Tag: ಬಾಯ್ ಫ್ರೆಂಡ್

  • ಬಿಹಾರ | ಬಾಯ್‌ಫ್ರೆಂಡ್ ಜೊತೆ ಓಡಿ ಹೋಗಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ

    ಬಿಹಾರ | ಬಾಯ್‌ಫ್ರೆಂಡ್ ಜೊತೆ ಓಡಿ ಹೋಗಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ

    ಪಾಟ್ನಾ: ತನ್ನ ಬಾಯ್‌ ಫ್ರೆಂಡ್‌ ಜೊತೆ ಓಡಿ ಹೋಗಿದ್ದಕ್ಕೆ ತಂದೆಯೇ ಸ್ವಂತ ಮಗಳನ್ನು ಕೊಂದಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ (Bihar Samastipur) ನಡೆದಿದೆ. ಘಟನೆ ಬಳಿಕ ಆರೋಪಿ ತಂದೆಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸಾಕ್ಷಿ (25) ಕೊಲೆಯಾದ ಯುವತಿ. ಆರೋಪಿ ಮುಖೇಶ್ ಸಿಂಗ್ ಕೊಲೆ ಮಾಡಿದ ತಂದೆ. ಆಕೆಯ ಶವವನ್ನು ಕಳೆದ ರಾತ್ರಿ ತಮ್ಮ ಮನೆಯ ಸ್ನಾನಗೃಹದಿಂದ ಹೊರತೆಗೆಯಲಾಗಿದೆ. ಇದನ್ನೂ ಓದಿ: ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌

    ಮಗಳನ್ನು ಕೊಂದಿದ್ದ ಮುಖೇಶ್‌ ಸಿಂಗ್‌ ಬಾಯ್‌ಫ್ರೆಂಡ್‌ ನನ್ನು (Boyfriend) ಮಗಿಸಲು ಸ್ಕೆಚ್‌ ಹಾಕಿದ್ದ. ಆದ್ರೆ, ಆತ ಗ್ರಾಮದಲ್ಲೇ ಇರಲಿಲ್ಲ ಎಂದು ವರದಿಗಳು ತಿಳಿದಿವೆ. ಇದನ್ನೂ ಓದಿ: ರಾಣಾನಿಗೆ ಬಿರಿಯಾನಿ ಕೊಡಬೇಡಿ: ಮುಂಬೈ ದಾಳಿಯಲ್ಲಿ ಜನರ ರಕ್ಷಣೆಗೆ ನೆರವಾಗಿದ್ದ ಚಹಾ ಮಾರಾಟಗಾರ ಒತ್ತಾಯ

    ಏನಿದು ಘಟನೆ?
    ಸಮಸ್ತಿಪುರದ ನಿವಾಸಿ ಸಾಕ್ಷಿ ಎಂಬ ಯುವತಿ ತನ್ನ ಕಾಲೇಜಿನಲ್ಲೇ ಓದುತ್ತಿದ್ದ ಯುವನೊಂದಿಗೆ ದೆಹಲಿಗೆ ಓಡಿಹೋಗಿದ್ದಳು. ಈ ವಿಷಯವನ್ನು ಕೊಲೆಯಾದ ಸಾಕ್ಷಿ ಅವರ ಚಿಕ್ಕಪ್ಪ ವಿಪಿನ್‌ ಕುಮಾರ್‌ ತಿಳಿಸಿದ್ದರು. ನಿವೃತ್ತ ಸೇನಾಧಿಕಾರಿಯಾಗಿದ್ದ ಆರೋಪಿ ಮುಖೇಶ್ ಸಿಂಗ್, ಏಪ್ರಿಲ್‌ 7ರಂದು ತನ್ನ ಮಗಳನ್ನು ಮನೆಗೆ ಬರುವಂತೆ ಮನವೊಲಿಸಿದ್ದ. ಮನೆಗೆ ಬಂದ ಒಂದೆರಡು ದಿನಗಳಲ್ಲೇ ಮಗಳು ಮತ್ತೆ ಕಾಣೆಯಾದಳು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು. ಇದನ್ನೂ ಓದಿ: ಪಿಯುಸಿ ಹುಡುಗನ ಮದುವೆಯಾದ ಮೂರು ಮಕ್ಕಳ ತಾಯಿ!

    ಸಾಕ್ಷಿ ಅವರ ತಾಯಿಯನ್ನು ವಿಚಾರಿಸಿದಾಗ, ಅವಳು ಮತ್ತೆ ತನ್ನ ಪ್ರಿಯಕರನೊಂದಿಗೆ ಹೋಗಿರಬಹುದು ಅಂತ ಹೇಳಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದರು.

    ತನಿಖೆ ಭಾಗವಾಗಿ ಮನೆಯನ್ನ ಪರಿಶೀಲಿಸುವಾಗ ಬೀಗ ಹಾಕಿದ್ದ ಸ್ನಾನಗೃಹದಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದರು. ಬೀಗ ತೆಗೆದಾಗ ರಕ್ತದ ಮಡುವಿನಲ್ಲಿ ಮಗಳ ಶವ ಬಿದ್ದಿತ್ತು. ಈ ಕುರಿತು ಆರೋಪಿ ತಂದೆ ಮುಖೇಶ್‌ ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

  • ಕೊನೆಗೂ ಬಾಯ್ ಫ್ರೆಂಡ್ ಮೀಟ್ ಮಾಡಿದ ಬಿಗ್ ಬಾಸ್ ‍ಸ್ಪರ್ಧಿ ಪವಿ ಪೂವಪ್ಪ

    ಕೊನೆಗೂ ಬಾಯ್ ಫ್ರೆಂಡ್ ಮೀಟ್ ಮಾಡಿದ ಬಿಗ್ ಬಾಸ್ ‍ಸ್ಪರ್ಧಿ ಪವಿ ಪೂವಪ್ಪ

    ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಪವಿ ಪೂವಪ್ಪ ಆರು ತಿಂಗಳ ನಂತರ ಬಾಯ್ ಫ್ರೆಂಡ್ ಮೀಟ್ ಮಾಡಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಯ್ ಫ್ರೆಂಡ್ (Boyfriend) ಡಿಜೆ ಮ್ಯಾಡಿ (Maddy) ಅನ್ನು ಸ್ವತಃ ಪವಿ ಅವರೇ ಸ್ವಾಗತಿಸಿ, ಕಾರಿನಲ್ಲಿ ಕರೆದೊಯ್ದಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಆರು ತಿಂಗಳ ಮಟ್ಟಿಗೆ ಮ್ಯಾಡಿ ವಿದೇಶದಲ್ಲಿ ಕೆಲಸಕ್ಕೆ ಹೋಗಿದ್ದರು. ಈ ವಿಷಯವನ್ನು ಪವಿ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದರು. ಹಲವು ವರ್ಷಗಳಿಂದ ಒಟ್ಟಿಗೆ ಇರುವ ವಿಚಾರವನ್ನೂ ಅವರು ಹೇಳಿಕೊಂಡಿದ್ದರು. ಆರು ತಿಂಗಳು ಕಳೆದ ನಂತರ ಮ್ಯಾಡಿ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಪವಿ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂದಿ ಮೂಲಕ ಪವಿ ಪೂವಪ್ಪ (Pavi Poovappa) ಬಂದಾಗ, ಅವರು ಹೆಸರು ಕೇಳುತ್ತಿದ್ದಂತೆಯೇ ಅನೇಕ ನೆಟ್ಟಿಗರು ಆ ಹೆಸರಿಗಾಗಿ ಹುಡುಕಾಡಿದ್ದರು. ಹುಡುಕಿದವರಿಗೆಲ್ಲ ಸಿಕ್ಕಿದ್ದು, ರಾಶಿ ರಾಶಿ ಹಾಟ್ ಫೋಟೋಗಳು. ಬಿಕಿನಿ ಶೂಟ್ ಗಳು. ಹೌದು, ಪವಿ ಪೂವಪ್ಪ ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಶೋಗಳಿಗೆ ಹೆಜ್ಜೆ ಹಾಕಿದ್ದಾರೆ.

    ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜೊತೆಗೆ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಅವರು ಹೊಂದಿದ್ದಾರೆ.

    ಪವಿ ಪೂವಪ್ಪ ಮೂಲತಃ ಕೊಡಗಿನವರು. ಹುಟ್ಟಿದ್ದು ಕೂರ್ಗನಲ್ಲಿಯಾದರೂ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ. ಇವರ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಪವಿ ಪೂವಪ್ಪ ಆಗಿ ಬದಲಾಗಿದ್ದಾರೆ.

    ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡಿದ ಇವರು, ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಕೂಡ ಪಡೆದುಕೊಂಡಿದ್ದಾರೆ. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಅನೇಕ ಪ್ರಶಸ್ತಿ ಗೌರವಗಳನ್ನೂ ಪಡೆದುಕೊಂಡಿದ್ದಾರೆ.

     

    ಪವಿ ಸಾಂಪ್ರದಾಯಿಕ ಉಡುಗೆಗಿಂತ ತುಂಡುಡುಗೆ, ಬಿಕಿನಿ ತೊಟ್ಟಿದ್ದೇ ಹೆಚ್ಚು. ಅದರಲ್ಲೂ ಫ್ಯಾಷನ್ ಶೋಗಳಲ್ಲಿ ಹಾಟ್ ಹಾಟ್ ಆಗಿ ಕಂಡಿದ್ದೂ ಇದೆ. ಹಾಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಪವಿ ಅಂದರೆ ಅಚ್ಚುಮೆಚ್ಚು.

  • ಬಾಯ್‍ಫ್ರೆಂಡ್ ಬಿಡುವಂತೆ ಹೇಳಿದ ತಾಯಿಯನ್ನು ಕೊಲೆಗೈದ 14ರ ಮಗಳು!

    ಬಾಯ್‍ಫ್ರೆಂಡ್ ಬಿಡುವಂತೆ ಹೇಳಿದ ತಾಯಿಯನ್ನು ಕೊಲೆಗೈದ 14ರ ಮಗಳು!

    ಮಾಸ್ಕೋ: ಬಾಯ್‍ಫ್ರೆಂಡ್ (Boyfriend) ಜೊತೆ ಬ್ರೇಕಪ್ ಮಾಡಿಕೊಳ್ಳುವಂತೆ ಹೇಳಿದ ತಾಯಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ 14 ವರ್ಷದ ಮಗಳನ್ನು ರಷ್ಯಾ ಪೊಲೀಸರು (Russia Police) ಬಂಧಿಸಿದ್ದಾರೆ.

