Tag: ಬಾರ್ ಮಾಲೀಕ

  • ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

    ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

    ಲಕ್ನೋ: ಬಿಲ್ ಪಾವತಿಸಲು ಹೇಳಿದ್ದಕ್ಕೆ ಬಾರ್ ಮಾಲೀಕನ ಕೈ ಹೆಬ್ಬೆರಳು ಕಚ್ಚಿದ ವಿಚಿತ್ರ ಘಟನೆಯೊಂದು ಮುಜಫ್ಪರ್ ನಗರದಲ್ಲಿ ನಡೆದಿದೆ.

    ಒಂದು ದಿನ ಸುನೀಲ್ ಕುಮಾರ್ ತನ್ನ ಗೆಳಯನೊಂದಿಗೆ ಬಾರ್‍ಗೆ ಹೋಗಿದ್ದಾನೆ. ಕಂಠಪೂರ್ತಿ ಕುಡಿದಿದ್ದಾರೆ. ಬಿಲ್ ಪಾವತಿ ಮಾಡಲು ಮಾಲೀಕ ತಿಳಿಸಿದಾಗ ಖ್ಯಾತೆ ತೆಗೆದಿದ್ದಾರೆ. ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಬಾರ್ ಮಾಲೀಕ ಅಶೋಕ್ ಕುಮಾರ್ ಜೊತೆಗೆ ಜಗಳ ಆರಂಭಿಸಿದ್ದಾನೆ. ಈ ಜಗಳ ವಿಕೋಪಕ್ಕೆ ಹೋಗಿದೆ.  ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

    ಸಿಟ್ಟಿಗೆದ್ದ ಸುನೀಲ್ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ್ದಾನೆ. ಸುನೀಲ್ ಕುಮಾರ್ ಹಾಗೂ ಅವನ ಗೆಳೆಯನನ್ನು ಬಂಧಿಸಲಾಗಿದೆ. ಬಾರ್ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತನಿಖೆ ಮಾಡುತ್ತೇವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

  • ಮದ್ಯ ಕೊಡದ್ದಕ್ಕೆ ಕಲ್ಲಿನಿಂದ ಬಾರ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

    ಮದ್ಯ ಕೊಡದ್ದಕ್ಕೆ ಕಲ್ಲಿನಿಂದ ಬಾರ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

    ರಾಯಚೂರು: ಕುಡಿಯಲು ಮದ್ಯ ಕೊಡದಿದ್ದಕ್ಕೆ ಮದ್ಯವ್ಯಸನಿಗಳು ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.

    ಜಾಲಹಳ್ಳಿ ರಸ್ತೆಯಲ್ಲಿರುವ ಕ್ಷೀರಸಾಗರ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ರವೀಂದ್ರ ಅಕ್ಕರಿಕೆ ಮೇಲೆ ಮೂವರು ಮದ್ಯವ್ಯಸನಿಗಳು ಮದ್ಯ ಕೊಡದ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ದೇವದುರ್ಗದ ಅಂಜಳ ಗ್ರಾಮದ ಮೂವರು ಮದ್ಯವ್ಯಸನಿಗಳು, ಶುಕ್ರವಾರ ಸಂಜೆ ಬಾರ್ ಮುಂಭಾಗದಲ್ಲಿ ಮದ್ಯ ನೀಡುವಂತೆ ಪೀಡಿಸಿದ್ದಾರೆ. ಆದರೆ ಬಾರ್ ಪರವಾನಗಿ ಸಿಎಲ್-7 ಹೊಂದಿದ್ದು, ಸರ್ಕಾರ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿಲ್ಲ. ಹೀಗಾಗಿ ಬಾರ್ ಅಂಗಡಿ ತೆರೆಯುದಿಲ್ಲ ಎಂದು ಬಾರ್ ಮುಂದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಬಾರ್ ಮಾಲೀಕ ಹೇಳಿದ್ದಾರೆ.

    ಕಂಠ ಪೂರ್ತಿ ಕುಡಿದು ಬಂದ ಮೂವರು ವ್ಯಸನಿಗಳು, ರವೀಂದ್ರ ಜೊತೆ ಮದ್ಯ ನೀಡುವಂತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮದ್ಯ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಅಬಕಾರಿ ಇಲಾಖೆ ಬಾರ್‌ಗೆ ಸೀಲ್ ಹಾಕಿದೆ. ಹೀಗಾಗಿ ಮದ್ಯ ಮಾರಾಟ ಮಾಡಲು ಬರುವುದಿಲ್ಲ ಎಂದು ಮಾಲೀಕ ರವೀಂದ್ರ ಅವರಿಗೆ ಮನವರಿಕೆ ಮಾಡಿದ್ದಾರೆ. ಆದರೂ ಮಾತು ಕೇಳದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

    ಮಾಲೀಕ ರವೀಂದ್ರಗೆ ಕಲ್ಲಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಯಾ ಡೇ ವಶಿಷ್ಟ ಮರ್ಡರ್- ಕಿಂಗ್ ಪಿನ್ ಸೈಫ್ ಉಡುಪಿಯಲ್ಲಿ ಅರೆಸ್ಟ್

    ಮಾಯಾ ಡೇ ವಶಿಷ್ಟ ಮರ್ಡರ್- ಕಿಂಗ್ ಪಿನ್ ಸೈಫ್ ಉಡುಪಿಯಲ್ಲಿ ಅರೆಸ್ಟ್

    ಉಡುಪಿ: ಮಾಯಾ ಡೇ ಡಾನ್ಸ್ ಬಾರ್ ಮಾಲೀಕ ವಶಿಷ್ಟ ಸತ್ಯನಾರಾಯಣ ಉಡುಪಿಯಲ್ಲಿ ಮರ್ಡರಾಗಿ 7 ದಿನಗಳೇ ಕಳೆದಿದೆ. ಕೊಲೆಯ ಸಂಚು ರೂಪಿಸಿದ್ದ ಕಿಂಗ್ ಪಿನ್ ಸೈಫ್ ಅಂದರ್ ಆಗಿದ್ದಾನೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಉತ್ತರ ಪ್ರದೇಶ ಮೂಲದ ನವೀ ಮುಂಬೈ ಕೋಟಿ ಕುಳ, ಲೇಡೀಸ್ ಡಾನ್ಸ್ ಬಾರ್ ಓನರ್ ವಶಿಷ್ಟ ಯಾದವ್ ಕೊಲೆಯ ಸತ್ಯ ಕೊನೆಗೂ ಬಯಲಾಗಿದೆ. ನಾಲ್ಕು ಮಂದಿಯ ಬಂಧನವಾದಾಗ, ಈ ಚಿಲ್ಟೂ ಪುಲ್ಟೂಗಳಿಂದ ಇದು ಅಸಾಧ್ಯ ಎಂದು ಫೀಲ್ಡಿನಲ್ಲಿ ಚರ್ಚೆಯಾಗಿತ್ತು. ಕೊಲೆಯ ಸಂಚು ಮಾಡಿದ ಉಡುಪಿಯ ನೊಟೋರಿಯಸ್ ರೌಡಿ ಸೈಫುದ್ಧೀನ್ ಅಲಿಯಾಸ್ AKMS ಕಂಪನಿಯ ಸೈಫ್ ಪೊಲೀಸರ ವಶವಾಗಿದ್ದಾನೆ.

    1996ರಲ್ಲಿ ನಡೆದ ಆತ್ರಾಡಿ ಪುಂಡಲೀಕ ಕೊಲೆ ಪ್ರಕರಣ, ಗಲಾಟೆ, ಹಲ್ಲೆ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದಾತ. 2016 ರಲ್ಲಿ ನಡೆದ ತಸ್ಲೀಮ್ ಶೇಖ್ ಹತ್ಯೆಯಲ್ಲೂ ಇವನ ಕೈವಾಡ ಇತ್ತು. ಂಏಒS ಹೆಸರಿನ ಬಸ್ ಮತ್ತು ಕ್ರಿಕೆಟ್ ಟೀಮ್ ಕಟ್ಟಿಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಸೈಫ್ ಗಲಾಟೆಗೆ ತನ್ನದೇ ಒಂದು ಗ್ಯಾಂಗ್ ಕಟ್ಟಿಕೊಂಡಿದ್ದ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಖಾಯಾಂ ರೌಡಿಯಾಗಿರುವ ಸೈಫ್ ಬಸ್, ಹೊಟೇಲ್ ಉದ್ಯಮ ದ ಜೊತೆಗೆ ಹೊಡೆದಾಟ, ಕೊಲೆ ಸಂಚುಗಳು ಕೂಡ ಇವನ ದಿನಚರಿಯ ಭಾಗವಾಗಿತ್ತು. ಇಂತಹ ಖತರ್ನಾಕ್ ಸೈಫ್ ಯಾದವ್ ಹತ್ಯೆಯ ಸಂಚುಕೋರ ಅನ್ನೋದು ಬಯಲಾಗಿದೆ. ಇದನ್ನೂ ಓದಿ: ಮಾಯಾ ಬಾರ್ ಮಾಲೀಕ ಯಾದವ್ ಕೊಲೆ- ಬಾರ್ ಸಪ್ಲೈಯರ್ ಮಿಶ್ರಾ ಅರೆಸ್ಟ್

