Tag: ಬಾತ್ ರೂಂ

  • ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆ ಬಾತ್ ರೂಂನಲ್ಲಿ ನೇಣಿಗೆ ಶರಣು

    ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆ ಬಾತ್ ರೂಂನಲ್ಲಿ ನೇಣಿಗೆ ಶರಣು

    ದಾವಣಗೆರೆ: ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆಯ ಬಾತ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ದಾವಣಗೆರೆಯ ಬಸಾಪುರ ನಿವಾಸಿ ಕಂಟೈನ್ಮೆಂಟ್ ಏರಿಯಾದಲ್ಲಿ ವಾಸಿಸುತ್ತಿದ್ದರು. ಇವರಿಗೆ ಕೆಮ್ಮು ಜ್ವರದಂತಹ ಲಘು ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.

    ಕೊರೊನಾ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಜೊತೆಗೆ ಮೇ 20ರಂದು ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರವುದಕ್ಕೂ ಮುನ್ನವೇ ಇಂದು ಬೆಳಗ್ಗೆ 7.30ರ ಸುಮಾರಿಗೆ ಆಸ್ಪತ್ರೆಯ ಬಾತ್ ರೊಂನಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

    ಈ ಸಂಬಂಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆತ ಕೊರೊನಾ ಬಂದರೆ ನನ್ನ ಕ್ವಾರಂಟೈನ್ ಮಾಡುತ್ತಾರೆ ಎಂಬ ಭಯದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

  • ಬಾತ್ ರೂಂನಲ್ಲಿ ಮೊಸಳೆ ಕಂಡು ದಂಗಾದ ಮನೆ ಮಾಲೀಕ- ವಿಡಿಯೋ ನೋಡಿ

    ಬಾತ್ ರೂಂನಲ್ಲಿ ಮೊಸಳೆ ಕಂಡು ದಂಗಾದ ಮನೆ ಮಾಲೀಕ- ವಿಡಿಯೋ ನೋಡಿ

    ಗಾಂಧಿನಗರ: ಆಸ್ಟ್ರೇಲಿಯಾದ ಅನೇಕ ಕಡೆಯ ಮನೆಗಳಲ್ಲಿ ಅಪಾಯಕಾರಿ ಸರಿಸೃಪಗಳು ಬರುವುದು ಹೊಸದೆನಲ್ಲ. ಆದರೆ ನಮ್ಮ ದೇಶದಲ್ಲಿ ಮನೆಯ ಒಳಗೆ ಮೊಸಳೆಗಳು ಕಾಣಿಸಿಕೊಳ್ಳವುದು ಅಪರೂಪ. ಆದರೆ ಗುಜರಾತ್‌ನಲ್ಲಿ ಮನೆಯ ಬಾತ್ ರೂಂನಲ್ಲೇ ಮೊಸಳೆ ಕಾಣಿಸಿಕೊಳ್ಳುವ ಮೂಲಕ ಮಾಲೀಕನನ್ನು ಹೌಹಾರಿಸಿದೆ.

    ಗುಜರಾತಿನ ವಡೋದರಾ ನಿವಾಸಿ ಮಹೇಂದ್ರ ಪಡಿಯಾರ್ ಮಧ್ಯರಾತ್ರಿ ನಂತರ ತನ್ನ ಸ್ನಾನ ಗೃಹದಲ್ಲಿ ದೊಡ್ಡ ಶಬ್ದವಾಗಿದ್ದಕ್ಕೆ ಎಚ್ಚರವಾಗಿದ್ದಾರೆ. ಬೆಕ್ಕು ಇರಬಹುದು ಎಂದು ಬಾತ್ ರೂಂ ಬಾಗಿಲು ತೆರೆದಿದ್ದಾರೆ. ಬಾತ್ ರೂಂ ತೆರೆದ ತಕ್ಷಣ ಮೊಸಳೆ ಅವರನ್ನು ದಿಟ್ಟಿಸಿ ನೋಡುತ್ತಿರುವುದನ್ನು ಕಂಡು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.

