Tag: ಬಾರ್‌ & ರೆಸ್ಟೋರೆಂಟ್‌

  • ‘ಲೋಕ’ ಚುನಾವಣೆ; ಬೆಂಗಳೂರಲ್ಲಿ 1 ಸಾವಿರ ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್

    ‘ಲೋಕ’ ಚುನಾವಣೆ; ಬೆಂಗಳೂರಲ್ಲಿ 1 ಸಾವಿರ ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್

    – ಅವಧಿ ಮೀರಿ, ದಾಖಲೆ ಇಲ್ಲದೇ ಬಾರ್ ಓಪನ್ ಮಾಡಿದ್ರೆ ಕ್ರಮದ ಎಚ್ಚರಿಕೆ

    ಬೆಂಗಳೂರು: ಲೋಕಸಭಾ ಚುನಾವಣೆ ಕಾವು ರಂಗೇರುತ್ತಿದೆ. ಮತದಾನಕ್ಕೆ ಕೆಲವೇ ದಿನ ಬಾಕಿ ಇದೆ. ಈ ಮಧ್ಯೆ ಬೆಂಗಳೂರು ಚುನಾವಣಾಧಿಕಾರಿಗಳು ಬಾರ್ & ರೆಸ್ಟೋರೆಂಟ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

    ಅವಧಿ ಮೀರಿ ಬಾರ್ ಓಪನ್ ಮಾಡಿರುವ ಒಂದು ಸಾವಿರಕ್ಕೂ ಹೆಚ್ಚು ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಿದ್ದಾರೆ. ದಾಖಲೆ ಇಲ್ಲದೇ ಮದ್ಯ ಮಾರಾಟ ಮಾಡ್ತಾ ಇದ್ದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

    ಚುನಾವಣಾ ಹಿನ್ನೆಲೆ ಬಾರ್ & ರೆಸ್ಟೋರೆಂಟ್‌ಗಳಿಗೆ ಚುನಾವಣಾ ಆಯೋಗ ಕೆಲವೊಂದು ನಿಯಮ ಪಾಲನೆಗೆ ಸೂಚಿಸಿದೆ. ಅದನ್ನ ಜಿಲ್ಲಾ ಚುನಾವಣಾಧಿಕಾರಿಗಳು ಮಾನಿಟರ್ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಬೆಂಗಳೂರು ನಗರದಲ್ಲಿ ಬಾರ್ & ರೆಸ್ಟೋರೆಂಟ್‌ಗಳು, ಎಂಆರ್‌ಪಿಗಳು ನಿಯಮ ಉಲ್ಲಂಘನೆ ಮಾಡುತ್ತಿವೆ. ಸಮಯ ಮುಗಿದಿದ್ದರೂ ಬಾರ್ ಓಪನ್ ಮಾಡಿ ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆ. ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಒಂದು ಸಾವಿರಕ್ಕೆ ಹೆಚ್ಚು ಪ್ರಕರಣಗಳನ್ನ ದಾಖಲಿಸಿಕೊಂಡು ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆಯಂತೆ.

    ಎಂಆರ್‌ಪಿ ಶಾಪ್‌ಗಳು ಕೂಡ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಕ್ರಮವಾಗಿ ಮದ್ಯ ಸಾಗಾಟ ಮಾಡುವುದು ಕಂಡು ಬಂದಿದ್ದು, ಮದ್ಯ ಜಪ್ತಿ ಮಾಡಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿ ಕೆಲವೊಂದು ಬಾರ್‌ಗಳನ್ನ ಮುಚ್ಚಿಸುವಂತಹ ಕೆಲಸಕ್ಕೆ ಮುಂದಾಗಲಿದ್ದಾರೆ.

