Tag: ಬಾಣಂತಿಯರ ಸಾವು

  • ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಬಿಜೆಪಿ ಸತ್ಯಶೋಧನಾ ತಂಡದಿಂದ ಪರಿಶೀಲನೆ

    ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಬಿಜೆಪಿ ಸತ್ಯಶೋಧನಾ ತಂಡದಿಂದ ಪರಿಶೀಲನೆ

    ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ರೇಣುಕಾ ಸಾವು ಪ್ರಕರಣದ ಹಿನ್ನೆಲೆ ಬಿಜೆಪಿ (BJP) ಸತ್ಯ ಶೋಧನಾ ಸಮಿತಿ ತಂಡ, ಮೃತಳ ಮನೆ ಮತ್ತು ಆಸ್ಪತ್ರೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬೀದರ್ (Bidar) ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ನೇತೃತ್ವದ ತಂಡ, ಕುಕನೂರು ತಾಲೂಕಿನ ಆಡೂರು ಗ್ರಾಮದ ಮೃತ ರೇಣುಕಾ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಬಳಿಕ ಮಾಹಿತಿ ಪಡೆದು ನಂತರ ರೇಣುಕಾ ಮೃತಪಟ್ಟಿದ್ದ ಕೊಪ್ಪಳ (Koppal) ಕಿಮ್ಸ್‌ನ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದರು.ಇದನ್ನೂ ಓದಿ: 40% ಆರೋಪಕ್ಕೆ ಕಾಂಗ್ರೆಸಿಗರು ಏನು ದಾಖಲೆ ಕೊಟ್ಟಿದ್ರು: ಬೊಮ್ಮಾಯಿ ಟಕ್ಕರ್

    ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ತಂಡಕ್ಕೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹೆಚ್‌ಒಡಿ ಡಾ.ಬಿ.ಎಚ್.ನಾರಾಯಣಿ ಅವರು ರೇಣುಕಾ ಸಾವಿನ ಬಗ್ಗೆ ಮಾಹಿತಿ ನೀಡಿದರು. ಮೃತ ರೇಣುಕಾ ಕುಷ್ಟಗಿಯಿಂದ ರೆಫರ್ ಆಗಿ, ಡಿ.30ರ ರಾತ್ರಿ 11 ಗಂಟೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಅವರು ಮಗು ಹೊಟ್ಟೆಯಲ್ಲೇ ಮೃತಪಟ್ಟು, ಚಿಂತಾಜನಕ ಸ್ಥಿತಿಯಲ್ಲೇ ಇಲ್ಲಿಗೆ ರೆಫರ್ ಆಗಿದ್ದರು. ಕೂಡಲೇ ನಮ್ಮ ವೈದ್ಯರು ಸಿಸೇರಿಯನ್ ಮೂಲಕ ಡೆಲಿವರಿ ಮಾಡಿದ್ದಾರೆ. ರಾತ್ರಿ ಒಂದು ಗಂಟೆ ಒಳಗೆ ಅವರನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಈ ನಡುವೆ ಎರಡು ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿ, ಡಿ.31ರ ಬೆಳಗ್ಗೆ ಮೃತಪಟ್ಟಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ಯಾವುದೇ ನಿರ್ಲಕ್ಷ ಇಲ್ಲ ಎಂದು ಮಾಹಿತಿ ನೀಡಿದರು.

    ಮೃತಳ ಕುಟುಂಬಸ್ಥರು ಮಾಡಿದ ಕೆಲ ಆರೋಪಗಳ ಬಗ್ಗೆ ಪ್ರಶ್ನಿಸಿ ಉತ್ತರ ಪಡೆದರು. ಬಿಜೆಪಿ ತಂಡದಲ್ಲಿದ್ದ ಡಾ.ಅರುಣಾ, ಡಾ.ನಾರಾಯಣ ಮತ್ತು ಡಾ.ಬಸವರಾಜ ಕ್ಯಾವಟರ್ ಅವರು, ಮೃತ ರೇಣುಕಾ ಆಸ್ಪತ್ರೆಗೆ ಬಂದಾಗ ಇದ್ದ ಸ್ಥಿತಿ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಮರಣೋತ್ತರ ಪರೀಕ್ಷೆ ಮಾಡದೇ ಶವ ಹಸ್ತಾಂತರ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ತಂಡದ ಸದಸ್ಯರು ತಾಕೀತು ಮಾಡಿದರು.

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ತಂಡದ ಶಾಸಕ ಶೈಲೇಂದ್ರ ಬೆಲ್ದಾಳೆ ಪ್ರಕರಣದಲ್ಲಿ ಪ್ರೋಸಿಜರ್ ಲ್ಯಾಪ್ಸ್ ಆಗಿದೆ. ಚಿಕಿತ್ಸೆ ನೀಡಲು ಕಾಲಹರಣ ಮಾಡಿದ್ದಾರೆ. ಉತ್ತಮ ಚಿಕಿತ್ಸೆ ನೀಡಿದ್ದರೆ ಉಳಿಸಿಕೊಳ್ಳಬಹುದಿತ್ತು. ಇಷ್ಟೆಲ್ಲ ನಡೆದರೂ ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಕ್ಷೇತ್ರದ ಶಾಸಕರು ತಿರುಗಿ ನೋಡಿಲ್ಲ. ಮರಣೋತ್ತರ ಪರೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತದೆ ಎಂದರು.

