Tag: ಬಾಲಕಿ

  • ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಮೃತಪಟ್ಟ 11ರ ಬಾಲಕಿ!

    ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಮೃತಪಟ್ಟ 11ರ ಬಾಲಕಿ!

    ನವದೆಹಲಿ: 11 ವರ್ಷದ ಬಾಲಕಿಯೊಬ್ಬಳು ಶಾಲೆಯಲ್ಲಿ ಗೆಳತಿ ತಂದಿದ್ದ ಬಾಟಲ್‍ನಲ್ಲಿ ನೀರು ಕುಡಿದು ಸಾವನ್ನಪ್ಪಿದ್ದು, ಬಾಟಲಿಯಲ್ಲಿ ಆ್ಯಸಿಡ್ ಮಿಶ್ರಿತ ನೀರು ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

    ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಈಶಾನ್ಯ ದೆಹಲಿಯ ಹರ್ಷ್ ವಿಹಾರ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರದಂದು ವಿದ್ಯಾರ್ಥಿನಿಯೊಬ್ಬಳು ಗೊತ್ತಿಲ್ಲದೆ ಆ್ಯಸಿಡ್ ಮಿಶ್ರಿತ ನೀರು ತುಂಬಿದ್ದ ಬಾಟಲಿಯನ್ನು ಶಾಲೆಗೆ ತಂದಿದ್ದಳು. ಮಧ್ಯಾಹ್ನ ಊಟಕ್ಕೆ ಸಮಯದಲ್ಲಿ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಕೂತು ಊಟ ಮಾಡುತ್ತಿದ್ದಳು. ಈ ವೇಳೆ ಆಕೆಯ ಗೆಳತಿಯೊಬ್ಬಳು ಈ ಆ್ಯಸಿಡ್ ಮಿಶ್ರಿತ ನೀರನ್ನು ಕುಡಿದಿದ್ದಾಳೆ. ಬಳಿಕ ಒದ್ದಾಡುತ್ತ ನೆಲಕ್ಕೆ ಬಿದ್ದಿದ್ದಾಳೆ.

    ತಕ್ಷಣ ಬಾಲಕಿಯನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಸದ್ಯ ಬಾಲಕಿ ಕುಡಿದ ನೀರಿನ ಬಾಟಲಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದು, ನೀರಿನಲ್ಲಿ ಯಾವ ಆ್ಯಸಿಡ್ ಅಂಶವಿತ್ತು ಎಂದು ನಿಖರ ಮಾಹಿತಿ ಲ್ಯಾಬ್ ರಿಪೋರ್ಟ್ ಬಂದ ಮೇಲೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 12ರ ಪೋರನಿಂದ 10 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    12ರ ಪೋರನಿಂದ 10 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    – ಗರ್ಭಿಣಿಯಾದಳು ಪುಟ್ಟ ಬಾಲಕಿ

    ಮುಂಬೈ: ಅಪ್ರಾಪ್ತ ಬಾಲಕನೊಬ್ಬ 10ರ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಾಲಕನಿಗೆ 12 ವರ್ಷ. ಈ ಸಂಬಂಧ ಸಂತ್ರಸ್ತ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಂತ್ರಸ್ತ ಬಾಲಕಿ ಹಾಗೂ ಆರೋಪಿ ಬಾಲಕ ಇಬ್ಬರೂ ನೆರೆಹೊರೆಯ ಮನೆಯವರು. ಬಾಲಕ ಕಳೆದ ನಾಲ್ಕು ತಿಂಗಳಿನಿಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆನೆಂದು ಸಂತ್ರಸ್ತ ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೋಖದಾ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

     

    ಬಾಲಕಿಗೆ ಕೆಲ ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿದ್ದಾಳೆ ತಿಳಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಕೇಳಿದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಈ ಸಂಬಂಧ ಬಾಲಕನ ವಿರುದ್ಧ ಮೋಖದಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಆರೋಪಿ ಬಾಲಕನನ್ನು ಬಂಧಿಸಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಯಲ್ಲಿ ಬಿದ್ದ ಮಾತ್ರೆ ಸೇವಿಸಿ 4 ವರ್ಷದ ಬಾಲಕಿ ಸಾವು

    ರಸ್ತೆಯಲ್ಲಿ ಬಿದ್ದ ಮಾತ್ರೆ ಸೇವಿಸಿ 4 ವರ್ಷದ ಬಾಲಕಿ ಸಾವು

    ಡೆಹ್ರಾಡೂನ್: ಮನೆಯ ಹೊರಗೆ ಆಟವಾಡುವಾಗ ರಸ್ತೆಯಲ್ಲಿ ಬಿದ್ದಿದ್ದ ಮಾತ್ರೆ ಸೇವಿಸಿದ ಓರ್ವ ಬಾಲಕಿ ಮೃತಪಟ್ಟು, ಬಾಲಕಿಯ ಸಹೋದರನ ಸ್ಥಿತಿ ಗಂಭೀರವಾಗಿರುವ ಘಟನೆ ಡೆಹ್ರಾಡೂನಿನಲ್ಲಿ ನಡೆದಿದೆ.

    ಶಗುನ್(4) ಮೃತ ಬಾಲಕಿಯಾಗಿದ್ದು, ಪಿಯೂಷ್ ಆಸ್ಪತ್ರೆಯಲ್ಲಿ ಗಂಭೀರವಾಗಿದ್ದಾನೆ. ಫೆ. 21ರಂದು ಈ ಘಟನೆ ನಡೆದಿದ್ದು, ಬಾಲಕಿಯ ಕುಟುಂಬದವರು 25ರಂದು ನಡೆಯುವ ಮದುವೆ ಸಮಾರಂಭಕ್ಕಾಗಿ ಜವಳಿ ಖರೀದಿಸಲು ಹೋಗಿದ್ದರು.

    ತಂದೆ ಉಮೇಶ್ ತನ್ನ ಮಕ್ಕಳು ಶಗುನ್ ಹಾಗೂ ಪಿಯೂಷ್‍ನನ್ನು ತನ್ನ ಅಜ್ಜ ಶೋರ್ ರಾಮ್ ಬಳಿ ಬಿಟ್ಟು ಹೋಗಿದ್ದರು. ಅಜ್ಜ ತನ್ನ ಕೆಲಸದಲ್ಲಿ ನಿರತರಾಗಿದ್ದಾಗ ಶಗುನ್ ಹಾಗೂ ಪಿಯೂಷ್ ಪಕ್ಕದ ಮನೆಯವರ ಮಕ್ಕಳ ಜೊತೆ ಆಟವಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಮಾತ್ರೆಯನ್ನು ಮೂವರು ಹಂಚಿಕೊಂಡು ತಿಂದಿದ್ದಾರೆ.

    ಮಾತ್ರೆ ಸೇವಿಸಿ ಕೆಲವೇ ಹೊತ್ತಿನಲ್ಲಿ ಶಗುನ್, ಪಿಯೂಷ್ ಹಾಗೂ ಇನ್ನೊರ್ವ ಬಾಲಕನ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಮೂವರು ಮಕ್ಕಳು ವಾಂತಿ ಮಾಡಿ ತಲೆ ತಿರುಗುತ್ತಿದೆ ಎಂದು ಹೇಳುತ್ತಿದ್ದರು. ಪಕ್ಕದ ಮನೆಯ ಮಹಿಳೆ ತನ್ನ ಮಗನ ಬಾಯಿಗೆ ಕೈ ಹಾಕಿ ವಾಂತಿ ಮಾಡಿಸಿದ್ದಾಳೆ. ಇದರಿಂದ ಆ ಬಾಲಕನ ಆರೋಗ್ಯದ ಸ್ಥಿತಿ ಸುಧಾರಿಸಿದೆ.

    ಶಗುನ್ ಹಾಗೂ ಪಿಯೂಷ್ ತಂದೆ ಉಮೇಶ್ ತನ್ನ ಇಬ್ಬರು ಮಕ್ಕಳನ್ನು ಕಾಶಿಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶಗೂನ್ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಪಿಯೂಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಾರ್ಚ್ 19ರಂದು ಶಗೂನ್‍ನ 5ನೇ ವರ್ಷದ ಹುಟ್ಟುಹಬ್ಬವಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೂಸ್ ಎಂದು ನೀಲಗಿರಿ ತೈಲ ಕುಡಿದ ಬಾಲಕಿ ಸಾವು!

    ಜ್ಯೂಸ್ ಎಂದು ನೀಲಗಿರಿ ತೈಲ ಕುಡಿದ ಬಾಲಕಿ ಸಾವು!

