Tag: ಬಾಬರ್ ಅಜಮ್

  • ಸಹ ಆಟಗಾರನ ಗೆಳತಿಯೊಂದಿಗೆ ಪಾಕ್ ನಾಯಕ ಚಾಟಿಂಗ್ – ಹನಿಟ್ರ್ಯಾಪ್‍ಗೆ ಸಿಲುಕಿದ್ರಾ ಬಾಬರ್ ಅಜಮ್?

    ಸಹ ಆಟಗಾರನ ಗೆಳತಿಯೊಂದಿಗೆ ಪಾಕ್ ನಾಯಕ ಚಾಟಿಂಗ್ – ಹನಿಟ್ರ್ಯಾಪ್‍ಗೆ ಸಿಲುಕಿದ್ರಾ ಬಾಬರ್ ಅಜಮ್?

    ಇಸ್ಲಾಮಾಬಾದ್: ಪಾಕಿಸ್ತಾನ (Pakistan) ತಂಡದ ನಾಯಕ ಬಾಬರ್ ಅಜಮ್ (Babar Azam) ಸಹ ಆಟಗಾರನ ಗೆಳತಿಯೊಂದಿಗೆ ಚಾಟ್ ಮಾಡಿಕೊಂಡು, ಹನಿಟ್ರ್ಯಾಪ್‍ಗೆ (Honey Trap) ಸಿಲುಕಿರುವ ವೀಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಬಾಬರ್ ಅಜಮ್‌ರಂತೆ ಕಾಣಿಸಿಕೊಂಡಿರುವ ವ್ಯಕ್ತಿಯ ಕೆಲವು ವೈಯಕ್ತಿಕ ವೀಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಆ ವ್ಯಕ್ತಿ ಹನಿ ಟ್ರ್ಯಾಪ್‍ನಲ್ಲಿ ಸಿಲುಕಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ವೀಡಿಯೋದಲ್ಲಿರುವ ಯುವತಿ ಇನ್ನೊಬ್ಬ ಪಾಕಿಸ್ತಾನಿ ಕ್ರಿಕೆಟಿಗನ ಗೆಳತಿ ಎಂದು ಹೇಳಲಾಗುತ್ತಿದೆ. ಆಕೆಯೊಂದಿಗೆ ಬಾಬರ್‌ರಂತೆ ಕಾಣಿಸಿಕೊಂಡಿರುವ ವ್ಯಕ್ತಿ ಚಾಟ್ ಮಾಡುತ್ತಿರುವ ಮತ್ತು ವೀಡಿಯೋ ಕಾಲ್‌ನಲ್ಲಿರುವ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪ್ರೇಕ್ಷಕರಿಲ್ಲದೇ ಖಾಲಿ ಹೊಡೆದ ಸ್ಟೇಡಿಯಂ – ಕೇರಳ ಕ್ರೀಡಾ ಸಚಿವರ ವಿವಾದಾತ್ಮಕ ಹೇಳಿಕೆ ವಿರುದ್ಧ ನಿಲ್ಲದ ಆಕ್ರೋಶ

    ಬಾಬರ್‌ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್‌ ಮತ್ತು ಏಕದಿನ ಸರಣಿ ಸೋತ ಬಳಿಕ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಈ ನಡುವೆ ಈ ವೀಡಿಯೋ, ಫೋಟೋಗಳು ಹರಿದಾಡುತ್ತಿವೆ. ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ವೈಟ್‍ವಾಶ್ ಮುಖಭಂಗ ಅನುಭವಿಸಿತ್ತು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 2-1 ಅಂತರದಲ್ಲಿ ಏಕದಿನ ಸರಣಿ ಸೋತಿತ್ತು. ಆ ಬಳಿಕ ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ನಡುವೆ ಇದೀಗ ವೈಯಕ್ತಿಕ ಫೋಟೋ, ವೀಡಿಯೋ ಲಿಕ್ ಆಗಿ ಮುಜುಗರಕ್ಕೆ ಒಳಗಾಗುವಂತೆ ಆಗಿದೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಇಸ್ಲಾಮಾಬಾದ್: ಟಿ20 ವಿಶ್ವಕಪ್‌ನಲ್ಲಿ (T20 World) ಇಂಗ್ಲೆಂಡ್ ಎದುರು ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ಪಾಕಿಸ್ತಾನ (Pakistan), 17 ವರ್ಷಗಳ ಬಳಿಕ ಇಂಗ್ಲೆಂಡ್ (England) ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ (Test Cricket) 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಯಿತು.

    ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯಿಂದ ಬೆನ್‌ಸ್ಟೋಕ್ಸ್ (Ben Stokes) ಪಡೆ ಪಾಕಿಸ್ತಾನ ತಂಡವನ್ನು ತವರಿನಲ್ಲೇ ವೈಟ್‌ವಾಶ್ ಮಾಡಿತು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಪಾಕ್ ತಂಡ, ಭಾರೀ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ (Danish Kaneria) ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಪಾಕಿಸ್ತಾನ ತಂಡದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ದೊಡ್ಡ ಸೊನ್ನೆ. ಅವರನ್ನು ವಾಸ್ತವವಾಗಿ ವಿರಾಟ್ ಕೊಹ್ಲಿಗೆ (Virat Kohli) ಹೋಲಿಸೋದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    ಜನರು ಬಾಬರ್ ಅಜಮ್‌ನನ್ನ ವಿರಾಟ್ ಕೊಹ್ಲಿ ಅವರಿಗೆ ಹೋಲಿಸೋದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohit Sharma) ಅವರಂತಹವರು ಬಹಳ ದೊಡ್ಡ ಆಟಗಾರರು. ಅವರಿಗೆ ಹೋಲಿಸುವಂತಹವರು ಪಾಕ್ ತಂಡದಲ್ಲಿ ಯಾರೂ ಇಲ್ಲ. ನೀವು ಅವರನ್ನ ಮಾತನಾಡಲು ಕೇಳಿದ್ರೆ ಹಾಜರಾಗುತ್ತಾರೆ. ಅದೇ ಫಲಿತಾಂಶ ನೀಡಲು ಕೇಳಿದ್ರೆ ಶೂನ್ಯವಾಗಿರುತ್ತದೆ ಎಂದು ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಾಬರ್ ನಾಯಕನಾಗಿ ದೊಡ್ಡ ಶೂನ್ಯ, ತಂಡವನ್ನು ಮುನ್ನಡೆಸಲು ಅರ್ಹರಲ್ಲ. ಮುನ್ನಡೆಸುವ ಸಾಮರ್ಥ್ಯವನ್ನೂ ಅವರು ಹೊಂದಿಲ್ಲ. ಟೆಸ್ಟ್ ಕ್ರಿಕೆಟ್‌ಗೆ ಬಂದಾಗ ಬೆನ್‌ಸ್ಟೋಕ್ಸ್ ನೋಡಿ ಕಲಿಯಬೇಕಿದೆ. ಇನ್ನು ಮುಂದೆ ಬಾಬರ್ ಲಾಂಗೆಸ್ಟ್ ಫಾರ್ಮ್ಯಾಟ್‌ನಲ್ಲಿ ಆಡುವುದು ಸೂಕ್ತವಲ್ಲ ಎಂದು ಕನೇರಿಯಾ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    Live Tv
    [brid partner=56869869 player=32851 video=960834 autoplay=true]

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ಭೌತಶಾಸ್ತ್ರ ಪಠ್ಯದಲ್ಲಿ ಬಾಬರ್ ಅಜಮ್ ಕವರ್ ಡ್ರೈವ್ ಪ್ರಶ್ನೆ!

    ಪಾಕಿಸ್ತಾನದ ಭೌತಶಾಸ್ತ್ರ ಪಠ್ಯದಲ್ಲಿ ಬಾಬರ್ ಅಜಮ್ ಕವರ್ ಡ್ರೈವ್ ಪ್ರಶ್ನೆ!

    ಇಸ್ಲಾಮಾಬಾದ್: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರ ಕವರ್ ಡ್ರೈವ್ ಕುರಿತಾದ ಪ್ರಶ್ನೆಯೊಂದು ಭೌತಶಾಸ್ತ್ರ ಪುಸ್ತಕದಲ್ಲಿ ಸೇರಿಸಿರುವ ಬಗ್ಗೆ ವೈರಲ್ ಆಗುತ್ತಿದೆ.

    ಬಾಬರ್ ಅಜಮ್ ಪಾಕಿಸ್ತಾನ ತಂಡದ ರನ್ ಮಷಿನ್ ವಿಶ್ವಕ್ರಿಕೆಟ್‍ನಲ್ಲಿ ತನ್ನ ಅದ್ಭುತ ಕವರ್ ಡ್ರೈವ್ ಹೊಡೆತಗಳ ಮೂಲಕ ಗಮನಸೆಳೆದ ಆಟಗಾರ. ಇದೀಗ ಇವರ ಕವರ್ ಡ್ರೈವ್ ಕುರಿತಾದ ಪ್ರಶ್ನೆಯೊಂದು ಪಾಕಿಸ್ತಾನದ 9ನೇ ಗ್ರೇಡ್ ಭೌತಶಾಸ್ತ್ರ ಪಠ್ಯದಲ್ಲಿ ಪ್ರಶ್ನೆಯಾಗಿ ನೀಡಲಾಗಿದೆ. ಈ ಪ್ರಶ್ನೆ ಕುರಿತಾದ ಸ್ಕ್ರೀನ್ ಶಾಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಈಗ ಗ್ರೌಂಡ್ ಹೊರಗಡೆಯೂ ದಾಖಲೆ ಬರೆದ ಕೊಹ್ಲಿ

