Tag: ಬಾಡಿ ಫಿಟ್‌ನೆಸ್

  • ಜೈಲಲ್ಲಿ ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳಲು ವಿಟಮಿನ್ ಟ್ಯಾಬ್ಲೆಟ್ ಮೊರೆ ಹೋದ ದರ್ಶನ್

    ಜೈಲಲ್ಲಿ ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳಲು ವಿಟಮಿನ್ ಟ್ಯಾಬ್ಲೆಟ್ ಮೊರೆ ಹೋದ ದರ್ಶನ್

    ಬಳ್ಳಾರಿ: ರೇಣುಕಾಸ್ವಾಮಿ ಕೊಲೆ (Renukaswamy Murder Case) ಆರೋಪಿಯಾಗಿ ಬಳ್ಳಾರಿ ಸೆಂಟ್ರಲ್ ಜೈಲುಪಾಲಾಗಿರೋ ನಟ ದರ್ಶನ್ ಜೈಲಿನಿಂದ ಹೊರಗಿದ್ದಾಗ ಐಷಾರಾಮಿ ಜೀವನದ ಜೊತೆಗೆ ಬಿಂದಾಸ್ ಆಗಿ ಇರುತ್ತಿದ್ದರು. ಫಿಟ್ನೆಸ್ ಕಾಪಾಡಿಕೊಳ್ಳಲು ಚಿಕನ್, ಮಟನ್, ಫ್ರೂಟ್ಸ್ ಜೊತೆಗೆ ಜ್ಯೂಸ್ ಸೇವಿಸುತ್ತಿದ್ದರು. ಆದರೆ ಇದೀಗ ಜೈಲಿನಲ್ಲಿರೋ ದರ್ಶನ್ (Darshan) ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ.

    ಜೈಲು ಸೇರೋದಕ್ಕೂ ಮೊದಲು ದರ್ಶನ್ ಜಿಮ್‌ನಲ್ಲಿ ಗಂಟೆಗಟ್ಟಲೆ ವರ್ಕೌಟ್ ಮಾಡುತ್ತಿದ್ದರು. ಸದ್ಯ ಜೈಲಲಿದ್ದರೂ ದರ್ಶನ್ ದೇಹ ಕಾಪಾಡಿಕೊಳ್ಳುವುದು ಬಿಟ್ಟಿಲ್ಲ. ಹೀಗಾಗಿ ಅನ್ನ ಬಿಟ್ಟು ಚಪಾತಿ, ಮುದ್ದೆ ಊಟಕ್ಕೆ ಮೊರೆ ಹೋಗಿದ್ದಾರೆ. ಜೊತೆಗೆ ವಿಟಮಿನ್ ಟ್ಯಾಬ್ಲೆಟ್ ಸೇವಿಸುತ್ತಿದ್ದಾರೆ. ಆರೋಪಿ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದರೂ, ಬಾಡಿ ಫಿಟ್ನೆಸ್‌ಗೆ (Body Fitness) ಹೆಚ್ಚು ಒತ್ತು ಕೊಡುತ್ತಿದ್ದಾರೆ. ಜಿಮ್ ಬಾಡಿ ಕಾಪಾಡಿಕೊಳ್ಳದಿದ್ದರೆ ಬಾಡಿ ಶೇಪ್ ಹಾಳಾಗುವ ಆತಂಕ ದರ್ಶನ್ ಅವರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಒಮ್ಮೆಲೆ ಜಿಮ್ ಬಿಟ್ಟರೆ ಚರ್ಮ ಜೋತು ಬಿದ್ದು ವಿಲಕ್ಷಣವಾಗತ್ತೆ. ಹೀಗಾಗಿ ದರ್ಶನ್ ದೇಹದ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ- 17ರ ಬಾಲಕ ಸಾವು

    ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರೋ ಆರೋಪಿ ದರ್ಶನ್‌ಗೆ ಜಿಮ್ ಮಾಡೋದಕ್ಕೆ ಅವಕಾಶವೇ ಇಲ್ಲ. ಹೀಗಾಗಿ ನಿತ್ಯ ವಾಕಿಂಗ್ ಮಾಡುತ್ತಿದ್ದಾರೆ. ಬೆಳಗ್ಗೆ ಬೇಗ ಎದ್ದೇಳುವ ದರ್ಶನ್ ರಾತ್ರಿ ಬೇಗ ಮಲಗುತ್ತಿದ್ದಾರೆ. ಅಲ್ಲದೇ ಬೆಳಗ್ಗೆ ಎದ್ದ ಕೂಡಲೇ ಸ್ವಲ್ಪ ಮಟ್ಟಿಗೆ ವರ್ಕೌಟ್ ಜೊತೆಗೆ ಗಂಟೆಗಟ್ಟಲೇ ವಾಕಿಂಗ್ ಮಾಡುತ್ತಿದ್ದಾರೆ. ಜೈಲಿನಲ್ಲಿ ಅನ್ನ ತ್ಯಜಿಸಿರೋ ದರ್ಶನ್ ಸ್ವಲ್ಪ ಮಟ್ಟಿಗೆ ತೂಕವನ್ನೂ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ತನಗೆ ಸೇರಿದ ಜಾಗದ 848 ಖಾತೆ ಮಾಡಿಸಿಕೊಂಡ ಮುಡಾ ಮಾಜಿ ಅಧ್ಯಕ್ಷ

    ಕೆಲ ನಿರ್ಮಾಪಕರು ದರ್ಶನ್ ನಂಬಿಕೊಂಡು ಕೋಟಿ ಕೋಟಿ ಹಣ ಸುರಿದಿದ್ದಾರೆ. ಚಿತ್ರಗಳ ಶೂಟಿಂಗ್ ಬಾಕಿ ಇರುವುದರಿಂದ ಅವರಿಗೂ ಆತಂಕ ಶುರುವಾಗಿದೆ. ಹೀಗಾಗಿ ದರ್ಶನ್ ಅವರ ಫಿಟ್ನೆಸ್ ಮೇಲೆ ಇದೀಗ ಎಲ್ಲರ ಚಿತ್ತವೂ ನೆಟ್ಟಿದೆ. ಎಲ್ಲಿ ದರ್ಶನ್ ಅವರು ಜೈಲಿನ ಊಟದಿಂದಾಗಿ ಫಿಟ್ನೆಸ್ ಕಳೆದುಕೊಂಡು ಬಿಡುತ್ತಾರೆ ಅನ್ನೋ ಆತಂಕವೂ ಅವರ ಅಭಿಮಾನಿಗಳಲ್ಲಿದೆ. ಆದರೆ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾರೆ. ದರ್ಶನ್ ಮಾತ್ರ ಎಲ್ಲಿಯೂ ತಮ್ಮ ಫಿಟ್ನೆಸ್ ಕಳೆದುಕೊಳ್ಳುವ ಸಣ್ಣ ಅವಕಾಶಕ್ಕೂ ದಾರಿ ಮಾಡಿಕೊಟ್ಟಿಲ್ಲ. ಇದನ್ನೂ ಓದಿ: ಗುರುದತ್‌ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

    ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಜೈಲಿನಲ್ಲಿ ಕಷ್ಟ ಆಗುತ್ತಿದ್ದ ಕಾರಣಕ್ಕೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಕೋರ್ಟ್ ಮನೆಯೂಟಕ್ಕೆ ಅವಕಾಶ ಮಾಡಿಕೊಡದ ಕಾರಣ ಅನ್ನ ತ್ಯಜಿಸಿರೋ ದರ್ಶನ್ ವಿಟಮಿನ್ ಟ್ಯಾಬ್ಲೆಟ್ (Vitamin Tablet) ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ – ಅಭಿಮಾನಿಗಳ ಅಭಿಯಾನ

  • ಫ್ಯಾಷನ್ ಹವಾ – ಹುಡ್ಗೀರನ್ನ ಇಂಪ್ರೆಸ್ ಮಾಡೋಕು ಮುನ್ನ ಪ್ರಿಪರೇಶನ್ ಇರಲಿ

    ಫ್ಯಾಷನ್ ಹವಾ – ಹುಡ್ಗೀರನ್ನ ಇಂಪ್ರೆಸ್ ಮಾಡೋಕು ಮುನ್ನ ಪ್ರಿಪರೇಶನ್ ಇರಲಿ

    ಫ್ಯಾಷನ್ (Fashion) ಲೋಕದಲ್ಲೀಗ ಹೊಸ ಟ್ರೆಂಡ್ ಶುರುವಾಗಿದೆ. ಯುವಕರು ಹುಡ್ಗೀರಿಗಿಂತ ನಾವೇನು ಕಮ್ಮಿಯಿಲ್ಲ ಅನ್ನುವಂತೆ ಕಲರ್‌ಫುಲ್ ಡ್ರೆಸ್‌ಗಳ ಮೊರೆ ಹೋಗ್ತಿದ್ದಾರೆ. ತಮ್ಮ ನೆಚ್ಚಿನ ಸಂಗಾತಿ ಅಥವಾ ಗೆಳತಿಯನ್ನ (Girl Friend) ಇಂಪ್ರೆಸ್ ಮಾಡೋಕೆ ಪ್ರತಿದಿನ ಹೊಸ ಹೊಸ ತಂತ್ರ ಹೆಣೆಯುತ್ತಿದ್ದಾರೆ.

    ಹಾಗಿದ್ರೆ ನಿಮ್ಮ ನೆಚ್ಚಿನ ಗೆಳತಿಯನ್ನ ಇಂಪ್ರೆಸ್ ಮಾಡೋಕೆ ಅಥವಾ ಉತ್ತಮ ಲೈಫ್ ಪಾಟ್ನರ್ ಸೆಲೆಕ್ಟ್ ಮಾಡೋಕೆ ಏನೆಲ್ಲಾ ಮಾಡ್ಬೇಕಾಗುತ್ತೆ? ಅದಕ್ಕೆ ಡ್ರೆಸ್ಸಿಂಗ್ ಸೆನ್ಸ್, ಹೇರ್‌ಸ್ಟೈಲ್‌ (Hair Style), ಬಾಡಿ ಫಿಟ್‌ನೆಸ್ (Fitness) ಮತ್ತೆ ಮುಖದ ಅಂದ ಹೆಚ್ಚಿಸುವ ಕನ್ನಡಕ ಎಲ್ಲವೂ ನಿಮಗೆ ಹೇಗೆ ಹೆಲ್ಪ್‌ ಆಗಿರುತ್ತೆ ಅನ್ನೋದನ್ನ ನೋಡೋಣ..

    ಹೇರ್ ಸ್ಟೈಲ್‌ (Hair Style): ಅದೇಷ್ಟೋ ಹುಡ್ಗಿಯರಿಗೆ ಹುಡುಗರು ಗಡ್ಡ ಬಿಟ್ಟರೆ ತುಂಬಾ ಇಷ್ಟ ಆಗ್ತಾರೆ. ಹಾಗಂತ ಹುಚ್ಚರ ಹಾಗೆ ಗಡ್ಡ ಬಿಡ್ಬೇಡಿ ನೀಟಾಗಿ ಶೇಪ್ ಮಾಡಿಸಿ, ನೋಡಿದ್ರೆ ಆಕರ್ಷಿತರಾಗ್ಬೇಕು. ಇನ್ನು ಸ್ವಲ್ಪ ಹುಡುಗಿಯರಿಗೆ ಉದ್ದ ಕೂದಲು ಬಿಡೋ ಹುಡುಗರೇ ಇಷ್ಟ ಆಗ್ತಾರೆ. ಆದರೆ ಡ್ಯಾಂಡ್ರಫ್ ಆಗದೆ ಇರೋ ತರ ನೋಡ್ಕೋಳ್ಳಿ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಡ್ರೆಸ್ಸಿಂಗ್ ಸೆನ್ಸ್: ಹುಡ್ಗೀರನ್ನ ಇಂಪ್ರೆಸ್ ಮಾಡ್ಬೇಕು ಅಂದ್ರೆ ಡ್ರೆಸ್ಸಿಂಗ್ ಸೆನ್ಸ್ ತುಂಬಾನೇ ಮುಖ್ಯ. ಆಕಾರ ವಿಕಾರವಾಗಿ ಅವಳ ಮುಂದೆ ಭಿಕ್ಷುಕನ ರೀತಿ ನಿಂತಂತೆ ಆಗಬಾರದು. ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಆಕರ್ಷಕವಾಗಿದ್ರೆ ಒಳ್ಳೆಯದು. ಕೆಲ ಹುಡ್ಗೀರು ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ನೋಡೀನೆ ನಿಮ್ಮ ಯೋಗ್ಯತೆ ಅಳೆದುಬಿಡ್ತಾರೆ. ಇದನ್ನೂ ಓದಿ: ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಬಾಡಿ ಫಿಟ್ನೆಸ್: ಸಿಕ್ಸ್ ಪ್ಯಾಕ್ ಇಲ್ಲಾ ಅಂದ್ರೂ ಚಿಂತೆ ಇಲ್ಲ ಆದ್ರೆ ಡೊಳ್ಳು ಹೊಟ್ಟೆ ಮಾತ್ರ ಇರ್ಬಾದು. ಯಾಕಂದ್ರೆ ಹುಡ್ಗೀರ ಮೊದಲ ಎಕ್ಸ್ಪೆಕ್ಟೇಷನ್ ನೀವು ಫಿಟ್ ಆಗಿದ್ದೀರಾ ಅನ್ನೋದು. ಆದ್ದರಿಂದ ವ್ಯಾಯಾಮ ಮಾಡೋದನ್ನ ರೂಢಿಸಿಕೊಳ್ಳಿ. ಸ್ವಿಮ್ಮಿಂಗ್ ಕಲಿತಿದ್ದರೆ ತುಂಬಾ ಒಳ್ಳೆಯದು. ನೀರಿನ ಸ್ಥಳದಲ್ಲಿ ಹುಡುಗಿ ಅಪಾಯಕ್ಕೆ ಸಿಲುಕಿದಾಗ ಕಾಪಾಡಬಹುದು.

