Tag: ಬಾಬಾ ಸಿದ್ದಿಕಿ

  • ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

    ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

    ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದ ಸಂಬಂಧ ಮುಂಬೈ ಪೊಲೀಸರ ತನಿಖಾ ತಂಡ ವಿಶೇಷ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯಕ್ಕೆ ಸೋಮವಾರ 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.

    ತನಿಖೆ ಪೂರ್ಣಗೊಳಿಸಿದ ಮುಂಬೈ ಪೊಲೀಸರ ತಂಡ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌, ಆತನ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಸೇರಿದಂತೆ ಒಟ್ಟು 26 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಇದನ್ನೂ ಓದಿ: ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

    ಶುಭಂ ಲೋಂಕರ್, ಯಾಸಿನ್ ಸಿದ್ದಿಕ್ ಮತ್ತು ಅನ್ಮೋಲ್ ಬಿಷ್ಣೋಯ್ ಪ್ರಕರಣದ ಮಾಸ್ಟರ್‌ ಮೈಂಡ್‌ಗಳೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಮುಂಬೈನಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಲು ಬಿಷ್ಣೋಯ್ ಗ್ಯಾಂಗ್ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ

    2024ರ ಅಕ್ಟೋಬರ್‌ 12 ರಂದು, ಮುಂಬೈನ ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಸಿದ್ದಿಕಿ ಹತ್ಯೆಗೆ 9.9 ಎಂಎಂ ಪಿಸ್ತೂಲ್‌ ಬಳಸಲಾಗಿತ್ತು, ಒಟ್ಟು 6 ಸುತ್ತುಗಳಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯುಪಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆನ್ನು ಮುಂಬೈ ಪೊಲೀಸರು ಕೈಗೆತ್ತಿಕೊಂಡಿದ್ದರು

    ವಿಚಾರಣೆ ವೇಳೆ ಆರೋಪಿ ಶಿವಕುಮಾರ್‌, ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಜೊತೆ ಸಂಬಂಧ ಇದೆ. ಲಾರೆನ್ಸ್ ಬಿಷ್ಣೋಯ್‌ನ ಸಹೋದರ ಅನ್ಮೋಲ್ ಬಿಷ್ಣೋಯ್‌ನ ಸೂಚನೆಯ ಮೇರೆಗೆ ಕೊಲೆ ಮಾಡಲಾಗಿದೆ. ಲಾರೆನ್ಸ್‌ನ ಆಪ್ತ ಸಹಾಯಕನಾಗಿದ್ದ ಶುಭಂ ಲೋಂಕರ್ ಎಂಬುವವನು ಅನ್ಮೋಲ್ ಬಿಷ್ಣೋಯ್ ಜೊತೆಗೆ ಸಂಪರ್ಕ ಸಾಧಿಸಲು ಸಕರಿಸಿದ್ದ ಎಂಬುದಾಗಿಯೂ ಒಪ್ಪಿಕೊಂಡಿದ್ದನು.

  • ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌ – ಬಿಷ್ಣೋಯ್‌ ಗ್ಯಾಂಗ್‌ ಜೊತೆ ನಂಟು ಸಾಬೀತು!

    ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌ – ಬಿಷ್ಣೋಯ್‌ ಗ್ಯಾಂಗ್‌ ಜೊತೆ ನಂಟು ಸಾಬೀತು!

    – ನೇಪಾಳಕ್ಕೆ ಎಸ್ಕೇಪ್‌ ಆಗಲು ಪ್ಲ್ಯಾನ್‌ ಮಾಡಿದ್ದ ಆರೋಪಿ

    ಲಕ್ನೋ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣ ಪ್ರಮುಖ ಆರೋಪಿ ಹಾಗೂ ಆರೋಪಿಗೆ ಆಶ್ರಯ ನೀಡಿದ್ದ ಇತರ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಕುಮಾರ್‌ (Shivakumar) ಎಂದು ಗುರುತಿಸಲಾಗಿದೆ.

    ಸಿದ್ದಿಕಿ ಹತ್ಯೆ ಬಳಿಕ ಪರಾರಿಯಾಗಿದ್ದ ಪ್ರಮುಖ ಆರೋಪಿ ನೇಪಾಳಕ್ಕೆ (Nepal) ಪಲಾಯನ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದ. ಅಷ್ಟರಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (UP STF) ಹಾಗೂ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

    ಅ.12 ರಂದು, ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಸಿದ್ದಿಕಿ ಹತ್ಯೆಗೆ 9.9 ಎಂಎಂ ಪಿಸ್ತೂಲ್‌ ಬಳಸಲಾಗಿತ್ತು, ಒಟ್ಟು 6 ಸುತ್ತುಗಳಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯುಪಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಭಾನುವಾರ ಪ್ರಮುಖ ಆರೋಪಿ ಹಾಗೂ ಆರೋಪಿ ನೇಪಾಳಕ್ಕೆ ಪರಾರಿಯಾಗಲು ಸಹಕರಿಸಿದ್ದ ಇತರ ನಾಲ್ವರನ್ನು ಬಂಧಿಸಲಾಗಿದೆ.

    ಬಳಿಕ ವಿಚಾರಣೆ ವೇಳೆ ಆರೋಪಿ ಶಿವಕುಮಾರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಜೊತೆ ಸಂಬಂಧ ಇದೆ. ಲಾರೆನ್ಸ್ ಬಿಷ್ಣೋಯ್‌ನ ಸಹೋದರ ಅನ್ಮೋಲ್ ಬಿಷ್ಣೋಯ್‌ನ ಸೂಚನೆಯ ಮೇರೆಗೆ ಕೊಲೆ ಮಾಡಲಾಗಿದೆ. ಲಾರೆನ್ಸ್‌ನ ಆಪ್ತ ಸಹಾಯಕನಾಗಿದ್ದ ಶುಭಂ ಲೋಂಕರ್ ಎಂಬುವವನು ಅನ್ಮೋಲ್ ಬಿಷ್ಣೋಯ್ ಜೊತೆಗೆ ಸಂಪರ್ಕ ಸಾಧಿಸಲು ಸಕರಿಸಿದ್ದ ಎಂಬುದಾಗಿಯೂ ಒಪ್ಪಿಕೊಂಡಿದ್ದಾನೆ. ಬಾಬಾ ಸಿದ್ದಿಕಿ ಹತ್ಯೆ ನಡೆದ ಒಂದು ದಿನದ ನಂತರ ಗ್ಯಾಂಗ್‌ನ ಸದಸ್ಯರೊಬ್ಬರು ಹತ್ಯೆ ಹೊಣೆ ಹೊತ್ತುಕೊಂಡಿದ್ದರು.

    ಬಾಬಾ ಸಿದ್ದಿಕಿ ಹತ್ಯೆಯ ಆರೋಪಿಗಳಾದ ಮೂವರು ಶೂಟರ್‌ಗಳು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಈ ವೇಳೆ ಯೂಟ್ಯೂಬ್‌ನಲ್ಲಿ ಟ್ಯುಟೋರಿಯಲ್‌ ವೀಡಿಯೊಗಳನ್ನು ನೋಡಿ ಬಂದೂಕುಗಳನ್ನು ಹೇಗೆ ಬಳಸಬೇಕೆಂದು ಕಲಿತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಆರೋಪಿಗಳು ಸುಮಾರು 4 ವಾರಗಳ ಕಾಲ ಅಂತಹ ವೀಡಿಯೊಗಳನ್ನು ವೀಕ್ಷಿಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.

  • Mumbai | ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು

    Mumbai | ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು

    – ಸಿದ್ದಿಕಿ ಹತ್ಯೆಗೆ ಟರ್ಕಿ ನಿರ್ಮಿತ ಟಿಟಾಸ್‌ ಪಿಸ್ತೂಲ್‌ ಪೂರೈಸಿದ್ದ ಅನ್ಮೋಲ್‌

    ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಹಾಗೂ ನಟ ಸಲ್ಮಾನ್‌ ಖಾನ್‌ ಅವರ ಬಾಂದ್ರಾ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್ ಬಿಷ್ಣೋಯ್‌ನನ್ನ (Anmol Bishnoi) ಅಮೆರಿಕದಿಂದ ಕರೆತರಲು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ (Mumbai Crime Branch) ವಿಭಾಗವು ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಿದೆ.

    ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಪ್ರಕರಣಗಳ ವಿಶೇಷ ನ್ಯಾಯಾಲಯವು ಅನ್ಮೋಲ್ ಬಿಷ್ಣೋಯ್ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಆದ್ರೆ ಔಪಚಾರಿಕವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಾಲಯದ ಕೆಲವು ದಾಖಲೆಗಳಿಗಾಗಿ ನಾವು ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.

    ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ ಎರಡು ಪ್ರಕರಣಗಳು ಮತ್ತು ಇತರ 18 ಪ್ರಕರಣಗಳಲ್ಲಿ ಕ್ರಿಮಿನಲ್‌ ಆರೋಪ ಎದುರಿಸುತ್ತಿದ್ದಾನೆ. ಇತ್ತೀಚೆಗಷ್ಟೇ ಎನ್‌ಐಎ ಅನ್ಮೋಲ್ ಬಿಷ್ಣೋಯ್ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇದನ್ನೂ ಓದಿ: ಸ್ನೇಹಿತ ಅಂತ ನಂಬಿ ಮೊಬೈಲ್‌ ಕೊಟ್ಟ ಮಹಿಳೆ – ಆಕೆಯ ಬೆತ್ತಲೆ ವೀಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್‌

    ಮುಂಬೈ ಪೊಲೀಸ್‌ ಮೂಲಗಳ ಪ್ರಕಾರ, ಅನ್ಮೋಲ್‌ ಬಿಷ್ಣೋಯ್‌ ಅಮೆರಿಕದಲ್ಲಿ ಇರುವುದಾಗಿ ತನಿಖಾ ಏಜೆನ್ಸಿ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಖಚಿತಪಡಿಸಿದ್ದಾರೆ. ಈ ನಡುವೆ ಅನ್ಮೋಲ್‌ ಕೆನಡಾದಲ್ಲಿ ನೆಲೆಸಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

    ಸಿಧು ಮೂಸೆವಾಲಾ ಹತ್ಯೆ ಹಿಂದಿದ್ದ ಅನ್ಮೋಲ್‌:
    18 ಪ್ರಕರಣಗಳಲ್ಲಿ ಆರೋಪಿ ಆಗಿರುವ ಅನ್ಮೋಲ್‌ ಸಿಧು ಮೂಸೆವಾಲಾ ಹತ್ಯೆ ಕೇಸ್‌ನಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಈತ ಮೂಸೆವಾಲಾ ಹತ್ಯೆಗೆ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದ. ಅಲ್ಲದೇ ಬಾಬಾ ಸಿದ್ದಿಕಿ ಹತ್ಯೆಗೆ ಬಳಸಲಾಗಿದ್ದ ಟರ್ಕಿ ನಿರ್ಮಿತ ಟಿಟಾಸ್‌ ಪಿಸ್ತೂಲ್‌ ಮತ್ತು ಗ್ಲೋಕ್‌ ಬಂದೂಕು ಒದಗಿಸಿದ್ದೂ ಇವನೇ ಎಂಬ ಆರೋಪ ಇದೆ.

  • ಪ್ಯಾನ್‌ ಇಂಡಿಯಾ ರೇಡ್‌ – 4 ರಾಜ್ಯಗಳಲ್ಲಿ ಬಿಷ್ಣೋಯ್‌ ಗ್ಯಾಂಗ್‌ನ 7 ಶೂಟರ್ಸ್‌ ಅರೆಸ್ಟ್‌

    ಪ್ಯಾನ್‌ ಇಂಡಿಯಾ ರೇಡ್‌ – 4 ರಾಜ್ಯಗಳಲ್ಲಿ ಬಿಷ್ಣೋಯ್‌ ಗ್ಯಾಂಗ್‌ನ 7 ಶೂಟರ್ಸ್‌ ಅರೆಸ್ಟ್‌

    ನವದೆಹಲಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆ ಹೊರಗೆ ಗುಂಡಿನ ದಾಳಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ 7 ಶೂಟರ್‌ಗಳನ್ನ (Lawrence Bishnoi Gang Shooters) ಪಂಜಾಬ್‌, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಬಂಧಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 7 ಶೂಟರ್‌ಗಳನ್ನ ಬಂಧಿಸಲಾಗಿದೆ ಎಂದು‌ ವರದಿಯಾಗಿದೆ.

    ಬಾಬಾ ಸಿದ್ದಿಕಿ ಹತ್ಯೆ ಹಾಗೂ ಸಲ್ಮಾನ್‌ ಖಾನ್‌ ಕೊಲೆ ಬೆದರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು (Delhi Police) ತನಿಖೆ ಚುರುಕುಗೊಳಿಸಿದ್ದಾರೆ. ಶುಕ್ರವಾರ ದೆಹಲಿ ಪೊಲೀಸ್‌ ವಿಶೇಷ ಕೋಶದ ನೇತೃತ್ವದಲ್ಲಿ ವಿವಿಧೆಡೆ ನಡೆದ ದಾಳಿಯಲ್ಲಿ 6 ಅರೆ ಸ್ವಯಂಚಾಲಿತ (ಸೆಮಿ ಆಟೋಮೆಟಿಕ್)‌ ಶಸ್ತ್ರಾಸ್ತ್ರಗಳು ಹಾಗೂ ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಳೆಯಿಂದ ಸೌತೆಕಾಯಿ ಬೆಲೆ ಭಾರಿ ಇಳಿಕೆ – ಮೂಟೆ ಸೌತೆಕಾಯಿ 100 ರಿಂದ 150 ರೂ.ಗೆ ಸೇಲ್‌

    ಬಿಷ್ಣೋಯ್‌ ಗ್ಯಾಂಗ್‌ನ ಬಂಧಿತ 7 ಶೂಟರ್‌ಗಳ ಪೈಕಿ ಮೊದಲ ಬಂಧನವನ್ನು ಕಳೆದ ಬುಧವಾರ ಹರಿಯಾಣದಲ್ಲಿ ಮಾಡಲಾಗಿತ್ತು. 2ನೇ ಶೂಟರ್‌ನನ್ನ ರಾಜಸ್ಥಾನದಲ್ಲಿ ಬಂಧಿಸಲಾಯಿತು. ಉಳಿದ ಐವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ಅಮಿತ್‌ ಶಾ ವಿದೇಶಿ ಪ್ರವಾಸದ ಮಾಹಿತಿ ಕೊಟ್ಟವರಿಗೆ 10 ಲಕ್ಷ ಬಹುಮಾನ: ಉಗ್ರ ಪನ್ನುನ್‌ ಘೋಷಣೆ

    ಬಿಷ್ಣೋಯ್‌ ಎನ್‌ಕೌಂಟರ್‌ಗೆ 1,11,11,111 ರೂ. ಬಹುಮಾನ:
    ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನು ಹತ್ಯೆ ಮಾಡಿದ್ರೆ 1,11,11,111 ನಗದು ಬಹುಮಾನವನ್ನು ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ (Karni Sena) ಇತ್ತೀಚೆಗಷ್ಟೇ ಘೋಷಣೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರಿಂದ ಹತ್ಯೆಗೀಡಾದ ಪ್ರಮುಖ ರಜಪೂತ್ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಕ್ಷತ್ರಿಯ ಕರ್ಣಿ ಸೇನೆಯ ನಾಯಕ ರಾಜ್ ಶೇಖಾವತ್ ಈ ಬಹುಮಾನವನ್ನು ಘೋಷಿಸಿದ್ದಾರೆ.

    ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಬಿಷ್ಣೋಯಿ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಇತ್ತೀಚೆಗೆ, ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಅಲ್ಲದೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಿಷ್ಣೋಯ್‌ ಗ್ಯಾಂಗ್‌ಗೂ ಸಂಬಂಧ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು

  • ಮಹಾರಾಷ್ಟ್ರ ಚುನಾವಣೆ| ಬಾಬಾ ಸಿದ್ದಿಕಿ ಪುತ್ರ ಎನ್‌ಸಿಪಿಗೆ ಸೇರ್ಪಡೆ

    ಮಹಾರಾಷ್ಟ್ರ ಚುನಾವಣೆ| ಬಾಬಾ ಸಿದ್ದಿಕಿ ಪುತ್ರ ಎನ್‌ಸಿಪಿಗೆ ಸೇರ್ಪಡೆ

    ಮುಂಬೈ: ಅಕ್ಟೋಬರ್ 12 ರಂದು ಗುಂಡೇಟಿಗೆ ಬಲಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಅವರ ಪುತ್ರ ಜೀಶನ್ ಸಿದ್ದಿಕಿ (Zeeshan Siddique) ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಅಜಿತ್ ಪವಾರ್ (Ajit Pawer) ನೇತೃತ್ವದ ಬಣಕ್ಕೆ ಸೇರ್ಪಡೆಯಾಗಿದ್ದಾರೆ.

    ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಪವಾರ್ ಅವರ ಸಮ್ಮುಖದಲ್ಲಿ ಶುಕ್ರವಾರ ಬೆಳಗ್ಗೆ ಅವರು ಸೇರ್ಪಡೆಯಾದರು.

    2019ರ ಚುನಾವಣೆಯಲ್ಲಿ ಮುಂಬೈಯ ವಂಡ್ರೆ ಪೂರ್ವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಇವರನ್ನು ಆಗಸ್ಟ್‌ನಲ್ಲಿ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದರು. ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕೆ ಕಾಂಗ್ರೆಸ್‌ ಈ ಕ್ರಮ ತೆಗೆದುಕೊಂಡಿತ್ತು.


    ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ಜೀಶನ್‌ ಸಿದ್ದಿಕ್‌, ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಮತ್ತು ಎಂವಿಎ ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅವರು ಮೋಸ ಮಾಡುವ ಉದ್ದೇಶ ಹೊಂದಿದ್ದರು. ಆ ಕಷ್ಟದ ಸಮಯದಲ್ಲಿ, ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನೀಲ್ ತಾಟ್ಕರೆ ನನ್ನನ್ನು ನಂಬಿದ್ದರು ಎಂದು ತಿಳಿಸಿದರು.

    ನಾನು ವಂಡ್ರೆ (ಪೂರ್ವ)ದಿಂದ ಸ್ಪರ್ಧಿಸುತ್ತೇನೆ. ಎಲ್ಲ ಜನರ ಪ್ರೀತಿ ಮತ್ತು ಬೆಂಬಲದಿಂದ ನಾನು ಖಂಡಿತವಾಗಿಯೂ ಬಾಂದ್ರಾ ಪೂರ್ವವನ್ನು ಮತ್ತೊಮ್ಮೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.

    ಎಂವಿಎ ಮೈತ್ರಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆಗೆ ಅಭ್ಯರ್ಥಿಗೆ ಪೂರ್ವ ಕ್ಷೇತ್ರದ ಟಿಕೆಟ್‌ ನೀಡಿದೆ.

    ಮಾಜಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಬಾಬಾ ಸಿದ್ದಿಕಿ ಅವರು ಹಿಂದೆ ಅವಿಭಜಿತ ವಂಡ್ರೆ ಕ್ಷೇತ್ರದಿಂದ ಎರಡು ಅವಧಿಗೆ ಕಾಂಗ್ರೆಸ್ ಶಾಸಕರಾಗಿದ್ದರು. 2008 ರಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡನೆಯಾಯಿತು. ಮೂರನೇ ಅವಧಿಯಲ್ಲಿ ವಂಡ್ರೆ (ಪಶ್ಚಿಮ) ಪ್ರತಿನಿಧಿಸಿ ಗೆದ್ದಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್‌ ತೊರೆದು ಅಜಿತ್‌ ಪವಾರ್‌ ಅವರ ಎನ್‌ಸಿಪಿಯನ್ನು ಸೇರಿದ್ದರು.

    ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ನ.23 ರಂದು ಫಲಿತಾಂಶ ಪ್ರಕಟವಾಗಲಿದೆ.

  • ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದ ಹಂತಕರು

    ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದ ಹಂತಕರು

    ಮುಂಬೈ: ಮಹಾರಾಷ್ಟ್ರ (Maharashtra) ಮಾಜಿ ಸಚವ ಹಾಗೂ ಎನ್‌ಸಿಪಿ (NCP) ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ (Baba Siddique Murder Case) ಹಂತಕರು ರಾಯಗಢ ಜಲಪಾತದ (Raigad Falls) ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

    ಅ.12 ರಂದು ನಡೆದ ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಇನ್ನೋರ್ವ ಆರೋಪಿ ಶಿವಕುಮಾರ್ ಎಂಬುವವನನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.ಇದನ್ನೂ ಓದಿ: ಆಪರೇಷನ್ ಆಲೌಟ್ ಜೆಡಿಎಸ್ – ಸಿಎಂ ಮುಂದೆ ಡಿಕೆಶಿ ಶಪಥ

    ಇದಕ್ಕೂ ಮುನ್ನ ಹತ್ಯೆಯ ಮೂರು ಆರೋಪಿಗಳಾದ ಧರ್ಮರಾಜ್ ಕಶ್ಯಪ್, ಗುರ್ಮೈಲ್ ಸಿಂಗ್ ಮತ್ತು ಪರಾರಿಯಾಗಿರುವ ಶಿವಕುಮಾರ್ ಯೂಟ್ಯೂಬ್ ನೋಡಿ ಶೂಟಿಂಗ್ ಕಲಿತಿದ್ದರು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಇದೀಗ ಇನ್ನೊಂದು ಮಾಹಿತಿ ಲಭಿಸಿದ್ದು, ಹಂತಕರು ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದರು.

    ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈನ (Mumbai) ಹೊರವಲಯದಲ್ಲಿರುವ ಕರ್ಜತ್ ಎಂಬ ಪ್ರದೇಶದ ಬಳಿಯಿರುವ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಾಬಾ ಸಿದ್ದಿಕಿಯನ್ನು ಹತ್ಯೆಮಾಡಲು ಥಾಣೆ ಮೂಲದ ನಿತಿನ್ ಸಪ್ರೆ, ರಾಮ್ ಕನೂಜಿಯಾ ನೇತೃತ್ವದ ಐದು ಸದಸ್ಯರ ತಂಡಕ್ಕೆ ಸುಪಾರಿಯನ್ನು ನೀಡಲಾಗಿತ್ತು. ಜೊತೆಗೆ ಅಪರಾಧಕ್ಕೆ ಬಳಸಲಾದ ಪಿಸ್ತೂಲ್‌ಗಳನ್ನು ಕೂಡ ರಾಜಸ್ಥಾನದಿಂದ ತರಿಸಲಾಗಿತ್ತು. ಸುಪಾರಿಗಾಗಿ 50 ಲಕ್ಷ ರೂ.ಯನ್ನು ಇರಿಸಲಾಗಿದ್ದು, ಈ ಮೊತ್ತದ ಬೇಡಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ ಈ ತಂಡ ಹಿಂದೆ ಸರಿಯಿತು.