    ಬಾಬರ್ ಅಜಮ್ ತನ್ನ ಬ್ಯಾಟ್‍ನಿಂದ ಚೆಂಡಿಗೆ 150 ಜೆ ಚಲನ ಶಕ್ತಿಯನ್ನು ನೀಡುವ ಮೂಲಕ ಕವರ್ ಡ್ರೈವ್ ಹೊಡೆದಿದ್ದಾರೆ. A) ಚೆಂಡಿನ ದ್ರವ್ಯರಾಶಿ 120 ಗ್ರಾಂ ಆಗಿದ್ದರೆ ಚೆಂಡು ಯಾವ ವೇಗದಲ್ಲಿ ಬೌಂಡರಿ ಹೋಗುತ್ತದೆ? B) ಈ ವೇಗದಲ್ಲಿ ಚಲಿಸುವಂತೆ ಮಾಡಲು 450 ಗ್ರಾಂ ದ್ರವ್ಯರಾಶಿಯ ಫುಟ್‍ಬಾಲ್‍ಗೆ ಫುಟ್‍ಬಾಲ್ ಆಟಗಾರ ಎಷ್ಟು ಚಲನ ಶಕ್ತಿಯನ್ನು ನೀಡಬೇಕು ಎಂದು ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ

    ಇದೀಗ ಬಾಬರ್ ಅಜಮ್ ರನ್ ಬರ ಅನುಭವಿಸುತ್ತಿದ್ದಾರೆ. ಏಷ್ಯಾಕಪ್‍ನಲ್ಲಿ ಆಡಿದ ಒಟ್ಟು 6 ಪಂದ್ಯಗಳಿಂದ 68 ರನ್ ಬಾರಿಸಿದ್ದಾರೆ. ಏಷ್ಯಾಕಪ್‍ನಲ್ಲಿ 30 ರನ್ (29 ಎಸೆತ) ಹೆಚ್ಚಿನ ಗಳಿಕೆಯಾಗಿದೆ. ಹಾಗಾಗಿ ಇದೀಗ ಟ್ರೋಲ್‍ಗೆ ಗುರಿಯಾಗಿದ್ದು ಏಷ್ಯಾಕಪ್‍ನ ಸೂಪರ್ ಫೋರ್ ಮತ್ತು ಫೈನಲ್ ಪಂದ್ಯದಲ್ಲಿ ಸತತವಾಗಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಾಣಲು ಬಾಬರ್ ಅಜಮ್ ಬ್ಯಾಟಿಂಗ್ ಕೂಡ ಪ್ರಮುಖ ಕಾರಣ. ಹಲವು ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದ ಬಾಬರ್ ಏಷ್ಯಾಕಪ್‍ನಲ್ಲಿ ರನ್ ಗಳಿಸಲು ಪರದಾಡಿದರು. ಇದು ಪಾಕಿಸ್ತಾನ ದಿಢೀರ್ ಕುಸಿತಕ್ಕೆ ಕಾರಣವಾಗಿದೆ. ಹಾಗಾಗಿ ಮುಂದಿನ ಟಿ20 ವಿಶ್ವಕಪ್‍ಗೂ ಮುನ್ನ ಬಾಬರ್ ಫಾರ್ಮ್ ಕಂಡುಕೊಳ್ಳಬೇಕಾಗಿದೆ. ಇದನ್ನೂ ಓದಿ: ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    Live Tv
    [brid partner=56869869 player=32851 video=960834 autoplay=true]

  • ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    ದುಬೈ: ಏಷ್ಯಾಕಪ್ ಫೈನಲ್ (Asia Cup Final) ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ಮುಖಭಂಗ ಅನುಭವಿಸಿದ ಪಾಕಿಸ್ತಾನ (Pakistan) ತಂಡದ ನಾಯಕ ಬಾಬರ್ ಅಜಮ್ (Babar Azam) ಇದೀಗ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಹಿಂದೆ ರನ್ ಬರ ಅನುಭವಿಸುತ್ತಿದ್ದ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿಗೆ (Virat Kohli) ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದ ಬಾಬರ್ ಅಜಮ್‍ಗೆ ಕೊಹ್ಲಿ ಅಭಿಮಾನಿಗಳು ಇದೀಗ ಟಾಂಗ್ ನೀಡಿದ್ದಾರೆ.

    ಈ ಹಿಂದೆ ರನ್ ಬರ ಅನುಭವಿಸುತ್ತಿದ್ದ ವಿರಾಟ್ ಕೊಹ್ಲಿಗೆ ವಿಶೇಷ ಸಂದೇಶದ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೆಂಬಲಕ್ಕೆ ನಿಂತಿದ್ದರು. ಟ್ವಿಟ್ಟರ್‌ನಲ್ಲಿ ಕೊಹ್ಲಿ ಜೊತೆಗಿರುವ ಫೋಟೋ ಹಂಚಿಕೊಂಡು ಬಾಬರ್ ಅಜಮ್, ಈ ಸಮಯ ಕಳೆದು ಹೋಗುತ್ತದೆ. ದೃಢವಾಗಿರಿ ಎಂದು ಟ್ವೀಟ್ ಮಾಡಿ ಕೊಹ್ಲಿಗೆ ಬೆಂಬಲ ನೀಡಿದ್ದರು. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    https://twitter.com/ashrohitian2/status/1569004353402601475

    ಇದೀಗ ಬಾಬರ್ ಅಜಮ್ ಕೂಡ ರನ್ ಬರ ಅನುಭವಿಸುತ್ತಿದ್ದಾರೆ. ಏಷ್ಯಾಕಪ್‍ನಲ್ಲಿ ಆಡಿದ ಒಟ್ಟು 6 ಪಂದ್ಯಗಳಿಂದ 68 ರನ್ ಬಾರಿಸಿದ್ದಾರೆ. ಏಷ್ಯಾಕಪ್‍ನಲ್ಲಿ 30 ರನ್ (29 ಎಸೆತ) ಹೆಚ್ಚಿನ ಗಳಿಕೆಯಾಗಿದೆ. ಹಾಗಾಗಿ ಇದೀಗ ಟ್ರೋಲ್‌ಗೆ ಗುರಿಯಾಗಿದ್ದು, ಕೊಹ್ಲಿ ಅಭಿಮಾನಿಗಳು ಈ ಸಮಯ ಕಳೆದು ಹೋಗಲ್ಲ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

    https://twitter.com/im_ShivP45/status/1568999539885088768

    ಏಷ್ಯಾಕಪ್‍ನ ಸೂಪರ್ ಫೋರ್ ಮತ್ತು ಫೈನಲ್ ಪಂದ್ಯದಲ್ಲಿ ಸತತವಾಗಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಾಣಲು ಬಾಬರ್ ಅಜಮ್ ಬ್ಯಾಟಿಂಗ್ ಕೂಡ ಪ್ರಮುಖ ಕಾರಣ. ಹಲವು ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದ ಬಾಬರ್ ಏಷ್ಯಾಕಪ್‍ನಲ್ಲಿ ರನ್ ಗಳಿಸಲು ಪರದಾಡಿದರು. ಇದು ಪಾಕಿಸ್ತಾನ ದಿಢೀರ್ ಕುಸಿತಕ್ಕೆ ಕಾರಣವಾಗಿದೆ. ಹಾಗಾಗಿ ಮುಂದಿನ ಟಿ20 ವಿಶ್ವಕಪ್‍ಗೂ ಮುನ್ನ ಬಾಬರ್ ಫಾರ್ಮ್ ಕಂಡುಕೊಳ್ಳಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಟಿ20 ರ್‍ಯಾಕಿಂಗ್: ಜೀವನ ಶ್ರೇಷ್ಠ ಎರಡನೇ ಸ್ಥಾನಕ್ಕೇರಿದ ಸೂರ್ಯ ಕುಮಾರ್ – ಪಾಕ್ ನಾಯಕನಿಗೆ ನಡುಕ

    ಟಿ20 ರ್‍ಯಾಕಿಂಗ್: ಜೀವನ ಶ್ರೇಷ್ಠ ಎರಡನೇ ಸ್ಥಾನಕ್ಕೇರಿದ ಸೂರ್ಯ ಕುಮಾರ್ – ಪಾಕ್ ನಾಯಕನಿಗೆ ನಡುಕ

    ದುಬೈ: ಐಸಿಸಿ ಬಿಡುಗಡೆ ಮಾಡಿರುವ ನೂತನ ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಕಿಂಗ್‌ನಲ್ಲಿ ಭಾರತದ ಆಟಗಾರ ಸೂರ್ಯ ಕುಮಾರ್ ಯಾದವ್ ಜೀವನ ಶ್ರೇಷ್ಠ ಎರಡನೇ ಸ್ಥಾನಕ್ಕೇರಿದ್ದಾರೆ.

    ನೂತನ ರ್‍ಯಾಕಿಂಗ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 818 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಅವರಿಂದ ಕೇವಲ 2 ಅಂಕಗಳ ಹಿನ್ನಡೆಯಲ್ಲಿರುವ ಸೂರ್ಯ ಕುಮಾರ್ ಯಾದವ್ ಒಟ್ಟು 816 ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಂಬರ್ 1 ಸ್ಥಾನಕ್ಕೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಇದನ್ನೂ ಓದಿ: `ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

    3ನೇ ಸ್ಥಾನದಲ್ಲಿ 794 ಅಂಕಗಳೊಂದಿಗೆ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಇದ್ದು, ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಾಮ್  788 ಅಂಕಗಳೊಂದಿಗೆ 4 ಮತ್ತು ಡೇವಿಡ್ ಮಲಾನ್ 731 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: CWG 2022: ಲಾನ್ ಬಾಲ್ಸ್‌ನಲ್ಲಿ ಚಿನ್ನ – ವರ್ಕೌಟ್ ಆಯ್ತು ಧೋನಿ ಟಿಪ್ಸ್!

    ವೆಸ್ಟ್ ಇಂಡೀಸ್‍ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ 111 ರನ್ ಕಲೆ ಹಾಕಿದ್ದು ಐಸಿಸಿ ಬ್ಯಾಟಿಂಗ್ ರ್‍ಯಾಕಿಂಗ್‌ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಮೂರನೇ ಟಿ20 ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿದ್ದರು. ಆ ಮೂಲಕ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 816 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿ ಟಿ20 ಕ್ರಿಕೆಟ್‍ನ ರನ್ ಮೆಷಿನ್ ಆಗಿ ಹೊರಹೊಮ್ಮಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    ಇಸ್ಲಾಮಾಬಾದ್: ರನ್ ಬರ ಅನುಭವಿಸುತ್ತಿರುವ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ವಿರಾಟ್ ಕೊಹ್ಲಿಗೆ ವಿಶೇಷ ಸಂದೇಶದ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೆಂಬಲಕ್ಕೆ ನಿಂತಿದ್ದಾರೆ.

    ಟ್ವಿಟ್ಟರ್‌ನಲ್ಲಿ ಕೊಹ್ಲಿ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಬಾಬರ್ ಅಜಮ್, ಈ ಸಮಯ ಕಳೆದು ಹೋಗುತ್ತದೆ. ದೃಢವಾಗಿರಿ ಎಂದು ಟ್ವೀಟ್ ಮಾಡಿ ಕೊಹ್ಲಿಗೆ ಬೆಂಬಲ ನೀಡಿ ಮರಳಿ ಕಿಂಗ್ ಕೊಹ್ಲಿಯಾಗಿ ಕಂಬ್ಯಾಕ್ ಮಾಡಲು ಪ್ರೇರಣೆ ನೀಡಿದ್ದಾರೆ. ಇದನ್ನೂ ಓದಿ: 2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    ಆಟಗಾರನಾಗಿ ನನಗೆ ಚೆನ್ನಾಗಿ ಗೊತ್ತು ಕೆಲವೊಮ್ಮೆ ಆಟದಲ್ಲಿ ಏರಿಳಿತ ಕಂಡುಬರುವುದು ಸಾಮಾನ್ಯ. ಈ ಸಮಯದಲ್ಲಿ ಆಟಗಾರನಿಗೆ ಬೆಂಬಲ ನೀಡಿ ಮತ್ತೆ ಆತ ಕಂಬ್ಯಾಕ್ ಮಾಡಲು ಸಹಕರಿಸುವುದು ತುಂಬಾ ಮುಖ್ಯ. ನಾನು ಕೂಡ ಮಾಡಿರುವುದು ಇದನ್ನೇ ಕೊಹ್ಲಿ ಬೆಂಬಲಕ್ಕೆ ನಿಂತಿದ್ದೇನೆ ಖಂಡಿತವಾಗಿಯುವ ಅವರು ಮತ್ತೆ ಹಿಂದಿರುಗುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮೀರಾ ಸಾಲ್ವಿಯನ್ನು ಭೇಟಿಯಾದ ರೋಹಿತ್ – ಹಿಟ್‍ಮ್ಯಾನ್ ನಡೆಯನ್ನು ಮೆಚ್ಚಿದ ನೆಟ್ಟಿಗರು

    ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 16 ರನ್ (25 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಆಗುತ್ತಿದ್ದಂತೆ ಕೊಹ್ಲಿ ವೈಫಲ್ಯ ಅನುಭವಿಸುತ್ತಿರುವ ಬಗ್ಗೆ ಟೀಕೆ ಕೇಳಿಬರುತ್ತಿದೆ. ಅಲ್ಲದೇ 2019ರ ಬಳಿಕ ಮೂರು ಮಾದರಿ ಕ್ರಿಕೆಟ್‍ನಲ್ಲೂ ಕೊಹ್ಲಿ ಬ್ಯಾಟ್‍ನಿಂದ ಮೂರಂಕಿ ಮೊತ್ತ ದಾಖಲಾಗಿಲ್ಲ. ಹಾಗಾಗಿ ಕೊಹ್ಲಿ ರನ್ ಬರ ಎದುರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರ್‍ಯಾಂಕಿಂಗ್‌ನಲ್ಲಿ ಕೊಹ್ಲಿಯ ಅಪರೂಪದ ವಿಶ್ವ ದಾಖಲೆ ಮುರಿದ ಬಾಬರ್ ಅಜಮ್

    ರ್‍ಯಾಂಕಿಂಗ್‌ನಲ್ಲಿ ಕೊಹ್ಲಿಯ ಅಪರೂಪದ ವಿಶ್ವ ದಾಖಲೆ ಮುರಿದ ಬಾಬರ್ ಅಜಮ್

    ದುಬೈ: ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಮೂಲಕ 1030 ದಿನಗಳ ಕಾಲ ನಂ.1 ಸ್ಥಾನ ಅಲಂಕರಿಸಿ ಈ ಹಿಂದೆ ವಿರಾಟ್ ಕೊಹ್ಲಿ ಹೆಸರಲಿದ್ದ ದಾಖಲೆಯನ್ನು ಮುರಿದಿದ್ದಾರೆ.

    ಈ ಹಿಂದೆ ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 1013 ದಿನ ನಂ.1 ಸ್ಥಾನದಲ್ಲಿ ಇದ್ದು ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಇದೀಗ ಬಾಬರ್ ಅಜಮ್ ಪುಡಿಗಟ್ಟಿದ್ದು, ಒಟ್ಟು 1030 ದಿನಗಳ ಕಾಲ ನಂ.1 ಸ್ಥಾನದಲ್ಲಿ ಮುಂದುವರಿದು ನೂತನ ದಾಖಲೆ ಬರೆದಿದ್ದಾರೆ. ಜೊತೆಗೆ ಬ್ಯಾಟಿಂಗ್ ಕಿಂಗ್ ಆಗಿ ಮೆರೆದಾಡಿದ್ದಾರೆ. ಇದನ್ನೂ ಓದಿ: ಚೊಚ್ಚಲ ಶತಕದೊಂದಿಗೆ ಮಿಂಚಿದ ದೀಪಕ್‌ ಹೂಡಾ – ಐರ್ಲೆಂಡ್‌ ವಿರುದ್ಧ ಭಾರತಕ್ಕೆ 4 ರನ್‌ಗಳ ರೋಚಕ‌ ಜಯ

    ಇಂದು ಐಸಿಸಿ ಬಿಡುಗಡೆ ಮಾಡಿರುವ ರ್‍ಯಾಂಕಿಂಗ್‌ನಲ್ಲಿ ಬಾಬರ್ ಅಜಮ್ 818 ಅಂಕಗಳೊಂದಿಗೆ ನಂ.1 ಸ್ಥಾನ ಪಡೆದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 794 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ದಕ್ಷಿಣಾ ಆಫ್ರಿಕಾ ತಂಡದ ಮಾರ್ಕ್ರಾಮ್ ಇದ್ದಾರೆ. ಭಾರತೀಯರ ಪೈಕಿ ಇಶಾನ್ ಕಿಶನ್ 682 ಅಂಕಗಳೊಂದಿಗೆ 7 ನೇ ಸ್ಥಾನ ಪಡೆದು ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರನಾಗಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ವಿರಾಟ್ ಕೊಹ್ಲಿ ರ್‍ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿದ್ದು, ಈ ವರ್ಷ ಕೊಹ್ಲಿ ಕೇವಲ 2 ಟಿ20 ಪಂದ್ಯಗಳನ್ನಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ ವರ್ಷಕ್ಕೆ 300 ರನ್‍ಗಳನ್ನು ಗಳಿಸಿಲ್ಲ. ಇದರಿಂದಾಗಿ ರ್‍ಯಾಂಕಿಂಗ್ ಕುಸಿತ ಕಂಡಿದೆ.

    Live Tv

  • ವಿರಾಟ್ Vs ಬಾಬರ್ ರನ್‍ ಮೆಷಿನ್‌ಗಳ ಆಟಕ್ಕೆ ಸಾಕ್ಷಿಯಾಗಲಿದೆ T20 ವಿಶ್ವಕಪ್

    ವಿರಾಟ್ Vs ಬಾಬರ್ ರನ್‍ ಮೆಷಿನ್‌ಗಳ ಆಟಕ್ಕೆ ಸಾಕ್ಷಿಯಾಗಲಿದೆ T20 ವಿಶ್ವಕಪ್

    ದುಬೈ: ಟಿ20 ವಿಶ್ವಕಪ್ ಚುಟುಕು ಸಮರದಲ್ಲಿ ಭಾರತ Vs ಪಾಕಿಸ್ತಾನ ಪಂದ್ಯವೆಂದರೆ ಅಭಿಮಾನಿಗಳ ಪಾಲಿನ ಸ್ವರ್ಗ. ಎರಡು ದೇಶಗಳ ಕ್ರಿಕೆಟ್ ಅಭಿಮಾನಿಗಳು ಈ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಈ ಪಂದ್ಯದಲ್ಲಿ ಭಾರತ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಪ್ರಮುಖ ಆಕರ್ಷಣೆಯಾಗಿದ್ದು, ಈ ಇಬ್ಬರು ರನ್ ಮೆಷಿನ್‌ಗಳ ಹೋರಾಟ ನೋಡಲು ವಿಶ್ವವೇ ತುದಿಗಾಲಲ್ಲಿ ನಿಂತಿದೆ.

    ಭಾರತ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನಾಯಕರ ನಡುವಿನ ಹೋರಾಟ ನಡೆಯುವುದಂತು ಖಂಡಿತ. ಯಾಕೆಂದರೆ ಟೀಂ ಇಂಡಿಯಾದಲ್ಲಿ ಕಿಂಗ್ ಕೊಹ್ಲಿ ರನ್ ಮೆಷಿನ್ ಆಗಿ ಗುರುತಿಸಿಕೊಂಡರೆ, ಪಾಕಿಸ್ತಾನ ತಂಡದಲ್ಲಿ ಬಾಬರ್ ಬ್ಯಾಟಿಂಗ್ ಮಾಂತ್ರಿಕರಾಗಿ ವಿಶ್ವದ ಗಮನಸೆಳೆದಿದ್ದಾರೆ. ಈ ಇಬ್ಬರಲ್ಲಿ ಯಾರು ನೆಲಕಚ್ಚಿ ಬ್ಯಾಟಿಂಗ್ ಮಾಡಲು ಆರಂಭಿಸಿದರೂ ರನ್ ಮಳೆ ಸುರಿಯಲಿದ್ದು, ಬಾಲ್ ಮೈದಾನದ ಅಷ್ಟ ದಿಕ್ಕುಗಳನ್ನು ಪರಿಚಯ ಮಾಡಿಕೊಂಡು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಭಾರತ vs ಪಾಕಿಸ್ತಾನ ನಡುವೆ ಯಾರು ಬೆಸ್ಟ್?

    ವಿರಾಟ್ ಕೊಹ್ಲಿ 89 ಟಿ20 ಪಂದ್ಯಗಳಿಂದ 28 ಅರ್ಧಶತಕ ಸಹಿತ 3,159 ರನ್ ಸಿಡಿಸಿದರೆ, ಬಾಬರ್ ಅಜಮ್ ಆಡಿರುವ 61 ಟಿ20 ಪಂದ್ಯಗಳಲ್ಲಿ 1 ಶತಕ, 20 ಅರ್ಧಶತಕ ಸಹಿತ 2,204 ರನ್ ಚಚ್ಚಿದ್ದಾರೆ. ಈ ಇಬ್ಬರು ರನ್ ಮಾಂತ್ರಿಕರ ಮೇಲೆ ಪಂದ್ಯ ನಿಂತಿದ್ದು, ಇವರಿಬ್ಬರೂ ಕೂಡ ಚುಟುಕು ಸಮರದಲ್ಲಿ ಹೊಡಿಬಡಿ ಆಟ ಆರಂಭಿಸಿದರೆ ಎದುರಾಳಿ ಬೌಲರ್‍ ಗಳು ಚಿಂದಿ ಆಗುವುದು ಪಕ್ಕಾ. ಹಾಗಾಗಿ ಈ ಇಬ್ಬರು ಆಟಗಾರರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದನ್ನೂ ಓದಿ: ಮೊದಲ ಟಿ20 ವಿಶ್ವಕಪ್ ಬಾಲ್‍ಔಟ್ ಮೂಲಕ ಪಾಕ್‍ಗೆ ಶಾಕ್ ಕೊಟ್ಟ ಭಾರತ

  • ಬಾಬರ್ ಅಜಮ್ ಇಂಡೋ-ಪಾಕ್ ಮಿಶ್ರ ತಂಡದಲ್ಲಿ ಭಾರತೀಯರೇ ಹೆಚ್ಚು

    ಬಾಬರ್ ಅಜಮ್ ಇಂಡೋ-ಪಾಕ್ ಮಿಶ್ರ ತಂಡದಲ್ಲಿ ಭಾರತೀಯರೇ ಹೆಚ್ಚು

    – ವಿರಾಟ್ ಸಮಬಲ ಬ್ಯಾಟ್ಸ್‌ಮನ್ ನಾನಲ್ಲ: ಬಾಬರ್

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಸ್ತುತ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಇಂಡೋ-ಪಾಕ್ ಮಿಶ್ರ ತಂಡವನ್ನು ರಚಿಸಿದ್ದು, ಅದರಲ್ಲಿ ಟೀಂ ಇಂಡಿಯಾ ಆಟಗಾರರೇ ಹೆಚ್ಚಾಗಿದ್ದಾರೆ.

    ಇಂಡೋ-ಪಾಕ್ ಮುಖಾಮುಖಿಯಾಗುವುದು ಹೆಚ್ಚು ವಿರಳವಾಗಿದೆ. ಐಸಿಸಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಆಡುತ್ತವೆ. ಆದರೆ ಆಟಗಾರರು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಾಗೇ ಪಾಕಿಸ್ತಾನದ ಟಿ20, ಏಕದಿನ ಕ್ರಿಕೆಟ್ ತಂಡ ನಾಯಕ ಬಾಬರ್ ಅಜಮ್, ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನಿರೂಪಕ, ವಿಶ್ಲೇಷಕ ಹರ್ಷ ಭೋಗ್ಲೆ ಅವರೊಂದಿಗಿನ ಲೈವ್ ಚಾಟಿಂಗ್‍ನಲ್ಲಿ ಈ ವಿಚಾರವನ್ನು ಬಾಬರ್ ಅಜಮ್ ಹಂಚಿಕೊಂಡಿದ್ದಾರೆ.

    ಬಾಬರ್ ತಾವು ರಚಿಸಿದ ಟಿ20 ತಂಡದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನಂತರದ 3ನೇ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಮೈದಾನಕ್ಕೆ ಇಳಿಯಲಿದ್ದಾರೆ.

    ಬಾಬರ್ ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದಾರೆ. ಶೋಯೆಬ್ ಮಲಿಕ್ ಆಲ್‍ರೌಂಡರ್ ಆಗಿದ್ದರೂ ಬಾಬರ್ ಅವರು ತಮ್ಮ ತಂಡದಲ್ಲಿ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೂ ಸ್ಥಾನ ನೀಡಿದ್ದಾರೆ. ತಂಡದಲ್ಲಿ ಧೋನಿ, ಮಲಿಕ್ ಮತ್ತು ಪಾಂಡ್ಯ ಅವರೊಂದಿಗೆ, ಬಾಬರ್ ತಂಡವು ವಿಶ್ವ ದರ್ಜೆಯ ಶ್ರೇಷ್ಠ ಬ್ಯಾಟಿಂಗ್ ತಂಡವನ್ನು ಹೊಂದಿದೆ.

    ತಂಡದಲ್ಲಿ ಶಾದಾಬ್ ಖಾನ್ ಮತ್ತು ಕುಲದೀಪ್ ಯಾದವ್ ಇಬ್ಬರು ಸ್ಪಿನ್ನರ್ ಆಗಿದ್ದರೆ, ಜಸ್‍ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಅಮೀರ್ ಅವರು ವೇಗ ಬೌಲರ್ ಗಳಾಗಿದ್ದಾರೆ. ಒಟ್ಟಾರೆಯಾಗಿ ಬಾಬರ್ ಅಜಮ್ ಅವರು ಆಟದ ಎಲ್ಲಾ ವಿಭಾಗಗಳಲ್ಲಿ ವಿವಿಧ ಆಯ್ಕೆಗಳೊಂದಿಗೆ ಬಲಿಷ್ಟ ತಂಡವನ್ನು ಕಟ್ಟಿದ್ದಾರೆ.

