Tag: ಬಾಲಕಿಯರು

  • ಕೋಲಾರ | ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆ

    ಕೋಲಾರ | ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆ

    – ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯರು

    ಕೋಲಾರ: ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulbagal) ಯಳಚೇಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಪತ್ತೆಯಾದ ಮೃತದೇಹಗಳನ್ನು ಧನ್ಯಬಾಯಿ (13), ಚೈತ್ರಾಬಾಯಿ (13) ಎಂದು ಗುರುತಿಸಲಾಗಿದೆ. ಗುರುವಾರ (ಅ.2) ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಏಕಾಏಕಿ ನಾಪತ್ತೆಯಾಗಿದ್ದರು. ಈ ಕುರಿತು ಬಾಲಕಿಯರ ಕುಟುಂಬಸ್ಥರು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇದನ್ನೂ ಓದಿ: ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

    ಸದ್ಯ ನಾಪತ್ತೆಯಾಗಿದ್ದ ಬಾಲಕಿಯರು ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯ ಬಳಿಯಿರುವ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿ ಬಿಸಾಡಿರಬಹುದು ಅಥವಾ ಬಾಲಕಿಯರು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಮದುವೆ ಸಮಾರಂಭಕ್ಕೆ ಬಂದಿದ್ದ ಇಬ್ಬರು ಅಪ್ರಾಪ್ತೆಯರ ಕಿಡ್ನ್ಯಾಪ್‌ – ನಾಲ್ವರಿಂದ ಗ್ಯಾಂಗ್‌ರೇಪ್‌

    ಮದುವೆ ಸಮಾರಂಭಕ್ಕೆ ಬಂದಿದ್ದ ಇಬ್ಬರು ಅಪ್ರಾಪ್ತೆಯರ ಕಿಡ್ನ್ಯಾಪ್‌ – ನಾಲ್ವರಿಂದ ಗ್ಯಾಂಗ್‌ರೇಪ್‌

    ಭುವನೇಶ್ವರ (ಗಂಜಾಂ): ಮದುವೆ ಸಮಾರಂಭದಲ್ಲಿ (Wedding) ಪಾಲ್ಗೊಂಡಿದ್ದ 14 ಮತ್ತು 15 ವರ್ಷ ಇಬ್ಬರು ಹುಡುಗಿಯರನ್ನು ಅಪಹರಿಸಿ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ (Odisha) ಗಂಜಾಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಎಲ್ಲಾ ಆರೋಪಿಗಳೂ ವಿಶಾಖಪಟ್ಟಣಂಗೆ (Visakhapatnam) ಎಸ್ಕೇಪ್‌ ಆಗಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್‌ – ಮೂವರು ಪುರುಷರೊಟ್ಟಿಗೆ ದಂಪತಿ ನೋಡಿದ್ದೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಗೈಡ್‌

    ಬ್ರಹ್ಮಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶ್ರವಣ್ ವಿವೇಕ್ ಅವರು ಹೇಳುವಂತೆ, ಘಟನೆ ಜೂನ್‌ 3ರಂದು ನಡೆದಿದೆ. ಇಬ್ಬರು ಹೆಣ್ಣುಮಕ್ಕಳು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಿರ್ಜನ ಪ್ರದೇಶಕ್ಕೆ ಇಬ್ಬರನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ, ಜೊತೆಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

    ಪ್ರಾಥಮಿಕ ತನಿಖೆಯಲ್ಲಿ ಹುಡುಗಿಯರಿಗೆ ಮೊದಲು ಇಬ್ಬರು ಪುರುಷರು ಆಮಿಷವೊಡ್ಡಿದ್ದಾರೆ, ಈ ಪೈಕಿ ಒಬ್ಬ ಆರೋಪಿ ಸಂತ್ರಸ್ತೆಗೆ ಪರಿಚಯವಿದ್ದ. ಅವರೊಂದಿಗೆ ಇನ್ನಿಬ್ಬರು ಸೇರಿಕೊಂಡು ಅಪಹರಿಸಿದ ಬಳಿಕ ಕೃತ್ಯ ಎಸಗಿದ್ದಾರೆ ಅನ್ನೋದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 70 ವರ್ಷ ಲಿವ್ ಇನ್ ರಿಲೇಶನ್ – 95ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ರಾಜಸ್ಥಾನ ಜೋಡಿ

    ಬಳಿಕ ವಿಷಯ ತಿಳಿದ ಪೋಷಕರು ಜೂನ್ 4 ರಂದು ದೂರು ದಾಖಲಿಸಿದ್ರು, ಅದರನ್ವಯ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಲಾಯಿತು. ಜೂನ್ 6 ರಂದು ಬಾಲಕಿಯರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಬಾಲಕಿಯನ್ನು ಕೌನ್ಸೆಲಿಂಗ್‌ಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.

  • ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆ

    ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆಯಾಗಿರುವ ಅಘಾತಕಾರಿ ಘಟನೆ ನಡೆದಿದೆ.

    ಗುಜರಾತ್, ಜಾರ್ಖಂಡ್, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 26 ಬಾಲಕಿಯರು ಭೋಪಾಲ್‌ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಲ್ಲಿದ್ದರು. ಅನುಮತಿಯಿಲ್ಲದೆ ಬಾಲಕಿಯರ ಮನೆ ನಡೆಸುತ್ತಿರುವ ಖಾಸಗಿ ಎನ್‌ಜಿಒ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಬಸ್‍ಗಳ ಮುಖಾಮುಖಿ ಡಿಕ್ಕಿ; ಇಬ್ಬರ ದುರ್ಮರಣ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಅವರು ಭೋಪಾಲ್‌ನ ಹೊರವಲಯದಲ್ಲಿರುವ ಪರ್ವಾಲಿಯಾ ಪ್ರದೇಶದ ಆಂಚಲ್ ಬಾಲಕಿಯರ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

    ಅವರು ರಿಜಿಸ್ಟರ್ ಪರಿಶೀಲಿಸಿದಾಗ ಅದರಲ್ಲಿ 68 ಹುಡುಗಿಯರ ನಮೂದುಗಳು ಇದ್ದವು. ಆದರೆ ಅವರಲ್ಲಿ 26 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಬಾಲಕಿಯರ ಕುರಿತು ಮಕ್ಕಳ ನಿಲಯದ ನಿರ್ದೇಶಕ ಅನಿಲ್ ಮ್ಯಾಥ್ಯೂ ಅವರನ್ನು ಪ್ರಶ್ನಿಸಿದಾಗ ಅನುಮಾನ ವ್ಯಕ್ತವಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪರ್ವಲಿಯಾ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್ ಜೊತೆಗಿನ ಖಾಸಗಿ ವಿಡಿಯೋ ಲೀಕ್ ಮಾಡ್ತೀನಿ: ಸುಕೇಶ್ ಬೆದರಿಕೆ

    ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಅವರು ಮುಖ್ಯ ಕಾರ್ಯದರ್ಶಿ ವೀಣಾ ರಾಣಾ ಅವರಿಗೆ ಕಳುಹಿಸಿರುವ ಪತ್ರದಲ್ಲಿ, ಭೋಪಾಲ್‌ನ ಆಂಚಲ್ ಮಕ್ಕಳ ಆಶ್ರಯ ಮನೆಯನ್ನು ಪರಿಶೀಲಿಸಲಾಗಿದೆ. ಮಕ್ಕಳ ನೋಂದಣಿಯಾಗಲಿ ಅಥವಾ ಮಾನ್ಯತೆಯಾಗಲಿ ಇಲ್ಲ ಎಂದು ತಿಳಿದುಬಂದಿದೆ ಎಂದು ಬರೆದಿದ್ದಾರೆ.

    ಹಾಸ್ಟೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಬಾಲಕಿಯರ ವಸತಿ ನಿಲಯದಲ್ಲಿ ಇಬ್ಬರು ಮಹಿಳೆಯರ ಹೊರತಾಗಿ ರಾತ್ರಿ ವೇಳೆ ಇಬ್ಬರು ಪುರುಷ ಕಾವಲುಗಾರರಿದ್ದಾರೆ. ನಿಯಮದ ಪ್ರಕಾರ ಮಹಿಳಾ ಸಿಬ್ಬಂದಿ ಮಾತ್ರ ಕಡ್ಡಾಯವಾಗಿ ಉಳಿದುಕೊಳ್ಳಬೇಕು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಕಂದಕಕ್ಕೆ ಉರುಳಿದ ಬಸ್ – ಓರ್ವ ಸಾವು, 25 ಮಂದಿ ಗಂಭೀರ

    ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಪೋಸ್ಟ್‌ನಲ್ಲಿ, ಭೋಪಾಲ್‌ನ ಪರ್ವಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ನಡೆಸುತ್ತಿರುವ ಮಕ್ಕಳ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆಯಾದ ಪ್ರಕರಣವು ನನ್ನ ಗಮನಕ್ಕೆ ಬಂದಿದೆ. ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

  • ಚಾಕ್ಲೇಟ್ ತಿಂದ ದುಡ್ಡು ಕೊಡಲ್ಲವೆಂದ ಅಪ್ಪ- ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು!

    ಚಾಕ್ಲೇಟ್ ತಿಂದ ದುಡ್ಡು ಕೊಡಲ್ಲವೆಂದ ಅಪ್ಪ- ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು!

    ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ‌ (Shakti Scheme) ಯ ಅವಾಂತರ ಒಂದಲ್ಲ ಎರಡಲ್ಲ. ಬಸ್ಸಿನಲ್ಲಿ ಸೀಟಿಗಾಗಿ ನಾರಿಯರ ಗಲಾಟೆ ಒಂದೆಡೆಯಾದರೆ ಇನ್ನೊಂದೆಡೆ ಚಿಕ್ಕಪುಟ್ಟ ವಿಷಯಕ್ಕೆಲ್ಲ ಬೇಜಾರ್ ಮಾಡಿಕೊಂಡು ಮಕ್ಕಳು ಬಸ್ ಏರುತ್ತಿದ್ದಾರೆ.

    ಹೌದು. ಉಚಿತ ಬಸ್ ವ್ಯವಸ್ಥೆಯು ಹೆಣ್ಮಕ್ಕಳ ಪೋಷಕರಲ್ಲಿ ಕೊಂಚ ತಲೆನೋವು ತಂದಿದೆ. ಇದೀಗ ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ವಿದ್ಯಾರ್ಥಿನಿಯರು ಕಣ್ಮರೆಯಾಗಿದ್ದ ಪೋಷಕರಿಗೆ ಆತಂಕ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

    ಏನಿದು ಅವಾಂತರ..?: ಎರಡು ದಿನಗಳ ಹಿಂದೆ ಅಂಗಡಿಗೆ ಹೋಗಿದ್ದ ಬಾಲಕಿಯರಿಬ್ಬರು ನಾಪತ್ತೆ ಆಗಿದ್ದರು. ಬಾಲಕಿಯರು ದಿಢೀರ್ ಕಣ್ಮರೆ ಆಗಿದ್ದರಿಂದ ಆತಂಕಗೊಂಡ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆ ( Police Station in Konanakunte) ಗೆ ದೂರು ನೀಡಿದ್ದಾರೆ. ಈ ವೇಳೆ ನಾಪತ್ತೆ ಪ್ರಕರಣ (Girls Missing Case) ದಾಖಲಿಸಿಕೊಂಡ ಪೊಲೀಸರು ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

    ಅಂತೆಯೇ ಪೊಲೀಸ್ ತನಿಖೆಯ ವೇಳೆ ನಾಪತ್ತೆ ಆಗಿರೋ ಬಾಲಕಿಯರು ಧರ್ಮಾಸ್ಥಳದಲ್ಲಿರೋ ಮಾಹಿತಿ ಲಭಿಸುತ್ತದೆ. ಧರ್ಮಸ್ಥಳಕ್ಕೆ ಹೋದ ಕೋಣನಕುಂಟೆ ಪೊಲೀಸರು ಬಾಲಕಿಯರನ್ನು ಪತ್ತೆ ಮಾಡಿದ್ದಾರೆ. ಇದೀಗ ಬಾಲಕಿಯರ ಪತ್ತೆ ಬಳಿಕ ವಿಚಾರಿಸಿದಾಗ ನಾಪತ್ತೆ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

    ಅಸಲಿ ಸತ್ಯ ಏನು..?: ಒಬ್ಬಳು 10ನೇ ತರಗತಿ ಇನ್ನೊಬ್ಬಳು 9 ನೇ ತರಗತಿ ಓದುತ್ತಿದ್ದು, ಇಬ್ಬರು ಸಹೋದರಿಯರಾಗಿದ್ದಾರೆ. ಈ ಇಬ್ಬರು ಅಂಗಡಿಗೆ ತೆರಳಿ ಚಾಕ್ಲೇಟ್ (Chocolates) ಖರೀದಿಸಿ ತೀಮದಿದ್ದಾರೆ. ನಂತರ ತಂದೆಗೆ ಕರೆ ಮಾಡಿ ಅಂಗಡಿಯಿಂದ ಚಾಕ್ಲೇಟ್ ಖರೀದಿಸಿ ತಿಂದಿದ್ದೇವೆ. ಅಂಗಡಿಯವರಿಗೆ ಚಾಕ್ಲೇಟ್ ಹಣ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ತಂದೆ, ತಮ್ಮ ಅನುಮತಿಯಿಲ್ಲದೇ ಅಂಗಡಿಗೆ ಹೋಗಿದ್ದಕ್ಕೆ ಮಕ್ಕಳಿಗೆ ಬೈದಿದ್ದಾರೆ. ಅಲ್ಲದೆ ನಾನು ಹಣ ಕೊಡಲ್ಲ ಎಂದು ಸಿಟ್ಟು ಮಾಡಿಕೊಂಡಿದ್ದಾರೆ.

    ತಂದೆ ಕೋಪದಿಂದ ಬೆದರಿದ ಬಾಲಕಿಯರು ತಮ್ಮ ಕೈಯಲ್ಲಿ ಹಣವಿಲ್ಲದಿದ್ದರೂ ಫ್ರೀ ಬಸ್ ಹತ್ತಿ ಧರ್ಮಸ್ಥಳ (Dharmasthala) ಕ್ಕೆ ತೆರಳಿದ್ದಾರೆ. ಸದ್ಯ ನಾಪತ್ತೆ ಆಗಿದ್ದ ಬಾಲಕಿಯರನ್ನು ಹಿಡಿದು ಪೊಲೀಸರು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಟ್ಯೂಶನ್‍ಗೆ ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯಿಂದಲೇ ಕಿರುಕುಳ

    ಟ್ಯೂಶನ್‍ಗೆ ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯಿಂದಲೇ ಕಿರುಕುಳ

    ಚಂಡೀಗಢ: ಟ್ಯೂಶನ್‍ಗೆಂದು ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಛತ್ತೀಸ್‍ಗಢದ (Chhattisgarh) ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.

    11 ಮತ್ತು 12 ವರ್ಷ ಬಾಲಕಿಯರು ಆರೋಪಿಯನ್ನು ತಮ್ಮ ಟ್ಯೂಶನ್ ಟೀಚರ್ ತಂದೆ ಎಂದು ತಿಳಿಸಿದ್ದಾರೆ. ಆಸಾರಾಮ್ ಬಾಪು ನಗರದಲ್ಲಿ ಮಹಿಳೆಯೊಬ್ಬರು ನಡೆಸುತ್ತಿದ್ದ ಟ್ಯೂಶನ್‍ಗೆ 11-12 ವರ್ಷದ ಬಾಲಕಿಯರು ಬರುತ್ತಿದ್ದರು. ಈ ವೇಳೆ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಡಿ ಇದೀಗ ಮಹಿಳೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಮುಖ್ಯ ಪೊಲೀಸ್ ಅಧೀಕ್ಷಕ (ಸಿಎಸ್‍ಪಿ) ಕಂಟೋನ್ಮೆಂಟ್ ಪ್ರಭಾತ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

    ಅಸಾರಾಂ ಬಾಪು ನಗರದಲ್ಲಿರುವ (Asaram Bapu Nagar) ಭಿಲಾಯಿಯ ಜಮುಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Bhilai’s Jamul police station area) ಈ ಘಟನೆ ನಡೆದಿದೆ. ಮನೆಯ ಸುತ್ತಮುತ್ತಲಿರುವ ಮಕ್ಕಳಿಗೆ ಮಹಿಳೆಯೊಬ್ಬರು ಟ್ಯೂಶನ್ ಹೇಳಿಕೊಡುತ್ತಿದ್ದರು. ಈ ಮಧ್ಯೆ ಮನೆಕೆಲಸವನ್ನು ಮಾಡಲು ಒಳಗೆ ಹೋದಾಗ, ಮಹಿಳೆಯ ತಂದೆ ಹುಸೇನ್ ಚಾಕೊಲೇಟ್ ನೀಡಿ ಬಾಲಕಿಯರಿಗೆ ಕಿರುಕುಳ ನೀಡುತ್ತಿರುತ್ತಾನೆ ಎಂದು ಐದನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಕುಟುಂಬಸ್ಥರಿಗೆ ಈ ಬಗ್ಗೆ ತಿಳಿಸಿದ್ದಾಳೆ. ಇದಾದ ಬಳಿಕ ಇತರ ಹುಡುಗಿಯರು ಕೂಡ ಈ ವಿಚಾರವನ್ನು ಮನೆಯವರ ಬಳಿ ಹೇಳಿಕೊಂಡಿದ್ದಾರೆ.

    ಬಳಿಕ ಅನೇಕ ಬಾಲಕಿಯರ ಕುಟುಂಬಸ್ಥರು ಜಮುಲ್ ಪೊಲೀಸ್ ಠಾಣೆಗೆ ಆಗಮಿಸಿ ಶಹದತ್ ಹುಸೇನ್ ವಿರುದ್ಧ ದೂರು ದಾಖಲಿಸಿ, ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ದೂರಿನನ್ವಯ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಸೆಕ್ಷನ್ 354 ಮತ್ತು ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ಬಾರ್‌ ಬಳಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ -12 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಲಕ್ನೋ: ಉತ್ತರಪ್ರದೇಶದ (Uttar Pradesh) ಸಹರಾನ್ ಪುರದಲ್ಲಿ ನಡೆದ ಬಾಲಕಿಯರ (Girls) ಕಬಡ್ಡಿ ಟೂರ್ನಿ (Kabaddi Tournament) ವೇಳೆ ಶೌಚಾಲಯದಲ್ಲಿ (Toilet) ಬೇಯಿಸಿದ ಆಹಾರವನ್ನೇ ಕ್ರೀಡಾಪಟುಗಳಿಗೆ ಬಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

    ಶೌಚಾಲಯ ನೆಲದ ಮೇಲೆ ಬೇಯಿಸಿದ ಅನ್ನದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ವಿವಾದ ಬುಗಿಲೆದ್ದಿದೆ. ಇದನ್ನೂ ಓದಿ: ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ಶುಕ್ರವಾರ (ಸೆಪ್ಟೆಂಬರ್ 16) ದಿಂದ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ಅಂಡರ್-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ (Kabaddi Tournament) ಭಾಗವಹಿಸಿದ್ದ ಸುಮಾರು 200 ಕ್ರೀಡಾಪಟುಗಳಿಗೆ ಶೌಚಾಲಯದ ನೆಲದಲ್ಲಿ ಬೇಯಿಸಿದ ಆಹಾರವನ್ನೇ (Food) ನೀಡಲಾಗಿದೆ. ಜೊತೆಗೆ ಒಂದು ಕಾಗದದ ಮೇಲೆ ಪೂರಿಯನ್ನು ಇಡಲಾಗಿತ್ತು. ಅದನ್ನೇ ಆಟಗಾರರಿಗೆ ಬಡಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.

    ಈ ಆರೋಪ ತಳ್ಳಿಹಾಕಿರುವ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾ ಅವರು, ಇದು ಆಧಾರ ರಹಿತ ಆರೋಪ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡೋ ಬದ್ಲು, ಸಚಿವ ಸ್ಥಾನ ನೀಡಿ: ಬಿಜೆಪಿ MLC

    ಇಲ್ಲಿ ಆಟಗಾರರಿಗೆ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆ. ಅಕ್ಕಿ, ದಾಲ್, ಸಬ್ಜಿ ಸೇರಿದಂತೆ ಎಲ್ಲ ರೀತಿಯ ಆಹಾರವನ್ನು ಈಜುಕೊಳದ (Swimming Pool) ಬಳಿಯೇ ಸಾಂಪ್ರದಾಯಿಕ ಇಟ್ಟಿಗೆ ಒಲೆಯಲ್ಲಿ ದೊಡ್ಡ ಪಾತ್ರೆಗಳಲ್ಲಿ ಸಿದ್ಧಪಡಿಸಿ ಕೊಡಲಾಗಿದೆ. ಸ್ಥಳದ ಕೊರತೆಯಿದ್ದರಿಂದಾಗಿ ಕ್ರೀಡಾಂಗಣದ ಪೂಲ್ ಬಳಿಯೇ ಅಡುಗೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಕೆಲ ಆಟಗಾರರು ಕ್ರೀಡಾಂಗಣದ ಅಧಿಕಾರಿಗಳ ಮುಂದೆ ವಿಷಯ ಪ್ರಸ್ತಾಪಿಸಿದ ಬಳಿಕ ಅನಿಮೇಶ್ ಸಕ್ಸೇನಾ ಅಡುಗೆಯವರಿಗೆ ಛೀಮಾರಿ ಹಾಕಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

    ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

    ಜೈಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರಿಗೆ ತಾರತಮ್ಯ ಮಾಡಿದ ಆರೋಪದ ಮೇಲೆ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲ್ ರಾಮ್ ಗುರ್ಜರ್ ಎಂಬಾತ ತಯಾರಿಸಿದ ಮಧ್ಯಾಹ್ನದ ಊಟವನ್ನು ದಲಿತ ಬಾಲಕಿಯರು ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತ ಬಾಲಕಿಯರು ಬಡಿಸಿದ ಊಟವನ್ನು ಎಸೆಯುವಂತೆ ಇತರ ವಿದ್ಯಾರ್ಥಿಗಳಿಗೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಅಡುಗೆಯವನ ಸೂಚನೆಯನ್ನು ಅನುಸರಿಸಿ ಊಟವನ್ನು ಎಸೆದಿದ್ದಾರೆ. ಈ ಘಟನೆಯ ಬಗ್ಗೆ ಬಾಲಕಿಯರು ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಬಳಿಕ ಅವರು ತಮ್ಮ ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ, ಅಡುಗೆಯವನ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ – ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ

    ಅಡುಗೆಯವನ ವಿರುದ್ಧ ಗೋಗುಂದ ಪೊಲೀಸ್ ಠಾಣೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಷಯ ನಿಜವೆಂದು ಕಂಡುಬಂದಿದ್ದರಿಂದ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ. ದಲಿತ ಬಾಲಕಿಯರು ಊಟವನ್ನು ಬಡಿಸಿದ್ದಕ್ಕೆ ಇತರ ವಿದ್ಯಾರ್ಥಿನಿಯರಿಗೆ ಅದನ್ನು ಎಸೆಯಲು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಡುಗೆಯವನು ಯಾವಾಗಲೂ ತಾನೇ ಆಯ್ಕೆ ಮಾಡಿ, ಮೇಲ್ವರ್ಗದ ವಿದ್ಯಾರ್ಥಿಗಳಿಂದ ಊಟವನ್ನು ಬಡಿಸುತ್ತಿದ್ದರು. ಆದರೆ ನಿನ್ನೆ ವಿದ್ಯಾರ್ಥಿಗಳು ಸರಿಯಾಗಿ ಬಡಿಸುತ್ತಿಲ್ಲ ಎಂಬ ಕಾರಣಕ್ಕೆ ದಲಿತ ಬಾಲಕಿಯರಿಗೆ ಊಟ ಬಡಿಸುವಂತೆ ಶಿಕ್ಷಕರೊಬ್ಬರು ಸೂಚನೆ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ – ಮುರುಘಾ ಶ್ರೀಗೆ ಸೋಮವಾರದವರೆಗಿಲ್ಲ ಜಾಮೀನು

    Live Tv
    [brid partner=56869869 player=32851 video=960834 autoplay=true]

  • ಇಂದು ತನಿಖಾಧಿಕಾರಿ ಕೈಗೆ ವಿದ್ಯಾರ್ಥಿನಿಯರ ಹೇಳಿಕೆ – ಮುರುಘಾ ಶ್ರೀಗೆ ಸಿಗುತ್ತಾ ಜಾಮೀನು..?

    ಇಂದು ತನಿಖಾಧಿಕಾರಿ ಕೈಗೆ ವಿದ್ಯಾರ್ಥಿನಿಯರ ಹೇಳಿಕೆ – ಮುರುಘಾ ಶ್ರೀಗೆ ಸಿಗುತ್ತಾ ಜಾಮೀನು..?

    ಬೆಂಗಳೂರು: ಮುರುಘಾ ಶ್ರೀಗಳ ವಿರುದ್ಧ ಫೋಕ್ಸೊ ಪ್ರಕರಣ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಈ ಸಂಬಂಧ ಎಸ್‍ಪಿಗೆ ನೋಟಿಸ್ ನೀಡಿದ್ದು ಮುಂದಿನ 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ. ಪ್ರಕರಣ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ವರದಿ ಕೇಳಲಾಗಿದೆ. ಇತ್ತ ಮಠಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಇಂದು ವಿದ್ಯಾರ್ಥಿನಿಯರ ಸಿಆರ್‌ಪಿಸಿ 164 ಹೇಳಿಕೆ ತನಿಖಾಧಿಕಾರಿಗಳ ಕೈ ಸೇರಲಿದೆ.

    ಮುರುಘಾ ಶರಣರಿಗೆ ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಆರೋಪಿ ಬಂಧನ ಅಗತ್ಯವಿಲ್ಲದ ಸಂದರ್ಭದಲ್ಲಿ ಪೊಲೀಸರ ಮುಂದೆ ಹಾಜರಾಗಲು ಈ ನೋಟಿಸ್ ಅನ್ನು ಜಾರಿ ಮಾಡಲಾಗುತ್ತದೆ. ತನಿಖಾಧಿಕಾರಿಗಳು ಪರಿಶೀಲಿಸಿ ಬಳಿಕ ಶ್ರೀಗಳಿಗೆ ನೋಟಿಸ್ ನೀಡಬಹುದಾಗಿದೆ. ಅಲ್ಲದೇ ಇಂದು ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯೂ ಬರಲಿದೆ. ಇನ್ನು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಹಿಂದೂಸ್ತಾನ್ ಜನತಾ ಪಕ್ಷದಿಂದ ಒತ್ತಾಯ ಕೇಳಿ ಬಂದಿದೆ. ಇದನ್ನೂ ಓದಿ: ಕೇಂದ್ರ ಸಚಿವರ ಮನೆಯಲ್ಲಿ ಗಣೇಶನಿಗೆ ಆರತಿ ಮಾಡಿದ ಮೋದಿ

    ಈ ಮಧ್ಯೆ ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ಅಕ್ಕಮಹಾದೇವಿ ಬಾಲಕಿಯರ ಹಾಸ್ಟೆಲ್ ವಾರ್ಡನ್ ರಶ್ಮಿ ಅತ್ಯಾಚಾರ ಯತ್ನ ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಮಹಜರು ಮಾಡಲಾಗಿದೆ. ಆದರೆ ಆರೋಪಿ ಬಸವರಾಜನ್ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ. ಇದನ್ನೂ ಓದಿ: ರಾಜ್ಯಕ್ಕೆ ಇಂದು ಯೋಗಿ ಆದಿತ್ಯನಾಥ್, ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ – ಪ್ರಿನ್ಸಿಪಾಲ್ ಅರೆಸ್ಟ್

    ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ – ಪ್ರಿನ್ಸಿಪಾಲ್ ಅರೆಸ್ಟ್

    ರಾಂಚಿ: ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರನ್ನು ಜಾರ್ಖಂಡ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    POLICE JEEP

    ಶಾಲೆಯ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದ ಏಳು ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ಚೈಬಾಸಾ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಸಂತ್ರಸ್ತರ ದೂರಿನ ಮೇರೆಗೆ ಚೈಬಾಸಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  `ಅಗ್ನಿಪಥ್’ ಪ್ರತಿಭಟನೆ – ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಅರೆಸ್ಟ್

    ಈ ಕುರಿತಂತೆ ಪ್ರತಿಕ್ರಿಯಿಸಿದ ಚೈಬಾಸಾ ಪೊಲೀಸರು, ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದಡಿ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಆತನ ಮೇಲೆ ಏಳು ವಿದ್ಯಾರ್ಥಿಗಳು ದೂರು ನೀಡಿದ್ದಾರೆ ಮತ್ತು ಎಲ್ಲಾ ಸಂತ್ರಸ್ತೆಯರು ಶಾಲೆಯ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದರು. ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

    Live Tv

  • ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲು

    ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲು

    ರಾಯಚೂರು: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲಾಗಿರುವ ಘಟನೆ ತಾಲೂಕಿನ ಯರಗೇರಾದಲ್ಲಿ ನಡೆದಿದೆ.

    ತನಾಜ್ (16) ಹಾಗೂ ಮುಸ್ಕಾನ್ (17) ಮೃತ ಸಹೋದರಿಯರು. ತುಂಬಿದ ಕೆರೆಯಲ್ಲಿ ಈಜಲು ತೆರಳಿದ್ದ ಸಹೋದರಿಯರು ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾಯಚೂರು ನಗರದ ನಿವಾಸಿಗಳಾದ ಬಾಲಕಿಯರು ಅತ್ತೆಯ ಮನೆಗೆ ತೆರಳಿದ್ದರು. ಈ ವೇಳೆ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    ಬಾಲಕಿಯರು ಸಾವನ್ನಪ್ಪಿದ ಹಿನ್ನೆಲೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವು- ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆರೋಪ