Tag: ಬಾಲಕರು

  • ಈಜಲು ಹೋಗಿ ಮೂವರು ಬಾಲಕರು ನೀರುಪಾಲು

    ಈಜಲು ಹೋಗಿ ಮೂವರು ಬಾಲಕರು ನೀರುಪಾಲು

    ಚಿತ್ರದುರ್ಗ: ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ.

    ಹೆಗ್ಗೆರೆ ಗ್ರಾಮದ ಕೆಂಪರಾಜ್ (14), ಕಾಂತರಾಜ್ (14) ಹಾಗು ಮಹಾಂತೇಶ್ ನೀರುಪಾಲಾದ ಬಾಲಕರು. ಶುಕ್ರವಾರ ಮಧ್ಯಾಹ್ನ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಅಗ್ನಿಶಾಮಕದಳ ಹಾಗೂ ಹೊಸದುರ್ಗ ಪೊಲೀಸರು ಶವಗಳಿಗೆ ಶೋಧಕಾರ್ಯ ನಡೆಸಿದ್ದು, ಇಂದು ಬೆಳಗ್ಗೆ ಮೂವರು ಬಾಲಕರ ಶವ ಪತ್ತೆಯಾಗಿವೆ. ಕೆರೆಯ ಅಂಗಳದಲ್ಲಿ  ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.

    ಈ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

  • ಸಮುದ್ರದಲ್ಲಿ ಆಟವಾಡಲು ಹೋಗಿ ಇಬ್ಬರು ಬಾಲಕರು ನೀರುಪಾಲು

    ಸಮುದ್ರದಲ್ಲಿ ಆಟವಾಡಲು ಹೋಗಿ ಇಬ್ಬರು ಬಾಲಕರು ನೀರುಪಾಲು

    ಕಾರವಾರ: ಆಟವಾಡಲು ಸಮುದ್ರಕ್ಕೆ ತೆರಳಿದ್ದ ಬಾಲಕರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗಣೇಶ ನಾಯ್ಕ(10) ಮತ್ತು ವಿನಾಯಕ ನಾಯ್ಕ(09) ಮೃತ ದುರ್ದೈವಿಗಳು. ಸೋಮವಾರ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು ಕೊಚ್ಚಿ ಹೋಗಿದ್ದರು. ತಡರಾತ್ರಿ ಹುಡುಕಾಟ ನಡೆಸಿದರೂ ಇಬ್ಬರ ಸುಳಿವು ಸಿಕ್ಕಿರಲಿಲ್ಲ.

    ಇಂದು ಬೆಳಿಗ್ಗೆ ಗ್ರಾಮದ ಕಡಲತೀರದಲ್ಲಿ ಬಾಲಕರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ಹೋಟೆಲ್‍ನಲ್ಲಿ ಸೀಮೆಎಣ್ಣೆ ಸ್ಟೋವ್ ಸ್ಫೋಟ- 4 ಬಾಲಕರ ಸಾವು

    ಹೋಟೆಲ್‍ನಲ್ಲಿ ಸೀಮೆಎಣ್ಣೆ ಸ್ಟೋವ್ ಸ್ಫೋಟ- 4 ಬಾಲಕರ ಸಾವು

    ಕಲಬುರಗಿ: ಹೋಟೆಲ್‍ನಲ್ಲಿದ್ದ ಸೀಮೆಎಣ್ಣೆ ಸ್ಟೋವ್ ಸ್ಫೋಟಗೊಂಡು ನಾಲ್ಕು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಫತ್ತುನಾಯಕ ತಾಂಡಾದಲ್ಲಿ ನಡೆದಿದೆ.

    ಪ್ರೀತಮ್(03), ರತಿಕ್(03) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಇನ್ನಿಬ್ಬರು ಬಾಲಕರಾದ ಖುತೀಶ್ ಮತ್ತು ಅಕ್ಷತಾ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಹೋಟೆಲ್ ಮಾಲಿಕ ವೀರಶೆಟ್ಟಿ ಅವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮನ್ನಾಖೇಳಿ ಪಿಎಚ್‍ಸಿಯಲ್ಲಿ ದಾಖಲಿಸಲಾಗಿದೆ.

     

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿಯ ಜಿಲ್ಲಾಧಿಕಾರಿ ಎನ್. ವೆಂಕಟೇಶಕುಮಾರ್ ತಾಂಡಾಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.