    ಈ ವೇಳೆ ಬಾಬಾ ಸಿದ್ದಿಕಿ ಹಂತಕರು ಕರ್ಜತ್ ಸ್ಥಳದ ಸಮೀಪದ ಜಲಪಾತವು ನಿರ್ಜನ ಪ್ರದೇಶವಾಗಿದ್ದು, ಅರಣ್ಯದಿಂದ ಪ್ರದೇಶ ಸುತ್ತುವರೆದಿದೆ. ಆದ್ದರಿಂದ ಆ ಸ್ಥಳದಲ್ಲಿ ಹಂತಕರು ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಇದು ಸಾಧ್ಯತೆಯ ಕಲೆ: ಡಿಕೆ ಶಿವಕುಮಾರ್‌

  • ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಆರೋಪಿ ಮೊಬೈಲ್‌ನಲ್ಲಿ ಸಿದ್ದಿಕಿ ಪುತ್ರನ ಫೋಟೋ ಪತ್ತೆ

    ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಆರೋಪಿ ಮೊಬೈಲ್‌ನಲ್ಲಿ ಸಿದ್ದಿಕಿ ಪುತ್ರನ ಫೋಟೋ ಪತ್ತೆ

    – ಪೊಲೀಸರಿಗೆ ಸುಳಿವು ತಪ್ಪಿಸಲು ಸ್ನ್ಯಾಪ್‌ಚಾಟ್ ಬಳಕೆ

    ಮುಂಬೈ: ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಹತ್ಯೆಯ ಶಂಕಿತ ಆರೋಪಿಯ ಮೊಬೈಲ್‌ನಲ್ಲಿ ಸಿದ್ದಿಕಿಯವರ ಪುತ್ರ ಜೀಶನ್ ಸಿದ್ದಿಕಿಯವರ ಫೋಟೋ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಪ್ರಕರಣದ ಮಾಸ್ಟರ್ ಮೈಂಡ್, ಜೀಶನ್ ಸಿದ್ದಿಕಿ ಚಿತ್ರವನ್ನು ಶೂಟರ್‌ಗಳೊಂದಿಗೆ ಹಂಚಿಕೊಂಡಿದ್ದ. ಆರೋಪಿಗಳು ಫೋಟೋ ಹಂಚಿಕೊಳ್ಳಲು ಸ್ನ್ಯಾಪ್‌ಚಾಟ್ (Snapchat) ಬಳಸಿದ್ದಾರೆ. ಶೂಟರ್‌ಗಳು ಮತ್ತು ಸಂಚುಕೋರರು ಸಂವಹನ ನಡೆಸಲು ಈ ಅಪ್ಲಿಕೇಶನ್ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರಿಗೆ ಸಂವಹನದ ಮಾಹಿತಿ ಸಿಗದಂತೆ ತಪ್ಪಿಸಲು Instagram ಮತ್ತು Snapchat ಮೂಲಕ ಸಂವಹನ ನಡೆಸುತ್ತಿದ್ದರು. ಈ ಎರಡೂ ಅಪ್ಲಿಕೇಶನ್‌ಗಳಲ್ಲಿ ಸಂದೇಶಗಳನ್ನು ವೀಕ್ಷಿಸಿದ ಬಳಿಕ ಅಥವಾ ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ಡಿಲೀಟ್‌ ಆಗುವಂತೆ ಸೆಟ್ಟಿಂಗ್ಸ್‌ ಮಾಡಿಕೊಂಡಿದ್ದರು.

    ಬಾಬಾ ಸಿದ್ದಿಕಿಯವರನ್ನು ಅವರ ಮಗನ ಕಚೇರಿಯ ಹೊರಗೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಮೂವರು ಶೂಟರ್‌ಗಳ ಪೈಕಿ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಬಂಧಿಸಲಾಗಿದ್ದು, ಶಿವಕುಮಾರ್ ಗೌತಮ್ ಸದ್ಯ ಪರಾರಿಯಾಗಿದ್ದಾನೆ. ನಾಲ್ಕನೇ ಶಂಕಿತ ಹರೀಶ್ ಕುಮಾರ್ ಬಾಲಕ್ರಮ್ ನಿಸಾದ್‌ನನ್ನು ಸೋಮವಾರ ಉತ್ತರ ಪ್ರದೇಶದಲ್ಲಿ ಬಂಧಿಸಿ ಮುಂಬೈಗೆ ಕರೆತರಲಾಗಿತ್ತು.

    ಬಾಬಾ ಸಿದ್ದಿಕಿಯವರ ಹತ್ಯೆಯ ಆರೋಪಿಗಳಾದ ಮೂವರು ಶೂಟರ್‌ಗಳು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಈ ವೇಳೆ ಯೂಟ್ಯೂಬ್‌ನಲ್ಲಿ ಟ್ಯುಟೋರಿಯಲ್ ವೀಡಿಯೊಗಳನ್ನು ನೋಡಿ ಬಂದೂಕುಗಳನ್ನು ಹೇಗೆ ಬಳಸಬೇಕೆಂದು ಕಲಿತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಆರೋಪಿಗಳು ಸುಮಾರು ನಾಲ್ಕು ವಾರಗಳ ಕಾಲ ಅಂತಹ ವೀಡಿಯೊಗಳನ್ನು ವೀಕ್ಷಿಸಿದ್ದರು.

    ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿ ಪೂರ್ವ ವಂಡ್ರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರ ಕಚೇರಿಯ ಹೊರಗೆ ಬಾಬಾ ಸಿದ್ದಿಕಿಯವರನ್ನು ಹತ್ಯೆಗೈಯ್ಯಲಾಗಿತ್ತು.

  • 700 ಶಾರ್ಪ್‌ ಶೂಟರ್ಸ್‌.. ಸ್ಟಾರ್‌ ನಟ, ಜನಪ್ರಿಯ ವ್ಯಕ್ತಿಗಳೇ ಟಾರ್ಗೆಟ್‌ – ಮುಂಬೈ ಭೂಗತ ಜಗತ್ತಿಗೆ ಬಿಷ್ಣೋಯ್‌ ಗ್ಯಾಂಗ್‌ ಎಂಟ್ರಿ?

    700 ಶಾರ್ಪ್‌ ಶೂಟರ್ಸ್‌.. ಸ್ಟಾರ್‌ ನಟ, ಜನಪ್ರಿಯ ವ್ಯಕ್ತಿಗಳೇ ಟಾರ್ಗೆಟ್‌ – ಮುಂಬೈ ಭೂಗತ ಜಗತ್ತಿಗೆ ಬಿಷ್ಣೋಯ್‌ ಗ್ಯಾಂಗ್‌ ಎಂಟ್ರಿ?

    – ಯಾರು ಈ ಲಾರೆನ್ಸ್‌ ಬಿಷ್ಣೋಯ್‌? – ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ಹೇಗೆ?
    – ಜೈಲಿನಿಂದಲೇ ಬಿಷ್ಣೋಯ್‌ ಆಪರೇಷನ್‌ ಮಾಡೋದು ಹೇಗೆ?
    – ಟಾರ್ಗೆಟ್‌ ಲಿಸ್ಟ್‌ನಲ್ಲಿ ಇರೋದ್ಯಾರು?

    ದುವರೆಗೆ ತಣ್ಣಗಾಗಿದ್ದ ಮುಂಬೈ ಭೂಗತಲೋಕ ಮತ್ತೆ ಸಕ್ರಿಯವಾಗಿದೆ. 90ರ ದಶಕದಲ್ಲಿ ದಾವೂದ್ ಇಬ್ರಾಹಿಂ ಭಯದಲ್ಲಿದ್ದ ಮುಂಬೈ ಈಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಹೆದರುವಂತಾಗಿದೆ. ಇತ್ತೀಚೆಗೆ ನಗರದಲ್ಲಿ ನಡೆದ ಎನ್‌ಸಿಪಿ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರೇ ಈ ಕೊಲೆ ಮಾಡಿದ್ದಾರೆಂಬುದನ್ನು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಮುಂಬೈನಲ್ಲಿ ಮತ್ತೊಂದು ಭೂಗತ ಗ್ಯಾಂಗ್ ಹುಟ್ಟಿಕೊಂಡಿತೇ ಎಂಬ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟುಹಾಕಿದೆ.

    90ರ ದಶಕದಲ್ಲಿ ಇಡೀ ಮುಂಬೈ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಯದಲ್ಲಿತ್ತು. ಸರಣಿ ಬಾಂಬ್ ಸ್ಫೋಟ ಹಾಗೂ ಇನ್ನಿತರೆ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೃತ್ಯಗಳನ್ನು ನಡೆಸುತ್ತಾ ದಾವೂದ್ ಗ್ಯಾಂಗ್ ನಗರದಲ್ಲಿ ಸಕ್ರಿಯವಾಗಿತ್ತು. ಈತನ ಭೂಗತ ಚಟುವಟಿಕೆಗಳನ್ನು ಹಂತಹಂತವಾಗಿ ನಿಯಂತ್ರಣಕ್ಕೆ ತರುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದ. ನಂತರ ವಿದೇಶದಲ್ಲೇ ಕುಳಿತು ಮುಂಬೈನಲ್ಲಿ ಪಾತಕ ಕೃತ್ಯಗಳನ್ನು ನಡೆಸುತ್ತಿದ್ದ. ಈಗ ಆತನ ಪ್ರಭಾವ ಕ್ಷೀಣಿಸಿದೆ. ಮುಂಬೈ ಈಗ ಶಾಂತಿವಾಗಿದೆ ಎನ್ನುವಷ್ಟರಲ್ಲೇ ಮತ್ತೊಂದು ಗ್ಯಾಂಗ್ ಎಂಟ್ರಿ ಕೊಟ್ಟಿರುವುದು ಆತಂಕ ಮೂಡಿಸಿದೆ. ಸದ್ಯ ದೇಶದಲ್ಲೆಡೆ ಚರ್ಚೆಯಲ್ಲಿರುವ ವಿಷಯವೆಂದರೆ ಅದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್. ಮಾಜಿ ಸಚಿವರ ಹತ್ಯೆ ಕಾರಣಕ್ಕಷ್ಟೇ ಅಲ್ಲ, ಬಾಲಿವುಡ್ ಸ್ಟಾರ್ ನಟ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿರುವುದಕ್ಕೆ ಈ ಗ್ಯಾಂಗ್ ದೇಶದ ಗಮನ ಸೆಳೆದಿದೆ.

    ಅಷ್ಟಕ್ಕೂ ಯಾರೀ ಲಾರೆನ್ಸ್ ಬಿಷ್ಣೋಯ್? ಏನಿದು ಆತನ ಗ್ಯಾಂಗ್? ಮಹಾರಾಷ್ಟ್ರದ ಮಾಜಿ ಸಚಿವನ ಹತ್ಯೆಗೂ ಈ ಗ್ಯಾಂಗ್‌ಗೂ ಏನು ಸಂಬಂಧ? ಇವರು ಟಾರ್ಗೆಟ್ ಮಾಡಿರುವ ಆ ಬಾಲಿವುಡ್ ಸ್ಟಾರ್ ಯಾರು? ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿರುವ ಖ್ಯಾತನಾಮರು ಯಾರು?… ಇತ್ಯಾದಿ ಹಲವು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ವಿವರ.

    ಯಾರು ಈ ಲಾರೆನ್ಸ್ ಬಿಷ್ಣೋಯ್?
    31 ವಯಸ್ಸಿನ ಲಾರೆನ್ಸ್ ಬಿಷ್ಣೋಯ್ ಉತ್ತರ ಭಾರತ ಭಾಗದವನು. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಧತ್ತರನ್‌ವಾಲಿ ಗ್ರಾಮದವನು. 1993ರ ಫೆಬ್ರವರಿ 12 ರಂದು ಉತ್ತಮ ಕೃಷಿಕ ಕುಟುಂಬವೊಂದರಲ್ಲಿ ಜನಿಸಿದ. ಈತನ ತಂದೆ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್. ಲಾರೆನ್ಸ್, ಬಿಷ್ಣೋಯ್ ಸಮುದಾಯಕ್ಕೆ ಸೇರಿದವ. ಈ ಸಮುದಾಯದ ಜನರು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ನೆಲೆಸಿದ್ದಾರೆ. ಬಿಷ್ಣೋಯ್ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದ. ನಂತರ ಕಾಲೇಜು ಶಿಕ್ಷಣವನ್ನು ಮುಂದುವರಿಸಲು 2010 ರಲ್ಲಿ ಚಂಡೀಗಢಕ್ಕೆ ಬಂದ. ವಿದ್ಯಾರ್ಥಿ ದಿಸೆಯಲ್ಲೇ ರಾಜಕೀಯವಾಗಿ ಸಕ್ರಿಯನಾಗಿದ್ದ. 2011 ಮತ್ತು 2012 ರ ನಡುವೆ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿದ್ದ.

    ವಿದ್ಯಾರ್ಥಿ ದಿಸೆಯಲ್ಲೇ ಭೂಗತ ಲೋಕಕ್ಕೆ ಎಂಟ್ರಿ
    ಲಾರೆನ್ಸ್ ಬಿಷ್ಣೋಯ್ ವಿದ್ಯಾರ್ಥಿಯಾಗಿದ್ದಾಗಲೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ದಾಖಲಾದ ಮೊದಲ ಎಫ್‌ಐಆರ್. ನಂತರ ಏಪ್ರಿಲ್ 2010 ರಲ್ಲಿ ಅತಿಕ್ರಮಣಕ್ಕಾಗಿ ಮತ್ತೊಂದು ಎಫ್‌ಐಆರ್ ದಾಖಲಾಯಿತು. ಫೆಬ್ರವರಿ 2011 ರಲ್ಲಿ ಆತನ ವಿರುದ್ಧ ಹಲ್ಲೆ ಮತ್ತು ಸೆಲ್‌ಫೋನ್ ದರೋಡೆ ಪ್ರಕರಣವನ್ನು ದಾಖಲಿಸಲಾಯಿತು. ಈ ಮೂರೂ ಪ್ರಕರಣಗಳು ವಿದ್ಯಾರ್ಥಿ ಬಿಷ್ಣೋಯ್ ರಾಜಕೀಯಕ್ಕೆ ಸಂಬಂಧಿಸಿದವು. ಕೊನೆಗೆ, ಜಸ್ವಿಂದರ್ ಸಿಂಗ್ ಅಲಿಯಾಸ್ ರಾಕಿ ಗ್ಯಾಂಗ್‌ಗೆ ಬಿಷ್ಣೋಯ್ ಸೇರಿದ. ರಾಕಿ ಎಂಬಾತ ಪಂಜಾಬ್‌ನ ಫಾಜಿಲ್ಕಾದಲ್ಲಿ ದರೋಡೆಕೋರನಾಗಿದ್ದ. ನಂತರ ರಾಜಕಾರಣಿಯಾದ. ಈತನ ಗ್ಯಾಂಗ್ ರಾಜಸ್ಥಾನದ ಕೆಲವು ಭಾಗಗಳು, ರಾಜಸ್ಥಾನ-ಪಂಜಾಬ್ ಗಡಿಯಲ್ಲಿರುವ ಶ್ರೀ ಗಂಗಾ ನಗರ ಮತ್ತು ಭರತ್‌ಪುರದಲ್ಲಿ ಸಕ್ರಿಯವಾಗಿತ್ತು. ಕ್ರಿಮಿನಲ್ ಹಿನ್ನೆಲೆಯುಳ್ಳ ರಾಕಿಯನ್ನು ಮೇ 2016 ರಲ್ಲಿ ಹಿಮಾಚಲ ಪ್ರದೇಶದ ಪರ್ವಾನೂ ಬಳಿ ಹತ್ಯೆ ಮಾಡಲಾಗಿತ್ತು. ಕುಖ್ಯಾತ ದರೋಡೆಕೋರ ಜೈಪಾಲ್ ಭುಲ್ಲಾರ್ ಕೊಲೆಯ ಹೊಣೆಯನ್ನು ಹೊತ್ತುಕೊಂಡ. ನಂತರ ಜೂನ್ 2020 ರಲ್ಲಿ ಕೋಲ್ಕತ್ತಾದಲ್ಲಿ ಭುಲ್ಲಾರ್‌ನನ್ನು ಗುಂಡಿಕ್ಕಿ ಕೊಲ್ಲಲಾಯಿತು.

    ಹಲವು ವರ್ಷಗಳು ಪೈಪೋಟಿಯ ಭಾಗವಾಗಿ ಪ್ರತೀಕಾರದ ಹತ್ಯೆಗಳ ಪ್ರಕರಣಗಳಲ್ಲಿ ಈ ಗ್ಯಾಂಗ್‌ನ್ನು ಹೆಸರಿಸಲಾಯಿತು. ಬಿಷ್ಣೋಯ್ ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಇತರೆ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಪ್ರಸ್ತುತ ಆತನನ್ನು ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಸದ್ಯ ಜೈಲಿನಲ್ಲಿದ್ದರೂ ಅಲ್ಲಿಂದಲೇ, ತನ್ನ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಿ ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸಬರಮತಿ ಕಾರಾಗೃಹದಲ್ಲಿರಿಸಿದೆ.

    ಬಿಷ್ಣೋಯ್ ಗ್ಯಾಂಗ್‌ನಲ್ಲಿ 700 ಶಾರ್ಪ್ ಶೂಟರ್ಸ್‌?
    2022 ರಲ್ಲಿ ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ನಡೆದ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಕೊಲೆಯು ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ತಂದಿತು. ಅದಾದ ಒಂದೆರಡು ವರ್ಷಗಳಲ್ಲಿ ಮತ್ತೆ ಈತನ ಗ್ಯಾಂಗ್ ಸುದ್ದಿಯಲ್ಲಿದೆ. ಅದೇ, ಮುಂಬೈನ ಹಿರಿಯ ರಾಜಕೀಯ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆ. ಸಿದ್ದಿಕಿ ಅವರ ಹತ್ಯೆ ಮಾರನೇ ದಿನವೇ ಕೃತ್ಯದ ಹೊಣೆಯನ್ನು ಈತನ ಗ್ಯಾಂಗ್ ಹೊತ್ತುಕೊಂಡಿತು.

    ಬಿಷ್ಣೋಯ್ ಗ್ಯಾಂಗ್ ಯಾವುದೋ ಒಂದು ಪ್ರದೇಶ ಅಥವಾ ರಾಜ್ಯಕ್ಕೆ ಸೀಮಿತವಾಗಿಲ್ಲ. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ಭಾರತೀಯ ರಾಜ್ಯಗಳಲ್ಲಿ ಗ್ಯಾಂಗ್ ಹರಡಿಕೊಂಡಿದೆ. ಹೊರದೇಶಗಳ ಗ್ಯಾಂಗ್‌ಗಳ ನಂಟು ಕೂಡ ಬಿಷ್ಣೋಯ್‌ಗೆ ಇದೆ. ಜಾಗತಿಕ ಕುಖ್ಯಾತ ಪಾತಕಿ ಗೋಲ್ಡಿ ಬ್ರಾರ್ ಕೂಡ ಈತನಿಗೆ ಸಾಥ್ ನೀಡುತ್ತಾನೆ. ಕೆನಡಾದಲ್ಲೂ ಈತನ ಗ್ಯಾಂಗ್ ಜಾಲ ವಿಸ್ತರಿಸಿದೆ. ಎನ್‌ಐಎ ಪ್ರಕಾರ, ಬಿಷ್ಣೋಯ್ ಗ್ಯಾಂಗ್‌ನಲ್ಲಿ 700 ಶೂಟರ್ಸ್ ಇದ್ದಾರೆ. ಈ ಪೈಕಿ 300 ಶೂಟರ್ಸ್ ಪಂಜಾಬ್‌ನಲ್ಲಿದ್ದಾರೆ. ಸುಲಿಗೆ, ಕೊಲೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಸಕ್ರಿಯವಾಗಿದೆ. ಪಂಜಾಬಿ ಗಾಯಕರು, ಮದ್ಯದ ಮಾಫಿಯಾ, ಉದ್ಯಮಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳೇ ಈ ಗ್ಯಾಂಗ್‌ನ ಟಾರ್ಗೆಟ್. ಅಪರಾಧ ಕೃತ್ಯಗಳಿಗೆ ವೃತ್ತಿಪರ ಶೂಟರ್‌ಗಳನ್ನು ಬಳಸಿಕೊಳ್ಳುತ್ತಿದೆ.

    ಜೈಲಿನಿಂದಲೇ ಭೂಗತ ಕಾರ್ಯಾಚರಣೆ!
    ಅದು ಗುಜರಾತ್‌ನ ಸಬರಮತಿ ಜೈಲೇ ಆಗಿರಲಿ ಅಥವಾ ದೆಹಲಿಯ ತಿಹಾರ್ ಜೈಲೇ ಆಗಿರಲಿ, ಲಾರೆನ್ಸ್ ಬಿಷ್ಣೋಯ್ ಜೈಲಿನಿಂದಲೇ ಭೂಗತ ಕಾರ್ಯಾಚರಣೆಗಳನ್ನು ನಡೆಸುತ್ತಾನೆ. ಸಂವಹನಕ್ಕಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಾನೆ. ಅದಕ್ಕಾಗಿ ಈತನನ್ನು ಒಂದು ಜೈಲಿನಿಂದ ಇನ್ನೊಂದಕ್ಕೆ ಸ್ಥಳಾಂತರಿಸಲಾಯಿತು. ಏಕಾಂತ ಸೆರೆಮನೆಯಲ್ಲಿ ಇರಿಸಲಾಗಿದೆ. ಈತ ಕಾರ್ಯಾಚರಣೆಗಳಿಗಾಗಿ ಉನ್ನತ ಮಟ್ಟದ ವಿಪಿಎನ್ ನೆಟ್‌ವರ್ಕ್‌ಗಳನ್ನು ಬಳಸುತ್ತಾನೆ. ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿ ದೇಶ-ವಿದೇಶಗಳಲ್ಲಿರುವ ತನ್ನ ಸಹವರ್ತಿಗಳೊಂದಿಗೆ ಸಂವಹನ ನಡೆಸುತ್ತಾನೆ. ಬಿಷ್ಣೋಯ್ ಗ್ಯಾಂಗ್ ಸ್ಥಳೀಯ ದರೋಡೆಕೋರರೊಂದಿಗೆ ಸಂಪರ್ಕದಲ್ಲಿರುತ್ತದೆ. ಈ ಸ್ಥಳೀಯ ಗುಂಪುಗಳು ಶಸ್ತ್ರಾಸ್ತ್ರ ತರಬೇತಿ ಪಡೆಯುವ ಶೂಟರ್‌ಗಳನ್ನು ನೇಮಿಸಿಕೊಳ್ಳುತ್ತವೆ. ಬಿಷ್ಣೋಯ್ ಗ್ಯಾಂಗ್ ಆದೇಶದ ಯಾವುದೇ ಒಪ್ಪಂದದ ಹತ್ಯೆ ಬಳಿಕ ಹಣವನ್ನು ಪಡೆಯುತ್ತವೆ.

    ಬಡವರು, ಅಪ್ರಾಪ್ತ ವಯಸ್ಸಿನ ಹುಡುಗರು, ತುರ್ತಾಗಿ ಹಣದ ಅವಶ್ಯಕತೆ ಇರುವವರನ್ನೇ ಗುರುತಿಸಿ ಗ್ಯಾಂಗ್‌ಗೆ ಸೇರಿಸಿಕೊಳ್ಳಲಾಗುತ್ತದೆ. ಶೂಟರ್‌ಗಳಿಗೆ ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ಅವರಿಗೆ ಒಂದು ಟಾರ್ಗೆಟ್ ನೀಡಲಾಗಿರುತ್ತದೆ. ಅದನ್ನು ಮುಗಿಸಬೇಕಷ್ಟೆ. ಅದರಾಚೆಗೆ ಬೇರೆ ಯಾವುದೇ ರೀತಿಯ ಒಡನಾಟ ಅವರೊಂದಿಗೆ ಇರುವುದಿಲ್ಲ. ದಾವೂದ್ ಇಬ್ರಾಹಿಂನ ಡಿ-ಕಂಪನಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಹಾಗೆಯೇ ಬಿಷ್ಣೋಯ್ ಗ್ಯಾಂಗ್ ಕಾರ್ಪೊರೇಟ್ ಕಂಪನಿಯಂತೆ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಪೊಲೀಸರು. ಬಿಷ್ಣೋಯ್ ಗ್ಯಾಂಗ್ ಶಾರ್ಪ್‌ಶೂಟರ್ಸ್‌ ಅಷ್ಟೇ ಅಲ್ಲ, ಲಾಜಿಸ್ಟಿಕ್ಸ್, ಕಾನೂನು ಮತ್ತು ಮಾಹಿತಿ ಸಂಗ್ರಹಣೆಯನ್ನು ನೋಡಿಕೊಳ್ಳುವ ಪ್ರತ್ಯೇಕ ವಿಭಾಗಗಳನ್ನೂ ಹೊಂದಿದೆ.

    ಸಲ್ಮಾನ್ ಖಾನ್ ಟಾರ್ಗೆಟ್ ಯಾಕೆ?
    ಬಿಷ್ಣೋಯ್ ಸಮುದಾಯಕ್ಕೂ ಕೃಷ್ಣಮೃಗಕ್ಕೂ ಅವಿನಾಭಾವ ಸಂಬಂಧ. ಇವರು ಕೃಷ್ಣಮೃಗವನ್ನು ದೇವರೆಂದೇ ಪರಿಗಣಿಸುತ್ತಾರೆ. ಅಂತಹ ಪ್ರಾಣಿಯನ್ನು ಸಲ್ಮಾನ್ ಖಾನ್ ಬೇಟೆಯಾಡಿದ ಎಂಬುದು ಬಿಷ್ಣೋಯ್ ಆಕ್ರೋಶ. ಕೃಷ್ಣಮೃಗ ಬೇಟೆಯಾಡಿದ ಆರೋಪದಲ್ಲಿ 2018ರಲ್ಲಿ ರಾಜಸ್ಥಾನದ ಸ್ಥಳೀಯ ಕೋರ್ಟ್ ಸಲ್ಮಾನ್ ಖಾನ್‌ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತು. ಬಾಲಿವುಡ್ ನಟ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ನಟನ ಮೇಲೆ ಲಾರೆನ್ಸ್ ಬಿಷ್ಣೋಯ್ ಹಗೆ ಸಾಧಿಸುತ್ತಿದ್ದಾನೆ. ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುವವರೆಗೆ ನಿನ್ನನ್ನು ಬಿಡಲ್ಲ ಎಂದು ಬಿಷ್ಣೋಯ್ ಶಪಥ ಮಾಡಿದ್ದಾನೆ. ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಹತ್ಯೆಗೆ ಹಲವು ಬಾರಿ ಯತ್ನಗಳು ನಡೆದಿವೆ. ಅದೃಷ್ಟವಶಾತ್ ನಟ ಪಾರಾಗಿದ್ದಾನೆ. ಆತಂಕದಲ್ಲಿರುವ ಖಾನ್ ರಕ್ಷಣೆಗಾಗಿ ಹೆಚ್ಚಿನ ಭದ್ರತೆ ತೆಗೆದುಕೊಂಡಿದ್ದಾರೆ. ಈ ಹೊತ್ತಿನಲ್ಲೇ ಸಲ್ಮಾನ್ ಖಾನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯಾಗಿದೆ. ಇದು ಸಹಜವಾಗಿ ನಟನಲ್ಲಿ ಆತಂಕ ಹೆಚ್ಚಿಸಿದೆ. ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸಂಬAಧ ಅಷ್ಟಾಗಿ ಚೆನ್ನಾಗಿರಲಿಲ್ಲ. ವೈಮನಸ್ಸು ಮರೆತು ಇಬ್ಬರು ಒಂದಾಗುವAತೆ ಮಾಡಿದವರೇ ಬಾಬಾ ಸಿದ್ದಿಕಿ. ಇವರು ಸಲ್ಮಾನ್ ಖಾನ್ ಜೊತೆಗೆ ಹೆಚ್ಚು ಒಡನಾಟ ಹೊಂದಿದ್ದರು. ಅದೇ ಕಾರಣಕ್ಕೆ ಅವರ ಹತ್ಯೆ ಮಾಡಲಾಗಿದೆ ಎಂದು ಈಗ ಬಿಷ್ಣೋಯ್ ಗ್ಯಾಂಗ್ ಬಹಿರಂಗಪಡಿಸಿದೆ. ಖಾನ್ ಜೊತೆಗೆ ಒಡನಾಟ ಇರುವವರನ್ನು ಯಾರೂ ಬಿಡಲ್ಲ ಎಂದು ಕೂಡ ಎಚ್ಚರಿಕೆ ನೀಡಿದೆ.

    ಬಿಷ್ಣೋಯ್ ಗ್ಯಾಂಗ್ ಹಿಟ್‌ಲಿಸ್ಟ್‌ನಲ್ಲಿ ಯಾರಿದ್ದಾರೆ?
    ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹಿಟ್‌ಲಿಸ್ಟ್‌ನಲ್ಲಿರುವ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ಹಾಸ್ಯನಟರು, ರಾಜಕಾರಣಿಗಳು ಮತ್ತು ಇತರರು ಇದ್ದಾರೆ.

    ಸಲ್ಮಾನ್ ಖಾನ್
    ಬಿಷ್ಣೋಯ್ ಸಮುದಾಯವು ಪ್ರಾಣಿಯನ್ನು ಪವಿತ್ರ ಎಂದು ಪರಿಗಣಿಸಿದೆ. ಕೃಷ್ಣಮೃಗ ಬೇಟೆಯ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಸಲ್ಮಾನ್ ಖಾನ್ ಅವರು ಮೊದಲು ಬಿಷ್ಣೋಯ್ ಕೋಪಕ್ಕೆ ಗುರಿಯಾದರು. ಬಿಷ್ಣೋಯ್, ಖಾನ್ ಅವರನ್ನು ಮೇಲ್ವಿಚಾರಣೆ ಮಾಡಲು ತನ್ನ ಸಹಾಯಕ ಸಂಪತ್ ನೆಹ್ರಾನನ್ನು ಕಳುಹಿಸಿದ್ದ. ಆದರೆ ಆತನನ್ನು ಪೊಲೀಸರು ಬಂಧಿಸಿದರು. ಈ ನಡುವೆ ಬಾಲಿವುಡ್ ಸ್ಟರ್ ನಟನ ಹತ್ಯೆಗೆ ಹಲವು ವಿಫಲ ಯತ್ನಗಳು ನಡೆದಿವೆ.

    ಜೀಶನ್ ಸಿದ್ದಿಕಿ
    ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಮತ್ತು ಶಾಸಕ ಜೀಶಾನ್ ಕೂಡ ಬಿಷ್ಣೋಯ್ ಗ್ಯಾಂಗ್‌ನ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ. ಬಾಬಾ ಸಿದ್ದಿಕ್ಕಿ ಅವರನ್ನು ಹತ್ಯೆ ಮಾಡಿದ ಶೂಟರ್‌ ಫೋನ್‌ನಲ್ಲಿ ಸಿದ್ದಿಕಿ ಪುತ್ರನ ಫೋಟೊ ಪತ್ತೆಯಾಗಿದ್ದು, ಅವರಲ್ಲಿ ಆತಂಕ ಮೂಡಿಸಿದೆ.

    ಮುನಾವರ್ ಫಾರುಕಿ
    ಹಾಸ್ಯನಟ ಕೂಡ ಬಿಷ್ಣೋಯ್ ಅವರ ಹಿಟ್ ಲಿಸ್ಟ್‌ನಲ್ಲಿದ್ದಾರೆ. ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ ಆತನ ವಿರುದ್ಧ ದಾಳಿ ನಡೆಸಲು ಯೋಜಿಸಲಾಗಿತ್ತು. ಆದರೆ ಗುಪ್ತಚರ ಸಂಸ್ಥೆಗಳು ಮಧ್ಯಪ್ರವೇಶಿಸಿ, ಹೆಚ್ಚಿನ ಭದ್ರತೆಯಲ್ಲಿ ಅವರನ್ನು ಮುಂಬೈಗೆ ಸ್ಥಳಾಂತರಿಸಿದವು. ಸಮಾರಂಭವೊಂದರಲ್ಲಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಿದ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ.

    ಶಗನ್‌ಪ್ರೀತ್ ಸಿಂಗ್
    ದಿವಂಗತ ಗಾಯಕ ಸಿದು ಮೂಸೆವಾಲಾ ಅವರ ಮ್ಯಾನೇಜರ್ ಶಗನ್‌ಪ್ರೀತ್ ಕೂಡ ಬಿಷ್ಣೋಗ್ ಗ್ಯಾಂಗ್ ಟಾರ್ಗೆಟ್‌ನಲ್ಲಿದ್ದಾರೆ. ಇವರು ಆಗಸ್ಟ್ 2021 ರಲ್ಲಿ ಮೊಹಾಲಿಯಲ್ಲಿ ಕೊಲೆಯಾದ ಬಿಷ್ಣೋಯ್ ಅವರ ನಿಕಟ ಸಹವರ್ತಿ ವಿಕ್ಕಿ ಮಿದ್ದುಖೇರಾ ಅವರ ಹಂತಕರಿಗೆ ಆಶ್ರಯ ನೀಡಿದ್ದರು ಎನ್ನಲಾಗಿದೆ.

    ಕೌಶಲ್ ಚೌಧರಿ
    ಬಿಷ್ಣೋಯ್ ಗ್ಯಾಂಗ್‌ನ ಪ್ರತಿಸ್ಪರ್ಧಿ ಬಂಬಿಹಾ ಗ್ಯಾಂಗ್‌ನ ಸದಸ್ಯ ಈತ. ಮಿದ್ದುಖೇರಾನನ್ನು ಕೊಂದ ವ್ಯಕ್ತಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪ ಚೌಧರಿ ಮೇಲಿದೆ.

    ಅಮಿತ್ ಡಾಗರ್
    ಕೌಶಲ್ ಚೌಧರಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಡಾಗರ್, ಮಿದ್ದುಖೇರಾನ ಕೊಲೆಯಲ್ಲಿ ಭಾಗಿಯಾಗಿದ್ದ. ಈತ ಕೂಡ ಬಿಷ್ಣೋಯ್ ಗ್ಯಾಂಗ್‌ನ ಟಾರ್ಗೆಟ್‌ ಲಿಸ್ಟ್‌ನಲ್ಲಿದ್ದಾನೆ.

  • ಕುಖ್ಯಾತ ದರೋಡೆಕೋರ ಬಿಷ್ಣೋಯ್‌ನನ್ನು ಮುಂಬೈ ಪೊಲೀಸರು ಯಾಕೆ ಕಸ್ಟಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ?

    ಕುಖ್ಯಾತ ದರೋಡೆಕೋರ ಬಿಷ್ಣೋಯ್‌ನನ್ನು ಮುಂಬೈ ಪೊಲೀಸರು ಯಾಕೆ ಕಸ್ಟಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ?

    ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿರುವ ಗ್ಯಾಂಗ್‌ನ ಮುಖ್ಯಸ್ಥ ಲಾರೆನ್ಸ್ ಬಿಷ್ಣೋಯ್‌ನನ್ನು (Lawrence Bishnoi) ಗುಜರಾತ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಆತನ ಹೆಸರು ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಕೇಳಿಬರುತ್ತಿದ್ದು ಆತನನ್ನು ಕಸ್ಟಡಿಗೆ ಪಡೆಯುವಲ್ಲಿ ಮುಂಬೈ ಪೊಲೀಸರು (Mumbai Police) ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.

    ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಮಾನ್ ಖಾನ್ (Salman Khan) ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಆತನ ಗ್ಯಾಂಗ್ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ವೇಳೆ ಮುಂಬೈ ಪೊಲೀಸರು ಅನೇಕ ಅರ್ಜಿಗಳನ್ನು ಸಲ್ಲಿಸಿ ಆತನನ್ನು ಕಸ್ಟಡಿಗೆ ಪಡೆಯಲು ಯತ್ನಿಸಿದ್ದರೂ ಸಹ ಪೊಲೀಸರ ಯತ್ನ ಫಲಿಸಿರಲಿಲ್ಲ. ಇನ್ನೂ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯ ಹೊಣೆಯನ್ನೂ ಬಿಷ್ಣೋಯ್‌ ಗ್ಯಾಂಗ್ ಹೊತ್ತುಕೊಂಡಿದೆ.

    ಇದೀಗ ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಯವರ ಹತ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಈಗಾಗಲೇ ಬಂಧಿತ ಶೂಟರ್‌ಗಳು ಬಿಷ್ಣೋಯ್ ಗ್ಯಾಂಗ್‌ನವರು ಎಂದು ಹೇಳಿಕೊಂಡಿದ್ದಾರೆ. ಮುಂಬೈ ಪೊಲೀಸರು ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆತನ ಗ್ಯಾಂಗ್‌ನಲ್ಲಿ ಸುಮಾರು 700 ಜನ ಶೂಟರ್‌ಗಳಿದ್ದಾರೆ. ಅಲ್ಲದೇ ಸಣ್ಣ ಮತ್ತು ದೊಡ್ಡ ಕ್ರಿಮಿನಲ್‌ಗಳ ಜೊತೆ ಆತ ಸಂಪರ್ಕದಲ್ಲಿದ್ದಾನೆ ಎಂಬ ಅಂಶವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

    ಬಿಷ್ಣೋಯ್‌ನನ್ನು ಅಹಮದಾಬಾದ್‌ನ ಸಬರಮತಿ ಕಾರಾಗೃಹದಿಂದ ವರ್ಗಾಯಿಸುವುದನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಆತನನ್ನು ಮುಂಬೈ ಪೊಲೀಸರು ಕಸ್ಟಡಿಗೆ ಪಡೆಯದಂತೆ ತಡೆದಿದೆ. ಈ ಆದೇಶವು ಆರಂಭದಲ್ಲಿ ಆಗಸ್ಟ್ 2024 ರವರೆಗೆ ಜಾರಿಯಲ್ಲಿತ್ತು. ಈಗ ಆ ಆದೇಶವನ್ನು ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.

    ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯ್‌ನನ್ನು ಆಗಸ್ಟ್ 2023 ರಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಸಬರಮತಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಈತನ ಬಂಧನದ ಬಳಿಕ ವಿದೇಶದಲ್ಲಿ ನೆಲೆಸಿರುವ ಮೂವರು ವಾಂಟೆಡ್ ದರೋಡೆಕೋರರು ಈತನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆತನ ಸಹೋದರ ಅನ್ಮೋಲ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದರ್ ಎಂಬವರು ಗ್ಯಾಂಗ್‌ನ್ನು ಮುನ್ನಡೆಸುತ್ತಿದ್ದಾರೆ ಎನ್ನಲಾಗಿದೆ.

  • ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಗಳು

    ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಗಳು

    ಮುಂಬೈ: ಮಹಾರಾಷ್ಟ್ರದ (Maharashtra) ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಹತ್ಯೆ ಆರೋಪಿಗಳು ಕೃತ್ಯದ ಬಳಿಕ ಪರಾರಿಯಾಗಲು ಭದ್ರತಾ ಸಿಬ್ಬಂದಿಯ ಮೇಲೆ ಖಾರದ ಪುಡಿ ಎರಚಿದ್ದರು ಎಂದು ಪೊಲೀಸ್‌ (Police) ಮೂಲಗಳು ತಿಳಿಸಿವೆ.

    ಪ್ರಮುಖ ಆರೋಪಿ ಗೌತಮ್ ಬಂಧನದಿಂದ ತಪ್ಪಿಸಿಕೊಳ್ಳಲು ಬಾಬಾ ಸಿದ್ದಿಕಿಯವರ ಕಾವಲಿಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರು ಆರೋಪಿಗಳು ತಮ್ಮೊಂದಿಗೆ ಖಾರದ ಪುಡಿ ಕೊಂಡೊಯ್ದಿದ್ದರು. ಸಿದ್ದಿಕಿಯವರ ಮೇಲೆ ಗುಂಡಿನ ದಾಳಿ ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಖಾರದ ಪುಡಿಯನ್ನು ಭದ್ರತಾ ಸಿಬ್ಬಂದಿ ಮೇಲೆ ಎರಚಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.

    ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಪ್ತ ಬಾಬಾ ಸಿದ್ದಿಕ್ ಅವರನ್ನು ಶನಿವಾರ ಮುಂಬೈನ ಬಾಂದ್ರಾದಲ್ಲಿರುವ ಅವರ ಶಾಸಕ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

    ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯ ಪ್ರವೀಣ್ ಲೋಂಕರ್ (28) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.