Tag: ಬಾರ್ಸಿಲೋನಾ

  • ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?

    ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?

    ಪ್ಯಾರಿಸ್: ಕೆಲದಿನಗಳ ಹಿಂದೆ ಬಾರ್ಸಿಲೋನಾ ತೊರೆದು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ಖ್ಯಾತ ಫುಟ್‍ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸೇರಿದ್ದಾರೆ. ಈ ಮುನ್ನ ಬಾರ್ಸಿಲೋನಾ ತಂಡದೊಂದಿಗಿನ ತನ್ನ 21 ವರ್ಷಗಳ ಒಡನಾಟಕ್ಕೆ ಅಂತ್ಯ ಆಡಿದ ಸುದ್ದಿಗೋಷ್ಠಿಯಲ್ಲಿ ಮೆಸ್ಸಿ ಕಣ್ಣೀರು ಹಾಕಿದ್ದರು. ಈ ವೇಳೆ ಕಣ್ಣೀರು ಒರೆಸಿಕೊಳ್ಳಲು ಬಳಸಿದ ಟಿಶ್ಯೂ ಪೇಪರ್ 7.43 ಕೋಟಿ(1 ಮಿಲಿಯನ್)ಕೋಟಿ ರೂಪಾಯಿಗೆ ಹರಾಜು ಹಾಕಲಾಗಿದೆ.

    ಮೆಸ್ಸಿ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳುವ ಸಂದರ್ಭ ತನ್ನ 21 ವರ್ಷಗಳ ಒಡನಾಟವನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಈ ವೇಳೆ ಅವರೊಂದಿಗಿದ್ದ ಅವರ ಪತ್ನಿ ಆಂಟೋನೆಲಾ ರೊಕುಜೊ ಅವರು ಟಿಶ್ಯೂ ಪೇಪರ್‍ ನ್ನು ನೀಡಿದ್ದರು. ಆ ಟಿಶ್ಯೂನಲ್ಲಿ ಮೆಸ್ಸಿ ಕಣ್ಣೀರು ಒರೆಸಿಕೊಂಡು ಅಲ್ಲೇ ಕೆಳಕ್ಕೆ ಹಾಕಿದ್ದರು. ಸುದ್ದಿಗೋಷ್ಠಿ ಬಳಿಕ ಆ ಟಿಶ್ಯೂ ಪೇಪರ್‍ ನ್ನು ವ್ಯಕ್ತಿಯೊಬ್ಬರು ಎತ್ತಿಕೊಂಡು ಇದೀಗ ಇ-ಕಾಮರ್ಸ್ ವೆಬ್‍ಸೈಟ್ ಒಂದರಲ್ಲಿ ಸುಮಾರು 7.43 ಕೋಟಿಗೆ ಹರಾಜಿಗಿಟ್ಟಿದ್ದಾರೆ. ಇದನ್ನೂ ಓದಿ: ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಹರಾಜಿಗಿಟ್ಟ ವ್ಯಕ್ತಿ, ಈ ಟಿಶ್ಯೂನಲ್ಲಿ ಮೆಸ್ಸಿ ಅವರ ಜೆನೆಟಿಕ್ ಡಿಎನ್‍ಎ ಇದೆ. ಮೆಸ್ಸಿ ಅವರ ಕ್ಲೋನ್ ಸಿದ್ಧಪಡಿಸಲು ಇದು ಉಪಯೋಗವಾಗಬಹುದೆಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಟಿಶ್ಯೂವನ್ನು ಯಾರು ಖರೀದಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ಟಿ20 ವರ್ಲ್ಡ್ ಕಪ್ – ಅಕ್ಟೋಬರ್ 24ರಂದು ಭಾರತ Vs ಪಾಕಿಸ್ತಾನ

  • ಮತ್ತೆ ಬಿಡುಗಡೆಯಾಗಲಿದೆ ನೋಕಿಯಾದ ಶಕ್ತಿಶಾಲಿ ಫೀಚರ್ ಫೋನ್

    ಮತ್ತೆ ಬಿಡುಗಡೆಯಾಗಲಿದೆ ನೋಕಿಯಾದ ಶಕ್ತಿಶಾಲಿ ಫೀಚರ್ ಫೋನ್

    ನವದೆಹಲಿ: ಈಗ ಸ್ಮಾರ್ಟ್ ಫೋನ್‍ಗಳದ್ದೇ ಅಬ್ಬರ. ಆದರೆ ನೋಕಿಯಾ ಕಂಪೆನಿ ಈಗ ಸ್ಮಾರ್ಟ್ ಫೋನಿನ ಜೊತೆಗೆ ಫೀಚರ್ ಫೋನ್ ಸಮಯದಲ್ಲಿ ವಿಶ್ವದಲ್ಲೇ ಹವಾ ಸೃಷ್ಟಿಸಿದ್ದ 3310 ಫೋನನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಮುಂದಾಗುತ್ತಿದೆ.

    ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ನೋಕಿಯಾ  ಫೆ.27 ರಿಂದ ಮಾರ್ಚ್ 2ರವರೆಗೆ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಈ 3310 ಫೋನನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

    59 ಯುರೋ (ಅಂದಾಜು 4 ಸಾವಿರ ರೂ.) ಬೆಲೆಯಲ್ಲಿ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    2000 ಇಸ್ವಿಯ ಸೆಪ್ಟೆಂಬರ್ 1ರಂದು ಈ ಫೋನ್ ಬಿಡುಗಡೆಯಾಗಿದ್ದು, ವಿಶ್ವದಲ್ಲಿ 12.6 ಕೋಟಿ ಫೋನ್‍ಗಳು ಮಾರಾಟ ಕಂಡಿತ್ತು. ಈ ಮೂಲಕ ವಿಶ್ವದ ಶ್ರೇಷ್ಟ ಫೀಚರ್ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    1000 ಎಂಎಎಚ್ ಬ್ಯಾಟರಿ, ಸ್ನೇಕ್ ಆಟ, ವೆಲ್‍ಕಂ ಸ್ಕ್ರೀನ್ ಅಲ್ಲದೇ ಈ ಫೋನ್ ದೇಹ(ಬಾಡಿ) ಬಹಳ ಗಟ್ಟಿಯಾಗಿತ್ತು. ಮೇಲಿನಿಂದ ಬಿದ್ದರೂ ಫೋನಿನ ಒಳಗಡೆ ಭಾಗಕ್ಕೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಹೀಗಾಗಿ ನೋಕಿಯಾ 3310ನ್ನು ಶಕ್ತಿಶಾಲಿ ಫೋನ್ ಎಂದು ಜನ ಕರೆಯುತ್ತಿದ್ದರು.