    ತಾಯಿಯನ್ನು ಕತ್ತು ಹಿಸುಕಿ ಕೊಲೆಗೈದ ಬಳಿಕ ಶವವನ್ನು ಪ್ಲಾಸ್ಟಿಕ್‍ನಿಂದ ಸುತ್ತಿ ರಷ್ಯಾದ ಮಾಸ್ಕೋ ಬಳಿ ಎಸೆಯಲಾಗಿದೆ. ಸ್ವಂತ ಮಗಳೇ, 15 ವರ್ಷದ ಹುಡುಗನ ಜೊತೆ ತನ್ನ ತಾಯಿಯನ್ನು ಕೊಲೆ ಮಾಡಲು ಸೂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.

    38 ವರ್ಷದ ತಾಯಿಯನ್ನು ಕೊಲ್ಲಲು ಹುಡುಗಿ ಆಕೆಯ ಬಾಯ್‍ಫ್ರೆಂಡ್ ಸೇರಿ ಇಬ್ಬರು ಹದಿಹರೆಯದವರಿಗೆ 3,72,202 ರೂ. ನೀಡಿದ್ದಾರೆ ಎಂದು ರಷ್ಯಾದ ಪೊಲೀಸರು ಶಂಕಿಸಿದ್ದಾರೆ. ಬಾಯ್ ಫ್ರೆಂಡ್ ಹುಡುಗಿಯ ಕುಟುಂಬದ ಫ್ಲಾಟ್‍ನಲ್ಲಿಯೇ ವಾಸಿಸುತ್ತಿದ್ದನು ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ಕೈಕೊಟ್ಟ ಪ್ರಿಯತಮ- ನಡುರಸ್ತೆಯಲ್ಲೇ ಬೇಕಾಬಿಟ್ಟಿಯಾಗಿ ಯುವತಿ ರಂಪಾಟ

    ಲವ್ ಮಗಳ ಮೇಲೆ ಕೆಟ್ಟ ಪ್ರಭಾವ ಬೀರಿದ ಪರಿಣಾಮ ತಾಯಿ, ಬಾಯ್‍ಫ್ರೆಂಡ್ ನನ್ನು ಬಿಟ್ಟು ಬಿಡುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಹುಡುಗಿ ತನ್ನ ಬಾಯ್‍ಫ್ರೆಂಡ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ. ಇದಾದ ಎರಡು ದಿನಗಳ ನಂತರ ಆಕೆಯ ಶವವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿ ಮಾಸ್ಕೋ ಪ್ರದೇಶದ ಬಾಲಶಿಖಾ ನಗರದಲ್ಲಿರುವ ಕಸದ ರಾಶಿಯಲ್ಲಿ ಎಸೆದಿದ್ದಾರೆ. ಇನ್ನು ಕಸದ ರಾಶಿಯಲ್ಲಿ ಶವವನ್ನು ಕಂಡು ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ತಮ್ಮ ತಾಯಿಯು ತನ್ನನ್ನು ಪ್ರೀತಿಸುವ ಒಳ್ಳೆಯ ವ್ಯಕ್ತಿಯಾಗಿದ್ದರೂ ಸಹ, ಹುಡುಗಿ ತನ್ನ ತಾಯಿಯನ್ನು ದ್ವೇಷಿಸುತ್ತಿರುವ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಳು   ಎಂದು ಹುಡುಗಿಯ ಸ್ನೇಹಿತೆಯೊಬ್ಬಳು ತಿಳಿಸಿದ್ದಾಳೆ.

  • ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿಯ ಖಾಸಗಿ ವಿಡಿಯೋ ಲೀಕ್ ಬೆದರಿಕೆ, ಬಾಯ್ ಫ್ರೆಂಡ್ ವಿರುದ್ಧವೇ ದೂರು

    ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿಯ ಖಾಸಗಿ ವಿಡಿಯೋ ಲೀಕ್ ಬೆದರಿಕೆ, ಬಾಯ್ ಫ್ರೆಂಡ್ ವಿರುದ್ಧವೇ ದೂರು

    ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದ ನಾಯಕಿ ಅಮಲಾ ಪೌಲ್ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡುವುದಾಗಿ ಆಕೆಯ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಅಮಲಾ ದೂರು ನೀಡಿದ್ದರು. ಅಲ್ಲದೇ, ತನ್ನ ಮಾಜಿ ಬಾಯ್ ಫ್ರೆಂಡ್ ನಿಂದ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಈ ದೂರನ್ನು ಆಧರಿಸಿದ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಅಮಲಾ ಪೌಲ್ ತಮಿಳಿನ ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ಅವರನ್ನು ಮದುವೆಯಾಗಿದ್ದಾರು. ಹೊಂದಾಣಿಕೆ ಕಾರಣದಿಂದಾಗಿ ಅವರಿಂದ ಡಿವೋರ್ಸ್ ಪಡೆದಿದ್ದರು. ಆನಂತರ ಭವಿಂದರ್ ಸಿಂಗ್ ಸಾಂಗತ್ಯ ಬಯಸಿದ್ದರು. ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಬಂಡವಾಳ ಕೂಡ ಹೂಡಿದ್ದರು. ಆನಂತರ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಒಬ್ಬರಿಗೊಬ್ಬರು ದೂರವಾಗಿದ್ದರು. ಆ ವೇಳೆಯಲ್ಲಿಯ ವಿಡಿಯೋ ಅದು ಎನ್ನಲಾಗುತ್ತಿದ್ದು, ವಿಡಿಯೋಗಾಗಿ ಪೊಲೀಸರು ತಲಾಷೆ ನಡೆಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ವಿಡಿಯೋ ಇದೆ ಎಂದು ಹಣದ ಬೇಡಿಕೆ ಇಟ್ಟಿದ್ದಾನೆ ಎಂದು ಅಮಲಾ ದೂರಿನಲ್ಲಿ ಬರೆದಿದ್ದು, ತಾನು ಹೇಳಿದಂತೆ ಕೇಳಬೇಕು ಎಂದು ಹಿಂಸೆ ನೀಡುತ್ತಿರುವುದಾಗಿ ತಮಿಳುನಾಡಿನ ವಿಲ್ಲುಪುರಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಮಲಾ ದಾಖಲಿಸಿದ್ದಾರೆ. ಅಲ್ಲದೇ, ಬಾಯ್ ಫ್ರೆಂಡ್ ನ ಹನ್ನೆರಡು ಜನ ಗೆಳೆಯರ ಮೇಲೂ ಅವರು ದೂರಿದ್ದಾರೆ. ಅವರಿಂದಲೂ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದಿದ್ದಾರೆ.

    ಮತ್ತೊಂದು ಮೂಲಗಳ ಪ್ರಕಾರ ಅಮಲಾ ಪೌಲ್ ಮತ್ತು ಭವಿಂದರ್ ಸಿಂಗ್ ಕೇವಲ ಡೇಟಿಂಗ್ ಮಾಡುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆಯೇ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಮದುವೆಯ ಫೋಟೋಗಳು ಕೂಡ ಲೀಕ್ ಆಗಿದ್ದವು. ತಾವು ಎರಡನೇ ಮದುವೆ ಆಗಿಲ್ಲ ಎಂದು ಅಮಲಾ ಹೇಳಿಕೊಂಡಿದ್ದರೂ, ಫೋಟೋಗಳು ಮಾತ್ರ ಅನುಮಾನ ಮೂಡಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ರಾಖಿ ಸಾವಂತ್ ಬಾಯ್‌ಫ್ರೆಂಡ್‌ ಮೈಸೂರಿನವ, 6 ವರ್ಷ ಚಿಕ್ಕವ – ರೋಚಕ ವಿಷಯ ಬಾಯ್ಬಿಟ್ಟ ರಾಖಿ

    ರಾಖಿ ಸಾವಂತ್ ಬಾಯ್‌ಫ್ರೆಂಡ್‌ ಮೈಸೂರಿನವ, 6 ವರ್ಷ ಚಿಕ್ಕವ – ರೋಚಕ ವಿಷಯ ಬಾಯ್ಬಿಟ್ಟ ರಾಖಿ

    ತಿ ರಿತೇಶ್‌ರಿಂದ ದೂರವಾದ ನಂತರ ರಾಖಿ ಸಾವಂತ್ ಇದೀಗ ಮತ್ತೊಬ್ಬ ಬಾಯ್‌ಫ್ರೆಂಡ್‌ ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಬಾರಿ ಅವರು ಕರ್ನಾಟಕ ಮೂಲದ ಹುಡುಗನ ಜೊತೆ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ಒಪ್ಪಿಕೊಂಡಿರುವ ರಾಖಿ, ಆ ಹುಡುಗನ ಬಗ್ಗೆ ಹಲವು ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ

    ಪತಿ ರಿತೇಶ್ ಅವರಿಂದ ದೂರವಾದ ನಂತರ ಸಂಪರ್ಕಕ್ಕೆ ಬಂದನಂತೆ ಮೈಸೂರು ಮೂಲದ ಹುಡುಗ ಆದಿಲ್ ಖಾನ್. ಪರಸ್ಪರ ಇಬ್ಬರೂ ಪರಿಚಯವಾದ ನಂತರ ಕೇವಲ ಒಂದೇ ಒಂದು ತಿಂಗಳಿಗೆ ರಿತೇಶ್ ಪ್ರೇಮ ನಿವೇದನೆ ಮಾಡಿಕೊಂಡಂತೆ. ಮೊದಲು ಪ್ರಪೋಸ್ ಮಾಡಿದ್ದು ಆದಿಲ್ ಎಂದು ರಾಖಿ ಹೇಳಿಕೊಂಡಿದ್ದಾರೆ. ಅವನು ಪ್ರೇಮ ನಿವೇದನೆ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಹಾಗಾಗಿ ಒಪ್ಪಿಕೊಂಡೆ ಅಂದಿದ್ದಾರೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಆದಿಲ್ ಖಾನ್‌ಗೂ ಮತ್ತು ರಾಖಿ ಸಾವಂತ್ ಅವರಿಗೆ ವಯಸ್ಸಿನ ಅಂತರ ಆರು ವರ್ಷವಂತೆ. ಕೇವಲ  ಆರು ವರ್ಷ ವಯಸ್ಸಿನ ಅಂತರದ ಹುಡುಗನ ಜೊತೆ ಪ್ರೀತಿ ಮಾಡುತ್ತಿರುವೆ. ಬಾಲಿವುಡ್‌ನಲ್ಲೂ ಹದಿನೈದು ಇಪ್ಪತ್ತು ವರ್ಷ ಅಂತರದ ಜೋಡಿಗಳು ಇದ್ದಾವೆ. ಹಾಗಾಗಿ ಪ್ರೀತಿಗೆ ವಯಸ್ಸಿಲ್ಲ ಎಂದು ಘೋಷಿಸಿದ್ದಾರೆ. ಅದು ಇವರಿಬ್ಬರ ಮಧ್ಯದ ಹೊಂದಾಣಿಕೆಗೆ ಯಾವುದೇ ತೊಡಕಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ರಾಖಿ ಅವರಿಗೆ ಆದಿಲ್ ಸಿಕ್ಕಿದ್ದೇ ಒಂದು ರೋಚಕ ಕಥೆಯಂತೆ. ರಾಖಿ ಅವರ ಬಿಸ್ನೆಸ್ ಪಾರ್ಟ್ನರ್‌ ಶೈಲೆ ಅವರ ಸಹೋದರ ಆದಿಲ್. ಬಿಸ್ನೆಸ್ ಭೇಟಿಗಾಗಿ ಆಗಾಗ್ಗೆ ರಾಖಿ ಮತ್ತು ಶೈಲೆ ಸೇರುತ್ತಿದ್ದರಂತೆ. ಆಗ ತನ್ನ ಮೊಬೈಲ್ ನಂಬರ್ ಪಡೆದು ಆದಿಲ್ ಸ್ನೇಹ ಬಯಸಿದ ಎಂದು ರಾಖಿ ಹೇಳಿಕೊಂಡಿದ್ದಾರೆ. ಆದಿಲ್ ಮಾತಿಗೆ ಬೇಡ ಎನ್ನಲಾಗದೇ ಮೈಸೂರಿಗೆ ರಾಖಿ ಬಂದಿದ್ದರಂತೆ. ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರಂತೆ. ಆಗ ಆದಿಲ್ ತೋರಿದ ಆತಿಥ್ಯಕ್ಕೆ ಫಿದಾ ಆದರಂತೆ ರಾಖಿ. ಇದನ್ನೂ ಓದಿ : ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಮದುವೆಗೆ ಮುನ್ನವೇ ಆದಿಲ್ ಕುಟುಂಬದ ಬಗ್ಗೆ ಬಾಂಬ್ ಸಿಡಿಸಿದ್ದಾರೆ ರಾಖಿ ಸಾವಂತ್. ತಾವು ಧರಿಸುವ ಬಟ್ಟೆಗಳು ಆದಿಲ್ ಕುಟುಂಬಕ್ಕೆ ಇಷ್ಟವಾಗುವುದಿಲ್ಲವಂತೆ. ಹಾಗಾಗಿ ಕಾಸ್ಟ್ಯೂಮ್‌ನಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

  • ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಗಾಗಲೇ ಪತಿಯಿಂದ ದೂರವಾಗಿರುವ ಬಾಲಿವುಡ್ ವಿವಾದಿತ ನಟಿ ರಾಖಿ, ಇದೀಗ ಮತ್ತೊಂದು ಹೊಸ ಸುದ್ದಿಕೊಟ್ಟಿದ್ದಾರೆ. ತಮ್ಮ ಹೊಸ ಬಾಯ್‌ಫ್ರೆಂಡ್‌ ಅನ್ನು ಅಭಿಮಾನಿಗಳಿಗಾಗಿ ಪರಿಚಯಿಸಿದ್ದಾರೆ. ಅದು ವಿನೂತನ ರೀತಿಯಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ: ಮಂಡ್ಯ ಹುಡುಗರ ಪ್ರೀತಿಗೆ ಸನ್ನಿ ಲಿಯೋನ್ ಫಿದಾ

    ಪ್ರೀತಿ, ಗೀತಿ ಇತ್ಯಾದಿ ರಾಖಿಗೆ ಹೊಸದೇನೂ ಅಲ್ಲ. ಬಟ್ಟೆ ಬದಲಿಸಿದಷ್ಟೇ ಬಾಯ್‌ಫ್ರೆಂಡ್‌ಗಳನ್ನು ಅವರು ಬದಲಾಯಿಸುತ್ತಾ ಬಂದಿದ್ದಾರೆ. ಆದರೆ, ಈ ಬಾರಿ ಬಾಯ್‌ಫ್ರೆಂಡ್ ಜೀವ ಇರುವತನಕ ಇರಲಿದ್ದಾನೆ ಎಂದು ಪ್ರಾಮಿಸ್ ಮಾಡಿದ್ದಾರೆ. ಹೀಗಾಗಿಯೇ ಆ ಬಾಯ್‌ಫ್ರೆಂಡ್‌ನಿಂದ ಮೊದಲ ಉಡುಗೊರೆಯಾಗಿ ಬಿ.ಎಂ.ಡಬ್ಲ್ಯೂ ಕಾರನ್ನು ಪಡೆದುಕೊಂಡಿದ್ದಾರೆ. ಆದಿಲ್ ಮೂಲತಃ ಮೈಸೂರಿನವನು ಎನ್ನಲಾಗುತ್ತಿದೆ. ಇದನ್ನೂ ಓದಿ: ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಈ ಕುರಿತು ರಾಖಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ಹೊಸ ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡಿರುವ ರಾಖಿ, ‘ಸ್ವೀಟ್ ಹಾರ್ಟ್, ನನ್ನ ಜೀವನ’ ಎಂದು ಸೊಗಸಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಿಂಗಲ್ ಅಲ್ಲ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಹುಡುಗ ಯಾರು ಅಂತೀರಾ? ಅವನ ಹೆಸರು ಆದಿಲ್ ಖಾನ್ ದುರಾನಿ. ಅವನನ್ನು ಪರಿಚಯ ಮಾಡಿಕೊಡುತ್ತಾ, ಅವನನ್ನು ಮುದ್ದು ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ರಾಖಿ ಬಾಯ್ ಫ್ರೆಂಡ್ ಕೂಡ ಪ್ರೀತಿಯ ಹುಡುಗಿಯನ್ನು ಹೊಗಳುವುದರಲ್ಲಿ ಹಿಂದೆ ಬಿದ್ದಿಲ್ಲ. ರಾಖಿಯ ಬಗ್ಗೆ ಹಾಡಿ ಹೊಗಳಿದ್ದಾರೆ. ಅವಳ ಸರಳತೆ ಮತ್ತು ಎಂತಹ ವ್ಯಕ್ತಿತ್ವ ಎನ್ನುವುದನ್ನು ಬರೆದುಕೊಂಡಿದ್ದಾರೆ. ಈ ಹಿಂದೆಯೂ ತಾವು ಬಿಎಂಡಬ್ಲ್ಯೂ ಕಾರನ್ನು ರಾಖಿಗೆ ಕೊಡುಗೆಯಾಗಿ ನೀಡಿದಾಗಲೂ ರಾಖಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಅವರು ಆಡಿದ್ದರು.

    ತಾವೀಗ ಬ್ರೇಕ್ ಅಪ್ ಖಿನ್ನತೆಯಿಂದ ಹೊರಗೆ ಬಂದಿದ್ದು, ಅದಕ್ಕೆ ಕಾರಣ ಆದಿಲ್ ಅಂತಾನೂ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆದಿಲ್ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ಅವರು ಕೊಡಲಿದ್ದಾರಂತೆ. ಹಾಗಂತ ಇಬ್ಬರೂ ಸೀರಿಯಸ್ ಆಗಿ ಲವ್ ಮಾಡುತ್ತಿದ್ದಾರಾ ಅಥವಾ ಇದೂ ಕೂಡ ಗಿಮಿಕ್ಕಾ? ಎಂದು ರಾಖಿಗೆ ಹಲವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಖಿ ಯಾವುದೇ ಉತ್ತರ ನೀಡಿಲ್ಲ.

  • ಚಿನ್ನಿಬಾಂಬ್‍ಗೆ ಲವ್ ಲೆಟರ್ ಕಳುಹಿಸುವುದಕ್ಕೆ ಹೇಳಿ ಬಿಗ್‍ಬಾಸ್

    ಚಿನ್ನಿಬಾಂಬ್‍ಗೆ ಲವ್ ಲೆಟರ್ ಕಳುಹಿಸುವುದಕ್ಕೆ ಹೇಳಿ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ತನ್ನದೇ ಆದ ತುಂಟತನ ಹಾಗೂ ಚೇಷ್ಟೆ ಮೂಲಕ ನಟಿ ಶುಭಾ ಪೂಂಜಾ ಎಲ್ಲರ ಮನಗೆಲ್ಲುತ್ತಿದ್ದಾರೆ. ಪ್ರತಿಯೊಂದು ವಿಚಾರದಲ್ಲಿಯೂ ತರ್ಲೆ ಮಾಡುವ ಮಾಡುವ ಶುಭಾ ಪೂಂಜಾ ಬಾಯ್ ಫ್ರೆಂಡ್ ವಿಚಾರ ಬಂದಾಗ ಮಾತ್ರ ಫುಲ್ ಸೀರಿಯಸ್ ಹಾಗೂ ಪೊಸೆಸಿವ್ ಆಗಿ ಬಿಡುತ್ತಾರೆ.

    ಬಿಗ್‍ಬಾಸ್ ಮನೆಯಿಂದ ಹೋದ ಬಳಿಕ ಮದುವೆಯಾಗುವುದಾಗಿ ಹೇಳಿರುವ ಶುಭಾ ಪೂಂಜಾ, ಬಿಗ್‍ಬಾಸ್ ಮನೆಯಲ್ಲಿ ತಮ್ಮ ಬಾಯ್ ಫ್ರೆಂಡ್ ಸುಮಂತ್‍ರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರೀತಿಯಿಂದ ಸುಮಂತ್‍ರನ್ನು ಚಿನ್ನಿಬಾಂಬ್ ಎಂದು ಕರೆಯುವ ಶುಭಾ, ಅವರಿಗೆ ನನಗೊಂದು ಲವ್ ಲೆಟರ್ ಆದರೂ ಕಳುಹಿಸಿಕೊಡಲು ಹೇಳಿ ಬಿಗ್‍ಬಾಸ್ ಎಂದು ಕ್ಯಾಮೆರಾ ಮುಂದೆ ನಿಂತು ಮನವಿ ಮಾಡಿಕೊಂಡಿದ್ದಾರೆ.

    ನಿನ್ನೆ ಶುಭಾ, ಟಿಶ್ಯು ಪೇಪರ್ ಮೇಲೆ ತಮ್ಮ ಪ್ರಿಯಕರನಿಗೆ ಸಂದೇಶವೊಂದನ್ನು ಬರೆದಿದ್ದು, ಅದನ್ನು ಕ್ಯಾಮೆರಾ ಮುಂದೆ ನಿಂತು ಓದಿದ್ದಾರೆ. ನನ್ನ ಪ್ರೀತಿಯ ಚಿನ್ನಿ ಬಾಂಬ್ ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬೇಗ ಬಾ, ಶುಭಾ ಎಂದು ಹೇಳಿದ್ದಾರೆ. ಬಳಿಕ, ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಚಿನ್ನಿಬಾಂಬ್, ಅವನನ್ನು ಬೇಗ ಇಲ್ಲಿ ಬಂದು ನನ್ನನ್ನು ನೋಡಲು ಹೇಳಿ, ಇಲ್ಲ ಅಂದ್ರೆ ನನಗೊಂದು ಲವ್ ಲೆಟರ್ ಆದರೂ ಕಳುಹಿಸುವುದಕ್ಕೆ ಹೇಳಿ, ಏನೋ ಒಂದು ಮಾಡುವುದಕ್ಕೆ ಹೇಳಿ ಬಿಗ್‍ಬಾಸ್ ಎಂದು ಕೇಳಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ದೊಡ್ಮನೆ ಸದಸ್ಯರ ಮುಂದೆ, ಶುಭಾ ಪೂಂಜಾ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಪೋಸ್ ಮಾಡಿದ್ದು, ನಾನು ಅಲ್ಲ, ಅವನು ಅಲ್ಲ. ಬದಲಿಗೆ ನನ್ನ ತಾಯಿ ಎಂದು ಹೇಳುವ ಮೂಲಕ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದರು.

  • ಬಾಯ್‍ಫ್ರೆಂಡ್‍ಗಳ ಜೊತೆ ಪತ್ನಿ ಸುತ್ತಾಟ- 10 ವರ್ಷದ ಮಗನೊಂದಿಗೆ ಗಂಡ ಕಂಗಾಲು

    ಬಾಯ್‍ಫ್ರೆಂಡ್‍ಗಳ ಜೊತೆ ಪತ್ನಿ ಸುತ್ತಾಟ- 10 ವರ್ಷದ ಮಗನೊಂದಿಗೆ ಗಂಡ ಕಂಗಾಲು

    ಬೆಂಗಳೂರು: ಪತ್ನಿಯೊಬ್ಬಳು ಗಂಡನ ಶ್ರಮದ ಹಣದಲ್ಲೇ ಬಾಯ್ ಫ್ರೆಂಡ್‍ಗಳ ಜೊತೆ ತಿರುಗುತ್ತಿದ್ದ ಪ್ರಕರಣವೊಂದು ಬೆಂಗಳೂರಿನ ಗುಂಜೂರಿನಲ್ಲಿ ಬೆಳಕಿಗೆ ಬಂದಿದೆ.

    ಮಹಿಳೆಗೆ ಮದುವೆಯಾಗಿ ಮಗ ಇದ್ದರೂ ಕೂಡ ಆಕೆ ಕ್ಯಾರೇ ಎನ್ನದೇ ಬಾಯ್ ಫ್ರೆಂಡ್‍ಗಳ ಜೊತೆ ವಾರಗಟ್ಟಲೆ ತಿರುಗಾಡುತ್ತಿರುತ್ತಾಳೆ. ಮಹಿಳೆಯ ಈ ವರ್ತನೆಗೆ ಗಂಡ ಹಾಗೂ 10 ವರ್ಷದ ಮಗ ಕಂಗಾಲಾಗಿದ್ದಾರೆ. ಅಲ್ಲದೇ ಅಮ್ಮನ ಬಾಯ್ ಫ್ರೆಂಡ್‍ಗಳ ಸಹವಾಸವನ್ನು ಮಗ ಎಳೆ ಎಳೆಯಾಗಿ ಹೇಳುತ್ತಾನೆ.

    ಮಹಿಳೆ ಮದುವೆ ಆಗಿ 10 ವರ್ಷ ಸಂಸಾರ ಮಾಡಿದ ಗಂಡನ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾಳೆ. ಅಲ್ಲದೇ ತನ್ನ ಪತಿ ಬೇರೆ ರಾಜ್ಯಕ್ಕೆ ಕೆಲಸಕ್ಕೆಂದು ಹೋದಾಗ ಮಹಿಳೆ ಪರಪುರಷರ ಜೊತೆ ತಿರುಗಾಡುತ್ತಿರುತ್ತಾಳೆ. ಈ ಹಿಂದೆ ಪತಿ ಇಲ್ಲದಿದ್ದಾಗ ಮಹಿಳೆ ಬೇರೆ ಪುರಷನೊಂದಿಗೆ ಓಡಿ ಹೋಗಿದ್ದಳು. ಆಗ ಪತಿ, ಕಾಣೆಯಾಗಿರುವ ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಪತಿಗೆ ನ್ಯಾಯ ಒದಗಿಸಿದ್ದರು.

    ಇತ್ತೀಚೆಗೆ ತಾನು ಕೇರಳಕ್ಕೆ ಕೆಲಸಕ್ಕೆಂದು ಹೋಗಿದ್ದಾಗ ಪತ್ನಿ ಬೇರೋಬ್ಬನ ಜೊತೆ ಹೋಗಿದ್ದಾಳೆಂದು ಪತಿ ಆರೋಪಿಸಿದ್ದಾರೆ. ಸದ್ಯ ತನ್ನ ಪತ್ನಿಯಿಂದ ಮುಕ್ತಿಕೊಡಿಸುವಂತೆ ಪತಿ ಕೇಳಿಕೊಳ್ಳುತ್ತಿದ್ದಾರೆ. ತನ್ನ ಪತ್ನಿಯ ಈ ಆಟದಿಂದ ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಪತಿ ಕಣ್ಣೀರು ಹಾಕುತ್ತಿದ್ದಾರೆ.

    ಈ ಘಟನೆ ಸಂಬಂಧ ಪತಿ ವರ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಮಹಿಳೆಯನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗರ್ಲ್ ಫ್ರೆಂಡ್ ಜೊತೆ ಮಾತಾಡ್ತಿದ್ದಿದೀಕೆ 16ರ ಹುಡುಗನ ಹೊಡೆದು ಕೊಂದ್ರು!

    ಗರ್ಲ್ ಫ್ರೆಂಡ್ ಜೊತೆ ಮಾತಾಡ್ತಿದ್ದಿದೀಕೆ 16ರ ಹುಡುಗನ ಹೊಡೆದು ಕೊಂದ್ರು!

    ಪಾಟ್ನಾ: ಗರ್ಲ್ ಫ್ರೆಂಡ್ ಜೊತೆ ಮಾತಾಡುತ್ತಿದ್ದ 16 ವರ್ಷದ ಹುಡಗನೊಬ್ಬನನ್ನು ಗುಂಪೊಂದು ಹಿಗ್ಗಾಮುಗ್ಗವಾಗಿ ಥಳಿಸಿ ಬರ್ಬರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಕಿಡ್ವಾಯಿ ನಗರ್ ನಲ್ಲಿ ಗುರುವಾರ ನಡೆದಿದೆ.

    ಮೃತ ದುರ್ದೈವಿ ಹುಡುಗ 11ನೇ ತರಗತಿಯಲ್ಲಿ ಓದುತ್ತಿದ್ದನು. ಈತನಿಗೆ ಹುಡುಗರ ಗುಂಪೊಂದು ಬುಧವಾರ ಚೆನ್ನಾಗಿ ಥಳಿಸಿದೆ ಅಂತ ಕಿಡ್ವಾಯಿ ನಗರ್ ಪೊಲೀಸ್ ಠಾಣೆಯ ಅಧಿಕಾರಿ ಅನುರಾಗ್ ಮಿಶ್ರ ತಿಳಿಸಿದ್ದಾರೆ.

    ಥಳಿತದ ಪರಿಣಾಮ ಗಂಭೀರ ಗಾಯಗೊಂಡಿದ್ದ ಹುಡುಗನನ್ನು ಕೂಡಲೇ ಲಾಲ್‍ ಲಜ್‍ಪತ್ ರಾಯ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸೋದರಿಯನ್ನು ಪ್ರೀತಿಸ್ತಿದ್ದಾನೆಂದು ಹೊಡೆದು ಕೊಂದೇ ಬಿಟ್ಟ!

    ಹುಡುಗ ತನ್ನ ನೆರೆಮನೆಯ ಹುಡುಗಿ ಜೊತೆ ಮಾತನಾಡುತ್ತಿದ್ದನು. ಹುಡುಗಿ ಪದೇ ಪದೇ ಹುಡುಗನ ಜೊತೆ ಮಾತನಾಡುತ್ತಿದ್ದಿದ್ದನ್ನು ಆಕೆಯ ಬಾಯ್ ಫ್ರೆಂಡ್ ನೋಡಿದ್ದನು. ಅಲ್ಲದೇ ಈತ ಹುಡುಗನಿಗೆ ತನ್ನ ಹುಡುಗಿಯಿಂದ ದೂರ ಇರು. ಅವಳ ಜೊತೆ ಜಾಸ್ತಿ ಮಾತನಾಡದಂತೆ ಹಲವು ಬಾರಿ ಎಚ್ಚರಿಕೆ ಕೂಡ ನೀಡಿದ್ದನು. ಇದನ್ನೂ ಓದಿ: ರ‍್ಯಾಗಿಂಗ್‌ ತಪ್ಪಿಸಿಕೊಂಡಿದ್ದಕ್ಕೆ ಟೆಕ್ ವಿದ್ಯಾರ್ಥಿಗೆ ಶಿಕ್ಷೆ – ಮೈದಾನದಲ್ಲೇ ಮೂರು ಗಂಟೆ ಥಳಿಸಿದ ಹಿರಿಯ ವಿದ್ಯಾರ್ಥಿಗಳು!

    ಆದ್ರೆ ಬುಧವಾರ ಸಂಜೆ ಮೃತ ಹುಡುಗ, ಹುಡುಗಿ ಜೊತೆ ಮಾತನಾಡುತ್ತಿದ್ದ ವೇಳೆ ಆಕೆಯ ಬಾಯ್ ಫ್ರೆಂಡ್ ತನ್ನ ಸಂಗಡಿಗರೊಂದಿಗೆ ಬಂದು ಹುಡುಗನಿಗೆ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಹುಡುಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv