Tag: ಬಾಡಿ ಬಿಲ್ಡರ್

  • ಫೇಮಸ್‌ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ 30ನೇ ವಯಸ್ಸಿಗೆ ನಿಧನ

    ಫೇಮಸ್‌ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ 30ನೇ ವಯಸ್ಸಿಗೆ ನಿಧನ

    ಬ್ಯಾಂಕಾಕ್‌: ಫಿಟ್ನೆಸ್‌ (Fitness), ಬಾಡಿ ಬಿಲ್ಡಿಂಗ್‌ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ (Jo Lindner) 30ನೇ ವಯಸ್ಸಿಗೆ ನಿಧನರಾಗಿದ್ದಾರೆ.

     

    View this post on Instagram

     

    A post shared by NICHA (@immapeaches)

    ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಲಿಂಡ್ನರ್‌ ನಿಧನ ಹೊಂದಿದ್ದು, ಅವರ ಗೆಳತಿ ನಿಚಾ ಸಾವಿನ ಸುದ್ದಿಯನ್ನ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್‌ ಕುರಿತ ವಿಡಿಯೋ ಹಂಚಿಕೊಂಡಿದ್ದರು ಎಂಬುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್‌ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್‌

    ಥಾಯ್‌ಲ್ಯಾಂಡ್‌ನಲ್ಲಿ ವೇಟ್ ಲಿಫ್ಟಿಂಗ್ ಹಾಗೂ ಬಾಡಿ ಬಿಲ್ಡಿಂಗ್ (Bodybuilding) ಮೂಲಕ ಲೆಜೆಂಡ್‌ ಎಂದೇ ಗುರುತಿಸಿಕೊಂಡಿದ್ದ ಜೋ ಲಿಂಡ್ನರ್ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಫಿಟ್ನೆಸ್‌ ಟಿಪ್ಸ್‌ ನೀಡುತ್ತಿದ್ದರು. ಜೊತೆಗೆ ಲಿಂಡ್ನರ್‌ ತಮ್ಮದೇ ಯುಟ್ಯೂಬ್‌ ಚಾನೆಲ್‌ ಆರಂಭಿಸಿ ತಾನು ಅಭ್ಯಾಸ ಮಾಡುವ ವೇಳೆ ಫಿಟ್ನೆಸ್‌ ಸಲಹೆಗಳನ್ನ ಅದರಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನೂ ಓದಿ: ಮೋದಿಯವರ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿದೆ: ಪುಟಿನ್

    ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದ ಲಿಂಡ್ನರ್‌ ಯುಟ್ಯೂಬ್‌ನಲ್ಲಿ 940,000 ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 8.5 ದಶಲಕ್ಷ ಫಾಲೋವರ್ಸ್‌ಗಳನ್ನ ಹೊಂದಿದ್ದರು. ಪ್ರತಿದಿನ ಯುಟ್ಯೂಬ್‌ನಲ್ಲಿ ಫಿಟ್ನೆಸ್‌ ತರಬೇತಿ ಜೊತೆಗೆ ಆಹಾರ ಸೇವನೆಯ ಕ್ರಮದ ಬಗ್ಗೆಯೂ ಸಲಹೆ ನೀಡುತ್ತಿದ್ದರು. ಇದರಿಂದ ಥಾಯ್‌ಲ್ಯಾಂಡ್‌ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

    ಲಿಂಡ್ನರ್‌ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಬಾಡಿಬಿಲ್ಡಿಂಗ್‌ ಲೋಕದ ಲೆಜೆಂಡ್‌ ಅನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇರಳದ ಮೊದಲ ಸಲಿಂಗಿ ಬಾಡಿಬಿಲ್ಡರ್ ಆತ್ಮಹತ್ಯೆ

    ಕೇರಳದ ಮೊದಲ ಸಲಿಂಗಿ ಬಾಡಿಬಿಲ್ಡರ್ ಆತ್ಮಹತ್ಯೆ

    ತಿರುವನಂತಪುರಂ: ಕೇರಳ (Kerala) ದ ಮೊದಲ ಸಲಿಂಗಕಾಮಿ ಬಾಡಿಬಿಲ್ಡರ್ (Transgender Bodybuilder) ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

    ಪ್ರವೀಣ್ ನಾತ್ ಆತ್ಮಹತ್ಯೆ ಮಾಡಿಕೊಂಡವ. ಈತ ಗುರುವಾರ ಮಧ್ಯಾಹನದ ಬಳಿಕ ತನ್ನ ರೆಸಿಡೆನ್ಸಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಚಾರದ ವೇಳೆ ಕಲ್ಲು ತೂರಾಟ – ಕಾರ್ಯಕರ್ತೆ ತಲೆಗೆ ಗಂಭೀರ ಪೆಟ್ಟು

    ಇದೇ ವರ್ಷ ಪ್ರೇಮಿಗಳ ದಿನದಂದು ಪ್ರವೀಣ್ ತನ್ನ ಸಂಗಾತಿಯನ್ನು ವರಿಸಿದ್ದನು. ಆ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಕೆಲವೊಂದು ಆನ್‍ಲೈನ್ ಮಾಧ್ಯಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು. ಇದರಿಂದ ಪ್ರವೀಣ್ ನೊಂದಿದ್ದನು ಎಂದು ಹೇಳಲಾಗುತ್ತಿದೆ.

  • ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಚಿಕನ್ ಮೊರೆ ಹೋದ ಬಾಡಿ ಬಿಲ್ಡರ್

    ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಚಿಕನ್ ಮೊರೆ ಹೋದ ಬಾಡಿ ಬಿಲ್ಡರ್

    ನುರ್-ಸುಲ್ತಾನ್: ಖಜಕಸ್ತಾನದ ಬಾಡಿಬಿಲ್ಡರ್ ಯೋರಿ ತುಲೋಚ್ಚೋ ಕಾಮತೃಷೆಗಾಗಿ ಚಿಕನ್ ಬಳಕೆ ಮಾಡುತ್ತಿರುವ ವಿಚಿತ್ರ ವೀಡಿಯೋವನ್ನ ತನ್ನ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ. ಈತನ ಅಶ್ಲೀಲ ವೀಡಿಯೋಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

    ಯೋರಿ ತುಲೋಚ್ಕೋ ನವೆಂಬರ್ ನಲ್ಲಿ ತಾನು ಮೆಚ್ಚಿದ ಡಾಲ್ ಮಾರ್ಗೋ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದನು. ಇದೀಗ ಗೊಂಬೆ ಮುರಿದಿದ್ದು, ಮೊದಲ ಕ್ರಿಸ್‍ಮಸ್ ಹಬ್ಬವನ್ನ ಒಂಟಿಯಾಗಿ ಆಚರಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಗೊಂಬೆಯನ್ನ ರಿಪೇರಿಗೆ ಕಳುಹಿಸಿ ಹಲವು ಪೋಸ್ಟ್ ಮಾಡಿಕೊಂಡಿದ್ದ ಯೋರಿ ಭಗ್ನ ಪ್ರೇಮಿಯಂತೆ ಕಣ್ಣೀರು ಹಾಕಿದ್ದಾನೆ. ಆದ್ರೆ ರಿಪೇರಿಗೆ ಹೋದ ಗೊಂಬೆ ಸಿದ್ಧವಾಗುತ್ತಿದ್ದು ಎಂದು ಹೇಳಿಕೊಂಡಿದ್ದಾನೆ.

