ಯಾದಗಿರಿ: ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಕಾರ್ಯಕರ್ತರ ಆಕ್ರೋಶವನ್ನು ಎದುರಿಸಿದ ಘಟನೆ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಅರಿಯಲು ಬಂದಿದ್ದ ಚಿಂಚನಸೂರ್, ನಾನು ಗೆದ್ದರೆ ನೀರಿನ ಸಮಸ್ಯೆ ಬಗೆಹರಿಸುತ್ತೇನೆ. ಗ್ರಾಮದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರದಲಿದ್ದಾಗ ಏನು ಮಾಡಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!
ಗ್ರಾಮಸ್ಥನೊಬ್ಬ ಚಿಂಚನಸೂರ್ ಉತ್ತರಕ್ಕೆ ಪಟ್ಟು ಹಿಡಿದು, ಈ ಬಾರಿ ಚುನಾವಣೆಯಲ್ಲಿ ನನ್ನ ತಾಕತ್ತು ತೋರಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾನೆ. ಇದರಿಂದ ವಿಚಲಿತರಾದ ಸಂಸದ ನಿನ್ನ ವೋಟು ಯಾರಿಗಾದರೂ ಹಾಕು, ನನಗೆ ನಿನ್ನ ಮತ ಬೇಡ ಎಂದು ಗದರಿದ್ದಾರೆ.
-ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ ಆಹ್ವಾನಿಸಿಲ್ಲ ಅಂತ ಸುಳ್ಳು ಹೇಳಿಕೆ -ಸಾಕ್ಷಿ ಸಮೇತ ಬಾಬುರಾವ್‍ಗೆ ಟಾಂಗ್ ಕೊಟ್ಟ ಜಿಲ್ಲಾಡಳಿತ
ಯಾದಗಿರಿ: ಜಿಲ್ಲೆಯ ಬಂದಳ್ಳಿಯ ಹೊರ ವಲಯದಲ್ಲಿ ನಿರ್ಮಾಣಗೊಂಡಿರುವ ಏಕಲವ್ಯ ವಸತಿ ಶಾಲೆ ಉದ್ಘಾಟನ ಸಮಾರಂಭದಲ್ಲಿ, ರಾಜಕೀಯ ಸ್ವ ಪ್ರತಿಷ್ಠೆಗಾಗಿ ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಬಡ ಮಕ್ಕಳ ಶಿಕ್ಷಣಕ್ಕೆ ಕೊಳ್ಳಿಯಿಟ್ಟಿದ್ದಾರೆ.
ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಾಬುರಾವ್ ಚಿಂಚನಸೂರ್, ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು ಅವರ ಕಾರನ್ನು ಹೈಡ್ರಾಮಾ ಅಡ್ಡಗಟ್ಟಿ ಮಾಡಿದರು. ರಾಮುಲು ಕೂಡ ತಮ್ಮ ಪಕ್ಷದ ಹಿರಿಯರು ಅನ್ನೋ ಕಾರಣಕ್ಕೆ ಶಾಲೆ ಉದ್ಘಾಟನೆ ರದ್ದು ಮಾಡಿಕೊಂಡು, ತೆರಳುತ್ತಿದ್ದ ಮಾರ್ಗ ಮಧ್ಯೆಯೇ ವಾಹನ ತಿರುಗಿಸಿಕೊಂಡು ಯಾದಗಿರಿ ನಗರಕ್ಕೆ ವಾಪಸು ಆಗಿದ್ದರು. ಇದನ್ನೂ ಓದಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!
ಇದು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ನಾನು ಸಾಕಷ್ಟು ಹೋರಾಟ ಮಾಡಿ ಈ ಶಾಲೆಯನ್ನು ತಂದಿದ್ದೇನೆ. ಆದರೆ ಜಿಲ್ಲಾಡಳಿತ ನನಗೆ ಒಂದು ಮಾತು ತಿಳಿಸದೆ, ಉದ್ಘಾಟನೆ ಮಾಡಲು ಮುಂದಾಗಿದೆ. ಅಧಿಕಾರಿಗಳು ನನಗೆ ಅವಮಾನ ಮಾಡಿದ್ದಾರೆ ಎನ್ನುವುದು ಬಾಬುರಾವ್‍ರ ಗಂಭೀರ ಆರೋಪವಾಗಿದೆ.
ಬಾಬುರಾವ್ ಚಿಂಚನಸೂರ್ ವರ್ತನೆಯಿಂದ ಕಂಗಾಲಾದ ಜಿಲ್ಲಾಡಳಿತ, ತಪ್ಪು ನಡೆದಿರುವ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಜಿಲ್ಲಾಡಳಿತ ತನಿಖೆಯಲ್ಲಿ ಅಸಲಿ ಸತ್ಯ ಹೊರಬಿದ್ದಿದ್ದು, ಬಾಬುರಾವ್ ಚಿಂಚನಸೂರ್ ರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲಾಗಿತ್ತು ಎಂಬ ಅಂಶ ಸಾಭೀತಾಗಿದೆ. ಶಾಲೆಯ ಆಮಂತ್ರಣ ಪತ್ರಿಕೆಯಲ್ಲಿ ಬಾಬುರಾವ್ ಚಿಂಚನಸೂರ್ ಹೆಸರು ಕೂಡ ಇದೆ. ಅಕ್ಟೋಬರ್ 8ರಂದು ಸ್ವತಃ ಅಧಿಕಾರಿಗಳೇ ಬಾಬುರಾವ್ ಚಿಂಚನಸೂರ ಕಲಬುರಗಿಯ ನಿವಾಸಕ್ಕೆ ತೆರಳಿ, ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಮರೆತ 7.31 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದ ರೈಲ್ವೇ ಭದ್ರತಾ ಪಡೆ
ಆದರೆ ಸಿಂದಗಿ ಉಪ ಚುನಾವಣೆಯಲ್ಲಿ ಬಾಬುರಾವ್ ಬ್ಯುಸಿ ಆಗಿರುವುದರಿಂದಾಗಿ ಅವರು ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳನ್ನು ಸೆಕ್ಯೂರಿಟಿ ಗಾರ್ಡ್ ಮನೆಯೊಳಗೆ ಬಿಡದೆ. ತಾನೇ ಪತ್ರಿಕೆ ತೆಗೆದುಕೊಂಡು ಅಧಿಕಾರಿಗಳ ಡೈರಿಗೆ ಸಹಿ ಸಹ ಹಾಕಿದ್ದು, ವಾಟ್ಸ್ ಆಪ್ ಮೂಲಕ ಪತ್ರಿಕೆ ಚಿಂಚನಸೂರಿಗೆ ಹಾಕುವುದಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಫೋಟೋ ಸಹ ಕ್ಲಿಕ್ಕಿಸಿದ್ದಾರೆ. ಈ ಸತ್ಯವನ್ನು ಸಾಕ್ಷಿ ಸಮೇತ ಜಿಲ್ಲಾಡಳಿತ ಹೊರಹಾಕಿದೆ.
ಯಾದಗಿರಿ: ಮಾಜಿ ಸಿಎಂ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದು, ಪಕ್ಷ ಸೇರ್ಪಡೆಯಾದ ನಂತರ ಕೇಂದ್ರ ಸಚಿವರಾಗುತ್ತಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೊಸ ಬಾಂಬ್ ಸಿಡಿಸಿದ್ದಾರೆ.
ಯಾದಗಿರಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಜೆಡಿಎಸ್ ಶಾಸಕ ಜೆ.ಟಿ.ದೇವೇಗೌಡ ಸೇರಿದಂತೆ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ. ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಅವರು ಕೂಡ ಬಿಜೆಪಿ ಸೇರಲಿದ್ದಾರೆಂದು ಚಿಂಚನಸೂರ ಹೇಳಿದ್ದಾರೆ.
ಇದೇ ವೇಳೆ ನೀವು ನಿಮ್ಮ ಹಿಂಬಾಲಕ ಚೇಲಾಗಳ ಮಾತುಗಳನ್ನು ಕೇಳುತ್ತೀರಾ. ಅವರಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮತ್ತೆ ಚುನಾವಣೆ ಹೇಗೆ ಗೆಲ್ಲುತ್ತಿಯಾ ನಾನು ನೋಡುತ್ತೆನೆಂದು ಬಾಬುರಾವ್ ಚಿಂಚನಸೂರಗೆ, ಕಬ್ಬಲಿಗ ಸಮಾಜದ ಮುಖಂಡ ಜಿ.ವೆಂಕಟೇಶ್ ಸಾವಾಲ್ ಹಾಕಿದ್ದಾರೆ. ಚಿಂಚನಸೂರ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ವೆಂಕಟೇಶ್ ಚಿಂಚನಸೂರಗೆ ತರಾಟೆಗೆ ತೆಗೆದುಕೊಂಡು ಅವಾಜ್ ಹಾಕಿದರು. ನಿಮ್ಮ ಮನೆ ಬಾಗಿಲಿಗೆ ಬಂದರೆ ತಾಸುಗಟ್ಟಲೆ ಕಾಯಿಸಿ, ಹೊರಗೆ ತಳ್ಳುತ್ತೀರಾ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ: ಕಾಂಗ್ರೆಸ್ ರೆಬೆಲ್ ನಾಯಕ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ. ನಾನೇ ಅವರಿಗೆ ರಾಜೀನಾಮೆ ನೀಡಲು ಹೇಳಿದ್ದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, ಇಂದು ನನಗೆ ಹಬ್ಬದ ಡಬಲ್ ಖುಷಿಯಾಗುತ್ತಿದೆ. ಉಮೇಶ್ ಜಾದವ್ ಅವರೇ ಈ ಬಾರಿಯ ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನನ್ನನ್ನು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದರು. ಇದೀಗ ಉಮೇಶ್ ಜಾಧವ್ ಎದುರು ಖರ್ಗೆ ಅವರು ಸೋಲುತ್ತಾರೆ. ಚುನಾವಣೆಯಲ್ಲಿ ಉಮೇಶ್ ಜಾಧವ್ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಒಬ್ಬ ಶಾಸಕನ ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಹಣ ನೀಡಿ ಖರೀದಿಸಿದ್ದೇವೆ ಎಂದು ಹೊಟ್ಟೆ ಕಿಚ್ಚಿಗೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಆರೋಪ ಸಾಬೀತಾದ್ರೆ ನಮ್ಮ ಅಭ್ಯರ್ಥಿ (ಉಮೇಶ್ ಜಾಧವ್) ನೇಣು ಹಾಕಿಕೊಳ್ಳುತ್ತಾರೆ ಎಂದರು.