Tag: ಬಾನು ಮುಷ್ತಾಕ್‌

  • ಹಣೆಗೆ ಅರಿಶಿಣ, ಕುಂಕುಮವಿಟ್ಟು, ಹೂ ಮುಡಿದು ದಸರಾ ಉದ್ಘಾಟನೆ ಮಾಡೋದಾದ್ರೆ ಬನ್ನಿ: ಪ್ರತಾಪ್ ಸಿಂಹ

    ಹಣೆಗೆ ಅರಿಶಿಣ, ಕುಂಕುಮವಿಟ್ಟು, ಹೂ ಮುಡಿದು ದಸರಾ ಉದ್ಘಾಟನೆ ಮಾಡೋದಾದ್ರೆ ಬನ್ನಿ: ಪ್ರತಾಪ್ ಸಿಂಹ

    – ನನ್ನನ್ನ ಮತಾಂತರ ಮಾಡದೇ ಪ್ರವಾಸಿಗನಾಗಿ ಮೆಕ್ಕಾಗೆ ಕಳುಹಿಸ್ತೀರಾ?
    – ಧರ್ಮಸ್ಥಳದ ವಿರುದ್ಧ ಷಡ್ಯಂತ್ರ; ಹಿಂದೂಗಳೆಲ್ಲ ಒಂದಾಗಿ ಅಂತ ಕರೆ

    ಹುಬ್ಬಳ್ಳಿ: ಬಾನು ಮುಷ್ತಾಕ್ ಅವರೇ ನಿಮ್ಮನ್ನ ಅಲ್ಲಾನೇ ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ಅರಿಶಿಣ ಕುಂಕುವಿಟ್ಟ ತಾಯಿ ಚಾಮುಂಡೇಶ್ವರಿ ನಿಮ್ಮನ್ನು ಕರೆಸಿಕೊಳ್ತಾಳಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಟಾಂಗ್ ಕೊಟ್ಟಿದ್ದಾರೆ.

    ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರಿಗೆ (Banu Mushtaq) ಆಹ್ವಾನ ನೀಡಲಾಗಿದೆ. ಅವರ ಮೇಲೆ ನಮಗೆಲ್ಲ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆಯ ಮುಕುಟವಾಗಿರುವ ದಸರಾ (Dasara) ಉದ್ಘಾಟನೆಯನ್ನು ಅವರ ಕೈಯಲ್ಲಿ ಮಾಡಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಟ್ನಾದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯರ್ತರ ಬಡಿದಾಟ, ಕಲ್ಲು ತೂರಾಟ

    ಅರಿಶಿಣ, ಕುಂಕುಮ, ಹೂವಿಟ್ಟು ದಸರಾ ಉದ್ಘಾಟನೆ ಮಾಡಿ
    ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಾನು ಮುಷ್ತಾಕ್ ಅವರೇ ನಿಮಗೆ ಆತ್ಮಸಾಕ್ಷಿ ಇಲ್ವ? ಅದೇಗೆ ನೀವು ಉದ್ಘಾಟನೆಗೆ ಒಪ್ಪಿಕೊಂಡ್ರಿ? ಬಾನು ಮೇಡಂ ನಿಮ್ಮ ಅಲ್ಲಾನೇ ನಿಮ್ಮನ್ನು ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ನಮ್ಮ ಅರಿಶಿಣ ಕುಂಕುಮವಿಟ್ಟ ಚಾಮುಂಡಿ ನಿಮ್ಮನ್ನು ಬೆಟ್ಟಕ್ಕೆ ಕರೆಸಿಕೊಳ್ಳುತ್ತಾಳಾ? ನೀವು ಸೀರೆಯುಟ್ಟು, ಅರಿಶಿಣ, ಕುಂಕುಮ ಮತ್ತು ಹೂವಿಟ್ಟು ಬಂದು ದಸರಾ ಉದ್ಘಾಟನೆ ಮಾಡಿ ಎಂದಿದ್ದಾರೆ. ಇದನ್ನೂ ಓದಿ: ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

    ನನ್ನನ್ನು ಮತಾಂತರ ಮಾಡದೇ ಮೆಕ್ಕಾಗೆ ಕಳುಹಿಸ್ತೀರಾ?
    ನಾವು ನೆಲ, ಜಲ, ಪರಿಸರದಲ್ಲಿ ದೇವರನ್ನು ಕಾಣುತ್ತೇವೆ. ಇದು ನಮ್ಮ ಧರ್ಮ. ಮರುಭೂಮಿಯ ಮರಳಿನಲ್ಲಿ ಹುಟ್ಟಿದ ಧರ್ಮ ನಮ್ಮದಲ್ಲ. ಬಾನು ಮುಷ್ತಾಕ್ ಅವರೇ ನಿಮಗೆ ನಮ್ಮ ಧರ್ಮದ ಹಬ್ಬವನ್ನು ಉದ್ಘಾಟನೆ ಮಾಡಲು ಮನಸ್ಸಾದ್ರೂ ಹೇಗೆ ಒಪ್ಪುತ್ತೆ? ವಿವಿಧತೆಯಲ್ಲಿ ಏಕತೆ ಬರೀ ಹಿಂದೂಗಳಲ್ಲಿ ಮಾತ್ರ. ಆದರೆ ಮುಸ್ಲಿಂ, ಕ್ರಿಶ್ಚಿಯನ್ನರಲ್ಲಿ ಇದು ಇಲ್ಲ. ನಾವು ಹೆಣ್ಣು ಮಕ್ಕಳಲ್ಲಿ ದೇವಿಯಲ್ಲಿ ಕಾಣುತ್ತೇವೆ. ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತೀರಾ. ನನ್ನನ್ನು ಮತಾಂತರ ಮಾಡದೇ, ಸುನ್ನತ್ ಮಾಡಿಕೊಳ್ಳದೆ ಬರೀ ಪ್ರವಾಸಿಗನಾಗಿ ಮೆಕ್ಕಾಗೆ ಕಳುಹಿಸಿಕೊಡ್ತೀರಾ? ಇಲ್ಲ ಎಂದಾದರೆ ನೀವು ಹೇಗೆ ನಮ್ಮ ಸಂಸ್ಕೃತಿಯನ್ನು ಪಾಲಿಸದೆ ದಸರಾ ಉದ್ಘಾಟನೆಗೆ ಬರ್ತಿರಾ ಎಂದು ಕೇಳಿದ್ದಾರೆ.

    ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಯಾರೆಲ್ಲ ಇದ್ದಾರೆಂದು ನಿಮಗೆ ಗೊತ್ತಾಗಿದೆ. ಯಾರೋ ಬುರುಡೆ ದಾಸ ಏನೋ ಹೇಳಿದ ಎಂದು ಕನ್ವರ್ಟ್ ಕ್ರಿಶ್ಚಿಯನ್ ಚಿನ್ನಯ್ಯ ಈಗ ಬಾಯಿಬಿಟ್ಟಿದ್ದಾನೆ. ಸಮೀರ್ ತನ್ನ ಧರ್ಮದ ಬಗ್ಗೆ ಮಾತಾಡ್ತಾನಾ? ಮಸೀದಿ, ಮದರಾಸದಲ್ಲಿನ ಅತ್ಯಾಚಾರ, ಅನಾಚಾರದ ಬಗ್ಗೆ ಮಾತಾಡ್ತಾನಾ? ತುಂಡಾಗಿ ಉಳಿದಿರುವ ಹಿಂದೂ ಧರ್ಮ ಭೂಮಿಯನ್ನು ನಾವು ರಕ್ಷಣೆ ಮಾಡಬೇಕಿದೆ. ಗೌಡ, ಲಿಂಗಾಯತ, ಬ್ರಾಹ್ಮಣ, ಮರಾಠ, ಎಸ್ಟಿ, ಎಸ್ಸಿ ಆಗಬೇಡಿ. ಎಲ್ಲರೂ ಜಾತಿ ಎನ್ನುವ ದರಿದ್ರ ಮನಸ್ಥಿತಿಯಿಂದ ಹೊರ ಬಂದು ಹಿಂದೂಗಳಾಗಿ. ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಹಿಂದೂಗಳೆಲ್ಲ ಒಂದಾಗಿ ಎಂದು ಕರೆ ನೀಡಿದ್ದಾರೆ.

  • ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

    ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

    – SIT ವರದಿ ಬರೋವರೆಗೆ ಧರ್ಮಸ್ಥಳ ಕೇಸ್ ಬಗ್ಗೆ ಯಾರು ಮಾತಾಡಬಾರದು; ಸ್ಪೀಕರ್‌ ವಾರ್ನಿಂಗ್‌

    ಬೆಂಗಳೂರು: ಸಂವಿಧಾನ ಪ್ರಕಾರವಾಗಿ ದಸರಾ ಉದ್ಘಾಟನೆ ಬಗ್ಗೆ ಸರ್ಕಾರ ನಿರ್ಧಾರ ಸ್ವಾಗತ ಮಾಡಿದ್ರೆ ನಾವು ಅದನ್ನ ಒಪ್ಪಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದ್ದಾರೆ.

    ಬಾನು ಮುಷ್ತಾಕ್ (Banu Mushtaq) ದಸರಾ (Dasara) ಉದ್ಘಾಟನೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಸರಾ ಉದ್ಘಾಟನೆ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷಗಳು ಮಾತಾಡಲಿ. ಸಂವಿಧಾನ ಬದ್ಧವಾಗಿ ಇದ್ಯಾ, ಇಲ್ವಾ ಅಂತ ಮಾತ್ರ ನಾವು ನೋಡ್ತೀವಿ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ಸಂವಿಧಾನದ ಪ್ರಕಾರ ಇದ್ದರೆ ಎಲ್ಲವನ್ನು ನಾವು ಒಪ್ಪಬೇಕು. ಸಂವಿಧಾನ ಪ್ರಕಾರ ಎಲ್ಲವೂ ಇದ್ದರೆ ಯಾವುದು ತಪ್ಪು ಅಲ್ಲ. ಸಂವಿಧಾಬ ಬದ್ಧವಾಗಿದ್ದರೆ ಯಾರೂ ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    ಧರ್ಮಸ್ಥಳ ಕೇಸ್‌ ಬಗ್ಗೆ ಯಾರೂ ಮಾತನಾಡಬಾರದು: ಸ್ಪೀಕರ್‌ ವಾರ್ನಿಂಗ್‌
    ಇದೇ ವೇಲೆ ಧರ್ಮಸ್ಥಳ ಕೇಸ್ ವಿಚಾರದ ಬಗ್ಗೆ ಮಾತನಾಡಿ, ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) SIT ತನಿಖಾ ವರದಿ ಬರೋವರೆಗೂ ಯಾರು ಕೂಡಾ ನ್ಯಾಯಾಧೀಶರು ಆಗಬಾರದು. ಸರ್ಕಾರ SIT ತನಿಖೆ ರಚನೆ ಮಾಡಿದೆ. ತನಿಖೆ ಆಗ್ತಿದೆ.SIT ತನಿಖೆ ಆಗೋವರೆಗೂ ನಾವು ನ್ಯಾಯಾಧೀಶರು ಆಗೋದು ಬೇಡ.ಕ್ಷೇತ್ರದ ಪಾವಿತ್ರ್ಯತೆ ನಮಗೆ ಮುಖ್ಯ ಎಂದರು.

    ಒಂದು ಶಿಕ್ಷಣ ಸಂಸ್ಥೆಯ ಗೌರವ ಉಳಿಯೋದು ಮುಖ್ಯ. ಒಂದು ಸಂಸ್ಥೆಯನ್ನ ಕಟ್ಟೋದು ತುಂಬಾ ಕಷ್ಟ. ಕಪ್ಪು ಚುಕ್ಕೆ ಮಾಡೋದು ಸುಲಭ.SIT ತನಿಖೆ ವರದಿ ಬರಲಿ. ಅಲ್ಲಿಯವರೆಗೆ ಎಲ್ಲರು ಕಾಯಬೇಕು.ತನಿಖೆ ವರದಿ ಬರಲಿ ಅಮೇಲೆ ಎಲ್ಲರು‌ ಮಾತಾಡಿ ಅಂತ ತಿಳಿಸಿದರು.

  • ಬಾನು ಮುಷ್ತಾಕ್ ದೇವಿ ಪೂಜೆ ಮಾಡಿದ್ರೆ ಫತ್ವಾ ಇನ್‌ಸ್ಟಿಟ್ಯೂಷನ್‌ ಅನುಮತಿ ಪಡೆಯಬೇಕು:ಮಕ್ಸೂದ್ ಇಮ್ರಾನ್

    ಬಾನು ಮುಷ್ತಾಕ್ ದೇವಿ ಪೂಜೆ ಮಾಡಿದ್ರೆ ಫತ್ವಾ ಇನ್‌ಸ್ಟಿಟ್ಯೂಷನ್‌ ಅನುಮತಿ ಪಡೆಯಬೇಕು:ಮಕ್ಸೂದ್ ಇಮ್ರಾನ್

