Tag: ಬಾಲಕಾರ್ಮಿಕ

  • ಅಂದು ಬಾಲಕಾರ್ಮಿಕ ಇಂದು ಪ್ರಾಧ್ಯಾಪಕ- ಅನಿಷ್ಟ ಪದ್ಧತಿ ಮೆಟ್ಟಿನಿಂತು ಬಡತನಕ್ಕೆ ಸೆಡ್ಡು ಹೊಡೆದವನ ಕಥೆ

    ಅಂದು ಬಾಲಕಾರ್ಮಿಕ ಇಂದು ಪ್ರಾಧ್ಯಾಪಕ- ಅನಿಷ್ಟ ಪದ್ಧತಿ ಮೆಟ್ಟಿನಿಂತು ಬಡತನಕ್ಕೆ ಸೆಡ್ಡು ಹೊಡೆದವನ ಕಥೆ

    – ಕಾರ್ಮಿಕ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ

    ಹುಬ್ಬಳ್ಳಿ: ಬಡತನ ಎನ್ನುವುದು ಕೆಲವರಿಗೆ ಬೆಂಬಿಡದೇ ಕಾಡುತ್ತಿರುತ್ತದೆ. ಆದರೆ ಆ ಬಡತನವನ್ನು ಮೆಟ್ಟಿ ನಿಂತವರು ಇದೀಗ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ನಿಂತಿದ್ದಾರೆ. ಅವತ್ತು ಆ ಹುಡುಗ ಬಾಲ ಕಾರ್ಮಿಕನಾಗಿ (Child Labour) ಅಧಿಕಾರಿಗಳಿಗೆ ಸಿಕ್ಕಿದ್ದ. ಇಂದು ಅದೇ ಹುಡುಗ ಮತ್ತಷ್ಟು ವಿದ್ಯಾರ್ಥಿಗಳ ಪಾಲಿನ ಶಿಕ್ಷಕನಾಗಿ ಕೆಲಸ ಆರಂಭಿಸೋಕೆ ಸಿದ್ಧನಾಗಿದ್ದಾನೆ.

    ಅಂದು ತನ್ನ ತಂದೆ, ತಾಯಿ ಪಡುತ್ತಿದ್ದ ಕಷ್ಟವನ್ನು ನೋಡಲಾಗದೇ ತನ್ನ ಪೋಷಕರೊಂದಿಗೆ ಕಲ್ಲಿನ ಕ್ವಾರಿಗೆ ಕೆಲಸಕ್ಕೆಂದು ಹೋಗಿ ಬಾಲ ಕಾರ್ಮಿಕ ಎನಿಸಿಕೊಂಡಿದ್ದ ಬಾಲಕ ಇದೀಗ ಸಹಾಯಕ ಪ್ರಾಧ್ಯಾಪಕನಾಗಿದ್ದಾನೆ ಕುಮಾರ ಸೋಮಲಿಂಗ ಬಾಳಿಕಾಯಿ (Somalinga Balikai). ಇವರು ಚಿಕ್ಕ ವಯಸ್ಸಿನಲ್ಲಿದ್ದಾಗ ತಮ್ಮ ಪೋಷಕರೊಂದಿಗೆ ಕಲ್ಲಿನ ಕ್ವಾರಿಗೆ ಕೆಲಸಕ್ಕೆಂದು ಹೋಗುತ್ತಿದ್ದರು.

    ಮೂಲತಃ ಧಾರವಾಡ (Dharwad) ತಾಲೂಕಿನ ಮಂಡಿಹಾಳ ಗ್ರಾಮದವರಾದ ಇವರು, ಪ್ರತಿನಿತ್ಯ ಕೆಲಸಕ್ಕೆ ಹೋಗುವುದನ್ನು ನೋಡಿದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇತನ್ನು ರಕ್ಷಣೆ ಮಾಡಿ ಆಗ ದಡ್ಡಿಕಮಲಾಪುರದಲ್ಲಿದ್ದ ಬಾಲ ಕಾರ್ಮಿಕರ ಶಾಲೆಯಲ್ಲಿಟ್ಟು ಶಿಕ್ಷಣ ನೀಡಿದ್ರು. ಅಲ್ಲಿಂದ ಆರಂಭವಾದ ಈತನ ಶಿಕ್ಷಣ ಪ್ರೀತಿ ಇಂದು ದೊಡ್ಡ ಮಟ್ಟಿನ ಯಶಸ್ಸಿಗೆ ಕಾರಣವಾಗಿದೆ. ಈ ಉಚಿತ ಶಿಕ್ಷಣ (Free Education) ಪಡೆದ ಕುಮಾರ ಸೋಮಲಿಂಗಯ್ಯ ಇದೀಗ ರಾಜ್ಯಕ್ಕೇ ಎರಡನೇ ರ್ಯಾಂಕ್ ಪಡೆಯುವ ಮೂಲಕ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ – ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ

    ಅಂದು ಕಾರ್ಮಿಕ ಇಲಾಖೆಯಿಂದಲೇ ನಡೆಸಲಾಗುತ್ತಿದ್ದ ಶಾಲೆಗಳ ಮೂಲಕ ಶಿಕ್ಷಣ ಪಡೆದ ಕುಮಾರ ಸೋಮಲಿಂಗಯ್ಯ ಅವರು, ಇಂದು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಪ್ರತಿಯೊಬ್ಬ ಬಾಲ ಕಾರ್ಮಿಕರು ಕೂಡ ಇವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದು ಹುಬ್ಬಳ್ಳಿ (Hubballi) ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತೆ ಶ್ವೇತಾ ಹರ್ಷ ವ್ಯಕ್ತಪಡಿಸಿದ್ದಾರೆ. ಮಕ್ಕಳು ಯಾವುದೇ ಕಾರಣಕ್ಕೂ ಕೆಲಸಕ್ಕೆ ಹೋಗಬಾರದು, ಮಕ್ಕಳ ಕಲಿಕೆಗೆ ಪೋಷಕರು ಸಹ ಪ್ರೋತ್ಸಾಹ ನೀಡಬೇಕು. ಅದರಂತೆ ಈ ಕುಮಾರ ಎಲ್ಲರಿಗೂ ಸ್ಪೂರ್ತಿ ಎನ್ನುವುದು ಅಧಿಕಾರಗಳ ಮಾತು.

    ಒಟ್ಟಾರೆ ಅಂದು ಬಾಲ ಕಾರ್ಮಿಕನಾಗಿದ್ದ ಕುಮಾರ ಸೋಮಲಿಂಗಯ್ಯ ಇಂದು ಬಡತನವನ್ನೇ ಮೆಟ್ಟಿ ನಿಲ್ಲುವ ಮೂಲಕ ಆದರ್ಶವಾಗಿದ್ದಾರೆ. ಅಲ್ಲದೇ ಮನಸ್ಸಿದ್ದರೆ ಮಾರ್ಗ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ಎಲ್ಲಾ ಸೌಕರ್ಯವಿದ್ದು ಸಾಧಿಸಿ ನಿಲ್ಲದವರ ಎದುರು ಇಂತಹ ಶಿಕ್ಷಣ ಪ್ರೇಮಿಗಳು ಇರೋದು ಎಲ್ಲರಿಗೂ ಮಾದರಿಯಾಗಿದೆ. ಬಾಲ ಕಾರ್ಮಿಕ ಎಂಬ ಅನಿಷ್ಟ ಪದ್ಧತಿ ಮೆಟ್ಟಿನಿಂತ ಕುಮಾರ್ ಸಾಧನೆ ಎಲ್ಲರಿಗೂ ಸ್ಪೂರ್ತಿ.

     

  • ರಾಯಚೂರಿನಲ್ಲಿ ಮಕ್ಕಳು ವಠಾರ ಶಾಲೆಗೆ ಗೈರು- ಕೃಷಿ ಕೂಲಿಗೆ ಹಾಜರು

    ರಾಯಚೂರಿನಲ್ಲಿ ಮಕ್ಕಳು ವಠಾರ ಶಾಲೆಗೆ ಗೈರು- ಕೃಷಿ ಕೂಲಿಗೆ ಹಾಜರು

    ರಾಯಚೂರು: ಕೋವಿಡ್ 19 ಹಿನ್ನೆಲೆ ಶಾಲೆಗಳು ಆರಂಭವಾಗುವುದು ಯಾವಾಗ ಅನ್ನೋದು ಇನ್ನೂ ಸ್ಪಷ್ಟತೆ ಯಾರಿಗೂ ಇಲ್ಲ. ಆದ್ರೆ ಸರ್ಕಾರ ಮಕ್ಕಳ ಅಕ್ಷರ ಅಭ್ಯಾಸ ನಿಲ್ಲಬಾರದು ಅಂತ ವಿದ್ಯಾಗಮ ಯೋಜನೆಯಡಿ ವಠಾರ ಶಾಲೆ ನಡೆಸುತ್ತಿದೆ. ಆದ್ರೆ ರಾಯಚೂರಿನಲ್ಲಿ ಗ್ರಾಮೀಣ ಭಾಗದ ಪೋಷಕರು ಮಾತ್ರ ಮಕ್ಕಳನ್ನ ಪಾಠಕ್ಕೆ ಕಳಿಸುವ ಬದಲು ಕೂಲಿಗೆ ಕಳುಹಿಸುತ್ತಿದ್ದಾರೆ. ಆ ಮಕ್ಕಳನ್ನ ಪುನಃ ಕರೆತಂದು ಪಾಠ ಮಾಡುವುದೇ ಜಿಲ್ಲೆಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

    ಮಹಾಮಾರಿಯಂತೆ ಎಲ್ಲೆಡೆ ಹಬ್ಬಿರೋ ಕೊರೊನಾ ಭೀತಿ ಮಕ್ಕಳ ಶೈಕ್ಷಣಿಕ ಹಕ್ಕಿನ ಮೇಲೂ ಪರಿಣಾಮ ಬೀರಿದೆ. ಲಾಕ್‍ಡೌನ್‍ನಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟರೂ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗಲಿ ಅಂತ ವಠಾರ ಶಾಲೆ ಆರಂಭಿಸಿದೆ. ಆದ್ರೆ ರಾಯಚೂರಿನಲ್ಲಿ ಗ್ರಾಮೀಣ ಭಾಗದ ಮಕ್ಕಳು ಮಾತ್ರ ವಠಾರ ಶಾಲೆಗಳಿಗೆ ಹೋಗದೆ ಕೂಲಿಗೆ ಹೋಗುತ್ತಿದ್ದಾರೆ. ಸರ್ಕಾರ ಇನ್ನೂ ಶಾಲೆಗಳಿಗೆ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಅದರ ಬದಲಿಗೆ ಶಿಕ್ಷಕರೇ ಗ್ರಾಮದ ದೇವಸ್ಥಾನಗಳು, ಸಮುದಾಯ ಭವನಗಳು, ಗುಡಿ ಗುಂಡಾರಗಳಲ್ಲೇ ವಠಾರ ಶಾಲೆ ನಡೆಸಬೇಕಿದೆ. ಹೀಗೆ ಹೋದ ಶಿಕ್ಷಕರಿಗೆ ಅಲ್ಲಿ ಮಕ್ಕಳಿಲ್ಲದ್ದು ಕಂಡು ಬೇಸರವಾಗುತ್ತಿದೆ. ಬಹುತೇಕ ಮಕ್ಕಳನ್ನು ಪಾಲಕರು ಹೊಲಗಳ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲವೇ ಬೇರೆಯವರ ಹೊಲಗಳಿಗೆ ಕಸ ಆರಿಸಲು ಕೂಲಿಗೆ ಕಳುಹಿಸುತ್ತಿರುವುದು ಹೆಚ್ಚಾಗಿದೆ.

    ಪ್ರತಿ ದಿನ ಮಕ್ಕಳಿಗೆ 150 ರೂಪಾಯಿ ಕೂಲಿ ಸಿಗುತ್ತಿರುವುದರಿಂದ ಕಷ್ಟದ ಸಮಯದಲ್ಲಿ ಹಣ ಬರುತ್ತೆ ಅಂತ ಪೋಷಕರು ಕೃಷಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ತಪ್ಪು ಎಂದು ಹೇಳಿದರೆ ಪಾಲಕರು ಶಿಕ್ಷಕರು, ಅಧಿಕಾರಿಗಳೊಂದಿಗೆ ವಾದಕ್ಕಿಳಿಯುತ್ತಾರಂತೆ. ಹೀಗಾಗಿ ಮಕ್ಕಳಿಗೆ ಪಾಠ ಹೇಳುವುದೇ ದೊಡ್ಡ ತಲೆನೋವಾಗಿದೆ. ವಿದ್ಯಾಗಮ ಯಶಸ್ವಿಯಾಗಿ ನಡೆಯುತ್ತಿದೆ ಆದ್ರೆ ಮಕ್ಕಳನ್ನ ಕೂಲಿ ಕೆಲಸಕ್ಕೆ ಕಳುಹಿಸುತ್ತಿರುವ ಪೋಷಕರಿಗೆ ತಿಳಿ ಹೇಳುವುದೇ ಸವಾಲಾಗಿದೆ. ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನ ಪಾಠಕ್ಕೆ ಕರೆತರುವ ಕೆಲಸ ಮಾಡುತ್ತಿದ್ದಾರೆ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಗೋನಾಳ ಹೇಳಿದ್ದಾರೆ.

    ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಬಾಲಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಕವಿತಾಳ, ಸಿರವಾರ, ದೇವದುರ್ಗದಲ್ಲಿ ದಾಳಿ ನಡೆಸಿದ್ದು, 28 ವಾಹನಗಳನ್ನು ಜಪ್ತಿ ಮಾಡಿ 130 ಮಕ್ಕಳನ್ನು ರಕ್ಷಿಸಿದ್ದಾರೆ. ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಪಾಲಕರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಲಾಗುತ್ತಿದೆ. ರಕ್ಷಣೆ ಮಾಡಿದ ಬಾಲಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುತ್ತಿದೆ.

    ಟಂಟಂ ಆಟೋ ಚಾಲಕರು, ಪಿಕಪ್ ವಾಹನಗಳ ಚಾಲಕರು ಕೂಲಿ ಕಾರ್ಮಿಕರನ್ನು ಕರೆತರುವ ಕೆಲಸ ನೆಚ್ಚಿಕೊಂಡಿದ್ದಾರೆ. ಒಬ್ಬ ಕಾರ್ಮಿಕರಿಗೆ ಇಂತಿಷ್ಟು ಅಂತ ಕಮಿಶನ್ ಪಡೆಯುತ್ತಾರೆ. ಕಮಿಷನ್‍ಗಾಗಿ ಮಕ್ಕಳನ್ನು ಕೂಡ ಕೂಲಿಗೆ ಕರೆದೊಯ್ಯುತ್ತಿದ್ದಾರೆ. ನಿರಂತರ ದಾಳಿ ಬಳಿಕ ಅಧಿಕಾರಿಗಳು ಶಿಕ್ಷಕರೇ ಮಕ್ಕಳ ಮನೆಗಳಿಗೆ ತೆರಳಿ ವಠಾರ ಶಾಲೆಗೆ ಬರುವಂತೆ ತಿಳಿ ಹೇಳುವ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಶಿಕ್ಷಕರು ಪಾಠ ಮಾಡುವ ಜೊತೆ ಮಕ್ಕಳು ಕೂಲಿ ಕೆಲಸಕ್ಕೆ ಹೋಗದಂತೆ ತಡೆಯುವ ಕೆಲಸವೂ ಮಾಡಬೇಕಾಗಿದೆ.

  • ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜೀವಂತವಾಗಿದೆ ಬಾಲಕಾರ್ಮಿಕ ಪದ್ದತಿ!

    ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜೀವಂತವಾಗಿದೆ ಬಾಲಕಾರ್ಮಿಕ ಪದ್ದತಿ!

    ಬೆಂಗಳೂರು: ನಗರದ ಪೊಲೀಸ ಕೇಂದ್ರ ಕಚೇರಿಯಲ್ಲಿಯೇ ಬಾಲ ಕಾರ್ಮಿಕ ಪದ್ದತಿ ಜೀವಂತವಾಗಿದೆ. ಕಮಿಷನರ್ ಕಚೇರಿಯ ಗ್ರೌಂಡ್ ಫ್ಲೋರ್ ನಲ್ಲಿ ಇರೋ ರೆಕಾರ್ಡ್ ಆಫೀಸ್ ಅಂದ್ರೆ ಎಸ್‍ಪಿಸಿ ಕೇಂದ್ರದಲ್ಲಿ ಬಾಲಕಾರ್ಮಿಕನೊಬ್ಬ ಕೆಲಸ ಮಾಡಿಕೊಂಡಿದ್ದಾನೆ.

    ಈ ಬಾಲಕ ಗ್ರೌಂಡ್ ಫ್ಲೋರ್ ಒಂದರಲ್ಲಿಯೇ ಕೆಲಸ ಮಾಡುವುದಿಲ್ಲ. ಕಮಿಷನರ್ ಛೇಂಬರ್ ಪಕ್ಕದಲ್ಲೂ ಡ್ಯೂಟಿ ಮಾಡ್ತಾನೆ. ತನ್ನ ಸ್ನೇಹಿತರ ಜೊತೆ ಸರಿಯಾಗಿ 11 ಗಂಟೆಗೆ ಬಂದು ಸಂಜೆವರೆಗೆ ಕೆಲಸ ಮಾಡಿ ಆಮೇಲೆ ಮನೆಗೆ ಹೋಗ್ತಾನೆ.

    ಕಾನೂನು ಪಾಲನೆ ಮಾಡೋರ ಬುಡದಲ್ಲೇ ಕಾನೂನಿನ ಕಗ್ಗೋಲೆ ನಡೆಯುತ್ತಿದೆ. ಸದ್ಯ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ.