Tag: ಬಾನು ಮುಷ್ತಾಕ್‌

  • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಅನ್ನೋ ಪ್ರತಾಪ್ ಸಿಂಹ ಮೂರ್ಖ: ಸಿದ್ದರಾಮಯ್ಯ

    ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಅನ್ನೋ ಪ್ರತಾಪ್ ಸಿಂಹ ಮೂರ್ಖ: ಸಿದ್ದರಾಮಯ್ಯ

    ಬೆಂಗಳೂರು: ಬಾನು ಮುಷ್ತಾಕ್ (Banu Mushtaq) ದಸರಾ (Mysuru Dasara) ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಬಿಜೆಪಿ (BJP) ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ಹೊರಹಾಕಿದ್ದಾರೆ.

    ವಿಧಾನಸೌಧದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ಬಾನು ಮುಷ್ತಾಕ್ ಅವರನ್ನ ಚಾಮುಂಡಿ ಬೆಟ್ಟ ಹತ್ತಬಾರದು ಅಂತಾರೆ. ಪೂಜೆ ಮಾಡಬಾರದು ಅಂತಾರೆ. ನನಗೆ ಅರ್ಥ ಆಗಲ್ಲ. ನಾವು ಜಾತ್ಯಾತೀತ ವ್ಯವಸ್ಥೆಯಲ್ಲಿ ಇದ್ದೇವೆ. ಸಂವಿಧಾನ ಸಮಾನತೆ ಅಂತ ಹೇಳುತ್ತದೆ. ಅಂಬೇಡ್ಕರ್ ಇದನ್ನೇ ಹೇಳುತ್ತಾರೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನ ಸಮಾಜ ಖಂಡಿಸಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ಸಿದ್ದರಾಮಯ್ಯ

    ಮಾಜಿ ಲೋಕಸಭೆ ಸದಸ್ಯನಿಗೆ ಸಂವಿಧಾನ ಗೊತ್ತಿಲ್ಲ ಅಂದರೆ ಏನು ಹೇಳಬೇಕು ಅವನನ್ನ? ಮೂರ್ಖ ಅಂತ ಕರೆಯಬೇಕು. ಇಂತಹ ಮೂರ್ಖರು ನಮ್ನ ದೇಶದಲ್ಲಿ ಇದ್ದಾರೆ. ಇಂತಹ ಮೂರ್ಖರ ಬಗ್ಗೆ ಮಾತಾಡೋದು ಬೇಡ. ರಾಜಕೀಯ ಬೇರೆ ವಿಷಯದಲ್ಲಿ ಮಾಡಲಿ. ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು. ಜನರನ್ನ ತಪ್ಪು ದಾರಿಗೆ ಎಳೆಯೋದು ಖಂಡನೀಯ. ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿದೆ. ನೋವಿನ ಸಂಗತಿ, ಇದು ಆಗಬಾರದು ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದಸರಾ ನಿಮಿತ್ತ ಸಿಡಿಮದ್ದು ತಾಲೀಮು – ವಿಚಲಿತಗೊಂಡ ಗಜಪಡೆಯ ಶ್ರೀಕಂಠ, ಹೇಮಾವತಿ

  • ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರ – ಇಂದು ಹೈಕೋರ್ಟ್‌ನಲ್ಲಿ ಮೂರು ಅರ್ಜಿಗಳ ವಿಚಾರಣೆ

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರ – ಇಂದು ಹೈಕೋರ್ಟ್‌ನಲ್ಲಿ ಮೂರು ಅರ್ಜಿಗಳ ವಿಚಾರಣೆ

    ಬೆಂಗಳೂರು/ಮೈಸೂರು: ನಾಡಹಬ್ಬ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್‌ (Banu Mushtaq) ಆಯ್ಕೆ ವಿರೋಧಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂರು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅರ್ಜಿಗಳ ವಿಚಾರಣೆ ನಡೆಯಲಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಗಿರೀಶ್ ಕುಮಾರ್ ಮತ್ತು ಗೌರವ್‌ ಎಂಬವರಿಂದ ಪಿಐಎಲ್ ಸಲ್ಲಿಕೆಯಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾ. ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.

    ದಸರಾ (Mysuru Dasara) ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು, ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಭಾನು ಮುಷ್ತಾಕ್ ಅವರ ಆಯ್ಕೆ ಮಾಡಿದ್ದು ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ್ ರಿಗೆ ನೀಡಿದ ಆಹ್ವಾನ ಹಿಂಪಡೆಯಲು ನಿರ್ದೇಶನ ನೀಡಬೇಕು ಅನ್ನೋದು ಅರ್ಜಿದಾರರ ಮನವಿ ಆಗಿದೆ. ಇದನ್ನೂ ಓದಿ: ಪ್ರಮೋದಾ ದೇವಿ ಒಡೆಯರ್‌ಗೆ ದಸರಾಗೆ ಅಧಿಕೃತ ಆಹ್ವಾನ ನೀಡಿದ ಹೆಚ್‌.ಸಿ ಮಹದೇವಪ್ಪ

    ದಸರಾ ಹಿಂದೂ ಧಾರ್ಮಿಕ ಸಂಪ್ರದಾಯ ಅವಿಭಾಜ್ಯ ಭಾಗವಾಗಿದ್ದು, ಹಿಂದೂ ಆಗಮಿಕ ಪದ್ದತಿ ಪ್ರಕಾರ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನಡೆಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿದೆ.

    ಮೂರು ಪ್ರತ್ಯೇಕ ಪಿಐಎಲ್ ಗಳ ಮೂಲಕ ಮನವಿ ಸಲ್ಲಿಸಲಾಗಿದ್ದು, ಇಂದು ಹೈಕೋರ್ಟ್ ನಲ್ಲಿ ದಸರಾ ಉದ್ಘಾಟನೆ ವಿವಾದ ಇತ್ಯರ್ಥವಾಗಲಿದೆ. ಇದನ್ನೂ ಓದಿ: ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    Banu Mushtaq Dasara inauguration Matter Three PLI petitions to be heard in the High Court today

  • ಚಾಮುಂಡಿ ಚಲೋ ಪಾದಯಾತ್ರೆಗೆ ಪೊಲೀಸರ ತಡೆ – ಬಿಜೆಪಿ, ಹಿಂದೂ ಕಾರ್ಯಕರ್ತರು ವಶಕ್ಕೆ

    ಚಾಮುಂಡಿ ಚಲೋ ಪಾದಯಾತ್ರೆಗೆ ಪೊಲೀಸರ ತಡೆ – ಬಿಜೆಪಿ, ಹಿಂದೂ ಕಾರ್ಯಕರ್ತರು ವಶಕ್ಕೆ

    ಮೈಸೂರು: ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರನ್ನು ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಆಯ್ಕೆ ಮಾಡಿದ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಚಾಮುಂಡಿ ಚಲೋಗೆ (Chamundi Chalo) ಮುಂದಾಗಿದ್ದ ಬಿಜೆಪಿ (BJP) ಮತ್ತು ಹಿಂದೂ (Hindu) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹಿಂದೂ ಜಾಗರಣಾ ವೇದಿಕೆ (Hindu Jagarana Vedike) ಇಂದು ಚಾಮುಂಡಿ ಚಲೋ ಪಾದಯಾತ್ರೆಗೆ ಕರೆ ನೀಡಿತ್ತು. ಇನ್ನೊಂದು ಕಡೆ ಬಾನು ಮುಷ್ತಾಕ್ ಆಯ್ಕೆ ಸಮರ್ಥಿಸಿ ಪಾದಯಾತ್ರೆ ನಡೆಸಲು ದಲಿತ ಸಂಘಟನೆಗಳು ಕರೆ ನೀಡಿದ್ದವು. ಈ ಎರಡೂ ಪಾದಯಾತ್ರೆಗಳಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ.

    ಅನುಮತಿ ಇಲ್ಲದೇ ಇದ್ದರೂ ಹಿಂದೂ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಪಾದಯಾತ್ರೆ ಮಾಡುವುದಾಗಿ ಪಟ್ಟು ಹಿಡಿದಿತ್ತು. ಹೀಗಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

     

    ಬೆಳಗ್ಗೆ ಪಾದಯಾತ್ರೆ ನಡೆಸಲು ಆಗಮಿಸಿದ ಹಿಂದೂ ಮತ್ತು ಬಿಜೆಪಿ ಮುಖಂಡರನ್ನು ಪೊಲೀಸರು ತಡೆದರು. ಕುರುಬರಹಳ್ಳಿ ಸರ್ಕಲ್ ಬಳಿ ಹೈ ಡ್ರಾಮಾ ಪೊಲೀಸರ ಜೊತೆ ವಾಗ್ವಾದ ನಡೆಯಿತು. ಕೊನೆಗೆ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಸೇರಿದಂತೆ ಹಲವು ಮುಖಂಡರು, ಬಿಜೆಪಿ ಮಹಿಳಾ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.  ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ- ಅಮಿತ್‌ ಶಾ ಭೇಟಿಯಾದ ರಾಜ್ಯ ಬಿಜೆಪಿ ನಾಯಕರ ನಿಯೋಗ

    ಬಾನು ಮುಷ್ತಾಕ್ ಆಯ್ಕೆ ಪರವಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಲು ದಲಿತ ಮಹಾಸಭಾದ ರಾಜ್ಯಾಧ್ಯಕ್ಷನ ರಾಜೇಶ್ ಆಗಮಿಸಿದ್ದರು. ಪ್ರತಿಭಟನೆಗೆ ಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಅವರು ಪ್ರತಾಪ್‌ ಸಿಂಹ ಅವರಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

    ಚಾಮುಂಡಿ ಬೆಟ್ಟಕ್ಕೆ ಹೋಗುವ ಪ್ರತಿಯೊಂದು ರಸ್ತೆಯಲ್ಲೂ ನಾಕ ಬಂದಿ ಹಾಕಲಾಗಿತ್ತು. ಪ್ರತಿಭಟನಕಾರನ್ನು ಕರೆದುಕೊಂಡು ಹೋಗಲು ಹೆಚ್ಚಿನ ಪೊಲೀಸ್ ವಾಹನಗಳ ನಿಯೋಜನೆ ಮಾಡಲಾಗಿತ್ತು. ಸ್ಥಳಕ್ಕೆ ಡಿಸಿಪಿಗಳಾದ ಸುಂದರ್ ರಾಜ್, ಬಿಂದು ಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ದಸರಾ ಉದ್ಘಾಟನೆ ವಿಚಾರ ಕೋರ್ಟ್‌ನಲ್ಲೇ ತೀರ್ಮಾನ ಆಗಲಿ: ಸಿಎಂ ತಿರುಗೇಟು

    ದಸರಾ ಉದ್ಘಾಟನೆ ವಿಚಾರ ಕೋರ್ಟ್‌ನಲ್ಲೇ ತೀರ್ಮಾನ ಆಗಲಿ: ಸಿಎಂ ತಿರುಗೇಟು

    – ಪ್ರತಾಪ್ ಸಿಂಹ ಅವರನ್ನ ಪಕ್ಷದವರೇ ನೆಗ್ಲೆಕ್ಟ್ ಮಾಡಿದ್ದಾರೆ; ಸಿದ್ದರಾಮಯ್ಯ ವ್ಯಂಗ್ಯ

    ಬೆಂಗಳೂರು: ಪ್ರತಾಪ್ ಸಿಂಹನನ್ನ (Pratap Simha) ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿ ಬಿಟ್ಟಿದ್ದಾರಲ್ಲ. ಅದಕ್ಕೆ ಕೋರ್ಟ್ವರೆಗೆ ಹೋಗಿರಬೇಕು. ದಸರಾ ಉದ್ಘಾಟನೆ ವಿಚಾರ ಕೋರ್ಟ್ನಲ್ಲೇ ತೀರ್ಮಾನ ಆಗಲಿ ಬಿಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು.

    ಬಾನು ಮುಷ್ತಾಕ್ (Banu Mushtaq) ದಸರಾ (Dasara) ಉದ್ಘಾಟನೆ ವಿರೋಧಿಸಿ ಪ್ರತಾಪ್ ಸಿಂಹ ಕೋರ್ಟ್ಗೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈದರಾಲಿ, ಟಿಪ್ಪು, ಮಿರ್ಜಾ ಇಸ್ಮಾಯಿಲ್, ನಿಸಾರ್ ಅಹಮದ್ ಅವರ ಬಗ್ಗೆ ಬಿಜೆಪಿ ಅವರು ಕೋರ್ಟ್ಗೆ ಹೋಗಿರಲಿಲ್ಲ. ಪ್ರತಾಪ್ ಸಿಂಹ ಅವರನ್ನು ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿದ್ದಾರಲ್ಲ. ಅದಕ್ಕೆ ಕೋರ್ಟ್ವರೆಗೆ ಹೋಗಿರಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮದ್ದೂರು ಗಲಾಟೆ | ನನ್ನ ಪ್ರಕಾರ ತಪ್ಪು ಮಾಡಿಲ್ಲ, ಬಿಜೆಪಿ-ಜೆಡಿಎಸ್ ಪ್ರಚೋದನೆ: ಸಿದ್ದರಾಮಯ್ಯ

    ಇನ್ನು ಮದ್ದೂರು (Maddur) ಗಲಾಟೆ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರಣೆ ಪಡೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಮಹಾನಿರ್ದೇಶಕ ಸಲೀಂ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಂದ ಮಾಹಿತಿ ಪಡೆದರು.

    ಸುದ್ದಿಗೋಷ್ಠಿಗೂ ಮುನ್ನ ಮದ್ದೂರು ಗಲಾಟೆ ಬಗ್ಗೆ ಮಾತಾಡಿದ ಸಿಎಂ, ಬಿಗಿ ಬಂದೋಬಸ್ತ್ಗೆ ಪೊಲೀಸರಿಗೆ ಸೂಚನೆ ನೀಡಿದರು. ಇದೇ ವೇಳೆ ಮದ್ದೂರು ಎಂಎಲ್‌ಎ ಏನ್ ಮಾಡ್ತಾ ಇದ್ದಾನೆ ಎಂದು ಕೇಳಿದ್ರು. ಅದಕ್ಕೆ ಸರ್ ಲಂಡನ್‌ಗೆ ಹೋಗಿದ್ದಾರೆ. ಮಗಳು ಅಲ್ಲಿ ಇದ್ದಾಳೆ ಎಂದು ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.

  • ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

    ಬೆಂಗಳೂರು: ನಾಡಹಬ್ಬ ದಸರಾ (Dasara) ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನದ ವಿಚಾರ ರಾಜಕೀಯದಿಂದ ಕಾನೂನು ಹೋರಾಟಕ್ಕೆ ತಿರುವು ಪಡೆದಿದೆ. ಬಾನು ಮುಷ್ತಾಕ್ (Banu Mushtaq) ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಹೌದು, ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ (High Court) ಮೆಟ್ಟಿಲೇರಿದ ಪ್ರತಾಪ್ ಸಿಂಹ, ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ: ಭಾರತೀಯ ಸೇನಾ ಮುಖ್ಯಸ್ಥ

    ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದೆ. ಮೈಸೂರಿನ ರಾಜಮನೆತನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಆದರೂ ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡಿದ್ದಾರೆ. ಹೀಗಾಗಿ ಬಾನು ಮುಷ್ತಾಕ್ ಅವರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶಿಸಲು ಮನವಿ ಮಾಡಿದ್ದಾರೆ. ಈ ವಿಚಾರ ಇನ್ನಷ್ಟೇ ಹೈಕೋರ್ಟ್ ಅಲ್ಲಿ ವಿಚಾರಣೆಗೆ ಬರಬೇಕಿದೆ. ಇದನ್ನೂ ಓದಿ: ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

  • ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    ಮೈಸೂರು: ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ (Banu Mushtaq) ಆಯ್ಕೆಯನ್ನ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಸೆ.9ರಂದು ʻಚಾಮುಂಡಿ ಬೆಟ್ಟ ಚಲೋʼ (Chamundeshwari Chalo) ಯಾತ್ರೆ ಹಮ್ಮಿಕೊಳ್ಳಲಾಗಿದೆ.

    ನಗರದ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ಯಾತ್ರೆ ಹಮ್ಮಿಕೊಳ್ಳಲಾಗಿದೆ. ʻನಮ್ಮ ನಡಿಗೆ ತಾಯಿ ಚಾಮುಂಡೇಶ್ವರಿ‌ʼ ಸನ್ನಿಧಿಗೆ ಹೆಸರಿನಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ

    R Ashok 5

    ಇತ್ತೀಚೆಗಷ್ಟೇ ವಿಪಕ್ಷ ನಾಯಕ ಆರ್‌. ಅಶೋಕ್ , ‌ʻಚಾಮುಂಡೇಶ್ವರಿ ದೇವಾಲಯದ (Chamundeshwari Temple) ಪಾವಿತ್ರ‍್ಯತೆಗೆ ಧಕ್ಕೆಯಾದರೆ ‘ಧರ್ಮಸ್ಥಳ ಚಲೋ’ ಮಾದರಿಯಲ್ಲಿ ‘ಚಾಮುಂಡೇಶ್ವರಿ ಚಲೋ’ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ. ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ. ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ಮನವಿ ಮಾಡಿದ್ದರು. ಆದ್ರೆ ಬಿಜೆಪಿ ಯಾತ್ರೆಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯು ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದೆ. ಇದನ್ನೂ ಓದಿ: ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    Banu Mushtaq dasara invitation

    ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ
    ಇನ್ನೂ ಇತ್ತೀಚೆಗಷ್ಟೇ ದಸರಾ ಉದ್ಘಾಟನೆಗೆ ಮುಷ್ತಾಕ್‌ರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಹಾಸನ (Hasaan) ನಗರದ ಅಮಿರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ದಸರಾ ವಿಶೇಷಧಿಕಾರಿ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತರೆಡ್ಡಿ ಹಾಗೂ ಎಡಿಸಿ ಶಿವರಾಜ್ ಅವರು ತೆರಳಿದ್ದರು. ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಆನೆ ವಿಗ್ರಹದ ಜೊತೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗೆ ಕನ್ನಡ ಬರುತ್ತಾ ಅಂತ ಕೇಳಿದ ಸಿಎಂ – ಸ್ವಲ್ಪ ಸ್ವಲ್ಪ ಬರುತ್ತೆ; ಮುರ್ಮು ಉತ್ತರ

  • ಇಫ್ತಾರ್ ಕೂಟಕ್ಕೆ ಸಿಎಂ ಟೋಪಿ ಧರಿಸಿ ಹೋಗುವುದಿಲ್ಲವೇ? – ಸಿದ್ದರಾಮಯ್ಯಗೆ ಜೋಶಿ ತಿರುಗೇಟು

    ಇಫ್ತಾರ್ ಕೂಟಕ್ಕೆ ಸಿಎಂ ಟೋಪಿ ಧರಿಸಿ ಹೋಗುವುದಿಲ್ಲವೇ? – ಸಿದ್ದರಾಮಯ್ಯಗೆ ಜೋಶಿ ತಿರುಗೇಟು

    ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಇಫ್ತಾರ್ ಕೂಟಕ್ಕೆ ಆಹ್ವಾನ ಬಂದರೆ ತಲೆಗೆ ಮುಸ್ಲಿಂ ಟೋಪಿ ಧರಿಸಿ, ಭುಜಕ್ಕೆ ಕಲರ್ ಕಲರ್ ಚೆಕ್ಸ್ ಶಾಲು ಹೊದಿಸಿಕೊಂಡು ಹೋಗುತ್ತಾರಲ್ಲವೇ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಪ್ರಶ್ನಿಸಿದ್ದಾರೆ.

    ‘ನಾಡ ಹಬ್ಬಾ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ (Banu Mushtaq) ಹಣೆಯಲ್ಲಿ ಕುಂಕುಮ ಹಚ್ಚಿ ಬರಬೇಕಿಲ್ಲ’ ಎಂದಿರುವ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅತೀವ್ರ ತುಷ್ಟೀಕರಣದಲ್ಲಿ ತೊಡಗಿರುವ, ನಾನೂ ಹಿಂದೂ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧಾರ್ಮಿಕತೆಯ ಬಗ್ಗೆ ಏನು ಗೊತ್ತಿದೆ ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕಿಮ್ ಸ್ಪರ್ಶಿಸಿದ ಜಾಗವೆಲ್ಲ ಕ್ಲೀನ್‌ – ಭಾರೀ ಚರ್ಚೆಗೆ ಗ್ರಾಸವಾದ ನಡೆ

    ‘ನಾಡಹಬ್ಬ ದಸರಾ ಉದ್ಘಾಟನೆ ಮಾಡುವ ವ್ಯಕ್ತಿಗೆ ಹಣೆಯಲ್ಲಿ ಕುಂಕುಮ ಇಡಬೇಕೆಂಬ ಫತ್ವಾ ಹೊರಡಿಸಲು ನಿಮ್ಮಿಂದ ಸಾಧ್ಯವಿಲ್ಲ ಬಿಡಿ ಎಂದು ಸಿಎಂಗೆ ಮಾತಿನಲ್ಲೇ ತಿವಿದಿರುವ ಸಚಿವರು, ಹಣೆಗೆ ಕುಂಕುಮ ಧರಿಸಬಾರದೆಂಬ ಫತ್ವಾ ಬಾನು ಮುಷ್ತಾಕ್ ಅವರ ಧರ್ಮದಲ್ಲಿಯೇ ಹೊರಡಿಸಲಾಗಿದೆಯಲ್ಲಾ. ಹಾಗಿರುವಾಗ ‘ಹಣೆಯಲ್ಲಿ ಕುಂಕುಮ ಹಚ್ಚಿ ಬರಬೇಕಿಲ್ಲ’ ಎಂಬ ನಿಮ್ಮ ಹೇಳಿಕೆಯೇ ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶೂ, ಚಪ್ಪಲಿ ಧರಿಸುವ ಮುನ್ನ ಎಚ್ಚರ – ಬೆಂಗ್ಳೂರಲ್ಲಿ ಹೆಚ್ಚಾಗಿದೆ ಉರಗಗಳ ಹಾವಳಿ

    ಹಿಂದೂ ದೇವತೆಗಳ ಬಗ್ಗೆ ಗೌರವ, ಆಚಾರ-ವಿಚಾರ ಇಲ್ಲದವರಿಗಿಂತ ನಿಮ್ಮ ವಿಭಿನ್ನ ವಿಚಾರಗಳನ್ನು ಪಾಲಿಸಿದರೆ ಸಾಕು. ಹೆಚ್ಚಾಗಿ ಇಫ್ತಾರ್ ಕೂಟಕ್ಕೆ ಆಹ್ವಾನ ಬರುತ್ತದೆ. ಆಗ ತಲೆಗೆ ಮುಸ್ಲಿಂ ಟೋಪಿ ಧರಿಸಿ, ಭುಜಕ್ಕೆ ಕಲರ್ ಕಲರ್ ಚೆಕ್ಸ್ ಶಾಲೂ ಹೊದಿಸಿಯೇ ಹೋಗಬೇಕು ಅಲ್ಲವೇ? ಹಾಗಿರುವಾಗ ಒಂದು ಹಿಂದೂ ಹಬ್ಬದ ಉದ್ಘಾಟನೆಗೆ ‘ಕುಂಕುಮ ಧರಿಸಿ ಬರಬೇಕಿಲ್ಲ’ ಎಂಬ ಸಿಎಂ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದೀಪಾವಳಿಗೆ ದೇಶವಾಸಿಗಳಿಗೆ ಗಿಫ್ಟ್‌ – ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ?

  • ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ

    ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ

    ಮೈಸೂರು: ವಿಶ್ವವಿಖ್ಯಾತ ದಸರಾಗೆ ದಿನಗಣನೆ ಶುರುವಾಗಿದ್ದು, ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರಿಗೆ (Banu Mushtaq) ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ.

    ಹಾಸನ (Hasaan) ನಗರದ ಅಮಿರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ದಸರಾ ವಿಶೇಷಧಿಕಾರಿ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತರೆಡ್ಡಿ ಹಾಗೂ ಎಡಿಸಿ ಶಿವರಾಜ್ ಅವರು ತೆರಳಿದ್ದರು. ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಆನೆ ವಿಗ್ರಹದ ಜೊತೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದ್ದಾರೆ.

    ಆಹ್ವಾನ ಸ್ವೀಕರಿಸಿ ಮಾತನಾಡಿದ ಬಾನು ಮುಷ್ತಾಕ್ ಅವರು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. 2025ರ ದಸರಾ ಉದ್ಘಾಟನೆ ಸಂದರ್ಭದಲ್ಲಿ ಸಮಸ್ತ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಿದ್ದರಾಮಯ್ಯ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನನ್ನು ಸ್ವಾಗತ ಮಾಡಿದ ಮೈಸೂರು ಜಿಲ್ಲಾಡಳಿತಕ್ಕೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇನ್ನೂ ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದಿದ್ದಾರೆ.

    =

  • ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    -ಬಿಜೆಪಿಯವರು ಯಾರಾದ್ರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸವಾಲ್

    ಬೆಂಗಳೂರು: ಬಿಜೆಪಿಯಲ್ಲಿ (BJP) ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಉದ್ಘಾಟನೆ (Dasara Inauguration) ವಿಚಾರವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬಾನು ಮುಷ್ತಾಕ್ (Banu Mushtaq) ಅವರಿಂದ ದಸರಾ ಉದ್ಘಾಟನೆಗೆ ಬಿಜೆಪಿ ನಾಯಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಮಾಜಿ ಸಂಸದರು, ಮಾಜಿ ಬಿಜೆಪಿ ಶಾಸಕರು ನಡೆಯಲಾರದ ನಾಣ್ಯಗಳು ಚಾಲ್ತಿಯಲ್ಲಿ ಬರೋಕೆ ಹೀಗೆ ಮಾತಾಡ್ತಿದ್ದಾರೆ. ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿಲ್ಲವಾ? ಬಿಜೆಪಿ ಸರ್ಕಾರ ಇದ್ದಾಗ ಅಬ್ದುಲ್ ಕಲಾಂ ಅವರನ್ನ ದಸರಾಗೆ ಕರೆದಿದ್ದರು. ಅವರು ಬಂದಿರಲಿಲ್ಲ. ಕಲಾಂ, ನಿಸಾರ್ ಅಹಮದ್ ಮುಸ್ಲಿಮರು ಅಂತ ಅವರನ್ನ ಕರೆಸಿದ್ದಾ? ಅವರ ಕೊಡುಗೆ, ಸಾಮರ್ಥ್ಯ ನೋಡಿ ಕರೆಸಿದ್ದಾ? ನಮ್ಮ ನಾಡಿಗೆ ಅವರು ಕೊಡುಗೆ ಕೊಟ್ಟಿರಲಿಲ್ಲವಾ? ಕನ್ನಡ ಪರವಾಗಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಬಾನು ಮುಷ್ತಾಕ್ ಅವರ ಸಾಧನೆ ನೋಡಿ ಮೆಚ್ಚಿ ನಾವು ಉದ್ಘಾಟನೆಗೆ ಕರೆಸಿದ್ದೇವೆ. ಅದರಲ್ಲಿ ತಪ್ಪೇನಿದೆ. ಮಾಜಿ ಸಂಸದರಿಗೆ ಏನು ಇದರಲ್ಲಿ ಅಷ್ಟು ಕಳಕಳಿ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಟಿಪ್ಪು, ಹೈದರ್ ಅಲಿ ಇದ್ದಾಗಲು ದಸರಾ ನಡೆದಿತ್ತು. ನಿಂತಿರಲಿಲ್ಲ. ತಾಯಿ ಚಾಮುಂಡಿಯೇ ಏನು ಮಾತಾಡಲ್ಲ. ಇವರೇ ಚಾಮುಂಡೇಶ್ವರಿ ವಕ್ತಾರರ ತರಹ ಮಾತಾಡ್ತಾರೆ. ಯಾರು ಇವರೆಲ್ಲ ಮಾತಾಡೋಕೆ? ಬಿಜೆಪಿ ಅವರ ಕೊಡುಗೆ ಶೂನ್ಯ. ಕರ್ನಾಟಕ, ಭಾಷೆ, ನಾಡಿಗೆ ಕೊಡುಗೆ ಕೊಟ್ಟಿರೋರು ಉದ್ಘಾಟನೆ ಮಾಡಬಾರದು ಅಂದರೆ ಹೇಗೆ? ಇದು ಬಿಜೆಪಿ ಅವರ ರಾಜಕೀಯ ಅಷ್ಟೇ. ಇವರಿಗೆ ಕೆಲಸ ಇಲ್ಲ. ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ಮಾತಾಡ್ತಿದ್ದಾರೆ ಅಷ್ಟೆ. ಬಿಜೆಪಿ ಅವರು ಯಾರಾದ್ರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸವಾಲು ಹಾಕಿದರು.

    ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅನೇಕ ಕಡೆ ಕೋಮು ಸೌಹಾರ್ದತೆಗೋಸ್ಕರ ಒಟ್ಟಾಗಿ ಕೆಲಸ ಮಾಡ್ತಾರೆ. ಹಿಂದೂಗಳು ದರ್ಗಾಕ್ಕೆ ಹೋಗ್ತಾರೆ. ಮುಸ್ಲಿಮರು ದೇವಸ್ಥಾನಕ್ಕೆ ಹೋಗ್ತಾರೆ. ತಪ್ಪೇನು? ನಮ್ಮೂರಲ್ಲೂ ಇಂತಹ ಪದ್ಧತಿಗಳು ಈಗಲೂ ಇವೆ. ಎಲ್ಲಾ ದೇವರಿಗೆ ಈ ಬಿಜೆಪಿಯವರು ವಕ್ತಾರರಾಗಿದ್ದಾರೆ. ಇವರು ಮಾತಾಡೋಕೆ ಯಾರು? ಟಿಪ್ಪು, ಹೈದರ್, ಒಡೆಯರ ಕಾಲದಿಂದಲೂ ದಸರಾ ನಡೆದಿತ್ತು ಅಲ್ಲವಾ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

  • ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

    ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

    – ಉದ್ಘಾಟಕರು ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ?
    – ದಸರಾ ಎಲ್ಲಾ ಜಾತಿ ಧರ್ಮಕ್ಕೆ ಸೇರಿದ ಹಬ್ಬ ಎಂದ ಸಿಎಂ

    ಮೈಸೂರು: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್‌ ಹೆಸರನ್ನ ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

    ಮೈಸೂರಿನ ವಿಮಾನ ನಿಲ್ದಾಣದಲ್ಲಿ (Mysuru Airport) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಕರಾಗಿ ಬಾನು ಮುಷ್ಕಾಕ್‌ ಅವರ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ (Banu Mushtaq) ನೀಡಿರುವ ಹಳೇ ಹೇಳಿಕೆಗು ಇದಕ್ಕೂ ಏನು ಸಂಬಂಧ? ಬಿಜೆಪಿ ಕುಂಟು ನೆಪ ಹುಡುಕುತ್ತಿದ್ದಾರೆ ಅಷ್ಟೇ. ಯಾವತ್ತೋ ಏನೋ ಹೇಳಿದ್ದಾರೆ ಅಂತ ಅದನ್ನ ಇಲ್ಲಿಗೆ ಲಿಂಕ್ ಮಾಡುವುದು ಎಷ್ಟು ಸರಿ? ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ ಎಂದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಫ್ಲೈಟ್‌ ದೆಹಲಿಗೆ ವಾಪಸ್‌

    ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ?
    ಬೆರಳಣಿಕೆಯ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ. ನಾನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ. ಉದ್ಘಾಟಕರು ದನ ತಿನ್ನುವುದನ್ನ ಬಿಜೆಪಿಯವರು (BJP) ನೋಡಿದ್ದಾರಾ? ಅವರನ್ನ ವಿರೋಧಿಸಲೇಬೇಕೆಂದು ವಿರೋಧ ಮಾಡ್ತಿದ್ದಾರೆ. ದಸರಾ ಒಂದು ಸಾಂಸ್ಕೃತಿಕ ಹಬ್ಬ. ಇದು ಧರ್ಮಾತೀತವಾದ ಹಬ್ಬ. ಇದು ಎಲ್ಲಾ ಜಾತಿ, ಧರ್ಮಕ್ಕೆ ಸೇರಿದ್ದು. ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ. ಟಿಪ್ಪು ಹೈದಾರಲಿ ಕೂಡ ದಸರಾ ನಡೆಸಿದ್ದಾರೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ. ಇದಕ್ಕೆ ಧರ್ಮದ ಲೇಪನ ಬಳಿಯುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ

    ಬಿಜೆಪಿಯವರು ಡೋಂಗಿಗಳು
    ಇದೇ ವೇಳೆ ಧರ್ಮಸ್ಥಳ ತನಿಖಾ (Dharmasthala Investigation) ವಿಚಾರ ಕುರಿತು ಪ್ರತಿಕ್ರಿಯಿಸಿ, ಉನ್ನತಮಟ್ಟದ ತನಿಖೆ ಅಗತ್ಯತೆ ಇಲ್ಲ. ಧರ್ಮಸ್ಥಳದ ಮೇಲೆ ಅನುಮಾನ ತೂಗುಗತ್ತಿ ಇದೆ. ಅದನ್ನು ನಿವಾರಿಸಲು ತನಿಖೆ ಮಾಡುತ್ತಿದ್ದೇವೆ. ಎಸ್‌ಐಟಿ ತನಿಖೆಯನ್ನ ಧರ್ಮಾಧಿಕಾರಿಗಳೇ ಸ್ವಾಗತ ಮಾಡಿದ್ದಾರೆ. ಬಿಜೆಪಿ ಕೂಡ ಸ್ವಾಗತ ಮಾಡಿತ್ತು. ತನಿಖೆ ನಡೆಯುವ ಈ ಹಂತದಲ್ಲಿ ಧರ್ಮದ ರ‍್ಯಾಲಿ ಮಾಡಿದರೆ ಅದರಲ್ಲಿ ಅರ್ಥ ಇದ್ಯಾ? ಬಿಜೆಪಿ ರಾಜಕೀಯಕ್ಕಾಗಿ ಈ ರ‍್ಯಾಲಿ ಮಾಡುತ್ತಿದೆ. ಬಿಜೆಪಿಯವರು ಡೋಂಗಿಗಳು. ಡೋಂಗಿಗಳು ಮಾತ್ರ ತಮಗೆ ಬೇಕಾದಾಗ ಬೇಕಾದ ರೀತಿ ಮಾತನಾಡುತ್ತಾರೆ. ನಾವು ಎಸ್‌ಐಟಿ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಯಾವ ಒತ್ತಡವನ್ನ ಸಹ ನಾವು ತನಿಖೆ ಮೇಲೆ ಹೇರಿಲ್ಲ, ತನಿಖೆಗೆ ಸಮಯ ನಿಗದಿ ಮಾಡಿಲ್ಲ. ಯಾರು ಏನು ಬೇಕಾದರೂ ರ‍್ಯಾಲಿ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧ ಇಲ್ಲ. ಬಿಜೆಪಿಯವರಿಗೆ ಧರ್ಮವೂ ಗೊತ್ತಿಲ್ಲ, ಜಾತಿಯೂ ಗೊತ್ತಿಲ್ಲ. ಬರೀ ರಾಜಕಾರಣ ಮಾಡುತ್ತಿದ್ದಾರೆ ಎಂದು ನುಡಿದರು.

    ಇದೇ ವೇಳೆ ಆಸ್ತಿ ಮುದ್ರಾಂಕ ಶುಲ್ಕ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿ, 1% ಮುದ್ರಾಂಕ ಶುಲ್ಕ ಹೆಚ್ಚು ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಈ ತೆರಿಗೆ ಈಗಾಗಲೇ ಇದೆ. ಅದರ ಅನುಸಾರ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