Tag: ಬಾಬರಿ ಮಸೀದಿ

  • ಸೂಕ್ಷ್ಮ ಮಾಹಿತಿ ಸೋರಿಕೆ – 600 ಪಾಕಿಸ್ತಾನಿಯರ ಸಂಪರ್ಕದಲ್ಲಿದ್ದ ಬೇಹುಗಾರ ವಾರಣಾಸಿಯಲ್ಲಿ ಅರೆಸ್ಟ್‌

    ಸೂಕ್ಷ್ಮ ಮಾಹಿತಿ ಸೋರಿಕೆ – 600 ಪಾಕಿಸ್ತಾನಿಯರ ಸಂಪರ್ಕದಲ್ಲಿದ್ದ ಬೇಹುಗಾರ ವಾರಣಾಸಿಯಲ್ಲಿ ಅರೆಸ್ಟ್‌

    – ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ವಾಟ್ಸಪ್‌ ಗ್ರೂಪಲ್ಲಿ ಪ್ರಚೋದನೆ
    – ಜ್ಞಾನವಾಪಿ ಮಸೀದಿ, ಕೆಂಪು ಕೋಟೆ ಫೋಟೋ ಪಾಕ್‌ಗೆ ರವಾನೆ

    ಲಕ್ನೋ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವಾರಣಾಸಿಯ (Varanasi) ವ್ಯಕ್ತಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (UP ATS) ಬಂಧಿಸಿದೆ. ಇದರೊಂದಿಗೆ ದೇಶದ ವಿವಿಧೆಡೆ ಬಂಧಿತ ಪಾಕ್‌ ಬೇಹುಗಾರರ (Spy) ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

    ತುಫೈಲ್ ಬಂಧಿತ ಆರೋಪಿ. ಪಾಕ್‌ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ತುಫೈಲ್‌ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ರಾಜ್‌ಘಾಟ್, ನಮೋ ಘಾಟ್, ಜ್ಞಾನವಾಪಿ ಮಸೀದಿ, ರೈಲ್ವೆ ನಿಲ್ದಾಣ ಮತ್ತು ಕೆಂಪು ಕೋಟೆ (Red Fort) ಸೇರಿದಂತೆ ಆಯಕಟ್ಟಿನ ಸ್ಥಳಗಳ ಫೋಟೋ ಮತ್ತು ಮಾಹಿತಿಯನ್ನ ಹಂಚಿಕೊಂಡಿದ್ದಾನೆ ಅನ್ನೋದು ತನಿಖೆ ಸಮಯದಲ್ಲಿ ಗೊತ್ತಾಗಿದೆ.

    ಅಲ್ಲದೇ ಕೆಲವು ಸ್ಥಳೀಯರನ್ನು ಪಾಕಿಸ್ತಾನಿಯರೊಟ್ಟಿಗೆ ಸಂಪರ್ಕಿಸುವ ವಾಟ್ಸಪ್‌ ಗ್ರೂಪ್‌ಗಳಲ್ಲಿ ತುಫೈಲ್‌ ಸಕ್ರೀಯವಾಗಿದ್ದ. ಅಲ್ಲಿ ತೆಹ್ರೀಕ್-ಇ-ಲಬ್ಬೈಕ್ ಉಗ್ರ ಸಂಘಟನೆಯ ನಾಯಕ ಮೌಲಾನಾ ಸಾದ್ ರಿಜ್ವಿಯ ಉಪನ್ಯಾಸ ವಿಡಿಯೋಗಳನ್ನ ಹಂಚಿಕೊಳ್ಳುತ್ತಿದ್ದ. ಬಾಬರಿ ಮಸೀದಿ (Babri Masjid) ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ಮತ್ತು ಶರಿಯಾ ಕಾನೂನು ಹೇರಿಕೆಯನ್ನು ಉತ್ತೇಜಿಸುವ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದ ಅನ್ನೋದು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ನಫೀಸಾ ಎಂಬ ಪಾಕಿಸ್ತಾನಿ ಮಹಿಳೆಯ ಸಂಪರ್ಕದಲ್ಲೂ ತುಫೈಲ್‌ ಇದ್ದ. ಆಕೆಯ ಪತಿ ಪಾಕಿಸ್ತಾನಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ತುಫೈಲ್‌ 600 ಪಾಕಿಸ್ತಾನಿಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

  • ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನಿಧನ

    ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನಿಧನ

    ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (83) (Acharya Satyendra Das) ಅವರು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ (SGPGI) ಬುಧವಾರ ನಿಧನರಾಗಿದ್ದಾರೆ.

    ಪಾರ್ಶ್ವವಾಯುವಿನಿಂದ (Brain Stroke) ಬಳಲುತ್ತಿದ್ದ 83 ವರ್ಷದ ಸತ್ಯೇಂದ್ರ ದಾಸ್‌ ಅವರನ್ನು ಫೆಬ್ರುವರಿ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ ಸತ್ಯೇಂದ್ರ ದಾಸ್ ಅವರು ರಾಮ ಮಂದಿರದ ಅರ್ಚಕರಾಗಿದ್ದರು. ಇದನ್ನೂ ಓದಿ: 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    ‘ನಿರ್ವಾಣಿ’ ಅಖಾಡದಿಂದ ಬಂದ ಸತ್ಯೇಂದ್ರ ದಾಸ್‌ ಅವರು ಅಯೋಧ್ಯೆಯ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದರು. ಅಯೋಧ್ಯೆ ಮತ್ತು ರಾಮ ಮಂದಿರದ ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳವರಾಗಿದ್ದರು.

    ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್‌ನಲ್ಲಿ ರಾಮ ಲಲ್ಲಾ ವಿಗ್ರಹವನ್ನು ಇಟ್ಟುಕೊಂಡು ಸತ್ಯೇಂದ್ರ ದಾಸ್ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ನಿಮಿಷಾಂಭ ದೇವಸ್ಥಾನದಲ್ಲಿ ಮಾಘ ಹುಣ್ಣಿಮೆ ಸಂಭ್ರಮ – ಕಾವೇರಿ ನದಿಯಲ್ಲಿ ಪುಣ್ಯಸ್ನಾನ

  • 1993ರ ಸರಣಿ ಬಾಂಬ್‌ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ `ಡಾ. ಬಾಂಬ್’ ಖುಲಾಸೆ

    1993ರ ಸರಣಿ ಬಾಂಬ್‌ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ `ಡಾ. ಬಾಂಬ್’ ಖುಲಾಸೆ

    ಜೈಪುರ: 1993ರ ಸರಣಿ ಬಾಂಬ್ ಸ್ಫೋಟ (1993 Serial Train Blast) ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾನನ್ನ (Abdul Karim Tunda) ರಾಜಸ್ಥಾನ ವಿಶೇಷ ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. ತುಂಡಾ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಾದ ಕಾರಣ ಉಲ್ಲೇಖಿಸಿ ದೋಷಮುಕ್ತಗೊಳಿಸಿದೆ. ಇದೇ ವೇಳೆ ಮತ್ತಿಬ್ಬರು ಆರೋಪಿಗಳಾದ ಅಮಿನುದ್ದೀನ್ ಮತ್ತು ಇರ್ಫಾನ್ ಇಬ್ಬರನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

    1992ರಲ್ಲಿ ಬಾಬರಿ ಮಸೀದಿಯನ್ನ (Babri Masji) ಧ್ವಂಸಗೊಳಿಸಲಾಗಿತ್ತು. ಇದರ ವಿಜಯೋತ್ಸವದ ಭಾಗವಾಗಿ ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಲಷ್ಕರ್ ಸಂಘಟನೆಯಿಂದ ಬೆಂಬಲ ಪಡೆದಿದ್ದ ಅಬ್ದುಲ್ ಕರೀಂ ರೈಲುಗಳು ಸೇರಿದಂತೆ 40ಕ್ಕೂ ಹೆಚ್ಚು ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದ ಆರೋಪ ಕೇಳಿಬಂದಿತ್ತು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದರು, ನೂರಾರು ಮಂದಿ ಗಾಯಗೊಂಡಿದ್ದರು. 2013ರಲ್ಲಿ ನೇಪಾಳದ ಗಡಿ ಬನ್‌ಬಾಸಾದಲ್ಲಿ ಈತನನ್ನ ಬಂಧಿಸಲಾಗಿತ್ತು. ತುಂಡಾ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದರೂ 2016ರಲ್ಲಿ ದೆಹಲಿ ನ್ಯಾಯಾಲಯದಿಂದ 4 ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದ. ಅಂದು ದೆಹಲಿ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ತರಲು ವಿಫಲರಾಗಿದ್ದರು ಎಂದು ಕಾರಣ ನೀಡಿ, ಕ್ಲೀನ್ ಚಿಟ್ ನೀಡಿತ್ತು.

    ಲಷ್ಕರ್ ಸಂಘಟನೆಗೆ ಸೇರಿದ್ದ ʻಡಾ.ಬಾಂಬ್ʼ ಖ್ಯಾತಿಯ ತುಂಡಾ, ಹಲವು ಪ್ರಕರಣಗಳ ಆರೋಪ ಹೊತ್ತಿದ್ದ ಹಿನ್ನೆಲೆಯಲ್ಲಿ ಜೈಲಿನಲ್ಲಿಯೇ ಇದ್ದನು. ಆದ್ರೆ 1996ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ 2017ರಲ್ಲಿ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿತ್ತು. ಆಗ ತುಂಡಾಗೆ 75 ವರ್ಷ ವಯಸ್ಸಾಗಿತ್ತು. ಅಂದಿನಿಂದ ಈವರೆಗೆ ತುಂಡಾ ಶಿಕ್ಷೆ ಅನುಭವಿಸುತ್ತಿದ್ದ. ಇದನ್ನೂ ಓದಿ: ಹಿಮಾಚಲ ಪ್ರದೇಶ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ 6 ಕಾಂಗ್ರೆಸ್‌ ಶಾಸಕರು ಅನರ್ಹ

    ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಶಫ್ಕತ್ ಸುಲ್ತಾನಿ, ಅಬ್ದುಲ್ ಕರೀಂ ನಿರಪರಾಧಿ ಎಂದು ನ್ಯಾಯಾಲಯ ಈ ತೀರ್ಪು ನೀಡಿದೆ. ಹಾಗಾಗಿ ಅವರನ್ನ ಎಲ್ಲಾ ಸೆಕ್ಷನ್‌ಗಳು ಹಾಗೂ ಕಾಯ್ದೆಗಳಲ್ಲಿ ದೋಷಮುಕ್ತಗೊಳಿಸಲಾಗಿದೆ. ಐಪಿಸಿ ಸೆಕ್ಷನ್, ರೈಲ್ವೆ ಕಾಯ್ದೆಗಳು ಹಾಗೂ ಶಸ್ತ್ರಾಸ್ತ್ರ ಕಾಯಿದೆ, ಭಯೋತ್ಪಾಕ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಈ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿರುವುದಾಗಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಉದ್ಯೋಗ ಇಲ್ಲ: ರಾಜಸ್ಥಾನ ಕಾನೂನಿಗೆ ಸುಪ್ರೀಂ ಅನುಮೋದನೆ

  • ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್

    ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್

    ನವದೆಹಲಿ: 1992ರ ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನ್ಯಾಯಂಗ ನಿಂದನೆಯ ಎಲ್ಲ ಅರ್ಜಿಗಳನ್ನು ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಕೈಬಿಟ್ಟಿದೆ. ಇಂದು ಈ ಬಗ್ಗೆ ಮಹತ್ವದ ತೀರ್ಪು ನೀಡಿದ ನ್ಯಾಯಾಲಯ ರಾಮ ಮಂದಿರಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಪ್ರಕಟವಾಗಿರುವ ಹಿನ್ನೆಲೆ ಈ ಎಲ್ಲ ಅರ್ಜಿಗಳು ಅಪ್ರಸುತ್ತ ಎಂದು ಹೇಳಿದೆ.

    ಬಾಬರಿ ಮಸೀದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು. ಅದನ್ನು ನೆಲಸಮಗೊಳಿಸಬೇಡಿ ಎಂದು 1991ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ರಾಜ್ಯ ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರಿಗೂ ಅನ್ವಯ ಆಗಿತ್ತು. ಈ ಆದೇಶ ಬಳಿಕ 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಂದಿಗೆ ಚಕ್ಕಂದ – ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ASI

    ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಹಿನ್ನೆಲೆ ಮುಹಮ್ಮದ್ ಅಸ್ಲಾಮ್ ಭುರೆ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಮಾಜಿ ಸಿಎಂ ಕಲ್ಯಾಣ ಸಿಂಗ್, ಬಿಜೆಪಿ ನಾಯಕರಾದ ಎಲ್‌.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಹಲವು ನಾಯಕರ ವಿರುದ್ಧ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿದಾರ ಮಹಮ್ಮದ್ ಅಸ್ಲಾಮ್ 2010ರಲ್ಲಿ ಮೃತಪಟ್ಟ ಹಿನ್ನೆಲೆ ಈ ಅರ್ಜಿ ಹೆಚ್ಚು ವಿಚಾರಣೆಗೆ ಬಂದಿರಲಿಲ್ಲ. 2019ರಲ್ಲಿ ಅಯೋಧ್ಯೆ ವಿವಾದಿತ ಜಮೀನಿನ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇಂದು ಈ ಅರ್ಜಿ ಇತ್ಯರ್ಥಪಡಿಸಿದ ಕೋರ್ಟ್, ಪ್ರಕರಣ ಸಂಪೂರ್ಣ ಇತ್ಯರ್ಥವಾಗಿರುವ ಹಿನ್ನೆಲೆ ವಿಚಾರಣೆ ಅಗತ್ಯವಿಲ್ಲ. ಮುಖ್ಯ ಅರ್ಜಿ ವಿಚಾರಣೆ ವೇಳೆ ಈ ಬಗ್ಗೆ ಪ್ರಸ್ತಾಪಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿತು‌. ಇದನ್ನೂ ಓದಿ: ವರದಕ್ಷಿಣೆಗಾಗಿ ಸೊಸೆಯನ್ನು ಹೊರಹಾಕಿದವರ ಮನೆ ಮುಂದೆ ಘರ್ಜಿಸಿತು ಬುಲ್ಡೋಜರ್‌ – ಮುಂದೇನಾಯ್ತು?

    ಈಗ ಈ ಕೇಸುಗಳ ಪ್ರಸ್ತುತತೆ ಇಲ್ಲದ ಕಾರಣ ಎಲ್ಲ ನ್ಯಾಯಾಂಗ ನಿಂದನೆ ಕೇಸುಗಳನ್ನು ಕೈಬಿಡುತ್ತಿದ್ದೇವೆ ಎಂದು ಕೋರ್ಟ್ ಆದೇಶಿಸಿತು. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಎಲ್‌.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಬಿಜೆಪಿಯ ಹಲವು ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

    ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

    ಮುಂಬೈ: ಬಾಬರಿ ಧ್ವಂಸ ಸಂದರ್ಭದಲ್ಲಿ ಶಿವಸೇನೆಯ ಪಾತ್ರದ ಬಗ್ಗೆ ಬಿಜೆಪಿ ತನ್ನ ನಾಯಕರನ್ನು ಕೇಳಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸವಾದಾಗ ಶಿವಸೇನೆ ನಾಯಕರು ಎಲ್ಲಿದ್ದರು ಎಂದು ಯಾರಾದರೂ ಹೇಳಿದರೆ ಅವರು ಅವರ ನಾಯಕ ದಿವಂಗತ ಸುಂದರ್ ಸಿಂಗ್ ಭಂಡಾರಿ ಅವರನ್ನು ಕೇಳಬೇಕು. ಜೊತೆಗೆ ಆಗಿನ ಸಿಬಿಐ ಮತ್ತು ಐಬಿ ವರದಿ ಪರಿಶೀಲಿಸಿ ಎಂದರು.

    ಶಿವಸೇನೆ ಎಲ್ಲಿತ್ತು ಎಂದು ಕೇಳುವವರಿಗೆ ತಿಳುವಳಿಕೆ ಇಲ್ಲ. ಅದಕ್ಕೆ ಉತ್ತರ ಸಿಗುತ್ತದೆ. ಪರಿಸ್ಥಿತಿ ಬದಲಾಗಿದೆ, ಸಮಸ್ಯೆಗಳೂ ಇವೆ. ಇದಕ್ಕೆಲ್ಲಾ ಜನರು ಕಿವಿಕೊಡುವುದಿಲ್ಲ ಎಂದ ಅವರು, ಹಣದುಬ್ಬರ, ನಿರುದ್ಯೋಗ ಮತ್ತು ಚೀನಾದ ಆಕ್ರಮಣದಂತಹ ಸಮಸ್ಯೆಗಳಿಂದ ಗಮನವನ್ನು ಬೇರಡೆಗೆ ಸೆಳೆಯಲು ಹನುಮಾನ್ ಚಾಲೀಸಾ ಮತ್ತು ಅಯೋಧ್ಯೆಯ ಪಠಣದ ಸಮಸ್ಯೆಗಳನ್ನು ತರಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ – ಅಡ್ವಾಣಿಗೆ ಅಂದು ಠಾಕ್ರೆ ನೀಡಿದ್ದ ಸಲಹೆಯ ಬಗ್ಗೆ ಉದ್ಧವ್‌ ಮಾತು

    ಇದಕ್ಕೂ ಮುನ್ನ, ಹಿಂದುತ್ವದ ವಿಚಾರದಲ್ಲಿ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ ಫಡ್ನವಿಸ್, ಬಾಬ್ರಿ ಕಟ್ಟಡವನ್ನು ಕೆಡವಿದಾಗ ತಾನು ಅಯೋಧ್ಯೆಯಲ್ಲಿದ್ದೆ. ಅದು ಸಂಭವಿಸಿದಾಗ ಯಾವುದೇ ಶಿವಸೇನಾ ನಾಯಕರೂ ಅಲ್ಲಿ ಇರಲಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್

  • ಬಾಬರಿ ಮಸೀದಿ ಕೆಡವಿದ್ದು ಕಾನೂನಿನ ಉಲ್ಲಂಘನೆ: ಓವೈಸಿ

    ಬಾಬರಿ ಮಸೀದಿ ಕೆಡವಿದ್ದು ಕಾನೂನಿನ ಉಲ್ಲಂಘನೆ: ಓವೈಸಿ

    ನವದೆಹಲಿ: ಬಾಬರಿ ಮಸೀದಿ ಕೆಡವಿದ್ದು ಕಾನೂನಿನ ಉಲ್ಲಂಘನೆ ಅಲ್ಲದೇ ಮತ್ತೇನು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನೆ ಮಾಡಿದ್ದಾರೆ.

    ಸಮಾವೇಶದಲ್ಲಿ ಮಾತನಾಡಿರುವ ಓವೈಸಿ, ಬಾಬರಿ ಮಸೀದಿಯ ಕೀಲಿ ತೆಗೆಯುವಾಗ ಕೇಂದ್ರದಲ್ಲಿ ಕಾಂಗ್ರೆಸ್ ಇತ್ತು. ಅಂದಿನ ಗೃಹ ಸಚಿವರು ಯಾರಿದ್ದರು ಎಂಬುದನ್ನು ನೀವು ನೆನಪು ಮಾಡಿಕೊಳ್ಳಬೇಕಿದೆ. ತೀರ್ಪು ಏನು ಬರುತ್ತೆ ಎಂಬುವುದು ನನಗೂ ಗೊತ್ತಿಲ್ಲ. ಆದರೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನಿಂದ ಕಾನೂನಿನ ಕೈಗೆ ಮತ್ತಷ್ಟು ಶಕ್ತಿ ಬರಲಿ ಎಂಬುವುದು ನನ್ನ ಆಶಯ. ಬಾಬರಿ ಮಸೀದಿಯನ್ನು ಕೆಡವಿದ್ದು ಕಾನೂನಿನ ಉಲ್ಲಂಘನೆಯಾಗಿದ್ದು ನಿಜ. ತೀರ್ಪು ಏನು ಬರುತ್ತೋ ಗೊತ್ತಿಲ್ಲ. ನ್ಯಾಯಾಲಯದಲ್ಲಿ ತೀರ್ಪು ಎಲ್ಲರಿಗೂ ಶುಭ ಸುದ್ದಿ ನೀಡಲೆಂದು ಅಲ್ಲಾಹನಲ್ಲಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ.

    ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ ದೇಶದ ಹೈಪ್ರೊಫೈಲ್ ಕೇಸ್ ಅಯೋಧ್ಯೆಯ ಬಾಬರಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಆಗಸ್ಟ್ ಆರರಿಂದ ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ 40 ದಿನಗಳ ಕಾಲ ವಾದ ಪ್ರತಿವಾದ ಮುಕ್ತಾಯವಾಗಿದೆ. ನವೆಂಬರ್ 17ರಂದು ಮುಖ್ಯನ್ಯಾಯಮೂರ್ತಿ ರಂಜನ್ ಗೋಗಯ್ ನಿವೃತ್ತಿ ಆಗುತ್ತಿದ್ದು, ಅಷ್ಟರೊಳಗೆ ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆಗಳಿವೆ.

  • ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್

    ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್

    – ದಸರಾ, ದೀಪಾವಳಿಗೂ ಸಿದ್ಧತೆ

    ನವದೆಹಲಿ: ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿ ವಿವಾದದ ಕುರಿತ ತೀರ್ಪಿಗೆ ದಿನಗಣನೆ ಹಾಗೂ ದಸರಾ ಹಬ್ಬ ನಡೆಯುತ್ತಿರುವ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದ್ದು, ಅಯೋಧ್ಯೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಈ ಮೂಲಕ ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ.

    ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಅಯೋಧ್ಯೆ ನಗರದಲ್ಲಿ ನಿಯೋಜಿಸಲಾಗಿದೆ. ದುರ್ಗಾ ಪೂಜಾ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಮೆರವಣಿಗೆಗಳಲ್ಲಿ ಗುಲಾಲ್ (ಬಣ್ಣ) ಬಳಸದಂತೆ ಪೂಜಾ ಸಮಿತಿಗೆ ತಿಳಿಸಿದ್ದೇವೆ. ಇದರ ಬದಲಿಗೆ ಹೂಗಳನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಹೆಚ್ಚುವರಿ ಭದ್ರತಾ ಸಿಬ್ಬಂದಿಗೆ ವಸತಿ ಸೌಲಭ್ಯಗಳನ್ನು ಗುರುತಿಸಲು ಜಿಲ್ಲಾಡಳಿತ ಈಗಾಗಲೇ ಪ್ರಾರಂಭಿಸಿದೆ. ಸ್ಥಳೀಯ ಅತಿಥಿ ಗೃಹಗಳು, ಧರ್ಮಶಾಲೆಗಳು, ಶಾಲಾ ಕಾಲೇಜುಗಳಲ್ಲಿ ವಸತಿ ಸೌಲಭ್ಯಗಳನ್ನು ಬಳಸುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.

    ದುರ್ಗಾ ವಿಗ್ರಹ ಮೆರವಣಿಗೆ ಹಾಗೂ ದಸರಾ ಆಚರಣೆಗಳು ಸೋಮವಾರದಿಂದ ಪ್ರಾರಂಭವಾಗಲಿದ್ದು, ವಿವಿಧ ರಾಮ್ ಲೀಲಾಗಳು ದೀಪಾವಳಿ ತಿಂಗಳವರೆಗೆ ಮುಂದುವರಿಯಲಿವೆ. ದೀಪಾವಳಿಯ ಮುನ್ನಾದಿನ ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಮೂರು ದಿನಗಳ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

    ಹೆಚ್ಚು ಜನ ಆಗಮಿಸುತ್ತಿರುವ ಹಿನ್ನೆಲೆ ಎಲ್ಲ ಹೋಟೆಲ್, ಅತಿಥಿ ಗೃಹ, ಧರ್ಮಶಾಲೆ, ವಸತಿ ಗೃಹ, ಹಾಸ್ಟೆಲ್ ಹಾಗೂ ಹೋಮ್ ಸ್ಟೇಗಳನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸರಿಗೆ ಹಾಗೂ ಸ್ಥಳೀಯ ಗುಪ್ತಚರ ಘಟಕಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಅಲ್ಲಿ ಕೆಲಸ ಮಾಡುತ್ತಿರುವ ಹಾಗೂ ಉಳಿದುಕೊಂಡಿರುವವರ ವಿವರ ಹಾಗೂ ವಸ್ತುಗಳನ್ನು ಸಹ ಪರಿಶೀಲಿಸುವಂತೆ ಸೂಚಿಸಲಾಗಿದೆ. ಬೆದರಿಕೆ ಕರೆ ಕುರಿತು ಮಾಹಿತಿ ಬಂದಿದೆ ಎಂದು ಗುಪ್ತಚರ ದಳ ವರದಿ ನೀಡಿದ ಹಿನ್ನೆಲೆ ಈ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರಾಮ ಜನ್ಮ ಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನವೆಂಬರ್‍ನಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ ಸ್ಥಳೀಯ ಆಡಳಿತವು ಭದ್ರತಾ ವ್ಯವಸ್ಥೆ ಕುರಿತು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸಹ ಸೂಚಿಸಲಾಗಿದೆ.

    ಇದೆಲ್ಲದರ ಮಧ್ಯೆ ಸರಯು ನದಿಯ ಮಾಲಿನ್ಯವನ್ನು ತಡೆಗಟ್ಟಲು ದುರ್ಗಾ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜನೆ ಮಾಡದಂತೆ ಜಿಲ್ಲಾಡಳಿತ ಸೂಚಿಸಿದೆ. ಇದಕ್ಕೆ ಪರ್ಯಾಯವಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಹೊಂಡಗಳನ್ನು ಅಗೆಯಲಾಗಿದೆ. ಇದರಲ್ಲೇ ದೇವಿಯ ಭೂಮಿ ವಿಸರ್ಜನೆಯನ್ನು ನಡೆಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

  • ಬಾಬರಿ ಮಸೀದಿ ಧ್ವಂಸಗೊಳಿಸಿದ ಬಗ್ಗೆ ಹೆಮ್ಮೆಯಿದೆ: ಸಾಧ್ವಿ ಪ್ರಜ್ಞಾಸಿಂಗ್

    ಬಾಬರಿ ಮಸೀದಿ ಧ್ವಂಸಗೊಳಿಸಿದ ಬಗ್ಗೆ ಹೆಮ್ಮೆಯಿದೆ: ಸಾಧ್ವಿ ಪ್ರಜ್ಞಾಸಿಂಗ್

    – ಚುನಾವಣಾ ಆಯೋಗದಿಂದ ನೋಟಿಸ್

    ನವದೆಹಲಿ: ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುತ್ತಿರುವ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಅವರು, ಮತ್ತೆ ಚುನಾವಣಾ ಆಯೋಗದ ನೋಟಿಸ್‍ಗೆ ಗುರಿಯಾಗಿದ್ದಾರೆ.

    ಖಾಸಗಿ ಸುದ್ದಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾಸಿಂಗ್ ಅವರು, ಬಾಬ್ರಿ ಮಸೀದಿ ಕೆಡವಲು ನಾನು ಕೂಡ ಸಹಕರಿಸಿದ್ದೆ. ಆ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬಾಬರಿ ಮಸೀದಿ ಧ್ವಂಸಗೊಳಿಸಿದ್ದಕ್ಕೆ ನಾವು ಯಾಕೆ ವಿಷಾದ ವ್ಯಕ್ತಪಡಿಸಬೇಕು? ನಮಗೆ ಆ ಬಗ್ಗೆ ಹೆಮ್ಮೆ ಇದೆ. ಈ ಸುವರ್ಣ ಅವಕಾಶ ನೀಡಿದ್ದಕ್ಕೆ ದೇವರಿಗೆ ನಾನು ವಂದನೆ ಸಲ್ಲಿಸುತ್ತೇನೆ. ಆ ಘಟನೆ ದೇಶದ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ. ಬಾಬ್ರಿ ಮಸೀದಿಯ ತುದಿಗೆ ಏರಿ ಮಸೀದಿ ಕೆಡವಲು ನಾನೂ ನೆರವಾಗಿದ್ದೆ ಎಂದು ಹೇಳಿದ್ದಾರೆ.

    ನಾವು ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ. ರಾಮ ಮಂದಿರ ನಿರ್ಮಾಣ ಮಾಡುವುದು ಬಿಜೆಪಿಗೆ ರಾಜಕೀಯ ವಿಚಾರವಲ್ಲ ಎಂದು ಸಾಧ್ವಿ ಪ್ರಜ್ಞಾಸಿಂಗ್ ಹೇಳಿದರು. ಈ ವೇಳೆ ರಾಮಮಂದಿರ ನಿರ್ಮಾಣಕ್ಕೆ ಕಾಲಮಿತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಈಗಾಗಲೇ ನಾವು ಮಸೀದಿ ಕೆಡವಿದ್ದೇವೆ. ಅಲ್ಲಿ ನಾವು ಮಂದಿರ ನಿರ್ಮಿಸುತ್ತೇವೆ ಎಂದರು.

    ಈ ಹೇಳಿಕೆ ವಿಚಾರವಾಗಿ ಚುನಾವಣಾ ಆಯೋಗವು ಸಾಧ್ವಿ ಪ್ರಜ್ಞಾಸಿಂಗ್ ಅವರಿಗೆ ನೋಟಿಸ್ ನೀಡಿದೆ. ಅಷ್ಟೇ ಅಲ್ಲದೆ 24 ಗಂಟೆಗಳ ಒಳಗಾಗಿ ಉತ್ತರ ನೀಡಬೇಕು ಎಂದು ಸೂಚನೆ ನೀಡಿದೆ.

    ಈ ಹಿಂದೆ ಭೋಪಾಲ್‍ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, 26/11 ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಸಾವನ್ನಪಿದ್ದು ನನ್ನ ಶಾಪದಿಂದಲೇ. ನೀನು ಸರ್ವನಾಶ ಆಗುತ್ತೀಯಾ ಎಂದು ಕರ್ಕರೆ ಅವರಿಗೆ ಶಾಪ ಹಾಕಿದ್ದೆ. ಆ ಶಾಪ ಅವರಿಗೆ ತಟ್ಟಿತು ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಚುನಾವಣಾ ಆಯೋಗವು ಪ್ರಜ್ಞಾಸಿಂಗ್ ಅವರಿಗೆ ನೋಟಿಸ್ ನೀಡಿತ್ತು. ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಕೋರುವುದಾಗಿ ತಿಳಿಸಿದ್ದರು.

    ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ 2008ರ ಸೆಪ್ಟೆಂಬರ್ ನಲ್ಲಿ ಸ್ಫೋಟದಲ್ಲಿ 7 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಉಗ್ರ ನಿಗ್ರಹ ದಳವು ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿತ್ತು. ಈ ಪ್ರಕರಣದ ಕುರಿತು 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆ ಆರಂಭಿಸಿತ್ತು. ಪ್ರಜ್ಞಾ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲದೇ ಇರುವುದರಿಂದ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿತ್ತು.

    ಸಾಧ್ವಿ ಪ್ರಜ್ಞಾಸಿಂಗ್ ಇತ್ತೀಚೆಗೆ ಬಿಜೆಪಿ ಸೇರಿದ್ದು, ಭೋಪಾಲ್‍ನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

  • ಗುರುವಾರ ಮಡಿಕೇರಿಯಲ್ಲಿ 144 ಸೆಕ್ಷನ್ ಜಾರಿ

    ಗುರುವಾರ ಮಡಿಕೇರಿಯಲ್ಲಿ 144 ಸೆಕ್ಷನ್ ಜಾರಿ

    ಮಡಿಕೇರಿ: ಗುರುವಾರದಂದು ಮಂಜಿನ ನಗರಿ ಮಡಿಕೇರಿಯಲ್ಲಿ ವಿಜಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಬಾಬರಿ ಮಸೀದಿ ದ್ವಂಸಗೊಂಡ ದಿನವಾದ ಡಿಸೆಂಬರ್ 6 ರಂದು ಕೆಲ ಸಂಘಟನೆಗಳು ವಿಜಯೋತ್ಸವವ ಆಚರಣೆಗೆ ಕರೆ ಕೊಟ್ಟಿದ್ದರೆ, ಕೆಲವು ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಲು ಮುಂದಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮಡಿಕೇರಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ನಗರದಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿಯಾಗಲಿದ್ದು, ಕಾನೂನನ್ನು ಯಾರು ಉಲ್ಲಂಘಿಸಬಾರದು ಎಂದು ಜಿಲ್ಲಾಡಳಿತ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಬರಿ ಮಸೀದಿ ಧ್ವಂಸ ಪ್ರಕರಣ – ಅಡ್ವಾಣಿ, ಉಮಾಭಾರತಿ ಸೇರಿ 12 ಮಂದಿಗೆ ಜಾಮೀನು

    ಬಾಬರಿ ಮಸೀದಿ ಧ್ವಂಸ ಪ್ರಕರಣ – ಅಡ್ವಾಣಿ, ಉಮಾಭಾರತಿ ಸೇರಿ 12 ಮಂದಿಗೆ ಜಾಮೀನು

    ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಕೇಂದ್ರ ಸಚಿವೆ ಉಮಾಭಾರತಿ ಹಾಗೂ ಮುರಳಿ ಮನೋಹರ ಜೋಷಿ ಸೇರಿದಂತೆ ಪ್ರಕರಣದ 12 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

    ಉತ್ತರ ಪ್ರದೇಶದ ಲಖನೌನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಎಸ್ ಕೆ ಯಾದವ್ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಈ ಹಿಂದಿನ ವಿಚಾರಣೆಯಲ್ಲಿ ಆರೋಪಿಗಳು ಖುದ್ದಾಗಿ ಹಾಜರಾಗಬೇಕು. ಇಲ್ಲದಿದ್ದರೆ ಯಾವುದೇ ರೀತಿಯ ಮನವಿ ಮತ್ತು ಅರ್ಜಿಗಳನ್ನು ಸ್ಪೀಕರಿಸುವುದಿಲ್ಲ ಎಂದು ನ್ಯಾಯಮೂರ್ತಿ ಎಸ್.ಕೆ. ಯಾದವ್ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳು ಇಂದು ವಿಚಾರಣೆಗೆ ಖುದ್ದು ಹಾಜರಾಗಿ, ಜಾಮೀನು ಅರ್ಜಿ ಸಲ್ಲಿಸಿದ್ದರು.

    ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ಕಳೆದ ಏಪ್ರಿಲ್ 19ರಂದು ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಪ್ರಕರಣದ ತನಿಖೆಯನ್ನು ಲಖನೌನಲ್ಲಿ ನಡೆಸಿ 2 ವರ್ಷದಲ್ಲಿ ತೀರ್ಪು ನೀಡುವಂತೆ ಆದೇಶ ನೀಡಿತ್ತು.