Tag: ಬಾಪೂಜಿ ನಗರ

  • ಪಾದರಾಯನಪುರದಿಂದ ಪ್ರಾಣಿ ತ್ಯಾಜ್ಯ ಎಸೆಯಲು ಬಂದು 10 ಸಾವಿರ ದಂಡ ತೆತ್ತರು

    ಪಾದರಾಯನಪುರದಿಂದ ಪ್ರಾಣಿ ತ್ಯಾಜ್ಯ ಎಸೆಯಲು ಬಂದು 10 ಸಾವಿರ ದಂಡ ತೆತ್ತರು

    ಬೆಂಗಳೂರು: ಪಾದರಾಯನಪುರದಿಂದ ಪ್ರಾಣಿ ತ್ಯಾಜ್ಯ ತೆಗೆದುಕೊಂಡು ಬಾಪೂಜಿ ನಗರದಲ್ಲಿ ಎಸೆಯಲು ಬಂದಿದ್ದವರಿಗೆ ಬಿಬಿಎಂಪಿ ಅಧಿಕಾರಿಗಳು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

    ಬಾಪೂಜಿನಗರ ವಾರ್ಡ್ 134 ಹಾಗೂ ಹಂಪಿನಗರ ವಾರ್ಡ್ 133ಕ್ಕೆ ಸೇರುವ ಅಂಡರ್ ಪಾಸ್ ಬಳಿ ಹಾಕಲಾಗಿದ್ದ ಕಸವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿತ್ತು. ಆದರೂ ಕೆಲವು ದುಷ್ಕರ್ಮಿಗಳು ರಾತ್ರಿ ವೇಳೆ ಪ್ರಾಣಿ ತ್ಯಾಜ್ಯ ತಂದು ಎಸೆಯುತ್ತಿದ್ದರು. ಇದರಿಂದಾಗಿ ಬಾಪೂಜಿ ನಗರದಲ್ಲಿ ಬಿಬಿಎಂಪಿ ಮಾರ್ಷಲ್ ಕಾರ್ಯಾಚರಣೆ ನಡೆಸಿದ್ದರು.

    ಬಿಬಿಎಂಪಿ ಅಧಿಕಾರಿ ಸೋಮಶೇಖರ್ ಪಾಟೀಲ್ ನೇತೃತ್ವದಲ್ಲಿ ಮಾರ್ಷಲ್‍ಗಳು ಶನಿವಾರ ಸಂಜೆಯಿಂದ ಕಾರ್ಯಾಚರಣೆ ನಡೆಸಿದ್ದರು. ಇತ್ತ ಪಾದರಾಯನಪುರದ ಕೆಲವರು ಆಟೋದಲ್ಲಿ ಕೋಳಿ ಕಸ ಹಾಗೂ ಕುರಿಗಳ ಬೋಟಿ ತ್ಯಾಜ್ಯ ತಂದು ರಾಜಕಾಲುವೆಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಮಾರ್ಷಲ್‍ಗಳು ಅವರನ್ನು ರೆಡ್ ಹ್ಯಾಂಡಾಗಿ ಹಿಡಿದು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

    ಪಾದರಾಯನಪುರಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲ್ಲೇ ಇದೆ. ಶುಕ್ರವಾರವಷ್ಟೇ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಸೋಂಕು ದೃಢಪಟ್ಟಿತ್ತು. ಆದರೆ ಅವರು ಹೈಡ್ರಾಮಾ ಸೃಷ್ಟಿಸಿ ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ತೆರಳಿದರು. ಇಮ್ರಾನ್ ಪಾಷಾ ಅನೇಕರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತಿಯ ಸಂಪರ್ಕ ಹೊಂದಿದ್ದರು. ಇದರಿಂದಾಗಿ ಮತ್ತಷ್ಟು ಜನರಿಗೆ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

    ಕೊರೊನಾ ಹಾಟ್‍ಸ್ಪಾಟ್ ಎಂದೇ ಗುರುತಿಸಿಕೊಂಡಿರುವ ಪಾದರಾಯನಪುರ ಸಮೀಪದ ಬಾಪೂಜಿ ನಗರಕ್ಕೂ ಸೋಂಕು ಹರಡುತ್ತಾ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

  • ಬಾಪೂಜಿ ನಗರದಲ್ಲಿ ಹೆಸರಿಗೆ ಮಾತ್ರ ಸೀಲ್‍ಡೌನ್-ಉಚಿತ ಹಾಲಿಗಾಗಿ ಗುಂಪು ಸೇರಿದ ಜನ

    ಬಾಪೂಜಿ ನಗರದಲ್ಲಿ ಹೆಸರಿಗೆ ಮಾತ್ರ ಸೀಲ್‍ಡೌನ್-ಉಚಿತ ಹಾಲಿಗಾಗಿ ಗುಂಪು ಸೇರಿದ ಜನ

    ಬೆಂಗಳೂರು: ರಾಜಧಾನಿಯ ಪಾದರಾಯನಪುರ ಮತ್ತು ಬಾಪೂಜಿ ನಗರದಲ್ಲಿ ಸೀಲ್‍ಡೌನ್ ಮಾಡಲಾಗಿದೆ. ಆದ್ರೆ ಈ ಎರಡೂ ಪ್ರದೇಶದಲ್ಲಿ ಹೆಸರಿಗೆ ಮಾತ್ರ ಸೀಲ್ ಆಯ್ತಾ ಪ್ರಶ್ನೆ ಹುಟ್ಟಿಕೊಂಡಿದೆ. ಸೀಲ್‍ಡೌನ್ ಆಗಿದ್ದರೂ ಜನರು ಮಾತ್ರ ಎಂದಿನಂತೆ ಕುಂಟು ನೆಪಗಳನ್ನು ಹೇಳುತ್ತಾ ಬಡವಾಣೆಗಳಲ್ಲಿ ತಿರುಗಾಡುತ್ತಿದ್ದರೆ, ಕೆಲವರು ಉಚಿತ ಹಾಲು ಪಡೆಯಲು ಮುಗಿಬೀಳುತ್ತಿದ್ದಾರೆ.

    ಪಾದರಾಯನಪುರದ ವಾರ್ಡ್ ನಂಬರ್ 134, 135, 136 ಜನರು ಎಂದಿನಂತೆ ಮನೆಯಿಂದ ಹೊರ ಬರುತ್ತಿದ್ದಾರೆ. ಸೀಲ್‍ಡೌನ್ ಆಗಿದ್ರೂ ಜನರು ಮಾತ್ರ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿಲ್ಲ. ವಾಹನಗಳಲ್ಲಿ ಜನ ಹೊರಗೆ ಬಂದು ಬೆಂಗಳೂರಿನ ಬೇರೆ ಏರಿಯಾಗಳತ್ತ ಹೊರಟ್ಟಿದ್ದಾರೆ. ಇನ್ನು ಖಾಸಗಿ ವಾಹನಗಳು ಮತ್ತು ಆಟೋ ಚಾಲಕರು ಲಾಕ್‍ಡೌನ್ ಲಾಭ ಪಡೆಯಲು ಮುಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದಾರೆ.

    ಇನ್ನು ಬಾಪೂಜಿ ನಗರದಲ್ಲಿ ಜನರು ಉಚಿತ ಹಾಲು ಪಡೆಯಲು ಬಂದು ಕ್ಯೂ ನಿಂತಿರುವ ದೃಶ್ಯಗಳು ಇಂದು ಬೆಳಗ್ಗೆ ಕಂಡುಬಂದವು. ಹಾಲು ಪಡೆಯಬೇಕೆಂದು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುತ್ತಿಲ್ಲ. ಬಾಪೂಜಿ ನಗರದ ಬಹುತೇಕರಿಗೆ ಉಚಿತ ಹಾಲು ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಪೋರೇಟರ್ ಅಜ್ಮಲ್ ಬೇಗ್ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಉಚಿತ ಹಾಲು ಕೊಡದೇ ಪ್ರತಿನಿತ್ಯ ಕಾರ್ಪೋರೇಟರ್ ಮೋಸ ಮಾಡುತ್ತಿದ್ದಾರೆ. ಉಚಿತ ಹಾಲು ಕಾರ್ಪೋರೇಟರ್ ಬೆಂಬಲಿಗರ ಪಾಲಾಗುತ್ತಿದೆ. ನಿನ್ನೆಯೂ ಇದೇ ರೀತಿ ಹಾಲು ನೀಡಲಿಲ್ಲ. ಇವತ್ತು ಇಷ್ಟು ಸಮಯ ಸರತಿಯಲ್ಲಿ ನಿಂತ್ರೂ ಹಾಲು ಸಿಗಲಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.