    ಬಾಣಂತಿಯರ ಸಾವಿಗೆ ಆರೋಗ್ಯ ಸಚಿವರೆ ನೇರ ಹೊಣೆ. ಔಷಧಿ ಖರೀದಿಯಲ್ಲಿ ಶೇ.30 ರಿಂದ ಶೇ.40ರಷ್ಟು ಲಂಚಾವತಾರ ನಡೆಯುತ್ತಿದೆ. ಅದಕ್ಕೆ ಈ ರೀತಿ ಸಾವು ಆಗುತ್ತಿವೆ. ಆರೋಗ್ಯ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಷ್ಟು ಜನ ಮೃತಪಟ್ಟರು ಸರ್ಕಾರ ತಿರುಗಿ ನೋಡುತ್ತಿಲ್ಲ. ನಮ್ಮ ವರದಿ ರಾಜ್ಯಾಧ್ಯಕ್ಷರಿಗೆ, ರಾಜ್ಯಪಾಲರಿಗೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಕೊಡುತ್ತೇವೆ ಎಂದರು.ಇದನ್ನೂ ಓದಿ: `ಕೈ’ಗೆ 60% ಕಮೀಷನ್ ಆರೋಪ: ಹೆಚ್‌ಡಿಕೆಗೆ ಬಿಜೆಪಿ ಸಾತ್ – ಸಿಎಂ ಸಚಿವರು ಟಕ್ಕರ್

  • ರಿಮ್ಸ್ ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು – ಬಾಣಂತಿಯರ ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ರಿಮ್ಸ್ ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು – ಬಾಣಂತಿಯರ ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ರಾಯಚೂರು: ಹೊಸ ವರ್ಷದ ಮೊದಲ ದಿನವೇ ಬಾಣಂತಿ ಹಾಗೂ ಶಿಶು ಸಾವನ್ನಪ್ಪಿರುವ ಘಟನೆ ರಾಯಚೂರಿನ (Raichuru) ರಿಮ್ಸ್ (RIMS) ಆಸ್ಪತ್ರೆಯಲ್ಲಿ ನಡೆದಿದೆ.

    ಮೃತ ಬಾಣಂತಿಯನ್ನು ದೇವದುರ್ಗ (Devadurga) ತಾಲೂಕಿನ ಮಸೀದಪೂರ ಗ್ರಾಮದ ಶಿವಲಿಂಗಮ್ಮ (22) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಂಡೀಪುರದಲ್ಲಿ ಐದು ಹುಲಿಗಳ ದರ್ಶನ – ನ್ಯೂ ಇಯರ್ ಹೊತ್ತಲ್ಲಿ ಪ್ರವಾಸಿಗರು ಫುಲ್ ಖುಷ್

    ಮಗು ಸಾವನ್ನಪ್ಪಿದ ಎರಡು ಗಂಟೆಗಳ ಬಳಿಕ ತಾಯಿ ಸಾವನ್ನಪ್ಪಿದ್ದಾಳೆ. ಬಾಣಂತಿ ಹಾಗೂ ಮಗುವಿನ ಸಾವಿನಿಂದ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ 11ನೇ ಬಾಣಂತಿ ಸಾವು ಇದಾಗಿದೆ. ಬಾಣಂತಿ ಸಾವಿಗೆ ಅಧಿಕ ರಕ್ತದೊತ್ತಡ ಹಾಗೂ ಆರೋಗ್ಯದಲ್ಲಾದ ಏರುಪೇರು ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

    ಡಿ.27 ರಂದು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಯಾಗಿತ್ತು. ಇಂದು (ಜ.01) ಫಲಕಾರಿಯಾಗದೇ ತಾಯಿ ಹಾಗೂ ಮಗು ಇಬ್ಬರು ಸಾವನ್ನಪ್ಪಿದ್ದಾರೆ. ಸಿಸೇರಿಯನ್ ಹೆರಿಗೆ ಬಳಿಕ ರಕ್ತಸ್ರಾವ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾಳೆ. ಜೊತೆಗೆ ಹುಟ್ಟಿದಾಗಿನಿಂದಲೂ ಇನ್ಫೆಕ್ಷನ್‌ಗೆ ಒಳಗಾಗಿದ್ದ ಶಿಶು ಕೂಡ ಕೊನೆಯುಸಿರೆಳೆದಿದೆ.ಇದನ್ನೂ ಓದಿ: ಹೊಸ ವರ್ಷದ ಆರಂಭದ ತಿಂಗಳಲ್ಲೇ ಬಸ್ ಟಿಕೆಟ್ ದರ ಏರಿಕೆಯಾಗುತ್ತಾ?