    ಮೈಸೂರು: ನೀಲಗಿರಿ ತೈಲವನ್ನು ಮನೆಯಲ್ಲಿ ಎಲ್ಲಂದರಲ್ಲಿ ಇಡುವ ಪೋಷಕರು ಈ ಸುದ್ದಿಯನ್ನು ಓದಲೇ ಬೇಕು. ನೀಲಗಿರಿ ತೈಲ ಕುಡಿದು 5 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕುಶಾಲನಗರ ತಾಲೂಕು ಕೂಡಿಗೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಕೂಡಿಗೆ ಕೊಪ್ಪಲು ಗ್ರಾಮದ ಪ್ರಸನ್ನ ಕುಮಾರ್ ಎಂಬವರ ಮಗಳು ವರ್ಷಿತ (5) ಸಾವನ್ನಪ್ಪಿದ ದುರ್ದೈವಿ ಬಾಲಕಿ. ಜ್ಯೂಸ್ ಎಂದು ಭಾವಿಸಿ ನೀಲಗಿರಿ ತೈಲ ಕುಡಿದು ಅಸ್ವಸ್ಥಳಾದ ವರ್ಷಿತಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರ್ಷಿತಾ ಸಾವನ್ನಪ್ಪಿದ್ದಾಳೆ.

     

    ನೀಲಗಿರಿ ತೈಲವನ್ನ ಕುಡಿದ ವರ್ಷಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಆಂಬ್ಯುಲೆನ್ಸ್ ಕರೆ ಮಾಡಿದ್ದೆ. ಅವರು ಮೈಸೂರಿನ ಆಸ್ಪತ್ರೆಯಿಂದ ಅಂಬುಲೆನ್ಸ್ ಕಳಿಸುವಂತೆ ತಿಳಿಸುತ್ತಾರೆ. ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಗ್ರಾಮಕ್ಕೆ ಬರಲಿಲ್ಲ. ಅಷ್ಟೇ ಅಲ್ಲದೇ ವಾಹನದಲ್ಲಿ ಆಮ್ಲಜನಕ ಸೇರಿದಂತೆ ಸೂಕ್ತ ಸೌಲಭ್ಯಗಳಿರಲಿಲ್ಲ. ಇದರಿಂದಾಗಿ ವರ್ಷಿತಾ ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಎದುರಾಯಿತು. ಬಳಿಕ ಆಸ್ಪತ್ರೆಗೆ ತಲುಪಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿ ತಂದೆ ಪ್ರಸನ್ನಕುಮಾರ್ ಆರೋಪಿಸಿದ್ದಾರೆ.

    ಹೆಸರಿಗೆ ಮಾತ್ರ ಅಂಬುಲೆನ್ಸ್ ವ್ಯವಸ್ಥೆ ಇದೆ. ಅದರಲ್ಲಿ ಅಗತ್ಯ ಚಿಕಿತ್ಸಾ ಸಾಮಗ್ರಿಗಳು ಹಾಗೂ ಆಮ್ಲಜನಕ ಇಟ್ಟಿಲ್ಲ. ಇವರು ರೋಗಿಗಳ ಜೀವನದ ಜೊತೆಗೆ ಆಟವಾಡುತ್ತಿದ್ದಾರೆ ಎಂದು ದೂರಿದರು.

    ಮಗಳಿಗೆ ಗಾಯವಾಗಿತ್ತು. ಅದಕ್ಕೆ ಹಚ್ಚಿಕೊಳ್ಳಲು ನೀಲಗಿರಿ ತೈಲವನ್ನು ಮನೆಯಲ್ಲಿ ಇಡಲಾಗಿತ್ತು. ವರ್ಷಿತಾಗೆ ಜ್ಯೂಸ್ ಅಂದ್ರೆ ತುಂಬಾ ಇಷ್ಟ. ಪ್ರಸನ್ನಕುಮಾರ್ ಮಗಳಿಗೆ ಜ್ಯೂಸ್ ತಂದು ಕೊಡುತ್ತಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ವರ್ಷಿತಾಗೆ ಇಂದು ನೀಲಗಿರಿ ಬಾಟಲ್ ನೋಡಿದ್ದಾಳೆ. ಬಾಟಲ್‍ನಲ್ಲಿರುವುದು ಜ್ಯೂಸ್ ಎಂದು ತಿಳಿದು ಕುಡಿದ ಪರಿಣಾಮ ಅಸ್ವಸ್ಥಳಾಗಿ ಬಿದ್ದಿದ್ದಳು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವರ್ಷಿತಾ ಅಜ್ಜಿ ಸುಶೀಲಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 10ರ ಪೋರಿಗೆ ಪ್ರೇಮ ಪತ್ರ ಬರೆದ 13ರ ಪೋರ

    10ರ ಪೋರಿಗೆ ಪ್ರೇಮ ಪತ್ರ ಬರೆದ 13ರ ಪೋರ

    -ನಮ್ಮ ಹುಡ್ಗ ಒಳ್ಳೆಯವನು ಎಂದ ಪೋಷಕರು

    ಗಾಂಧಿನಗರ: 13 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕಿಗೆ ಪ್ರೇಮ ಪತ್ರ ಬರೆದಿದ್ದು, ಬಳಿಕ ಇಬ್ಬರ ಕುಟುಂಬದವರು ಪರಸ್ಪರ ಹೊಡೆದಾಡಿಕೊಂಡ ಘಟನೆ ಗುಜರಾತ್‍ನ ಸುರೇಂದ್ರನಗರ ಜಿಲ್ಲೆಯಲ್ಲಿ ನಡೆದಿದೆ.

    ಸುರೇಂದ್ರನಗರದ ಗೋಲಿಡಾ ಗ್ರಾಮದ ಆನಂದ್‍ಪುರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಾಲಕ ಹಾಗೂ ಬಾಲಕಿಯ ಕುಟುಂಬಸ್ಥರು ಪರಸ್ಪರ ಆರೋಪ ಮಾಡುತ್ತಿದ್ದಾರೆ.

    ಮಾಹಿತಿಗಳ ಪ್ರಕಾರ ಬಾಲಕ ‘ಐ ಲವ್ ಯೂ’ ಎಂದು ಹೇಳುತ್ತಾ ಬಾಲಕಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೇ ಬಾಲಕ ಶಾಲೆಯಲ್ಲಿ ಬಾಲಕಿಗೆ ಲವ್ ಲೆಟರ್ ಕೂಡ ನೀಡುತ್ತಿದ್ದನು. ಗುರುವಾರ ಈ ಘಟನೆ ಬಗ್ಗೆ ಇಬ್ಬರ ಕುಟುಂಬದವರು ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬಾಲಕ ತನಗೆ ಹಿಂಸೆ ನೀಡುತ್ತಿರುವುದನ್ನು ಬಾಲಕಿ ತನ್ನ ಪೋಷಕರ ಬಳಿ ಹೇಳಿದ್ದಾಳೆ. ಈ ವೇಳೆ ಬಾಲಕಿಯ ಪೋಷಕರು ಬಾಲಕನ ಜೊತೆ ಶಾಂತಿಯುತವಾಗಿ ಮಾತನಾಡುತ್ತಿದ್ದರು. ಆದರೆ ಬಾಲಕನ ಕುಟುಂಬದವರಿಗೆ ಅವರು ಮಾಡುತ್ತಿದ್ದ ಆರೋಪಗಳು ಇಷ್ಟವಾಗಲಿಲ್ಲ. ಇದರಿಂದ ಬೇಸರಗೊಂಡು ಬಾಲಕಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಹಲ್ಲೆ ಮಾಡುವಾಗ ಬಾಲಕನ ಕುಟುಂಬದವರು ಬಾಲಕಿಯ ಪೋಷಕರ ಮೇಲೆ ಖಾರದ ಪುಡಿ ಎರಚಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಲ್ಲಿ ಬಾಲಕಿಯ ಕಡೆಯವರಾದ 6 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿದ್ದ ಅಧಿಕಾರಿ ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ಕುಟುಂಬದವರು ಬಾಲಕಿಯ ಪೋಷಕರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಹಲ್ಲೆಯಿಂದ ನಮ್ಮ ಕಡೆಯವರು 4 ಜನ ಗಾಯಗೊಂಡಿದ್ದಾರೆ. ಅಲ್ಲದೇ ಬಾಲಕಿಯ ಕುಟುಂಬದವರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಹುಡುಗ ಯಾರಿಗೂ ಪ್ರೇಮ ಪತ್ರ ಬರೆದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಬೆಂಕಿ ಅವಘಡದಲ್ಲಿ ಪವಾಡಸದೃಶ ಪಾರಾದ ಬಾಲಕಿ!

    ಏರ್ ಶೋ ಬೆಂಕಿ ಅವಘಡದಲ್ಲಿ ಪವಾಡಸದೃಶ ಪಾರಾದ ಬಾಲಕಿ!

    ಬೆಂಗಳೂರು: ಏರ್ ಶೋ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಾದ ಬೆಂಕಿ ಅನಾಹುತದಿಂದ ಬಾಲಕಿಯೊಬ್ಬಳು ಪವಾಡ ರೀತಿಯಲ್ಲಿ ಪಾರಾಗಿರುವ ಸಂಗತಿ ಬೆಳಕಿಗೆ ಬಂದಿದೆ.

    ಏರ್ ಶೋ ನೋಡಲು ಬಂದಿದ್ದ ಕಿರಣ್ ಸಿಂಗ್ ಎಂಬವರ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಂದು ಏರ್ ಶೋ ನೋಡಲು ಕಿರಣ್ ಸಿಂಗ್ ಕುಟುಂಬ ಸಮೇತರಾಗಿ ಹೋಗಿದ್ದರು. ಆದರೆ ಸ್ಥಳದಲ್ಲಿ ಬಿಸಿಲು ತುಂಬಾ ಇದ್ದ ಕಾರಣ ಕಿರಣ್ ಅವರ ಮಗಳು ಕಾರಿನಲ್ಲಿ ಮಲಗಿರುತ್ತೇನೆ ಎಂದು ಹೋಗಿದ್ದಳು. ಬಳಿಕ ಬೆಂಕಿ ಅನಾಹುತ ನಡೆಯುವ ಅರ್ಧ ಗಂಟೆಯ ಮೊದಲಷ್ಟೇ ಮಗಳನ್ನು ಕಾರಿನಿಂದ ಕಿರಣ್ ಸಿಂಗ್ ಕರೆದುಕೊಂಡು ಹೋಗಿದ್ದರು. ನಂತರ ಪುನಃ ಬಂದು ನೋಡುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು. ಕಾರು ಹೋದರು ಚಿಂತೆ ಇಲ್ಲ. ಮಗಳು ಬದುಕಿ ಉಳಿದಿದ್ದೇ ಸಾಕು ಎಂದು ತಂದೆ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ:ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ಪಬ್ಲಿಕ್ ಟಿವಿ ಜೊತೆ ಘಟನೆ ಕುರಿತು ಕರೆ ಮಾಡಿ ಮಾತನಾಡಿದ ಕಿರಣ್ ಸಿಂಗ್, ಯಾಕೋ ಸುಸ್ತಾಗುತ್ತಿದೆ ಎಂದು ಮಗಳು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ನಮ್ಮ ಹೋಂಡಾ ಸಿಟಿ ಕಾರಿನೊಳಗೆ ಹೋಗಿ ಮಲಗಿದ್ದಳು. ಬಳಿಕ ಅನಾಹುತ ನಡೆಯುವ ಕೇವಲ ಅರ್ಧ ಗಂಟೆ ಮುನ್ನವಷ್ಟೇ ನನ್ನ ಪತ್ನಿ ಮಗಳನ್ನು ಕರೆತರಲು ಹೇಳಿದ್ದಕ್ಕೆ ಕಾರ್ ಬಳಿ ಹೋಗಿ ಶೋ ನೋಡಲು ಆಕೆಯನ್ನು ವಾಪಾಸ್ ಕರೆದುಕೊಂಡು ಬಂದೆ. ಅದೃಷ್ಟವಶಾತ್ ದೇವರ ಧಯೆಯಿಂದ ನಮ್ಮ ಮಗಳು ಉಳಿದಳು ಎಂದು ತಿಳಿಸಿದರು. ಇದನ್ನೂ ಓದಿ:1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

    ಏರೋ ಇಂಡಿಯಾ 2019ರ ಏರ್ ಶೋ ಅಗ್ನಿ ಅವಘಡ ಸಂಭವಿಸಿದ್ದು, ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ಬಂದಿದೆ. ಆದರೆ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಾರ್ವಜನಿಕರಿಗೆ ಸ್ಥಳಕ್ಕೆ ಅವಕಾಶ ನೀಡಲಾಗುವುದು ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಏರ್ ಶೋ ನಡೆಯುತ್ತಿರುವ ಕಾರಣ ಸ್ಥಳದಲ್ಲಿ 1 ಸಾವಿರ ಕಾರುಗಳು ಪಾರ್ಕ್ ಮಾಡಲಾಗಿತ್ತು. ಶೋಗೆ ಹೆಚ್ಚಿನ ಜನರು ಆಗಮಿಸಿದ ಕಾರಣ ಕಾರುಗಳನ್ನು ಮೈದಾನದಂತಹ ಪ್ರದೇಶದಲ್ಲಿ ತಾತ್ಕಾಲಿವಾಗಿ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಥಳದಲ್ಲಿ ಹುಲ್ಲು ಹೆಚ್ಚಾಗಿರುವುದರಿಂದ ಗಾಳಿಗೆ ಬೆಂಕಿ ಬಹುಬೇಗ ಹರಡಿದೆ. ಪರಿಣಾಮ 300ಕ್ಕೂ ಹೆಚ್ಚು ಕಾರುಗಳು ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

    https://www.youtube.com/watch?v=Dqyc4h3Tc1Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ರಾಪ್ತ ಮಗಳನ್ನು ಮದುವೆ ಮಾಡಿಕೊಡಲ್ಲ ಎಂದ ತಾಯಿ ಮೇಲೆ ಮಾರಣಾಂತಿಕ ಹಲ್ಲೆ!

    ಅಪ್ರಾಪ್ತ ಮಗಳನ್ನು ಮದುವೆ ಮಾಡಿಕೊಡಲ್ಲ ಎಂದ ತಾಯಿ ಮೇಲೆ ಮಾರಣಾಂತಿಕ ಹಲ್ಲೆ!

    – ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನ ಕುಟುಂಬಸ್ಥರಿಂದ ಕೃತ್ಯ

    ವಿಜಯಪುರ: ಅಪ್ರಾಪ್ತ ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ.

    ಕಾರಜೋಳ ಗ್ರಾಮ ಪಂಚಾಯತಿ ಸದಸ್ಯೆ ಕಸ್ತೂರಿ ಹೊಲ್ದೂರ್ ಹಲ್ಲೆಗೆ ಒಳಗಾದ ತಾಯಿ. ಗಂಭೀರವಾಗಿ ಗಾಯಗೊಂಡಿರುವ ಕಸ್ತೂರಿ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವಕ ಜಟ್ಟೆಪ್ಪನ ಸಂಬಂಧಿಕರು ಹಲ್ಲೆ ಮಾಡಿದ್ದು, ಈ ಪೈಕಿ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದ ಬಬಲೇಶ್ವರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಆಗಿದ್ದೇನು?:
    ಕಾರಜೋಳ ಗ್ರಾಮ ಕಸ್ತೂರಿ ಹೊಲ್ದೂರ್ ಅವರ ಮಗಳಿಗೆ ಅದೇ ಗ್ರಾಮದ ಜಟ್ಟೆಪ್ಪ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಬಾಲಕಿ ಜಟ್ಟೆಪ್ಪನನ್ನು ಮದುವೆಯಾಗಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಜಟ್ಟೆಪ್ಪ ನಿತ್ಯವೂ ಬಾಲಕಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಈ ಕುರಿತು ತಂದೆ-ತಾಯಿ ಬಳಿ ಸಮಸ್ಯೆ ಹೇಳಿಕೊಂಡಿದ್ದಾಳೆ.

    ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಲು ಕಸ್ತೂರಿ ಹಾಗೂ ಪತಿ ಮುಂದಾಗಿದ್ದರು. ಇದರಿಂದಾಗಿ ಕೋಪಗೊಂಡ ಜಟ್ಟೆಪ್ಪನ ತಾಯಿ ಶ್ರೀದೇವಿ, ತಂದೆ ಗಂಗಪ್ಪ, ಸಂಬಂಧಿಕರಾದ ಸವಿತಾ, ಸುಮಿತ್ರ, ಪದ್ಮವ್ವ, ಸಂಗೀತಾ, ಸಿದ್ದಪ್ಪ ಹಾಗೂ ಯಲ್ಲಪ್ಪ ಕಸ್ತೂರಿ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಎರಡು ಕುಟುಂಬಗಳ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೊಡಲಿ ಹಿಡಿದು ಬಂದಿದ್ದ ಜಟ್ಟೆಪ್ಪನ ಸಂಬಂಧಿಯೊಬ್ಬ ಕಸ್ತೂರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಥಳೀಯರು ಗಲಾಟೆಯನ್ನು ತಡೆದಿದ್ದಾರೆ. ಬಲವಾಗಿ ತಲೆಗೆ ಹೊಡೆತ ಬಿದ್ದಿದ್ದರಿಂದ ಅಸ್ವಸ್ಥರಾಗಿ ಬಿದ್ದಿದ್ದ ಕಸ್ತೂರಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಕಸ್ತೂರಿ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ನಡೆಸಿದ ಪೈಕಿ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರು ಪರಾರಿಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಟ್ಟ ಅಭಿಮಾನಿಯ ಪ್ರೀತಿಗೆ ಸೋತ ಕಿಚ್ಚ!

    ಪುಟ್ಟ ಅಭಿಮಾನಿಯ ಪ್ರೀತಿಗೆ ಸೋತ ಕಿಚ್ಚ!

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪುಟ್ಟ ಅಭಿಮಾನಿ ತಮ್ಮ ಮೇಲಿಟ್ಟಿರುವ ಪ್ರೀತಿಗೆ ಕಿಚ್ಚ ಸುದೀಪ್ ಸೋತಿದ್ದು, ಟ್ವೀಟ್ ಮಾಡಿ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಕಿಚ್ಚ ಫ್ಯಾನ್ಸ್ ಅಸೋಸಿಯೇಷನ್ ಟ್ವಿಟರ್ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ಪುಟ್ಟ ಬಾಲಕಿ ತಮ್ಮ ಮೇಲಿಟ್ಟಿರುವ ಅಭಿಮಾನಕ್ಕೆ, ಪ್ರೀತಿಗೆ ಕಿಚ್ಚನ ಸೋತಿದ್ದು, ವಿಡಿಯೋಗೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

    ವಿಡಿಯೋದಲ್ಲಿ ವಿಕಲಚೇತನ ಬಾಲಕಿಯೊಬ್ಬಳು ಸುದೀಪ್ ಅವರ ಸಿನಿಮಾ ಹಾಡನ್ನು ಹಾಡಿ ನಾನು ನಿಮ್ಮ ಅಭಿಮಾನಿ, ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮ್ಮನ್ನು ಒಂದು ಸಲ ನೋಡಬೇಕು ಅಂತ ಆಸೆ ಎಂದು ಹೇಳಿದ್ದಾಳೆ. ಈ ನಿಷ್ಕಲ್ಮಶ ಪ್ರೀತಿಗೆ ಸುದೀಪ್ ಫಿದಾ ಆಗಿದ್ದಾರೆ. ಅಲ್ಲದೆ ಟ್ವಿಟ್ಟರ್ ಮೂಲಕ ಫ್ಯಾನ್ಸ್ ಅಸೋಷಿಯೇಷನ್ ಫೇಜ್‍ಗೆ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಈ ಪ್ರೀತಿಗೆ ಖುಷಿ ಪಡಬೇಕೋ ಅಥವಾ ಬಾಲಕಿಯ ಸ್ಥಿತಿಗೆ ದುಃಖ ಪಡಬೇಕೋ ನನಗೆ ಗೊತ್ತಾಗುತ್ತಿಲ್ಲ. ಈ ವಿಡಿಯೋ ನನ್ನ ತನಕ ತಲುಪಿಸಿದ್ದಕ್ಕೆ ಧನ್ಯವಾದಗಳು. ಈ ಪುಟ್ಟ ಅಭಿಮಾನಿ ಎಲ್ಲಿದ್ದಾರೆ ಅಂತಾ ತಿಳಿಬಹುದಾ ಎಂದು ಕೇಳಿ ಟ್ವೀಟ್ ಮಾಡಿದ್ದಾರೆ.

    ಸದ್ಯ ಈ ಮಗುವಿನ ಮಾಹಿತಿ ದೊರಕಿದ್ದು, ಇಂದು ಬಾಲಕಿಯನ್ನು ಭೇಟಿಯಾಗಲು ಕಿಚ್ಚ ಸುದೀಪ್ ತೆರೆಳುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಟ್ಟುಹಬ್ಬದ ಹಣವನ್ನು ಯೋಧರ ಕಲ್ಯಾಣ ನಿಧಿಗೆ ನೀಡಿದ ಶಾಲಾ ಬಾಲಕಿ

    ಹುಟ್ಟುಹಬ್ಬದ ಹಣವನ್ನು ಯೋಧರ ಕಲ್ಯಾಣ ನಿಧಿಗೆ ನೀಡಿದ ಶಾಲಾ ಬಾಲಕಿ

    ಬಳ್ಳಾರಿ: ಶಾಲಾ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ಹಣವನ್ನು ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಿದ್ದಾಳೆ.

    ತನುಶ್ರೀ ಬಳ್ಳಾರಿಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಮಾಡಿದ ಹಿನ್ನೆಲೆಯಲ್ಲಿ ತನುಶ್ರೀ ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡುವುದನ್ನು ನಿಲ್ಲಿಸಿದ್ದಾಳೆ. ಆ ಹಣವನ್ನು ಆಕೆ ಸಿಆರ್‌ಪಿಎಫ್ ಯೋಧರ ನೆರವಿಗೆ ನೀಡಿದ್ದಾಳೆ.

    ತನುಶ್ರೀ ತನ್ನ ಹುಟ್ಟುಹಬ್ಬದ ಆಚರಣೆಗೆ ಖರ್ಚಾಗುವ ಹಣವನ್ನು ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಲು ಮುಂದಾಗಿದ್ದಳು. ಬೆಳ್ಳಂ ಬೆಳಗ್ಗೆ ತನುಶ್ರೀ ತನ್ನ ಪೋಷಕರೊಂದಿಗೆ ಬಂದು ಬಳ್ಳಾರಿ ಡಿಸಿ ಮೂಲಕ ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ಡಿಡಿ ಮೂಲಕ ಹಣ ಪಾವತಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಲೆಂಟೆನ್ಸ್ ಡೇಗೆ ಗುಲಾಬಿ ಕೊಡೋ ವಿಚಾರಕ್ಕೆ ಗಲಾಟೆ – ಮತ್ತೆ ರೋಡ್ ಸೈಡಲ್ಲಿ ಬಡಿದಾಡಿಕೊಂಡ ಹುಡುಗಿರು

    ವಾಲೆಂಟೆನ್ಸ್ ಡೇಗೆ ಗುಲಾಬಿ ಕೊಡೋ ವಿಚಾರಕ್ಕೆ ಗಲಾಟೆ – ಮತ್ತೆ ರೋಡ್ ಸೈಡಲ್ಲಿ ಬಡಿದಾಡಿಕೊಂಡ ಹುಡುಗಿರು

    ಆನೇಕಲ್: ಕಳೆದ ಮೂರು ದಿನಗಳ ಹಿಂದೆಯಷ್ಟೇ ವಾಲೆಂಟೆನ್ಸ್ ಡೇಗೆ ಗುಲಾಬಿ ನೀಡುವ ವಿಚಾರಕ್ಕಾಗಿ ಬಸ್ ನಿಲ್ದಾಣದಲ್ಲಿ ಕಿತ್ತಾಡಿಕೊಂಡ ಹುಡುಗಿರ ವಿಡಿಯೋ ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿತ್ತು. ಆದೇ ಹುಡುಗಿಯರು ಇಂದು ಮತ್ತೆ ರಸ್ತೆಯಲ್ಲಿ ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

    ಇಂದು ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಹುಡುಗಿಯರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ರಸ್ತೆ ಎಂದು ಕೂಡ ನೋಡದೇ ಕಿತ್ತಾಡಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿದೆ. ಶಾಲಾ ಸಮವಸ್ತ್ರದಲ್ಲಿ ಇರುವಾಗಲೇ ಹುಡುಗಿರ ಮಧ್ಯೆ ಜಗಳ ನಡೆದಿದೆ. ಶಾಲಾ ಸಮಯದಲ್ಲಿ ಇರುವಾಗಲೇ ಹುಡುಗಿಯ ನಡುವೇ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕೇಳಿಬಂದಿದೆ.

    ಕಳೆದ ಮೂರು ದಿನಗಳ ಹಿಂದೆ ಆನೇಕಲ್ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ಘಟನೆ ನಡೆದಿತ್ತು. ಪ್ರಿಯಕರನಿಗೆ ಮತ್ತೋರ್ವ ಹುಡುಗಿ ಗುಲಾಬಿ ಹೂ ಕೊಟ್ಟಳೆಂದು ಹುಡುಗಿಯರು ಹೊಡೆದಾಡಿಕೊಂಡಿದ್ದರು. ಈ ವೇಳೆ ಸ್ಥಳೀಯರು ಜಗಳ ಬಿಡಿಸಿ ಹುಡುಗಿಯರಿಗೆ ಬುದ್ಧಿವಾದ ಹೇಳಿ ಹೇಳಿದ್ದರು. ಆದರೆ ಹಿರಿಯರ ಮಾತಿಗೆ ಬೆಲೆ ನೀಡಿದ ಹುಡುಗಿಯರು ಮತ್ತೆ ಗ್ಯಾಂಗ್ ಕಟ್ಟಿಕೊಂಡು ಜಗಳ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv