Tag: ಬಾರ್ ಆ್ಯಂಡ್ ರೆಸ್ಟೋರೆಂಟ್

  • ಜಾಗವಿಲ್ಲದೆ ಸ್ಮಶಾನವನ್ನೇ ಬಾರ್ ಮಾಡ್ಕೊಂಡು ಗುಂಡೈಕ್ಳು

    ಜಾಗವಿಲ್ಲದೆ ಸ್ಮಶಾನವನ್ನೇ ಬಾರ್ ಮಾಡ್ಕೊಂಡು ಗುಂಡೈಕ್ಳು

    ಮೈಸೂರು: ಕೊರೊನಾ ಲಾಕ್‍ಡೌನ್ ನಿಯಾಮವಳಿ ಹಿನ್ನೆಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕುಳಿತು ಮದ್ಯ ಸೇವಿಸುವಂತಿಲ್ಲ. ಹೀಗಾಗಿ ಕುಡಿಯಲು ಜಾಗ ಸಿಗದೆ ಮದ್ಯ ಪ್ರಿಯರು ಸ್ಮಶಾನದಲ್ಲಿ ಕುಳಿತು ಕುಡಿಯೋಕೆ ಆರಂಭಿಸಿದ್ದಾರೆ.

    ಸ್ಮಶಾನದಲ್ಲಿ ಎಣ್ಣೆ ಪಾರ್ಟಿಗಳು ನಡೆಯುತ್ತಿವೆ. ಮೈಸೂರಿನ ಪ್ರತಿಷ್ಠಿತ ಗೋಕುಲಂ ಬಡಾವಣೆಯಲ್ಲಿರುವ ಹಿಂದೂ ರುದ್ರಭೂಮಿಯೊಳಗೆ ಗುಂಡು ಪಾರ್ಟಿ ನಡೆದಿವೆ. ರಾತ್ರಿ ಆದ್ರೆ ಈ ಸ್ಮಶಾನದಲ್ಲಿ ಕುಡುಕರದ್ದೇ ಹಾವಳಿ ಹೆಚ್ಚಾಗಿದೆ. ಸ್ಮಶಾನದ ತುಂಬ ಎಣ್ಣೆ ಬಾಟಲಿಗಳು ಪತ್ತೆಯಾಗಿದ್ದು ಬೆಂಚ್ ಗಳು ಮಂಟಪದಲ್ಲಿ ಬೀರ್ ಬಾಟಲ್ ಗಳು ಎಣ್ಣೆ ಪ್ಯಾಕೆಟ್ ಗಳು ಬಿದ್ದಿವೆ.

    ಮೈಸೂರು ಮಹಾನಗರ ಪಾಲಿಕೆ ವತಿಯಿಂದ ರುದ್ರಭೂಮಿ ನಿರ್ವಹಣೆ ಆಗುತ್ತಿದೆ. ಪುಂಡುಪೋಕರಿಗಳ ಅನೈತಿಕ ಚಟುವಟಿಕೆಗೆ ಗೋಕುಲಂ ಸ್ಮಶಾನ ಬಳಕೆ ಆಗುತ್ತಿದ್ದರು ಮಹಾನಗರ ಪಾಲಿಕೆ ಸಿಬ್ಬಂದಿ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.