  • ಬಾಣಂತಿಯರ ಸಾವು ಪ್ರಕರಣ – ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ಮುಂದಾದ ಇಲಾಖೆ

    ಬಾಣಂತಿಯರ ಸಾವು ಪ್ರಕರಣ – ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ಮುಂದಾದ ಇಲಾಖೆ

    ರಾಯಚೂರು: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದ್ದು, ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದರಿಂದ ಎಚ್ಚೆತ್ತ ಜಿಲ್ಲಾ ಆರೋಗ್ಯ ಇಲಾಖೆ (District Health Department)  ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಶೀಲನೆಗೆ ಮುಂದಾಗಿದೆ.

    ಕಳೆದ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 10 ಬಾಣಂತಿಯರನ್ನು ಸಾವನ್ನಪ್ಪಿದ್ದು, ಇದೀಗ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಶೀಲನೆಗೆ ಮುಂದಾಗಿದ್ದು, ರಾಯಚೂರಿನ (Raichuru) ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (Primary Health Centre) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.ಇದನ್ನೂ ಓದಿ: ಲೋಕ್ ಅದಾಲತ್‌ನಲ್ಲಿ 73,628 ಪ್ರಕರಣ ಇತ್ಯರ್ಥ – ನ್ಯಾ.ಪ್ರಕಾಶ ಬನಸೋಡೆ

    ಬಾಣಂತಿಯರ ಆರೋಗ್ಯವನ್ನು ವಿಚಾರಿಸಿದ ಅಧಿಕಾರಿಗಳು ಆಸ್ಪತ್ರೆಯ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು. ಬಾಣಂತಿಯರು ಹೆರಿಗೆಯಾದ ನಂತರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಚಳಿಗಾಲ ಇರುವ ಕಾರಣ ಸಣ್ಣಮಕ್ಕಳನ್ನು ಸಹ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಏನಾದರೂ ತೊಂದರೆ ಉಂಟಾದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ಸಲಹೆ ನೀಡಿದರು.

    ಇನ್ನೂ ಆಸ್ಪತ್ರೆಗೆ ಬರುವ ಸಾರ್ವಜನಿಕರು, ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: Mumbai Boat Accident | ಪ್ರಯಾಣಿಕ ಹಡಗಿಗೆ ನೌಕಾಪಡೆಯ ಬೋಟ್‌ ಡಿಕ್ಕಿ; 13 ಮಂದಿ ದಾರುಣ ಸಾವು

  • ಬಾಣಂತಿಯರ ಸಾವು ಪ್ರಕರಣ – ವೈದ್ಯರ ವಿರುದ್ಧ ಕುಟುಂಬಸ್ಥರಿಂದ ಲೋಕಾಯುಕ್ತಕ್ಕೆ ದೂರು

    ಬಾಣಂತಿಯರ ಸಾವು ಪ್ರಕರಣ – ವೈದ್ಯರ ವಿರುದ್ಧ ಕುಟುಂಬಸ್ಥರಿಂದ ಲೋಕಾಯುಕ್ತಕ್ಕೆ ದೂರು

    ರಾಯಚೂರು: ಜಿಲ್ಲೆಯ ದೇವದುರ್ಗ (Devadruga) ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದ ಬಾಣಂತಿ ಸಾವು ಪ್ರಕರಣದ ಹಿನ್ನೆಲೆ ಬಾಣಂತಿ ಸಾವಿಗೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಬಾಣಂತಿಯ ತಾಯಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

    ದೇವದುರ್ಗ ತಾಲೂಕಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಾನಂದ, ವೈದ್ಯ ಡಾ.ಗಂಗಾಧರ, ನರ್ಸ್‌ಗಳಾದ ಜ್ಯೋತಿ, ಲಕ್ಷ್ಮೀ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ದೇವದುರ್ಗ ಪೊಲೀಸ್ ಠಾಣೆಯಲ್ಲಿಯೂ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಬಸ್ ಬಾರದಕ್ಕೆ ಸಾರಿಗೆ ಅಧಿಕಾರಿಗೆ ವಿದ್ಯಾರ್ಥಿಗಳ ತರಾಟೆ

    ನ.20 ರಂದು 30 ವರ್ಷದ ರೇಖಾ ದೇವದುರ್ಗ ತಾಲ್ಲೂಕು ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶುಸಹಿತ ಸಾವನ್ನಪ್ಪಿದ್ದರು. ಸರಿಯಾದ ಸಮಯಕ್ಕೆ ಹೆರಿಗೆ ಮಾಡದೆ, ಚಿಕಿತ್ಸೆ ನೀಡದೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯಿಸಿದ್ದಕ್ಕೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತ ಬಾಣಂತಿಯ ತಾಯಿ ಬಸಮ್ಮ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

    ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ದೇವದುರ್ಗ ತಾಲೂಕಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೃತಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ನಯನತಾರಾ ಐಟಂ ಡ್ಯಾನ್ಸ್?

  • ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ – ಆರ್‌. ಅಶೋಕ್‌

    ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ – ಆರ್‌. ಅಶೋಕ್‌

    – ಬಾಣಂತಿಯರ ಸಾವು, ಮೆಡಿಕಲ್ ಮಾಫಿಯಾ ವಿಚಾರ ಚರ್ಚೆ
    – ಸದನದಲ್ಲಿ ಗದ್ದಲ, ಕೋಲಾಹಲ

    ಬೆಂಗಳೂರು/ಬೆಳಗಾವಿ: ಬಾಣಂತಿಯರ ಸಾವು (Maternal Deaths) ಕರ್ನಾಟಕವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯಾಗಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗದೇ ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆರೋಪಿಸಿದರು.

    ವಿಧಾನಸಭೆ ಸದನದಲ್ಲಿ ಬಾಣಂತಿಯರ ಸಾವು, ಮೆಡಿಕಲ್ ಮಾಫಿಯಾ (Medical Mafia) ವಿಚಾರವಾಗಿ ಚರ್ಚೆ ನಡೆಯಿತು. ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್.‌ ಅಶೋಕ್‌ ಮಾತನಾಡಿದರು. ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ನಡುವೆ ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ

    ಬಾಣಂತಿಯರ ಸಾವು ಪ್ರಕರಣ ಕರ್ನಾಟಕವನ್ನೇ ಬೆಚ್ಚಿ ಬೀಳಿಸುವ ಘಟನೆಯಾಗಿದೆ. ಬಳ್ಳಾರಿ ಮಾತ್ರವಲ್ಲ ರಾಯಚೂರು, ಬೆಳಗಾವಿ, ಚಿತ್ರದುರ್ಗದಲ್ಲೂ ಬಾಣಂತಿಯರ ಸಾವಾಗಿದೆ. ಆರೋಗ್ಯ ಇಲಾಖೆ ರೋಗ ಪೀಡಿತ ಇಲಾಖೆ ಆಗಿದೆ. ಘಟನೆ ಆದ 6 ದಿನದ ಬಳಿಕ ಸಚಿವರು ಜಿಲ್ಲೆಗೆ ಹೋಗಿದ್ದಾರೆ. ವೈದ್ಯರು ತಪ್ಪು ಒಪ್ಪಿಕೊಳ್ಳುತ್ತಿಲ್ಲ, ಡ್ರಗ್ ಕಂಟ್ರೋಲರ್‌ನನ್ನು ಬಲಿಪಶು ಮಾಡಲಾಗಿದೆ ಎಂದು ದೂರಿದರಲ್ಲದೇ ಒಂದೆಡೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಜೋರಾಗಿದೆ. ಆರೋಗ್ಯ ಇಲಾಖೆ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ವಯನಾಡ್‌ನಲ್ಲಿ ಆನೆ ತುಳಿತ ಪ್ರಕರಣಕ್ಕೆ 15 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದ್ದರು. ಆದರೆ ಬಾಣಂತಿಯರ ಸಾವಿಗೆ 2 ಲಕ್ಷ ಪರಿಹಾರ ಕೊಡಲಾಗಿದೆ ಎಂದು ಆರೋಪಿಸಿದರು.

    ಮೃತಪಟ್ಟ ಮಹಿಳೆಯರನ್ನು (ಬಾಣಂತಿಯರು) ನೋಡಿದರೆ ನೋವಾಗುತ್ತೆ. ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗ್ತಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದರು. ಈ ವೇಳೆ ಅಶೋಕ್ ಮಾತಿಗೆ ಶಾಸಕ ಕೋನರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ನಾಯಕರಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಬೇಡಿ ಅಂತ ಸಂದೇಶ ಕೊಡ್ತಿದ್ದೀರಾ? ಜನರಿಗೆ ಏನು ಸಂದೇಶ ಹೋಗುತ್ತೆ? ಒಳ್ಳೆಯ ಸಲಹೆ ಕೊಡಿ. ಸರ್ಕಾರ ಆಸ್ಪತ್ರೆಗಳ ಪರಿಸ್ಥಿತಿ ಉತ್ತಮಗೊಳಿಸಿದೆ, ಸರಿಯಾಗಿ ಮಾತಾಡಿ. ಸರ್ಕಾರಿ ಆಸ್ಪತ್ರೆ, ವೈದ್ಯರ ಮೇಲೆ ಕೆಟ್ಟ ಭಾವನೆ ಬರುವಂತೆ ಮಾತನಾಡಬೇಡಿ ಎಂದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಏರ್ಪಟ್ಟಿತು.

    ಮುಂದುವರಿದು ಮಾತನಾಡಿದ ಅಶೋಕ್‌, ಅವಧಿ ಮೀರಿ 6 ತಿಂಗಳು ಮುಗಿದಿರೋ ಔಷಧಗಳ ಬಳಕೆ ಆಗಿದೆ. ಇದರ ಬಗ್ಗೆ ಡ್ರಗ್ ಕಂಟ್ರೋಲ್ ಬೋರ್ಡ್ ಹೇಳಿದೆ. ಇಂತ ಔಷಧ ಬಳಸದಂತೆ ಸೂಚಿಸಿದೆ, ಒಂದು ವೇಳೆ ಪೂರೈಸಿದ್ದರೆ ಯೂಸ್ ಮಾಡಬೇಡಿ ಎಂದಿದೆ. ಹಾಗಿದ್ದರೂ ಯೂಸ್ ಮಾಡಿದ್ದು ಸರಿಯೇ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಇದಕ್ಕೆ ಉತ್ತರಿಸಿದ ಸಚಿವ ದಿನೇಶ್‌ ಗುಂಡೂರಾವ್‌, ನಾವು ಈ ಔಷಧವನ್ನ ಸ್ಟಾಪ್ ಮಾಡಿದ್ದೆವು. ಕಂಪನಿಯನ್ನ ಬ್ಲಾಕ್ ಲಿಸ್‌ಗೆ ಹಾಕಿದ್ದೆವು. ಅವರು ಕೋರ್ಟ್‌ಗೆ ಹೋಗಿ ಸ್ಟೇ ತಂದ್ರು, ಸೆಂಟ್ರಲ್ ಡ್ರಗ್ ಕಮೀಷನ್ ಐವಿ ದ್ರಾವಣ ಸರಿಯಿದೆ ಅಂದಿತ್ತು. ಹೀಗಾದಾಗ ನಾವೇನು ಮಾಡಬೇಕು? ಎಂದು ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದರು.

    ಮಾತು ಮುಂದುವರಿಸಿದ ಆರ್‌. ಅಶೋಕ್‌, ನಕಲಿ ಔಷಧ ಪೂರೈಸುವ ಕಂಪನಿಗಳಿಗೆ ಈ ಸದನದಿಂದ ಸ್ಟ್ರಾಂಗ್ ಸಂದೇಶ ರವಾನೆ ಆಗಬೇಕು. ಹಾಲಿ ಜಡ್ಜ್ ನೇತೃತ್ವದಲ್ಲಿ ಬಾಣಂತಿಯರ ಸಾವು ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಂಡ್ಯದಲ್ಲೊಂದು ದುರಂತ ಪ್ರೇಮ ಕಥೆ | ಲವರ್‌ಗಾಗಿ ನದಿಗೆ ಹಾರಿದ ಗೃಹಿಣಿ – ಪ್ರಿಯಕರ ನೇಣಿಗೆ ಶರಣು

  • ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ

    ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ

    – ಬ್ಲಾಕ್‌ಲಿಸ್ಟ್ ಕಂಪನಿಯಿಂದ ಔಷಧಿ ಸರಬರಾಜು – ಮೆಡಿಕಲ್ ಮಾಫಿಯಾ ಎಂದ ಅಶೋಕ್

    ಬೆಳಗಾವಿ: ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ ಎಂದು ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಪ್ರತಿಕ್ರಿಯಿಸಿದ್ದಾರೆ.

    ಪರಿಷತ್‌ನಲ್ಲಿ ಮಾತನಾಡಿದ ಅವರು, ನ.11ರಂದು ಬಳ್ಳಾರಿ (Ballary) ಆಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. 34 ಸಿಸೇರಿಯನ್ ಆಪರೇಷನ್‌ನಲ್ಲಿ 7 ಪ್ರಕರಣಗಳಲ್ಲಿ ತೊಂದರೆ ಆಗಿದೆ. ಮೂತ್ರಪಿಂಡ ತೊಂದರೆ, ಬಹು ಅಂಗಾಂಗ ವೈಫಲ್ಯತೆದಿಂದ 7 ಪ್ರಕರಣಗಳಲ್ಲಿ 5 ಬಾಣಂತಿಯರು ಸಾವಿಗೀಡಾಗಿದ್ದಾರೆ. 2 ಬಾಣಂತಿಯರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಿಂಗರ್ ಲ್ಯಾಕ್ವೆಟ್ ದ್ರಾವಣ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯತೆ ತೋರಿರುವ ಔಷಧಿ ನಿಯಂತ್ರಕರಾದ ಡಾ.ಉಮೇಶ್‌ರನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!

    ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಡ್ರಗ್ ಕಂಪನಿ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಡ್ರಗ್ ಕಂಟ್ರೋಲರ್ ಜನರ್ ಅಫ್ ಇಂಡಿಯಾಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

    ಇದೇ ವೇಳೆ ಸಚಿವರು ಉತ್ತರ ನೀಡುತ್ತಿದ್ದಂತೆ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ ಮಾತನಾಡಿ, ಬ್ಲ್ಯಾಕ್‌ ಲಿಸ್ಟ್‌ಗೆ ಹಾಕಿದ ಕಂಪನಿಯಿಂದ ಹೇಗೆ ಸಪ್ಲೈ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಜೊತೆಗೆ ವಿಧಾನಸಭೆಯಲ್ಲಿ ಆರ್.ಅಶೋಕ್ ಮಾತನಾಡಿ, ಇದು ಮೆಡಿಕಲ್ ಮಾಫಿಯಾ, ಬಾಣಂತಿಯರ ಸಾವಿಗೆ ಸರ್ಕಾರ ಕಾರಣ ಎಂದು ಕಿಡಿಕಾರಿದರು.ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

  • PUBLiC TV Impact | ಬಾಣಂತಿಯರ ಸಾವಿನ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ – ಆಸ್ಪತ್ರೆಗೆ ಅಧಿಕಾರಿಗಳು ಭೇಟಿ

    PUBLiC TV Impact | ಬಾಣಂತಿಯರ ಸಾವಿನ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ – ಆಸ್ಪತ್ರೆಗೆ ಅಧಿಕಾರಿಗಳು ಭೇಟಿ

    ರಾಯಚೂರು: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಈ ಕುರಿತು `ಪಬ್ಲಿಕ್ ಟಿವಿ’ (PUBLIC TV) ವರದಿ ಬಿತ್ತರಿಸಿದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳೆದ ವಾರ ಜಿಲ್ಲೆಯ ರಿಮ್ಸ್ (RIMS) ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿದ್ದರು. ಈ ಮೂಲಕ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು. ಈ ಕುರಿತು `ಪಬ್ಲಿಕ್ ಟಿವಿ’ ಸುದ್ದಿಯೊಂದನ್ನು ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.ಇದನ್ನೂ ಓದಿ: ತವರಿಗೆ ಮರಳಿದ ವಿಶ್ವ ಚೆಸ್ ಚಾಂಪಿಯನ್ – ಗುಕೇಶ್‌ಗೆ ಚೆನ್ನೈನಲ್ಲಿ ಭರ್ಜರಿ ಸ್ವಾಗತ

    ರಾಯಚೂರು (Raichuru) ತಾಲೂಕಿನ ಮಾಟಮಾರಿ (Matamari) ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ನಿತೀಶ್ ತಂಡ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟ ಆರೋಪದ ಹಿನ್ನೆಲೆ ದಿಢೀರ್ ಭೇಟಿ ನೀಡಲಾಗಿದೆ. ಮೃತ ಬಾಣಂತಿ 32 ವರ್ಷದ ಈಶ್ವರಿ ಮಾಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಿಕೊಂಡಿಸಿದ್ದರು. ಬಳಿಕ ಮನೆಗೆ ತೆರಳಿದ್ದ ಅವರು, ಆರೋಗ್ಯ ಸಮಸ್ಯೆಯಿಂದಾಗಿ ಮತ್ತೆ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಆದರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರಿಮ್ಸ್ ಆಸ್ಪತ್ರೆಗೆ ತೆರಳಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಈ ಹಿನ್ನೆಲೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

    ರಾಯಚೂರು ಜಿಲ್ಲಾಧಿಕಾರಿ ಕೆ.ನಿತೀಶ್, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ಹಾಗೂ ಡಿಎಚ್‌ಓ ಡಾ. ಸುರೇಂದ್ರಬಾಬು ಭೇಟಿ ವೇಳೆ ಆರೋಗ್ಯ ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು. ಆರೋಗ್ಯ ಕೇಂದ್ರದ ಸೇವೆಗಳ ಬಗ್ಗೆ ರೋಗಿಗಳಿಂದಲೂ ಮಾಹಿತಿ ಪಡೆದರು.ಇದನ್ನೂ ಓದಿ: ಶಿವಣ್ಣ ನಟನೆಯ ಮತ್ತೊಂದು ಹೊಸ ಸಿನಿಮಾ ಘೋಷಣೆ- ಮಾಸ್‌ ಲೀಡರ್‌ಗೆ ಕೈ ಜೋಡಿಸಿದ ‌’ಗೂಗ್ಲಿ’ ಡೈರೆಕ್ಟರ್

  • ರಾಯಚೂರು | ಮತ್ತೋರ್ವ ಬಾಣಂತಿ ಸಾವು – ಮೃತರ ಸಂಖ್ಯೆ 10ಕ್ಕೆ ಏರಿಕೆ

    ರಾಯಚೂರು | ಮತ್ತೋರ್ವ ಬಾಣಂತಿ ಸಾವು – ಮೃತರ ಸಂಖ್ಯೆ 10ಕ್ಕೆ ಏರಿಕೆ

    ರಾಯಚೂರು: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದ್ದು, ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವುದು (Maternal Death) ಬೆಳಕಿಗೆ ಬಂದಿದೆ. ಈ ಪೈಕಿ ಮೂರು ತಿಂಗಳಲ್ಲಿ ಒಟ್ಟು 10 ಬಾಣಂತಿಯರು ಸಾವನ್ನಪ್ಪಿದ್ದಾರೆ.

    ಮೃತ ಬಾಣಂತಿಯನ್ನು ರಾಯಚೂರು (Raichuru) ತಾಲೂಕಿನ ಗಾರಲದಿನ್ನಿಯ (Garaldinni) ಮೂಲದ ಈಶ್ವರಿ (32) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪಾನಿಪುರಿ, ಗೋಬಿ ಮಂಚೂರಿ ಮಾರುವವರೇ ನಮಗಿಂತ ಸುಖವಾಗಿದ್ದಾರೆ: ಸರ್ಕಾರಿ ನೌಕರಿ ಬಗ್ಗೆ ತಹಸೀಲ್ದಾರ್‌ ಬೇಸರ

    ಕಳೆದ ಭಾನುವಾರ (ಡಿ.8) ಈಶ್ವರಿಗೆ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಜ ಹೆರಿಗೆಯಾಗಿತ್ತು. ಹೆರಿಗೆಯಾಗಿ ಮನೆಗೆ ತೆರಳಿದಾಗ ರಕ್ತಸ್ರಾವ, ಜ್ವರ ಹಾಗೂ ಆಯಾಸದಿಂದಾಗಿ ಮತ್ತೆ ಮಟಮಾರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದ ಹಿನ್ನೆಲೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ (ಡಿ.13) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಸದ್ಯ ಮೃತಳ ಕುಟುಂಬಸ್ಥರು ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದು, ರಿಮ್ಸ್ (RIMS) ಆಸ್ಪತ್ರೆಗೆ ರವಾನಿಸುವ ಮುನ್ನ ಮಟಮಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಯ ಮಾಡಿದ್ದಾರೆ. ಸರಿಯಾಗಿ ಸ್ಪಂದಿಸದ ಕಾರಣ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ.

    ಸಿಂಧನೂರಿನ (Sindhanuru) ನಾಲ್ವರು ಬಾಣಂತಿಯರ ಸಾವಿನ ಬಳಿಕ ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 9 ಬಾಣಂತಿಯರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 10ಕ್ಕೆ ಏರಿದಂತಾಗಿದೆ.ಇದನ್ನೂ ಓದಿ: 46 ವರ್ಷ ಹಳೆ ಕಾಲದ ಹಿಂದೂ ದೇವಾಲಯ ಪತ್ತೆ; ಸಂಭಲ್ ಮಸೀದಿ ಸುತ್ತ ಮುಂದುವರಿದ ತೆರವು ಕಾರ್ಯ

     

  • ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    – ಬಾಣಂತಿಯರ ಸಾವು ಪ್ರಕರಣ ತನಿಖೆಗೆ ಸಮಿತಿ ರಚನೆ

    ಬಳ್ಳಾರಿ/ಬೆಳಗಾವಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು (Ballari Maternal Death Case) ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಳ್ಳಾರಿ ಪ್ರಕರಣ ಹಸಿರುರುವಾಗಲೇ ಬೆಳಗಾವಿಯಲ್ಲಿ ಆಘಾತಕಾರಿ ಹಾಗೂ ಭಯಾನಕ ಸಂಗತಿ ಬಯಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿಯೇ ನವಜಾತ ಶಿಶುಗಳು, ಬಾಣಂತಿಯರು ದಾರುಣವಾಗಿ ಉಸಿರು ಚೆಲ್ಲಿದ್ದಾರೆ. ಕುಂದಾನಗರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಕೇವಲ ಆರೇ ತಿಂಗಳಲ್ಲಿ 322 ಶಿಶುಗಳು ಹಾಗೂ 29 ಬಾಣಂತಿಯರು ಮೃತಪಟ್ಟಿದ್ದಾರೆ.

    ಕಳೆದ ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್‌ವರೆಗೆ ಈ ಸಾವಾಗಿದೆ ಎಂದು ಡಿಹೆಚ್‌ಒ ಶರಣಪ್ಪ ಗಡೇದ್ ಮಾಹಿತಿ ನೀಡಿದ್ದಾರೆ. ಜಿಲ್ಲಾಸ್ಪತ್ರೆಯೊಂದರಲ್ಲೇ 172 ಶಿಶುಗಳು ಮಾರಣಹೋಮವಾಗಿದೆ. ಪ್ರತಿ ತಿಂಗಳು ಸರಾಸರಿ 20ರಿಂದ 25 ಮಕ್ಕಳು ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿವೆ. ಅಪೌಷ್ಠಿಕತೆಯಿಂದ ಸಾವುಗಳಾಗಿದೆ ಎಂದಿದ್ದಾರೆ. ನವಜಾತ ಶಿಶುಗಳು ಹಾಗೂ ಬಾಣಂತಿಯರ ಸಾವಿನ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ದಿನ ರಾತ್ರಿ 2-3 ಹುಡುಗರನ್ನ ಕರೆದುಕೊಂಡು ಬರುತ್ತಿದ್ದಳು – ಅಪಾರ್ಟ್ಮೆಂಟ್‌ ಮಾಲೀಕ ಕೆಂಪೇಗೌಡ

    ಆರು ತಿಂಗಳಲ್ಲಿ 322 ಮಕ್ಕಳು ಮೃತಪಟ್ಟಿರುವುದು ದೊಡ್ಡ ದುರಂತ. ಪೌಷ್ಠಿಕ ಆಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ. ಬಳ್ಳಾರಿ ಮಾದರಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ʻಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸರಣಿ ಸಾವಿನ ಬಗ್ಗೆ ತನಿಖೆ ನಡೆಸೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧ ಖರೀದಿ, ಬಾಣಂತಿಯರ ಸಾವಿಗೆ ಇದೇ ಕಾರಣ: ಜೋಶಿ

    ಪರಿಹಾರ ಘೋಷಣೆ:
    ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವನನ್ನ ಸರ್ಕಾರ ಇದೀಗ ಗಂಭಿರವಾಗಿ ಪರಿಗಣಿಸಿದೆ. ತನಿಖೆಗಾಗಿ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿದೆ. ಈ ಸಮಿತಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ತಜ್ಞರು ಸೇರಿ ಐವರು ಸದಸ್ಯರನ್ನು ಒಳಗೊಂಡಿದೆ. ಇದನ್ನೂ ಓದಿ: ನಕಲಿ ಅಡ್ರೆಸ್ ಕೊಟ್ಟು ಮಾದಕ ವಸ್ತು ಕೊರಿಯರ್ – 2 ತಿಂಗಳಾದ್ರೂ ಪತ್ತೆಯಾಗಿಲ್ಲ ವಿಳಾಸ

    ಔಷಧಿಗಳ ಖರೀದಿ ಮತ್ತು ಪರೀಕ್ಷೆಗೆ ಒಳಪಡಿಸುವಲ್ಲಿ ಆಗಿರುವ ನಿಯಮ ಉಲ್ಲಂಘನೆ ಬಗ್ಗೆ ಈ ಸಮಿತಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಇತ್ತ ಸಿಎಂ ಸಿದ್ದರಾಮಯ್ಯ ಬಾಣಂತಿಯರ ಸಾವು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಕಳಪೆ ಔಷಧಿಯಿಂದ ಮೃತಪಟ್ಟಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದಿದ್ದಾರೆ. ಅಲ್ಲದೇ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡೋದಾಗಿ ಘೋಷಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸೋದಾಗಿ ಹೇಳಿದ್ದಾರೆ.

  • ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

    ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ (Nursing Mother Death Case) ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ (Karnataka Lokayukta) ಮುಖ್ಯ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಆದೇಶಿಸಿದ್ದಾರೆ.

    ಇಂದು (ಡಿ.7) ಬೆಳಗ್ಗೆಯಷ್ಟೇ ಲೋಕಾಯುಕ್ತ ಅಧಿಕಾರಿಗಳು ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಬಾಣಂತಿಯರ ಸಾವಿನಲ್ಲಿ ಕರ್ನಾಟಕ ನಂ.1 ಆಗಿದೆ – ಆರ್‌. ಅಶೋಕ್

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಐವರು ಬಾಣಂತಿಯರ ಸಾವಿನ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಘಟನೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಔಷಧ ನಿಯಂತ್ರಕರು ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಯಮಿತ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಇದನ್ನೂ ಓದಿ: ಬಾಣಂತಿಯರ ಸಾವು ಕೇಸ್ – ಪ್ರಕರಣದಲ್ಲಿ ನನ್ನ ತಪ್ಪಿದ್ರೆ ರಾಜೀನಾಮೆ ಕೊಡಲು ಸಿದ್ಧ: ದಿನೇಶ್ ಗುಂಡೂರಾವ್

    ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳಿಗೆ ತನಿಖೆ ನಡೆಸುವ ಹೊಣೆ ನೀಡಲಾಗಿದೆ. ಸರ್ಚ್ ವಾರೆಂಟ್ ಪಡೆದು ಘಟನೆ ನಡೆದ ಆಸ್ಪತ್ರೆ, ಔಷಧ ಉಗ್ರಾಣ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ

    ಇದರೊಂದಿಗೆ ಇತರ ಜಿಲ್ಲೆಗಳಲ್ಲಿ ಇಂತಹ ದುರ್ಘಟನೆ ನಡೆಯುವ ಸಾಧ್ಯತೆ ಇದೆಯೇ ಎಂಬುದರ ಕುರಿತು ಮುನ್ನೆಚ್ಚರಿಕೆಯಾಗಿ ತಪಾಸಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.