    ಮಹೇಂದ್ರ ಅವರು ಈ ಕುರಿತು ಪ್ರತಿಕ್ರಿಯಿಸಿ, ಮೊಸಳೆ ನಾಲ್ಕು ಅಡಿ ಇತ್ತು, ಬಾತ್ ರೂಂ ಬಾಗಿಲು ತೆರೆಯುತ್ತಿದ್ದಂತೆ ಬಾಯಿ ತೆರೆದು ನನ್ನತ್ತ ನೋಡಿತು. ಆಗ ನನಗೆ ಆಘಾತವಾಯಿತು. ತಕ್ಷಣವೇ ವನ್ಯಜೀವಿ ರಕ್ಷಣಾ ಸಂಸ್ಥೆಗೆ ಕರೆ ಮಾಡಿದೆ. ಅವರು ನಸುಕಿನ ಜಾವ 2.45ಕ್ಕೆ ನಮ್ಮ ಮನೆಗೆ ಆಗಮಿಸಿದರು. ನಂತರ ಮೊಸಳೆಯನ್ನು ಹಿಡಿದುಕೊಂಡು ತೆರಳಿದರು ಎಂದು ವಿವರಿಸಿದ್ದಾರೆ. ಮೊಸಳೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವ್ಯನ್ಯಜೀವಿ ರಕ್ಷಣಾ ಸಂಸ್ಥೆಯ ಸದಸ್ಯ ಮಾತನಾಡಿ, ನಮಗೆ ಪಡಿಯಾರ್‌ನಿಂದ ಕರೆ ಬಂತು. ನಂತರ 2.45ಕ್ಕೆ ಸ್ಥಳ ತಲುಪಿದೆವು. ಕತ್ತಲಾಗಿದ್ದರಿಂದ ಸರಿಸೃಪವನ್ನು ರಕ್ಷಿಸುವುದು ಸ್ವಲ್ಪ ಕಷ್ಟವಾಯಿತು. ಅಲ್ಲದೆ ಮೊಸಳೆ ಆಕ್ರಮಣಕಾರಿಯಾಗಿತ್ತು ಎಂದು ತಿಳಿಸಿದರು.

    ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ, ಮೊಸಳೆಯನ್ನು ಮಹೇಂದ್ರ ಮನೆಯಿಂದ ರಕ್ಷಿಸಲಾಗಿದೆ. ವಿಶ್ವಮಿತ್ರಿ ನದಿಯಿಂದ ಈ ಮೊಸಳೆ ಬಂದಿರಬಹುದು ಎಂದು ಶಂಕಿಸಿದರು. ವಿಶ್ವಮಿತ್ರಿ ನದಿಯು ನೂರಾರು ಸರೀಸೃಪಗಳ ನೆಲೆಯಾಗಿದೆ. ಅವು ಆಗಾಗ ವಸತಿ ಪ್ರದೇಶಗಳಿಗೆ ನುಗ್ಗುತ್ತಿರುತ್ತವೆ.

    ಆಗಸ್ಟ್ ತಿಂಗಳಲ್ಲಿ ವಡೋದರಾದಲ್ಲಿ ಪ್ರವಾಹ ಸಂಭವಿಸಿದಾಗ, ಜಲಾವೃತವಾಗಿದ್ದ ಬೀದಿಯಲ್ಲಿ ಮೊಸಳೆಯೊಂದು ನಾಯಿಯ ಮೇಲೆ ದಾಳಿ ನಡೆಸಿತ್ತು. ಈ ವಿಡಿಯೋ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿತ್ತು.

  • ಖಾಸಗಿ ಶಾಲಾ ಬಾತ್‍ರೂಮಿನಲ್ಲಿ 5ನೇ ತರಗತಿ ವಿದ್ಯಾರ್ಥಿ ಶವ ಪತ್ತೆ

    ಖಾಸಗಿ ಶಾಲಾ ಬಾತ್‍ರೂಮಿನಲ್ಲಿ 5ನೇ ತರಗತಿ ವಿದ್ಯಾರ್ಥಿ ಶವ ಪತ್ತೆ

    ಪಾಟ್ನಾ: ಕುತ್ತಿಗೆಗೆ ವಯರ್ ನಿಂದ ಬಿಗಿದ ರೀತಿಯಲ್ಲಿ ಖಾಸಗಿ ಶಾಲೆಯ ಬಾತ್ ರೂಮಿನಲ್ಲಿ 5ನೇ ತರಗತಿಯ ವಿದ್ಯಾರ್ಥಿ ಶವ ಪತ್ತೆಯಾಗಿದೆ.

    ಈ ಘಟನೆ ಬಿಹಾರದ ಕೈಮೂರು ಜಿಲ್ಲೆಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಕುದ್ರಾದಲ್ಲಿರುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

    ಶಾಲೆಯ ಎರಡನೇ ಮಹಡಿಯಲ್ಲಿರುವ ಬಾತ್ ರೂಮಿನಲ್ಲಿ 11 ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿ ಹಳದಿ ಬಣ್ಣದ ವಯರ್ ಸುತ್ತಿಕೊಂಡಿತ್ತು. ಬಾತ್ ರೂಮಿಗೆ ಹೊರಗಿನಿಂದ ಲಾಕ್ ಮಾಡಲಾಗಿದ್ದು, ಬಾಗಿಲು ಒಡೆದು ಬಾಲಕನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

    ವ್ಯಾಪಾರಿಯೊಬ್ಬರ ಮಗನಾಗಿರುವ ವಿದ್ಯಾರ್ಥಿಯ ಸಹೋದರ ಇತ್ತೀಚೆಗಷ್ಟೇ ಹಾವು ಕಚ್ಚಿ ಮೃತಪಟ್ಟಿದ್ದನು. ಸದ್ಯ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಇದೊಂದು ಹೇಯ ಕೃತ್ಯವಾಗಿದ್ದು, ಕೆಲ ದಿನಗಳಲ್ಲೇ ಪ್ರಕರಣದ ನಿಜಾಂಶ ತಿಳಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಶವವನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರೊಬ್ಬರು ತಿಳಿಸಿದ್ದಾರೆ.

    ಬಾಲಕನ ತಾಯಿ ಕೂಡ ಅದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆದರೆ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಹಾಕಿದ್ದರು. ಬಾಲಕನ ಸಹೋದರಿ ಕೂಡ ಅದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಹೀಗಾಗಿ ಸೋಮವಾರ ತರಗತಿ ಮುಗಿದ ಬಳಿಕ ಸಹೋದರಿ ಅಣ್ಣನ ಹುಡುಕಾಟ ನಡೆಸಿದ್ದಾಳೆ. ಈ ವೇಳೆ ಆತ ಎಲ್ಲೂ ಕಾಣಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಬಾಲಕಿ, ತನ್ನ ಶಿಕ್ಷಕಿಯರಿಗೆ ವಿಚಾರ ತಿಳಿಸಿದ್ದಾಳೆ. ಹೀಗಾಗಿ ಅವರು ಕೂಡ ಬಾಲಕನ ಪತ್ತೆಗೆ ಶಾಲೆಯೆಲ್ಲ ತಡಕಾಡಿದ್ದಾರೆ. ಈ ವೇಳೆ ಮಂಗಳವಾರ ಬಾಲಕನ ಶವ ಬಾತ್ ರೂಮಿನಲ್ಲಿ ಪತ್ತೆಯಾಗಿದೆ.

    ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಸ್ಥಳೀಯರು ಶಾಲೆಗೆ ಮತ್ತಿಗೆ ಹಾಕಿದ್ದಾರೆ. ಅಲ್ಲದೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಶಾಲೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆಯೇ ಶಾಲಾ ಪ್ರಾಂಶುಪಾಲ, ನಿರ್ದೇಶಕ ಹಾಗೂ ಐವರು ಟೀಚರ್ಸ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

  • ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್- ಬಾತ್‍ರೂಂ ನಲ್ಲಿ ಕ್ಯಾಮೆರಾ ಇಟ್ಟ ಪಕ್ಕದ್ಮನೆ ಅಂಕಲ್

    ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್- ಬಾತ್‍ರೂಂ ನಲ್ಲಿ ಕ್ಯಾಮೆರಾ ಇಟ್ಟ ಪಕ್ಕದ್ಮನೆ ಅಂಕಲ್

    ಬೆಂಗಳೂರು: ಬಾತ್ ರೂಂನಲ್ಲಿ ಪಕ್ಕದ ಮನೆಯವನು ಸಿಕ್ರೇಟ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿದ ಘಟನೆ ಬೆಂಗಳೂರಿನ ಮೈಕೋ ಲೇಔಟ್‍ನಲ್ಲಿ ನಡೆದಿದೆ.

    ಜೀವನ್ ಸೇಠ್ ಕ್ಯಾಮೆರಾ ಇಟ್ಟ ಆರೋಪಿ. ಜೀವನ್ ಸ್ವಲವೂ ಅನುಮಾನ ಬಾರದಂತೆ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ರೆಕಾರ್ಡ್ ಮಾಡಿದ್ದಾನೆ. ಸ್ನಾನದ ವೇಳೆ ಮಹಿಳೆ ಕಣ್ಣಿಗೆ ಕ್ಯಾಮೆರಾ ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಪಕ್ಕದ ಮನೆಯ ವ್ಯಕ್ತಿಯೇ ಬಾತ್ ರೂಮ್ ಕಿಟಕಿಗೆ ಕ್ಯಾಮೆರಾ ಫಿಕ್ಸ್ ಮಾಡಿರೋದು ಬೆಳಕಿಗೆ ಬಂದಿದೆ.

    ನಂತರ ಮಹಿಳೆ ಪಕ್ಕದ ಮನೆಯ ಆರೋಪಿ ಜೀವನ್ ಸೇಠ್ ವಿರುದ್ಧ ದೂರು ನೀಡಿದ್ದು, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಆರೋಪಿಯನ್ನ ಬಂಧಿಸಿದ್ದಾರೆ.

    ಆರೋಪಿ ಜೀವನ್ ಸೇಠ್ ಗೆ ಈಗಾಗಲೇ ಮದುವೆಯಾಗಿ, ಒಂದು ಮಗು ಕೂಡ ಇದೆ ಎಂದು ತಿಳಿದು ಬಂದಿದೆ.

  • ಉಪನ್ಯಾಸಕಿ ಸ್ನಾನ ಮಾಡುತ್ತಿದ್ದ ವೀಡಿಯೋ ಶೂಟ್ ಮಾಡುತ್ತಿದ್ದ ವಿಕೃತ ಕಾಮಿ!

    ಉಪನ್ಯಾಸಕಿ ಸ್ನಾನ ಮಾಡುತ್ತಿದ್ದ ವೀಡಿಯೋ ಶೂಟ್ ಮಾಡುತ್ತಿದ್ದ ವಿಕೃತ ಕಾಮಿ!

    ಹೈದರಾಬಾದ್: ಉಪನ್ಯಾಸಕಿಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ 25 ವರ್ಷದ ಯುವಕನೊಬ್ಬನನ್ನು ಹೈದರಾಬಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಆಗಿದ್ದೇನು?: ಇಲ್ಲಿನ ಕೆಪಿಎಚ್‍ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಿಜಿ ಹಾಸ್ಟೆಲ್ ನಲ್ಲಿ ಉಪನ್ಯಾಸಕಿಯೊಬ್ಬರು ವಾಸ್ತವ್ಯ ಹೂಡಿದ್ದರು. ಕಳೆದ ಗುರುವಾರ ಇವರು ಸ್ನಾನ ಮಾಡುತ್ತಿದ್ದಾಗ ಬಾತ್ ರೂಂ ಕಿಟಕಿಯಿಂದ ಮೊಬೈಲ್ ಫೋನೊಂದು ಕಾಣಿಸಿದೆ. ವೆಂಟಿಲೇಟರ್ ಮೂಲಕ ಮೊಬೈಲ್ ಕಾಣಿಸುತ್ತಿದ್ದಂತೆಯೇ ಉಪನ್ಯಾಸಕಿ ಕಿರುಚಾಡಲು ಆರಂಭಿಸಿದ್ದಾರೆ. ತಕ್ಷಣ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಬಳಿಕ ಉಪನ್ಯಾಸಕಿ ಕೆಪಿಎಚ್‍ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾನು ಸ್ನಾನ ಮಾಡುವಾಗ ಯಾರೋ ಬಾತ್ ರೂಂ ವೆಂಟಿಲೇಟರ್ ಮೂಲಕ ಮೊಬೈಲ್ ನಲ್ಲಿ ವೀಡಿಯೋ ಶೂಟ್ ಮಾಡಿದ್ದಾರೆ. ಆ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಗೋಲ್ಡ್ ಕಲರ್ ನಲ್ಲಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.

    ದೂರು ಸ್ವೀಕರಿಸಿದ ಪೊಲೀಸರು ಪಿಜಿ ಹಾಸ್ಟೆಲ್ ಗೆ ಆಗಮಿಸಿ, ಗೋಲ್ಡನ್ ಬಣ್ಣದ ಮೊಬೈಲ್ ಇರುವವರ ಹುಡುಕಾಟ ಶುರು ಮಾಡಿದ್ದಾರೆ. ಈ ವೇಳೆ ಇದೇ ಹಾಸ್ಟೆಲ್ ಮಾಲೀಕನ ಪುತ್ರ ಚಂದ್ರಹಾಸ್ ಎಂಬಾತನ ಬಳಿ ಚಿನ್ನದ ಬಣ್ಣದ ಮೊಬೈಲ್ ಪತ್ತೆಯಾಗಿದೆ.

    ಇದನ್ನು ಪರಿಶೀಲನೆ ಮಾಡಿದಾಗ ಮೊಬೈಲ್ ನಲ್ಲಿ ಯಾವುದೇ ವೀಡಿಯೋ ಇರಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ಯಾವಾಗ ತಾನಿನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಗೊತ್ತಾಗುತ್ತೋ ಚಂದ್ರಹಾಸ್ ತಪ್ಪೊಪ್ಪಿಕೊಳ್ಳುತ್ತಾನೆ. ‘ನಾನೇ ವೀಡಿಯೋ ಶೂಟ್ ಮಾಡಿದ್ದೆ. ಕೇವಲ 10 ಸೆಕೆಂಡ್ ಮಾತ್ರ ವೀಡಿಯೋ ಶೂಟ್ ಮಾಡಿದ್ದೆ. ಅಷ್ಟರಲ್ಲಿ ಉಪನ್ಯಾಸಕಿಗೆ ವಿಚಾರ ಗೊತ್ತಾಗಿ ಗದ್ದಲ ಶುರು ಮಾಡಿದರು. ಇದರಿಂದಾಗಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಲ್ಲಿ ನಾನು ಆ ವಿಡಿಯೋ ಡಿಲೀಟ್ ಮಾಡಿದೆ’ ಎಂದು ಹೇಳಿದ್ದಾನೆ. ಪೊಲೀಸರು ಆರೋಪಿ ಚಂದ್ರಹಾಸನನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಕೋರ್ಟ್ ಚಂದ್ರಹಾಸನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.