Tag: ಬಾರ್ ಅಂಡ್ ರೆಸ್ಟೋರೆಂಟ್

  • ಕೆಲಸ ಸಿಕ್ಕಿದೆ, ಪಾರ್ಟಿ ಕೊಡಿಸ್ತೀನಿ ಬಾ ಅಂತ ಕರೆದು ಸಾಫ್ಟ್‌ವೇರ್ ಎಂಜಿನಿಯರ್‌ ಯುವತಿ ಮೇಲೆ ರೇಪ್‌!

    ಹೈದರಾಬಾದ್‌: ಕೆಲಸ ಸಿಕ್ಕಿದಕ್ಕೆ ಪಾರ್ಟಿ ಕೊಡಿಸುತ್ತೇನೆ ಬಾ ಅಂತ ಕರೆದು 24 ವರ್ಷದ ಯುವತಿ ಮೇಲೆ ಬಾಲ್ಯ ಸ್ನೇಹಿತನೇ (Childhood friend) ಅತ್ಯಾಚಾರ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಸಂತ್ರಸ್ತ ಮಹಿಳೆಯ (Techie Woman) ಬಾಲ್ಯ ಸ್ನೇಹಿತ ಸೇರಿ ಇಬ್ಬರು ಕಾಮುಕರು ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ಇತ್ತೀಚೆಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕೇರಳ ಸಿಎಂ ಜೊತೆ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತುಕತೆ; ಅಗತ್ಯ ನೆರವು ನೀಡುವುದಾಗಿ ಭರವಸೆ

    ಕೃತ್ಯ ನೆಡೆದಿದ್ದು ಹೇಗೆ?
    ಸಂತ್ರಸ್ತ ಯುವತಿ ತನ್ನ ಬಾಲ್ಯ ಸ್ನೇಹಿತನಿಗೆ ಹೊಸ ಕೆಲಸ ಸಿಕ್ಕ ಖುಷಿಗೆ ಪಾರ್ಟಿ ಕೇಳಿದ್ದಳು. ಅದರಂತೆ ಪಾರ್ಟಿ ಕೊಡಿಸುವುದಾಗಿ ಹೇಳಿದ್ದ ಸ್ನೇಹಿತ ವನಸ್ಥಲಿಪುರಂನಲ್ಲಿರುವ ರೆಸ್ಟೋರೆಂಟ್-ಕಮ್-ಬಾರ್‌ಗೆ ಕರೆದುಕೊಂಡು ಹೋಗಿದ್ದ. ಇದೇ ವೇಳೆ ತನ್ನ ಸ್ನೇಹಿತನನ್ನೂ ಕರೆದುಕೊಂಡು ಬಂದಿದ್ದ.

    ರೆಸ್ಟೋರೆಂಟ್‌ನಲ್ಲಿ ಯುವತಿಗೆ ಮದ್ಯ ಕುಡಿಸಿ, ತಾವೂ ಕುಡಿದಿದ್ದಾರೆ. ನಂತರ ರೆಸ್ಟೋರೆಂಟ್‌ ನಲ್ಲಿದ್ದ ಕೋಣೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸ್ನೇಹಿತ ಅತ್ಯಾಚಾರ ಎಸಗಿದ ಬಳಿಕ ಮತ್ತೊಬ್ಬ ಸಹಪಾಠಿಯೂ ಆಕೆಯನ್ನ ರೇಪ್‌ ಮಾಡಿ, ಇಬ್ಬರೂ ಎಸ್ಕೇಪ್‌ ಆಗಿದ್ದಾರೆ. ಇದನ್ನೂ ಓದಿ: ಆನೇಕಲ್‌ನಲ್ಲಿ ತುಪಾಕಿ ಸದ್ದು – ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್‌ ಪುರಸಭಾ ಸದಸ್ಯ ಹಂತಕನ ಬಂಧನ

    ಘಟನೆಯಿಂದ ಕಂಗಾಲಾಗಿದ್ದ ಸಂತ್ರಸ್ತೆ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ ನಂತರ ಘಟನೆ ಬೆಳಿಕಿಗೆ ಬಂದಿದೆ. ಬಳಿಕ ವನಸ್ಥಲಿಪುರಂ ಪೊಲೀಸ್‌ ಠಾಣೆಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕೇಸ್‌ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದೆ. ಇದನ್ನೂ ಓದಿ: Wayanad Landslide| ಪಾಪುವನ್ನು ಹಿಡಿಯುವಷ್ಟರಲ್ಲಿ ಗೋಡೆ ಕುಸಿದು ಬಿತ್ತು: ಕಣ್ಣೀರಿಟ್ಟ ತಾಯಿ

  • ಹಣ ಬಿಟ್ಟು 4 ಲಕ್ಷ ರೂ. ಮೌಲ್ಯದ ಎಣ್ಣೆ ಹೊತ್ತೊಯ್ದ ಮದ್ಯ ಪ್ರಿಯರು

    ಹಣ ಬಿಟ್ಟು 4 ಲಕ್ಷ ರೂ. ಮೌಲ್ಯದ ಎಣ್ಣೆ ಹೊತ್ತೊಯ್ದ ಮದ್ಯ ಪ್ರಿಯರು

    ಕೋಲಾರ: ಲಾಕ್‍ಡೌನ್‍ನಿಂದಾಗಿ ಎಣ್ಣೆ ಸಿಗದೆ ಕಂಗೆಟ್ಟಿರುವ ಮದ್ಯಪ್ರಿಯರು ಬಾರ್ ಅಂಡ್ ರೆಸ್ಟೋರೆಂಟ್‍ನ ಶೆಟರ್ ಮುರಿದು ಸುಮಾರು 4 ಲಕ್ಷ ರೂ. ಮೌಲ್ಯದ ಮದ್ಯ ದೋಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.

    ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿಯ ವೀರಭದ್ರೇಗೌಡ ಎಂಬವರಿಗೆ ಸೇರಿದ ಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಶನಿವಾರ ರಾತ್ರಿ ಕನ್ನ ಹಾಕಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್ ಶೆಟರ್ ಮುರಿದು ಒಳ ನುಗ್ಗಿರುವ ಕಳ್ಳರು ಬಾರ್‍ನಲ್ಲಿದ್ದ ಹಣವನ್ನ ಬಿಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನ ದೋಚಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯ ಸಿಗದೆ ಕಂಗೆಟ್ಟ ಮದ್ಯಪ್ರಿಯರು ಕನ್ನ ಹಾಕಿದ್ದಾರಾ ಅಥವಾ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರೆ ಇಂತಹ ಹೀನ ಕೃತ್ಯವೆಸಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶ್ರೀನಿವಾಸಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮದ್ಯ ಸಿಗದೆ ಇರುವುದಕ್ಕೆ ರಾಜ್ಯದಲ್ಲಿ 10ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ರಾಜ್ಯದ ವಿವಿಧೆಡೆ ಮದ್ಯದ ಅಂಗಡಿಗೆ ಕನ್ನ ಹಾಕಿದ ಪ್ರಕರಣಗಳು ವರದಿಯಾಗಿವೆ.

  • ಹೆಸರಿಗೆ ಮಾತ್ರ ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್-ಸಿಸಿಬಿ ದಾಳಿಯಲ್ಲಿ 28 ಯುವತಿಯರ ರಕ್ಷಣೆ

    ಹೆಸರಿಗೆ ಮಾತ್ರ ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್-ಸಿಸಿಬಿ ದಾಳಿಯಲ್ಲಿ 28 ಯುವತಿಯರ ರಕ್ಷಣೆ

    ಬೆಂಗಳೂರು: ಫ್ಯಾಮಿಲಿ ಬಾರ್ ಅಂಡ್ ರೆಸ್ಟೋರೆಂಟ್ ಎಂದು ಹೆಸರಿಟ್ಟುಕೊಂಡು ಅನಾಚಾರವನ್ನೇ ಬಂಡವಾಳ ಮಾಡಿಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ ನಡೆಸಿದೆ.

    ರಾಜಧಾನಿಯ ಹೃದಯ ಭಾಗ ಮೆಜೆಸ್ಟಿಕ್‍ನಲ್ಲಿರುವ ಪೋರ್ಟ್ ಆಫ್ ಪೆವಿಲಿಯನ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಭಾನುವಾರ ತಡರಾತ್ರಿ ಸಿಸಿಬಿ ಎಸಿಪಿ ಸುಬ್ರಮಣ್ಯ ಅಂಡ್ ಟೀಂ ದಿಢೀರ್ ದಾಳಿ ಮಾಡಿದ್ದಾರೆ. ಕಲರ್ ದುನಿಯಾದ ಆಸೆಗೆ ಬಿದ್ದು ಬಾರ್ ಮಾಲೀಕರ ಅಧೀನದಲ್ಲಿದ್ದ ಬೇರೆ ರಾಜ್ಯದ 28 ಯುವತಿಯರನ್ನ ರಕ್ಷಣೆ ಮಾಡಿದ್ದಾರೆ.

    ಪೋರ್ಟ್ ಆಫ್ ಪೆವಿಲಿಯನ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಡಿಸ್ಕೋಥೆಕ್ ಪರವಾನಗಿಯನ್ನು ಪಡೆದುಕೊಂಡಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿರುವ ಯುವತಿಯರನ್ನು ಗಿರಾಕಿಗಳ ಜೊತೆ ಕಪಲ್‍ಗಳ ರೀತಿಯಲ್ಲಿ ಕಳುಹಿಸಿಕೊಡುತ್ತಿದ್ದರು. ಯುವತಿಯರ ಬಳಿ ಗಿರಾಕಿಗಳ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಿಸುತ್ತಿದ್ದರು.

    ಭಾನುವಾರ ರಾತ್ರಿ ವೀಕೆಂಡ್ ಆಗಿರುವ ಕಾರಣ ಸಾಕಷ್ಟು ಯುವತಿಯರನ್ನು ಇಟ್ಟುಕೊಂಡು ಅಶ್ಲೀಲ ನೃತ್ಯ ಮಾಡಿಸುವಾಗ ಸಿಸಿಬಿ ದಾಳಿ ಮಾಡಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಮ್ಯಾನೇಜರ್ ಸುದೇಶ್ ಸೇರಿ ಒಟ್ಟು 80 ಮಂದಿಯನ್ನು ಬಂಧಿಸಿದ್ದಾರೆ. ಬಾರ್ ಮಾಲೀಕನ ಬಗ್ಗೆ ಈಗಾಗೇ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ ಬಾರ್ ಮಾಲೀಕರನ್ನು ವಶಕ್ಕೆ ಪಡೆದು ತನಿಖೆ ಮಾಡುವ ಸಾಧ್ಯತೆಗಳಿದೆ.

    ಸದ್ಯ ಆರೋಪಿಗಳೆಲ್ಲರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದು ತನಿಖೆ ಮಾಡುತ್ತಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ದಕ್ಷಿಣ ಕನ್ನಡದವಾಗಿದ್ದು ಮಾಲೀಕನ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv