ಯಾದಗಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗುರುಮಠಕಲ್ (Gurumatkal) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (Baburao Chinchansur) ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ.
ಎಪ್ರಿಲ್ 16ರಂದು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಗಿಸಿ, ವಾಪಾಸ್ ಆಗುತ್ತಿದ್ದ ವೇಳೆ ಕಲಬುರಗಿಯ (Kalaburagi) ಆಕಾಶವಾಣಿ ಕೇಂದ್ರದ (Radio Station) ಬಳಿ ಅವರ ಕಾರು ಅಪಘಾತಕ್ಕೊಳಗಾಗಿತ್ತು. ಅಪಘಾತದಲ್ಲಿ ಚಿಂಚನಸೂರ್ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಮೂರು ಸರ್ಜರಿ ನಡೆಸಲಾಗಿತ್ತು. ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ನಾಮಪತ್ರ ಸಲ್ಲಿಕೆಗೂ ಬರಲು ಸಾಧ್ಯವಾಗಿರಲಿಲ್ಲ. ಅವರ ಪರವಾಗಿ ನಾಮಪತ್ರವನ್ನು ಪತ್ನಿ ಅಮರೇಶ್ವರಿ ಚಿಂಚನಸೂರ್ ಸಲ್ಲಿಸಿದ್ದರು. ಇದನ್ನೂ ಓದಿ: ನಮ್ಮೂರಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ: ಸಿದ್ದರಾಮಯ್ಯ
ಯಾದಗಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (Babu Rao Chinchansur) ಪರ ಪತ್ನಿ ಮತಯಾಚನೆ ವೇಳೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಆಗಿದ್ರೂ ನಾಮಪತ್ರ ಸಲ್ಲಿಕೆಗೆ ಚಿಂಚನಸೂರ್ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಿಂಚನಸೂರ್ ಪತ್ನಿ ಅಮರೇಶ್ವರಿ ಚಿಂಚನಸೂರ್ ಸೂಚಕರಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ (Nomination) ಸಲ್ಲಿಕೆ ನಂತರ ನಡೆದ ಬಹಿರಂಗ ಸಮಾವೇಶದಲ್ಲಿ ಅಮರೇಶ್ವರಿ ಚಿಂಚನಸೂರ್ ಪತಿಯ ಪರ ಮತಯಾಚನೆ ವೇಳೆ ಕಣ್ಣೀರು ಹಾಕಿ, ಸೆರಗೊಡ್ಡಿ, ಮತಯಾಚನೆ ಮಾಡಿದ್ದಾರೆ. ಚಿಂಚನಸೂರ್ ಅವರ ಮೇಲೆ ಇಷ್ಟೊಂದು ಜನರು ಪ್ರೀತಿ ಅಭಿಮಾನ ತೋರಿಸುತ್ತಿರುವುದು, ನನಗೆ ಮಾತುಗಳು ಬರುತ್ತಿಲ್ಲ ಎಂದು ಭಾವುಕರಾಗಿ, ಮತದಾರರು ಅವರಿಗೆ ಮತ ನೀಡಿ, ಗುರುಮಠಕಲ್ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕೆಂದು ಸೆರಗೊಡ್ಡಿ ಮತಯಾಚಿಸಿದರು.
ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಆಸ್ಪತ್ರೆಯಿಂದ ವೀಡಿಯೋ ಕಾಲ್ ಮೂಲಕ ಕಾಂಗ್ರೆಸ್ (Congress) ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲಿದ್ದು, ನಾನು ಮಂತ್ರಿಯಾಗುವುದು ಖಚಿತ ಎಂದರು. ಕಾಲಿಗೆ ಆದ ತೀವ್ರ ಗಾಯವು ಗುಣಮುಖವಾಗದ ಕಾರಣ ವೈದ್ಯರ ಸಲಹೆ ಮೇರೆಗೆ ಬರಲಾಗಲಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಲು ತಮಗೆ ಮತ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಅರಕಲಗೂಡಿನಲ್ಲಿ ದಿಢೀರ್ ಬೆಳವಣಿಗೆ – ಕೈ ಟಿಕೆಟ್ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿ?
ಬಿಜೆಪಿಯಲ್ಲಿ (BJP) ಹಿಂದುಳಿದವರಿಗೆ ಸೂಕ್ತ ಸ್ಥಾನಮಾನ ಸಿಗದ ಕಾರಣ ನನಗೆ ನೀಡಿದ್ದ ಎಂಎಲ್‌ಸಿ ಸ್ಥಾನ ಮತ್ತು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನ ಮತ್ತು ಅಮರೇಶ್ವರಿ ಚಿಂಚನಸೂರ್ ಅವರಿಗೆ ನೀಡಿದ್ದ ಕೇಂದ್ರ ಆಹಾರ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ನಾನೇ ಮಂತ್ರಿಯಾಗುತ್ತೇನೆ ಎಂದು ವೀಡಿಯೋ ಕಾಲ್ ಮೂಲಕ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು. ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯ ಮೇಲೆ ದರ್ಪ ಮೆರೆದ ಬಿಜೆಪಿ ಶಾಸಕ
ಯಾದಗಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಬುರಾವ್ ಚಿಂಚನಸೂರ್ (Baburao Chinchansur) ಅವರನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಅಭ್ಯರ್ಥಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಗುರುಮಠಕಲ್ (Gurumitkal) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರಚಾರ ಕಾರ್ಯ ಮುಗಿಸಿ, ಕಲಬುರಗಿಗೆ (Kalaburagi) ವಾಪಸ್ ಹೋಗುತ್ತಿದ್ದಾಗ ಶುಕ್ರವಾರ ತಡರಾತ್ರಿ ಕಾರು ಅಪಘಾತವಾಗಿತ್ತು. ಪರಿಣಾಮ ಚಿಂಚನಸೂರ್ ಅವರಿಗೆ ತೀವ್ರ ಗಾಯಗಳಾಗಿತ್ತು. ಅವರ ತಲೆ ಹಾಗೂ ಕಾಲಿನ ಭಾಗಕ್ಕೆ ಪೆಟ್ಟಾಗಿ, ರಕ್ತಸ್ರಾವವಾಗಿತ್ತು.
ಈ ಹಿನ್ನೆಲೆ ಕಳೆದ 2 ದಿನಗಳಿಂದ ಚಿಂಚನಸೂರ್ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಎದುರಾಳಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!
ಗುರುಮಠಕಲ್ ಬಿಜೆಪಿ ಅಭ್ಯರ್ಥಿ ಲಲಿತಾ ಅನಪೂರ, ಬಿಜೆಪಿ ಅಭ್ಯರ್ಥಿ ಶರಣಗೌಡ ಕಂದಕೂರು, ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಗಿರೀಶ್ ಮಟ್ಟಣ್ಣನವರ ಆಸ್ಪತ್ರೆಗೆ ಹೋಗಿ ಚಿಂಚನಸೂರ್ ಹಾಗೂ ಅವರ ಪತ್ನಿ ಅಮರೇಶ್ವರಿ ಚಿಂಚನಸೂರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕಣ್ಣೀರು
ಯಾದಗಿರಿ: ಕಾಂಗ್ರೆಸ್ (Congress) ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ (Baburao Chinchansur) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ.
ಯಾದಗಿರಿ (Yadagiri) ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ ಚಿಂಚನಸೂರ್. ಇವರು ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ರಾತ್ರಿ 12:30 ರ ಸುಮಾರಿಗೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಸವದಿ ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ: ರಮೇಶ್ ಜಾರಕಿಹೊಳಿ
ರಸ್ತೆಯ ಮಧ್ಯೆ ಇರುವ ಗುಂಡಿಯಲ್ಲಿ ಕಾರು ಹಾದುಹೋದ ಕಾರಣ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ. ಚಾಲಕ ನಿದ್ರೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದಕ್ಕೆ ಹೀಗೆ ಆಗಿದೆ ಎನ್ನಲಾಗಿದೆ. ಕಾರು ಬಿದ್ದ ರಭಸಕ್ಕೆ ಚಿಂಚನಸೂರ್ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ.