    ಮೊದಲ ಗೊಂಬೆ ಮುರಿದ ಪರಿಣಾಮ ಹಲವು ಸೆಕ್ಸ್ ಡಾಲ್‍ಗಳನ್ನು ಪಡೆಯಲು ಯೋರಿ ಮುಂದಾಗಿದ್ದಾನೆ. ಗೊಂಬೆ ಮಾರ್ಗೋ ಮತ್ತೆ ಮುರಿದು ಹೋಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ಹೆಚ್ಚು ಸೆಕ್ಸ್ ಗಾಗಿ ಹಲವು ಡಾಲ್ ಗಳನ್ನು ಖರೀದಿಗೆ ಮುಂದಾಗಿದ್ದೇನೆ. ಕೆಲವೇ ದಿನಗಳಲ್ಲಿ ಮೊದಲಿನಿಂತಾಗಿ ತನ್ನ ಮಾರ್ಗೋ ಹಿಂದಿರುಗಲಿದೆ. ಸದ್ಯ ತಾನು ಕ್ವಾರಂಟೈನ್ ನಲ್ಲಿದ್ದೇನೆ ಎಂದು ಯೋರಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಈ ಯುವತಿಯ ಫೋಟೋಗೆ ಹುಡಗರು ಫಿದಾ-ಇಲ್ಲಿದೆ ಫೋಟೋವಿನ ಅಸಲಿ ಸತ್ಯ

    ಕಳೆದ ಒಂದು ವರ್ಷದಿಂದ ಮಾರ್ಗೋ ಜೊತೆ ಯೋರಿ ಡೇಟಿಂಗ್ ನಲ್ಲಿದ್ದನು. ಮಾರ್ಚ್ ನಲ್ಲಿ ನಡೆಯಬೇಕಿದ್ದ ಯೋರಿ ಮತ್ತು ಮಾಗೋ ಮದುವೆ ಕೊರೊನಾದಿಂದ ಮುಂದೂಡಲ್ಪಟ್ಟಿತ್ತು. ಕೊನೆಗೆ ನವೆಂಬರ್ ನಲ್ಲಿ 12 ಜನರ ಸಮ್ಮುಖದಲ್ಲಿ ಗೊಂಬೆ ಬೆರಳಿಗೆ ಉಂಗುರ ತೊಡೆಸಿದ್ದನು. ನಮ್ಮ ಸಂಬಂಧ ಎಲ್ಲರಗಿಂತ ಭಿನ್ನವಾದದ್ದು ಎಂದು ಹೇಳಿ ಮಾರ್ಗೋ ತುಟಿಗೆ ತುಟಿಯನ್ನ ಸೇರಿಸಿದ್ದನು. ಯೋರಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇಡೀ ಜಗತ್ತಿನಲ್ಲೆಡೆ ಗುರುತಿಸಿಕೊಂಡಿದ್ದನು. ಇದನ್ನೂ ಓದಿ: ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್ ಡಾಲ್ಸ್ ಇಟ್ಟ ಫುಟ್ಬಾಲ್ ಟೀಂ

    ಅವಳಿಗೆ ಒಬ್ಬಳಿಗೆ ನಡೆಯಲು ಆಗಲ್ಲ. ಅಡುಗೆ ಮಾಡಲು ಸಹ ಬರಲ್ಲ. ಆದ್ರೆ ಆಕೆಗೆ ಜಾರ್ಜಿಯನ್ ಕಸೀನ್ ಅಂದ್ರೆ ಬಲು ಇಷ್ಟ. ಖಿನ್ಕಲಿ ಅವಳ ಇಷ್ಟವಾದ ಡಿಶ್. ಅವಳು ಕೇವಲ ಗೊಂಬೆಯಲ್ಲ, ಅದರೊಳಗೊಂದು ನಿಷ್ಕಲ್ಮಶವಾದ ಆತ್ಮವಿದೆ ಎಂದು ಯೋರಿ ಮಾರ್ಗೋಳ ಗುಣಗಳನ್ನ ಕೊಂಡಾಡಿದ್ದಾನೆ. ಇದನ್ನೂ ಓದಿ: ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ – ಮಹಿಳೆಯರಿಗಿಂತ ಡಾಲ್ ಉತ್ತಮ ಅಂದ

    ಮೊದಲಿಗೆ ಮಾರ್ಗೋ ಜೊತೆಗಿನ ಫೋಟೋಗಳನ್ನ ಹಂಚಿಕೊಂಡಾಗ ಎಲ್ಲರೂ ಆಕೆಯನ್ನ ನೋಡುತ್ತಾರೆ ಎಂದು ಅಸೂಯೆ ಎನಿಸಿ ಡಿಲೀಟ್ ಮಾಡಿದೆ. ಕೆಲವರು ನನ್ನನ್ನ ಸ್ಯಾಡಿಸ್ಟ್, ಲೈಂಗಿಕ ರೋಗಿ, ಸಲಿಂಗಿ ಹಲವು ಪದಗಳಿಂದ ನನ್ನನ್ನು ಕಟುವಾಗಿ ಟೀಕಿಸಿದರು. ಆದ್ರೆ ನಮ್ಮಿಬ್ಬರ ಬಾಂಧವ್ಯ ಮದುವೆಗಿಂತಲೂ ಅಮೂಲ್ಯವಾದದ್ದು. ಒಂದು ವರ್ಷದ ಹಿಂದೆ ಮಾರ್ಗೊಳ ಸೌಂದರ್ಯಕ್ಕೆ ಮಾರು ಹೋದ ನಾನು ಆಕೆಯನ್ನ ಪ್ರೀತಿಸತೊಡಗಿದೆ. ನಾನು ಲೈಂಗಿಕ ಪ್ರಕ್ರಿಯೆಯನ್ನು ಇಷ್ಟಪಡುತ್ತೇನೆ. ಲಿಂಗ ಮತ್ತು ಲೈಂಗಿಕ ದೃಷ್ಟಿಕೋನ ಇಲ್ಲಿ ಮುಖ್ಯವಲ್ಲ. ಮಾರ್ಗೊ ಜೊತೆಗಿನ ಲೈಂಗಿಕ ಜೀವನವನ್ನು ವಿವರಿಸುವುದು ಕಷ್ಟ ಎಂದು ಯೋರಿ ಹೇಳಿದ್ದಾನೆ.

  • 22 ವರ್ಷದ ಗೆಳತಿ, ಕ್ಯಾಬ್ ಚಾಲಕನಿಗೆ ಗುಂಡಿಕ್ಕಿದ ಬಾಡಿ ಬಿಲ್ಡರ್ ಅರೆಸ್ಟ್

    22 ವರ್ಷದ ಗೆಳತಿ, ಕ್ಯಾಬ್ ಚಾಲಕನಿಗೆ ಗುಂಡಿಕ್ಕಿದ ಬಾಡಿ ಬಿಲ್ಡರ್ ಅರೆಸ್ಟ್

    – ನಾಲ್ಕು ಬಾರಿ ಪ್ರೇಯಸಿ ತಲೆಗೆ ಬುಲೆಟ್ ಇಳಿಸಿದ್ದ

    ನವದೆಹಲಿ: ನಾಲ್ಕು ಬಾರಿ ಪ್ರೇಯಸಿಯ ತಲೆಗೆ ಗುಂಡಿಕ್ಕಿ ಕೊಂದು ಬಾಡಿಗೆ ಕಾರಿನಲ್ಲಿ ಪರಾರಿಯಾಗಿ ನಂತರ ಕಾರು ಚಾಲಕನನ್ನು ಶೂಟ್ ಮಾಡಿದ್ದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಮತ್ತು ಜಿಮ್ ಒಂದರ ಮಾಲೀಕನಾಗಿದ್ದ ಹೇಮಂತ್ ಲಂಬಾ, 22 ವರ್ಷದ ತನ್ನ ಪ್ರೇಯಸಿಯನ್ನು ಡಿಸೆಂಬರ್ 7 ರಂದು ಹರ್ಯಾಣದ ರೇವಾರಿ ಎಂಬಲ್ಲಿ ತಲೆಗೆ ನಾಲ್ಕು ಬಾರಿ ಗುಂಡು ಹಾರಿಸಿ ಕೊಂದು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬಾಡಿಗೆ ಕಾರಿನಲ್ಲಿ ಪರಾರಿಯಾಗಿದ್ದ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದ ರೇವಾರಿ ಜಿಲ್ಲೆಯ ಡಿಎಸ್‍ಪಿ ಜಮ್ಮಲ್ ಖಾನ್, ಕೊಲೆಯಾದ ಸಂತ್ರಸ್ತೆ ರಾಜಸ್ಥಾನದ ಮೂಲದವಳಾಗಿದ್ದು, ದೆಹಲಿಯ ರೋಹಿಣಿಯಲ್ಲಿ ಸಂಬಂಧಿಕರ ಮನೆಯಲ್ಲಿ ತಂದೆಯ ಜೊತೆ ವಾಸಿಸುತ್ತಿದ್ದಳು, ಆಕೆಯ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಘಟನೆಯಾದ ನಂತರ ಪರಾರಿಯಾಗಿದ್ದ ಹೇಮಂತ್ ಲಂಬಾನ ವಿರುದ್ಧ ಕೊಲೆ ಪ್ರಕರಣದ ದಾಖಲಾಗಿತ್ತು ಎಂದು ಹೇಳಿದ್ದರು.

    ಸಂತ್ರಸ್ತೆಯನ್ನು ಕೊಲೆ ಮಾಡಿ ಬಾಡಿಗೆ ಕಾರಿನಲ್ಲಿ ಎಸ್ಕೇಪ್ ಆಗಿದ್ದ ಹೇಮಂತ್ ಲಂಬಾ ನಂತರ ಬಾಡಿಗೆ ಕಾರು ಚಾಲಕ ದೇವೇಂದ್ರನಿಗೆ ಗನ್ ತೋರಿಸಿ ಜೈಪುರಕ್ಕೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಒಪ್ಪದ ಚಾಲಕ ದೇವೇಂದ್ರನನ್ನು ಸಹ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ನಂತರ ಆತನೇ ಕಾರನ್ನು ತೆಗೆದುಕೊಂಡು ಜೈಪುರಕ್ಕೆ ಹೋಗಿದ್ದಾನೆ.

    ಆರೋಪಿಯನ್ನು ಹಿಡಿದು ಕೊಟ್ಟ ಕಾರ್ ಡೀಲರ್
    ಕಾರ್ ಚಾಲಕನನ್ನು ಕೊಲೆ ಮಾಡಿ ಕಾರು ತೆಗೆದುಕೊಂಡು ಬಂದಿದ್ದ ಹೇಮಂತ್ ಲಂಬಾ ಜೈಪುರದಲ್ಲಿ ಸ್ಥಳೀಯ ಕಾರ್ ಡೀಲರ್ ಬಳಿ ಕಾರನ್ನು ಮಾರಲು ಹೋಗಿದ್ದಾನೆ. ಆದರೆ ಹೇಮಂತ್ ಲಂಬಾನ ನಡುವಳಿಕೆ ನೋಡಿ ಅನುಮಾನಗೊಂಡ ಕಾರು ವ್ಯಾಪಾರಿ ಅಲ್ಪೇಶ್ ಕಾರಿನ ಹಿಂಭಾಗದಲ್ಲಿ ಇದ್ದ ಫೋನ್ ನಂಬರ್ ಗೆ ಕರೆ ಮಾಡಿದ್ದಾರೆ. ಆಗ ಕರೆಯನ್ನು ಕಾರು ಚಾಲಕನ ಪತ್ನಿ ಸ್ವೀಕರಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ವ್ಯಾಪಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹೇಮಂತ್ ನನ್ನು ಬಂಧಿಸಿದ್ದಾರೆ.

  • ದುನಿಯಾ ವಿಜಿ ಹಲ್ಲೆ ಪ್ರಕರಣ- ಪಾನಿಪುರಿ ಕಿಟ್ಟಿಗೆ ಸಂಕಷ್ಟ

    ದುನಿಯಾ ವಿಜಿ ಹಲ್ಲೆ ಪ್ರಕರಣ- ಪಾನಿಪುರಿ ಕಿಟ್ಟಿಗೆ ಸಂಕಷ್ಟ

    ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ನಟ ದುನಿಯಾ ವಿಜಯ್ ಜೈಲು ಸೇರಿದ್ರೆ ಇತ್ತ, ಪಾನಿಪುರಿ ಕಿಟ್ಟಿಗೆ ಸಂಕಷ್ಟ ಎದುರಾಗಿದೆ.

    ಪಾನಿಪುರಿ ಕಿಟ್ಟಿ ಪೊಲೀಸರ ಎದುರಲ್ಲೇ ದುನಿಯಾ ವಿಜಯ್ ಮೂಗಿಗೆ ಡಿಚ್ಚಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಪಾನಿಪುರಿ ಕಿಟ್ಟಿ ಪೊಲೀಸರ ಎದುರಲ್ಲೇ ವಿಜಿಗೆ ಡಿಚ್ಚಿ ಹೊಡೆದಿದ್ದಾನೆ. ಅಲ್ಲದೇ ನಾನು ವಿಜಿಗೆ ಡಿಚ್ಚಿ ಹೊಡೆದೆ ಅಂತಾ ಹೇಳ್ಕೊಂಡು ತಿರುಗಾಡ್ತಿದ್ದಾನೆ. ಹೀಗಾಗಿ ಪಾನಿಪುರಿ ಕಿಟ್ಟಿ ಮೇಲೆ ಕ್ರಮ ಕೈಗೊಳ್ಳುವಂತೆ ಕುರುಬರ ಪಡೆ ರಾಜ್ಯಾಧ್ಯಕ್ಷ ವರ್ತೂರು ಸತೀಶ್ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

    ಸಾಮಾನ್ಯ ಜನ ಡಿಚ್ಚಿ ಹೊಡೆಯೋದಕ್ಕೂ, ಬಾಡಿ ಬಿಲ್ಡರ್ ಡಿಚ್ಚಿ ಹೊಡೆಯೋದಕ್ಕೂ ವ್ಯತ್ಯಾಸವಿದೆ. ಬಾಡಿ ಬಿಲ್ಡರ್ ಡಿಚ್ಚಿ ಹೊಡೆದ್ರೆ ಪ್ರಾಣವೇ ಹೋಗುತ್ತೆ. ಹೀಗಾಗಿ ಪೊಲೀಸರ ಎದುರು ಡಿಚ್ಚಿ ಹೊಡೆದ ಪಾನಿಪುರಿ ಕಿಟ್ಟಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CXoYbpWrkoU

    https://www.youtube.com/watch?v=caVQhLAJWTs

  • ಅಂಗವೈಕಲ್ಯ ಮೆಟ್ಟಿನಿಂತು ಬಾಡಿ ಬಿಲ್ಡರ್ ಆಗಿರೋ ಯುವಕನಿಗೆ ಬೇಕಿದೆ ದಾನಿಗಳ ಸಹಾಯ

    ಅಂಗವೈಕಲ್ಯ ಮೆಟ್ಟಿನಿಂತು ಬಾಡಿ ಬಿಲ್ಡರ್ ಆಗಿರೋ ಯುವಕನಿಗೆ ಬೇಕಿದೆ ದಾನಿಗಳ ಸಹಾಯ

    ರಾಯಚೂರು: ಜಿಲ್ಲೆಯ ರಾಂಪುರದ ಯುವ ಬಾಡಿ ಬಿಲ್ಡರ್ ಎಂದೇ ಹೆಸರುವಾಸಿಯಾಗಿದ್ದಾರೆ ವೆಂಕಟೇಶ್. 28 ವರ್ಷದ ವೆಂಕಟೇಶ್ ಹುಟ್ಟುತ್ತಲೇ ಅಂಗವೈಕಲ್ಯವನ್ನ ಹೊತ್ತು ಬಂದಿದ್ದರೂ ಎದೆಗುಂದದೇ ತನ್ನದೇ ಆದ ಸಾಧನೆಯ ಹಾದಿಯಲ್ಲಿದ್ದಾರೆ. ಬಾಡಿ ಬಿಲ್ಡಿಂಗ್ ಮೂಲಕ ತನ್ನನ್ನ ತಾನು ಗುರುತಿಸಿಕೊಂಡಿದ್ದಾರೆ.

    ರಾಜ್ಯದ ಮೂಲೆಮೂಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ. 9 ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆದ್ರೆ ಮನೆಯಲ್ಲಿ ಮೊದಲಿನಿಂದಲೂ ಬಡತನವಿದೆ. 9 ಜನರಿರುವ ಕುಟುಂಬಕ್ಕೆ ರಾಯಚೂರು ಕೃಷಿ ವಿವಿಯಲ್ಲಿ ವಾಟರ್‍ಮನ್ ಆಗಿ ದುಡಿಯುತ್ತಿರುವ ವೆಂಕಟೇಶ್ ತಂದೆಯೇ ಆಧಾರಸ್ತಂಭ. ಕಟ್ಟಿಗೆ ಕಡಿದು ಮಾರುವುದು, ಗಣೇಶ ಹಬ್ಬದ ವೇಳೆ ವಿಗ್ರಹ ತಯಾರಿಸುವ ಕೆಲಸಮಾಡಿ ಅಷ್ಟೂ ಇಷ್ಟು ವೆಂಕಟೇಶ್ ಸಂಪಾದಿಸುತ್ತಾರೆ. ಆದ್ರೆ ಅವರ ಈ ಸಂಪಾದನೆ ಸಂಸಾರದ ಬಂಡಿ ಸಾಗಿಸಲು ಸಾಲುತ್ತಿಲ್ಲ.

    ಜಿಮ್ ಕೋಚ್ ಲಕ್ಷ್ಮಣ ಯಾದವ್ ಅವರು ವೆಂಕಟೇಶನ ಬಾಡಿಬಿಲ್ಡಿಂಗ್ ಖರ್ಚನ್ನು ಸದ್ಯ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ವಿವಿಧೆಡೆ ನಡೆಯುವ ಸ್ಪರ್ಧೆಗಳಿಗೆ ಭಾಗವಹಿಸಲು, ಉತ್ತಮ ಆಹಾರ ಸೇವನೆಗೆ ಹಣದ ಕೊರತೆಯಿದೆ. ರಸ್ತೆ ಅಗಲೀಕರಣ ವೇಳೆ ಇದ್ದ ಪುಟ್ಟ ಮನೆಯನ್ನೂ ಕಳೆದುಕೊಂಡಿರುವುದರಿಂದ ಒಂದೇ ಕೋಣೆಯಿರುವ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದೆ. ಹೀಗಾಗಿ ಸಾಧನೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಒಂದು ಕಿರಾಣಿ ಅಂಗಡಿ ತೆರೆಯಲು ಇದೀಗ ಹಣದ ಸಹಾಯಕ್ಕಾಗಿ ವೆಂಕಟೇಶ್ ದಾನಿಗಳಲ್ಲಿ ಅಂಗಲಾಚುತ್ತಿದ್ದಾರೆ.

    ಒಟ್ಟಿನಲ್ಲಿ, ಯಾವುದೇ ಕೆಲಸ ಮಾಡಲು ಸಿದ್ದವಿರುವ ವೆಂಕಟೇಶ್, ಬಾಡಿ ಬಿಲ್ಡಿಂಗ್‍ನಲ್ಲೂ ಮುಂದುವರೆದು ಸಾಧನೆ ಮಾಡಬೇಕು ಅಂತ ಮಹಾತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಅಂಗವೈಕಲ್ಯವನ್ನ ಮೆಟ್ಟಿನಿಂತ ವೆಂಕಟೇಶ್‍ಗೆ ಈಗ ಪ್ರೋತ್ಸಾಹದ ಅಗತ್ಯವಿದೆ.

    https://www.youtube.com/watch?v=jNWGdpg2hgI