    ತಂಡ ಹೀಗಿದೆ:
    ರೋಹಿತ್ ಶರ್ಮಾ, ಬಾಬರ್ ಅಜಮ್, ವಿರಾಟ್ ಕೊಹ್ಲಿ, ಶೋಯೆಬ್ ಮಲಿಕ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಜಸ್‍ಪ್ರೀತ್ ಬುಮ್ರಾ, ಮೊಹಮ್ಮದ್ ಅಮೀರ್, ಕುಲದೀಪ್ ಯಾದವ್.

    ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡುತ್ತಿರುವ ವಿಚಾರಕ್ಕೆ ಸಂದರ್ಶನ ಒಂದರಲ್ಲಿ ಪ್ರತಿಕ್ರಿಯೆ ನೀಡಿರುವ ಬಾಬರ್ ಅಜಮ್, “ಅವರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾನು ಇನ್ನೂ ಬೆಳೆಯಬೇಕಿದೆ ಹಾಗೂ ಸಾಧಿಸುವುದು ಸಾಕಷ್ಟಿದೆ. ಅವರಂತಹ ಆಟಗಾರನಾಗಲು ಪ್ರಯತ್ನಿಸುತ್ತೇನೆ. ಪಾಕಿಸ್ತಾನ ತಂಡವು ನನ್ನ ನಾಯಕತ್ವದಲ್ಲಿ ಹೆಚ್ಚು ಪಂದ್ಯಗಳನ್ನು ಗೆಲ್ಲುವಂತೆ ಶ್ರಮಿಸುತ್ತೇನೆ. ವಿರಾಟ್ ಸಮಬಲ ಬ್ಯಾಟ್ಸ್‌ಮನ್ ನಾನಲ್ಲ” ಎಂದು ತಿಳಿಸಿದ್ದಾರೆ.

  • ಕೊಹ್ಲಿ ನೋಡಿ ಬ್ಯಾಟಿಂಗ್ ಮಾಡೋದನ್ನ ಕಲಿಯುತ್ತಿದ್ದೇನೆ: ಬಾಬರ್ ಅಜಮ್

    ಕೊಹ್ಲಿ ನೋಡಿ ಬ್ಯಾಟಿಂಗ್ ಮಾಡೋದನ್ನ ಕಲಿಯುತ್ತಿದ್ದೇನೆ: ಬಾಬರ್ ಅಜಮ್

    ನವದೆಹಲಿ: ನಾನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ನೋಡಿ ಬ್ಯಾಟಿಂಗ್ ಮಾಡುವುದನ್ನು ಕಲಿಯುತ್ತಿದ್ದೇನೆ ಎಂದು ಪಾಕಿಸ್ತಾನದ ಯುವ ಆರಂಭಿಕ ಆಟಗಾರ ಬಾಬರ್ ಅಜಮ್ ಹೇಳಿದ್ದಾರೆ.

    ವಿಶ್ವಕಪ್‍ನಲ್ಲಿ ಪಾಕಿಸ್ತಾನ ಗೆದ್ದ ಏಕೈಕ ಪಂದ್ಯದಲ್ಲಿ 24 ವರ್ಷದ ಬಾಬರ್ ಅಜಮ್ ಅವರು ಸ್ಫೋಟಕ 63 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಆಟಗಾರ ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಾಗ ಈ ರೀತಿ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.

    ಬಾಬರ್ ಅಜಮ್ ಅವರು ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಆಟಗಾರ. ಅದಕ್ಕಾಗಿಯೇ ಇವರನ್ನು ಕೊಹ್ಲಿಗೆ ಹೋಲಿಸಲಾಗುತ್ತಿದೆ. ಈಗ ಅವರೇ “ಕೊಹ್ಲಿ ಅವರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುತ್ತಾರೆ. ನಾನು ಅವರು ಬ್ಯಾಟಿಂಗ್ ಮಾಡುವುದನ್ನು ನೋಡುತ್ತೇನೆ ಮತ್ತು ನಾನು ಅವರು ರೀತಿ ಬ್ಯಾಟ್ ಮಾಡಲು ಕಲಿಯುತ್ತಿದ್ದೇನೆ” ಎಂದು ಹೇಳಿದ್ದಾರೆ.

    ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಬಹುತೇಕ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ನಾನು ಕೂಡ ಇದೇ ರೀತಿ ಆಡಲು ಪ್ರಯತ್ನಿಸುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ನಾವು ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಪೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಾವು ಆ ಗೆಲುವಿನ ಸ್ಫೂರ್ತಿ ಪಡೆದು ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ಮತ್ತು ಭಾರತ ನಡುವಿನ ವಿಶ್ವಕಪ್ ಪಂದ್ಯ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆಯಲಿದೆ.