Tag: ಬಾಡಿಗೆ ತಾಯಿ

  • ನಯನತಾರ ಬಾಡಿಗೆ ತಾಯಿ ವಿವಾದ ಸುಖಾಂತ್ಯ: ಸರಕಾರ ಸಲ್ಲಿಸಿದ ವರದಿಯಲ್ಲೇನಿದೆ?

    ನಯನತಾರ ಬಾಡಿಗೆ ತಾಯಿ ವಿವಾದ ಸುಖಾಂತ್ಯ: ಸರಕಾರ ಸಲ್ಲಿಸಿದ ವರದಿಯಲ್ಲೇನಿದೆ?

    ಮಿಳಿನ ಸೂಪರ್ ಸ್ಟಾರ್ ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ದಂಪತಿ ಬಾಡಿಗೆ ತಾಯಿ ಪ್ರಕರಣ ಸಖತ್ ಸದ್ದು ಮಾಡಿತ್ತು. ಸರಕಾರ ರೂಪಿಸಿರುವ ನಿಯಮಗಳಂತೆ ಅವರು ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆದಿಲ್ಲ ಎಂದು ಆರೋಪಿಸಿ, ಸರಕಾರವು ತನಿಖೆಗೆ ಆದೇಶಿಸಿತ್ತು. ಇದೀಗ ತನಿಖಾ ತಂಡ ವರದಿ ನೀಡಿದ್ದು, ವರದಿ ನೋಡಿದ ಸ್ಟಾರ್ ದಂಪತಿಯು ನಿಟ್ಟುಸಿರಿಟ್ಟಿದ್ದಾರೆ.

    ಬಾಡಿಗೆ ತಾಯಿಯಿಂದ (surrogate mother) ಮಗುವನ್ನು ಪಡೆಯಲು ತಮಿಳು ನಾಡು ಸರಕಾರವು ನಿಯಮಗಳನ್ನು ರೂಪಿಸಿದೆ. ಅದನ್ನು ನಯನತಾರ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿಯೇ ಸರಕಾರವು ತನಿಖೆಗೆ ಆದೇಶಿಸಿತ್ತು. ಮದುವೆಯಾದ ನಾಲ್ಕೇ ತಿಂಗಳಿಗೆ ಮಗುವನ್ನು ಪಡೆದ ಕಾರಣಕ್ಕಾಗಿ ಅನುಮಾನ ಕೂಡ ಮೂಡಿತ್ತು. ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಕುತೂಹಲ ಮೂಡಿಸುವಂತ ವರದಿಯನ್ನೇ ಕೊಟ್ಟಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಚೆನ್ನೈನ ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವರನ್ನು ತನಿಖಾ ತಂಡ ವಿಚಾರಣೆ ನಡೆಸಿದೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಒಂದಷ್ಟು ಅಚ್ಚರಿಯ ಮಾಹಿತಿಯನ್ನೂ ಸರಕಾರಕ್ಕೆ ನೀಡಿದ್ದಾರೆ. ಬಾಡಿಗೆ ತಾಯಿಗೂ ಕೂಡ ಮದುವೆ ಆಗಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ. ಅಲ್ಲದೇ, 2021ರ ಆಗಸ್ಟ್ ನಲ್ಲಿ ಸರೋಗಸಿ ಪ್ರಕ್ರಿಯೆ ಒಪ್ಪಂದ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ನಯನತಾರಾ ಅವರ ಫ್ಯಾಮಿಲಿ ಡಾಕ್ಟರ್ ವಿದೇಶದಲ್ಲಿ ಇರುವುದರಿಂದ ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.

    ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ 2016 ಮಾರ್ಚ್ 11 ರಂದು ಮದುವೆ ಆಗಿರುವುದಾಗಿ ಅಫಿಡವಿಟ್ ನಲ್ಲಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. 2022 ಜೂನ್ 9 ರಂದು ಸಾರ್ವಜನಿಕವಾಗಿ ಈ ಜೋಡಿ ಮದುವೆ ಆಗಿತ್ತು. ಮದುವೆ ವಿಚಾರ ಕೂಡ ಇದೀಗ ಭಾರೀ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅವಳಿ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಯನತಾರಾ ದಂಪತಿ

    ಅವಳಿ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಯನತಾರಾ ದಂಪತಿ

    ಮೊನ್ನೆಯಷ್ಟೇ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದಿದ್ದ ತಮಿಳಿನ ಖ್ಯಾತ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan), ಇದೀಗ ದೀಪಾವಳಿ ದಿನದಂದು ಮಕ್ಕಳನ್ನು (children) ಮನೆಗೆ ಬರಮಾಡಿಕೊಂಡಿದ್ದಾರೆ. ತಮ್ಮ ಮನೆಯ ನೂತನ ಸದಸ್ಯರ ಜೊತೆ ದೀಪಾವಳಿಯನ್ನು ಸಡಗರದಿಂದ ಆಚರಿಸಿದ್ದಾರೆ.

    ಅವಳಿ ಮಕ್ಕಳನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ದಂಪತಿ, ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಈ ದೀಪಾವಳಿ ಎಂದೆಂದಿಗೂ ಮರೆಯದ ದೀಪಾವಳಿ ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಈ ಸ್ಟಾರ್ ದಂಪತಿಗೆ ಶುಭಾಶಯ ಹೇಳಿದ್ದು, ಮಕ್ಕಳ ಮುಖವನ್ನು ಯಾವಾಗ ತೋರಿಸುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಇತ್ತೀಚೆಗಷ್ಟೇ ತಾವು ಬಾಡಿಗೆ ತಾಯಿ (surrogate mother) ಮೂಲಕ ಮಗುವನ್ನು ಪಡೆದಿರುವ ವಿಚಾರವನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ನಂತರ ತಮಗೆ ಅವಳಿ ಮಕ್ಕಳಾದ ವಿಚಾರವನ್ನೂ ಶೇರ್ ಮಾಡಿದ್ದರು. ಬಾಡಿಗೆ ತಾವು ವಿಚಾರವು ಸಖತ್ ಸದ್ದು ಮಾಡಿತ್ತು. ಅಲ್ಲದೇ, ಬಾಡಿಗೆ ತಾಯಿ ವಿಚಾರವಾಗಿ ಸ್ಟಾರ್ ದಂಪತಿ ವಿಚಾರಣೆ ಮಾಡಬೇಕು ಎಂದು ತಮಿಳು ನಾಡು ಸರಕಾರ ಸೂಚಿಸಿತ್ತು. ಕ್ರಮಬದ್ಧವಾಗಿ ಮಕ್ಕಳನ್ನು ಪಡೆದಿದ್ದಾರಾ ಎನ್ನುವ ಪ್ರಶ್ನೆಯನ್ನೂ ಮಾಡಿತ್ತು.

    ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಸ್ಟಾರ್ ದಂಪತಿ, ಕಳೆದ ಐದಾರು ವರ್ಷಗಳಿಂದ ಸಹಜ ಜೀವನ ನಡೆಸುತ್ತಿದ್ದರು. ಆರೇಳು ತಿಂಗಳ ಹಿಂದೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲೇ ತಾವು ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆದರು. ಇದೀಗ ಖುಷಿಯಾಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾಗೆ ಬಾಡಿಗೆ ತಾಯಿ ಸಂಕಷ್ಟ: ಕೊನೆಗೂ ಮೌನ ಮುರಿದ ವಿಘ್ನೇಶ್ ಶಿವನ್

    ನಯನತಾರಾಗೆ ಬಾಡಿಗೆ ತಾಯಿ ಸಂಕಷ್ಟ: ಕೊನೆಗೂ ಮೌನ ಮುರಿದ ವಿಘ್ನೇಶ್ ಶಿವನ್

    ಬಾಡಿಗೆ ತಾಯಿ (Surrogate Mother) ಮೂಲಕ ಅವಳಿ ಮಕ್ಕಳ ಪೋಷಕರಾಗಿರುವ  ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್, ಮಕ್ಕಳೊಂದಿಗೆ ನೆಮ್ಮದಿಯಾಗಿ ಇರಬೇಕು ಎನ್ನುವ ಹೊತ್ತಿನಲ್ಲಿ ಸಂಕಟವೊಂದು ಎದುರಾಗಿದೆ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದುಕೊಳ್ಳಲು ಕೆಲ ನಿಯಮಗಳಿಗೆ. ಅವುಗಳನ್ನು ಪಾಲಿಸದೇ ಮಕ್ಕಳನ್ನು ಪಡೆದಿದ್ದಾರೆ ಎನ್ನುವ ಆರೋಪ (Allegation) ಇವರ ಮೇಲಿದೆ.

    ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Sivan) ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವಾಗ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಕಾರಣದಿಂದಾಗಿ ತಮಿಳು ನಾಡು ಸರಕಾರ ನೋಟಿಸ್ ನೀಡಿದೆ ಮತ್ತು ವಿಚಾರಣೆ ನಡೆಸುತ್ತಿದೆ. ಈ ಹೊತ್ತಿನಲ್ಲಿ ನಯನತಾರಾ ಅಥವಾ ವಿಘ್ನೇಶ್ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪ್ರಥಮ ಬಾರಿಗೆ ಮೌನ ಮುರಿದಿರುವ ವಿಘ್ನೇಶ್ ತಮ್ಮ ಇನ್ಸ್ಟಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಇನ್ಸ್ಟಾದ ಸ್ಟೋರಿಯಲ್ಲಿ ಕೆಲವು ಸಾಲುಗಳನ್ನು ಬರೆದಿರುವ ವಿಘ್ನೇಶ್ ಶಿವನ್, ‘ನಿನ್ನ ಸುತ್ತಮುತ್ತಲಿನವರನ್ನು ಗಮನಿಸು. ನಿನಗೆ ಒಳ್ಳೆಯದನ್ನು ಬಯಸುವವರು ಮಾತ್ರ ನಿನ್ನವರು. ನಿನ್ನ ಜೊತೆಗಿದ್ದು, ನಿನ್ನ ಕ್ಷೇಮ ಬಯಸುವವರನ್ನು ನಂಬು. ಇದೇ ವಾಸ್ತವ’ ಎಂದು ಬರೆದುಕೊಂಡಿದ್ದಾರೆ. ಹಾಗಾದರೆ, ಇವರ ಜೊತೆಗಿದ್ದು ಇವರ ಕ್ಷೇಮ ಬಯಸದಂತಹ ವ್ಯಕ್ತಿಗಳು ಇದ್ದಾರಾ ಎನ್ನುವ ಅನುಮಾನವನ್ನು ಇದು ಹುಟ್ಟು ಹಾಕಿದೆ.

    ಮತ್ತೊಂದು ಸ್ಟೋರಿಯಲ್ಲಿ ‘ಸಮಯವು ಎಲ್ಲವನ್ನೂ ಹೇಳುತ್ತದೆ. ಅಲ್ಲಿವರೆಗೂ ಸಹನೆಯಿಂದ ಕಾಯಬೇಕು’ ಎಂದು ಬರೆದಿದ್ದಾರೆ. ಅಂದರೆ, ಈ ಘಟನೆಯು ಪರೋಕ್ಷವಾಗಿ  ತಮ್ಮನ್ನು ಬಾಧಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿಯೇ ಹೇಳಿಕೊಂಡಿದ್ದಾರೆ. ತಾವು ನಿಯಮದಂತೆಯೇ ಮಕ್ಕಳನ್ನು ಪಡೆದಿರುವ ಕುರಿತಾಗಿಯೂ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ನಯನತಾರ ಬಾಡಿಗೆ ತಾಯ್ತನದ ಮಗು: ತನಿಖೆಗೆ ಆದೇಶಿಸಿದ ತಮಿಳು ನಾಡು ಸರಕಾರ

    ನಟಿ ನಯನತಾರ ಬಾಡಿಗೆ ತಾಯ್ತನದ ಮಗು: ತನಿಖೆಗೆ ಆದೇಶಿಸಿದ ತಮಿಳು ನಾಡು ಸರಕಾರ

    ನಿನ್ನೆಯಷ್ಟೇ ತಾವು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವುದಾಗಿ ನಟಿ ನಯನತಾರಾ (Nayantara) ಮತ್ತು ವಿಘ್ನೇಶ್ ಶಿವನ್ ಘೋಷಿಸಿದ್ದರು. ಅದು ಅವಳಿ ಜವಳಿ ಮಕ್ಕಳಾಗಿರುವ ಮತ್ತು ಆ ಮಗುವಿಗೆ ಹೆಸರೂ ಇಟ್ಟಿರುವ ಕುರಿತು ಖುಷಿಯನ್ನು ಹಂಚಿಕೊಂಡಿದ್ದರು. ಮನೆಗೆ ಮಕ್ಕಳು ಬಂದು ಖುಷಿಯಲ್ಲಿರುವ ದಂಪತಿಗೆ ತಮಿಳುನಾಡು (Tamil Nadu) ಸರಕಾರ ಶಾಕ್ ಮೂಡಿಸಿದೆ. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದದ್ದು ನಿಯಮಗಳ ಪ್ರಕಾರವೇ ಇದೆಯಾ ಎಂದು ಕೇಳಿದೆ.

    ಬಾಡಿಗೆ ತಾಯ್ತನದ ಕುರಿತು ಸರಕಾರವು ಹಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Sivan) ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ತಮಿಳು ನಾಡು ಸರಕಾರ (Government) ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-35ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ.

    ಬಾಡಿಗೆ ತಾಯಿಯಿಂದ (Surrogate Mother) ಮಗು ಪಡೆಯಲು ಇವೆಲ್ಲ ನಿಯಮಗಳನ್ನು ಪಾಲಿಸಲೇಬೇಕಿದೆ. ಆದರೆ, ನಯನ ದಂಪತಿ ಇವುಗಳನ್ನು ಪಾಲಿಸಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ನಾಡು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ತನಿಖೆಗೆ (Investigation) ಆದೇಶಿಸಿದೆ. ಈ ತನಿಖೆಯು ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಳಗಂ ಜೊತೆ ಆಟವಾಡುತ್ತಿದ್ದ ದಂಪತಿಗೆ ಶಾಕ್ ಮೂಡಿಸಿದೆ. ಇದನ್ನೂ ಓದಿ:ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಗೆ ಸಂಜಯ್ ದತ್

    ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕಳೆದ ಜೂನ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದ್ದರು. ತಾವಿಷ್ಟಪಟ್ಟ ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ಧರು.

    ಮಾರ್ಚ್ ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದರೂ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬ ಸುದ್ದಿಯೂ ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಸುದ್ದಿ ಆಯಿತು. ಅದು ಕೂಡ ಇದೀಗ ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಅದನ್ನೂ ನಿಜ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗಿ 4 ತಿಂಗ್ಳು: ಅವಳಿ ಮಕ್ಕಳ ತಾಯಿಯಾದ ನಯನತಾರಾ ಟ್ರೋಲ್

    ಮದುವೆಯಾಗಿ 4 ತಿಂಗ್ಳು: ಅವಳಿ ಮಕ್ಕಳ ತಾಯಿಯಾದ ನಯನತಾರಾ ಟ್ರೋಲ್

    ಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಖ್ಯಾತ ನಟಿ ನಯನತಾರಾ (Nayantara) ಮೂರ್ನಾಲ್ಕು ತಿಂಗಳ ಹಿದೆಯಷ್ಟೇ ಮದುವೆ ಆಗಿದ್ದಾರೆ. ಮದುವೆ ಆಗಿ ನಾಲ್ಕೇ ತಿಂಗಳಿಗೆ ತಾವು ಜವಳಿ ಮಕ್ಕಳ ಪಾಲಕರಾಗುತ್ತಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ ಮಕ್ಕಳ ಕಾಲುಗಳ ಫೋಟೋವನ್ನು ಅಪ್ ಲೋಡ್ ಮಾಡಿ, ಟ್ರೋಲ್ ಗೆ ಗುರಿಯಾಗಿದ್ದಾರೆ.

    ಬಾಡಿಗೆ ತಾಯಿ (Surrogate mother) ಮೂಲಕ ಜವಳಿ (twins) ಮಕ್ಕಳಿಗೆ ತಾವು ತಾಯಿ ಆಗಿದ್ದೇನೆ ಎಂದು ನಯನತಾರಾ ಘೋಷಿಸುತ್ತಿದ್ದಂತೆಯೇ ಶುಭ ಹಾರೈಸಿದ್ದವರಿಗಿಂತ ನೆಗೆಟಿವ್ ಕಾಮೆಂಟ್ ಮಾಡಿದವರೇ ಹೆಚ್ಚಾಗಿದ್ದಾರೆ. ಕೆಲವರು ತಾಯ್ತನದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಅನೇಕರು ಮನೆಗೆ ಬರುತ್ತಿರುವ ಹೊಸ ಅತಿಥಿಗೆ ಶುಭ ಹಾರೈಸಿದ್ದಾರೆ. ಎರಡೂ ಮಕ್ಕಳು ನಿಮ್ಮಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆಯಲಿ ಎಂದು ಕಾಮೆಂಟ್ ಮಾಡಿದ್ದಾರೆ.

    ಮದುವೆಯಾದ 4 ತಿಂಗಳಿಗೆ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan), ನಟಿ ನಯನತಾರಾ ದಂಪತಿ ಅಭಿಮಾನಿಗಳಿಗಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಯನತಾರ ಅವಳಿ ಮಕ್ಕಳ ತಾಯಿ ಎಂದು ಇನ್ಸ್ಟಾದಲ್ಲಿ ದಂಪತಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅರೇ, ಮದುವೆಯಾದ 4 ತಿಂಗಳಿಗೆ ಇದು ಹೇಗೆ ಸಾಧ್ಯ ಎನ್ನುವವರಿಗೆ ಉತ್ತರವನ್ನೂ ಕೊಟ್ಟಿರುವ ದಂಪತಿ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಾಲಕರಾಗಿದ್ದಾರೆ ಈ ಜೋಡಿ.

    ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕಳೆದ ಜೂನ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದ್ದರು. ತಾವಿಷ್ಟಪಟ್ಟ ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ಧರು. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಮಾರ್ಚ್ ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದರೂ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬ ಸುದ್ದಿಯೂ ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಸುದ್ದಿ ಆಯಿತು. ಅದು ಕೂಡ ಇದೀಗ ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಅದನ್ನೂ ನಿಜ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಈ ದಂಪತಿ ಹನಿಮೂನ್ ಗೆ ಹೋದಾಗಲೂ ಮಗುವಿನ ಪಾದಗಳಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆಗಲೂ ಕೂಡ ಅಷ್ಟೇ ಕುತೂಹಲಕ್ಕೆ ಕಾರಣವಾಗಿತ್ತು ಆ ಪೋಸ್ಟ್. ಇದೀಗ ಅದು ಕೂಡ ನಿಜವಾಗಿದೆ. ಅಭಿಮಾನಿಗಳು ಮತ್ತು ಆಪ್ತರು ಈ ಜೋಡಿಗೆ ಶುಭಾಶಯ ಹೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಡಿಗೆ ತಾಯಿಯಾಗಿದ್ದ 4 ತಿಂಗಳ ಗರ್ಭಿಣಿ ಮೇಲೆ ಹಲ್ಲೆ

    ಬಾಡಿಗೆ ತಾಯಿಯಾಗಿದ್ದ 4 ತಿಂಗಳ ಗರ್ಭಿಣಿ ಮೇಲೆ ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆ ನಡೆದರೂ ಬೇಗೂರು ಪೊಲೀಸರು ಕಣ್ಣಿಲ್ಲದವರಂತೆ ವರ್ತಿಸಿದ್ದಾರೆ. ಬಾಡಿಗೆ ತಾಯಿಯಾಗಿದ್ದ ನಾಲ್ಕು ತಿಂಗಳ ಗರ್ಭಿಣಿಗೆ ಗರ್ಭಪಾತವಾಗುವರೆಗೆ ಹಲ್ಲೆ ನಡೆಸಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.

    ಹಫ್ತಾ ವಸೂಲಿ ಮಾಡಲು ತೆರಳಿ ಹಣ ನೀಡದಿದ್ದಕ್ಕೆ ಆರು ಜನರ ಗ್ಯಾಂಗ್ ಹಲ್ಲೆ ನಡೆಸಿದೆ. ಸ್ವಾತಿ ಎಂಬ ಮಹಿಳಾ ಸಂಘಟನೆಯೊಂದರ ಹೆಸರೇಳಿಕೊಂಡು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಮೀಳಾ, ಪ್ರೇಮ, ರೀಟಾ, ಆಶಾ, ಪೂಜಾ ಹಾಗೂ ಮಂಜುನಾಥ್ ಧಾಂದಲೇ ನಡೆಸಿ ಹಲ್ಲೆ ನಡೆಸಿದ್ದಾರೆ.

    ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಪಿಜಿಯೊಂದರಲ್ಲಿ ಆರೈಕೆಯಲ್ಲಿದ್ದ ಗರ್ಭಿಣಿಗೆ ಮಾರ್ಚ್ 11ರ ಪಿಜಿಗೆ ನುಗ್ಗಿದ ಈ ಗ್ಯಾಂಗ್ ಹಣಕ್ಕಾಗಿ ಬೇಡಿಕೆ ಇಟ್ಟಿದೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಪಿ.ಜಿ ಮಾಲೀಕರಾದ ಗೀತಾ ಮತ್ತು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ ಪರಿಣಾಮ ಗರ್ಭಪಾತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಪಿಜಿ ಮಾಲೀಕರಾದ ಗೀತಾರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

    ಆರು ಜನ ಆರೋಪಿಗಳ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆದರೆ ಇಂಥ ಕಟುಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.