Tag: ಬಾನದಾರಿಯಲ್ಲಿ ಸಿನಿಮಾ

  • ‘ಬಾನದಾರಿಯಲ್ಲಿ’ ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟ್ ಆಟಗಾರ

    ‘ಬಾನದಾರಿಯಲ್ಲಿ’ ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟ್ ಆಟಗಾರ

    ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮೂಡಿ ಬರುತ್ತಿದ್ದು, ಈ ಸಿನಿಮಾಗೆ ಬಾನದಾರಿಯಲ್ಲಿ ಎಂದು ಹೆಸರಿಡಲಾಗಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣವನ್ನೂ ಮುಗಿಸಿದೆ ಚಿತ್ರತಂಡ. ಮೊನ್ನೆಯಷ್ಟೇ ಎರಡನೇ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಗಣೇಶ್ ಅವರ ಹುಟ್ಟು ಹಬ್ಬದಂದು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಆ ಪೋಸ್ಟರ್ ನಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಂಡಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ಗಣೇಶ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟು ಹಬ್ಬಕ್ಕಾಗಿಯೇ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿದ್ದವು. ಅವುಗಳಲ್ಲಿ ಬಾನದಾರಿಯಲ್ಲಿ ಪೋಸ್ಟರ್ ಆಕರ್ಷಕವಾಗಿತ್ತು. ಕಾರಣ, ಗಣೇಶ್ ಕ್ರಿಕೆಟ್ ಆಟಗಾರನ ವೇಷದಲ್ಲಿದ್ದರು. ಈ ಫೋಟೋ ನಾನಾ ಕಾರಣಗಳಿಂದಾಗಿ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇದನ್ನೂ ಓದಿ:ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ಕ್ರಿಕೆಟ್ ಆಟಗಾರನ ಪೋಸ್ ಕೊಟ್ಟಿರುವ ಗಣೇಶ್ ಅವರ ಪೋಸ್ಟರ್ ರಿಲೀಸ್ ಆಗಿದೆ. ಆದರೆ, ಈ ಸಿನಿಮಾದಲ್ಲಿ ಅವರು ಪೂರ್ಣ ಪ್ರಮಾಣದ ಕ್ರಿಕೆಟ್ ಆಟಗಾರರಾ? ಅಥವಾ ಯಾವುದಾದರೂ ಒಂದು ದೃಶ್ಯದಲ್ಲಿ ಹೀಗೆ ಬಂದು ಹೋಗುತ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ ನಿರ್ದೇಶಕರು. ಗಣೇಶ್ ಮತ್ತು ಪ್ರೀತಮ್ ಈವರೆಗೂ ಮೆಚ್ಚುವಂತಹ ಸಿನಿಮಾಗಳನ್ನೇ ಕೊಟ್ಟಿರುವುದರಿಂದ, ಈ ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗಲಿದೆ ಎನ್ನುತ್ತಿದೆ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ಯುಗಾದಿ ಹಬಕ್ಕೆ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಡುವುದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿಕೊಂಡಿದ್ದರು. ಅದರಂತೆ ಅವರು ಹೊಸ ಸಿನಿಮಾದ ಟೈಟಲ್ ಅನ್ನು ಸೋಷಿಯಲ್ ಮೀಡಿಯಾ ಮೂಲಕ ಅನಾವರಣ ಮಾಡಿದ್ದಾರೆ ಗಣೇಶ್. ತಮ್ಮ ತಮ್ಮ ಗೆಳೆಯ ಪ್ರೀತಮ್ ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ.’ ಎಂದು ಟೈಟಲ್ ಇಟ್ಟಿದ್ದಾರೆ. ಇದು 1981ರಲ್ಲಿ ತೆರೆಕಂಡ ಪುನೀತ್ ರಾಜ್ ಕುಮಾರ್ ನಟನೆಯ ‘ಭಾಗವಂತ’ ಸಿನಿಮಾದ ಪಾಪ್ಯುಲರ್ ಹಾಡು. ಬಾಲ್ಯದ ಅಪ್ಪು ತಮ್ಮ ತೊದಲ ನುಡಿಗಳಲ್ಲಿ ‘ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ’ ಎಂದು ಹಾಡಿದ್ದರು. ಈಗ ಅದನ್ನೇ ತಮ್ಮ ಶೀರ್ಷಿಕೆಯನ್ನಾಗಿ ಇಟ್ಟುಕೊಂಡು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ಪ್ರೀತಮ್ ಗುಬ್ಬಿ.  ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

    ಸ್ಯಾಂಡಲ್‌ವುಡ್‌ನ ಗೋಲ್ಡ್ನ್ ಸ್ಟಾರ್ ಗಣೇಶ್ ಮತ್ತೆ ಮಳೆ ಹುಡುಗನಾಗಿ ಮಿಂಚೋದಕ್ಕೆ ಸಜ್ಜಾಗಿದ್ದಾರೆ..ಯುಗಾದಿ ಹಬ್ಬದ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡೋದಾಗಿ ನಟ ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದ್ರು..ಅದರಂತೆಯೇ ಹೊಸ ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ. ಮುಂಗಾರು ಮಳೆಯಿಂದ ಶುರುವಾದ ಈ ಜೋಡಿಯ ಪಯಣ, ‘ಮಳೆಯಲಿ ಜೊತೆಯಲಿ’, ‘ದಿಲ್ ರಂಗೀಲಾ’, `೯೯’ ಚಿತ್ರದವರೆಗೂ ಸಾಗಿದೆ. ಅಷ್ಟೂ ಸಿನಿಮಾಗಳು ಸಿನಿಪ್ರಿಯರನ್ನು ಮೋಡಿ ಮಾಡಿವೆ. ಇದೀಗ `ಬಾನದಾರಿಯಲ್ಲಿ’ ಈ ಕಾಂಬಿನೇಷನ್ ನ ನಾಲ್ಕನೇ ಸಿನಿಮಾ. ಇದನ್ನೂ ಓದಿ: ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

    `ಬಾನದಾರಿಯಲ್ಲಿ’ ಅನ್ನೋ ಕ್ಯಾಚಿ ಟೈಟಲ್ ಜೊತೆಗೆ `ನೋಡು ಎಂಥ ಚೆಂದ’ ಅನ್ನೋ ಅಡಿ ಬರಹ ಕೂಡ ಇದೆ. ಅದನ್ನು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರದ ಟೈಟಲ್ ರಿವೀಲ್ ಮಾಡುವುದರ ಜೊತೆಗೆ ಯುಗಾದಿ ಹಬ್ಬದ ಶುಭಾಶಯಗಳು ಹರೆಯದ ಹೃದಯಗಳೇ ಹರಸಿ ಅಂತಾ ಬರೆದುಕೊಂಡಿದ್ದಾರೆ.  ಅಪ್ಪು, ಗಣೇಶ್ ಮತ್ತು `ಬಾನದಾರಿಯಲ್ಲಿ’ ಎಂಬ ಡಿಫರೆಂಟ್ ಟೈಟಲ್  ಸಿನಿಪ್ರಿಯರಿಗೆ ಕನೆಕ್ಟ್ ಆಗುವುದರ ಜೊತೆಗೆ ಮೋಡಿ ಮಾಡುವುದಂತೂ ಸುಳ್ಳಲ್ಲ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಸಿನಿಮಾದ ಟೈಟಲ್ ನಲ್ಲಿರುವ ಅಂಶಗಳನ್ನು ಗಮನಿಸಿದರೆ ಗಣೇಶ್ ನಟನೆಯ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರ ಕೂಡ ಒಂದು ಅದ್ಭುತ ಲವ್ ಸ್ಟೋರಿ ಆಗಿರಲಿದೆ. ಈಗಾಗಲೇ ಭಿನ್ನ ಲವ್ ಸ್ಟೋರಿ, ಮತ್ತು ಬಗೆ ಬಗೆಯ ಪಾತ್ರಗಳ ಮೂಲಕ ಕಮಾಲ್ ಮಾಡಿರುವ ಗಣೇಶ್, ಹೊಸ ಸಿನಿಮಾದಲ್ಲೂ ಮುಂದುವರೆಸಲಿದ್ದಾರೆ. ಈ ಚಿತ್ರವನ್ನು ಪ್ರತಿಭಾವಂತ ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದರೆ, ಶ್ರೀವಾರಿ ಟಾಕೀಸ್ ಬಂಡವಾಳ ಹೂಡುತ್ತಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.