Tag: ಬಾಲಕಿ

  • ಬದುಕಬೇಕೇ ಸಾಯಬೇಕೇ ಪೋಲಿಂಗ್ ಮಾಡಿ ಆತ್ಮಹತ್ಯೆಗೆ ಶರಣಾದ ಬಾಲಕಿ

    ಬದುಕಬೇಕೇ ಸಾಯಬೇಕೇ ಪೋಲಿಂಗ್ ಮಾಡಿ ಆತ್ಮಹತ್ಯೆಗೆ ಶರಣಾದ ಬಾಲಕಿ

    ಕೌಲಾಲಂಪುರ: 16 ವರ್ಷದ ಬಾಲಕಿಯೊಬ್ಬಳು ತನ್ನ ಇನ್‍ಸ್ಟಾಗ್ರಾಂನಲ್ಲಿ ನಾನು ಸಾಯಬೇಕಾ? ಇಲ್ಲವಾ? ಎಂದು ಪೋಲ್ ಸೃಷ್ಟಿಸಿ ಆತ್ಮಹತ್ಯೆಗೆ ಶರಣಾದ ಶಾಕಿಂಗ್ ಘಟನೆ ಮಲೇಷ್ಯಾದಲ್ಲಿ ನಡೆದಿದೆ.

    ಬಾಲಕಿ ಮೇ 13ರಂದು ತನ್ನ ಇನ್‍ಸ್ಟಾಗ್ರಾಂನಲ್ಲಿ “ಇದು ತುಂಬಾ ಮುಖ್ಯವಾದ ವಿಷಯ. ನನಗೆ ಸಹಾಯ ಮಾಡಿ. ಡಿ ಅಥವಾ ಎಲ್(ಸಾಯಬೇಕಾ ಅಥವಾ ಬದುಕಬೇಕಾ) ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ” ಎಂದು ಬರೆದು ಪೋಲ್ ಸೃಷ್ಟಿಸಿದ್ದಳು.

    ಬಾಲಕಿಯ ಇನ್‍ಸ್ಟಾಗ್ರಾಂ ಪೋಲ್‍ಗೆ ಶೇ.69ರಷ್ಟು ಫಾಲೋವರ್ಸ್ ‘ಸಾಯಬೇಕು’ ಎಂದು ವೋಟ್ ಹಾಕಿದ್ದರು. ಈ ಫಲಿತಾಂಶದಿಂದ ಖಿನ್ನತೆಗೆ ಒಳಗಾದ ಬಾಲಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸರಾವಾಕ್ ನಗರದ ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯ ಸಾವಿಗೆ ಆಕೆಯ ಇನ್‍ಸ್ಟಾಗ್ರಾಂನಲ್ಲಿ ಸಾಯಬೇಕು ಎಂದು ವೋಟ್ ಹಾಕಿದವರೇ ಕಾರಣರಾಗುತ್ತಾರೆ. ಏಕೆಂದರೆ ಅವರೇ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲ ರಾಮ್‍ಕೃಪಾಲ್ ಸಿಂಗ್ ಹೇಳಿದ್ದಾರೆ.

    ಈ ದೇಶದ ಯುವ ಜನತೆಯ ಮಾನಸಿಕ ಆರೋಗ್ಯದ ಬಗ್ಗೆ ನನಗೆ ಚಿಂತೆ ಆಗುತ್ತಿದೆ. ಏಕೆಂದರೆ ಇದು ರಾಷ್ಟ್ರೀಯ ಸಮಸ್ಯೆ ಹಾಗೂ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಲೇಷ್ಯಾದ ಯುವ ಹಾಗೂ ಕ್ರೀಡಾ ಸಚಿವರಾದ ಸಯ್ಯದ್ ಸಾದಿಕ್ ಸಯ್ಯದ್ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

  • 9 ವರ್ಷದ ಮಗಳನ್ನು ಕೊಂದ ಮಲತಾಯಿಗೆ ಜೀವಾವಧಿ ಶಿಕ್ಷೆ!

