Tag: ಬಾಡಿ ಬಿಲ್ಡಿಂಗ್

  • ಹೆಚ್ಚು ಅಭಿಮಾನಿಗಳನ್ನು ಗಳಿಸುವ ಹುಚ್ಚು – 5 ಮಕ್ಕಳ ತಾಯಿಯಾಗಿದ್ದ ಬಾಡಿ ಬಿಲ್ಡರ್ ಮಹಿಳೆ ಸಾವು

    ಹೆಚ್ಚು ಅಭಿಮಾನಿಗಳನ್ನು ಗಳಿಸುವ ಹುಚ್ಚು – 5 ಮಕ್ಕಳ ತಾಯಿಯಾಗಿದ್ದ ಬಾಡಿ ಬಿಲ್ಡರ್ ಮಹಿಳೆ ಸಾವು

    ವೆಲ್ಲಿಂಗ್ಟನ್‌: 5 ಮಕ್ಕಳ ತಾಯಿಯಾಗಿದ್ದ ನ್ಯೂಜಿಲೆಂಡ್‌ನ (New Zealand) ಖ್ಯಾತ ಬಾಡಿಬಿಲ್ಡರ್‌ ಮಹಿಳೆ ರೇಚೆಲ್ ಚೇಸ್ (41) (Raechelle Chase) ನಿಧನರಾಗಿದ್ದಾರೆ.

    5 ಮಕ್ಕಳ ತಾಯಿಯಾಗಿದ್ದ ಚೇಸ್‌ ಫೇಸ್‌ಬುಕ್‌ನಲ್ಲಿ 14 ಲಕ್ಷ ಫಾಲೋವರ್ಸ್‌ಗಳನ್ನ ಹೊಂದಿದ್ದರು. ಸದ್ಯ ಅವರು ಸಾವನ್ನಪ್ಪಿರುವುದಾಗಿ ಮಗಳು ಸ್ಪರ್ಶ ತಿಳಿಸಿದ್ದಾರೆ. ನ್ಯೂಜಿಲೆಂಡ್‌ ಪೊಲೀಸರು (New Zealand Police) ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

    ರೇಚೆಲ್‌ ಚೇಸ್‌ ಸಾವಿನ ಇತ್ತೀಚಿನ ಸ್ವರೂಪಗಳನ್ನು ಗಮನಿಸಿದ್ರೆ ಸದ್ಯ ಯಾವುದೇ ಅನುಮಾನಗಳು ಕಂಡುಬಂದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಇನ್ನೂ ಈ ಬಗ್ಗೆ ಮಾತನಾಡಿರುವ ಮಗಳು ಸ್ಪರ್ಶ, ಹೆಚ್ಚು ಅಭಿಮಾನಿಗಳನ್ನು ಗಳಿಸಬೇಕೆಂಬ ಹುಚ್ಚು ಅವರಿಗಿತ್ತು. ವಿಶ್ವದಾದ್ಯಂತ ಲಕ್ಷಾಂತರ ಜನರು ನನ್ನ ಅಮ್ಮನ ಬಾಡಿಬಿಲ್ಟಿಂಗ್‌ನಿಂದ ಪ್ರೇರಣೆ ಪಡೆದಿದ್ದರು. ಆದ್ರೆ ಅಮ್ಮನನ್ನು ಕಳೆದುಕೊಂಡಿರುವುದು ತುಂಬಾ ದುಃಖವಾಗುತ್ತಿದೆ. ಅವರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ ಎಂದು ಹೇಳಿದ್ದಾರೆ.

    ರೇಚೆಲ್ ಚೇಸ್, ಕ್ರಿಸ್‌ ಚೇಸ್‌ ಎಂಬಾತನನ್ನ ಮದುವೆಯಾಗಿದ್ದರು. ಆದ್ರೆ ಪತಿ ಕ್ರಿಸ್‌ ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, 10 ವರ್ಷಗಳ ಕಾಲ ಜೈಲಿನಲ್ಲಿದ್ದರು. ಹಾಗಾಗಿ ಪತಿಗೆ 2016 ರಲ್ಲಿ ಡಿವೋರ್ಸ್‌ ನೀಡಿದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಡವಟ್ಟು- ಕೆಇಎಯಿಂದ ನೂರಾರು ಅಭ್ಯರ್ಥಿಗಳಿಗೆ ಸಂಕಷ್ಟ

    ಇನ್ನೂ ಚಿಕ್ಕವಯಸ್ಸಿನಿಂದಲೇ ಬಾಡಿ ಬಿಲ್ಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ರೇಚಲ್‌ ಚೇಸ್‌ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗೆದ್ದಿದ್ದರು. 2011 ರಲ್ಲಿ, ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಒಲಂಪಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನ್ಯೂಜಿಲೆಂಡ್‌ನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಇದನ್ನೂ ಓದಿ: Gaganyaan Mission: ತಾಂತ್ರಿಕ ದೋಷದಿಂದ ಸದ್ಯಕ್ಕೆ ಮೊದಲ ಪರೀಕ್ಷಾರ್ಥ ಹಾರಾಟ ಸ್ಥಗಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರ್ಟೂನ್ ಪೊಪಾಯ್‍ನಂತ ಬೈಸೆಪ್ಸ್ ಗಾಗಿ ಈ ಯುವಕ ಏನು ಮಾಡ್ತಾರೆ ಗೊತ್ತಾ?

    ಕಾರ್ಟೂನ್ ಪೊಪಾಯ್‍ನಂತ ಬೈಸೆಪ್ಸ್ ಗಾಗಿ ಈ ಯುವಕ ಏನು ಮಾಡ್ತಾರೆ ಗೊತ್ತಾ?

    ಮಾಸ್ಕೋ: ನೀವು ಚಿಕ್ಕವರಿದ್ದಾಗ ಪೊಪಾಯ್ ದಿ ಸೇಲರ್ ಎಂಬ ಕಾರ್ಟೂನ್ ನೋಡೇ ಇರ್ತೀರ. ಆದ್ರೆ ನಿಜಜೀವನದಲ್ಲಿ ಪೊಪಾಯ್ ಥರ ಬೈಸೆಪ್ಸ್ ಇರೋಕೆ ಸಾಧ್ಯನಾ? ಇಲ್ಲೊಬ್ಬ ಮಾಜಿ ಸೈನಿಕ ಪೊಪಾಯ್ ನಂತಹ ಬೈಸೆಪ್ಸ್ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ.

    ರಷ್ಯಾದ 21 ವರ್ಷದ ತೆರೆಶಿನ್ 24 ಇಂಚಿನ ಬೈಸೆಪ್ಸ್ ಹೊಂದಿದ್ದು ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಈ ರೀತಿ ಬಸೆಪ್ಸ್‍ಗಾಗಿ ಇವರು ಸೈಟ್ ಎನ್‍ಹಾನ್ಸ್‍ಮೆಂಟ್ ಆಯಿಲ್ ಅಥವಾ ಸಿಂಥಾಲ್ ಬಳಸ್ತಾರಂತೆ. ಈ ಎಣ್ಣೆಯನ್ನ ತೋಳುಗಳಿಗೆ ಇಂಜೆಕ್ಟ್ ಮಾಡಿಕೊಳ್ಳೋ ಮೂಲಕ ಇಷ್ಟು ದೊಡ್ಡ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ಇದರಿಂದ ಇವರ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

    ಸೈನ್ಯವನ್ನ ಬಿಟ್ಟ ನಂತರ ಕೇವಲ 10 ದಿನಗಳಲ್ಲಿ ಇವರು 10 ಇಂಚಿನ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ತೆರೆಶಿನ್ ಹೆಮ್ಮೆಯಿಂದ ತನ್ನ ಬೈಸೆಪ್ಸ್ ಪ್ರದರ್ಶಿಸಿದ್ದಾರೆ.

    ಆದ್ರೆ ಈ ರೀತಿಯ ಬಾಡಿ ಬಿಲ್ಡಿಂಗ್‍ನಿಂದ ಅನಹುತವಾಗಬಹುದು ಎಂದು ವೈದ್ಯರಾದ ಯುರೀ ಸೆರೆಬ್ರಿಯಾನ್‍ಸ್ಕಿನಿ ಹೇಳಿದ್ದಾರೆ. ಅವರ ತೋಳುಗಳ ಚಲನೆಯೇ ನಿಂತುಬಿಡಬಹುದು. ಅವರ ತೋಳುಗಳು ತುಂಬಾ ಗಟ್ಟಿಯಾಗಿ ಮೇಲೆತ್ತಲು ಕೂಡ ಸಾಧ್ಯವಾಗದಂತೆ ಆಗಬಹುದು. ಅವರು ವಿಕಲಾಂಗರಂತೆ ಆಗಬಹುದು ಎಂದಿದ್ದಾರೆ.

    ಅಲ್ಲದೆ ವೃತ್ತಿಪರ ಪವರ್ ಲಿಫ್ಟರ್ ಆದ ಕಿರಿಲ್ ಸಿಚೆವ್ ಕೂಡ ಇದು ನಿಜವೆಂದು ಹೇಳಿದ್ದಾರೆ. ಅವರ ಮುಖದಲ್ಲೇ ನೋಡಬಹುದು. ಏನೋ ಅನಾರೋಗ್ಯವಿರುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ. ಇವರಿಗೆ ವೈದ್ಯಕೀಯ ನೆರವಿನ ಅಗತ್ಯವಿದೆ. ಕೇವಲ ಅವರ ತೋಳುಗಳನ್ನ ಸರಿಪಡಿಸಿ ರಕ್ತವನ್ನ ಶುದ್ಧಿಗೊಳಿಸುವುದಷ್ಟೇ ಅಲ್ಲ. ಮನೋವೈಜ್ಞಾನಿಕ ಸಹಾಯ ಕೂಡ ಅಗತ್ಯವಿದೆ ಎಂದು ಹೇಳಿದ್ದಾರೆ.

     

    ಆದ್ರೆ ತೆರೆಶಿನ್ ಮಾತ್ರ ತನ್ನ ಈ ಕ್ರಮವನ್ನ ಮುಂದುವರಿಸೋದಾಗಿ ಹೇಳಿದ್ದಾರೆ. ವರ್ಕೌಟ್ ಮಾಡುವುದರ ಜೊತೆಗೆ ಒಂದು ದಿನ ಬಾಡಿ ಬಿಲ್ಡಿಂಗ್ ದಾಖಲೆ ಮುರಿಯೋ ಕನಸು ಹೊಂದಿದ್ದಾರೆ. ಇಷ್ಟು ದೊಡ್ಡ ಬೈಸೆಪ್ಸ್‍ಗಾಗಿ ಲೀಟರ್‍ಗಟ್ಟಲೆ ಎಣ್ಣೆಯನ್ನ ತೋಳಿಗೆ ಇಂಜೆಕ್ಟ್ ಮಾಡಿಕೊಳ್ಳಬಹುದು ಎಂದು ತೆರೆಶಿನ್ ಹೇಳಿದ್ದಾರೆ.