Tag: ಬಾಲಕರು

  • 30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    ಚಿಕ್ಕಬಳ್ಳಾಪುರ: ಧಾರಾಕಾರ ಮಳೆಯಿಂದ 30 ವರ್ಷಗಳ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದ ಕೆರೆ ಕೋಡಿ ಹರಿದಿದ್ದು, ನೋಡಲು ಹೋದ ಮೂವರು ಬಾಲಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

    ಸಂಜೆ ಶಾಲೆ ಮುಗಿದ ಮೇಲೆ ಕೆರೆ ನೋಡಲು ಹೋದ ಬಾಲಕರು ಕೆರೆಯಲ್ಲಿ ಈಜಾಡಲು ಹೋಗಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೋಡೇಗಂಡ್ಲು ಗ್ರಾಮದ ವೆಂಕಟೇಶ್-ಗಾಯತ್ರಿ ದಂಪತಿ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿ ಪ್ರಜ್ವಲ್(09) ಮೃತ ದುರ್ದೈವಿಗಳು. ಇದನ್ನೂ ಓದಿ:  ಇನ್ಮುಂದೆ ಶಾಲೆಗಳ ಮುಂದೆ ಮಾರುವಂತಿಲ್ಲ ಐಸ್‌ಕ್ರೀಮ್, ಚಾಟ್ ಫುಡ್ – ಇಲ್ಲಿದೆ ವಿವರ 

    ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಪಲ್ಟಿ – ಇಬ್ಬರು ಬಾಲಕರ ದುರ್ಮರಣ

    ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಪಲ್ಟಿ – ಇಬ್ಬರು ಬಾಲಕರ ದುರ್ಮರಣ

    ಚಾಮರಾಜನಗರ: ಸಾವು ಹೇಗೆ ಬರಲಿದೆ ಎಂಬುದು ಊಹೆಗೂ ನಿಲುಕದ್ದು ಎಂಬುದಕ್ಕೆ ಇಂದು ಚಾಮರಾಜನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಪಲ್ಟಿಯಾಗಿ ಇಬ್ಬರು ಬಾಲಕರು ದುರಂತ ಅಂತ್ಯ ಕಂಡಿದ್ದಾರೆ.

    ಉತ್ತರಪ್ರದೇಶ ಮೂಲದ ಅತುಲ್(17), ಮಯೂರ್(17) ಮೃತ ದುರ್ದೈವಿಗಳು. ಜೀವನೋಪಯಕ್ಕಾಗಿ ಬಟ್ಟೆ ವ್ಯಾಪಾರ ಮಾಡಲು ಬಂದಿದ್ದ ಇವರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಬ್ಬು ತುಂಬಿದ ಲಾರಿ ಆ ರಸ್ತೆಯಲ್ಲಿಯೇ ಹೋಗುತ್ತಿತ್ತು. ಆದರೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಲಾರಿ ಉರುಳಿ ಬಾಲಕರ ಮೇಲೆ ಪಲ್ಟಿಯಾಗಿದೆ. ಪರಿಣಾಮ ಬಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯಕ್ರಮಗಳಲ್ಲಿ ‘ಸೈಬರ್ ಸುರಕ್ಷತೆ’ ಅಧ್ಯಯನ ಅಳವಡಿಕೆ 

    ಅವೈಜ್ಞಾನಿಕ ರಸ್ತೆ ಜೊತೆಗೆ ಚಾಲಕನ ಅತಿವೇಗವೇ ಘಟನೆಗೆ ಕಾರಣ ಎನ್ನಲಾಗಿದ್ದು, ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಕಬ್ಬು ರಸ್ತೆಯಲ್ಲೆಲ್ಲಾ ಚೆಲ್ಲಾಡಿ ಸಂಚಾರವೂ ಅಸ್ತವ್ಯಸ್ತವಾಗಿತ್ತು. ಅಪಘಾತ ನಡೆಯುತ್ತಿದ್ದಂತೆ ಜನರು ಮುತ್ತಿಕೊಂಡಿದ್ದರಿಂದ ಕಾರ್ಯಾಚರಣೆ ನಡೆಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

  • YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

    YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

    ಹೈದರಾಬಾದ್: ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಪಿ) ಬ್ಯಾನರ್‌ಗಳನ್ನು ಹಾನಿಗೊಳಿಸಿದ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಪಲ್ನಾಡು ಪ್ರದೇಶದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಆಡಳಿತ ನಡೆಸುತ್ತಿರುವ ವೈಎಸ್‍ಆರ್‌ಪಿ ಪೋಸ್ಟರ್‌ಗಳನ್ನು ಹರಿದು ಹಾಕಿದರ ಕುರಿತಂತೆ ವಿಚಾರಣೆ ನಡೆಸಲು ಪೊಲೀಸರು ಅಪ್ರಾಪ್ತ ಬಾಲಕರನ್ನು ಠಾಣೆಗೆ ಕರೆದೊಯ್ದು ಸಂಜೆಯವರೆಗೂ ನೆಲದ ಮೇಲೆ ಕುರಿಸಿಕೊಂಡಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆ ಆಗಬೇಕು ಅಂತ ಪ್ರಶಾಂತ್ ಕಿಶೋರ್ ಬಯಸಿದ್ರು

    cm jagan mohan reddy

    ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‍ಪಿ) ಜಯರಾಮ್ ಪ್ರಸಾದ್, ಕಟ್ಟಿದ್ದ ವೈಎಸ್‍ಆರ್‌ಪಿ ಪೋಸ್ಟರ್‌ಗಳಿಗೆ ಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಚಾರಣೆ ನಡೆಸಲು ನಾವು ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಠಾಣೆಗೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.

    ವೈಎಸ್‍ಆರ್ ಸದಸ್ಯರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರಾಮದ 10ರಿಂದ 15 ವರ್ಷದೊಳಗಿನ ಕೆಲವು ಮಕ್ಕಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿ ಒಂದು ದಿನದ ಬಳಿಕ ಪೊಲೀಸರು ಮಕ್ಕಳನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ

    ಈ ವಿಚಾರ ಹಬ್ಬುತ್ತಿದ್ದಂತೆಯೇ ತೆಲುಗು ದೇಶಂ ಪಕ್ಷ (ಟಿಡಿಪಿ) ಅಪ್ರಾಪ್ತ ಮಕ್ಕಳಿಗೆ ಕಿರುಕುಳ ನೀಡಿದ ವೈಸಿಪಿ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

  • 11 ವರ್ಷದ ಬಾಲಕಿ ಮೇಲೆ 6 ಮಂದಿ ಅಪ್ರಾಪ್ತ ಬಾಲಕರಿಂದ ಅತ್ಯಾಚಾರ

    11 ವರ್ಷದ ಬಾಲಕಿ ಮೇಲೆ 6 ಮಂದಿ ಅಪ್ರಾಪ್ತ ಬಾಲಕರಿಂದ ಅತ್ಯಾಚಾರ

    ರಾಂಚಿ: 11 ವರ್ಷದ ಬಾಲಕಿ ಮೇಲೆ ಆರು ಮಂದಿ ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿರುವ ಘಟನೆ ಮಂಗಳವಾರ ರಾತ್ರಿ ಜಾರ್ಖಂಡ್‍ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.

    ಇದೀಗ 10 ರಿಂದ 15 ವರ್ಷದೊಳಗಿನ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆ ಸಮಾರಂಭಕ್ಕೆಂದು ಬಾಲಕಿ ಪಕ್ಕದ ಹಳ್ಳಿಗೆ ಹೋಗಿದ್ದಳು. ಒಂದು ನೃತ್ಯ ಕಾರ್ಯಕ್ರಮದ ವೇಳೆ ಬಾಲಕಿ ಬಾಲಕರೊಂದಿಗೆ ಜಗಳವಾಡಿದ್ದಾಳೆ. ಇದನ್ನೂ ಓದಿ: ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

    crime

    ಮಧ್ಯರಾತ್ರಿ ಹೊತ್ತಿಗೆ ಆಕೆ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಮನೆಗೆ ಹಿಂದಿರುಗುತ್ತಿದ್ದಾಗ, ಅವಳನ್ನು ಹಿಂಬಾಲಿಸಿಕೊಂಡು ಬಂದ ಹುಡುಗರು ಆಕೆಯನ್ನು ತಡೆದು ಏಕಾಂಗಿ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಸ್ಥಳದಿಂದ ತಪ್ಪಿಸಿಕೊಂಡ ಬಾಲಕಿ ಮತ್ತು ಆಕೆಯ ಇಬ್ಬರು ಸ್ನೇಹಿತರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕಿಯನ್ನು ಹುಡುಕುತ್ತಾ ಬಂದ ಪೋಷಕರನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದಾರೆ.

    crime

    ಆರಂಭದಲ್ಲಿ ಸಮಾಜಕ್ಕೆ ಹೆದರಿ ಈ ಕುರಿತಂತೆ ಪ್ರಕರಣ ದಾಖಲಿಸಲು ಬಾಲಕಿಯ ಕುಟುಂಬಸ್ಥರು ಹಿಂದೇಟು ಹಾಕಿದರು. ಆದರೆ ಗುರುವಾರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ಈ ಕುರಿತಂತೆ ತನಿಖೆ ನಡೆಸುತ್ತಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಗಲಭೆಯನ್ನು ನಿಯಂತ್ರಿಸುವಲ್ಲಿ ಅಮಿತ್ ಶಾ ಸಂಪೂರ್ಣ ವಿಫಲ: ಶರದ್ ಪವಾರ್

    ಕೊನೆಗೆ ಗುರುವಾರ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರು ಆರೋಪಿಗಳನ್ನು ಬಂಧಿಸಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

  • ಕೆರೆಗೆ ಬಿದ್ದು ಇಬ್ಬರು ಬಾಲಕರ ಧಾರುಣ ಸಾವು

    ಕೆರೆಗೆ ಬಿದ್ದು ಇಬ್ಬರು ಬಾಲಕರ ಧಾರುಣ ಸಾವು

    ಹಾವೇರಿ: ಎತ್ತುಗಳ ಮೈತೊಳೆಯಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅಭಿಷೇಕ್ ಬಸನಗೌಡ ಹಂಡೋರಿ (14) ಮತ್ತು ಹರೀಶ್ ಬಸವರಾಜ್ ಬಾಳಿಕಾಯಿ (14) ಮೃತಪಟ್ಟ ಇಬ್ಬರು ದುರ್ದೈವಿ ಬಾಲಕರು. ಇಬ್ಬರು ಗ್ರಾಮದ ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಎತ್ತುಗಳ ಮೈತೊಳೆಯಲು ಹೊಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಇದ್ದ ಪರಿಣಾಮ ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು

    ಇಬ್ಬರು ಬಾಲಕರ ಮೃತ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಚರಣೆ ನಡೆಸಿ ಹೊರ ತೆಗೆದಿದ್ದಾರೆ. ಮೃತ ಬಾಲಕರ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಹೋಳಿ ಆಡಿ, ನದಿ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು- ಓರ್ವನ ಸ್ಥಿತಿ ಗಂಭೀರ

    ಹೋಳಿ ಆಡಿ, ನದಿ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು- ಓರ್ವನ ಸ್ಥಿತಿ ಗಂಭೀರ

    ಹಾವೇರಿ: ಊರಿನ ಯುವಕರು, ಹುಡುಗರೆಲ್ಲ ಸೇರಿ ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಆಡಿ ಸಂಭ್ರಮಿಸಿದ್ದರು. ಗ್ರಾಮದಲ್ಲಿ ಸಹಜವಾಗಿಯೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆದರೆ ಬಣ್ಣದಾಟದ ನಂತರ ನದಿಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ಬಾಲಕ ತೀವ್ರ ಅಸ್ವಸ್ಥಗೊಂಡ ಘಟನೆ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಳಿ ಇರುವ ವರದಾ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಬಾಲಕರನ್ನು ಮಹೇಶ್ ಮುರಡಣ್ಣನವರ್(10), ವೀರೇಶ್ ಅಕ್ಕಿವಳ್ಳಿ(10) ಎಂದು ಗುರುತಿಸಲಾಗಿದೆ. ಯೋಗೇಶ್ ಎಂಬ 7 ವರ್ಷದ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಇಬ್ಬರು ಬಾಲಕರ ದೇಹಗಳನ್ನು ಸ್ಥಳೀಯರು ವರದಾ ನದಿಯಿಂದ ಹೊರ ತೆಗೆದಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮಳೆ ನೀರಿನಲ್ಲಿ ಮುಳುಗಿ ಮೂವರ ಬಾಲಕರು ಸಾವು

    ಮಳೆ ನೀರಿನಲ್ಲಿ ಮುಳುಗಿ ಮೂವರ ಬಾಲಕರು ಸಾವು

    ಹಾವೇರಿ: ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೂವರು ಬಾಲಕರ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಎರಡನೇ ನಂಬರ್ ಶಾಲೆಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಗಳು ತುಂಬಿದ್ದವು. ಈ ಗುಂಡಿಗೆ ಬಿದ್ದು ಬಾಲಕರಾದ ಅಜ್ಮಲ್ (8) ಅಕ್ಮಲ್ (9) ಮತ್ತು ಜಾಫರ್ (12) ಮೃತಪಟ್ಟಿದ್ದಾರೆ.

    ಈ ಮೂವರ ಮಕ್ಕಳು ಶಾಲೆಯ ಮೈದಾನದಲ್ಲಿ ಆಡಲು ಹೋಗಿದ್ದಾರೆ. ಮಳೆಗೆ ಗುಂಡಿ ತುಂಬಿದ್ದ ಕಾರಣ ಮಕ್ಕಳ ಕಾಣಿಸಿಲ್ಲ. ಆಡುತ್ತಲೇ ಮಕ್ಕಳು 10 ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ. ಮಕ್ಕಳ ಬಿದ್ದ ಸಮಯದಲ್ಲಿ ಯಾರೂ ಸ್ಥಳದಲ್ಲಿ ಇಲ್ಲದ ಕಾರಣ ಮಕ್ಕಳನ್ನು ಬದುಕಿಸಲು ಆಗಿಲ್ಲ. ಹೀಗಾಗಿ ಮೂವರು ಬಾಲಕರು ಮೃತಪಟ್ಟಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

    ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚೆನ್ನೈ ನೋಡಲು ತ್ರಿಪುರಾದಿಂದ ವಿಮಾನದಲ್ಲಿ ಹಾರಿದ ಅಪ್ರಾಪ್ತ ಪ್ರೇಮಿಗಳು

    ಚೆನ್ನೈ ನೋಡಲು ತ್ರಿಪುರಾದಿಂದ ವಿಮಾನದಲ್ಲಿ ಹಾರಿದ ಅಪ್ರಾಪ್ತ ಪ್ರೇಮಿಗಳು

    – 14 ವರ್ಷದ ಬಾಲಕಿಗೆ ವಿಮಾನದಲ್ಲಿ ಹಾರುವ ಆಸೆ
    – ಪ್ರಿಯತಮೆ ಆಸೆ ಈಡೇರಿಸಿದ 17 ವರ್ಷದ ಬಾಲಕ

    ಚೆನ್ನೈ: 17 ವರ್ಷದ ಬಾಲಕ ಹಾಗೂ 14 ವರ್ಷದ ಬಾಲಕಿ ಹಲವು ದಿನಗಳಿಂದ ಪ್ರೀತಿಸುತ್ತಿದ್ದು, ಚೆನ್ನೈ ಸಿಟಿ ನೋಡುವ ಉದ್ದೇಶದಿಂದ ಯಾರಿಗೂ ತಿಳಿಯದಂತೆ ತ್ರಿಪುರಾದಿಂದ ವಿಮಾನದ ಮೂಲಕ ಆಗಮಿಸಿದ್ದಾರೆ. ಆದರೆ ತಕ್ಷಣವೇ ಅವರನ್ನು ಪೋಷಕರ ಬಳಿಗೆ ಸೇರಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅನುಮಾನಗೊಂಡು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ಗೆ ಮಾಹಿತಿ ನೀಡಿದ್ದಾರೆ.

    ಘಟನೆ ಬಗ್ಗೆ ಸಿಡಬ್ಲ್ಯೂಸಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದು, ಸೋಮವಾರ ಮಧ್ಯಾಹ್ನ ಇವರಿಬ್ಬರೂ ಚೆನ್ನೈಗೆ ಬಂದಿಳಿದಿದ್ದಾರೆ. ಸ್ನೇಹಿತನೊಬ್ಬ ಇವರನ್ನು ಕರೆದೊಯ್ಯಬೇಕಿತ್ತು. ಆದರೆ ಆತ ಬಂದಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆದಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇವರು ಅಲೆದಾಡುವುದನ್ನು ಪೊಲೀಸರು ಗಮನಿಸಿದ್ದಾರೆ. ತಕ್ಷಣವೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ನಾವಿಬ್ಬರೂ ಪ್ರೇಮಿಗಳು
    ಆರಂಭದಲ್ಲಿ ಇಬ್ಬರೂ ಅಗರ್ತಲಾದಿಂದ ಕೋಲ್ಕತ್ತಾಗೆ ಫ್ಲೈಟ್ ಮೂಲಕ ಬಂದಿದ್ದಾರೆ. ಬಳಿಕ ಚೆನ್ನೈಗೆ ಆಗಮಿಸಿದ್ದಾರೆ, ಇಲ್ಲಿ ಬಾಲಕನ ಸ್ನೇಹಿತನಿದ್ದ. ಆರಂಭದಲ್ಲಿ ಇವರಿಬ್ಬರೂ ಸುಳ್ಳು ಹೇಳಿದ್ದಾರೆ. ಬಳಿಕ ಪ್ರೀತಿಸುತ್ತಿರುವುದಾಗಿ ಹಾಗೂ ನಗರವನ್ನು ನೋಡಲು ಚೆನ್ನೈಗೆ ಬಂದಿರುವುದಾಗಿ ತಿಳಿಸಿದ್ದಾರೆ. ಬಾಲಕಿ ಕೂಡ ವಿಮಾನದಲ್ಲಿ ಹೋಗಲು ಬಯಸಿದ್ದರಿಂದ ವಿಮಾನದ ಮೂಲಕ ಚೆನ್ನೈಗೆ ಬಂದಿದ್ದಾರೆ.

    ಮೊಬೈಲ್ ಫೋನ್‍ಗಳಿಂದ ಮಕ್ಕಳ ಪೋಷಕರ ಆಧಾರ್ ಕಾರ್ಡ್ ವಿವರ ಪಡೆದೆವು. ನಂತರ ಅವರ ಪೋಷಕರನ್ನು ಸಂಪರ್ಕಿಸಿದೆವು. ಆಗ ಅವರು ತ್ರಿಪುರಾದಲ್ಲಿರುವ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ತ್ರಿಪುರಾ ಸಿಡಬ್ಲ್ಯೂಸಿ ಅಧಿಕಾರಿಗಳು ಸಹ ಈ ಕುರಿತು ಪರಿಶೀಲನೆ ನಡೆಸಿದ್ದು, ಈ ಇಬ್ಬರು ಮನೆಯಿಂದ ಕಾಣೆಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಇದರ ಆಧಾರದ ಮೇಲೆ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿ, ಬಾಲಕಿಯ ಸಂಬಂಧಿಕರ ನೆರವಿನಿಂದ ಚೆನ್ನೈನಿಂದ ತ್ರಿಪುರಾಗೆ ಕರೆ ತರುವ ವ್ಯವಸ್ಥೆ ಮಾಡಲಾಗಿದೆ. ಅವರು ಹಿಂದಿರುಗಿದ ನಂತರ ಮಕ್ಕಳು ಹಾಗೂ ಅವರ ಕುಟುಂಬಸ್ಥರೊಂದಿದೆ ಚರ್ಚೆ ನಡೆಸಿ ಸಲಹೆ ನೀಡುತ್ತೇವೆ. ಅವರ ಶಿಕ್ಷಣದತ್ತ ಗಮನಹರಿಸುವಂತೆ ತಿಳಿಸುತ್ತೇವೆ ಎಂದು ತ್ರಿಪುರಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಗೆಳತಿಯರ ಜೊತೆ ಗಲಾಟೆ – ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕರು

    ಗೆಳತಿಯರ ಜೊತೆ ಗಲಾಟೆ – ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕರು

    – ಬಾಲಕಿಯರ ವಿರುದ್ಧ ದೂರು ನೀಡಿದ ಹುಡುಗನ ತಂದೆ
    – ಮಾತನಾಡುವಾಗ ವಾಗ್ವಾದ ನಡೆದು ಘಟನೆ

    ಲಕ್ನೋ: ತಮ್ಮ ಸ್ನೇಹಿತೆಯರೊಂದಿಗೆ ಜಗಳವಾಗಿದ್ದಕ್ಕೆ ಕೋಪಗೊಂಡು ಇಬ್ಬರು ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮುವಾದ ರಾಣಿಪುರದಲ್ಲಿ ಘಟನೆ ನಡೆದಿದ್ದು, 11ನೇ ತರಗತಿ ಪ್ರವೇಶಕ್ಕಾಗಿ ತೆರಳಿದಾಗ ಬಾಲಕರು ಈ ರೀತಿ ಮಾಡಿಕೊಂಡಿದ್ದಾರೆ. ಇಬ್ಬರು ಹುಡುಗಿಯರು ರಾಣಿಪುರದವರಾಗಿದ್ದು, ಸಾವನ್ನಪ್ಪಿದ ಬಾಲಕರನ್ನು ವಿಶಾಲ್(17) ಗುಪ್ತಾ ಹಾಗೂ ಬಿತ್ತು(18) ಎಂದು ಗುರುತಿಸಲಾಗಿದೆ.

