Tag: ಬಾಡಿ ಶೇಮಿಂಗ್

  • ನನ್ನ ದೇಹದ ಬಗ್ಗೆ ಮಾತಾಡಬೇಡಿ, ನನಗಿಷ್ಟವಾಗಲ್ಲ: ನಟಿ ವಿದ್ಯಾ ಬಾಲನ್

    ನನ್ನ ದೇಹದ ಬಗ್ಗೆ ಮಾತಾಡಬೇಡಿ, ನನಗಿಷ್ಟವಾಗಲ್ಲ: ನಟಿ ವಿದ್ಯಾ ಬಾಲನ್

    ಬಾಲಿವುಡ್ (Bollywood) ಖ್ಯಾತ ನಟಿ ವಿದ್ಯಾ ಬಾಲನ್ (Vidya Balan) ಪದೇ ಪದೇ ಬಾಡಿ ಶೇಮಿಂಗ್ ಗೆ (Body shaming) ಒಳಗಾಗುತ್ತಿದ್ದಾರಂತೆ. ಹಾಗಾಗಿ ನನ್ನ ದೇಹದ ಬಗ್ಗೆ ಯಾರಾದರೂ ಮಾತನಾಡಿದರೆ ಬೇಸರವಾಗುತ್ತದೆ ಎಂದಿದ್ದಾರೆ. ಮನುಷ್ಯರು ದಪ್ಪಗಾಗುವುದು ಅಥವಾ ತೆಳ್ಳಗಾಗುವುದು ಒಂದೊಂದು ಸಾರಿ ಅವರ ಆಯ್ಕೆ ಆಗಿರುವುದಿಲ್ಲ. ನಾನಾ ಕಾರಣಗಳಿಂದಾಗಿ ಹಾಗೆ ಆಗುತ್ತದೆ. ಅದನ್ನೇ ಇಟ್ಟುಕೊಂಡು ಯಾರಿಗೂ ನೋವು ಮಾಡಬಾರದು ಎಂದಿದ್ದಾರೆ.

    ಇತ್ತೀಚೆಗಷ್ಟೇ ತಮಗಾದ ನೋವಿನ ಘಟನೆಯನ್ನೂ ಹಂಚಿಕೊಂಡಿರುವ ವಿದ್ಯಾ ಬಾಲನ್, ‘ನಾನು ಮಸಾಜ್ ಪಾರ್ಲರ್ ವೊಂದಕ್ಕೆ ಹೋಗಿದ್ದೆ. ಅಲ್ಲಿದ್ದವರು ನನ್ನನ್ನು ನೋಡಿ, ಏನ್ ಮೇಡಂ ಮತ್ತೆ ದಪ್ಪಾದ್ರಾ ಅಂದ್ರು. ಅವರ ಮಾತು ಕೇಳಿ ನನಗೆ ಸಾಕಷ್ಟು ಬೇಸರವಾಯಿತು. ನಾನು ಹೋಗಿದ್ದು ಮಸಾಜ್ ಪಾರ್ಲರ್ ಗೆ, ಅವರಿಂದ ಈ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಅಲ್ಲ’ ಎಂದಿದ್ದಾರೆ.  ಇದನ್ನೂ ಓದಿ:ಮಲ್ಲಿಕಾ ಸಿಂಗ್ ಪಾತ್ರ ಪರಿಚಯಿಸಿದ ನಿರ್ದೇಶಕ ಸಿಂಪಲ್ ಸುನಿ

    ಬಾಡಿ ಶೇಮಿಂಗ್ ಕುರಿತಾಗಿ ಈ ಹಿಂದೆ ವಿದ್ಯಾ ಬಾಲನ್ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಅದರಿಂದಾಗಿ ಆಗುವ ಮಾನಸಿಕ ಕಿರಿಕಿರಿ ಕುರಿತಾಗಿಯೂ ಹೇಳಿಕೊಂಡಿದ್ದಾರೆ. ಆದರೆ, ಈವರೆಗೂ ಅದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ ಎನ್ನುವ ಬೇಸರ ಅವರದ್ದು. ಹಾಗಾಗಿ ಪದೇ ಪದೇ ತಮಗಾದ ನೋವಿನ ಕ್ಷಣಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.

     

    ಹೊಸ ಹೊಸ ಸಿನಿಮಾ ಮತ್ತು ಪಾತ್ರಗಳ ಮೂಲಕ ವಿದ್ಯಾ ಬಾಲನ್ ವಿಶೇಷ ನಟಿ ಅನಿಸಿಕೊಂಡಿದ್ದಾರೆ. ನಾಯಕಿ ಪ್ರಧಾನ ಪಾತ್ರಗಳಲ್ಲೇ ಸಾಕಷ್ಟು ಅವರು ಮಿಂಚಿದ್ದಾರೆ. ಇಂತಹ ಪಾತ್ರಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿರುವುದಕ್ಕೆ ಅವರಿಗೆ ಹೆಮ್ಮೆ ಇದೆಯಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನನ್ನು ಕರಿಬೆಕ್ಕು ಅಂತ ಹೀಯಾಳಿಸುತ್ತಿದ್ದರು: ಕಣ್ಣೀರಿಟ್ಟ ಪ್ರಿಯಾಂಕಾ ಚೋಪ್ರಾ

    ನನ್ನನ್ನು ಕರಿಬೆಕ್ಕು ಅಂತ ಹೀಯಾಳಿಸುತ್ತಿದ್ದರು: ಕಣ್ಣೀರಿಟ್ಟ ಪ್ರಿಯಾಂಕಾ ಚೋಪ್ರಾ

    ವಕಾಶ ಸಿಕ್ಕಾಗೆಲ್ಲ ಮಹಿಳಾ ದೌರ್ಜನ್ಯ, ಮಹಿಳಾಪರವಾದ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra). ಈ ಬಾರಿ ಅವರು ತಮ್ಮ ಬಗ್ಗೆ ತಾವೇ ಹೇಳಿಕೊಂಡಿದ್ದಾರೆ. ತಮಗಾದ ಅವಮಾನವನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬಂದಾಗ ತಮ್ಮನ್ನು ಯಾರಿಗೆ ಹೋಲಿಸಿ ಮಾತನಾಡುತ್ತಿದ್ದರು ಎನ್ನುವುದರ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

    ಬಾಡಿ ಶೇಮಿಂಗ್ (Body Shaming) ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಸಿಲೆಬ್ರಿಟಿಗಳು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದೀಗ ಆ ಸಾಲಿಗೆ ಪ್ರಿಯಾಂಕಾ ಚೋಪ್ರಾ ಕೂಡ ಸೇರಿಕೊಂಡಿದ್ದಾರೆ. ದಕ್ಷಿಣ ಏಷ್ಯಾಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿರುವ ಅವರು, ತಮ್ಮನ್ನು ಸಿನಿಮಾ ರಂಗಕ್ಕೆ ಬಂದಾಗ ಕರಿಬೆಕ್ಕಿಗೆ ಹೋಲಿಸುತ್ತಿದ್ದರು ಎಂದು ತುಸು ಭಾವುಕರಾಗಿಯೇ ಹೇಳಿದ್ದಾರೆ. ತಮ್ಮ ಮೈಬಣ್ಣದ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ಸಿನಿಮಾ ರಂಗಕ್ಕೆ ಬಂದಾಗ ತುಸು ದಪ್ಪ ಇದ್ದೆ. ನನ್ನ ಮೈಬಣ್ಣ ಕೂಡ ಕಪ್ಪು. ಅವೆರಡನ್ನೂ ಅಸ್ತ್ರವಾಗಿ ಬಳಸಿಕೊಂಡು ನನ್ನನ್ನು ಹೀಯಾಳಿಸುತ್ತಿದ್ದರು. ಪ್ರಾಣಿಗಳಿಗೆ ಹೋಲಿಸಿ ತಮಾಷೆ ಮಾಡುತ್ತಿದ್ದರು. ನನಗೆ ತುಂಬಾ ನೋವಾಗುತ್ತಿತ್ತು. ಎಷ್ಟೋ ಬಾರಿ ಅತ್ತಿದ್ದೇನೆ. ಆ ಸಂಕಟವನ್ನು ದಾಟಿಕೊಳ್ಳಲು ನಾನು ಏನೆಲ್ಲ ಮಾಡಬೇಕಾಯಿತು ಎಂದು ಅವರು ಮಾತನಾಡಿದ್ದಾರೆ.

  • ನಿಮ್ಮ ಬಾಡಿಯನ್ನು ನೀವೇ ಲವ್ ಮಾಡಬೇಕು : ರಾಗಿಣಿ

    ನಿಮ್ಮ ಬಾಡಿಯನ್ನು ನೀವೇ ಲವ್ ಮಾಡಬೇಕು : ರಾಗಿಣಿ

    ಸಿನಿಮಾ, ಕಿರುತೆರೆ ಮತ್ತು ಮಾಡಲಿಂಗ್ ಜಗತ್ತಿನಲ್ಲಿ ಬಾಡಿ ಶೇಮಿಂಗ್‍ ಕುರಿತು ಸಾಕಷ್ಟು ಘಟನೆಗಳು ನಡೆಯುತ್ತಿವೆ. ಅಲ್ಲದೇ, ತಮ್ಮ ದೇಹವನ್ನು ಸುಂದರವಾಗಿಟ್ಟುಕೊಳ್ಳಲು ನಟಿಯರು ಸ್ವಯಂ ಪ್ರೇರಣೆಗಿಂತ, ಇತರರು ಅವರ ಮೇಲೆ ಹಾಕುವ ಒತ್ತಡವೇ ಕಾರಣ ಎನ್ನುವ ಮಾತೂ ಹರಿದಾಡುತ್ತಿವೆ. ಬಾಡಿ ಶೇಮಿಂಗ್ ಕಾರಣದಿಂದಾಗಿಯೇ ಹಲವರು ಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಮತ್ತು ದೇಹವು ಸುಂದರವಾಗಿ ಇಟ್ಟುಕೊಳ್ಳಲು ಸರ್ಜರಿಗೂ ಒಳಗಾಗಿ ಪ್ರಾಣಹಾನಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸದ್ದಿಲ್ಲದೇ ಶುರುವಾಯ್ತು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ : ಮೊದಲ ದಿನವೇ ಫೋಟೋ ಲೀಕ್

    ಮೊನ್ನೆಯಷ್ಟೇ ಕಿರುತೆರೆ ನಟಿ ಚೇತನಾ ರಾಜ್ ಇಂಥದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿ ಪ್ರಾಣವನ್ನೇ ಕಳೆದುಕೊಂಡರು. ಅವರು ತೂಕ ಇಳಿಸಿಕೊಳ್ಳುವುದಕ್ಕಾಗಿ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣಬಿಟ್ಟರು. ಈ ಕುರಿತು ಸಿನಿಮಾ ರಂಗದಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಬಾಡಿ ಶೇಮಿಂಗ್ ಕುರಿತಾಗಿ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಆ ಸಾಲಿಗೆ ಇದೀಗ ರಾಗಿಣಿ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ನಿನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ರಾಗಿಣಿ, ಚೇತನರಾಜ್ ಪ್ರಕರಣವನ್ನು ನೆನಪಿಸಿಕೊಂಡು, ಮಾತನಾಡಿ ‘ನಾವು ಯಾರು ಏನು ಅನ್ನುತ್ತಾರೆ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ನಮ್ಮ ದೇಹವನ್ನು ಮೊದಲು ನಾವು ಪ್ರೀತಿಸಬೇಕು. ಹಾಗೆ ಪ್ರೀತಿಸಿಕೊಂಡರೆ ಮಾತ್ರ, ಇಂತಹ ಅನಾಹುತಗಳು ನಡೆಯುವುದಿಲ್ಲ. ಆ ಹುಡುಗಿ ಸಾವು ನಿಜಕ್ಕೂ ನನಗೆ ಆಘಾತ ತರಿಸಿದೆ’ ಎಂದು ರಾಗಿಣಿ ಮಾತನಾಡಿದ್ದಾರೆ.

  • ದೇಹಾಕಾರದಲ್ಲಿ ನನಗೂ ಸಮಸ್ಯೆ ಇವೆ, ಬಾಡಿ ಶೇಮಿಂಗ್ ಬಗ್ಗೆ ಶಾಂಕಿಗ್ ಸುದ್ದಿ ಕೊಟ್ಟ ವೈಷ್ಣವಿ

    ದೇಹಾಕಾರದಲ್ಲಿ ನನಗೂ ಸಮಸ್ಯೆ ಇವೆ, ಬಾಡಿ ಶೇಮಿಂಗ್ ಬಗ್ಗೆ ಶಾಂಕಿಗ್ ಸುದ್ದಿ ಕೊಟ್ಟ ವೈಷ್ಣವಿ

    ತ್ತೀಚಿನ ದಿನಗಳಲ್ಲಿ ತಮಗಾದ ಬಾಡಿ ಶೇಮಿಂಗ್ ಬಗ್ಗೆ ಹಲವಾರು ನಟಿಯರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ತಮಗೆ ಯಾವೆಲ್ಲ ರೀತಿಯಲ್ಲಿ ಬಾಡಿ ಶೇಮಿಂಗ್ ಆಯಿತು ಎನ್ನುವುದನ್ನು ಸವಿವರವಾಗಿ ಹೇಳಿಕೊಳ್ಳುತ್ತಿದ್ದಾರೆ. ಈಗ ತಮಗೂ ಆದಂತಹ ಕಹಿ ಅನುಭವವನ್ನು ಕನ್ನಡ ಕಿರುತೆರೆಯ ಖ್ಯಾತ ನಟಿ ಮತ್ತು ನಿರೂಪಕಿ ವೈಷ್ಣವಿ ಗೌಡ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಸದ್ಯ ವೈಷ್ಣವಿ ಗೌಡ ಅವರನ್ನು ನೋಡಿದರೆ, ಅವರಿಗೆ ಡುಮ್ಮಿ ಅನ್ನುವುದಕ್ಕೆ ಸಾಧ್ಯನಾ ಎಂದು ಸಾವಿರ ಬಾರಿ ಯೋಚಿಸುವಷ್ಟು ಸಣ್ಣಗಿದ್ದಾರೆ. ಆದರೆ, ಅವರನ್ನು ಹಲವು ವರ್ಷಗಳ ಹಿಂದೆ ‘ಡುಮ್ಮಿ ಡುಮ್ಮಿ’ ಎಂದು ರೇಗಿಸುತ್ತಿದ್ದರಂತೆ. ‘ನಾನು ಹೈಸ್ಕೂಲ್ ದಿನಗಳಲ್ಲಿದ್ದಾಗ ಅಪ್ಪ ಅಮ್ಮನೇ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ಕುಳಿತುಕೊಂಡು ತಿನ್ನುವುದಷ್ಟೇ ನನ್ನ ಕೆಲಸವಾಗಿತ್ತು. ಹಾಗಾಗಿ ದಪ್ಪ ಆಗಿದ್ದೆ. ಎಲ್ಲರೂ ನನ್ನನ್ನು ಡುಮ್ಮಿ ಎಂದು ರೇಗಿಸುತ್ತಿದ್ದರು. ನನ್ನ ಹೈಟ್ ಕಡಿಮೆ ಇದ್ದ ಕಾರಣಕ್ಕೆ ನಾನು ಡುಮ್ಮಿಯ ರೀತಿಯಲ್ಲೇ ಕಾಣಿಸುತ್ತಿದ್ದೆ. ಜನರು ಹಾಗೆ ರೇಗಿಸಿದಾಗ ಕೋಪ ಬರುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ ವೈಷ್ಣವಿ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಅಲ್ಲದೇ ಈಗಲೂ ಅವರ ದೇಹಾಕಾರದಲ್ಲಿ ಕೆಲ ಸಮಸ್ಯೆಗಳು ಇವೆಯಂತೆ. ಅದನ್ನು ದಾಟಿಕೊಳ್ಳುವ ಪ್ರಯತ್ನವನ್ನು ಅವರು ಈಗಲೂ ಮಾಡುತ್ತಿದ್ದಾರಂತೆ. ‘ನಾನು ಈಗ ಸಣ್ಣಗಿದ್ದೇನೆ. ಆದರೂ, ನನ್ನ ದೇಹಾಕಾರದಲ್ಲಿ ಕೆಲ ನ್ಯೂನ್ಯತೆಗಳು ಇವೆ. ಅವುಗಳನ್ನು ಈಗಲೂ ನಾನು ಸರಿ ಪಡಿಸಿಕೊಳ್ಳುತ್ತಲೇ ಇರುತ್ತೇನೆ. ಯಾವುದೂ ಫರ್ ಫೆಕ್ಟ್ ಅಲ್ಲ. ನಿರಂತರವಾಗಿ ನಮ್ಮ ಸೌಂದರ್ಯವನ್ನು ನಾವು ಕಾಪಾಡಿಕೊಳ್ಳುತ್ತಲೇ ಇರಬೇಕು. ಜನರು ಅದಕ್ಕೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಬಾರದು’ ಎನ್ನುತ್ತಾರೆ ವೈಷ್ಣವಿ.

    ನಟಿ ವೈಷ್ಣವಿ ಈ ಕುರಿತು ಇಷ್ಟೊಂದು ಮಾತನಾಡುವುದಕ್ಕೂ ಕಾರಣವಿದೆ. ಈಗ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಹೆಸರಿನ ಈ ಸಿನಿಮಾದಲ್ಲಿ ತೊನ್ನು (ವಿಟಿಲಿಗೋ) ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನ ಕಥೆಯನ್ನು ಹೇಳಲಾಗುತ್ತಿದೆಯಂತೆ. ಈ ಚಿತ್ರಕ್ಕೆ ವೈಷ್ಣವಿ ನಾಯಕಿ. ಸಿನಿಮಾದ ಕಥಾ ಸಾರಾಂಶವನ್ನು ಹೇಳುತ್ತಾ, ತಮಗೂ ಆಗಿದ್ದ ಬಾಡಿ ಶೇಮಿಂಗ್ ಬಗ್ಗೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  • ದಪ್ಪಗಿರೋರಿಗೆ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ : ಹಿಗ್ಗಾಮುಗ್ಗ ಝಾಡಿಸಿದ ಗಾಳಿಪಟ ನೀತು

    ದಪ್ಪಗಿರೋರಿಗೆ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ : ಹಿಗ್ಗಾಮುಗ್ಗ ಝಾಡಿಸಿದ ಗಾಳಿಪಟ ನೀತು

    ಬಾಡಿ ಶೇಮಿಂಗ್ ಬಗ್ಗೆ ಅನೇಕ ನಟಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅವರಿಗಾದ ಕಹಿ ಘಟನೆಗಳನ್ನು ಮತ್ತು ಕಿರಿಕಿರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಬಾಡಿ ಶೇಮಿಂಗ್ ಕಾರಣಕ್ಕಾಗಿಯೇ ಮಲಯಾಳಂ ಸುಪ್ರಸಿದ್ಧ ನಟರೊಬ್ಬರು ಮಹಿಳೆಯರಿಗೆ ಕ್ಷಮೆ ಕೇಳಿದ್ದರು. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

    ಇಂತಹ ಕೆಟ್ಟ ಅನುಭವ ಕನ್ನಡದ ಅನೇಕ ನಟಿಯರಿಗೂ ಆಗಿದೆ. ಹಾಗಾಗಿ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ ತಮಗಾದ ನೋವಿನ ಸಂಗತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ದಪ್ಪಗಿರುವ ನಟಿಯರನ್ನು ಈ ಸಮಾಜದ ಕೆಲ ಹುಳುಗಳು ಹೇಗೆಲ್ಲ ಕಾಡುತ್ತವೆ ಎನ್ನುವುದನ್ನು ಸಾಕ್ಷಿ ಸಮೇತ ಅವರು ತೆರೆದಿಟ್ಟಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ಓವರ್ ಟು ನೀತು ಶೆಟ್ಟಿ….

    ಪ್ರತಿ ಸಲವೂ ಚಾನೆಲ್ ವೊಂದರ ನನ್ನ ವಿಡಿಯೋ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೆ ಕಾಮೆಂಟ್ ಸೆಕ್ಷನ್ ಅಲ್ಲಿ ಸಿಗುತ್ತಾರೆ. ಇವರ ಪ್ರಕಾರ ತೆಳ್ಳಗಿಲ್ದೆ ಇರೋರು ಲೂಸ್ ಫಿಟ್ಟಿಂಗ್ ಬಟ್ಟೆ ಮಾತ್ರ ಹಾಕೋಕ್ಕೆ ಯೋಗ್ಯರು. ಇವರ ಪ್ರಕಾರ ದುಂಡಗಿರುವವರು ತುಂಬಾ ‘ಮಜಾ/s**’ ಮಾಡುವುದರಿಂದ ಹಾಗೆ ಆಗಿದ್ದಾರೆ. ಹಾಗಾಗಿ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದು ಸರಿ. ಇವರ ಪ್ರಕಾರ ಪ್ಲಸ್ ಸೈಟ್ ಇರುವವರ ಮೇಲೆ ಯಾರಿಗೂ ಪ್ರೀತಿ, ರೋಮ್ಯಾನ್ಸ್, ಹುಟ್ಟಲ್ಲ. ಬ್ಯುಟಿಫುಲ್ ಅಂತ ಪರಿಗಣಿಸಬಾರದು. ಹಿಡಿಂಬಾ/ ರಾಕ್ಷಿಸಯಾಗೋಕೆ ಮಾತ್ರ ನಾವು ಲಾಯಕ್. ಪ್ಲಸ್ ಸೈಜ್ ನವರು ಜೀವನ ಪರ್ಯಂತ ದುಃಖದಲ್ಲಿ ಡಯಟ್ ಹಾಗೂ ವರ್ಕೌಟ್ ಬಗ್ಗೆನೇ ಚಿಂತಿಸಿ, ತಗ್ಗಿ ಬಗ್ಗಿ ಸಮಾಜದಿಂದ ವಿಮುಖರಾಗಿ ಬದುಕಬೇಕು. ಬೇರೆ ಯಾವ ವಿಷಯದ ಬಗ್ಗೆಯೂ ನಮಗೆ ಒಪಿನಿಯನ್ ಇರಲೇಬಾರದು. ಇದ್ರೆ, ಮೊದಲು ಸಣ್ಣ ಆಗು, ಆಮೇಲೆ ಮಾತಾಡು’ ಎನ್ನುತ್ತಾರೆ. ‘ಪ್ಲಸ್ ಸೈಜ್’ ಅವ್ರು ಧೈರ್ಯವಾಗಿ ಪಬ್ಲಿಕ್ನಲ್ಲಿ ಅಥವಾ ಟೀವಿಯಲ್ಲಿ ಬಿಂದಾಸ್ ಆಗಿ ಕಾಣಿಸ್ಕೊಂಡ್ರೆ , ಅವರ ‘ಗಟ್ಸ್’ ಬಗ್ಗೆ ಇವರಿಗೆ  ಸಿಟ್ಟು ಬರುತ್ತೆ. ದಪ್ಪ ಇರೋವ್ರು  ಆರೋಗ್ಯವಂತರಲ್ಲ ಅನ್ನೋದೇ ‘ ಫ್ಯಾಕ್ಟ್’  ಅಂತ ಇವರು ನಂಬಿದ್ದಾರೆ. ತೆಳ್ಳಗಿರುವವರೆಲ್ಲ ಫಿಟ್ ಅಂಡ್ ಫೈನ್ ಅಂತ ಅಂದುಕೊಂಡಿರ್ತಾರೆ. ತೆಳ್ಳಗಿಲ್ದೇ ಇರುವವರನ್ನು ಪ್ರಾಣಿಗಳಿಗೆ ಹೋಲಿಸುವುದು ಇವರ  ಹಕ್ಕು ಮಾಡಿಕೊಂಡಿರುತ್ತಾರೆ. ಪ್ಲಸ್ ಸೈಜ್ ಇರೋದ್ರಿಂದ ಅವಕಾಶ ವಂಚಿತರಾಗುವುದು  ಸರಿಯಾಗೇ ಇದೆ ಅಂತ ಇವರಿಗನಿಸುತ್ತೆ.ಇವರು  ಈ ಸಮಾಜದ ‘FatPhobic’ ಜನ. ಇವರ  ಯೋಚನೆಗಳು ತುಂಬಾನೇ ಹಳೆಯ ಕಾಲದ್ದು, ತುಕ್ಕು ಹಿಡಿದದ್ದು ಹಾಗೂ ತುಂಬಾ ವಿಷದಿಂದ ತುಂಬಿದ್ದು.ಇದು ‘ಫ್ಯಾಟ್ ಫೋಬಿಯಾ’ ದ ವಿಶ್ಲೇಷಣೆ..ಪ್ಲಸ್ ಸೈಜ್ ಜನರು ವಿಶ್ವದಾದ್ಯoತ ಈಗ ಅಡಗಿ ಕೂರ್ತಾ ಇಲ್ಲ. ತೆಗಳಿಕೆ, ಅವಮಾನ, ನೋವಿನಿಂದ ಎದ್ದು ಫೀನಿಕ್ಸ್ ನಂತೇ ಬದುಕ್ತಾ ಇದ್ದಾರೆ…  ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    We are Here

    We are Real

    We are not Victims

    WE WILL SHOW UP

    ಎಂದು ಬರೆದಿರುವ ನೀತು ಶೆಟ್ಟಿ, “ಹಾಂ…ಈ ಫೋಟೋದಲ್ಲಿ ನನ್ನ ಪ್ರಕಾರ ನಾನು ಮುದ್ದಾಗಿಯೇ ಕಾಣಿಸ್ತಾ ಇದ್ದೀನಿ” ಎಂದು ಫೋಟೋ ಶೇರ್ ಮಾಡಿದ್ದಾರೆ.

  • 18 ವರ್ಷದವಳಿದ್ದಾಗಲೇ ಸ್ತನ ಕಸಿ ಮಾಡಲು ಸಲಹೆ ಕೊಟ್ಟಿದ್ದರು: ದೀಪಿಕಾ

    18 ವರ್ಷದವಳಿದ್ದಾಗಲೇ ಸ್ತನ ಕಸಿ ಮಾಡಲು ಸಲಹೆ ಕೊಟ್ಟಿದ್ದರು: ದೀಪಿಕಾ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತುಂಬಾ ಓಪನ್ ಅಪ್ ಆಗಿ ಮಾತನಾಡುತ್ತಾರೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಈಗ ಅವರು ತಮ್ಮ ದೇಹ ಸೌಂದರ್ಯದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ನನಗೊಮ್ಮೆ ಬಾಡಿ ಶೇಮಿಂಗ್ ಆಗಿತ್ತು. ಆಗ ನನಗೆ ಇನ್ನೂ 18 ವರ್ಷವಾಗಿತ್ತು. 18 ವರ್ಷಕ್ಕೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಒಬ್ಬರು ಸಲಹೆ ನೀಡಿದ್ದರು ಎಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ದೀಪಿಕಾ ಪಡುಕೋಣೆ ಫಿಲಂಫೇರ್ ಸಂದರ್ಶನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ನಿಮಗೆ ಒಳ್ಳೆಯ ಮತ್ತು ಕೆಟ್ಟ ಸಲಹೆಯನ್ನು ಯಾರಾದರೂ ನೀಡಿದ್ದಾರಾ? ಎಂದು ಕೇಳಲಾಗಿತ್ತು. ಒಳ್ಳೆಯ ಸಲಹೆಯನ್ನು ನನಗೆ ಶಾರೂಖ್ ಖಾನ್ ಕೊಟ್ಟಿದ್ದಾರೆ. 15 ವರ್ಷಗಳ ಹಿಂದೆ ನಾನು ಅವರೊಂದಿಗೆ ಸಿನಿಮಾ ಮಾಡಿದ್ದೆ. ಅವರು ನನಗೆ ಸಾಕಷ್ಟು ಒಳ್ಳೆಯ ಹಾಗೂ ಮೌಲ್ಯಯುತವಾದ ಸಲಹೆ ಕೊಟ್ಟಿದ್ದಾರೆ. ನಿಮಗೆ ಒಳ್ಳೆಯ ಸಮಯ ಬರುತ್ತದೆ, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತೀರಿ, ಒಳ್ಳೆಯ ಕ್ಷಣಗಳನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದ್ದರು ಎಂದಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ನನಗೆ ಕೆಟ್ಟ ಸಲಹೆಯನ್ನು ಒಬ್ಬರು ಕೊಟ್ಟಿದ್ದರು. ನಾನು 18 ವರ್ಷವಳಿದ್ದಾಗಲೇ ನನಗೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಹೇಳಿದ್ದರು. ಆದರೆ ನಾನು ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು. ದೀಪಿಕಾ ಪಡುಕೋಣೆ ಅವರ ಈ ಉತ್ತರ ಮಾತ್ರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿರುವುದು ಅಂತೂ ಸತ್ಯ.  ಇದನ್ನೂ ಓದಿ: ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್

    ಗೆಹ್ರೈಯಾನ್ ಸಿನಿಮಾವನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ನಟಿಸಿದ್ದರು. ಅಲ್ಲೆದೆ ಈ ಸಿನಿಮಾದಲ್ಲಿ ದೀಪಿಕಾ ಭಿನ್ನ ಪಾತ್ರವನ್ನು ನಿರ್ವಹಿಸಿದ್ದು, ಪ್ರೇಕ್ಷಕರು ಯಾವ ರೀತಿ ತನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಅವರಲ್ಲಿಯೂ ಇತ್ತು. ಇದೇ ತಿಂಗಳು ಗೆಹ್ರೈಯಾನ್ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಸಹ ಆಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾ ತಾರೆಯರು ಮತ್ತು ವಿಮರ್ಶಕರಿಂದ ದೀಪಿಕಾ ಅಭಿನಯಕ್ಕೆ ಮತ್ತು ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!