    ಬೆಂಗಳೂರಿನಲ್ಲಿ ವಿವಿಧ ಚೆಕ್‌ಪೋಸ್ಟ್ಗಳಲ್ಲಿ 2.98 ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದು. ನಿಯಮ ಉಲ್ಲಂಘಿಸಿರುವ ಬಾರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

  • 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್‌ ಮಾರಾಟ ಮಾಡುವಂತಿಲ್ಲ: ದಿನೇಶ್‌ ಗುಂಡೂರಾವ್‌

    21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್‌ ಮಾರಾಟ ಮಾಡುವಂತಿಲ್ಲ: ದಿನೇಶ್‌ ಗುಂಡೂರಾವ್‌

    – ಅನಧಿಕೃತ ಹುಕ್ಕಾಬಾರ್‌ ನಡೆಸಿದ್ರೆ 1 ಲಕ್ಷ ರೂ. ವರೆಗೆ ದಂಡ

    ಬೆಂಗಳೂರು: ವಿಧಾನಸಭೆಯಲ್ಲಿಂದು (Assembly) ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು.

    ಈ ಕುರಿತು ಸದನದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundurao), ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್‌ ಮಾರಾಟ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ಈ ಹಿಂದೆ ಸಿಗರೇಟು ಮಾರಾಟ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಪಡಿಸಲಾಗಿತ್ತು, ಈಗ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.

    ಅಲ್ಲದೇ ಶಾಲೆಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ (Cigarette Sale) ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುವರಿಗೆ ದಂಡದ ಪ್ರಮಾಣ 100 ರೂ. ನಿಂದ 1000 ರೂ. ಗೆ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ನಿಮ್ಮ ನಿಲುವು ಸ್ವಾಗತಾರ್ಹವಾಗಿದೆ. ಆದ್ರೆ ಈ ಕಾನೂನು ಇನ್ನೂ 5 ವರ್ಷ ಹೀಗೇ ಇರುತ್ತೆ. ಆದ್ದರಿಂದ ದಂಡದ ಮೊತ್ತವನ್ನು 10,000 ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಯೋಚನೆ ಮಾಡಿ ಹೇಳ್ತೀನಿ: ಡಾ.ಸಿ.ಎನ್.ಮಂಜುನಾಥ್

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಸಿಗರೇಟ್‌ ಮಾಡುವವರು ಅದೊಂದನ್ನೇ ಮಾರಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿರುತ್ತಾರೆ, ದಿನಸಿಯನ್ನೂ ಮಾರಾಟ ಮಾಡ್ತಿರ್ತಾರೆ. 10 ಸಾವಿರ ದಂಡ ಹಾಕಿದ್ರೆ ಸಮಸ್ಯೆಯಾಗುತ್ತೆ. ಆದ್ದರಿಂದ 1 ಸಾವಿರಕ್ಕೆ ಮಿತಿಗೊಳಿಸಿದ್ದೇವೆ. ಹುಕ್ಕಾ ಬಾರ್‌ ನಡೆಸೋರು ಶ್ರೀಮಂತರಿರ್ತಾರೆ. ಆದ್ದರಿಂದ ಅವರಿಗೆ 50,000 ರೂ. ನಿಂದ 1 ಲಕ್ಷ ರೂ.ವೆರೆಗೆ ದಂಡ ವಿಧಿಸುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಮಂತ್ರ ಮಾಂಗಲ್ಯ ಮೂಲಕ ಮದುವೆ; ಅನಾಥ ಯುವತಿ ಬಾಳಿಗೆ ದಾಂಪತ್ಯದ ಬೆಳಕು!

    ಹುಕ್ಕಾ ಬಾರ್‌ಗೆ ನಿಷೇಧ:
    ಅಲ್ಲದೇ ಯಾವುದೇ ಬಾರ್‌ & ರೆಸ್ಟೋರೆಂಟ್‌ ಹಾಗೂ ಇತರ ಕಡೆಗಳಲ್ಲಿ ಹುಕ್ಕಾ ಬಾರ್‌ಗೆ ನಿಷೇಧ ಹೇರಿದ್ದೇವೆ. ಹುಕ್ಕಾ ಬಾರ್ ಅನಧಿಕೃತವಾಗಿ‌ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು. ಇದನ್ನೂ ಓದಿ: 4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