೆಗೆ ಕಳುಹಿಸಿ ಮತ್ತು ಮಗನಂತೆ ಆಕೆಯ ಬಗ್ಗೆ ಕೂಡ ಗಮನಹರಿಸುವಂತೆ ತಾಯಿಯ ಬಳಿ ಹೇಳಿದ್ದೇನೆ. ತಾಯಿಯೂ ಸಹ ಮಗಳನ್ನು ಪ್ರತಿದಿನ ಶಾಲೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಪುಟ್ಟ ಮಗುವಿರುವುದರಿಂದ ಫಾಲಕ್ ಕಡೆ ಹೆಚ್ಚಿನ ಗಮನ ನೀಡಲಾಗದೇ ಇರುವುದನ್ನು ಆಕೆಯ ತಾಯಿ ಒಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಫಾಲಕ್, ಪೊಲೀಸ್ ಅಂಕಲ್ ತುಂಬ ಒಳ್ಳೆಯವರು. ನಾನು ಇವತ್ತು ಶಾಲೆಗೆ ಹೋಗಿದ್ದೆ. ನಾನು ಒಂದು ದಿನ ಕೂಡ ಶಾಲೆ ತಪ್ಪಿಸಲು ಬಯಸುವುದಿಲ್ಲ. ನಾನು ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂದು ಹೇಳಿಕೊಂಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾತು ತಪ್ಪಿದ ತಂದೆ – 7ರ ಬಾಲೆಯಿಂದ ಅಪ್ಪನ ವಿರುದ್ಧ ಪೊಲೀಸ್ರಿಗೆ ದೂರು

    ಮಾತು ತಪ್ಪಿದ ತಂದೆ – 7ರ ಬಾಲೆಯಿಂದ ಅಪ್ಪನ ವಿರುದ್ಧ ಪೊಲೀಸ್ರಿಗೆ ದೂರು

    ಚೆನ್ನೈ: ಎರಡನೇ ತರಗತಿಯ ಬಾಲಕಿಯೊಬ್ಬಳು ತನ್ನ ತಂದೆ ಕೊಟ್ಟ ಮಾತನ್ನು ನಡೆಸಿಕೊಟ್ಟಿಲ್ಲ ಎಂದು ಅಪ್ಪನ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವ ಘಟನೆ ತಮಿಳುನಾಡಿದ ವೆಲ್ಲೂರಿನ ಅಂಬೂರ್ ನಲ್ಲಿ ನಡೆದಿದೆ.

    7 ವರ್ಷದ ಇ-ಹನಿಫಾ ಝಾರಾ ತಂದೆ ವಿರುದ್ಧ ದೂರು ನೀಡಿದ ಬಾಲಕಿ. ಈಕೆ ಸೋಮವಾರ ತನ್ನ ತಾಯಿ ಜೊತೆ ಮಹಿಳಾ ಪೊಲೀಸ್ ಠಾಣೆಗೆ ಹೋಗಿದ್ದು, ಸಬ್ ಇನ್ ಪೆಕ್ಟರ್ ವಾಲಾರ್ಮತಿ ಅವರಿಗೆ, ನಮ್ಮ ತಂದೆ ಇಹ್ಸನುಲ್ಲಾ ಶೌಚಾಲಯ ಕಟ್ಟಿಸುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಮಾತು ತಪ್ಪಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಿ ಎಂದು ದೂರು ನೀಡಿದ್ದಾಳೆ.

    ತಂದೆಯ ಭರವಸೆ ಏನು?
    ಬಾಲಕಿಯ ತಂದೆ, ನೀನು ತರಗತಿಯಲ್ಲಿ ಮೊದಲ ರ‍್ಯಾಂಕ್ ಪಡೆದರೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಕಟ್ಟಿಸುವುದಾಗಿ ಎಲ್‍ಕೆಜಿಯಲ್ಲಿರುವಾಗ ಮಾತು ಕೊಟ್ಟಿದ್ದಾರಂತೆ. ಅದರಂತೆಯೇ ಬಾಲಕಿ ತರಗತಿಗೆ ಮೊದಲು ಬಂದಿದ್ದಾಳೆ. ಆದರೆ ಈವರೆಗೂ ತಂದೆ ಶೌಚಾಲಯ ನಿರ್ಮಾಣ ಮಾಡಿಲ್ಲವೆಂದು ಬಾಲಕಿ ದೂರು ನೀಡಿದ್ದಾಳೆ.

    ಈ ಬಗ್ಗೆ ಶಿಕ್ಷಕರಿಗೆ ನಾನು ಹೇಳಲಿಲ್ಲ. ನನಗೆ ಶೌಚಾಲಯಕ್ಕೆ ಹೊರಗಡೆ ಹೋಗುವುದಕ್ಕೆ ನಾಚಿಕೆ ಆಗುತ್ತದೆ. ನಾನು ಪೊಲೀಸ್ ಠಾಣೆಗೆ ಹೋಗುವುದನ್ನು ನನ್ನ ತಾಯಿ ತಡೆಯಲು ಪ್ರಯತ್ನಿಸಿದರು. ಆದರೂ ನಾನೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಬೇಕು ಎಂದು ಒತ್ತಾಯಿಸಿದೆ ಎಂದು ಬಾಲಕಿ ಹೇಳಿದ್ದಾಳೆ.

    ಝಾರಾ ತಾನು ಪಡೆದುಕೊಂಡಿದ್ದ 20 ಪದಕ ಹಾಗೂ ಪ್ರಮಾಣ ಪತ್ರ ಹಿಡಿದು ಪೊಲೀಸ್ ಠಾಣೆಗೆ ಬಂದಿದ್ದಳು. ಬಾಲಕಿ ದೂರು ನೀಡಿದ ಬಳಿಕ ನೈರ್ಮಲ್ಯ ಕಚೇರಿಗೆ ಫೋನ್ ಮಾಡಿ ಬಾಲಕಿ ಕುಟುಂಬದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ತಿಳಿದ ಅಂಬೂರ್ ಪುರಸಭೆಯ ಅಧಿಕಾರಿಯೊಬ್ಬರು ಬಾಲಕಿಯ ಮನೆಗೆ ಭೇಟಿ ನೀಡಿದ್ದು, ಶೌಚಾಲಯವನ್ನು ತಕ್ಷಣವೇ ನಿರ್ಮಾಣ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv