Tag: ಬಾಪೂಜಿನಗರ

  • ಬಾಪೂಜಿನಗರಕ್ಕೆ ಬಿಗ್ ರಿಲೀಫ್- ಚಾಂದಾನಿ ಚೌಕ್ ರಸ್ತೆ ಇಂದಿನಿಂದ ಸೀಲ್ ಡೌನ್

    ಬಾಪೂಜಿನಗರಕ್ಕೆ ಬಿಗ್ ರಿಲೀಫ್- ಚಾಂದಾನಿ ಚೌಕ್ ರಸ್ತೆ ಇಂದಿನಿಂದ ಸೀಲ್ ಡೌನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಒಂದು ಕಡೆಗೆ ಗುಡ್ ನ್ಯೂಸ್, ಇನ್ನೊಂದು ಕಡೆಗೆ ಬ್ಯಾಡ್ ನ್ಯೂಸ್. ಅದೇನೆಂದರೆ ಒಂದೆಡೆ ಸೀಲ್ ಡೌನ್ ಓಪನ್, ಇನ್ನೊಂದೆಡೆ ಕ್ಲೋಸ್ ಮಾಡಲಾಗಿದೆ.

    ಹೌದು. ಕೊರೊನಾ ಸೋಂಕು ಕಂಡುಬಂದಿದ್ದರಿಂದ ಬಾಪೂಜಿನಗರದಲ್ಲಿ ಹೇರಲಾಗಿದ್ದ ಸೀಲ್ ಡೌನ್ ಇಂದಿಗೆ ಮುಕ್ತಾಯವಾಗಲಿದ್ದು, ಪ್ರದೇಶದ ಜನ ನಿಟ್ಟುಸಿರು ಬಿಟ್ಟಂತಾಗಿದೆ. ಇತ್ತ ಶಿವಾಜಿನಗರದ ಚಾಂದಾನಿ ಚೌಕ್ ರಸ್ತೆಯನ್ನು ಇಂದಿನಿಂದ ಸೀಲ್ ಡೌನ್ ಮಾಡಲಾಗುತ್ತಿದ್ದು, ಇಂದಿನಿಂದ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ.

    ಈ ಮೂಲಕ ಒಂದು ಕಡೆ ಕೊರೊನಾದಿಂದ ರಿಲೀಫ್ ಸಿಕ್ಕರೆ ಮತ್ತೊಂದು ಕಡೆ ಕೊರೊನಾ ಆತಂಕ ಆರಂಭವಾಗಿದೆ. ಸೀಲ್ ಡೌನ್ ಮುಕ್ತವಾಗಿರುವುದರಿಂದ ಬಾಪೂಜಿನಗರದಲ್ಲಿ ಜನ ಅಡ್ಡಾದಿಡ್ಡಿ ಓಡಾಡಲು ಆರಂಭಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಹಾಕಿದ್ದ ಎಲ್ಲ ಬ್ಲ್ಯಾಕ್‍ಗಳನ್ನು ಓಪನ್ ಮಾಡಲಾಗಿದೆ. ವಾಹನಗಳು ಒಳಗೆ, ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಪೊಲೀಸರು ಭದ್ರತೆ ಮಾತ್ರ ನೀಡುತ್ತಿದ್ದು, ಅಧಿಕೃತವಾಗಿ ಸಿಕ್ಕ ಮೇಲೆ ಎಲ್ಲ ಬ್ಯಾರಿಕೇಡ್ ಸಹ ಕ್ಲಿಯರ್ ಮಾಡಲಿದ್ದಾರೆ.

