Tag: ಬಾಬಾ ಕಾ ಡಾಬಾ

  • ‘ಬಾಬಾ ಕಾ ಡಾಬಾ’ ಖ್ಯಾತಿಯ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?

    ‘ಬಾಬಾ ಕಾ ಡಾಬಾ’ ಖ್ಯಾತಿಯ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?

    ನವದೆಹಲಿ: ಆತ್ಮಹತ್ಯೆಗೆ ಯತ್ನಿಸಿದ್ದ ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಮನೆಗೆ ಬಂದ ಕಾಂತಾ ಪ್ರಸಾದ್, ತಾವು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ಯಾಕೆ ಎಂಬುದರ ಬಗ್ಗೆ ಹೇಳುವ ಮೂಲಕ ಎಲ್ಲ ಅಂತೆಕಂತೆಗಳಿಗೆ ತೆರೆ ಎಳೆದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಕಾಂತಾ ಪ್ರಸಾದ್ ಅವರನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

    ಕಾಂತಾ ಪ್ರಸಾದ್ ಹೇಳಿದ್ದೇನು?:
    ಕೆಲ ಯುಟ್ಯೂಬರ್ ಗಳು ಪದೇ ಪದೇ ತೊಂದರೆ ನೀಡುತ್ತಿದ್ದರು. ಇದರಿಂದ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಪದೇ ಪದೇ ಯುಟ್ಯೂಬರ್ ಗೌರವ್ ವಾಸನ್ ಬಳಿ ಕ್ಷಮೆ ಕೇಳುವಂತೆ ಒತ್ತಡ ಹಾಕಲಾಗುತ್ತಿತ್ತು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ಪೊಲೀಸರು ಇದುವರೆಗೂ ಯಾವುದೇ ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಕಾಂತಾ ಪ್ರಸಾದ್ ಮೇಲೆ ಒತ್ತಡ ಹಾಕುತ್ತಿದ್ದ ಯುಟ್ಯೂಬರ್ ಗಳನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ: ರಮೇಶ್ ಜಾರಕಿಹೊಳಿ

    ಕಳೆದ ವರ್ಷ ಕಾಂತಾ ಪ್ರಸಾದ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಯುಟ್ಯೂಬರ್ ಗೌರವ್ ವಾಸನ್ ಈ ವೀಡಿಯೋ ಮಾಡಿ, ಕಾಂತಾ ಪ್ರಸಾದ್ ಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಾದ ನಂತರ ಬಾಬಾ ಕಾ ಡಾಬಾ ಇಡೀ ದೇಶದಲ್ಲಿಯೇ ಫೇಮಸ್ ಆಗಿತ್ತು. ಹಲವರು ಕಾಂತಾ ಪ್ರಸಾದ್‍ಗೆ ಆರ್ಥಿಕ ಸಹಾಯ ಮಾಡಿದ್ದರು. ಆದ್ರೆ ಗೌರವ್ ವಾಸನ್ ಹಣಕಾಸಿನ ವಿಚಾರದಲ್ಲಿ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕಾಂತಾ ಪ್ರಸಾದ್ ದೂರು ಸಲ್ಲಿಸಿದ್ದರು. ಇದಾದ ಬಳಿಕ ಗೌರವ್ ವಾಸನ್ ಬಳಿ ಕಾಂತಾ ಪ್ರಸಾದ್ ಕ್ಷಮೆ ಕೇಳಿದ್ದರು. ಇದನ್ನೂ ಓದಿ: ನಿರಾಶ್ರಿತ ಮಹಿಳೆಗೆ ಕೋವಿಡ್ ಪಾಸಿಟಿವ್- ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು, ವೈದ್ಯರು