    9 ವರ್ಷದ ಮಗಳನ್ನು ಕೊಂದ ಮಲತಾಯಿಗೆ ಜೀವಾವಧಿ ಶಿಕ್ಷೆ!

    ನ್ಯೂಯಾರ್ಕ್: 9 ವರ್ಷದ ಮಗಳನ್ನು ಕೊಂದ ಭಾರತದ ಪಂಜಾಬ್ ಮೂಲದ ಮಲತಾಯಿಗೆ ಅಮೇರಿಕದ ಕ್ವೀನ್ಸ್ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    ನ್ಯೂಯಾರ್ಕ್‍ನ ಕ್ವೀನ್ಸ್ ನಲ್ಲಿ ನೆಲೆಸಿದ್ದ ಶಾಂದೈ ಅರ್ಜುನ್ (55 ) ತನ್ನ 9 ವರ್ಷದ ಅಶ್‍ದೀಪ್ ಕೌರ್‍ನನ್ನು ಬಾತ್‍ರೂಮಿನಲ್ಲಿ ಹೊಡೆದು ಕೊಲೆ ಮಾಡಿದ್ದಳು.

    ಭಾರತದಿಂದ ತಂದೆಯನ್ನು ನೋಡಲು ಬಂದಿದ್ದ ಬಾಲಕಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಮೇರಿಕ ನ್ಯಾಯಾಲಯದ ನ್ಯಾಯಮೂರ್ತಿ ಕೆನ್ನೆತ್ ಹೋಲ್ಡರ್ ಅವರು ಶಾಂದೈ ಅರ್ಜುನ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

    ಈ ಪ್ರಕರಣ ತುಂಬಾ ಭಯಾನಕವಾಗಿದೆ. ತನ್ನ ಮಗಳನ್ನು ರಕ್ಷಿಸಬೇಕಾದ ಮಲತಾಯಿಯೇ ಆಕೆಯನ್ನು ಘೋರವಾಗಿ ಕೊಲೆ ಮಾಡಿರುವುದು ತುಂಬಾ ದೊಡ್ಡ ಅಪರಾಧ. ಈ ಮಹಿಳೆಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದು ಕ್ವೀನ್ಸ್ ಜಿಲ್ಲೆಯಾ ವಕೀಲರಾದ ಜಾನ್ ರಾಯಾನ್ ಅವರು ಹೇಳಿದ್ದಾರೆ.

    ಏನಿದು ಪ್ರಕರಣ?
    2016ರಲ್ಲಿ ಭಾರತದಿಂದ ತನ್ನ ತಂದೆಯನ್ನು ನೋಡಲು ಅಮೇರಿಕಕ್ಕೆ ಬಂದಿದ್ದ ಅಶ್‍ದೀಪ್ ಕೌರ್ ಎಂಬ 9 ವರ್ಷದ ಬಾಲಕಿಯನ್ನು ಬಾತ್‍ರೂಮಿನಲ್ಲಿ ಕೊಲೆ ಮಾಡಲಾಗಿತ್ತು. ಅಮೇರಿಕದ ಕ್ವೀನ್ಸ್ ನಲ್ಲಿ ಅಪಾಟ್ರ್ಮೆಂಟ್‍ವೊಂದಲ್ಲಿ ವಾಸವಿದ್ದ ಶಾಂದೈ ಅರ್ಜುನ್ ಅವರು ತಮ್ಮ ಮನೆಯ ಬಾತ್‍ರೂಮಿನಲ್ಲಿ ಮಲಮಗಳನ್ನು ಹತ್ಯೆ ಮಾಡಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಮಾಡಲಾಗಿದೆ ಎನ್ನುವ ಫಲಿತಾಂಶ ಪ್ರಕಟವಾಗಿತ್ತು. ಶಾಂದೈ ಅರ್ಜುನ್ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಳು.

  • ಮಲಗಿದ್ದಾಳೆಂದು ಬಾಗಿಲು ಲಾಕ್ ಮಾಡ್ಕೊಂಡು ಹೋದ ಪೋಷಕರು – ಅಗ್ನಿ ದುರಂತದಲ್ಲಿ ಮಗಳು ಸಾವು

    ಮಲಗಿದ್ದಾಳೆಂದು ಬಾಗಿಲು ಲಾಕ್ ಮಾಡ್ಕೊಂಡು ಹೋದ ಪೋಷಕರು – ಅಗ್ನಿ ದುರಂತದಲ್ಲಿ ಮಗಳು ಸಾವು

    ಮುಂಬೈ: ಅಪಾರ್ಟ್‌ಮೆಂಟಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪ್ರಾಪ್ತೆಯೊಬ್ಬಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮುಂಬೈ ಉಪನಗರ ಇಲಾಖೆಯ ದಾದರ್ ನಲ್ಲಿ ನಡೆದಿದೆ.

    ಶ್ರಾವಣಿ ಚಾವನ್(16) ಮೃತ ಬಾಲಕಿ. ಈಕೆ ಅಪಾರ್ಟ್‌ಮೆಂಟ್‌ ರೂಮಿನಲ್ಲಿ ಮಲಗಿದ್ದಳು. ಆದರೆ ಆಕೆಯ ಪೋಷಕರು ಬಾಗಿಲು ಲಾಕ್ ಮಾಡಿದ ಪರಿಣಾಮ ಅಪಾರ್ಟ್‌ಮೆಂಟಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಹೊರಗೆ ಬರಲು ಸಾಧ್ಯವಾಗದೇ ಒಳಗೆ ಉಸಿರುಗಟ್ಟಿ ಬಾಲಕಿ ಮೃತಪಟ್ಟಿದ್ದಾಳೆ.

    ಶ್ರಾವಣಿ ತಂದೆ – ತಾಯಿ ಮದುವೆಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಬಾಲಕಿ ರೂಮಿನಲ್ಲಿ ಮಲಗಿದ್ದಳು. ಮಗಳು ನಿದ್ದೆ ಮಾಡಿ ಎದ್ದು ಓದಿಕೊಳ್ಳಲಿ ಎಂದು ಪೋಷಕರು ಮನೆಗೆ ಬೀಗ ಹಾಕಿ ಹೋಗಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಮಧ್ಯಾಹ್ನ ಸುಮಾರು 1.45 ನಿಮಿಷಕ್ಕೆ ಐದು ಅಂತಸ್ತಿನ ಅಪಾರ್ಟ್‌ಮೆಂಟಿನಲ್ಲಿ ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಶ್ರಾವಣಿ ಮಲಗಿದ್ದ ರೂಮಿಗೂ ಆವರಿಸಿಕೊಂಡಿದೆ. ಇತ್ತ ಪೋಷಕರು ಹೊರಗಿಂದ ಬಾಗಿಲು ಲಾಕ್ ಮಾಡಿದ್ದರಿಂದ ಬೆಂಕಿ ಮಧ್ಯೆ ಸಿಲುಕಿದ ಶ್ರಾವಣಿ ಹೊರಗಡೆ ಬರಲು ಸಾಧ್ಯವಾಗಿಲ್ಲ. ಜೊತೆಗೆ ಹೊಗೆಯಿಂದ ಉಸಿರಾಡಲು ಆಗಲಿಲ್ಲ. ಕೊನೆಗೆ ಶ್ರಾವಣಿ ಪ್ರಜ್ಞೆ ಕಳೆದುಕೊಂಡಿದ್ದಳು.

    ಮಾಹಿತಿ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶ್ರಾವಣಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಅಪಾರ್ಟ್‌ಮೆಂಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ತಂಡ ಸತತ 3 ಗಂಟೆಯ ಕಾಲದ ಬಳಿಕ ನಂದಿಸಿದ್ದಾರೆ.

    ಈ ಅಗ್ನಿ ಅವಘಡದಿಂದ ವಯರ್ ಗಳು, ಅನೇಕ ಮನೆಗಳ ಬೆಲೆಬಾಳುವ ವಸ್ತುಗಳು ಸಹ ಸುಟ್ಟು ಕರಕಲಾಗಿವೆ. ಅಪಾರ್ಟ್‌ಮೆಂಟಿಗೆ ಅಳವಡಿಸಿದ್ದ ಏರ್ ಕಂಡಿಷನರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಅಪಾರ್ಟ್‌ಮೆಂಟಿನಲ್ಲಿ ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿ ಖಾಲಿ ಸೀಮೆಎಣ್ಣೆ ಡಬ್ಬ ಪತ್ತೆಯಾಗಿದೆ. ಹೀಗಾಗಿ ಈ ಕುರಿತು ತನಿಖೆ ಮುಂದುವರಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಬಾಲಕಿಯರಿಬ್ಬರ ಅನುಮಾನಾಸ್ಪದ ಸಾವು!

    ಬೆಂಗ್ಳೂರಲ್ಲಿ ಬಾಲಕಿಯರಿಬ್ಬರ ಅನುಮಾನಾಸ್ಪದ ಸಾವು!

    ಬೆಂಗಳೂರು: ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 11 ವರ್ಷದ ಬಾಲಕಿಯ ಶವ ಪತ್ತೆಯಾದ ಬೆನ್ನಲ್ಲೇ ಇದೀಗ 15 ವರ್ಷದ ಮತ್ತೊಬ್ಬ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

    11 ವರ್ಷದ ಪೂಜಾಳ ಶವ ನಗರದ ಬಾಗಲಗುಂಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಇತ್ತ ರಾಜಗೋಪಾಲ ನಗರದಲ್ಲಿ 15 ವರ್ಷದ ಜ್ಯೋತಿಯ ಶವ ದೊರೆತಿದೆ.

    ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಜ್ಯೋತಿಯ ಶವ ಪತ್ತೆಯಾಗಿದೆ. ಈಕೆ ರಾಯಚೂರು ಮೂಲದ ಪಾರ್ತತಮ್ಮ ಮತ್ತು ಬುಗ್ಗಪ್ಪ ದಂಪತಿಯ ಪುತ್ರಿಯಾಗಿದ್ದು, ರಾಜಗೋಪಾಲನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಅಲ್ಪನಾಥ್ ಎಂಬವರ ಮನೆಯಲ್ಲಿ ಜ್ಯೋತಿ ಕೆಲಸ ಮಾಡುತ್ತಿದ್ದು, ಇಂದು ಮನೆಯ ಸಂಪ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಬೆಳಗ್ಗೆ ಮನೆ ಕೆಲಸಕ್ಕೆ ಬಂದಿದ್ದ ವೇಳೆ ಸಂಪ್‍ಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಬಾಲಕಿ ಬಿದ್ದ ನಂತರ ಸಂಪ್ ಬಾಗಿಲು ಮುಚ್ಚಿ ಬೀಗ ಹಾಕಲಾಗಿದೆ. ಹೀಗಾಗಿ ಸಂಪ್ ಡೋರ್ ತೆಗೆಯಿರಿ ಎಂದರೂ ಮನೆಯ ಮಾಲೀಕ ತೆಗೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ನಂತರ ಸ್ಥಳೀಯರು ಮತ್ತು ಪೊಲೀಸರಿಂದ ಸಂಪ್ ಬಾಗಿಲು ತೆರೆದು ಪರಿಶೀಲನೆ ನಡೆಸಲಾಯಿತು. ಸಂಪ್ ನಿಂದ ಮಗುವಿನ ಮೃತದೇಹವನ್ನ ಮೇಲೆತ್ತಲು ಹೋದಾಗ ಪೊಲೀಸರು ಬಂದ ನಂತರ ಎತ್ತಿ ಎಂದು ಮನೆ ಮಾಲೀಕ ಹೇಳಿದ್ದಾನೆ. ಹೀಗಾಗಿ ಪೊಲೀಸರು ಬರೋದಕ್ಕೂ ಮೊದಲೇ ಎತ್ತಿದ್ರೆ ಮಗು ಬದುಕುತ್ತಿತ್ತು ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

    ಸದ್ಯ ಬಾಲಕಿಯ ಮೃತ ದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಂಪ್ ಬಾಗಿಲು ಮುಚ್ಚಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆಯಲ್ಲಿ ಪೂಜಾಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಪೋಷಕರ ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು ಭಾರೀ ಚರ್ಚೆಗೆ ಒಳಗಾಗಿದೆ.

  • ರಾಯಚೂರು ಘಟನೆ ಮಾಸುವ ಮುನ್ನವೇ ಹಾವೇರಿಯಲ್ಲಿ ಬಾಲಕಿ ಹತ್ಯೆ!

    ರಾಯಚೂರು ಘಟನೆ ಮಾಸುವ ಮುನ್ನವೇ ಹಾವೇರಿಯಲ್ಲಿ ಬಾಲಕಿ ಹತ್ಯೆ!

    ಹಾವೇರಿ: ರಾಯಚೂರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಕಹಿ ಘಟನೆಯ ನೆನಪು ಮಾಸುವ ಮುನ್ನವೇ ಹಾವೇರಿ ಜಿಲ್ಲೆಯಲ್ಲಿ ಇಂತದ್ದೇ ಘಟನೆಯೊಂದು ನಡೆದಿದೆ.

    ಜಿಲ್ಲೆ ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಆರು ವರ್ಷದ ಬಾಲಕಿಯನ್ನ ಹತ್ಯೆ ಮಾಡಲಾಗಿದೆ. ಬಾಲಕಿ ಸೋಮವಾರ ಬೇರೆ ಊರಿನಿಂದ ಸಾಮೂಹಿಕ ಕಾರ್ಯಕ್ರಮಕ್ಕಾಗಿ ಪೊಷಕರರೊಂದಿಗೆ ಆಗಮಿಸಿದ್ದಳು.

    ಬಳಿಕ ತಡರಾತ್ರಿ ದುಷ್ಕರ್ಮಿಯೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ನಂತರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಸ್ಥಳಕ್ಕೆ ಹಾವೇರಿ ಎಸ್ಪಿ ಕೆ.ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಗ್ಗಾಂವಿಯ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನ ದಾಖಲು ಮಾಡಿಕೊಂಡು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ.

  • ಪ್ರೇಮಕ್ಕೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ

    ಪ್ರೇಮಕ್ಕೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ

    ಕೋಲಾರ: ಪ್ರೇಮಕ್ಕೆ ಪೋಷಕರು ವಿರೋಧ ಮಾಡಿದ್ದಕ್ಕೆ ಮನವೊಂದು ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿಯಲ್ಲಿ ಭಾನುವಾರ ನಡೆದಿದೆ.

    ವಡ್ಡರಹಳ್ಳಿಯ ಲಾವಣ್ಯ (17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ. ಲಾವಣ್ಯ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಮನೆಯಲ್ಲಿ ಯಾರು ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಲಾವಣ್ಯ ಕಳೆದ ಎರಡ್ಮೂರು ವರ್ಷಗಳಿಂದ ಗ್ರಾಮದ ವಿನೊದ್ (23) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವಾಗಿ ತಾತ ನಾರಾಯಣಪ್ಪ ಲಾವಣ್ಯಗೆ ಬುದ್ಧಿವಾದ ಹೇಳಿ ಆತನಿಂದ ದೂರ ಇರುವಂತೆ ಸೂಚಿಸಿದ್ದರು. ಇದರಿಂದಾಗಿ ಮನನೊಂದ ಲಾವಣ್ಯ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ.

    ಗ್ರಾಮಕ್ಕೆ ಭೇಟಿ ನೀಡಿದ ಬೇತಮಂಗಲ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಮೃತ ಬಾಲಕಿಯ ತಾಯಿ ರೇಣುಕಾ ಅವರು, ಪ್ರಿಯಕರ ವಿನೋದ್ ವಿರುದ್ಧ ಜಾತಿ ನಿಂದನೆ, ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರೇರಣೆ) ಅಡಿ ದೂರು ಸಲ್ಲಿಸಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • 13 ಬಾಲೆ ಮೇಲೆ ಅತ್ಯಾಚಾರ – ಕರೆಂಟ್ ಶಾಕ್ ನೀಡಿ ಕೊಲೆಗೈದ ಅಪ್ರಾಪ್ತ

    13 ಬಾಲೆ ಮೇಲೆ ಅತ್ಯಾಚಾರ – ಕರೆಂಟ್ ಶಾಕ್ ನೀಡಿ ಕೊಲೆಗೈದ ಅಪ್ರಾಪ್ತ

    ಚೆನ್ನೈ: ಅಪ್ರಾಪ್ತ ಬಾಲಕನೊಬ್ಬ ನೆರೆ ಮನೆಯ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಉತ್ತರ ಮದುರೈ ಪ್ರದೇಶದ ದಿಂಡಿಗಲ್ ಬಳಿ ನಡೆದಿದೆ.

    ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಇದೇ ಸಮಯ ನೋಡಿ ಆರೋಪಿ ಮನೆಗೆ ಪ್ರವೇಶ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ಪ್ರತಿರೋಧ ತೋರಿದ್ದು, ರಕ್ಷಣೆಗಾಗಿ ಕಿರುಚಾಡಲು ಆರಂಭಿಸಿದ್ದಾಳೆ. ಈ ವೇಳೆ ಬಾಲಕಿ ಮೇಲೆ ಹಲ್ಲೆ ನಡೆಸಿದ ಆರೋಪಿ ಅಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿಯ ಕೃತ್ಯದಿಂದ ಆಕೆ ಮನೆಯಲ್ಲಿ ಪ್ರಜ್ಞಾನಹೀಳಾಗಿ ಬಿದ್ದಿದ್ದು, ತನ್ನ ಕೃತ್ಯವನ್ನು ಎಲ್ಲಿ ಬಯಲಿಗೆ ತರುತ್ತಾಳೋ ಎಂಬ ಭಯದಿಂದ ಆರೋಪಿ ಮನೆಯಲ್ಲಿದ್ದ ವಿದ್ಯುತ್ ತಂತಿಯನ್ನು ಆಕೆಯ ಬಾಯಿಗೆ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

    ಕೆಲಸ ಮುಗಿಸಿ ಸಂಜೆ ವೇಳೆಗೆ ಪೋಷಕರು ಮನೆಗೆ ಹಿಂದಿರುಗಿದ್ದು, ಈ ವೇಳೆ ಬಾಲಕಿ ವಿದ್ಯುತ್ ಶಾಕ್ ನಿಂದ ಮೃತ ಪಟ್ಟಿದ್ದಾಳೆ ಎಂದು ತಿಳಿದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಬಾಲಕಿಯ ಮೂಗಿನಿಂದ ಹಾಗೂ ದೇಹದ ಮೇಲೆ ರಕ್ತದ ಕಲೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಖಚಿತವಾಗಿತ್ತು.

    ಬಾಲಕಿಯ ಪೋಷಕರು ಅಪ್ರಾಪ್ತ ಬಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

  • ಮಗಳು ಆಗದ್ದಕ್ಕೆ ಕೂಲಿ ಮಾಡೋ ದಂಪತಿಯ ಮಗಳನ್ನು ಕಿಡ್ನಾಪ್‍ಗೈದ್ರು!

    ಮಗಳು ಆಗದ್ದಕ್ಕೆ ಕೂಲಿ ಮಾಡೋ ದಂಪತಿಯ ಮಗಳನ್ನು ಕಿಡ್ನಾಪ್‍ಗೈದ್ರು!

    – ಸಂಬಂಧಿಕರಿಗೆ ಸುಳ್ಳು ಹೇಳಿದ್ದ ದಂಪತಿ
    – ಕಾರ್ಯಕ್ರಮಕ್ಕೆ ಬಾಲಕಿಯನ್ನು ಕದ್ದವರು ಅರೆಸ್ಟ್

    ಬೆಂಗಳೂರು: ಕಾರ್ಯಕ್ರಮಕ್ಕಾಗಿ ಹಗಡೆನಗರದಲ್ಲಿ ಕೂಲಿ ಮಾಡುವ ದಂಪತಿಯ ಮಗುವನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮಾರತ್‍ಹಳ್ಳಿ ರಮೇಶ್ ಹಾಗೂ ವರ್ತೂರಿನ ಮಂಜುನಾಥ್ ಬಾಲಕಿಯನ್ನು ಕಿಡ್ನಾಪ್ ಮಾಡಿದ ಬಂಧಿತ ಆರೋಪಿಗಳು. ಆರೋಪಿ ರಮೇಶ್ ದಂಪತಿಗೆ ಮಕ್ಕಳಿರಲಿಲ್ಲ. ಆದರೆ ತನ್ನ ಸಂಬಂಧಿಕರಿಗೆ ಹೆಣ್ಣು ಮಗು ಇದೆ ಎಂದು ಹೇಳಿ ನಂಬಿಸಿದ್ದ.

    ಇತ್ತೀಚೆಗೆ ಕೊಪ್ಪಳದಲ್ಲಿ ರಮೇಶ್ ಸಂಬಂಧಿಕರ ಮದುವೆ ಇತ್ತು. ಮದುವೆ ಹೋಗಬೇಕಾದರೆ ಹೆಣ್ಣು ಮಗುವನ್ನು ಕರೆದೊಯ್ಯುವ ಅನಿವಾರ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಲು ರಮೇಶ್ ಸ್ಕೆಚ್ ಹಾಕಿದ್ದ. ಪ್ಲಾನ್ ಮಾಡಿದಂತೆ ಆರೋಪಿ ರಮೇಶ್ ಹಾಗೂ ಮಂಜುನಾಥ್ ಏಪ್ರಿಲ್ 10ರಂದು ಅಂಗಡಿಗೆ ಬಂದಿದ್ದ ಬಾಲಕಿನ್ನು ಪುಸಲಾಯಿಸಿ ಬೈಕಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಕೂಲಿ ಕಾರ್ಮಿಕ ಶರಣಪ್ಪ ಪುತ್ರಿ ಏಪ್ರಿಲ್ 10ರಂದು ತಾಯಿಂದ 2 ರೂ. ಪಡೆದು ಎಸ್‍ಆರ್‍ಕೆ ನಗದರಲ್ಲಿನ ಅಂಗಡಿಗೆ ತಿಂಡಿ ತರಲು ಹೋಗಿದ್ದಳು. ಸಂಜೆಯಾದರೂ ಪುತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಬಾಲಕಿ ಚಲಿಸಿದ ರಸ್ತೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಬೈಕಿನಲ್ಲಿ ಕುಳ್ಳಿರಿಸಿ ಆಕೆಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಬೈಕ್ ನಂಬರ್ ಪ್ಲೇಟ್ ಆಧಾರದ ಮೆರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಮಂಡ್ಯ ರಣಕಣದಲ್ಲಿ ಪ್ರಚಾರ ವೇಳೆ ಯಶ್ ಬೆಂಬಲಿಗನ ಅಸಭ್ಯ ವರ್ತನೆ..!

    ಮಂಡ್ಯ ರಣಕಣದಲ್ಲಿ ಪ್ರಚಾರ ವೇಳೆ ಯಶ್ ಬೆಂಬಲಿಗನ ಅಸಭ್ಯ ವರ್ತನೆ..!

    ಮಂಡ್ಯ: ಸುಮಲತಾ ಅಂಬರೀಶ್ ಪರ ಪ್ರಚಾರದ ವೇಳೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯೊಬ್ಬ ಬಾಲಕಿಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೆಆರ್ ಪೇಟೆ ತಾಲೂಕಿನಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ತೆರೆದ ಪ್ರಚಾರ ವಾಹನದ ಮೇಲೆ ನಿಂತಿದ್ದ ನಟ ಯಶ್ ಮತದಾರರನ್ನು ಉದ್ದೇಶಿ ಮಾತನಾಡುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ಯಶ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಾಹನ ಹತ್ತಿದ್ದಳು. ರಕ್ಷಿಸುವ ನೆಪದಲ್ಲಿ ಅಭಿಮಾನಿಯೊಬ್ಬ ಬಾಲಕಿಯ ಸೊಂಟವನ್ನು ಹಿಡಿಯುತ್ತಾನೆ. ಕೂಡಲೇ ಬಾಲಕಿಯು ಕುಚೇಷ್ಟೆ ಮಾಡಿದ ನಟ ಯಶ್ ಬೆಂಬಲಿಗನ ಕಡೆ ತಿರುಗಿದ್ದರಿಂದ ಬೆದರಿ, ಕೂಡಲೇ ಕೈ ಹಿಂತೆಗೆದುಕೊಂಡಿದ್ದಾನೆ.

  • 9ರ ಬಾಲೆಯ ಮೇಲೆ ಅತ್ಯಾಚಾರ- ಕೊಲೆಗೈದು ದೇಹವನ್ನ ಶೌಚಾಲಯದಲ್ಲಿ ಎಸೆದ ಕಾಮಿ

    9ರ ಬಾಲೆಯ ಮೇಲೆ ಅತ್ಯಾಚಾರ- ಕೊಲೆಗೈದು ದೇಹವನ್ನ ಶೌಚಾಲಯದಲ್ಲಿ ಎಸೆದ ಕಾಮಿ

    ಮುಂಬೈ: ವ್ಯಕ್ತಿಯೊಬ್ಬ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಅಮಾನವೀಯ ಘಟನೆ ಮುಂಬೈನ ವಿಲೆ ಪಾರ್ಲೆ ಪ್ರದೇಶದಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಮೃತ ದೇಹವು ಶನಿವಾರ ಬೆಳಗ್ಗೆ ವಿಲೆ ಪಾರ್ಲೆ ಪ್ರದೇಶದ ಶೌಚಾಲಯದಲ್ಲಿ ಪತ್ತೆಯಾಗಿದೆ. ಈ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಓದಿ: ಅಪ್ರಾಪ್ತ ಪುತ್ರಿ ಮೇಲೆಯೇ ಅತ್ಯಾಚಾರ ಎಸಗಿದ ಅಪ್ಪ

    ಕೊಲೆಯಾದ ಬಾಲಕಿಯು ವಿಲೆ ಪಾರ್ಲೆ ಪ್ರದೇಶದಲ್ಲಿರುವ ನೆಹರು ನಗರದ ಚಾಲ್ವಾ ನಿವಾಸಿ. ಬಾಲಕಿ ನಾಪತ್ತೆಯಾಗಿರುವ ಕುರಿತು ಗುರುವಾರ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶೌಚಾಲಯದಲ್ಲಿ ಪತ್ತೆಯಾದ ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಜುಹು ಪೊಲೀಸ್ ಠಾಣೆಯ ಮುಂದೆ ನೂರಾರು ಜನರು ಸೇರಿದ್ದು, ಆರೋಪಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೆಲಹೊತ್ತು ಪೊಲೀಸ್ ಠಾಣೆಯ ಮುಂದೆ ನಿಂತು ಪ್ರತಿಭಟನೆ ಮಾಡಿದು.

    ಈ ಸಂಬಂಧ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಅತ್ಯಾಚಾರ), 201 (ಸಾಕ್ಷಿ ನಾಶ) ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.