    ವಿಶಾಲ್ ಗುಪ್ತಾ ಖಂದೇರಾಯ್‍ಪುರ ಗ್ರಾಮದ ರಾಮಲೀಲಾ ಮೈದಾನದ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಿತ್ತು ಸಹ ಅದೇ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ನಂತರ ವಾರಾಣಸಿಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಸಾವನ್ನಪ್ಪಿದ್ದಾನೆ. ಇದೇ ವೇಳೆ ವಿಶಾಲ್ ತಂದೆ ರಾಣಿಪುರ ಪೊಲೀಸ್ ಠಾಣೆಗೆ ತೆರಳಿ ಇಬ್ಬರು ಹುಡುಗಿಯರ ವಿರುದ್ಧ ದೂರು ನೀಡಿದ್ದಾರೆ.

    ವಿಶಾಲ್ ನಗ್ರಾ ಪ್ರದೇಶದ ಲಖಿಸರಿಯಾ ಗ್ರಾಮದವನಾಗಿದ್ದು, ಬಿತ್ತು ಸಿಕಂದರ್‍ಪುರದ ಮುದಿಯಾರ್‍ಪುರ ಗ್ರಾಮದವನಾಗಿದ್ದಾನೆ. 11ನೇ ತರಗತಿಗೆ ಪ್ರವೇಶಕ್ಕಾಗಿ ಇಬ್ಬರೂ ಮನೆಯಿಂದ ಹೊರಟಿದ್ದಾರೆ. ನಂತರ ಇಬ್ಬರೂ ತಮ್ಮ ಸ್ನೇಹಿತೆಯರಿಗೆ ಕರೆ ಮಾಡಿದ್ದಾರೆ. ಅಲ್ಲದೆ ಅವರನ್ನು ಭೇಟಿಯಾಗಲು ಊರಿಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಹುಡುಗಿಯರು ರಾಮಲೀಲಾ ಮೈದಾನದ ಬಳಿ ಹುಡುಗರನ್ನು ಭೇಟಿಯಾಗಿದ್ದು, ನಂತರ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರೂ ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಹಳ್ಳದಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆ

    ಹಳ್ಳದಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆ

    ಚಿತ್ರದುರ್ಗ: ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನರಸೀಪುರ ಗ್ರಾಮದ ಹಿರೇಹಳ್ಳದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ ಮೀನು ಹಿಡಿಯಲು ತೆರಳಿದ್ದ, ದೇವಪುರ ಗ್ರಾಮದ ಜಯಂತ್ (13) ಹಾಗು ಗೌನಹಳ್ಳಿಯ ಪ್ರಜ್ವಲ್ (12) ಸಂಜೆಯ ಬಳಿಕ ನಾಪತ್ತೆಯಾಗಿದ್ದಾರೆ. ಹೀಗಾಗಿ ನಾಪತ್ತೆಯಾದ ಬಾಲಕರಿಗಾಗಿ ತಡರಾತ್ರಿಯವರೆಗೆ ಶೋಧ ಕಾರ್ಯ ಚುರುಕಾಗಿ ನಡೆದಿದ್ದು ಘಟನಾ ಸ್ಥಳಕ್ಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಭೇಟಿ ನೀಡಿದ್ದರು.

    ಶಾಸಕರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. ಆದರೆ ಕತ್ತಲಾದ ಕಾರಣ ಕಾರ್ಯಚರಣೆಯನ್ನು ನಿಲ್ಲಿಸಲಾಗಿತ್ತು. ಆದರೆ ಮತ್ತೆ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಬಾಲಕರ ಪತ್ತೆಗಾಗಿ, ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸರು ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳೆಲ್ಲರೂ ಒಟ್ಟಾಗಿ ಹಳ್ಳದಲ್ಲಿ ಸರ್ಚ್ ಹುಡುಕುತ್ತಿದ್ದಾರೆ. ಈ ಪ್ರಕರಣ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.