  • ಬಾಬಾ ಕಾ ಡಾಬಾ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು

    ಬಾಬಾ ಕಾ ಡಾಬಾ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಒಂದೇ ವೀಡಿಯೋದಿಂದ ವೃದ್ಧ ದಂಪತಿಯ ಬದುಕು ಬದಲಾದ ತಿಳಿದೇ ಇದೆ. ಅದೇ ಬಾಬಾ ಕಾ ಡಾಬಾ ಮಾಲೀಕ ಕಾಂತ ಪ್ರಸಾದ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ದೆಹಲಿಯ ಸಫ್ತರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಪ್ರಸಾದ್ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ರಾತ್ರಿ 11.50ರ ಸುಮಾರಿಗೆ ಸಫ್ತರ್‍ಜಂಗ್ ಆಸ್ಪತ್ರೆಯಿಂದ ನಮಗೆ ಮಾಹಿತಿ ಲಭ್ಯವಾಗಿಯಿತು. ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಎಂಎಲ್‍ಸಿ (ಮೆಡಿಕೋ ಲೀಗಲ್ ಕೇಸ್) ಸಂಗ್ರಹಿಸಿದರು. ಪ್ರಸಾದ್ ಅವರು ಆಲ್ಕೋಹಾಲ್ ಹಾಗೂ ನಿದ್ದೆ ಮಾತ್ರೆ ತೆಗೆದುಕೊಂಡಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಡಿಸಿಪಿ ಅತುಲ್ ಕುಮಾರ್ ಠಾಕೂರ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಖರ್ಚು ಮಾಡಿದ್ದು 1 ಲಕ್ಷ, ಕೈಗೆ ಬಂದಿದ್ದು ಬರೀ 35 ಸಾವಿರ – ಬಾಬಾ ಕಾ ಡಾಬಾ ಹೊಸ ಶಾಪ್ ಕ್ಲೋಸ್!

    ಕಾಂತ ಪ್ರಸಾದ್ ಅವರ ಮಗ ಕರಣ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಮ್ಮ ತಂದೆ ಮದ್ಯ ಸೇವಿಸಿದ್ದು, ಜೊತೆಗೆ ನಿದ್ದೆ ಮಾತ್ರೆಗಳನ್ನು ಸಹ ನುಂಗಿದ್ದರು.

    ಈ ಕರಿತು ಕಾಂತ ಪ್ರಸಾದ್ ಅವರ ಪತ್ನಿ ಬಾದಾಮಿ ದೇವಿ ಸಹ ಪ್ರತಿಕ್ರಿಯಿಸಿ ಅಂಗಡಿ ಬಳಿಯೇ ಪ್ರಜ್ಞಾಹೀನರಾಗಿ ಬಿದ್ದರು. ಅವರು ಏನು ತಿಂದರು, ಏನು ಕುಡಿದರು ಎಂಬುದು ನನಗೆ ತಿಳಿದಿಲ್ಲ. ಪ್ರಜ್ಞಾಹೀನರಾಗಿ ಬೀಳುತ್ತಿದ್ದಂತೆ ಆಸ್ಪತ್ರೆಗೆ ಕೊಂಡೊಯ್ದರು. ವೈದ್ಯರು ಸಹ ನಮ್ಮ ಬಳಿ ಏನೂ ಹೇಳಿಲ್ಲ. ಅವರು ಏನು ಯೋಚಿಸುತ್ತಿದ್ದರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಕಾ ಡಾಬಾ ವೀಡಿಯೋ ಸಖತ್ ವೈರಲ್ ಆಗಿತ್ತು. ದೆಹಲಿಯ ಮಾಳವಿಯಾ ನಗರದಲ್ಲಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ವೃದ್ಧ ದಂಪತಿ, ಕೊರೊನಾದಿಂದಾಗಿ ಅನುಭವಿಸುತ್ತಿರುವ ಕಷ್ಟವನ್ನು ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಗೌರವ್ ತಮ್ಮ ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ವೃದ್ಧ ದಂಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದದ್ದರು. ಬಳಿಕ ಲಕ್ಷಾಂತರ ರೂಪಾಯಿ ಹಣ ಹರಿದು ಬಂದಿತ್ತು. ಬಳಿಕ ಹೊಸ ಹೋಟೆಲ್‍ನ್ನು ಸಹ ತೆರೆದಿದ್ದರು. ಆದರೆ ಅಷ್ಟೇನು ವ್ಯಾಪಾರವಾಗದ ಕಾರಣ ಹೊಸ ಹೋಟೆಲ್ ಮುಚ್ಚಿ, ಮತ್ತೆ ಈ ಹಿಂದೆ ಇದ್ದ ಸಣ್ಣ ಹೋಟೆಲ್ ತೆರೆದಿದ್ದರು.

  • ಖರ್ಚು ಮಾಡಿದ್ದು 1 ಲಕ್ಷ, ಕೈಗೆ ಬಂದಿದ್ದು ಬರೀ 35 ಸಾವಿರ – ಬಾಬಾ ಕಾ ಡಾಬಾ ಹೊಸ ಶಾಪ್ ಕ್ಲೋಸ್!

    ಖರ್ಚು ಮಾಡಿದ್ದು 1 ಲಕ್ಷ, ಕೈಗೆ ಬಂದಿದ್ದು ಬರೀ 35 ಸಾವಿರ – ಬಾಬಾ ಕಾ ಡಾಬಾ ಹೊಸ ಶಾಪ್ ಕ್ಲೋಸ್!

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಿಂದ ತೀವ್ರ ಸಂಕಷ್ಟಕ್ಕೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಹೊಸ ಶಾಪ್ ತೆರೆಯಲು ನೆಟ್ಟಿಗರು ಸಹಾಯ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಇದೀಗ ವೃದ್ಧ ಆ ಹೊಸ ಅಂಗಡಿಗೂ ಶಟರ್ ಎಳೆದಿದ್ದಾರೆ.

    ಹೌದು. ಆಗ್ರಾದ 90 ವರ್ಷದ ವೃದ್ಧ ಕಾಂತ ಪ್ರಸಾದ್ ತಮ್ಮ ಬದುಕಿನ ಬಂಡಿ ಸಾಗಿಸಲು ರಸ್ತೆ ಬಂದಿ ಒಂದು ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಆದರೆ ಕೊರೊನಾ ವೈರಸ್ ಬಂದ ಬಳಿಕ ವೃದ್ಧ ತನ್ನ ಆದಾಯ ಕಳೆದುಕೊಂಡು ಕಣ್ಣೀರಾಕಿದ್ದರು. ವೃದ್ಧ ಕಣ್ಣೀರು ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ ವೃದ್ಧನ ಕಣ್ಣೀರಿಗೆ ಮನಸೋತ ನೆಟ್ಟಿಗರು ಅವರಿಗೆ ಹೊಸ ಅಂಗಡಿ ತೆರೆಯಲು ಸಹಾಯ ಮಾಡಿದ್ದರು.

    ಇದೀಗ ವೃದ್ಧ ಆ ಅಂಗಡಿಯನ್ನು ಮುಚ್ಚಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 2020ರ ಡಿಸೆಂಬರ್ ತಿಂಗಳಿನಲ್ಲಿ ತೆರೆದಿರುವ ಅಂಗಡಿಯನ್ನು ಮುಚ್ಚುತ್ತಿದ್ದೇನೆ. ಯಾಕೆಂದರೆ ನಾನು ಈ ಅಂಗಡಿಗೆ ಸುಮಾರು 1 ಲಕ್ಷದಷ್ಟು ಖರ್ಚು ಮಾಡಿದ್ದೇನೆ. ಆದರೆ ನನ್ನ ಕೈಗೆ ಬಂದಿರುವುದು ಕೇವಲ 35 ಸಾವಿರ ಮಾತ್ರ. ಹೀಗಾಗಿ ನನಗೆ ತುಂಬಾ ನಷ್ಟವಾಗಿದೆ. ಸದ್ಯ ನಾನು ಈ ಹಿಂದಿನಂತೆ ರಸ್ತೆ ಬದಿಯಲ್ಲೇ ಅಂಗಡಿ ನಡೆಸಲು ನಿರ್ಧರಿಸಿದ್ದು, ಇದೇ ನನಗೆ ಖುಷಿ ನೀಡುತ್ತದೆ ಎಂದು ತಿಳಿಸಿದ್ದಾರೆ.

    ನಾನು ಜೀವಂತವಾಗಿರುವಷ್ಟು ದಿನ ಈ ಡಾಬಾವನ್ನು ಮುಂದುವರಿಸುತ್ತೇನೆ. ಯಾವಾಗ ನನ್ನ ವ್ಯವಹಾರದಲ್ಲಿ ಕುಸಿತ ಕಂಡು ಬರುತ್ತದೋ ಅಂದು ಅಂಗಡಿ ಮುಚ್ಚುತ್ತೇನೆ. ಕಳೆದ ವರ್ಷ ಸಿಕ್ಕಿದ ದೇಣಿಗೆಯಲ್ಲಿ 20 ಲಕ್ಷ ರೂ. ಹಣವನ್ನು ನಾನು ನನ್ನ ಪತ್ನಿ ಉಳಿಸಿಕೊಂಡಿದ್ದೇವೆ ಎಂದು ಕಾಂತ ಪ್ರಸಾದ್ ವಿವರಿಸಿದ್ದಾರೆ.

    ಕಣ್ಣೀರಾಕಿದ್ದ ಕಾಂತ ಪ್ರಸಾದ್:
    ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಹೋಟೆಲ್‍ಗೆ ಊಟಕ್ಕೆ ಬರುವವರ ಸಂಖ್ಯೆ ತೀರಾ ವಿರಳವಾಗಿದ್ದರಿಂದ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದರು. ಇದನ್ನು ಕಂಡ ಸ್ಥಳೀಯರು ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ದಯವಿಟ್ಟು ಸ್ಥಳೀಯ ವ್ಯಾಪಾರಿಗಳನ್ನು ಉಳಿಸಿ ಎಂದು ಟ್ವಿಟ್ಟರ್ ಬಳಕೆದಾರ ವಸುಂಧರ ತಂಖಾ ಶರ್ಮಾ ಟ್ವೀಟ್ ಮಾಡಿದ್ದರು. ಅಲ್ಲದೆ ಈ ವೀಡಿಯೋ ನೋಡಿದ ನಂತರ ನನ್ನ ಹೃದವೇ ಒಡೆದಂತಾಯಿತು. ದೆಹಲಿಯ ಜನ ಅವಕಾಶ ಸಿಕ್ಕರೆ ದಯವಿಟ್ಟು ಅವರ ಬಾಬಾ ಕಾ ಡಾಬಾಗೆ ಹೋಗಿ ಊಟ ಮಾಡಿ ಎಂದು ಮನವಿ ಮಾಡಿದ್ದರು.

    https://twitter.com/VasundharaTankh/status/1313881005179064320

    ಈ ವೀಡಿಯೋವನ್ನು ಮೊದಲು ಸ್ವಾದ್ ಅಫೀಶೀಯಲ್ ಎಂಬ ಫೇಸ್ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿತ್ತು. 80 ವರ್ಷದ ವೃದ್ಧ ದಂಪತಿ ಮಟರ್ ಪನೀರ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಮ್ಮ ಡಾಬಾದಲ್ಲಿ ಮಾರಾಟ ಮಾಡುತ್ತಿದ್ದರು. ವೀಡಿಯೋದಲ್ಲಿ ದಂಪತಿ ಅಳುತ್ತಿರುವುದನ್ನು ಕಾಣಬಹುದಾಗಿತ್ತು. ಆದರೆ ಅವರಿಗೆ ಗೊತ್ತಾಗದಂತೆ ವೀಡಿಯೋ ಮಾಡಲಾಗಿತ್ತು. 1988 ರಿಂದಲೂ ಈ ದಂಪತಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಅವರಿಗೆ ತಮ್ಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಅಲ್ಲದೆ ವೀಡಿಯೋ ಮಾಡುತ್ತಲೇ, ಆಹಾರ ಪದಾರ್ಥ ಚೆನ್ನಾಗಿರುತ್ತದೆ ಎಂಬುದನ್ನು ವೀಡಿಯೋದಲ್ಲಿ ತೋರಿಸಲಾಗಿತ್ತು. ಅಲ್ಲದೆ ವಿಳಾಸವನ್ನು ಕೂಡ ಹಂಚಿಕೊಂಡಿದ್ದರು.

    ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಸಖತ್ ವೈರಲ್ ಆಗಿದ್ದು, ಬಾಲಿವುಡ್ ನಟ, ನಟಿಯರು ಸಹ ವಿಡಿಯೋ ಶೇರ್ ಮಾಡಿದ್ದರು. ಇವರ ಹೋಟೆಲ್‍ನಲ್ಲಿ ಊಟ ಮಾಡುವುದರಿಂದ ನೀವು ಕೇವಲ ಆ ವೃದ್ಧ ದಂಪತಿಯನ್ನು ಉಳಿಸಿದಂತೆ ಆಗುವುದಿಲ್ಲ. ಸ್ಥಳೀಯ ವ್ಯಾಪಾರವನ್ನು ಉಳಿಸಿದಂತಾಗುತ್ತದೆ ಎಂದು ಹಲವು ಬೇಡಿಕೊಂಡಿದ್ದರು.

  • ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾಬಾವಾಲಾ ಬಾಬಾ

    ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾಬಾವಾಲಾ ಬಾಬಾ

    ನವದೆಹಲಿ: ಬಾಬಾ ಕಾ ಡಾಬಾ ಖ್ಯಾತಿ ಯ ಕಾಂತಾ ಪ್ರಸಾದ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಯು ಟ್ಯೂಬರ್ ಗೌರವ್ ವಾಸನ್ ವಿರುದ್ಧ ದೂರು ಸಲ್ಲಿಸಿದ್ದಾರೆ.

    ಕಾಂತಾ ಪ್ರಸಾದ್ ಕಷ್ಟಕ್ಕೆ ಮರುಗಿದ ಜನ ನೀಡಿದ ಹಣದಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿ ಕಾಂತಾ ಪ್ರಸಾದ್ ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುಟ್ಯೂಬರ್ ಲಕ್ಷ್ಯ ಚೌಧರಿ ಎಂಬವರ ವೃದ್ಧನಿಗಾಗಿ ದಾನದ ರೂಪದಲ್ಲಿ ಬಂದ ಹಣ ಕಾಂತಾ ಪ್ರಸಾದ್ ಅವರಿಗೆ ತಲುಪಿಲ್ಲ ಎಂದು ಆರೋಪಿಸಿದ್ದರು. ಆರೋಪದ ಬೆನ್ನಲ್ಲೇ ವೃದ್ಧ ದೂರು ದಾಖಲಿಸಿದ್ದಾರೆ. ಜನರು ವರ್ಗಾಯಿಸಿರುವ ಹಣ ಗೌರವ್ ವಾಸನ್ ಮತ್ತು ಆತನ ಪತ್ನಿಯ ಖಾತೆಗೆ ಜಮೆ ಆಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಇದನ್ನೂ ಓದಿ: ಬಾಬಾ ಕಾ ಡಾಬಾ ಬಳಿಕ ಮತ್ತೊಂದು ವೀಡಿಯೋ ವೈರಲ್- 90ರ ವೃದ್ಧನ ಸಹಾಯಕ್ಕಾಗಿ ಮನವಿ

    ಕಾಂತಾ ಪ್ರಸಾದ್ ಎಂಬವರು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಇನ್ನೂ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

    ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಕಾ ಡಾಬಾ ವೀಡಿಯೋ ಸಖತ್ ವೈರಲ್ ಆಗಿತ್ತು. ಕೊರೊನಾದಿಂದಾಗಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ವೃದ್ಧ ದಂಪತಿಯ ಕಷ್ಟವನ್ನ ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಗೌರವ್ ತಮ್ಮ ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ವೃದ್ಧ ದಂಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದದ್ದರು.

  • ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

    ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

    – ಟ್ವಿಟ್ಟರ್ ಟ್ರೆಂಡಿಂಗ್‍ನಲ್ಲಿದೆ ‘ಬಾಬಾ ಕಾ ಡಾಬಾ’
    – ವೃದ್ಧ ದಂಪತಿಯ ಕಣ್ಣೀರಿಗೆ ಕರಗಿದ ಮಂದಿ

    ನವದೆಹಲಿ: ಕೊರೊನಾ ಮಹಾಮಾರಿಯಿಂದಾಗಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿರುವುದು ತಿಳಿದೇ ಇದೆ. 80 ವರ್ಷದ ದಂಪತಿ ಸಹ ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ತೀವ್ರ ಸಂಕಷ್ಟದಲ್ಲಿದ್ದಾರೆ. ನೆಟ್ಟಿಗರು ಇವರ ಸಹಾಯಕ್ಕೆ ನಿಂತಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

    ಹಿರಿಯ ಜೀವಗಳು ದೆಹಲಿಯ ಮಾಳ್ವಿಯಾ ನಗರದಲ್ಲಿ ‘ಬಾಬಾ ಕಾ ಡಾಬಾ’ ಹೆಸರಿನ ಹೋಟೆಲ್ ನಡೆಸುತ್ತಿದ್ದಾರೆ. ಆದರೆ ಲಾಕ್‍ಡೌನ್ ಬಳಿಕ ಅವರಿಗೆ ಸರಿಯಾಗಿ ವ್ಯಾಪಾರವಾಗುತ್ತಿಲ್ಲ. ಇದನ್ನು ಮನಗಂಡ ನೆಟ್ಟಿಗರು ಇಲ್ಲಿನ ಸುತ್ತಲಿನವರು ದಯವಿಟ್ಟು ಇವರ ಹೋಟೆಲ್‍ನಲ್ಲಿ ಊಟ ಮಾಡಿ ಅವರಿಗೂ ಬದುಕಲು ಅವಕಾಶ ಮಾಡಿಕೊಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

    ಇತ್ತೀಚೆಗೆ ಅವರ ಹೋಟೆಲ್‍ಗೆ ಊಟಕ್ಕೆ ಬರುವವರ ಸಂಖ್ಯೆ ತೀರಾ ವಿರಳವಾಗಿದ್ದು, ಹೀಗಾಗಿ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ. ಇದನ್ನು ಕಂಡ ಸ್ಥಳೀಯರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದಯವಿಟ್ಟು ಸ್ಥಳೀಯ ವ್ಯಾಪಾರಿಗಳನ್ನು ಉಳಿಸಿ ಎಂದು ವಸುಂಧರ ತಂಖಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ನನ್ನ ಹೃದವೇ ಒಡೆದಂತಾಯಿತು. ದೆಹಲಿಯ ಜನ ಅವಕಾಶ ಸಿಕ್ಕರೆ ದಯವಿಟ್ಟು ಅವರ ಬಾಬಾ ಕಾ ಡಾಬಾಗೆ ಹೋಗಿ ಊಟ ಮಾಡಿ ಎಂದು ಮನವಿ ಮಾಡಿದ್ದಾರೆ.

    ಈ ವಿಡಿಯೋವನ್ನು ಮೊದಲು ಸ್ವಾದ್ ಅಫೀಶೀಯಲ್ ಎಂಬ ಫೇಸ್ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. 80 ವರ್ಷದ ವೃದ್ಧ ದಂಪತಿ ಮಟರ್ ಪನೀರ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಮ್ಮ ಡಾಬಾದಲ್ಲಿ ಮಾರಾಟ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ದಂಪತಿ ಅಳುತ್ತಿರುವುದನ್ನು ಕಾಣಬಹುದಾಗಿದ್ದು, ಅವರಿಗೆ ಗೊತ್ತಾಗದಂತೆ ವಿಡಿಯೋ ಮಾಡಲಾಗಿದೆ. 1988 ರಿಂದಲೂ ಈ ದಂಪತಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಅವರಿಗೆ ತಮ್ಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಿಡಿಯೋ ಮಾಡುತ್ತಲೇ, ಆಹಾರ ಪದಾರ್ಥ ಚೆನ್ನಾಗಿರುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೆ ವಿಳಾಸವನ್ನು ಹೇಳಿದ್ದಾರೆ.

    ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಸಖತ್ ವೈರಲ್ ಆಗಿದ್ದು, ಬಾಲಿವುಡ್ ನಟ, ನಟಿಯರು ಸಹ ವಿಡಿಯೋ ಶೇರ್ ಮಾಡಿದ್ದಾರೆ. ಇವರ ಹೋಟೆಲ್‍ನಲ್ಲಿ ಊಟ ಮಾಡುವುದರಿಂದ ನೀವು ಕೇವಲ ಆ ವೃದ್ಧ ದಂಪತಿಯನ್ನು ಉಳಿಸಿದಂತೆ ಆಗುವುದಿಲ್ಲ. ಸ್ಥಳೀಯ ವ್ಯಾಪಾರವನ್ನು ಉಳಿಸಿದಂತಾಗುತ್ತದೆ ಎಂದು ಹಲವು ಬೇಡಿಕೊಂಡಿದ್ದಾರೆ.

    ಬಾಲಿವುಡ್ ನಟರಾದ ರಣದೀಪ್ ಹೂಡಾ, ರವೀನಾ ಟಂಡನ್ ಹಾಗೂ ಸುನೀಲ್ ಶೆಟ್ಟಿ ಅವರು ವಿಟಿಯೋ ಟ್ವೀಟ್ ಮಾಡಿದ್ದಾರೆ. ಈ ಕುರಿತು ಸುದ್ದಿ ಹರಿದಾಡುತ್ತಿದ್ದಂತೆ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಸಂತಸದ ವಿಚಾರವನ್ನು ಹಂಚಿಕೊಂಡಿದ್ದು, ದಂಪತಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಎಪಿ ಶಾಸಕ ಸೋಮನಾಥ್ ಭಾರ್ತಿ ಆಗಮಿಸಿದ್ದಾರೆ. ಅಲ್ಲದೆ ಹೆಚ್ಚು ಜನ ಊಟಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಅವರ ಮೊಗದಲ್ಲಿ ಸಂತಸ ಮೂಡಿದೆ ಎಂದು ತಿಳಿಸಿದ್ದಾರೆ.