Tag: ಬಾಲಕಿಯರು

  • ಚಿಕ್ಕಪ್ಪನ ಮದುವೆಗೆ ಬಂದ ಮೂವರು ಬಾಲಕಿಯರು ಮಸಣಕ್ಕೆ

    ಚಿಕ್ಕಪ್ಪನ ಮದುವೆಗೆ ಬಂದ ಮೂವರು ಬಾಲಕಿಯರು ಮಸಣಕ್ಕೆ

    ಗದಗ: ಕುರಿ ಮೇಯಿಸಲು ಹೋದ ಐವರು ಬಾಲಕಿಯರಲ್ಲಿ ಮೂವರು ಕೃಷಿ ಹೊಂಡದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

    5 ಬಾಲಕಿಯರು ಒಟ್ಟಾಗಿ ಕುರಿ ಮರಿಗಳನ್ನು ಮೇಯಿಸಲು ಊರ ಪಕ್ಕಕ್ಕೆ ಹೋಗಿದ್ದರು. ಈ ವೇಳೆ ಜಮೀನಿನಲ್ಲಿದ್ದ ಕೃಷಿ ಹೊಂಡ ನೋಡಿ ನೀರು ಕುಡಿಯಲು ಹೋದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅಂಕಿತಾ ಲಮಾಣಿ(13), ಸುನಿತಾ ಲಮಾಣಿ(11) ಹಾಗೂ ಸುನಿತಾ(10) ಮೃತ ಬಾಲಕಿಯರು. ಇದನ್ನೂ ಓದಿ: ದತ್ತಪೀಠದ ಹೋಮದ ಜಾಗದಲ್ಲಿ ಮಾಂಸ – ಮುಂದೆ ಅಲ್ಲಿ ಹೋಮ ಮಾಡಲ್ಲ ಅಂದ್ರು, ಮತ್ತೆಲ್ಲಿ?

    POLICE JEEP

    ಬಾಲಕಿಯರು ಗೋವಾದಲ್ಲಿ ವಾಸವಿದ್ದರು. 22ರಂದು ನಡೆಯಲಿದ್ದ ಚಿಕ್ಕಪ್ಪನ ಮದುವೆ ಸಲುವಾಗಿ ಪಾಲಕರೊಂದಿಗೆ ಅತ್ತಿಕಟ್ಟಿ ಗ್ರಾಮಕ್ಕೆ ಬಂದಿದ್ದರು. ಮೃತ ಬಾಲಕಿಯರಲ್ಲಿ ಅಂಕಿತಾ ಹಾಗೂ ಸುನಿತಾ ಸಹೋದರಿಯರು. ಮತ್ತೋರ್ವ ಮೃತ ಬಾಲಕಿ ಸುನಿತಾ ಡೋಣಿ ತಾಂಡ ನಿವಾಸಿ. ಮದುವೆ ಮನೆಯಲ್ಲಿ ಒಟ್ಟಾಗಿದ್ದ ಬಾಲಕಿಯರು ಒಟ್ಟಾಗಿ ಸಂಜೆ ಕುರಿ ಮರಿಗಳನ್ನು ಮೇಯಿಸಲು ಹೋಗಿದ್ದರು.

    ಸ್ಥಳೀಯ ಬಸವರಾಜ್ ಲಮಾಣಿ ಎಂಬವರ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಮಕ್ಕಳು ಇಳಿದಿರುವುದನ್ನು ಚಿಕ್ಕಪ್ಪ ಗೋವಿಂದ ಲಮಾಣಿ ನೋಡಿದ್ದಾರೆ. ಸ್ಥಳಕ್ಕೆ ಬಂದಾಗ ಮಕ್ಕಳು ನೀರಲ್ಲಿ ಮುಳುಗಿದ್ದು ತಿಳಿದಿದೆ. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಿದ್ದು, ಉಳಿದ ಬಾಲಕಿಯರು ಮುಳುಗಿರುವುದನ್ನು ಕುಟುಂಬಸ್ಥರಿಗೆ ಹಾಗೂ ಸ್ಥಳೀಯರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