    ಮಾಧ್ಯಮಗಳ ಜೊತೆ ಮಾತನಾಡಿದ ಎಸ್ ಪಿ ವಿಷ್ಣುವರ್ಧನ್, ಪ್ರಕರಣ ಜಟಿಲ ಇದೆ. ಸುಮಿತ್ ಮಿಶ್ರಾ ಪ್ರಮುಖ ಆರೋಪಿಯಾದ್ರೂ ಆತ ಡೆಲ್ಲಿ ಮೂಲದವ. ಉಡುಪಿಯಲ್ಲಿ ಕೃತ್ಯ ಎಸಗಲು ಸಾಕಷ್ಟು ಸಿದ್ಧತೆ ಇರುವ ಸಾಧ್ಯತೆ ಇದೆ. ಸೈಫುದ್ದೀನ್ ಬಂಧನವಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವರು ಶಾಮೀಲಾಗಿರುವ ಸಾಧ್ಯತೆ ಇದೆ. ಎಲ್ಲರ ಬಂಧನ ನಂತರ ಪೂರ್ಣ ಚಿತ್ರಣ ಸಿಗಲಿದೆ ಎಂದರು. ಇದನ್ನೂ ಓದಿ: ಮುಂಬೈ ಲೇಡೀಸ್ ಡಾನ್ಸ್ ಬಾರ್ ಮಾಲೀಕ ಉಡುಪಿಯಲ್ಲಿ ಕೊಲೆ

    ವಶಿಷ್ಟ ಯಾದವ್ ಸತ್ತಾಗಲೇ ಆತನ ಪತ್ನಿ ರೀತು, ಸೈಫ್ ನ ಮೇಲೆ ಸಂಶಯ ವ್ಯಕ್ತಪಡಿಸಿದ್ದಳು. ತನ್ನ ಪತಿ ಸೈಫ್ ಮತ್ತು ಅಕ್ರಮ್ ಜೊತೆಗೆ ಇರುವ ವಿಚಾರ ಈಕೆಗೆ ಗೊತ್ತಿತ್ತು. ಸೈಫ್ ವಶಿಷ್ಟನ ಮಾಯಾ ಬಾರ್ ಉದ್ಯಮದಲ್ಲೂ ಹಣ ಹೂಡಿದ್ದ. ವಶಿಷ್ಟ ಯಾದವ್ ನಿಂದ ಏಟು ತಿಂದಿದ್ದ ಸುಮಿತ್ ಮಿಶ್ರಾ ಸೈಫ್ ಜೊತೆ ಶಾಮೀಲಾಗಿ ಕೊಲೆ ಮಾಡಿದ್ದಾನೆ ಎಂಬೂದು ಸದ್ಯ ಹೊರಬಂದಿರುವ ಮಾಹಿತಿ. ಘಟನೆಯಲ್ಲಿ ಮತ್ತಷ್ಟು ವಿಚಾರ ಹುದುಗಿರುವ ಸಾಧ್ಯತೆ ಇದ್ದು, ಪೊಲೀಸ್ ತನಿಖೆಯಲ್ಲಿ ಹೊರಬರಬೇಕಾಗಿದೆ.

  • ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಬಾರ್ ಮಾಲೀಕನಿಗೆ ಚಾಕು ಇರಿತ!

    ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಬಾರ್ ಮಾಲೀಕನಿಗೆ ಚಾಕು ಇರಿತ!

    ಬೆಂಗಳೂರು: ಕೊಟ್ಟ ಹಣ ವಾಪಸ್ಸು ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಬಾರ್ ಮಾಲೀಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ನಡೆದಿದೆ.

    ಇಲ್ಲಿನ ರಾಜ್ ಕುಮಾರ್ ಸಮಾಧಿ ಬಳಿಯ ಕಾವೇರಿ ಬಾರ್ ಓನರ್ ಲಕ್ಕಣ್ಣ ಚಾಕು ಇರಿತಕ್ಕೆ ಒಳಗಾದವರು. ಎರಡು ವರ್ಷಗಳ ಹಿಂದೆ ಬಾರ್ ಮಾಲೀಕ ಲಕ್ಕಣ್ಣ, ನವೀನ್ ಎಂಬವರಿಗೆ 7 ಲಕ್ಷ ರೂ. ಹಣ ನೀಡಿದ್ರು. ಆದ್ರೆ ಇಲ್ಲಿಯವರೆಗೆ ನವೀನ್ ಹಣ ವಾಪಸ್ಸು ಕೊಟ್ಟಿರಲಿಲ್ಲ.

    ಇದೇ ವಿಚಾರವಾಗಿ ಗುರುವಾರ ರಾತ್ರಿ ಕಾವೇರಿ ಬಾರ್ ಬಳಿ ಇಬ್ಬರ ಮಧ್ಯೆ ವಾಗ್ವಾದ ನಡೆದು ಈ ವೇಳೆ ನವೀನ್, ಲಕ್ಕಣ್ಣಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

    ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.