ಸ್ಥಳೀಯರ ಸಹಕಾರದಿಂದ ಚಿಂಚನಸೂರ್ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮತ್ತು ಗನ್‌ಮ್ಯಾನ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾರು-ಬಸ್ ನಡುವೆ ಡಿಕ್ಕಿ ; ಐವರ ಸಾವು
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಯಾದಗಿರಿ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ.
ಯಾದಗಿರಿ: ಚುನಾವಣಾ ಪ್ರಚಾರದ (Election Campaign) ವೇಳೆ ಜೆಡಿಎಸ್ ಅಭ್ಯರ್ಥಿ (JDS Candidate) ಟೀಕಿಸೋ ಭರದಲ್ಲಿ ಹಣ-ಹೆಂಡ ಸ್ವೀಕರಿಸುವಂತೆ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ (Congress Candidate) ಕರೆ ನೀಡಿ ಎಡವಟ್ಟು ಮಾಡಿಕೊಂಡಿರೋ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಮ್ಮನಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋಗಿದ್ದ ಬಾಬುರಾವ್ ಚಿಂಚನಸೂರ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು (Sharana Gowda Kandakuru) ಟಿಕಿಸೋ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಪಾಪದ ದುಡ್ಡು ಅವರ ಬಳಿ ತುಂಬಿ ತುಳುಕುತ್ತಿದೆ. ತಾಯಂದಿರೇ- ತಂಗಿಯಂದಿರೇ ಅವರ ಬಳಿ ಇರೋ ಪಾಪದ ದುಡ್ಡು ತಿನ್ನಿರಿ. ಒಲ್ಲೆ ಅನ್ನಬ್ಯಾಡ್ರಿ, ರೊಕ್ಕ ಹರೀತಿದೆ, ತುಂಬಿ ತುಳುಕಿದೆ. ಕುಡಿರಿ, ತಿನ್ನಿರಿ ಸಂತೋಷದಾಗ ಡ್ಯಾನ್ಸ್ ಮಾಡ್ರಿ. ಬಂದ ದುಡ್ಡನ್ನ ಜಾಡಿಸಬ್ಯಾಡ್ರಿ, ಲಕ್ಷಗಟ್ಟಲೇ ದುಡ್ಡು ತಿನ್ನಿರಿ. ಆದರೆ ವೋಟು ಮಾತ್ರ ನನಗೆ ಹಾಕ್ರಿ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ತಂದೆ ಎಮ್‍ಎಲ್‍ಎ ಆಗಿದ್ದಕ್ಕೆ ಈ ರೀತಿ ಆಗಿದೆ. ಇನ್ನೂ ಶರಣಗೌಡ ಎಮ್‍ಎಲ್‍ಎ ಆದರೆ ಎಲ್ಲಾ ಖಲ್ಲಾಸ್ ಎಂದು ಇದೇ ವೇಳೆ ಟೀಕಿಸಿದ್ದಾರೆ.
ಕಲಬುರಗಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ (Babu Rao Chinchansur) ಅವರು ಚಿಂಚನಸೂರ್ ಅಲ್ಲ. ಅವರು ಚಂಚಲ ಸೂರ ಎಂದು ಬಾಬುರಾವ್ ಚಿಂಚನಸೂರ್ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ (N Ravikumar) ವಾಗ್ದಾಳಿ ನಡೆಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಪಕ್ಷ ಎಲ್ಲವನ್ನೂ ಅವರಿಗೆ ನೀಡಿತ್ತು. ನಿಗಮ ಮಂಡಳಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಗೌರವದಿಂದ ನಡೆಸಿಕೊಂಡಿತ್ತು. ಆದರೂ ನಮಗೆ ಅವಮಾನ ಆಗಿದೆ ಎಂದು ಹೇಳಿ ಪಕ್ಷವನ್ನು ತ್ಯಜಿಸಿದರು ಎಂದರು.
ಬಾಬುರಾವ್ ಚಿಂಚನಸೂರ್ ಪಕ್ಷ ತ್ಯಜಿಸಿದ್ದರಿಂದ ಬಿಜೆಪಿಗೆ ಯಾವುದೇ ರೀತಿಯ ಹಾನಿಯಿಲ್ಲ. ಚುನಾವಣೆ ಬಂದಾಗಲೇ ಅವರಿಗೆ ಅವಮಾನ ಆಯಿತಾ? ಇಷ್ಟು ದಿನ ಪಕ್ಷದಲ್ಲಿ ಇದ್ದಾಗ ಅವರಿಗೆ ಏನೂ ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್
ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರು (Baburao Chinchansur) ಬಿಜೆಪಿ (BJP) ತಾಯಿ ಪಕ್ಷ ಎಂದು ಹೇಳಿದ್ದರು. ಈಗ ಅದೇ ತಾಯಿಗೆ ದ್ರೋಹ ಮಾಡಿ ಹೋಗಿದ್ದಾರೆ. ಇದರಿಂದ ಗುರಮಠಕಲ್ ಮತಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಕಾಡಾ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಗಿರೀಶ್ ಮಟ್ಟಣ್ಣನವರ್ (Girish Mattannavar) ಆರೋಪಿಸಿದ್ದಾರೆ.
ಯಾದಗಿರಿಯಲ್ಲಿ (Yadgiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರ್‍ಗೆ ಬಿಜೆಪಿ ಪಕ್ಷ ಎಲ್ಲಾ ಅಧಿಕಾರ ನೀಡಿತ್ತು. ಆದರೂ ಅಧಿಕಾರದ ದುರಾಸೆಗೆ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಕೋಲಿ ಸಮಾಜಕ್ಕೆ ಅನ್ಯಾಯವಾಗಿದೆ. ವಿಧಾನ ಪರಿಷತ್ ಸದಸ್ಯ ಸ್ಥಾನ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಪಡೆದು ಅಧಿಕಾರ ಅನುಭವಿಸಿ ಪಕ್ಷ ತ್ಯಜಿಸಿರುವುದು ನೋವಿನ ಸಂಗತಿ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಟೋಪಿ ಧರಿಸಿ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ಬಿಜೆಪಿ ಶಾಸಕ
ಶೋಷಿತ ವರ್ಗಗಳ ಏಳಿಗೆಗಾಗಿ ಕೆಲಸ ಮಾಡುತ್ತಾರೆ ಎಂದು ಅಧಿಕಾರ ನೀಡಿದ್ದರು. ಅವರ ಪತ್ನಿ ಅಮರೇಶ್ವರಿ ಚಿಂಚನಸೂರ್ ಅವರನ್ನು ಕೇಂದ್ರ ಆಹಾರ ನಿಗಮದ ನಿರ್ದೇಶಕರನ್ನಾಗಿ ಮಾಡಿದ್ದಾರೆ. ಅದನ್ನೆಲ್ಲ ಚಿಂಚನಸೂರ್ ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಜಿದ್ದಿಗೆ ಬಿದ್ದು ಸೋಲಿಸಿದ್ರು. ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸುವುದಾಗಿ ತೊಡೆತಟ್ಟಿ, ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. 15 ದಿನಗಳ ಹಿಂದೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್‌ನ (Congress) ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಚಿಂಚನಸೂರ್ ಸಿದ್ದರಾಮಯ್ಯ, ಡಿಕೆಶಿ ಹಾವು ಮುಂಗುಸಿಯಂತಿದ್ದಾರೆ. ರಾಹುಲ್ ಗಾಂಧಿ ಅವರು ಬಚ್ಚಾ ಎಂದು ಹಿಯಾಳಿಸಿದ್ದರು. ಆದರೆ ನೈತಿಕತೆ ಇಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಯಾವ ಮುಖವನ್ನು ಇಟ್ಟುಕೊಂಡು ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ಕೈ ನಾಯಕರಿಗೆ ಕುಟುಕಿದ್ದಾರೆ.
ಶಾಸಕ ಹಾಗೂ ಸಚಿವರಾಗಿದ್ದಾಗ ಬಾಬುರಾವ್ ಚಿಂಚನಸೂರ್ ವರ್ಗಾವಣೆ ದಂಧೆ ಮಾಡಿ, ಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ. ಒಂದೊಂದು ಹುದ್ದೆಗೆ ಐದು ಅಧಿಕಾರಿಗಳನ್ನು ನೇಮಿಸಿ ಪ್ರತಿಯೊಬ್ಬ ಅಧಿಕಾರಿಗಳಿಂದಲೂ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾದಗಿರಿ: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿಯೇ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ (Baburao Chinchansur) ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಕೋಲಿ ಸಮುದಾಯ ಹೆಚ್ಚಾಗಿರುವ ಕಲ್ಯಾಣ ಕರ್ನಾಟಕ ಭಾಗದ ಕೆಲ ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲುವ ಕನಸು ಕಂಡಿದ್ದ ಬಿಜೆಪಿ (BJP) ಪಾಳಯಕ್ಕೆ, ಚಿಂಚನಸೂರ್ ಬಹುದೊಡ್ಡ ಶಾಕ್ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕೋಲಿ ಸಮಾಜದ ಏಕೈಕ ಪ್ರಭಾವಿ ಮುಖಂಡ ಸಪ್ತ ಖಾತೆಗಳ ಸಚಿವನೆಂದೇ ಖ್ಯಾತಿ ಹೊಂದಿದ್ದ ಬಾಬುರಾವ್ ಚಿಂಚನಸೂರ್ ಸೋಮವಾರ ಸಂಜೆ ಏಕಾಏಕಿ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಚಿಂಚನಸೂರ್ ಕಮಲಕ್ಕೆ ಕೈಕೊಟ್ಟು ʼಕೈʼ ಹಿಡಿಯಲು ಮುಂದಾಗಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿದ್ಯಾಕೆ?: ಬಿಜೆಪಿಯಲ್ಲಿ ಬಾಬುರಾವ್ ಚಿಂಚನಸೂರ್ ಅವರನ್ನು ಕಡೆಗಣಿಸಲಾಗಿತ್ತು. ಸರ್ಕಾರಿ ಕಾರ್ಯಾಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಹಿಂದೆ ತಮ್ಮನ್ನು ಬಿಟ್ಟು ವಸತಿ ಶಾಲೆ ಉದ್ಘಾಟನೆ ಮಾಡಲು ಮುಂದಾಗಿದ್ದ ಸಚಿವ ರಾಮುಲುಗೆ ಘೇರಾವ್ ಹಾಕಿ ಪ್ರತಿಭಟನೆಯನ್ನು ಮಾಡಿದ್ದರು. ನಿಗಮ ಮಂಡಳಿ ಅಧ್ಯಕ್ಷ ಹಾಗೂ ಎಮ್‌ಎಲ್ಸಿ ಆಗಿದ್ದರೂ ಕಡೆಗಣಿಸುತ್ತಿರುವುದಕ್ಕೆ ಅಸಮಾಧಾನಗೊಂಡಿದ್ದ ಚಿಂಚನಸೂರ್, ಇದೇ ಕಾರಣಕ್ಕೆ ಫೆ. 13ರಂದು ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರಿಂದ ಮನವೊಲಿಕೆ ಮಾಡಲಾಗಿತ್ತು. ಹೀಗಾಗಿ ಚುನಾವಣೆ ಘೋಷಣೆ ಆದಮೇಲೆ ರಾಜೀನಾಮೆ ನೀಡುವ ಪ್ಲ್ಯಾನ್ ಮಾಡಿದ್ದರು. ಆದರೆ ನಿನ್ನೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಎಮ್ಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾ. 8ರಂದು ಗುರುಮಠಕಲ್‌ನಲ್ಲಿ ನಡೆದಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರೋಡ್ ಶೋನಲ್ಲಿ ಮಾಜಿ ಸಿಎಂ ಬಿಎಸ್‌ವೈ ಅವರಿಂದಲೇ ಚಿಂಚನಸೂರ್ ಗುರುಮಠಕಲ್ ಅಭ್ಯರ್ಥಿ ಎಂದು ಘೋಷಿಸಿದ್ದರು. ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ 12 ದಿನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೇ ಸೋಲು ಖಚಿತ ಎನ್ನುವುದನ್ನು ಅರಿತ ಚಿಂಚನಸೂರ ಈ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಆಂತರಿಕ ಸರ್ವೆ ಪ್ರಕಾರ ಗುರುಮಠಕಲ್‌ನಲ್ಲಿ ಚಿಂಚನಸೂರ್ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಖಚಿತ ಎನ್ನಲಾಗುತ್ತಿತ್ತು. ಇದೇ ಕಾರಣಕ್ಕೆ ಟಿಕೆಟ್ ಡೌಟ್ ಎನ್ನುವ ಊಹಾಪೋಹವೂ ಎದ್ದಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಕಂಡು ಬಿಜೆಪಿಗೆ ಚಿಂಚನಸೂರ್ ಗುಡ್ ಬೈ ಹೇಳಿದ್ದಾರೆ.
ಚಿಂಚನಸೂರ್ ಅವಶ್ಯಕತೆ ಕೈ ಪಾಳಯಕ್ಕೆ ಅನಿವಾರ್ಯ?: ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಕೋಲಿ ಸಮಾಜದ ಮತಗಳೇ ನಿರ್ಣಾಯಕ. ಅದರಲ್ಲೂ ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ (Priyank Kharge) ಸ್ಪರ್ಧೆ ಮಾಡಲಿರುವ ಚಿತ್ತಾಪುರದಲ್ಲಿ ಕೋಲಿ ಸಮುದಾಯವೇ ನಿರ್ಣಾಯಕ. ಬಹುಸಂಖ್ಯಾತ ಕೋಲಿ ಸಮುದಾಯದ ಮತದಾರರು ಇರುವ ಚಿತ್ತಾಪುರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದ ಚಿಂಚನಸೂರ ಗ್ರೌಂಡ್ ಲೆವಲ್‌ನಿಂದ ಕೆಲಸ ಮಾಡಿ, ಕಾರ್ಯಕರ್ತರ ಪಡೆ ಕಟ್ಟಿದ್ದಾರೆ.
ಹೀಗಾಗಿ ಪ್ರಿಯಾಂಕ್ ಖರ್ಗೆ ಗೆಲ್ಲಬೇಕಾದ್ರೆ ಚಿಂಚನಸೂರ್ ಕಾಂಗ್ರೆಸ್‌ಗೆ (Congress) ಅನಿವಾರ್ಯ. ಇತ್ತ ಬಿಜೆಪಿ ನಾಯಕರೂ ಸಹಿತ ಈ ಬಾರಿ ಶತಾಯಗತಾಯ ಪ್ರಿಯಾಂಕ್ ಖರ್ಗೆ ಸೋಲಿಸಬೇಕು ಅನ್ನೋ ಜಿದ್ದಿಗೆ ಬಿದ್ದಿದ್ದಾರೆ. ಆದರೆ ಕಾಂಗ್ರೆಸ್ ತಮ್ಮ ಮಾನಸ ಪುತ್ರನನ್ನ ಗೆಲ್ಲಿಸಲು ಚಿಂಚನಸೂರ್ ಅಗತ್ಯತೆ ಇದ್ದಿದ್ದರಿಂದ ಕೆಲವು ಕಂಡೀಷನ್‌ಗಳನ್ನ ಹಾಕಿ ಈಗ ಕಾಂಗ್ರೆಸ್ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಇದೇ 25ರಂದು ಮತ್ತೆ ಕೈ ಹಿಡಿಯೋದು ಪಕ್ಕಾ ಆಗಿದೆ. ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈದಾಪುರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅಭಿನಂದನಾ ಬೃಹತ್ ಸಮಾವೇಶವಿದ್ದು, ಅಂದೇ ʼಕೈʼ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿಎಂ ಇಬ್ರಾಹಿಂಗೆ ದೃಷ್ಠಿ ತೆಗೆದು ನೋಟಿನ ಸುರಿಮಳೆ ಸುರಿಸಿದ ಯುವಕ!
5 ಬಾರಿ ಶಾಸಕರಾಗಿದ್ದ ಚಿಂಚನಸೂರ್ : ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಸೇರಿ 5 ಬಾರಿಯೂ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ 2019ರಲ್ಲಿ ಕಾಂಗ್ರೆಸ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಚಿಂಚನಸೂರ್, ಖರ್ಗೆ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2020ರಲ್ಲಿ ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಚಿಂಚನಸೂರ್ 2022 ಕೊನೆಯಲ್ಲಿ ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೆಲ್ಲದರ ನಡುವೆ ಲೋಕಸಭಾ ಚುನಾವಣೆ ವೇಳೆ ಖರ್ಗೆ ವಿರುದ್ಧ ಪುತ್ರ ವ್ಯಾಮೋಹದ ಆರೋಪ ಮಾಡಿ, ಜಿದ್ದಿಗೆ ಬಿದ್ದು ಪ್ರಚಾರ ಮಾಡಿದ್ದ ಚಿಂಚನಸೂರ್ ಈಗ ಮತ್ತೇ ಖರ್ಗೆ ಮೂಲಕವೇ ಕೈ ಕುಲುಕಲು ಮುಂದಾಗಿದ್ದಾರೆ. ಇದನ್ನೂ ಓದಿ:ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂಎಲ್‍ಸಿ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ
2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಮತ್ತು ಒಳನಾಡು ಜಲಸಾರಿಗೆ ಬಂದರು ಸಚಿವರಾಗಿದ್ದ ಅವರು, 2019ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಸೇರ್ಪಡೆ ನಂತರ 2020ರಲ್ಲಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿ 2022 ಕೊನೆಯಲ್ಲಿ ಸಿಎಂ ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾದ ಎಮ್ಎಲ್ಸಿ ಸ್ಥಾನಕ್ಕೆ ಬಿಜೆಪಿಯಿಂದ ಅವಿರೋಧ ಆಯ್ಕೆಯಾದರು.
ಬೆಂಗಳೂರು: ಬಿಜೆಪಿಗೆ ಒಂದೇ ತಿಂಗಳಲ್ಲಿ ಎರಡನೇ ಘರ್ ವಾಪಸಿ ಶಾಕ್ ಸಿಕ್ಕಿದೆ. ಎಂಎಲ್‍ಸಿ ಪುಟ್ಟಣ್ಣ ಕಾಂಗ್ರೆಸ್ ಸೇರಿದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಎಮ್‍ಎಲ್‍ಸಿ ಬಾಬೂರಾವ್ ಚಿಂಚನಸೂರ್(Baburao Chinchansur) ಸಹ ಬಿಜೆಪಿ ತೊರೆದಿದ್ದಾರೆ. ಸೋಮವಾರ ಮಧ್ಯಾಹ್ನ ಸಭಾಪತಿ ಬಸವರಾಜ ಹೊರಟ್ಟಿಯವರನ್ನು (Basavaraj Horatti) ಬೆಂಗಳೂರಿನಲ್ಲಿ ಭೇಟಿ ಮಾಡಿ, ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪರಿಷತ್ ಸ್ಥಾನಕ್ಕೆ ಸ್ವಯಿಚ್ಛೆಯಿಂದ ರಾಜೀನಾಮೆ ಸಲ್ಲಿಸುವುದಾಗಿ ಕೈಬರಹದಲ್ಲಿ ಬರೆದ ರಾಜೀನಾಮೆಯನ್ನು ಸಭಾಪತಿ ಅಂಗೀಕರಿಸಿದ್ದಾರೆ.
ಮಂಗಳವಾರ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಗುರುಮಿಠಕಲ್ ಕ್ಷೇತ್ರದಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಅನುಮಾನದ ಹಿನ್ನೆಲೆಯಲ್ಲಿ ಚಿಂಚನಸೂರ್ ಮರಳಿ ಕಾಂಗ್ರೆಸ್ ಸೇರಲಿದ್ದಾರೆ. ಇದನ್ನೂ ಓದಿ: ದೇಶದ ಬಗ್ಗೆ ರಾಹುಲ್ ಗಾಂಧಿಯ ಯಾವ ಬಗೆಯ ಬದ್ಧತೆ?- ಬೊಮ್ಮಾಯಿ ವ್ಯಂಗ್ಯ
ಕಲಬುರಗಿ ಸೇರಿದಂತೆ ಕಲ್ಯಾಣ ಜಿಲ್ಲೆಗಳಲ್ಲಿ ಕೋಲಿ ಸಮಾಜದರು ಅಪಾರ ಸಂಖ್ಯೆಯಲ್ಲಿದ್ದಾರೆ. ಕೋಲಿ ಸಮಾಜದ ಪ್ರಭಾವಿ ನಾಯಕರಾಗಿರುವ ಬಾಬುರಾವ್ ಚಿಂಚನಸೂರ್, ಬಿಜೆಪಿ ತೊರೆದು ಕಾಂಗ್ರೆಸ್ (Congress) ಕದ ತಟ್ಟಿರುವುದರಿಂದ ಕಲ್ಯಾಣ ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಲ ತಿಂಗಳ ಹಿಂದೆಯೇ ಬಿಜೆಪಿ (BJP) ತೊರೆಯಲು ಮುಂದಾಗಿದ್ದ ಬಾಬುರಾವ್ ಚಿಂಚನಸೂರ್ ಅವರನ್ನು ಸಿಎಂ ಬೊಮ್ಮಾಯಿ ಮನವೊಲಿಸಿ ಪಕ್ಷದಲ್ಲಿ ಉಳಿಯುವಂತೆ ಮಾಡಿದ್ದರು. ಬಳಿಕ ಫೆ.14 ರಂದು ಖರ್ಗೆ ಪುತ್ರನನ್ನು ಸೋಲಿಸುವುದಾಗಿ ಬಿಜೆಪಿ ಕಚೇರಿಯಲ್ಲಿ ಚಿಂಚನಸೂರ್ ಸುದ್ದಿಗೋಷ್ಠಿ ನಡೆಸಿ ತೊಡೆ ತಟ್ಟಿದ್ದರು.
ಚಿಂಚನಸೂರ್ 2018 ರ ಆಗಸ್ಟ್ ನಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಸೋಲಿಸಲು ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್ ಜತೆ ಆಪರೇಷನ್ ಮಾಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಕಾಂಗ್ರೆಸ್‍ನಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಲ್ಲೊಬ್ಬರಾಗಿದ್ದ ಚಿಂಚನಸೂರ್ ಈಗ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಯವರ ಪ್ರಯತ್ನದಿಂದ ಮರಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಿಎಂ ಇಬ್ರಾಹಿಂಗೆ ದೃಷ್ಠಿ ತೆಗೆದು ನೋಟಿನ ಸುರಿಮಳೆ ಸುರಿಸಿದ ಯುವಕ!
ಬೆಂಗಳೂರು: ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಬೇಕಿದ್ದ ಉಪಚುನಾವಣೆಗೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಯವರಿಂದ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.