    ತಕ್ಷಣವೇ ಘಟನಾ ಸ್ಥಳಕ್ಕೆ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಬಂದಿದ್ದು, ಉಳಿದ ಮೂವರು ಬಾಲಕಿಯರ ಶವವನ್ನು ಕೃಷಿ ಹೊಂಡದಿಂದ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಹಾಗೂ ತಹಶೀಲ್ದಾರ್ ಆಶಪ್ಪ ಪೂಜಾರ ಭೇಟಿ ನಿಡಿ, ಪರಿಶೀಲನೆ ನಡೆಸಿದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮದುವೆಗೆಂದು ಬಂದ ಮಕ್ಕಳು ಮಸಣ ಸೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಕಾಲುವೆಗೆ ಈಜಲು ಹೋದ ಬಾಲಕಿಯರು ನೀರುಪಾಲು

    ಕಾಲುವೆಗೆ ಈಜಲು ಹೋದ ಬಾಲಕಿಯರು ನೀರುಪಾಲು

    ರಾಯಚೂರು: ತಾಲೂಕಿನ ಮಿರ್ಜಾಪುರ ಗ್ರಾಮದ ಬಳಿ ರಾಜಲಬಂಡಾ ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲಾಗಿದ್ದಾರೆ.

    ಇಂದೂ(14) ಮತ್ತು ಸುಜಾತ(13) ಮೃತ ದುರ್ದೈವಿಗಳು. ಕಾಲುವೆಯಲ್ಲಿ ನೀರು ಕಡಿಮೆ ಇದೇ ಎಂದು ತಿಳಿದು ನಾಲ್ಕು ಬಾಲಕಿಯರು ನೀರಿಗೆ ಇಳಿದಿದ್ದರು. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಈಜು ಬಾರದ ಹಿನ್ನೆಲೆ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಬಾಲಕಿಯರು ಈಜಿ ದಡ ಸೇರಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಮುಂಬೈ ನಂಟು!

    ಬೇಸಿಗೆ ಹಿನ್ನೆಲೆ ಬಾಲಕಿಯರು ಈಜಾಡಲು ಹೋಗಿ ಮೃತಪಟ್ಟಿದ್ದಾರೆ. ಇದೀಗ ಮೃತ ದೇಹಗಳನ್ನು ಗ್ರಾಮಸ್ಥರು ಹೊರತೆಗೆದಿದ್ದಾರೆ. ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ರಾತ್ರಿ ದಾಖಲೆಯ 18 ಸಾವಿರ ಫೋನ್ ಕರೆಗಳ ವಿನಿಮಯ

  • ಹಿಂದೂಗಳು 4 ಮಕ್ಕಳು ಹೊಂದಬೇಕು ಎಂದಿದ್ದ ಸಾಧ್ವಿ ಆಶ್ರಮದ ನಾಲ್ವರು ಬಾಲಕಿಯರು ಕಾಲುವೆಯಲ್ಲಿ ಮುಳುಗಿ ಸಾವು

    ಹಿಂದೂಗಳು 4 ಮಕ್ಕಳು ಹೊಂದಬೇಕು ಎಂದಿದ್ದ ಸಾಧ್ವಿ ಆಶ್ರಮದ ನಾಲ್ವರು ಬಾಲಕಿಯರು ಕಾಲುವೆಯಲ್ಲಿ ಮುಳುಗಿ ಸಾವು

    ಭೋಪಾಲ್: ಹಿಂದುತ್ವ ಪ್ರತಿಪಾದಕಿ ಸಾಧ್ವಿ ರಿತಂಬರ ನಡೆಸುತ್ತಿರುವ ರೆಸಿಡೆನ್ಷಿಯಲ್‌ ಆಶ್ರಮ ಶಾಲೆಯಲ್ಲಿ ಓದುತ್ತಿದ್ದ ನಾಲ್ವರು ಬಾಲಕಿಯರು ಕಾಲುವೆಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆಯುತ್ತಿದೆ.

    ವೈಶಾಲಿ, ಪ್ರತಿಗ್ಯಾ, ದಿವ್ಯಶ್ರೀ, ಅಂಜಲಿ ಮೃತ ವಿದ್ಯಾರ್ಥಿನಿಯರು. ಕೋಥಿ ಗ್ರಾಮದ ಮಾಂಧತ್‌ (ಓಂಕಾರೇಶ್ವರ) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಮಸೀದಿ, ಮಂದಿರಗಳೆಲ್ಲವೂ ನಮ್ಮ ದೇಹದಂತೆ ಒಟ್ಟಿಗೆ ಇರುತ್ತವೆ: ಮಮತಾ

    SADHVI

    ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರು 10, 11 ವಯಸ್ಸಿನವರಾಗಿದ್ದಾರೆ. ಅವರು ಆಶ್ರಯಮದಲ್ಲಿ ಐದನೇ ತರಗತಿ ಓದುತ್ತಿದ್ದರು ಎಂದು ತಿಳಿದುಬಂದಿದೆ.

    ಒಬ್ಬ ವಿದ್ಯಾರ್ಥಿನಿ ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದಾರೆ. ಸ್ನಾನ ಮಾಡುವಾಗ ಕಾಲು ಜಾರಿ ಕಾಲುವೆಯಲ್ಲಿ ಮುಳುಗುತ್ತಿದ್ದಾಗ ಆಕೆಯನ್ನು ರಕ್ಷಿಸಲು ಇತರೆ ವಿದ್ಯಾರ್ಥಿನಿಯರು ತೆರಳಿದ್ದಾರೆ. ಈ ವೇಳೆ ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಬಲರಾಮ್‌ ಸಿಂಗ್‌ ತಿಳಿಸಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

    ಪೊಲೀಸರು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಕ್ಕಳ ದುರಂತ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ತಾಯಿ ಮೇಲೆ ಹಲ್ಲೆ ಮಾಡಿದನೆಂದು  ಸಂಬಂಧಿಯನ್ನೇ  ಕೊಂದ ಬಾಲಕಿಯರು!

    ತಾಯಿ ಮೇಲೆ ಹಲ್ಲೆ ಮಾಡಿದನೆಂದು  ಸಂಬಂಧಿಯನ್ನೇ  ಕೊಂದ ಬಾಲಕಿಯರು!

    ತಿರುವನಂತಪುರಂ: ತಮ್ಮ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ 70 ವರ್ಷದ ವ್ಯಕ್ತಿಯನ್ನು ಬಾಲಕಿಯರು ಕೊಲೆ ಮಾಡಿದ ಘಟನೆ ಕೇರಳದ ವಯನಾಡ್ ಜಿಲ್ಲೆಯ ಅಂಬಲವಾಯಲ್ ಪ್ರದೇಶದಲ್ಲಿ ನಡೆದಿದೆ.

    ಮಹಮ್ಮದ್ ಕೋಯಾ (70) ಮೃತ ದುರ್ದೈವಿ. ತಮ್ಮ ತಾಯಿಗೆ ಹೊಡೆಯಲು ಬಂದಾಗ ಬಾಲಕಿಯರು ಮೊದಲಿಗೆ ತಡೆಯಲು ಮುಂದಾಗಿದ್ದಾರೆ. ತಡೆಯಲು ಎಷ್ಟೇ ಪ್ರಯತ್ನಿಸಿದರೂ ವ್ಯಕ್ತಿ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಹುಡುಗಿಯರು ಕೋಯಾನನ್ನು ಕೊಡಲಿಯಿಂದ ಹೊಡೆದು ಕೊಂದು ಶವವನ್ನು ಬಾವಿಗೆ ಎಸೆದಿದ್ದಾರೆ.  ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಹಡಿಯಿಂದ ಬಿದ್ದ ಎಂಬಿಬಿಎಸ್ ವಿದ್ಯಾರ್ಥಿ!

    ಘಟನೆಯ ಬಳಿಕ ಬಾಲಕಿಯರು ವ್ಯಕ್ತಿಯನ್ನು ಕೊಂದಿರುವುದಾಗಿ ಪೊಲೀಸರ ಬಳಿ ಶರಣಾಗಿದ್ದಾರೆ. ನಂತರ ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎರಡೂ ಕುಟುಂಬದವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಪ್ರತಿದಿನವೂ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ. ಈ  ಸಂಬಂಧ  ವಯನಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 6 ದಿನದ ಹೆಣ್ಣು ಮಗುವನ್ನು ಗುಟ್ಟಾಗಿ ಸಮಾಧಿ ಮಾಡಿ ದಂಪತಿ ಎಸ್ಕೇಪ್!

  • 6 ಮಂದಿ ಮಾನವ ಸರಪಳಿ ನಿರ್ಮಿಸಿ ಬಾಲಕಿಯರನ್ನು ರಕ್ಷಿಸಿದ ವೀಡಿಯೋ ವೈರಲ್

    6 ಮಂದಿ ಮಾನವ ಸರಪಳಿ ನಿರ್ಮಿಸಿ ಬಾಲಕಿಯರನ್ನು ರಕ್ಷಿಸಿದ ವೀಡಿಯೋ ವೈರಲ್

    – ಯುವಕರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಬೀಜಿಂಗ್: ಸುಮಾರು 6 ಮಂದಿ ಯುವಕರು ಮಾನವ ಸರಪಳಿ ನಿರ್ಮಿಸಿ ಬಾಲಕಿಯರಿಬ್ಬರನ್ನು ಭಾರೀ ಅವಘಡದಿಂದ ಪಾರು ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ.

    ಚೀನಾದ ಕ್ಸಿಂಟಿಯನ್ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಇಬ್ಬರು ಪುಟ್ಟ ಬಾಲಕಿಯರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಬಾಲಕಿಯರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಬಾಲಕಿಯರನ್ನು ರಕ್ಷಿಸುತ್ತಿರುವ ವೀಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ

    25 ಸೆಕೆಂಡ್ ವೀಡಿಯೋದಲ್ಲಿ ಆರು ಮಂದಿ ಯುವಕರು ಒಬ್ಬರ ಮೇಲೆ ಒಬ್ಬರಂತೆ ಚೈನ್ ತರ ನಿಂತು ಬೆಂಕಿ ಕಾಣಿಸಿಕೊಂಡ ಕಟ್ಟಡದಿಂದ ಬಾಲಕಿಯನ್ನು ಹೊರಗೆ ಎಳೆದು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವಕರ ಸಾಹಸ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಕಿಟಕಿಗಳ ಮೇಲೆ ಯಾಕೆ ಗ್ರಿಲ್ ಗನ್ನು ಅಳವಡಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಬಾಲಕಿಯರನ್ನು ರಕ್ಷಿಸಿದ ಯುವಕರನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ಆಶೀರ್ವದಿಸಿದ್ದಾರೆ. ಇದನ್ನೂ ಓದಿ: ದೇಶ ಬಿಟ್ಟು ತೆರಳಬೇಡಿ- ತಾಲಿಬಾನ್ ಬೆದರಿಕೆ

  • ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವು

    ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವು

    ಕೊಪ್ಪಳ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ದುರಂತ ಅಂತ್ಯ ಕಂಡಿರುವ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ವರನಖೇಡ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದ್ದು, ತಡವಾಗಿ ತಡವಾಗಿ ಬೆಳಕಿಗೆ ಬಂದಿದೆ.

    ಹುಲಿಹೈದರ್ ಗ್ರಾಮದ ಕವಿತಾ (11) ಹಾಗೂ ಆಗೋಲಿ ಗ್ರಾಮದ ಸಂಜನಾ (9) ಸಾವನ್ನಪ್ಪಿರುವ ಬಾಲಕಿಯರು. ವರನಖೇಡ ಗ್ರಾಮದ ತೋಟದ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ.

    ಪಾಲಕರು ತೋಟದಲ್ಲಿ ವಾಸವಿದ್ದ ಹಿನ್ನಲೆಯಲ್ಲಿ ನಿನ್ನೆ ಪಾಲಕರ ಹತ್ತಿರ ಬಂದಿದ್ದ ಈ ಬಾಲಕಿಯರು, ಆಟ ಆಡುತ್ತ ಕೃಷಿ ಹೊಂಡಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅಪ್ರಾಪ್ತೆಯರನ್ನು ಪ್ರೀತಿಸಿ ವಿವಾಹ- ಇಬ್ಬರು ಯುವಕರಿಗೆ 10 ವರ್ಷ ಜೈಲು, 5.20 ಲಕ್ಷ ದಂಡ

    ಅಪ್ರಾಪ್ತೆಯರನ್ನು ಪ್ರೀತಿಸಿ ವಿವಾಹ- ಇಬ್ಬರು ಯುವಕರಿಗೆ 10 ವರ್ಷ ಜೈಲು, 5.20 ಲಕ್ಷ ದಂಡ

    ಚಾಮರಾಜನಗರ: ಅಪ್ರಾಪ್ತೆಯರನ್ನು ಪ್ರೀತಿಸಿ ಮದುವೆಯಾಗಿದ್ದ ಇಬ್ಬರಿಗೆ ತಲಾ 10 ವರ್ಷ ಜೈಲು ಶಿಕ್ಷೆ, 5.20 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 2 ವರ್ಷ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

    ಜಿಲ್ಲಾ ನ್ಯಾ.ಸದಾಶಿವ ಎಸ್.ಸುಲ್ತಾನ್ ಪುರಿ ಆದೇಶ ಹೊರಡಿಸಿದ್ದು, ಹನೂರು ತಾಲೂಕಿನ ಚೆಲುವ ಹಾಗೂ ಮುತ್ತುರಾಜ್ ಶಿಕ್ಷೆಗೊಳಗಾದ ಅಪರಾಧಿಗಳು. ಅಪ್ರಾಪ್ತೆಯರನ್ನು ಮದುವೆಯಾಗಿ ಲೈಂಗಿಕ ಕ್ರಿಯೆ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇಂದು ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿ ಆದೇಶಿಸಿದ್ದಾರೆ. ತಲಾ 10 ವರ್ಷ ಜೈಲು ಶಿಕ್ಷೆ ಹಾಗೂ 5.20 ಲಕ್ಷ ರೂ. ದಂಡದ ಹಣವನ್ನು ಬಾಲಕಿಯರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾಗಿ ಯೋಗೇಶ್ ವಾದ ಮಂಡಿಸಿದ್ದರು.

    ಹನೂರು ತಾಲೂಕಿನ ಗ್ರಾಮವೊಂದರ ನಿವಾಸಿಗಳಾದ ಚೆಲುವ ಹಾಗೂ ಮುತ್ತುರಾಜ್ ಇದೇ ಗ್ರಾಮದಲ್ಲಿ ವಾಸವಿದ್ದ ಇಬ್ಬರು ಬಾಲಕಿಯರನ್ನು 2016ರಲ್ಲಿ ಪ್ರೀತಿಸಿ, ಮನೆಯಿಂದ ತಮಿಳುನಾಡಿಗೆ ಕರೆದೊಯ್ದು ಮದುವೆಯಾಗಿ, ಕೂಲಿ ಕೆಲಸ ಮಾಡುತ್ತಿದ್ದರು. ಬಳಿಕ ಪೊಲೀಸರು ಬಾಲಕಿಯರನ್ನು ಪತ್ತೆಹಚ್ಚಿ ಕರೆತಂದಿದ್ದರು. ಈ ಸಂಬಂಧ ರಾಮಾಪುರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಅಡಿ ಪ್ರಕರಣ ದಾಖಲಾಗಿತ್ತು.

  • ದೇಹ ವ್ಯಾಪಾರಕ್ಕೆ ಕರೆ ತಂದಿದ್ದ 21 ಬಾಲಕಿಯರ ರಕ್ಷಣೆ

    ದೇಹ ವ್ಯಾಪಾರಕ್ಕೆ ಕರೆ ತಂದಿದ್ದ 21 ಬಾಲಕಿಯರ ರಕ್ಷಣೆ

    – ಗ್ರಾಮದಲ್ಲಿ ಕೂಡಿಟ್ಟು ದಂಧೆಯ ಟ್ರೈನಿಂಗ್

    ಜೈಪುರ: ದೇಹ ವ್ಯಾಪಾರಕ್ಕಾಗಿ ಕರೆ ತಂದು ಗ್ರಾಮದಲ್ಲಿ ಬಂಧಿಸಿದ್ದ 21 ಅಪ್ರಾಪ್ತೆಯರನ್ನ ರಾಜಸ್ಥಾನ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ರಕ್ಷಿಸಿದ್ದಾರೆ. ರಾಜಸ್ಥಾನದ ದೋಲ್ಪುರ ಜಿಲ್ಲೆಯ ಧೀಮರಿ ಗ್ರಾಮದಲ್ಲಿ ಬಾಲಕಿಯರನ್ನ ಇರಿಸಲಾಗಿತ್ತು.

    ಸ್ಥಳೀಯ ಎಸ್‍ಪಿ ಸೋಮವಾರ ಜಿಲ್ಲೆಯಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಂಬಂಧ ಮಹಿಳಾ ಪೊಲೀಸ್ ಸಿಬ್ಬಂದಿ ಮಾರುವೇಷದಲ್ಲಿ ಗ್ರಾಮದ ಜನರೊಂದಿಗೆ ಮಾತನಾಡಿ ಹಲವು ಮಾಹಿತಿ ಪಡೆದುಕೊಳ್ಳುತ್ತಿರುವಾಗ ಸೆಕ್ಸ್ ದಂಧೆಯ ವಿಷಯ ಬಯಲಾಗಿತ್ತು. ಮಹಿಳಾ ಸಿಬ್ಬಂದಿ ಕೂಡಲೇ ಎಸ್.ಪಿ. ಕೇಸರ್ ಸಿಂಗ್ ಅವರಿಗೆ ತಿಳಿಸಿದ್ದರು.

    ಖಚಿತ ಮಾಹಿತಿ ಬೆನ್ನಲ್ಲೇ ಎಚ್ಚೆತ್ತ ಎಸ್.ಪಿ. ತಮ್ಮ ತಂಡದೊಂದಿಗೆ ದಾಳಿ ನಡೆಸಿ 21 ಅಪ್ರಾಪ್ತೆಯರನ್ನ ರಕ್ಷಿಸಿದ್ದಾರೆ. ಎಲ್ಲರನ್ನು ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿದ್ದು, ಸೋಮವಾರ ಬಾಲಕಿಯರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೇಸರ್ ಸಿಂಗ್ ಹೇಳಿದ್ದಾರೆ.

    ಕೆಲ ಬಾಲಕಿಯರು ಏನನ್ನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದರೆ, ಕೆಲವರು ಸ್ವ ಇಚ್ಛೆಯಿಂದ ವೇಶ್ಯಾವಾಟಿಕೆಗೆ ಬಂದಿರೋದಾಗಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ಬಡತನ, ಪುಟ್ಟ ತಮ್ಮ ಮತ್ತು ತಂಗಿ ಇದ್ದಾರೆ. ಹಾಗಾಗಿ ಅನಿವಾರ್ಯವಾಗಿ ಇವರ ಜೊತೆ ಬಂದಿರೋದಾಗಿ ತಮ್ಮ ಕಷ್ಟಗಳನ್ನ ಪೊಲೀಸರಿಗೆ ಹೇಳಿದ್ದಾರೆ. ಇತ್ತ ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಬಾಲ ಕಲ್ಯಾಣ ಸಮಿತಿ ಸದಸ್ಯರು ಬಾಲಕಿಯರ ಆರೋಗ್ಯz ಮತ್ತು ಕುಟುಂಬದ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ನಾಲ್ವರು ಗೆಳತಿಯರು

    ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ನಾಲ್ವರು ಗೆಳತಿಯರು

    -ಇಬ್ಬರ ಸಾವು, ಇನ್ನಿಬ್ಬರ ರಕ್ಷಣೆ
    -ಗ್ರಾಮದಲ್ಲಿ ಸೂತಕದ ಛಾಯೆ

    ಪಾಟ್ನಾ: ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಬಿಹಾರದ ಖಗರಿಯಾದ ಗೋಗರಿ ಠಾಣಾ ವ್ಯಾಪ್ತಿಯ ಮುಶ್ಕಿಪುರನಲ್ಲಿ ನಡೆದಿದೆ. ಗುಂಡಿಗೆ ಬಿದ್ದಿದ್ದ ನಾಲ್ವರು ಬಾಲಕಿಯರ ಪೈಕಿ ಇಬ್ಬರು ಬದುಕುಳಿದಿದ್ದಾರೆ.

    13 ವರ್ಷದ ಕಾಶಿಯಾ ಮತ್ತು ನರ್ಗಿಸ್ ಮೃತ ಬಾಲಕಿ ಯರು. ನರ್ಗಿಸ್ ತನ್ನ ಮೂವರು ಗೆಳತಿಯರು ರಸ್ತೆ ಬದಿಯಲ್ಲಿ ನೀರು ನಿಂತಿದ್ದ ಪ್ರದೇಶದಲ್ಲಿ ಆಟ ಆಡುತ್ತಿದ್ದರು. ಈ ವೇಳೆ ನರ್ಗಿಸ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಳೆ. ನರ್ಗಿಸ್ ರಕ್ಷಣೆಗೆ ಇನ್ನುಳಿದ ಮೂವರು ಗೆಳತಿಯರು ಗುಂಡಿಗೆ ಧುಮುಕಿದ್ದಾರೆ.

    ಬಾಲಕಿಯರು ಧ್ವನಿ ಕೇಳಿದ ಸ್ಥಳೀಯರು ಗುಂಡಿಗೆ ಧಮುಕಿ ಇಬ್ಬರನ್ನ ಹೊರ ತಂದಿದ್ದಾರೆ. ಆದ್ರೆ ಕಾಶಿಯಾ ಮತ್ತು ನರ್ಗಿಸ್ ನೀರಿನಲ್ಲಿ ಮುಳುಗಿದ್ದರು. ಕೊನೆಗೆ ಸ್ಥಳೀಯರು ಮೀನುಗಾರರ ಸಹಾಯದ ಮೂಲಕ ಶೋಧ ಕಾರ್ಯ ನಡೆಸಿ ಬಾಲಕಿಯರ ಮೃತದೇಹಗಳನ್ನು ಗುಂಡಿಯಿಂದ ಹೊರ ತೆಗೆಯಲಾಗಿದೆ.

    ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೊಗರಿ ಠಾಣೆಯ ಸಿಓ ರವೀಂದ್ರನಾಥ್ ಮೃತ ಬಾಲಕಿಯರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

  • ಗೆಳತಿಯರ ಜೊತೆ ಗಲಾಟೆ – ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕರು

    ಗೆಳತಿಯರ ಜೊತೆ ಗಲಾಟೆ – ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕರು

    – ಬಾಲಕಿಯರ ವಿರುದ್ಧ ದೂರು ನೀಡಿದ ಹುಡುಗನ ತಂದೆ
    – ಮಾತನಾಡುವಾಗ ವಾಗ್ವಾದ ನಡೆದು ಘಟನೆ

    ಲಕ್ನೋ: ತಮ್ಮ ಸ್ನೇಹಿತೆಯರೊಂದಿಗೆ ಜಗಳವಾಗಿದ್ದಕ್ಕೆ ಕೋಪಗೊಂಡು ಇಬ್ಬರು ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮುವಾದ ರಾಣಿಪುರದಲ್ಲಿ ಘಟನೆ ನಡೆದಿದ್ದು, 11ನೇ ತರಗತಿ ಪ್ರವೇಶಕ್ಕಾಗಿ ತೆರಳಿದಾಗ ಬಾಲಕರು ಈ ರೀತಿ ಮಾಡಿಕೊಂಡಿದ್ದಾರೆ. ಇಬ್ಬರು ಹುಡುಗಿಯರು ರಾಣಿಪುರದವರಾಗಿದ್ದು, ಸಾವನ್ನಪ್ಪಿದ ಬಾಲಕರನ್ನು ವಿಶಾಲ್(17) ಗುಪ್ತಾ ಹಾಗೂ ಬಿತ್ತು(18) ಎಂದು ಗುರುತಿಸಲಾಗಿದೆ.

    ವಿಶಾಲ್ ಗುಪ್ತಾ ಖಂದೇರಾಯ್‍ಪುರ ಗ್ರಾಮದ ರಾಮಲೀಲಾ ಮೈದಾನದ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಿತ್ತು ಸಹ ಅದೇ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ನಂತರ ವಾರಾಣಸಿಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಸಾವನ್ನಪ್ಪಿದ್ದಾನೆ. ಇದೇ ವೇಳೆ ವಿಶಾಲ್ ತಂದೆ ರಾಣಿಪುರ ಪೊಲೀಸ್ ಠಾಣೆಗೆ ತೆರಳಿ ಇಬ್ಬರು ಹುಡುಗಿಯರ ವಿರುದ್ಧ ದೂರು ನೀಡಿದ್ದಾರೆ.

    ವಿಶಾಲ್ ನಗ್ರಾ ಪ್ರದೇಶದ ಲಖಿಸರಿಯಾ ಗ್ರಾಮದವನಾಗಿದ್ದು, ಬಿತ್ತು ಸಿಕಂದರ್‍ಪುರದ ಮುದಿಯಾರ್‍ಪುರ ಗ್ರಾಮದವನಾಗಿದ್ದಾನೆ. 11ನೇ ತರಗತಿಗೆ ಪ್ರವೇಶಕ್ಕಾಗಿ ಇಬ್ಬರೂ ಮನೆಯಿಂದ ಹೊರಟಿದ್ದಾರೆ. ನಂತರ ಇಬ್ಬರೂ ತಮ್ಮ ಸ್ನೇಹಿತೆಯರಿಗೆ ಕರೆ ಮಾಡಿದ್ದಾರೆ. ಅಲ್ಲದೆ ಅವರನ್ನು ಭೇಟಿಯಾಗಲು ಊರಿಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಹುಡುಗಿಯರು ರಾಮಲೀಲಾ ಮೈದಾನದ ಬಳಿ ಹುಡುಗರನ್ನು ಭೇಟಿಯಾಗಿದ್ದು, ನಂತರ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರೂ ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.