    ತುಂಬಾ ಜಂಟಲ್ ಮ್ಯಾನ್ ಆಗ್ಬೇಡಿ: ಕೆಲವು ಹುಡ್ಗೀರಿಗೆ ಫಾರ್ಮಲ್ಸ್ ಡ್ರೆಸ್‌ನಲ್ಲಿದ್ದರೆ ಇಷ್ಟ ಆಗಲ್ಲ. ಆಗಾಗ್ಗೆ ಕಲರ್‌ಫುಲ್ ಆಗಿ ಬದಲಾಗುತ್ತಿದೆ. ಜೊತೆ – ಜೊತೆಗೆ ಮಿತಿ ಮೀರದಂತೆ ತರಲೆ ಮಾಡುವ ಕಲೆ ಇರಲಿ. ಯಾವಾಗಲೂ ವಿಚಾರಗಳನ್ನೇ ಮಾತಾಡ್ತಿದ್ದರೆ ನೀವು ಪುಸ್ತಕದ ಬದನೆಕಾಯಿ ಅನ್ನೋದು ಗೊತ್ತಾಗುತ್ತೆ.

    ಪ್ರಿಪರೇಶನ್ ಇರಲಿ: ಹುಡ್ಗಿ ಮೆಚ್ಚಿಕೊಳ್ಳಬೇಕಂತಾ ಬ್ರಾಂಡೆಡ್ ಬಟ್ಟೆ ಹಾಕೊಂಡು ಟ್ಯಾಗ್ಸ್ ತೋರಿಸಿ ಇಂಪ್ರೇಸ್ ಮಾಡೋಕೆ ಹೋದ್ರೆ ಯಡವಟ್ಟಾಗುತ್ತೆ. ಸಿಂಪಲ್ ಅಂಡ್ ಸ್ಮಾರ್ಟ್ ಆಗಿರುವ ಡ್ರೆಸ್ ಧರಿಸಿ ಆಕೆಯ ಜತೆ ಕಂಫರ್ಟ್ ಆಗಿ ಮಾತನಾಡಿ, ಅವಳು ನಿಮ್ಮ ಪ್ರತಿ ಮಾತನ್ನು ಇಷ್ಟಪಟ್ಟು ನಗುತ್ತಾ ಕೇಳುವಂತೆ ನೋಡಿಕೊಳ್ಳಿ. ಜೊತೆಗೊಂದು ಕಂಫರ್ಟ್ ಬೈಕ್ ಇರಲಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k