    ಬೆಂಗಳೂರು: ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ (Banu Mushtaq) ದಸರಾದಲ್ಲಿ (Dasara) ಭಾಗವಹಿಸಲು ನಮ್ಮ ಅಡ್ಡಿಯಿಲ್ಲ. ಆದರೆ ದೇವಿಗೆ ಪೂಜೆ ಮಾಡಿದರೆ ಫತ್ವಾ ಇನ್‌ಸ್ಟಿಟ್ಯೂಷನ್‌ನಿಂದ (Fatwa Institution) ಅನುಮತಿ ತೆಗೆದುಕೊಳ್ಳಬೇಕು ಎಂದು ಜಾಮೀಯಾ ಮಸೀದಿ ಮೌಲನಾ ಡಾ.ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಗೆ ನೀಡಿದ ಚುಟುಕು ಸಂದರ್ಶನದಲ್ಲಿ ಮಾತನಾಡಿದ ಜಾಮೀಯಾ ಮಸೀದಿ ಮೌಲನಾ ಡಾ ಮಕ್ಸೂದ್ ಇಮ್ರಾನ್, ಪೂಜೆಯಲ್ಲಿ ನಿಂತರೆ ತಪ್ಪಿಲ್ಲ. ಅರ್ಚಕ ಅಥವಾ ಬೇರೆಯವರು ಪೂಜೆ ಮಾಡುತ್ತಿದ್ದರೆ ಇವರು ಭಾಗವಹಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾದದ್ದು: ಬಾನು ಮುಷ್ತಾಕ್‌ರಿಂದ ಸ್ಪಷ್ಟೀಕರಣ ಕೇಳಿದ ಯದುವೀರ್‌

     

    ಚಾಮುಂಡಿಗೆ ಪೂಜಾ ವಿಧಿ ವಿಧಾನ ಅಥವಾ ಆರತಿ ಬೆಳಗೋದು, ಹೀಗೆ ಪೂಜಾ ಕೈಂಕರ್ಯದಲ್ಲಿ ತಾವೇ ಸ್ವಂತ ಭಾಗಿಯಾದರೆ ಭಾನು ಮುಷ್ತಾಕ್ ಫತ್ವಾ ಇನ್‌ಸ್ಟಿಟ್ಯೂಷನ್‌ನಿಂದ ಅನುಮತಿ ತೆಗೆದುಕೊಳ್ಳಬೇಕು. ಇದಕ್ಕೆ ಫತ್ವಾ ಇನ್‌ಸ್ಟಿಟ್ಯೂಷನ್‌ ಅವರು ಏನು ಹೇಳುತ್ತಾರೋ ನೋಡಬೇಕು. ಅದು ಅವರಿಗೆ ಬಿಟ್ಟ ವಿಚಾರ. ನಾನು ಬಾನು ಮುಷ್ತಾಕ್ ಅವರಿಗೆ ಸಲಹೆ ಮಾತ್ರ ಕೊಡಬಹುದು ಎಂದು ಹೇಳಿದರು. ಇದನ್ನೂ ಓದಿ: ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ

    ಬಿಜೆಪಿ ಶಾಸಕ ಗರುಡಾಚಾರ್ ಇಲ್ಲಿ ಬರುತ್ತಾರೆ. ಪ್ರಾರ್ಥನೆ ಮಾಡುತ್ತಾರೆ. ಅವರು ಮುಸ್ಲಿಮ್‌ ಆಗ್ತಾರಾ? ನನ್ನನ್ನು ದೇವಸ್ಥಾನಕ್ಕೆ ಕರೆಯುತ್ತಾರೆ. ನಾನು ಹಿಂದು ಆಗಿಬಿಡುತ್ತೀನಾ? ಪ್ರಧಾನಿಯವರು ದರ್ಗಾಗೆ ಚಾದರ ಕಳುಹಿಸುತ್ತಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಹೋದರೆ ವಿರೋಧ ಯಾಕೆ ಎಂದು ಪ್ರಶ್ನಿಸಿದರು.

  • ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾದದ್ದು: ಬಾನು ಮುಷ್ತಾಕ್‌ರಿಂದ ಸ್ಪಷ್ಟೀಕರಣ ಕೇಳಿದ ಯದುವೀರ್‌

    ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾದದ್ದು: ಬಾನು ಮುಷ್ತಾಕ್‌ರಿಂದ ಸ್ಪಷ್ಟೀಕರಣ ಕೇಳಿದ ಯದುವೀರ್‌

    – ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ ಎಂದ ಬಿಜೆಪಿ ಸಂಸದ

    ಮೈಸೂರು: ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಆಯ್ಕೆಯಾಗಿರುವ ಬಾನು ಮುಷ್ತಾಕ್‌ (Banu Mushtaq) ಅವರು ಕನ್ನಡಾಂಬೆ ಕುರಿತ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು ಎಂದು ಯದುವೀರ್‌ ಒತ್ತಾಯಿಸಿದ್ದಾರೆ.

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಯ್ಕೆಯನ್ನು ಮೊದಲು ಯದುವೀರ್ ಸ್ವಾಗತಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಪಕ್ಷದ ನಿರ್ಧಾರಕ್ಕೆ ಮಣೆ ಹಾಕಿದ್ದಾರೆ. ಬಾನು ಮುಷ್ತಾಕ್ ಕನ್ನಾಡಂಬೆ ಕುರಿತ ತಮ್ಮ ಹೇಳಿಕೆಗೆ ಮೊದಲು ಸ್ಪಷ್ಟನೆಯನ್ನ ಕೊಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಸ್ಪಷ್ಟೀಕರಣ ಕೊಡದಿದ್ದರೆ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ನನ್ನ ವಿರೋಧ ಇದೆ. ಸರ್ಕಾರ ಅವರನ್ನು ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದೆ. ಅವರ ಹಳೇ ಭಾಷಣ ನಂತರ ನೋಡಿದ್ದೇನೆ. ಆ ಭಾಷಣಕ್ಕೆ ಸ್ಪಷ್ಟೀಕರಣ ಬೇಕು. ಸ್ಪಷ್ಟೀಕರಣ ಕೊಡಲಿ ಅಥವಾ ಹೇಳಿಕೆಯನ್ನು ವಾಪಸ್ ಪಡೆಯಲಿ. ಎರಡು ಮಾಡದಿದ್ದರೆ ನನ್ನ ವಿರೋಧ ಇದೆ ಎಂದು ಯದುವೀರ್‌ ಸ್ಪಷ್ಟಪಡಿಸಿದ್ದಾರೆ.

    ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ. ಪಕ್ಷಕ್ಕೆ ವಿರುದ್ಧ ನಿಲುವು ನನ್ನದಲ್ಲ. ಭುವನೇಶ್ವರಿ ಕುರಿತ ಬಾನು ಮುಷ್ತಾಕ್ ಹೇಳಿಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಅದನ್ನು ಮುಷ್ತಾಕ್ ಅರ್ಥ ಮಾಡಿಕೊಳ್ಳಬೇಕು. ಅವರ ಧರ್ಮದ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಧರ್ಮದಲ್ಲಂತು ಮೂರ್ತಿ ಪೂಜೆ ಶ್ರೇಷ್ಠವಾದದ್ದು. ಅವರು ಚಾಮುಂಡಿ ಮಾತೆಯನ್ನು ಗೌರವಿಸಿ ಇಲ್ಲಿಗೆ ಬರಬೇಕು. ಭಕ್ತಿಯಿಂದ ದೇವರನ್ನ ಪೂಜಿಸಬೇಕು. ಇದಕ್ಕೂ ಮೊದಲು ತಮ್ಮ ಹಳೆಯ ಹೇಳಿಕೆಗೆ ಸ್ಪಷ್ಟೀಕರಣ ಕೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ

  • ಬಾನು ಮುಷ್ತಾಕ್‌ಗೆ ದಸರಾ ಆಹ್ವಾನ – ಉದ್ದೇಶವೋ, ದುರುದ್ದೇಶವೋ ಬಹಿರಂಗಪಡಿಸಲಿ – ವಿಜಯೇಂದ್ರ

    ಬಾನು ಮುಷ್ತಾಕ್‌ಗೆ ದಸರಾ ಆಹ್ವಾನ – ಉದ್ದೇಶವೋ, ದುರುದ್ದೇಶವೋ ಬಹಿರಂಗಪಡಿಸಲಿ – ವಿಜಯೇಂದ್ರ

    – ನಮ್ಮ ಸಂಸ್ಕೃತಿ, ಪರಂಪರೆ, ಆಚಾರ ವಿಚಾರ ಒಪ್ಪಿ ಬರುವುದಾದ್ರೆ ಸ್ವಾಗತ ಎಂದ ಶಾಸಕ

    ಬೆಂಗಳೂರು: ಬಾನು ಮುಷ್ತಾಕ್ (Banu Mushtaq) ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬೇಕೆಂದು ಅನಿಸುತ್ತದೆ. ಬಾನು ಮುಷ್ತಾಕ್ ಅವರ ಜೊತೆಗೇ ದೀಪಾ ಭಸ್ತಿ ಅವರಿಗೂ ಪ್ರಶಸ್ತಿ ಲಭಿಸಿದೆ. ಅವರನ್ನು ಕರೆಯಬೇಕೆಂದು ಮುಖ್ಯಮಂತ್ರಿಗಳಿಗೆ ಯಾಕೆ ಅನಿಸಿಲ್ಲ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಪ್ರಶ್ನಿಸಿದರು.

    ಕಾಂಗ್ರೆಸ್ ಸರ್ಕಾರದ (Congress Government) ಅಜೆಂಡಾ ಏನು? ಎಂದು ಕೇಳಿದರು. ನಿಸಾರ್ ಅಹ್ಮದ್ ಅವರೂ ದಸರಾ ಉದ್ಘಾಟಿಸಿದ್ದರು. ಅದು ಬೇರೆ ಪ್ರಶ್ನೆ. ಬಾನು ಮುಷ್ತಾಕ್ ಅವರು ನಮ್ಮ ಸಂಸ್ಕೃತಿ, ಪರಂಪರೆ, ಎಲ್ಲ ಆಚಾರ ವಿಚಾರಗಳನ್ನು ಒಪ್ಪಿ ಬರುವುದಾದ್ರೆ ಅದನ್ನು ನಾವು ಒಪ್ಪಿಕೊಳ್ಳುವುದಾಗಿ ಹೇಳಿದ್ದೇನೆ. ದಸರಾ ಎಂಬುದು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಇದು ನಮ್ಮ ಹಿಂದೂ ಸಂಸ್ಕೃತಿ (Hindu Culture), ಹಿಂದೂ ಪರಂಪರೆಯ ಪದ್ಧತಿ. ರಾಜ ಮಹಾರಾಜರ ಕಾಲದಿಂದ ಈ ಪದ್ಧತಿ ಬಂದಿದೆ ಎಂದು ವಿಜಯೇಂದ್ರ ವಿವರಿಸಿದರು. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

    ಹಿಂದೂಗಳ ಭಾವನೆಗೆ ಧಕ್ಕೆ ಬರಬಾರದೆಂಬುದು ನಮ್ಮೆಲ್ಲರ ಉದ್ದೇಶ ಎಂದು ನುಡಿದರು. ಹಿಂದೂ ಸಂಸ್ಕೃತಿ – ಪರಂಪರೆಗೆ ಧಕ್ಕೆ ತರುವ ನಿರ್ಧಾರವನ್ನ ಸರಕಾರ ತೆಗೆದುಕೊಳ್ಳಬಾರದು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವರು ಮಂಗಳೂರಿಗೆ ಹೋಗಿದ್ದರು. ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲು ಹೊರಟ ಸಂದರ್ಭದಲ್ಲಿ ಯಾವುದೋ ಒಂದು ಕೋಮಿಗೆ ಸೇರಿದ ನಾಯಕರು ಹೋಗಬಾರದೆಂದು ಕಟ್ಟಿ ಹಾಕುವ ಕೆಲಸ ಮಾಡಿದ್ದರು. ಗೃಹ ಸಚಿವರು ಹಾಗೇ ವಾಪಸಾದರು. ಅಂದರೆ, ರಾಜ್ಯ ಸರ್ಕಾರದ ನಡವಳಿಕೆಯನ್ನು ಪ್ರತಿ ಸಂದರ್ಭದಲ್ಲೂ ಗಮನಿಸಿದರೆ, ಪ್ರತಿ ಬಾರಿಯೂ ಹಿಂದೂಗಳಿಗೆ ಅಪಮಾನ ಮಾಡುವ ನಿರ್ಧಾರವನ್ನೇ ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ವಿಜಯೇಂದ್ರ ಆಕ್ಷೇಪಿಸಿದರು. ಇದನ್ನೂ ಓದಿ: ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ

    ಅಪಪ್ರಚಾರ ನಡೆಸಿದವರನ್ನು ಬಂಧಿಸಿಲ್ಲವೇಕೆ?
    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹಿಂದೂಗಳ ವಿರುದ್ಧ ಕೇಸ್ ದಾಖಲಿಸಿ, 24 ಗಂಟೆಗಳಲ್ಲಿ ಬಂಧಿಸುತ್ತಾರೆ. ಆದರೆ, ಧರ್ಮಸ್ಥಳದ ವಿಷಯದಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆದರೂ ಅವರ ವಿರುದ್ಧ ಕೇಸ್ ಹಾಕಿ ಬಂಧಿಸಬೇಕೆಂದು ಯಾಕೆ ಕಾಂಗ್ರೆಸ್ ಸರ್ಕಾರಕ್ಕೆ ಅನಿಸಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

    ಎಸ್‍ಐಟಿ ತನಿಖೆ ಮಾಡಿಕೊಳ್ಳಲಿ, ದುಷ್ಟ ಶಕ್ತಿಗಳ ಹಿಂದಿರುವ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದ ದುಷ್ಟ ಶಕ್ತಿಗಳ ಬಗ್ಗೆ ತಿಳಿಯಲು ಮತ್ತು ಅವರನ್ನು ಹೊರಕ್ಕೆ ತರಲು ಎನ್‍ಐಎ, ಸಿಬಿಐ ತನಿಖೆ ಆಗಬೇಕೆಂಬ ಆಗ್ರಹ ಭಕ್ತರದ್ದೂ ಆಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಕಾಳಜಿ, ಪ್ರಾಮಾಣಿಕತೆ ಇದ್ದಲ್ಲಿ, ಹಿಂದೂಗಳ ಧಾರ್ಮಿಕ ಶ್ರದ್ಧೆ ಬಗ್ಗೆ ಕಿಂಚಿತ್ತಾದರೂ ನಂಬಿಕೆ ಇದ್ದರೆ, ಎಸ್‍ಐಟಿ ತನಿಖೆ ಆಗಲಿ, ಆದರೆ, ಅದಕ್ಕೊಂದು ಕಾಲಮಿತಿ ಬೇಕಲ್ಲವೇ ಎಂದು ಪ್ರಶ್ನಿಸಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತ ಈ ಹುಚ್ಚಾಟ ಇನ್ನೆಷ್ಟು ದಿನ ಮುಂದುವರೆಸುತ್ತೀರಿ? ಅಪಪ್ರಚಾರ ಮಾಡುವವರ ವಿರುದ್ಧ ಒಂದೂ ಎಫ್‍ಐಆರ್ ಮಾಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ನಮಗೆ ವಿಶ್ವಾಸ ಇಲ್ಲ, ಷಡ್ಯಂತ್ರ ಮಾಡಿದ್ದು ಯಾರು? ಅಪಪ್ರಚಾರ ಮಾಡಿದ್ದು ಯಾರು? ದುಷ್ಟ ಶಕ್ತಿಗಳಿಗೆ ಹಣ ಕೊಟ್ಟವರು ಯಾರು? ಇವೆಲ್ಲವೂ ಸಮಗ್ರ ತನಿಖೆ ಆಗಲಿ ಎಂದು ವಿಜಯೇಂದ್ರ ಒತ್ತಾಯಿಸಿದರು. ಇದನ್ನೂ ಓದಿ: ಸರ್ಕಾರಿ ಸೌಲಭ್ಯಗಳ ದುರ್ಬಳಕೆ ಆರೋಪ – ಕರ್ನಾಟಕ ಭವನದ ಹೆಚ್ಚುವರಿ ಆಯುಕ್ತೆ ವಿರುದ್ಧ ಸಿಎಸ್‌ಗೆ ದೂರು

  • ದೇವರಿಗೆ ಧರ್ಮವಿಲ್ಲ, ಪ್ರಾರ್ಥನೆ ಯಾರೊಬ್ಬರ ಸ್ವತ್ತಲ್ಲ – ಡಿಕೆಶಿ

    ಬೆಂಗಳೂರು: ನೀರಿಗೆ, ಬೆಳಕಿಗೆ, ಗಾಳಿಗೆ ಹೇಗೆ ಯಾವುದೇ ಜಾತಿ ಧರ್ಮ ಇಲ್ಲವೋ, ಅದೇ ರೀತಿ ದೇವರಿಗೂ ಸಹ ಧರ್ಮವಿಲ್ಲ. ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ. ನಾನು ನಂಬಿರುವ ಗುರುಗಳು ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.

    ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಚಾಮುಂಡಿಬೆಟ್ಟ (Chamundi Hill) ಬರೀ ಹಿಂದೂಗಳ ಆಸ್ತಿಯಲ್ಲ ಎನ್ನುವ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಹಾಗೂ ವಿಪಕ್ಷಗಳ ಟೀಕೆಗೆ ಉತ್ತರಿಸಿ, ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವಂತಹ ದೇವರು. ರಾಜವಂಶಸ್ಥರು ಹಾಗೂ ನಂತರ ಬಂದ ಸರ್ಕಾರಗಳು ಚಾಮುಂಡಿ ತಾಯಿಯನ್ನು ನಾಡದೇವಿ ಎಂದು ಕರೆದಿವೆ. ಈ ದೇಗುಲ ಸಾರ್ವಜನಿಕರ ಆಸ್ತಿ, ನಾಡಧ್ವಜ, ನಾಡದೇವಿ ಹಾಗೂ ದೇವರಿಗೆ ಜಾತಿ, ಧರ್ಮ, ಬಣ್ಣ, ರಾಜಕೀಯ ಲೇಪನ ಮಾಡುವ ಅಗತ್ಯವಿಲ್ಲ ಎಂದರು.ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ಆ.30ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

    ಹಿಂದೂಗಳು ಮಾತ್ರ ಬರಬೇಕು ಎನ್ನುವ ನಿಯಮವಿದೆಯೇ?:
    ನಾಡದೇವಿಯ ದೇವಸ್ಥಾನಕ್ಕೆ ಕೇವಲ ಹಿಂದೂಗಳು ಮಾತ್ರ ಬರಬೇಕು ಎನ್ನುವ ನಿಯಮವಿದೆಯೇ? ಒಂದಷ್ಟು ಸಮುದಾಯದವರು ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮಕ್ಕೆ ಸೇರಿಕೊಂಡಿದ್ದಾರೆ. ಇವರನ್ನು ದೇವಾಲಯಕ್ಕೆ ಬರಬೇಡಿ ಎಂದು ಹೇಳಲು ಆಗುತ್ತದೆಯೇ? ತಂದೆ-ತಾಯಿ ಬೇರೆ, ಬೇರೆ ಧರ್ಮಕ್ಕೆ ಸೇರಿರುತ್ತಾರೆ. ಇಂತಹ ಮಕ್ಕಳ ಆಚರಣೆ ಬೇರೆ, ಬೇರೆ ಇರುತ್ತದೆ. ಬ್ಯಾರಿಗಳು ನಮಗಿಂತ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಅವರನ್ನು ಮುಸ್ಲಿಮರು ಎಂದು ತಳ್ಳಿಬಿಡಲು ಆಗುತ್ತದೆಯೇ? ಮುಸ್ಲಿಮರು ಶ್ಲೋಕವೊಂದನ್ನು ಪಠಣ ಮಾಡುವ ವಿಡಿಯೋ ನೋಡಿದೆ. ಅವರು ಸಹ ನಮ್ಮ ಧರ್ಮದ ಬಗ್ಗೆ ತಿಳಿದುಕೊಂಡಿದ್ದಾರೆ ಎಂದರು.

    ಮಹಾರಾಜರ ಆಳ್ವಿಕೆ ಕಾಲದಲ್ಲಿಯೂ ವಿದೇಶಗಳಿಂದ ಅತಿಥಿಗಳನ್ನು ದಸರಾಕ್ಕೆ ಆಹ್ವಾನ ಮಾಡುತ್ತಿದ್ದರು. ವಿದೇಶಿ ಧರ್ಮಿಯರೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಚರ್ಚ್, ಮಸೀದಿ, ಜೈನ ಬಸದಿ, ಗುರುದ್ವಾರ ಹೀಗೆ ಎಲ್ಲಾ ಕಡೆ ನಮ್ಮನ್ನು ಒಳಗೆ ಬಿಡುವುದಿಲ್ಲವೇ. ಈ ಹಿಂದೆ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದರು. ಆದರೆ ಈಗ ಬಾನು ಮುಷ್ತಾಕ್ ಅವರು ಬೆಟ್ಟ ಹತ್ತಬಾರದು, ಉದ್ಘಾಟನೆ ಮಾಡಬಾರದು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಸಂಸದ ಯದುವೀರ್ (MP Yaduveer) ಅವರು ಈಗ ಬಿಜೆಪಿ ಜೊತೆ ಸೇರಿಕೊಂಡು ಬಿಟ್ಟಿದ್ದಾರಲ್ಲ, ಆದ ಕಾರಣಕ್ಕೆ ಇತಿಹಾಸ ಮರೆತು ಬಿಟ್ಟಿದ್ದಾರೆ. ನಾನೊಬ್ಬ ಹಿಂದೂ. ಆ ಚಾಮುಂಡಿ ತಾಯಿಗೆ ಎರಡು ಸಾವಿರ ಕಾಣಿಕೆ ನೀಡಿ ನಾನು ಹಾಗೂ ಸಿದ್ದರಾಮಯ್ಯ ಅವರು ಈ ಎರಡು ಸಾವಿರವನ್ನು ಎಲ್ಲಾ ತಾಯಂದಿರಿಗೂ ಕೊಡುವ ಶಕ್ತಿ ನೀಡುವಂತೆ ಪ್ರಾರ್ಥನೆ ಸಲ್ಲಿಸಿದೆವು. ಆ ತಾಯಿ ನಮಗೆ ಆಶೀರ್ವಾದ ಮಾಡಿದ್ದಾಳೆ. ಈಗ ಕೇವಲ ಹಿಂದೂಗಳಿಗೆ ಮಾತ್ರ ಹಣ ನೀಡುತ್ತಾ ಇದ್ದೇವಾ? ಪಾರ್ಸಿ, ಸಿಖ್, ಮುಸ್ಲಿಂ, ಜೈನ, ಬೌದ್ಧರಿಗೆ ಹಣ ನೀಡುತ್ತಿಲ್ಲವೇ? ಎಂದರು.

    ಹಿಂದುತ್ವದ ಮೇಲಿನ ದಾಳಿ ಹಾಗೂ ಬಾನು ಮುಷ್ತಾಕ್ (Banu Mushtaq) ಆಯ್ಕೆಯ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ನಾವು ಆಚರಣೆ ಮಾಡುವಷ್ಟು ಹಿಂದೂ ಪದ್ಧತಿಯನ್ನು ಅವರೆಲ್ಲಿ (ಬಿಜೆಪಿ) ಆಚರಣೆ ಮಾಡುತ್ತಾರೆ. ನಾನು ಯಾರ ವಿರುದ್ಧವೂ ಇಲ್ಲ, ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು. ಯಾವ ಹಿಂದೂ ದೇವಸ್ಥಾನದಲ್ಲಿ ಬೇರೆ ಧರ್ಮದವರು ಬರಬಾರದು ಎಂದು ಹೇಳಿರುವ ಉದಾಹರಣೆ ಇದ್ದರೆ ತೋರಿಸಿ ಆಗ್ರಹಿಸಿದರು.

    ಇದು ಬಿಜೆಪಿ ರಾಜಕೀಯ ಅಜೆಂಡಾ:
    ಇದು ಬಿಜೆಪಿಯ (BJP) ರಾಜಕೀಯ ಅಜೆಂಡಾ. ಇಂತಹ ಬಿಜೆಪಿ ಅಲ್ಪಸಂಖ್ಯಾತ ಇಲಾಖೆಯನ್ನು ಮುಚ್ಚಿಬಿಡಲಿ. ನಮ್ಮ ದೇಶದ ನಿವಾಸಿಗಳೆಲ್ಲರನ್ನು ನಾವು ಒಪ್ಪಿಕೊಳ್ಳಲೇ ಬೇಕು. ಅವರನ್ನು ದೇಶದಿಂದ ಓಡಿಸಿ ಬಿಡಲು ಆಗುತ್ತದೆಯೇ? ಕಿಡಿಕಾರಿದರು.

    ಜೆಡಿಎಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರ ಹರಿಬಿಟ್ಟಿರುವ ಬಗ್ಗೆ ಕೇಳಿದಾಗ, ಅವರು ಯಾವತ್ತಿದ್ದರೂ ಫೇಕ್. ಜೆಡಿಎಸ್ ಎಂದಿಗೂ ಫೇಕ್ ಕೆಲಸಗಳನ್ನೇ ಮಾಡುವುದು. ನಾನು ಹೆದರಿಕೊಂಡು ಬಿಟ್ಟೆ, ರಣಹೇಡಿ ಅಂತಲಾದರೂ ಟೀಕೆ ಮಾಡಿಕೊಳ್ಳಲಿ, ಪರವಾಗಿಲ್ಲ, ಅವರ ದೊಡ್ಡ, ದೊಡ್ಡ ನಾಯಕರುಗಳಿಗೆ ಹೆದರಿಕೊಳ್ಳದವನು ನಾನು. ಈಗ ಈ ಟ್ವೀಟ್‌ಗಳಿಗೆ ಹೆದರಿಕೊಳ್ಳುತ್ತೇನೆಯೇ? ವಿಜಯೇಂದ್ರ ಹಾಗೂ ಅಶೋಕ್ ಅವರು ತಮ್ಮ, ತಮ್ಮ ಸಮಾಧಾನಕ್ಕೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಧರ್ಮಸ್ಥಳ ಚಲೋ ಬಗ್ಗೆ ಕೇಳಿದಾಗ, ಅದು ರಾಜಕೀಯದ ಚಲೋ. ಧರ್ಮದ ಚಲೋ ಅಲ್ಲ ಎಂದು ಹೇಳಿದರು.ಇದನ್ನೂ ಓದಿ: ಪಬ್ಲಿಕ್ ಟಿವಿಯಲ್ಲಿ 13ನೇ ವರ್ಷದ ಗಣೇಶೋತ್ಸವ ಸಂಭ್ರಮ

  • ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    – ಚಾಮುಂಡಿಯನ್ನು ಒಪ್ಪುವವರು ಮಾತ್ರ ದಸರಾ ಉದ್ಘಾಟಿಸಬೇಕು ಅಂತ ಕಾನೂನು ತರ್ತೀವಿ: ವಿಪಕ್ಷ ನಾಯಕ

    ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿ ಕಾರಿಕಾರಿದ್ದಾರೆ.

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು. ಮುಸ್ಲಿಮರ ಸ್ವತ್ತಲ್ಲ. ನೂರು ಡಿಕೆಶಿ ಬಂದರೂ ಏನು ಮಾಡೋಕೆ ಆಗಲ್ಲ. ಇದು ಹಿಂದೂಗಳ ಸ್ವತ್ತೆ. ಧರ್ಮಸ್ಥಳ, ತಿರುಪತಿ, ಎಲ್ಲವೂ ಹಿಂದೂಗಳ ಸ್ವತ್ತೆ. ಇದನ್ನ ಮುಟ್ಟಿದ್ರೆ ದಂಗೆ ಆಗುತ್ತೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿ.ಕೆ.ಶಿವಕುಮಾರ್

    ಎಲ್ಲಾ ಧರ್ಮವನ್ನ ಒಪ್ಪುತ್ತೇನೆ ಅನ್ನೋದು ಕಾಂಗ್ರೆಸ್‌ಗೆ ಅರ್ಥ ಆಗಲ್ಲ. ಇದನ್ನ ಒಪ್ಪಲ್ಲ. ನಮಸ್ತೆ ಇಟಲಿ ಅಂತ ಹೇಳಿದ್ರೆ ಡಿಕೆಶಿಗೆ ಅವಾರ್ಡ್ ಕೊಟ್ಟಿರುವರು. ಈಗ ಅವರನ್ನ ಎಲ್ಲರೂ ವಿರೋಧಿಸುತ್ತಿದ್ದಾರೆ. ಅವರ ಮೇಲೆ ಮುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಮುಂದೆ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಕ್ಷಮೆ ಕೇಳೋದು ಯಾಕೆ? ಭಾರತಮಾತೆಗೆ ಅಥವಾ ಕನ್ನಡ ಮಾತೆ, ಮುಸ್ಲಿಮರಿಗೆ ಬೈಯ್ದಿದ್ದಾರಾ? ಆಶ್ಚರ್ಯ ಆಗ್ತಿದೆ. ತಪ್ಪು ಬಯ್ದಿದ್ದರೆ ಕ್ಷಮೆ ಕೇಳೋದು ಸರಿ. ಭಾರತ ಮಾತೆಗೆ ನಮಸ್ಕಾರ ಹೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಬಾನು ಮುಸ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ ಕುರಿತು ಮಾತನಾಡಿ, ಮುಸ್ಲಿಮರೇ ಮೂರ್ತಿ ಪೂಜೆ ಮಾಡಲ್ಲ ಅಂತ ಹೇಳಿದ್ದಾರೆ. ಯಾರೇ ಹೇಳಿದ್ರು ಮೂರ್ತಿ ಪೂಜೆ ಅದು ಅಪರಾಧ ಅಂತಾರೆ. ಚಾಮುಂಡೇಶ್ವರಿ ಪೂಜೆ ಮಾಡಿ ದಸರಾ ಹೊರಡುವುದು. ಹೂ ಹಾಕಿ ಪೂಜೆ ಮಾಡಿ ಹೊರಡಬೇಕು. ಅವರ ಧರ್ಮದಲ್ಲಿ ಇದಕ್ಕೆ ಅವಕಾಶ ಇಲ್ಲ. ಕಾಂಗ್ರೆಸ್‌ಗೆ ಮುಸ್ಲಿಂ ವೋಟ್ ಬಿಟ್ಟರೆ ತಲೆಯಲ್ಲಿ ಬೇರೆನೂ ಇಲ್ಲ. ಹಿಂದೂಗಳಲ್ಲಿ ಯೋಗ್ಯತೆ ಇಲ್ವಾ? ದಸರಾ ಉದ್ಘಾಟನೆಗೆ ಹಿಂದೂಗಳು ಇರಲಿಲ್ವಾ? ನಮ್ಮ ಸರ್ಕಾರ ಬಂದಾಗ ಇದಕ್ಕೆ ಒಂದು ಕಾನೂನು ತರ್ತೀವಿ. ಚಾಮುಂಡಿಯನ್ನ ಯಾರು ಒಪ್ಪುವರೋ ಅವರು ಮಾತ್ರ ಉದ್ಘಾಟನೆ ಮಾಡಬೇಕು ಅನ್ನೋ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ನೇಮಕ

    ಮೈಸೂರಿನಲ್ಲಿ ಪರಮೇಶ್ವರೋತ್ಸವ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಹಿರಿಯರು. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪರಮೇಶ್ವರ್ ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಕಾಂಗ್ರೆಸ್ ಅವರನ್ನ ಕರಿಬೇವಿನ ಥರ ಬಳಕೆ ಮಾಡಿಕೊಳ್ಳುತ್ತಿದೆ. ಯಾವಾಗ ಬೇಕೋ ಅವಾಗ ಬಳಕೆ ಮಾಡಿಕೊಳ್ಳುತ್ತಾರೆ. ಊಟ ಮಾಡುವಾಗ ಎತ್ತಿ ಪಕ್ಕಕ್ಕೆ ಇಡುತ್ತಾರೆ. ಅವರು ಒಳ್ಳೆಯವರು ಎಂದು ಹೇಳಿದ್ದಾರೆ.

  • ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

    ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

    ಮೈಸೂರು: ಭಾನು ಮುಷ್ತಾಕ್ (Banu Mushtaq) ಅವರು ದಸರಾ ಉತ್ಸವ ಉದ್ಘಾಟಿಸುವ ಮುನ್ನ ತಾಯಿ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು ಎಂದು ಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar) ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಕೊಡಗಿನಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ್ದ ಯದುವೀರ್‌, ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದರು. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಯದುವೀರ್‌ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಭಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಬರಹಗಾರ್ತಿ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿಯಾಗಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ ನಿಜ ಆದರೆ ಈ ಹಿಂದೆ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಅವರು ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ.

    ದಸರಾ (Mysuru Dasara) ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಶಾಸ್ತ್ರ ಮತ್ತು ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಂಸ್ಥಾನದ ಕಾಲದಿಂದಲೂ ವೈಭವದಿಂದ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಉತ್ಸವವಾಗಿದೆ. ಇದನ್ನೂ ಓದಿ: ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

    ಈ ಪವಿತ್ರ ಪರಂಪರೆಯನ್ನ ಗಮನಿಸಿದರೆ, ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ

  • ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸಂತಸ ತಂದಿದೆ, ಇದರಲ್ಲಿ ಬೇಧ ಭಾವ ಬೇಡ: ರೇವಣ್ಣ

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸಂತಸ ತಂದಿದೆ, ಇದರಲ್ಲಿ ಬೇಧ ಭಾವ ಬೇಡ: ರೇವಣ್ಣ

    ಹಾಸನ: ಈ ಬಾರಿಯ ನಾಡಹಬ್ಬ ದಸರಾ (Dasara) ಉದ್ಘಾಟನೆಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D. Revanna), ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದು, ವಿರೋಧ ಮಾಡುವುದು ಸರಿಯಲ್ಲ ಎಂದಿದ್ದಾರೆ.

    ಹಾಸನದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಮಹಿಳೆ, ಹೋರಾಟಗಾರ್ತಿ ದಸರಾ ಉದ್ಘಾಟನೆ ಮಾಡಲಿ ನನಗೆ ಸಂತೋಷ ಇದೆ. ಇದರಲ್ಲಿ ಹಿಂದೂ-ಮುಸ್ಲಿಂ ಬೇಧ ಭಾವ ಮಾಡಬಾರದು. ಹಿಂದೂ-ಮುಸ್ಲಿಂ ಎಂದು ಬೇರ್ಪಡಿಸುವುದು ಸೂಕ್ತವಲ್ಲ. ಯಾರಾದರೂ ವಿರೋಧ ಮಾಡಲಿ, ಹಿಂದೂ, ಮುಸ್ಲಿಂ ಯಾವುದೂ ಇಲ್ಲ, ನಾವೆಲ್ಲ ಒಂದೇ ಭಾರತೀಯರು, ನನಗೆ ಆ ತರಹದ ಭಾವನೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

    ಹಾಸನ ಜಿಲ್ಲೆಯ ಮಹಿಳೆಗೆ ಒಂದು ಅವಕಾಶ ಕೊಟ್ಟಿದ್ದಾರೆ, ಅವರೂ ಹೋರಾಟ ಮಾಡಿಕೊಂಡು ಬಂದಿರುವವರು, ಬಾನು ಮುಷ್ತಾಕ್ ಅವರು ದೇವೇಗೌಡರ ಕಾಲದವರು. ಇದರಲ್ಲಿ ರಾಜಕೀಯ ಎಲ್ಲಾ ಬಿಟ್ಟಾಕಿ, ಇದಕ್ಕೆಲ್ಲಾ ವಿರೋಧ ಮಾಡಬಾರದು. ಅಬ್ದುಲ್‍ಕಲಾಂ ರಾಷ್ಟ್ರಪತಿ ಆಗಿರಲಿಲ್ಲವೇ, ದೇವೇಗೌಡರು ಅವರನ್ನು ಹೇಗೆ ನಡೆಸಿಕೊಂಡರು ಎಂದು ಪ್ರಶ್ನಿಸಿದ್ದಾರೆ.

    ಬಾನು ಮುಷ್ತಾಕ್ ಹೆಸರು ಘೋಷಣೆ ಮಾಡುತ್ತಿದ್ದಂತೆ ಶಾಸಕರುಗಳಾದ ಬಸವನಗೌಡ ಪಾಟೀಲ್ ಯತ್ನಾಳ್, ಮುನಿರತ್ನ, ಮಾಜಿಸಂಸದ ಪ್ರತಾಪ್‍ಸಿಂಹ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ಶಾಸಕ ಯತ್ನಾಳ್ ಆಕ್ಷೇಪ

  • ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಮಡಿಕೇರಿ: ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.

    ಕೊಡಗಿನ ವಿರಾಜಪೇಟೆಯಲ್ಲಿ ಮಾತಾನಾಡಿದ ಅವರು, ಬಾನು ಮುಷ್ತಾಕ್ ಅವರು ಖ್ಯಾತ ಬರಹಗಾರ್ತಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೊತೆಗೆ ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಮಾನವಾದ ಹಕ್ಕು ಕೋಡಬೇಕು. ಮಸೀದಿಗಳಿಗೆ ಅವಕಾಶ ಕೋಡಬೇಕು ಎಂದು ಬಾನು ಮುಷ್ತಾಕ್ ಅವರು ಈ ಹಿಂದೆ ಸಾಮಾಜಿಕ ಬಹಿಷ್ಕಾರವನ್ನು ಕೂಡ ಎದುರಿಸಿದ್ದರು ಎಂದಿದ್ದಾರೆ. ಇದನ್ನೂ ಓದಿ: ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

    ಕನ್ನಡ ಭಾಷೆ, ಕನ್ನಡ ಸಾಹಿತ್ಯಕ್ಕಾಗಿ ಅವರು ಕೊಟ್ಟಿರುವ ಕೊಡುಗೆಗಳು ಅಪಾರವಾಗಿದೆ. ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಗವಿಕಲರ ಬಗ್ಗೆ ತಮಾಷೆ – ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಿಗೆ ಸುಪ್ರೀಂ ತರಾಟೆ

    ಇನ್ನೂ ಈ ಬಗ್ಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಪೂಜೆ ಮಾಡುವುದು ಇಲ್ಲವೇ ಇಲ್ಲ. ಇದು ಜಾತ್ಯತೀತ ವ್ಯವಸ್ಥೆಯಾಗಿದೆ. ಧಾರ್ಮಿಕ ಪೂಜೆಗಳನ್ನು ನಾವು ವೈಯಕ್ತಿಕವಾಗಿ ಮನೆಯಲ್ಲಿ ಮಾಡಿಕೊಳ್ಳುತ್ತೇವೆ. ಸರ್ಕಾರಕ್ಕೆ ಇದೊಂದು ಉತ್ಸವ. ಅವರ ಆಯ್ಕೆ ಬಗ್ಗೆ ನನ್ನ ವಿರೋಧವಿಲ್ಲ ಎಂದಿದ್ದಾರೆ.