Tag: ಬಾಬಿ ಡಿಯೋಲ್

  • ಡಕಾಯಿತನ ಗೆಟಪ್‌ನಲ್ಲಿ ಬಂದ ಬಾಲಯ್ಯ

    ಡಕಾಯಿತನ ಗೆಟಪ್‌ನಲ್ಲಿ ಬಂದ ಬಾಲಯ್ಯ

    ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಡಾಕು ಮಹಾರಾಜ್’ (Daaku Maharaaj) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಡಕಾಯಿತನ ಗೆಟಪ್‌ನಲ್ಲಿ ಬಾಲಯ್ಯ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ತನಗಿಂತ 19 ವರ್ಷ ಚಿಕ್ಕ ಉದ್ಯಮಿ ಜೊತೆ ಅಮೀಷಾ ಪಟೇಲ್‌ ಸುತ್ತಾಟ

    ಇದು ರಾಜ್ಯವೇ ಇಲ್ಲದೇ ಯುದ್ಧ ಮಾಡಿದ ರಾಜನ ಕಥೆ. ಸಾವಿಗೆ ನಡುಕ ಹುಟ್ಟಿಸಿದ ಮಹಾರಾಜನ ಕಥೆಯಿದು ಎಂದು ಬಾಲಯ್ಯ ಅವರ ಪಾತ್ರಕ್ಕೆ ಇಂಟ್ರೊಡಕ್ಷನ್ ನೀಡಲಾಗಿದೆ. ಕಪ್ಪು ಬಣ್ಣದ ಧಿರಿಸಿನಲ್ಲಿ ಡಕಾಯಿತನ ಗೆಟಪ್‌ನಲ್ಲಿ ಖಡಕ್ ಆಗಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಾಬಿ ಡಿಯೋಲ್ (Bobby Deol) ಅವರು ವಿಲನ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತನಗಿಂತ 19 ವರ್ಷ ಚಿಕ್ಕ ಉದ್ಯಮಿ ಜೊತೆ ಅಮೀಷಾ ಪಟೇಲ್‌ ಸುತ್ತಾಟ

    ‘ಡಾಕು ಮಹಾರಾಜ್’ (Daaku Maharaaj) ಸಿನಿಮಾ ಮುಂದಿನ ಸಂಕ್ರಾಂತಿ ಜ.12ರಂದು ರಿಲೀಸ್ ಆಗಲಿದೆ. ಈ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶನ ಮಾಡಿದ್ದಾರೆ.

  • ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

    ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

    ಮಿಳಿನ ಸ್ಟಾರ್ ನಟ ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ಕುರಿತು ಇದೀಗ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ವಿಜಯ್ ಕಡೆಯದಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಈ ವಿಚಾರವನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ:Kantara Chapter 1: ರಿಷಬ್ ಶೆಟ್ಟಿ ತಂದೆ ಪಾತ್ರದಲ್ಲಿ ಮೋಹನ್‌ಲಾಲ್?

    ವಿಜಯ್ ನಟನೆಯ 69ನೇ ಸಿನಿಮಾದಲ್ಲಿ ‘ಅನಿಮಲ್’ ಖ್ಯಾತಿಯ ನಟ ಬಾಬಿ ಡಿಯೋಲ್ (Bobby Deol) ಕಾಣಿಸಿಕೊಳ್ಳಲಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆಯೇ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಯಾವ ಪಾತ್ರ ಮಾಡಲಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ವಿಜಯ್‌ಗೆ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ.

     

    View this post on Instagram

     

    A post shared by KVN Productions (@kvn.productions)

    ಅಂದಹಾಗೆ, ‘ದಳಪತಿ 69’ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್ ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ಸಂಭಾವನೆ.

    ಇನ್ನೂ ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ ದಿ ಗೋಟ್ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

    2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸಿ ಕೊಡಬೇಕಾಗಿದೆ.

  • ವಿಜಯ್ ಕೊನೆಯ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್

    ವಿಜಯ್ ಕೊನೆಯ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್

    ಮಿಳಿನ ಸ್ಟಾರ್ ನಟ ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ಕುರಿತು ಇದೀಗ ಇಂಟರೆಸ್ಟಿಂಗ್‌ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ವಿಜಯ್ ಕಡೆಯದಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್ (Bobby Deol) ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಹೀರೋ ಆದ ‘ಶ್ರೀಗೌರಿ’ ಸೀರಿಯಲ್ ವಿಲನ್- ‘ಪೀಟರ್’ ಚಿತ್ರಕ್ಕೆ ಡಾಲಿ, ವಿಜಯ್ ಸೇತುಪತಿ ಸಾಥ್

    ವಿಜಯ್ ನಟನೆಯ 69ನೇ ಸಿನಿಮಾದಲ್ಲಿ ‘ಅನಿಮಲ್’ (Animal) ಖ್ಯಾತಿಯ ನಟ ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟನನ್ನು ಚಿತ್ರತಂಡ ಸಂಪರ್ಕಿಸಿದೆ. ವಿಜಯ್ ಸಿನಿಮಾದಲ್ಲಿ ನಟಿಸುವ ಕುರಿತು ಬಾಬಿ ಡಿಯೋಲ್‌ ಜೊತೆ ಒಂದು ಹಂತದ ಮಾತುಕತೆಯಾಗಿದ್ದು, ಕಥೆ ಮತ್ತು ಪಾತ್ರದ ಕುರಿತು ಚರ್ಚೆಯಾಗಿದೆ ಎನ್ನಲಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ‘ದಳಪತಿ 69’ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್‌ ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ಸಂಭಾವನೆ.

    ಇನ್ನೂ ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ ‘ದಿ ಗೋಟ್’ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

    2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸಿ ಕೊಡಬೇಕಾಗಿದೆ. ಹೀಗಾಗಿ ಶೀಘ್ರದಲ್ಲೇ ‘ದಳಪತಿ 69’ ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್ ಪಡೆದುಕೊಳ್ತಿರುವ 275 ಕೋಟಿ ಸಂಭಾವನೆ ಸುದ್ದಿಯಂತೂ ಇನ್ನುಳಿದ ಸ್ಟಾರ್ ನಟರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿಯವರೆಗೆ 200 ಕೋಟಿ ಸಂಭಾವನೆಯನ್ನ ಭಾರತದಲ್ಲಿ ಸ್ಟಾರ್ ನಟರು ನೇರವಾಗಿ ಪಡೆದಿರಲಿಲ್ಲ. ಶೇರ್ ರೂಪದಲ್ಲಿ ಬಂದಿರೋ ಆದಾಯದಲ್ಲಿ ಲೆಕ್ಕ ಚುಕ್ತಾ ಮಾಡಿಕೊಳ್ತಿದ್ದರು. ಅದನ್ನೇ ಸಂಭಾವನೆಯಾಗಿ ಲಾಭ ಗಳಿಸಿಸುತ್ತಿದ್ದ ಹಲವರು ನಟರ ಉದಾಹರಣೆ ಇದೆ. ಆದರೆ ಈಗ ವಿಜಯ್ ಭರ್ತಿ 275 ಕೋಟಿ ಮೊತ್ತದ ರೂಪದಲ್ಲೇ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೀಡು ಮಾಡಿದೆ.

  • ಬಾಲಿವುಡ್‌ನತ್ತ ಕನ್ನಡದ ನಟ- ಬಾಬಿ ಡಿಯೋಲ್ ಜೊತೆ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ

    ಬಾಲಿವುಡ್‌ನತ್ತ ಕನ್ನಡದ ನಟ- ಬಾಬಿ ಡಿಯೋಲ್ ಜೊತೆ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ

    ನ್ನಡದ ಪ್ರತಿಭಾನ್ವಿತ ನಟ ರಾಜ್ ಬಿ ಶೆಟ್ಟಿಗೆ (Raj B Shetty) ಬೇಡಿಕೆ ಹೆಚ್ಚಾಗಿದೆ. ಮಾಲಿವುಡ್ ಬಳಿಕ ಬಾಲಿವುಡ್‌ನಿಂದ (Bollywood) ಕನ್ನಡದ ಈ ನಟನಿಗೆ ಬುಲಾವ್ ಬಂದಿದೆ. ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ.

    ಮಮ್ಮುಟ್ಟಿ ಜೊತೆ ನಟಿಸಿ ಫಳಗಿದ ಮೇಲೆ ರಾಜ್ ಬಿ ಶೆಟ್ಟಿಗೆ ಮತ್ತಷ್ಟು ಅವಕಾಶಗಳು ಅರಸಿ ಬರುತ್ತಿವೆ. ಸದ್ಯ ಬಾಲಿವುಡ್ ಡೈರೆಕ್ಟರ್ ಅನುರಾಗ್ ಕಶ್ಯಪ್ (Anurag Kashyap) ನಿರ್ದೇಶನದಲ್ಲಿ ನಟಿಸಲು ರಾಜ್‌ರನ್ನು ಕೇಳಲಾಗಿದೆ. ಇದನ್ನೂ ಓದಿ:ಪತ್ರಕರ್ತ ಹರೀಶ್ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಸರ್ಜಾ ಚಾಲನೆ

    ಅವರ ಸಿನಿಮಾದಲ್ಲಿ ಕ್ಯಾಮಿಯೋ ಪಾತ್ರವಾಗಿದ್ರೂ ಅದಕ್ಕೆ ಪ್ರಾಮುಖ್ಯತೆ ಇದ್ದು, ನಟಿಸಲು ರಾಜ್ ಬಿ ಶೆಟ್ಟಿ ಓಕೆ ಎಂದಿದ್ದಾರೆ. ‘ಅನಿಮಲ್‌’ ಖ್ಯಾತಿಯ ನಟ ಬಾಬಿ ಡಿಯೋಲ್ (Bobby Deol) ಜೊತೆ ರಾಜ್‌ ಬಿ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಸದ್ಯದಲ್ಲೇ ಅನುರಾಗ್ ಕಶ್ಯಪ್ ಸಿನಿಮಾ ಟೈಟಲ್ ಮತ್ತು ತಾರಾಬಳಗದ ಬಗ್ಗೆ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

    ಅಂದಹಾಗೆ, ಅರ್ಜುನ್ ಜನ್ಯ ನಿರ್ದೇಶನದ ’45’ ಎಂಬ ಸಿನಿಮಾದಲ್ಲಿ ಶಿವಣ್ಣ ಮತ್ತು ಉಪೇಂದ್ರ ಜೊತೆ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಮಾಹಿತಿ ಸಿಗಲಿದೆ.

  • Kanguva Trailer: ಅಬ್ಬರಿಸಿ ಬೊಬ್ಬಿರಿದ ಸೂರ್ಯ, ಬಾಬಿ ಡಿಯೋಲ್

    Kanguva Trailer: ಅಬ್ಬರಿಸಿ ಬೊಬ್ಬಿರಿದ ಸೂರ್ಯ, ಬಾಬಿ ಡಿಯೋಲ್

    ಕಾಲಿವುಡ್ ನಟ ಸೂರ್ಯ ನಟನೆಯ ‘ಕಂಗುವ’ (Kanguva Film) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹೀರೋ ಸೂರ್ಯ, ವಿಲನ್‌ ಆಗಿ ಬಾಬಿ ಡಿಯೋಲ್ (Bobby Deol) ಅಬ್ಬರಿಸಿದ ರೀತಿ ಮತ್ತು ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಝಲಕ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು 7ನೇ ಬಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ

    ದ್ವೀಪವೊಂದರಲ್ಲಿ ವಾಸಿಸುವ ವಿವಿಧ ಬುಡಕಟ್ಟುಗಳ ಜನರ ಆಚಾರ, ವಿಚಾರಗಳ ಜೊತೆ ಗುಂಪು ಗಂಪುಗಳ ನಡುವಿನ ಸಂಘರ್ಷದ ಕಥೆಯನ್ನು ಟ್ರೈಲರ್‌ನಲ್ಲಿ ಸಣ್ಣ ಝಲಕ್ ತೋರಿಸಿದ್ದಾರೆ. ಭೀಕರ ಯುದ್ಧದಲ್ಲಿ ಸೂರ್ಯ ಮತ್ತು ಬಾಬಿ ಡಿಯೋಲ್‌ ಜುಗಲ್‌ಬಂದಿ ಅದ್ಭುತವಾಗಿ ಮೂಡಿ ಬಂದಿದೆ.

     

    View this post on Instagram

     

    A post shared by Bobby Deol (@iambobbydeol)

    ಮೊಸಳೆಗಳಿಂದ ಕಚ್ಚಿಸಿಕೊಂಡರು ಕಂಗುವ ಪಾತ್ರಧಾರಿ ಸೂರ್ಯ ಮಾಸ್ ಆಗಿ ಎದ್ದು ಬರುವ ಲುಕ್ ಸಖತ್ ಆಗಿದೆ. ನಿನ್ನ ರಕ್ತ ಮತ್ತು ನನ್ನ ರಕ್ತ ಒಂದೇ ಎಂದು ಸೂರ್ಯ ಹೇಳುವ ಡೈಲಾಗ್ ಖಡಕ್ ಆಗಿ ಬಂದಿದೆ. ಬಾಬಿ ಡಿಯೋಲ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

    ಶಿವ ನಿರ್ದೇಶನದಲ್ಲಿ ಸೂರ್ಯ ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಸದ್ಯ ಅದ್ಧೂರಿ ಸಿನಿಮಾ ಮೇಕಿಂಗ್, ಸೂರ್ಯ ಮತ್ತು ಬಾಬಿ ಡಿಯೋಲ್ ಲುಕ್‌ನಿಂದ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. 300 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿರುವ ‘ಕಂಗುವ’ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಅಬ್ಬರಿಸಲಿದೆ.

  • ‘ಕಂಗುವ’ ಚಿತ್ರದ ದೃಶ್ಯವೊಂದರಲ್ಲಿ ಹತ್ತು ಸಾವಿರ ಜನ ಜ್ಯೂನಿಯರ್ಸ್

    ‘ಕಂಗುವ’ ಚಿತ್ರದ ದೃಶ್ಯವೊಂದರಲ್ಲಿ ಹತ್ತು ಸಾವಿರ ಜನ ಜ್ಯೂನಿಯರ್ಸ್

    ಮಿಳಿನ ಸ್ಟಾರ್ ನಟ ಸೂರ್ಯ (Suriya) ಸೂರರೈ ಪೊಟ್ರು, ಜೈ ಭೀಮ್ ಸಿನಿಮಾಗಳ ಸಕ್ಸಸ್ ನಂತರ ಈಗ ‘ಕಂಗುವ’ (Kanguva) ಸಿನಿಮಾದ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಸಿನಿಮಾದ ದೃಶ್ಯವೊಂದಕ್ಕೆ ಹತ್ತು ಸಾವಿರ ಜನ ಜ್ಯೂನಿಯರ್ಸ್ ಬಳಕೆಯಾಗಿದ್ದಾರಂತೆ. ಈ ದೃಶ್ಯದಲ್ಲಿ ಬಾಬಿ ಡಿಯೋಲ್ (Bobby Deol)  ಮತ್ತು ಸೂರ್ಯ ಎದುರಾಗಿದ್ದಾರೆ. ಇದೊಂದು ಹೊಡೆದಾಟದ ಸನ್ನಿವೇಶವಂತೆ.

    ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ನಟಿಸಿರುವ ಬಗ್ಗೆ ಸೂರ್ಯ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ. ಅದರ ಪೋಸ್ಟರ್ ಕೂಡ ನಟ ಹಂಚಿಕೊಂಡಿದ್ದಾರೆ.

    ಇದೀಗ ‘ಕಂಗುವ’ ಸಿನಿಮಾದಲ್ಲಿ ಡಿಫರೆಂಟ್ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಎರಡು ತದ್ವಿರುದ್ಧ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಂದರಲ್ಲಿ ಪುರಾತನ ಕಾಲದ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದರೆ, ಇನ್ನೊಂದರಲ್ಲಿ ಗನ್ ಹಿಡಿದು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡರಲ್ಲಿ ಒಂದು ಪಾತ್ರಕ್ಕೆ ನೆಗೆಟಿವ್ ಶೇಡ್ ಇದ್ಯಾ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ಪೋಸ್ಟರ್‌ ಮೆಚ್ಚುಗೆಯ ಜೊತೆ ಚರ್ಚೆ ಕೂಡ ಶುರುವಾಗಿದೆ.

    ‘ಕಂಗುವ’ ಚಿತ್ರವು ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

     

    ಈ ಸಿನಿಮಾದಲ್ಲಿ ಸೂರ್ಯಗೆ ನಾಯಕಿಯಾಗಿ ದಿಶಾ ಪಟಾನಿ (Disha Patani) ನಟಿಸಿದ್ದಾರೆ. ‘ಅನಿಮಲ್’ (Animal) ಚಿತ್ರದ ವಿಲನ್ ಬಾಬಿ ಡಿಯೋಲ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 10 ಭಾಷೆಗಳಲ್ಲಿ ಈ ವರ್ಷ ಸಿನಿಮಾ ರಿಲೀಸ್ ಆಗುವ ಬಗ್ಗೆ ಸೂರ್ಯ ಮಾಹಿತಿ ನೀಡಿದ್ದಾರೆ. ಆದರೆ ಎಂಬುದು ನಿಗದಿ ಪಡಿಸಿಲ್ಲ. ಈ ಚಿತ್ರ 3D ವರ್ಷನ್‌ನಲ್ಲಿಯೂ ಕೂಡ ರಿಲೀಸ್ ಆಗುತ್ತಿದೆ.

  • ಅವಕಾಶವಿಲ್ಲದ ದಿನಗಳನ್ನು ಸ್ಮರಿಸಿದ ಸನ್ನಿ- ಕಣ್ಣೀರಿಟ್ಟ ಬಾಬಿ ಡಿಯೋಲ್

    ಅವಕಾಶವಿಲ್ಲದ ದಿನಗಳನ್ನು ಸ್ಮರಿಸಿದ ಸನ್ನಿ- ಕಣ್ಣೀರಿಟ್ಟ ಬಾಬಿ ಡಿಯೋಲ್

    ಬಾಲಿವುಡ್ ನಟರಾದ ಸನ್ನಿ ಡಿಯೋಲ್ (Sunny Deol) ಮತ್ತು ಬಾಬಿ ಡಿಯೋಲ್ (Bobby deol) ಇತ್ತೀಚೆಗೆ ಕಪಿಲ್ ಶರ್ಮಾ (Kapil Sharma Show) ನಿರೂಪಣೆಯ ಶೋಗೆ ಅತಿಥಿಗಳಾಗಿ ಬಂದಿದ್ದಾರೆ. ಈ ವೇಳೆ, ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ರೂ ಅವಕಾಶ ಇಲ್ಲದೇ ಎದುರಿಸಿದ ಸಂಕಷ್ಟಗಳ ಬಗ್ಗೆ ‘ಗದರ್ 2’ ನಟ ಸನ್ನಿ ವಿವರಿಸಿದ್ದಾರೆ. ಸಹೋದರನ ಮಾತಿಗೆ ಬಾಬಿ ಡಿಯೋಲ್ ಕಣ್ಣೀರಿಟ್ಟಿದ್ದಾರೆ.

    ನಾವು 1960ರ ದಶಕದಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಎಷ್ಟೇ ಪ್ರಯತ್ನಪಟ್ಟರೂ ಕೂಡ ನಮಗೆ ಗೆಲುವು ಸಿಗುತ್ತಿರಲಿಲ್ಲ. ಇತ್ತೀಚೆಗೆ ನನ್ನ ಮಗನ ಮದುವೆ ನಡೆಯಿತು. ಗದರ್ 2 ಚಿತ್ರದ ಸಕ್ಸಸ್ ಕಂಡಿತ್ತು. ಅಪ್ಪನ ಸಿನಿಮಾ ಕೂಡ ಹಿಟ್ ಆಯ್ತು. ಅನಿಮಲ್ ಚಿತ್ರಕ್ಕೆ ಉತ್ತಮ ಪ್ರಶಂಸೆ ಸಿಕ್ಕಿತ್ತು. ಇಷ್ಟೆಲ್ಲಾ ಹಾರೈಕೆ ಹೇಗೆ ಬಂತೋ ಗೊತ್ತಿಲ್ಲ ಎಂದು ಸನ್ನಿ ಡಿಯೋಲ್ ಮಾತನಾಡುವಾಗ ಬಾಬಿ ಡಿಯೋಲ್ ಕಣ್ಣೀರು ಸುರಿಸಿದ್ದಾರೆ. ಸಹೋದರನ ಮಾತಿಗೆ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದಾರೆ. ಇದನ್ನೂ ಓದಿ:ಆಯೋಜಕರ ಯಡವಟ್ಟು- ‘ಗಜ’ ಚಿತ್ರದ ನಟಿ ಬೇಸರ

    ‘ಗದರ್ 2’ (Gadar 2) ಚಿತ್ರದ ನಂತರ ಸನ್ನಿಗೆ ಬಾಲಿವುಡ್‌ನಲ್ಲಿ ಉತ್ತಮ ಅವಕಾಶ ಅರಸಿ ಬರುತ್ತಿದೆ. ‘ಅನಿಮಲ್’ (Animal) ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ಮಿಂಚಿದ ಮೇಲೆ ಅದೃಷ್ಟದ ಬಾಗಿಲು ತೆರೆದಿದೆ. 8ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತ ಸಿನಿಮಾಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

  • ರಣ್‌ಬೀರ್‌ಗೆ ವಿಲನ್ ಆದ್ಮೇಲೆ ಬಾಬಿ ಡಿಯೋಲ್‌ಗೆ ಬಂಪರ್ ಆಫರ್ಸ್

    ರಣ್‌ಬೀರ್‌ಗೆ ವಿಲನ್ ಆದ್ಮೇಲೆ ಬಾಬಿ ಡಿಯೋಲ್‌ಗೆ ಬಂಪರ್ ಆಫರ್ಸ್

    ಬಾಲಿವುಡ್ ನಟ ಬಾಬಿ ಡಿಯೋಲ್‌ಗೆ (Bobby Deol) ಚಿತ್ರರಂಗದಲ್ಲಿ ಅದೃಷ್ಟ ಖುಲಾಯಿಸಿದೆ. ಸಿನಿಮಾ ಆಫರ್ಸ್ ಇಲ್ಲದೇ ತೆರೆಮರೆಯಲ್ಲಿದ್ದ ನಟನಿಗೆ ‘ಅನಿಮಲ್’ (Animal) ಚಿತ್ರದಲ್ಲಿ ಅವಕಾಶ ಸಿಕ್ಕಿದ್ದ ನಂತರ ಅವರಿಗೆ ಬೇಡಿಕೆ ಜಾಸ್ತಿ ಆಗಿದೆ. ಆ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

    ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಅನಿಮಲ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಖಡಕ್ ವಿಲನ್ ಆಗಿ ನಟಿಸಿದ್ದರು. ರಣ್‌ಬೀರ್ ಮತ್ತು ಬಾಬಿ ಜುಗಲ್‌ಬಂದಿ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈಗ ಹಿಂದಿ ಮಾತ್ರವಲ್ಲ ಬೇರೆ ಬೇರೆ ಭಾಷೆಗಳಿಂದ ನಟನಿಗೆ ನಟಿಸಲು ಕರೆ ಬರುತ್ತಿದೆ.

    ಸೂರ್ಯ ನಟನೆಯ ‘ಕಂಗುವ’ ಸಿನಿಮಾದಲ್ಲಿ ಬಾಬಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆಶ್ರಮ್ ಸೀಸನ್ 4, ಬಾಲಯ್ಯ ನಟನೆಯ 109ನೇ ಚಿತ್ರದಲ್ಲಿ ಬಾಬಿ ಅಬ್ಬರಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಕೂಡ ಅಧಿಕೃತ ಮಾಹಿತಿ ನೀಡಿದೆ.

    ಶಾರುಖ್ ಖಾನ್ ಪುತ್ರ ಆರ್ಯನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಬಾಬಿ ಡಿಯೋಲ್ ನಟಿಸಲಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಸಿನಿಮಾದ ಭಾಗವಾಗಿದ್ದಾರೆ. ಬಹುಕೋಟಿ ವೆಚ್ಚದ ‘ರಾಮಾಯಣ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀರೋಗಳಿಗಿಂತ ಬಾಬಿ ಡಿಯೋಲ್ ಕಾಲ್‌ಶೀಟ್ ಸಿಗುವುದು ಈಗ ಕಷ್ಟವಾಗಿದೆ.

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟ ಮುಂದಿನ ದಿನಗಳಲ್ಲಿ ಯಾವ ಸಿನಿಮಾ ಅವರ ಕೈ ಹಿಡಿಯಲಿದೆ ಎಂಬುದನ್ನು ಕಾಯಬೇಕಿದೆ.

  • ‘ಕಂಗುವ’ ಚಿತ್ರದ ಬಳಿಕ ಅಜಿತ್ ಕುಮಾರ್ ಸಿನಿಮಾದಲ್ಲಿ ಬಾಬಿ ಡಿಯೋಲ್

    ‘ಕಂಗುವ’ ಚಿತ್ರದ ಬಳಿಕ ಅಜಿತ್ ಕುಮಾರ್ ಸಿನಿಮಾದಲ್ಲಿ ಬಾಬಿ ಡಿಯೋಲ್

    ಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ (Animal) ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ತಮಿಳಿನ ಸ್ಟಾರ್ ಅಜಿತ್ ಕುಮಾರ್ ಸಿನಿಮಾದಲ್ಲಿ ಬಾಬಿ ಡಿಯೋಲ್ (Bobby Deol) ನಟಿಸಲು ಕರೆ ಬಂದಿದೆ.

    ಬಾಲಿವುಡ್ ನಟ ಬಾಬಿ ಡಿಯೋಲ್ ಇದೀಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ಸಿಂಗ್ ಶುರು ಮಾಡಿದ್ದಾರೆ. ಅನಿಮಲ್ ಚಿತ್ರದ ಸಕ್ಸಸ್ ನಂತರ ತಮಿಳಿನ ನಟ ಸೂರ್ಯ (Suriya) ನಟನೆಯ ಕಂಗುವ (Kanguva) ಚಿತ್ರದಲ್ಲಿ ಬಾವಿ ಡಿಯೋಲ್ ನಟಿಸಿ ಬಂದಿದ್ದರು. ಈಗ ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly Film) ಚಿತ್ರದಲ್ಲಿ ನಟಿಸಲು ನಟ ಬಾಬಿಗೆ ಕೇಳಲಾಗಿದೆ.

    ಅಜಿತ್ ನಟನೆಯ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟಿಸಲು ಚಿತ್ರತಂಡ ಬಾಬಿ ಡಿಯೋಲ್ ಜೊತೆ ಒಂದು ಸುತ್ತಿನ ಚರ್ಚೆ ನಡೆಸಿದೆ. ಬಾಬಿ ಡಿಯೋಲ್‌ ಕೂಡ ಕಥೆ ಕೇಳಿ ಥ್ರಿಲ್‌ ಆಗಿದ್ದಾರಂತೆ. ಆದರೆ ಚಿತ್ರತಂಡ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ:ಮಗಳಿಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾದ ಶಾರುಖ್ ಖಾನ್

    ‘ಕಂಗುವ’ ಸಿನಿಮಾದಲ್ಲಿ ಬಾಬಿ ಡಿಯೋಲ್ ಲುಕ್ ನೋಡಿ ಅಭಿಮಾನಿಗಳು ಬೆರಗಾಗಿದ್ದರು. ಈ ಬೆನ್ನಲ್ಲೇ ಅಜಿತ್ ಕುಮಾರ್ ಸಿನಿಮಾಗಾಗಿ ನಟನಿಗೆ ಮಣೆ ಹಾಕಿದ್ದಾರೆ. ಒಂದು ವೇಳೆ, ಅವರು ಒಪ್ಪಿದ್ದೇ ಆಗಿದ್ದಲ್ಲಿ ಅಭಿಮಾನಿಗಳಿಗೆ ಮನರಂಜನೆ ಗ್ಯಾರಂಟಿ.

  • ಆಲಿಯಾ ಭಟ್‌ಗೆ ವಿಲನ್ ಆದ ಬಾಬಿ ಡಿಯೋಲ್

    ಆಲಿಯಾ ಭಟ್‌ಗೆ ವಿಲನ್ ಆದ ಬಾಬಿ ಡಿಯೋಲ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್‌ಗೆ (Ranbir Kapoor) ವಿಲನ್ ಆಗಿ ಗೆದ್ದ ಮೇಲೆ ಆಲಿಯಾ ಭಟ್‌ಗೆ ಮುಂದೆ ಅಬ್ಬರಿಸಲು ಬಾಬಿ ಡಿಯೋಲ್ (Bobby Deol) ರೆಡಿಯಾಗಿದ್ದಾರೆ. ರಣ್‌ಬೀರ್ ಪತ್ನಿ ಮುಂದೆ ವಿಲನ್ ಮೆರೆಯಲು ಪಣ ತೊಟ್ಟಿದ್ದಾರೆ. ಇದನ್ನೂ ಓದಿ:ಶಿಂಧೆ ಬಣದ ಶಿವಸೇನೆ ಸೇರಿದ ನಟ ಗೋವಿಂದ್

    ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಮುಂದೆ ಖಡಕ್ ಖಳನಟನಾಗಿ ಗೆದ್ದು ಬೀಗಿದ್ದರು. ಚಿತ್ರದ ಗೆಲುವಿಗೆ ಬಾಬಿ ಡಿಯೋಲ್ ಕೂಡ ಕಾರಣವಾಗಿದ್ದರೂ ಹೀಗಿರುವಾಗ ಅವರಿಗೆ ಇದೀಗ ಬಂಪರ್ ಚಾನ್ಸ್‌ವೊಂದು ಸಿಕ್ಕಿದೆ.

    ಯಶ್ ರಾಜ್ ಫಿಲ್ಮ್ಸ್ ಹೊಸ ಗೂಢಚಾರಿ ಸರಣಿ ‘ಸ್ಪೈ ವರ್ಸ್’ ಸಿನಿಮಾದಲ್ಲಿ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ವಾಘ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಮುಂದೆ ಬಾಬಿ ಡಿಯೋಲ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ಬಾಬಿ ಡಿಯೋಲ್ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಆಲಿಯಾ ಭಟ್ ನಟಿಸಲಿರುವ ಈ ಚಿತ್ರಕ್ಕೆ ಆದಿತ್ಯಾ ಚೋಪ್ರಾ ನಿರ್ದೇಶನ ಮಾಡುತ್ತಿದ್ದಾರೆ. ಆಗಸ್ಟ್‌ನಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

    ಅಂದಹಾಗೆ, ‘ಅನಿಮಲ್’ ಚಿತ್ರದ ಸಕ್ಸಸ್ ನಂತರ ಬಾಲಿವುಡ್ ಮಾತ್ರವಲ್ಲ ತೆಲುಗಿನಿಂದ ಕೂಡ ಬಾಬಿ ಡಿಯೋಲ್ ಅವಕಾಶಗಳು ಅರಸಿ ಬರುತ್ತಿದೆ. ಕಥೆ ಮತ್ತು ಪಾತ್ರ ನೋಡಿ ನಟ ಆಫರ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.