    ಈ ಪ್ರದೇಶದಲ್ಲಿ ಕಳೆದ 28 ದಿನಗಳಿಂದ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಬುಧವಾರಕ್ಕೆ ಕಂಟೈನ್ಮೆಂಟ್ ಅವಧಿ ಮುಕ್ತಾಯವಾಗಿದೆ. ಹೀಗಾಗಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಎಲ್ಲ ಬ್ಯಾರಿಕೇಡ್‍ಗಳನ್ನು ಓಪನ್ ಮಾಡಲಾಗಿದೆ. ಇದರಿಂದ ಬಾಪೂಜಿನಗರ ನಿವಾಸಿಗಳು ಫುಲ್ ಖುಷಿಯಾಗಿದ್ದು, ತಮ್ಮ ತಮ್ಮ ವಾಹನಗಳನ್ನು ರಸ್ತೆಗಿಳಿಸಿದ್ದಾರೆ. ಇತ್ತ ಅಗತ್ಯ ವಸ್ತುಗಳ ಮಾರಾಟ ಮಳಿಗೆ ಸಹ ಓಪನ್ ಮಾಡಲಾಗಿದ್ದು, ಈ ಮೂಲಕ ಸರಿ ಸುಮಾರು ಒಂದು ತಿಂಗಳ ಸಮಸ್ಯೆಗೆ ತೆರೆ ಬಿದ್ದಂತಾಗಿದೆ.

  • ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್, ಒಳಗೆ ಜನರ ಬಿಂದಾಸ್ ಓಡಾಟ- ಬಾಪೂಜಿನಗರದಲ್ಲಿ ನಿರ್ಲಕ್ಷ್ಯ

    ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್, ಒಳಗೆ ಜನರ ಬಿಂದಾಸ್ ಓಡಾಟ- ಬಾಪೂಜಿನಗರದಲ್ಲಿ ನಿರ್ಲಕ್ಷ್ಯ

    – ಕಾರ್ಪೋರೇಟರ್ ಗಂಭೀರ ಆರೋಪ

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಮಾಡಲಾಗಿದ್ದ ಲಾಕ್ ಡೌನ್ ಅನ್ನು ಮೇ.3ರವರೆಗೆ  ವಿಸ್ತರಿಸಿದ್ದು, ಬೆಂಗಳೂರಿನ ಎರಡು ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆದರೂ ಜನ ನಿರ್ಲಕ್ಷ್ಯಿಸುತ್ತಿರುವುದು ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಬಾಪೂಜಿನಗರ ಹಾಗೂ ಪಾದರಾಯನಪುರ ಈ ಎರಡು ಏರಿಯಾಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಆದರೆ ಬಾಪೂಜಿನಗರದಲ್ಲಿ ಮಾತ್ರ ಹೊರಗೆ ಬಿಗಿ ಪೊಲೀಸ್ ಬಂದೊಬಸ್ತ್ ಆಗಿದ್ದು, ಒಳಗಡೆ ಜನ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.

    ಬಾಪೂಜಿನಗರಕ್ಕೆ ಸಂಪರ್ಕ ಮಾಡೋ ಮೂರು ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳಿಗೆ ನಿರ್ಬಂಧ ಹೇರಿದ್ದಾರೆ. ಪಾಸ್ ಇದ್ದವರಿಗಷ್ಟೇ ಒಳಗೆ-ಹೊರಗೆ ಹೋಗಲು ಬಿಡುತ್ತಿದ್ದಾರೆ. ಆದರೆ ಏರಿಯಾ ಒಳಗೆ ಜನ ಎಂದಿನಂತೆ ಆರಾಮಾಗಿ ಓಡಾಡುತ್ತಿದ್ದಾರೆ. ಪೊಲೀಸರು ಕೂಡ ಸ್ಥಳೀಯರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೇ ಬೇಸತ್ತಿದ್ದಾರೆ. ನಮ್ ಏರಿಯಾಗೆ ಹಾಲು ಬಂದಿಲ್ಲ, ನಮ್ ಏರಿಯಾ ದಿನಸಿ ಬಂದಿಲ್ಲ ಎಂದು ನೆಪ ಹೇಳಿಕೊಂಡು ಹೊರಗೆ ಓಡಾಡುತ್ತಿದ್ದಾರೆ.

    ಇತ್ತ ಬಾಪೂಜಿ ನಗರ ಕಾರ್ಪೋರೇಟರ್ ಅಜ್ಮಲ್ ಬೇಗ್ ಮಾಧ್ಯಮದೊಂದಿಗೆ ಮಾತನಾಡಿ ಗಂಭೀರ ಆರೋಪ ಮಾಡಿದ್ದಾರೆ. ಬಾಪೂಜಿ ನಗರ ವಾರ್ಡ್ ನಲ್ಲಿ ಸುಮಾರು 80 ಸಾವಿರ ನಿವಾಸಿಗಳಿದ್ದಾರೆ. ಆದರೆ ಕೇವಲ ಎರಡು ಸಾವಿರ ಕಿಟ್ ಗಳನ್ನು ಮಾತ್ರ ಬಿಬಿಎಂಪಿಯಿಂದ ನೀಡಲಾಗಿದೆ. 8 ಸಾವಿರ ಲೀಟರ್ ಹಾಲು ಅವಶ್ಯಕತೆ ಇದೆ. ಆದರೆ ನಮ್ಮ ವಾರ್ಡಿಗೆ ಬಿಬಿಎಂಪಿ ನೀಡ್ತಿರೋದು ಕೇವಲ 900 ಲೀಟರ್ ಹಾಲು ಮಾತ್ರ. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಕಾಂಗ್ರೆಸ್ ಕಾರ್ಪೊರೇಟರ್ ಅಂತ ನಮ್ಮ ವಾರ್ಡಿಗೆ ತಾರತಮ್ಯ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

  • ಅಪ್ಪ-ಅಮ್ಮನ ಹೆಸ್ರನ್ನೇ ರಸ್ತೆಗೆ ನಾಮಕರಣ ಮಾಡಲು ಮುಂದಾದ ಅಜ್ಮದ್ ಬೇಗ್

    ಅಪ್ಪ-ಅಮ್ಮನ ಹೆಸ್ರನ್ನೇ ರಸ್ತೆಗೆ ನಾಮಕರಣ ಮಾಡಲು ಮುಂದಾದ ಅಜ್ಮದ್ ಬೇಗ್

    ಬೆಂಗಳೂರು: ಬಾಪೂಜಿನಗರದ ರಸ್ತೆಗಳಿಗೆ ಮರುನಾಮಕಾರಣ ವಿವಾದ ಮತ್ತೆ ಸುದ್ದಿಯಾಗಿದೆ. ಬಾಪೂಜಿನಗರ ವಾರ್ಡ್ ಕಾರ್ಪೋರೇಟರ್ ಅಜ್ಮದ್ ಬೇಗ್ ಅವರ ತಂದೆ – ತಾಯಿ ಹೆಸರನ್ನೇ ನಾಮಕರಣ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಬಂದಿದೆ.

    ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ರಸ್ತೆಗೆ “ಗಪೂರ್ ರಸ್ತೆ ಮತ್ತು ಪೈಪ್‍ಲೈನ್ ರೈಲ್ವೆ ಗೇಟ್ ಅಂಡರ್‍ಪಾಸ್ ನಿಂದ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಮಿಷಿನ್ ಎಚ್ ಸ್ವೀಟ್ ರಸ್ತೆಗೆ ಫಾತಿಮಾ ಬೀ ಬಡಾವಣೆ ಎಂದು ಹೆಸರಿಡಲು ಪಾಲಿಕೆಯಲ್ಲಿ ಅನುಮೋದನೆ ಸಿಕ್ಕಿದೆ. ಇದು ಗಪೂರ್ ಮತ್ತು ಫಾತಿಮಾ ಎಂಬ ಹೆಸರುಗಳು ಕಾರ್ಪೋರೆಟರ್ ತಂದೆ – ತಾಯಿಯದು ಎಂಬ ಮಾಹಿತಿ ಹರಿದಾಡುತ್ತಿದೆ.

    ಈ ಬೆಳವಣಿಗೆ ಕಾರ್ಪೋರೇಟರ್ ವಿರುದ್ಧ ಮತ್ತಷ್ಟು ವಿವಾದವನ್ನ ಸೃಷ್ಟಿಸಿದೆ. ಇಷ್ಟಾದ್ರೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ ಜಿ .ಪರಮೇಶ್ವರ್ ಮಾತ್ರ ಪ್ರಸ್ತಾವನೆ ಸರ್ಕಾರದ ಅಂಗಳ ತಲುಪಿದಾಗ ಕ್ರಮ ಕೈಗೊಳ್ಳುವೆ ಎಂದಿದ್ದಾರೆ.

    ಹಾಗಾದ್ರೆ ಯಾವ ರೋಡ್ ಗೆ ಯಾವ ಹೆಸ್ರಿಟ್ಟಿದ್ದಾರೆ ಅಂತ ನೋಡೋದಾದ್ರೆ..
    * ಶಾಮಣ್ಣ ಗಾರ್ಡನ್ ಅಂಡರ್‍ಪಾಸ್‍ನ ಅಂಡರ್ ಪಾಸ್ ರಸ್ತೆಗೆ ಗಪೂರ್ ರೋಡ್
    * ಸುನ್ನಿ ಚೌಕ್‍ನಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರೋಡ್‍ಗೆ ಸುಬಾನಿಯಾ ಮಸೀದಿ ರೋಡ್
    * ಸಂತೋಷ್ ಟೆಂಟ್‍ನಿಂದ ಶೋಭಾ ಟೆಂಟ್‍ವರೆಗಿನ ರೋಡ್‍ಗೆ ಜಾಮಿಯಾ ಮಸೀದಿ ರೋಡ್
    * ಶಾಮಣ್ಣ ಗಾರ್ಡನ್ 6ನೇ ಕ್ರಾಸ್ ರಸ್ತೆಗೆ ಖುದಾದತ್ ಮಸೀದಿ ರೋಡ್


    * ಬಾಪೂಜಿನಗರ 1ನೇ ಮೇನ್ ರೋಡ್‍ಗೆ ಹೀರಾ ಮಸೀದಿ ರೋಡ್
    * ಪೈಪ್‍ಲೈನ್ ರೈಲ್ವೇ ಗೇಟ್ ಅಂಡರ್‍ಪಾಸ್‍ನಿಂದ ರಾಗಿ ಮಿಷನ್ ಹೆಚ್ ಸ್ಟ್ರೀಟ್‍ವರೆಗಿನ ಪ್ರದೇಶಕ್ಕೆ ಫಾತೀಮಾ ಬೀ ಬಡಾವಣೆ
    * ಪೈಪ್‍ಲೈನ್ ರಸ್ತೆ, 6ನೇ ಮುಖ್ಯರಸ್ತೆಯಿಂದ ಸ್ಟಾರ್ಮ್‍ವಾಟರ್ ಡ್ರೈನ್‍ವರೆಗಿನ ಪ್ರದೇಶಕ್ಕೆ ಅಮಿರ್ ಕಲಿಮಿ ನಗರ

    ಸದ್ಯ ಅಪ್ಪ- ಅಮ್ಮನ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಪಾಲಿಕೆಯಲ್ಲಿ ಒಪ್ಪಿಗೆ ಪಡೆದಿದ್ದ ಅಜ್ಮದ್ ಬೇಗ್ ನಡೆಗೆ ಬಿಜೆಪಿ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರು ರಸ್ತೆಗಳಿಗೆ ಮಸೀದಿ, ಮುಸ್ಲಿಮರ ಹೆಸರು!

    ಬೆಂಗಳೂರು ರಸ್ತೆಗಳಿಗೆ ಮಸೀದಿ, ಮುಸ್ಲಿಮರ ಹೆಸರು!

    – ಪಾಲಿಕೆ ಸದಸ್ಯ ಅಜ್ಮಲ್ ಬೇಗ್‍ರಿಂದ ಬಿಬಿಎಂಪಿಗೆ ಮನವಿ
    – ಕರೆ ಮಾಡಿದ್ರೆ ಮೊಬೈಲ್ ಈಗ ಸ್ವಿಚ್ ಆಫ್

    ಬೆಂಗಳೂರು: ಅಲ್ಪಸಂಖ್ಯಾತ ಮತದಾರರನ್ನು ಓಲೈಸಲು ಬಾಪೂಜಿನಗರದ ಬಿಬಿಎಂಪಿ ಪಾಲಿಕೆ ಸದಸ್ಯ ಅಜ್ಮಲ್ ಬೇಗ್ ಬೆಂಗಳೂರಿನ ರಸ್ತೆಗಳಿಗೆ ಮುಸ್ಲಿಂ ಸಮುದಾಯ ಹೆಸರನ್ನು ಮರುನಾಮಕರಣ ಮಾಡಲು ಹೊರಟಿದ್ದಾರೆ.

    ಉತ್ತರ ಪ್ರದೇಶದ ಯೋಗಿ ಅದಿತ್ಯನಾಥ್ ಸರ್ಕಾರ ಅಲಹಾಬಾದ್ ಬದಲು ಪ್ರಯಾಗ್‍ರಾಜ್ ಹೆಸರನ್ನು ಮರುನಾಮಕರಣ ಮಾಡಿದ ಬೆನ್ನಲ್ಲೇ ಅಜ್ಮಲ್ ಬೇಗ್ ಅವರು ನಗರದ ರಸ್ತೆಗಳಿಗೂ ಮುಸ್ಲಿಮರ ಹೆಸರನ್ನು ಇಡುವಂತೆ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರೆ.

    ಯಾವ ರಸ್ತೆಗೆ ಯಾವ ಹೆಸರು?
    ಖಾದ್ರಿ ಶಾಮಣ್ಣ ಅಂಡರ್ ಪಾಸ್ ನ ಪೈಪ್ ಲೈನ್ ರಸ್ತೆಗೆ ಗಫೂರ್ ರಸ್ತೆ, ಸುನ್ನಿ ಚೌಕದಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರಸ್ತೆಗೆ ಸುಬಾನಿಯಾ ಮಸೀದಿ ಹೆಸರು, ಸಂತೋಷ್ ಟೆಂಟ್ ನಿಂದ ಶೋಭಾ ಟೆಂಟ್ ವರೆಗಿನ ರಸ್ತೆಗೆ ಜಾಮೀಯಾ ಮಸೀದಿ ಹೆಸರು, ಶಾಮಣ್ಣ ಗಾರ್ಡನ್ 6ನೇ ಕ್ರಾಸ್ ರಸೆಗೆ ಖುದಾದತ್ ಮಸೀದಿ ಹೆಸರು, ಬಾಪೂಜಿನಗರ 1ನೇ ಮುಖ್ಯ ರಸ್ತೆಗೆ ಹೀರಾ ಮಸೀದಿ ಎಂದು ನಾಮಕರಣ ಮಾಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರೆ.

    4 ತಿಂಗಳ ಹಿಂದೆ ಅಂದರೆ ಆಗಸ್ಟ್ 28ರಂದು ಅಜ್ಮಲ್ ಅವರು ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾಪವನ್ನು ಇರಿಸಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಅಜ್ಮಲ್ ಅವರ ಈ ಮನವಿಗೆ ವಿಪಕ್ಷ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಹಾಗೂ ಬಿಜೆಪಿ ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಮುಂದಿನ ಕೌನ್ಸಿಲ್ ಸಭೆಯಲ್ಲಿ ಮತ್ತೆ ಈ ಮನವಿಯ ಅರ್ಜಿಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

    ಯಾಕೆ ಮರುನಾಮಕರಣಕ್ಕೆ ಮುಂದಾಗಿದ್ದೀರಿ ಎಂದು ಪ್ರಶ್ನೆ ಕೇಳಿದ್ದಕ್ಕೆ ಸಮುದಾಯದವರು ಒತ್ತಾಯ ಮಾಡಿದ್ದಕ್ಕೆ ಅರ್ಜಿ ಸಲ್ಲಿಸಿದ್ದೇನೆ ವಿನಃ ನನ್ನ ಸ್ವಾರ್ಥಕ್ಕಾಗಿ ನಾನು ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದರು. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿ ಸಂಪರ್ಕಿಸಲು ಯತ್ನಿಸಿದಾಗ ಅಜ್ಮಲ್ ಬೇಗ್ ಬೆ ಮೊಬೈಲ್ ಸ್ವಿಚ್ ಆಫ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv