Tag: ಬಾಬಿ ಸಿಂಹ

  • ರಘು ಕೋವಿ ಚಿತ್ರದಲ್ಲಿ ಬಹುಭಾಷಾ ನಟ ಬಾಬಿ ಸಿಂಹ

    ರಘು ಕೋವಿ ಚಿತ್ರದಲ್ಲಿ ಬಹುಭಾಷಾ ನಟ ಬಾಬಿ ಸಿಂಹ

    ಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಬಾಬಿ ಸಿಂಹ (Bobby Simha) ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಜಿಗರ್‌ಥಂಡ’ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಈ ಪ್ರತಿಭಾವಂತ ಸ್ಟಾರ್ 777 ಚಾರ್ಲಿ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಇದೀಗ ಬಾಬಿ ಸಿಂಹ ರಘು ಕೋವಿ ನಿರ್ದೇಶನದಲ್ಲಿ ತಯಾರಾಗುತ್ತಿದೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

    ಬರಹಗಾರರಾಗಿ ಖ್ಯಾತಿ ಪಡೆದಿರುವ ರಾಜ್ಯ ಪ್ರಶಸ್ತಿ ವಿಜೇತ ರಘು ಕೋವಿ (Raghu Kovi) ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ‘ದಿಲ್ ಮಾರ್’ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರುವ ರಾಮ್ ಗೆ ರಘು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ರಾಮ್ , ರಘು ಕೋವಿ ನಿರ್ದೇಶನದಲ್ಲಿ ನಟಿಸುತ್ತಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ. ಹಂಸಲೇಖ ಕಥಾ ಕಣಜದಿಂದ ಸ್ಯಾಂಡಲ್ ವುಡ್ ಪರಿಚಿತರಾದ ರಘು ಕೋವಿ, ಕೃಷ್ಣಲೀಲಾ ಅತ್ಯುತ್ತಮ ಬರವಣಿಗೆಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಎಸ್.ಎಸ್. ರಾಜಶೇಖರ್ ,  ಕೆ.ವಿ.ರಾಜ್, ಶಶಾಂಕ್, ಉಪೇಂದ್ರ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ರಘು ಕೋವಿ ದುಡಿದಿದ್ದಾರೆ. ಇದೀಗ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕಿಳಿದಿದ್ದಾರೆ.

    ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರ್ತಿರುವ ಈ ಸಿನಿಮಾದಲ್ಲಿ ರಾಮ್ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಏನೂ ಅನ್ನೋದನ್ನು‌ ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾಗೆ ಓ ಮೈ ಗಾಡ್-2 ನಿರ್ಮಾಪಕ ನಿಕುಲ್ ದೇಸಾಯಿ ಕನ್ನಡ ನಿರ್ಮಾಣ ಸಂಸ್ಥೆ ಜೊತೆ ಕೈ ಜೋಡಿಸಿ ಹಣ ಹಾಕುತ್ತಿದ್ದಾರೆ.

    ನೈಜ ಘಟನೆಯಾಧಾರಿತ ಕಥಾಹಂದರ ಹೊಂದಿರುವ  ಸಿನಿಮಾಗೆ ಯುವರತ್ನ, ರಾಜಕುಮಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ಎ.ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಸದ್ಯ ಶೂಟಿಂಗ್ ನಲ್ಲಿ‌ ನಿರತರಾಗಿರುವ ಚಿತ್ರತಂಡ ಶೀಘ್ರದಲ್ಲಿಯೇ ಟೈಟಲ್ ರಿವೀಲ್ ಮಾಡಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರಿ ಭೂಮಿ ಒತ್ತುವರಿ – ಪ್ರಕಾಶ್ ರಾಜ್‌ಗೆ ನೋಟಿಸ್

    ಸರ್ಕಾರಿ ಭೂಮಿ ಒತ್ತುವರಿ – ಪ್ರಕಾಶ್ ರಾಜ್‌ಗೆ ನೋಟಿಸ್

    ಚೆನ್ನೈ: ಬಂಗಲೆ ನಿರ್ಮಿಸಲು ಕೊಡೈಕೆನಾಲ್‌ನ ವಿಲ್‌ಪಟ್ಟಿ ಪಂಚಾಯತ್‌ನಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ (Encroachment) ಮಾಡಿರುವ ಆರೋಪದ ಮೇಲೆ ನಟ ಪ್ರಕಾಶ್ ರಾಜ್ (Prakash Raj) ಹಾಗೂ ಬಾಬಿ ಸಿಂಹ (Bobby Simha) ಅವರಿಗೆ ಸ್ಥಳೀಯ ಆಡಳಿತ ನೋಟಿಸ್ ಜಾರಿ ಮಾಡಿದೆ.

    ಬಂಗಲೆ ನಿರ್ಮಾಣ ಹಾಗೂ ಒತ್ತುವರಿ ಕುರಿತಂತೆ ವಿವರಣೆ ನೀಡುವಂತೆ ಕೊಡೈಕೆನಾಲ್ (Kodaikanal) ಉಪವಲಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರಾಜ್ ಹಾಗೂ ಬಾಬಿ ಸಿಂಹ ಅವರಿಗೆ ನೋಟಿಸ್ ನೀಡಿದ್ದಾರೆ. ಪ್ರಕಾಶ್ ರಾಜ್ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೇ ಭಾರತೀಪುರಂ ಅಣ್ಣಾನಗರ ಗ್ರಾಮದಲ್ಲಿ ಬಂಗಲೆ ನಿರ್ಮಿಸಿದ್ದಾರೆ ಎನ್ನಲಾಗಿದೆ.

    ಪೇತುಪರೈನಲ್ಲಿರುವ ಜಾಗದಲ್ಲಿ ಬಾಬಿ ಅವರು ಬಂಗಲೆ ನಿರ್ಮಿಸಿಕೊಂಡಿದ್ದಾರೆ. ಆದರೆ 2,500 ಚದರ ಅಡಿಯಲ್ಲಿ ಬಂಗಲೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದ ಅವರು 4,000 ಚದರ ಅಡಿ ಪ್ರದೇಶದಲ್ಲಿ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

    ಇಬ್ಬರು ನಟರೂ ಸಾರ್ವಜನಿಕ ರಸ್ತೆಗಳನ್ನು ಅತಿಕ್ರಮಿಸಿ ತಮ್ಮ ಬಂಗಲೆಗಳಿಗೆ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಸೈಬರ್ ಕ್ರೈಂ ಠಾಣೆ ಹೆಡ್ ಕಾನ್‌ಸ್ಟೇಬಲ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾರ್ಲಿ ತಂಡ ಸೇರಿದ ಖ್ಯಾತ ತಮಿಳು ನಟ

    ಚಾರ್ಲಿ ತಂಡ ಸೇರಿದ ಖ್ಯಾತ ತಮಿಳು ನಟ

    ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ 777 ಚಾರ್ಲಿ ಕುರಿತು ಚಿತ್ರತಂಡ ಬಿಗ್ ಅನೌನ್ಸ್‍ಮೆಂಟ್ ಮಾಡಿದ್ದು, ತಮಿಳಿನ ಖ್ಯಾತ ನಟರೊಬ್ಬರು ಚಿತ್ರತಂಡವನ್ನು ಸೇರಿದ್ದಾರೆ.

    777 ಚಾರ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇದರ ಜೊತೆಗೆ ಅಪ್‍ಡೇಟ್‍ಗಳು ಸಹ ಸಿಗುತ್ತಿವೆ. ಇತ್ತೀಚೆಗೆ ರಾಜ್.ಬಿ.ಶೆಟ್ಟಿ ಹಾಗೂ ಡ್ಯಾನಿಶ್ ಸೇಟ್ ಚಿತ್ರತಂಡ ಸೇರಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಇದೀಗ ಮತ್ತೊಂದು ಬಹುದೊಡ್ಡ ಅನೌನ್ಸ್‍ಮೆಂಟ್ ಹೊರ ಬಿದ್ದಿದ್ದು, ತಮಿಳಿನ ಖ್ಯಾತ ನಟ ಬಾಬಿ ಸಿಂಹ 777 ಚಾರ್ಲಿ ಚಿತ್ರತಂಡವನ್ನು ಸೇರಿದ್ದಾರೆ. ಅವರ ಹುಟ್ಟುಹಬ್ಬದ ದಿನದಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಹಿರಂಗಪಡಿಸಿದೆ.

    ನವೆಂಬರ್ 4ರಂದು ಚಿತ್ರತಂಡ ಈ ಕುರಿತು ಮುನ್ಸೂಚನೆ ನೀಡಿತ್ತು. ಇದೇ ನವೆಂಬರ್ 6ರಂದು ಬೆಳಗ್ಗೆ 7.30ಕ್ಕೆ ಒಂದು ದೊಡ್ಡ ಅನೌನ್ಸ್‍ಮೆಂಟ್ ನಮ್ಮ ಕಡೆಯಿಂದ. ನಿರೀಕ್ಷಿಸಿ ಎಂದು ಪುಷ್ಕರ್ ಫಿಲಂಸ್‍ನ ಅಧೀಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅದರಂತೆ ಇಂದು ಚಿತ್ರತಂಡ ವಿಷಯವನ್ನು ಬಹಿರಂಗಪಡಿಸಿದೆ. ಬಾಬಿ ಸಿಂಹ ಅವರ ಹುಟ್ಟುಹಬ್ಬದ ಅಂಗವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ.

    ಬಾಬಿ ಸಿಂಹ ಖಡಕ್ ಲುಕ್ ನೀಡಿರುವ ಪೋಸ್ಟರ್ ಹಂಚಿಕೊಂಡಿದ್ದು, ಪಕ್ಕದಲ್ಲಿ ರಕ್ಷಿತ್ ಶೆಟ್ಟಿ ಕೂಡ ನಿಂತಿದ್ದಾರೆ. ಅಲ್ಲದೆ ಇಬ್ಬರ ಪಕ್ಕ ಕಂದು ಹಾಗೂ ಕಪ್ಪು ಬಣ್ಣದ ಎರಡು ನಾಯಿಗಳು ಸಹ ಇವೆ. ಖ್ಯಾತ ನಟ ಬಾಬಿ ಸಿಂಹ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಅವರಿಗೆ ನಮ್ಮ 777 ಚಾರ್ಲಿ ಕುಟುಂಬಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇವೆ ಎಂದು ಬರೆಯಲಾಗಿದೆ. ನಟ ರಕ್ಷಿತ್ ಶೆಟ್ಟಿ ಸಹ ಪೋಸ್ಟ್ ಮಾಡಿ ಬಾಬಿ ಸಿಂಹ ಅವರಿಗೆ ಶುಭಾಶಯ ತಿಳಿಸಿದ್ದಾರೆ. 777 ಚಾರ್ಲಿ ಸಿನಿಮಾದಲ್ಲಿ ಬಾಬಿ ಸಿಂಹ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

     

    View this post on Instagram

     

    ಖ್ಯಾತ ನಟ ಬಾಬಿ ಸಿಂಹ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಅವರಿಗೆ ನಮ್ಮ #777ಚಾರ್ಲಿ ಕುಟುಂಬಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇವೆ. இனிய பிறந்தநாள் வாழ்த்துக்கள் பாபி சிம்ஹா, #777சார்லி குடும்பத்திற்கு உங்களை அன்புடன் வரவேற்கிறோம் #777Charlie, a crew that is growing stronger with each splendid addition???? Wishing you the happiest birthday and an even happier welcome to the #777Charlie family BobbySimha. We’re elated to have you on board as #Vamsinadhan ???? @rakshitshetty @pushkara_mallikarjunaiah @kiranraj_k @rajbshetty @iamsangeethasringeri #pushkarfilms @paramvah_studios #777CharlieWelcomesBobbySimha #777charlie

    A post shared by PushkarFilms (@pushkarfilms) on

    ಕಿರಣ್‍ರಾಜ್.ಕೆ ನಿರ್ದೇಶನದಲ್ಲಿ 777 ಚಾರ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಬಾಬಿ ಸಿಂಹ ಅವರ ನಿರ್ಧಿಷ್ಟ ಪಾತ್ರ ದಕ್ಷಿಣ ಭಾರತದವರು, ಉತ್ತರದಲ್ಲಿ ನೆಲೆಸಿರುವವರದ್ದಾಗಿದೆ. ಹೀಗಾಗಿ ಈ ಬಗ್ಗೆ ಕಿರಣ್ ನನ್ನ ಬಳಿ ಕೇಳಿದಾಗ ಬಾಬಿ ಉತ್ತಮ ಆಯ್ಕೆ ಎಂದು ಹೇಳಿದೆ. ಹೀಗಾಗಿ ಅವರು ನಮ್ಮ ತಂಡ ಸೇರಿದರು. ನಿರ್ದೇಶಕ ಕಿರಣ್ ಹಾಗೂ ನಾನು 5 ವರ್ಷಗಳ ಸ್ನೇಹಿತರು. ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೇಟಿಯಾದಾಗ ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೆವು. ಚಾರ್ಲಿ ಸಿನಿಮಾ ಮೂಲಕ ಅದು ಸಾಕಾರಗೊಂಡಿದೆ ಎಂದು ಕಿರಣ್ ಅವರ ಸ್ನೇಹದ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

    ಬಾಬಿ ಇತ್ತೀಚೆಗೆ ಕೊಕೈಕನಾಲ್ ಚಿತ್ರದಲ್ಲಿ ತಮ್ಮ ಭಾಗದ ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. ಇದೀಗ ಚಾರ್ಲಿ ತಂಡ ಸೇರಿದ್ದಾರೆ. ಅವರ ಈ ಅತಿಥಿ ಪಾತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಬಾಬಿ ಚಿತ್ರ ತಂಡ ಸೇರಿರುವುದರಿಂದ ಸಿನಿಮಾವನ್ನು ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಇದೇ ವೇಳೆ ರಕ್ಷಿತ್ ಶೆಟ್ಟಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ನಿರ್ದೇಶಕರು ಹಾಗೂ ಚಿತ್ರದ ಕೆಲ ಸದಸ್ಯರ ತಂಡ ಪ್ರಸ್ತುತ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಲೊಕೇಶನ್ ಹುಡುಕುತ್ತಿದೆ. ನವೆಂಬರ್ 20ರಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದೇವೆ. ಸಿನಿಮಾದ ಕೊನೇಯ 20 ನಿಮಿಷಗಳ ಚಿತ್ರೀಕರಣ ಬಾಕಿ ಉಳಿದಿದೆ. ಅಂತಿಮ ದೃಶ್ಯಗಳಿಗೆ ಹಿಮ ಆವರಿಸಿರಬೇಕು. ಹೀಗಾಗಿ ಅದನ್ನು ಕೊನೆಗೆ ಚಿತ್ರೀಕರಿಸಲಾಗುತ್ತಿದೆ. 2021ರ ಮಾರ್ಚ್ ವೇಳೆಗೆ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ರಕ್ಷಿತ್ ಶೆಟ್ಟಿ ಚಿತ್ರದ ಬಿಡುಗಡೆ ಕುರಿತು ವಿವರಿಸಿದ್ದಾರೆ. ಬಾಬಿ ಅವರು ಚಾರ್ಲಿ ತಂಡ ಸೇರಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದ್ದು, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.