Tag: ಬಾಗೇಪಲ್ಲಿ

  • ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

    ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

    ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.

    ಅಚೇಪಲ್ಲಿ ಗ್ರಾಮದ ವಿಷ್ಣು (14), ನಿಹಾಲ್ ರಾಜ್ (12) ಮತ್ತು ಹರ್ಷವರ್ಧನ್ (16) ಮೃತ ದುರ್ದೈವಿಗಳು. ಇದನ್ನೂ ಓದಿ: ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು

    ದಸರಾ ರಜೆ ಹಿನ್ನೆಲೆ ಶಾಲೆಗಳಿಗೆ ರಜೆ ಇದ್ದುದ್ದರಿಂದ ಬಾಲಕರು ಕೆರೆಯಲ್ಲಿ ಈಜಾಡಲು ತೆರಳಿದ್ದರು. ಮೊದಲಿಗೆ ವಿಷ್ಣು ಹಾಗೂ ನಿಹಾಲ್ ರಾಜ್ ಈಜಾಡಲು ತೆರಳಿದ್ದು, ಅವರು ನೀರಿನಲ್ಲಿ ಮುಳುಗುತ್ತಿದ್ದುದ್ದನ್ನು ಕಂಡ ಹರ್ಷವರ್ಧನ್ ರಕ್ಷಣೆಗೆ ಮುಂದಾಗಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮೂವರ ಮೃತದೇಹಗಳನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸ್ವಾಂತಾನ ಹೇಳಿ, ವೈಯುಕ್ತಕವಾಗಿ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

  • ಬೆಂಗಳೂರಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ – ನಡು ರಸ್ತೆಯಲ್ಲಿ ಕೊಲೆಗೈದು ಪರಾರಿ

    ಬೆಂಗಳೂರಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ – ನಡು ರಸ್ತೆಯಲ್ಲಿ ಕೊಲೆಗೈದು ಪರಾರಿ

    – ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಬೆಂಗಳೂರು: ನಡುರಸ್ತೆಯಲ್ಲೇ ಪತ್ನಿಯನ್ನು ಬರ್ಬರ ಹತ್ಯೆಗೈದು ಪತಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ ನಡೆದಿದೆ.

    ಬಾಗೇಪಲ್ಲಿ (Bagepalli) ಮೂಲದ ಶಾರದ (35) ಮೃತ ಪತ್ನಿ. ಕೃಷ್ಣ ಪತ್ನಿಯನ್ನು ಕೊಂದ ಪಾಪಿ ಪತಿ. ಅಕ್ರಮ ಸಂಬಂಧ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ನಡು ರಸ್ತೆಯಲ್ಲಿ ಪತ್ನಿಗೆ ಚಾಕುವಿನಿಂದ ಕುತ್ತಿಗೆ ಕುಯ್ದು ಪತಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗ್ನೇಯ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಸೋಕೋ ಟೀಂ ಆಗಮಿಸಿದೆ. ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಯಾವುದೇ ಮಸೀದಿ, ಕಬ್ರಸ್ತಾನ್‌ ಮುಟ್ಟಲ್ಲ: ವಕ್ಫ್‌ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ

    ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪತ್ನಿ ಕೆಲಸ ಮುಗಿಸಿ ನಿರ್ಜನ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪತಿ ದಾಳಿ ನಡೆಸಿದ್ದಾನೆ. ಆರೋಪಿ ಪತ್ನಿಯನ್ನು ಕೊಲ್ಲಲು ಎರಡು ಚಾಕು ತಂದಿದ್ದ. ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಆರೋಪಿ ಪತಿಯನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್‌ – ಶಾಸಕ ಪೊನ್ನಣ್ಣ & ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ನಲ್ಲೇನಿದೆ?

    ಘಟನೆ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಸಾರ ಫಾತಿಮಾ ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು 8 ಗಂಟೆಯ ಸಮಯದಲ್ಲಿ ನಮ್ಮ ಕಂಟ್ರೋಲ್ ರೂಮಿಗೆ ಮಾಹಿತಿ ಬಂತು. ನಮ್ಮ ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಶಾರದಾ ಎಂಬ ಮಹಿಳೆಯ ಕೊಲೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ನಮ್ಮ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂದು ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಸಂಪೂರ್ಣ ವಿಚಾರ ಗೊತ್ತಾಗಬೇಕಾಗಿದೆ. ಇದನ್ನೂ ಓದಿ: Bengaluru | ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

  • ವರ್ಷದ ತಿಥಿ ಮುನ್ನವೇ ಹೆಂಡತಿ ಸಮಾಧಿ ಎದುರು ಗಂಡ ನೇಣಿಗೆ ಶರಣು

    ವರ್ಷದ ತಿಥಿ ಮುನ್ನವೇ ಹೆಂಡತಿ ಸಮಾಧಿ ಎದುರು ಗಂಡ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ಹೆಂಡತಿ ಸಮಾಧಿಗೆ (Grave) ಪೂಜೆ ಮಾಡಿ ಆಕೆಯ ಸಮಾಧಿ ಎದುರೇ ಗಂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ (Bagepalli) ಪಟ್ಟಣದ ಹೊರವಲಯದ ತೀಮಾಕಲಪಲ್ಲಿ ಸ್ಮಶಾನದಲ್ಲಿ ನಡೆದಿದೆ.

    ನಗರದ 16ನೇ ವಾರ್ಡ್ ನಿವಾಸಿ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಗುರುಮೂರ್ತಿ ಅಲಿಯಾಸ್ ಲೆಗ್ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಕಳೆದ ವರ್ಷ ಡಿಸೆಂಬರ್ 20 ರಂದು ಪತ್ನಿ ಮೌನಿಕಾ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಗುರುಮೂರ್ತಿ ಕೂಡಾ ಹೆಂಡತಿ ಸಾವಿನ ನೋವಲ್ಲೇ ಮಾನಸಿಕ ಕಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಕಿ ತಗುಲಿ ಬೀದಿ ಬದಿ ಅಂಗಡಿಗಳು ಭಸ್ಮ

    ಇಂದು ಬೆಳಗ್ಗೆ ವಾಕಿಂಗ್ ಹೋಗಿ ಬರುವುದಾಗಿ ಹೇಳಿ ಹೋಗಿರುವ ಗುರುಮೂರ್ತಿ ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ತದನಂತರ ಅಲ್ಲೇ ಇದ್ದ ಮರಕ್ಕೆ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದು ದೇಹವನ್ನು ಕಾಲುವೆಗೆ ಎಸೆದ್ರು!

  • ಗ್ರಾಮದ ಮಧ್ಯದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

    ಗ್ರಾಮದ ಮಧ್ಯದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

    ಚಿಕ್ಕಬಳ್ಳಾಪುರ: ಗ್ರಾಮದ ಮಧ್ಯದಲ್ಲೇ ಯುವಕನೋರ್ವನನ್ನು (Youth) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ (Bagepalli) ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಗಜೇಂದ್ರ (28) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಚಾಲಕನಾಗಿದ್ದ ಎಂದು ತಿಳಿದುಬಂದಿದೆ. ಬುಧಾವಾರ ರಾತ್ರಿ ಗ್ರಾಮದ ಎಂಎಸ್‌ಐಎಲ್ ಮದ್ಯದಂಗಡಿ ಬಳಿ ಯುವಕರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಆದರೆ ಯಾವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿಲ್ಲ. ಇಂದು ಬೆಳಗ್ಗೆ ನಡುರಸ್ತೆಯಲ್ಲಿ ಗಜೇಂದ್ರ ರಕ್ತಸಿಕ್ತವಾಗಿ ಪತ್ತೆಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮುಲ್ಕಿಯಲ್ಲಿ ಲಾರಿ ಡ್ರೈವರ್ ಅವಾಂತರ- ಬೈಕ್, ಆಟೋರಿಕ್ಷಾ, ಪೊಲೀಸ್ ಸಿಬ್ಬಂದಿಗೆ ಡಿಕ್ಕಿ

    ಬೆಳಗ್ಗೆ ಎಂದಿನಂತೆ ಜನ ಎದ್ದು ಬಂದಾಗ ನಡುರಸ್ತೆಯಲ್ಲಿ ಮೃತದೇಹ ಕಂಡು ಬೆಚ್ಚಿ ಬಿದ್ದಿದ್ದಾರೆ. ಬಾಗೇಪಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಓವರ್‌ಟೇಕ್ ಭರದಲ್ಲಿ ಮರಕ್ಕೆ ಬಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು

  • ಓವರ್‌ಟೇಕ್ ಭರದಲ್ಲಿ ಮರಕ್ಕೆ ಬಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು

    ಓವರ್‌ಟೇಕ್ ಭರದಲ್ಲಿ ಮರಕ್ಕೆ ಬಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು

    ಚಿಕ್ಕಬಳ್ಳಾಪುರ: ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ (Bus) ಮರಕ್ಕೆ ಡಿಕ್ಕಿಯಾಗಿ (Accident) ಇಬ್ಬರು ಸಾವಿಗೀಡಾದ ಘಟನೆ ಬಾಗೇಪಲ್ಲಿಯ (Bagepalli) ಪಾತಪಾಳ್ಯ ಬಳಿಯ ನಗರ್ಲು ಕ್ರಾಸ್ ಬಳಿ ನಡೆದಿದೆ.

    ಬಸ್ ಚೇಳೂರು ಚಾಕವೇಲು ಪಾತಪಾಳ್ಯ ಮೂಲಕ ಬಾಗೇಪಲ್ಲಿಗೆ ಬರುತ್ತಿತ್ತು. ಈ ವೇಳೆ ಚಾಲಕ ‌ಓವರ್‌ಟೇಕ್ ಮಾಡುವ ವೇಳೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ಹಲವು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಂತಾಮಣಿ ಹಾಗೂ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಲಾರಿ, ಟಾಟಾ ಏಸ್ ನಡುವೆ ಡಿಕ್ಕಿ – ನಾಲ್ವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ

    ಅಪಘಾತಕ್ಕೊಳಗಾದ ಬಸ್‍ನ್ನು ಜೆಸಿಬಿ ಮೂಲಕ ತೆರವು ಮಾಡಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

    ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸುದ್ದಿಗೋಷ್ಠಿಗೆ ಮುನ್ನವೇ ಮಣಿಕಂಠ್ ರಾಠೋಡ್‌ನ ವಶಕ್ಕೆ ಪಡೆದ ಕಲಬುರಗಿ ಪೊಲೀಸರು

  • ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

    ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

    ಚಿಕ್ಕಬಳ್ಳಾಪುರ: ಕೆರೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ (SSLC Student) ಶವ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ (Bagepally) ಪಟ್ಟಣ ಹೊರವಲಯದ ಕೊಂಡವಾರಪಲ್ಲಿಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಈರೇನಹಳ್ಳಿ ಗ್ರಾಮದ ನಿವಾಸಿ ಶಂಕರ್ ಹಾಗೂ ನಾಗಮ್ಮ ದಂಪತಿಯ ಪುತ್ರಿ ನಯನ (15) ಮೃತ ವಿದ್ಯಾರ್ಥಿನಿ. ಶನಿವಾರ ಗ್ರಾಮದಿಂದ ಚಿಕ್ಕಬಳ್ಳಾಪುರದ ಖಾಸಗಿ ಶಾಲೆಗೆ ಹೋಗುವುದಾಗಿ ಹೇಳಿದ ವಿದ್ಯಾರ್ಥಿನಿ ಶಾಲೆಗೆ ಹೋಗಿಲ್ಲ. ಬದಲಾಗಿ ಚಿಕ್ಕಬಳ್ಳಾಪುರ ನಗರದಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬಾಗೇಪಲ್ಲಿಗೆ ತೆರಳಿ ಅಲ್ಲಿಂದ ಬಾಗೇಪಲ್ಲಿ ಪಟ್ಟಣ ಹೊರವಲಯದ ಕೊಂಡ್ರವಾರಪಲ್ಲಿ ಕೆರೆ ಬಳಿ ಹೋಗಿದ್ದಾಳೆ.

    ಕೆರೆಯ ದಡದಲ್ಲಿ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆಯಾಗಿದ್ದು ಕೆರೆಯಲ್ಲಿ ವಿದ್ಯಾರ್ಥಿನಿ ಶವ ತೇಲಿ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಕುರಿಗಾಹಿಗಳು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಬ್ಯಾಗ್ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿಯ ವಿಳಾಸ ತಿಳಿದುಬಂದಿದೆ. ಬಳಿಕ ಪೋಷಕರು ಹಾಗೂ ಶಾಲೆಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್‌ಗಳ ಅಪಘಾತದಲ್ಲಿ ನೆಲಕ್ಕೆ ಬಿದ್ದ ಸವಾರರ ಮೇಲೆ ಹರಿದ ಲಾರಿ – ಮೂವರು ಸ್ಥಳದಲ್ಲೇ ಸಾವು

    ವಿದ್ಯಾರ್ಥಿನಿಯ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬುದು ಇನ್ನೂ ಖಚಿತವಾಗಿಲ್ಲ. ಆಕೆಯ ಪೋಷಕರು ಸಹ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ವಿದ್ಯಾರ್ಥಿನಿ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿಗೆ ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    ಚಿಕ್ಕಬಳ್ಳಾಪುರ: ಮನೆಯ ಪಕ್ಕದ ನೀರಿನ ಸಿಮೆಂಟ್ ತೊಟ್ಟಿಯಲ್ಲಿ ಮಗುವಿನ (Child) ಮೃತದೇಹ ಪತ್ತೆಯಾಗಿದೆ. ಅನುಮಾಮಾಸ್ಪದವಾಗಿ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರೇಚನಾಯ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಜಶೇಖರ ರೆಡ್ಡಿ ಹಾಗೂ ಕನ್ಯಾಕುಮಾರಿ ದಂಪತಿಯ 2 ವರ್ಷದ ಮಗು ಲಲಿತ ರೆಡ್ಡಿ ಮೃತ ದುರ್ದೈವಿ. ಮಗುವಿನ ತಾಯಿ ಕನ್ಯಾಕುಮಾರಿ ಹಾಗೂ ಅವರ ಅತ್ತೆ-ಮಾವನ ನಡುವೆ ಕೌಟುಂಬಿಕ ಕಲಹವಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ಕೊಡಲಾಗಿತ್ತು. ಹಲವು ಬಾರಿ ಆದರೂ ಅತ್ತೆ, ಸೊಸೆ, ಮಾವನ ನಡುವೆ ಅಷ್ಟಕ್ಕಷ್ಟೇ ಮಾತು ಇತ್ತು ಎನ್ನಲಾಗಿದೆ.

    ಹೀಗಿದ್ದಾಗ ತಾಯಿ ಮಗುವನ್ನು ಮನೆಯಲ್ಲಿ ಅತ್ತೆ-ಮಾವನ ಜೊತೆ ಬಿಟ್ಟು ಜಮೀನಿನ ಬಳಿ ತೆರಳಿದ್ದಾಗ ಮನೆಯಲ್ಲಿದ್ದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ನೀರಿನ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಶಾಲಾ ಆವರಣದಲ್ಲಿ ವಾಮಾಚಾರ- ತಲೆ ಬುರುಡೆ, ನಿಂಬೆ ಹಣ್ಣು, ಕುಂಕುಮ ಪತ್ತೆ

    ಮಧ್ಯಾಹ್ನ ಜಮೀನಿನ ಬಳಿ ಇದ್ದ ಮಗುವನ್ನು ತಾತ ಸೋಮಶೇಖರ್ ರೆಡ್ಡಿ ಲಾಲಿಪಾಪ್ ಕೊಡಿಸೋದಾಗಿ ಹೇಳಿ ಕರೆದುಕೊಂಡು ಹೋಗಿದ್ದ. ಇಷ್ಟು ದಿನ ಮಗುವನ್ನು ಮಾತನಾಡಿಸದ ತಾತ 3 ದಿನಗಳಿಂದ ಮಗುವಿಗೆ ಚಾಕ್ಲೇಟ್ ಕೊಡಿಸಿ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಾತನೇ ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಸಂಶಯ ಪೋಷಕರದ್ದಾಗಿದೆ. ಈ ಬಗ್ಗೆ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜನಾರ್ದನ ರೆಡ್ಡಿ ಭರ್ಜರಿ ರೋಡ್ ಶೋ – ಬಾಗೇಪಲ್ಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ತಯಾರಿ

    ಜನಾರ್ದನ ರೆಡ್ಡಿ ಭರ್ಜರಿ ರೋಡ್ ಶೋ – ಬಾಗೇಪಲ್ಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ತಯಾರಿ

    ಚಿಕ್ಕಬಳ್ಳಾಪುರ: ಬಿಜೆಪಿ (BJP) ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Paksha) ಸ್ಥಾಪನೆ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಬಾಗೇಪಲ್ಲಿಯಲ್ಲಿ (Bagepalli) ಭಾನುವಾರ ಭರ್ಜರಿ ರೋಡ್ ಶೋ (Road Show) ನಡೆಸಿದ್ದಾರೆ.

    ಬಾಗೇಪಲ್ಲಿಯ ಸುಂಕಲಮ್ಮ ದೇವಾಲಯದ ಬಳಿ ಪಕ್ಷದ ಮುಖಂಡ ಅರಿಕೆರೆ ಕೃಷ್ಣಾರೆಡ್ಡಿಯವರು ಜನಾರ್ದನ ರೆಡ್ಡಿಯವರನ್ನು ಸ್ವಾಗತಿಸಿಕೊಂಡರು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ರೆಡ್ಡಿಯವರ ಬೆಂಬಲಿಗ ನಾರಾಯಣಸ್ವಾಮಿ ನೇತೃತ್ವದಲ್ಲಿ ನೂರಾರು ಮಂದಿಯಿಂದ ಬೈಕ್ ರ್ಯಾಲಿ ನಡೆಯಿತು. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ

    ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಜನಾರ್ದನ ರೆಡ್ಡಿ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ನಗರದ ಹೊರವಲಯದ ಕೆಎಸ್‍ಆರ್‌ಟಿಸಿ (KSRTC) ಬಸ್ ಡಿಪೋ ರಸ್ತೆಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು ಸೇರಿದ್ದರು.

    ಹಳೇ ಮೈಸೂರು (Old Mysuru) ಬಯಲುಸೀಮೆ ಭಾಗದಲ್ಲೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜನಾರ್ದನ ರೆಡ್ಡಿ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು

  • ಕರ್ನಾಟಕದಲ್ಲಿ ಕೆಂಪು ಬಾವುಟ ಹಾರಿಸಲಿದ್ದಾರೆ ಕೇರಳ ಸಿಎಂ

    ಕರ್ನಾಟಕದಲ್ಲಿ ಕೆಂಪು ಬಾವುಟ ಹಾರಿಸಲಿದ್ದಾರೆ ಕೇರಳ ಸಿಎಂ

    ಚಿಕ್ಕಬಳ್ಳಾಪುರ: ಇಲ್ಲಿನ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಿಪಿಎಂ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಬಾಗೇಪಲ್ಲಿಯಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐಎಂನಿಂದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದಿದ್ದರು. ಅವರ ನಿಧನರಾದ ನಂತರ ಕ್ಷೇತ್ರದಲ್ಲಿ ಸಿಪಿಎಂ ಅಸ್ತಿತ್ವವಿಲ್ಲದಂತಾಗುತ್ತಿತ್ತು. ಇದೀಗಾ ಮತ್ತೆ ಬಲ ಪಡಿಸಲು ಮುಂದಾಗಿರುವ ಸಿಪಿಐಎಂ ಪಕ್ಷ ಇಂದು ಬಾಗೇಪಲ್ಲಿಯಲ್ಲಿ ಸಮಾವೇಷ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇದನ್ನೂ ಓದಿ: ಎಸ್‍ಟಿ ಮೀಸಲಾತಿಯನ್ನು ಶೇ.6 ರಿಂದ ಶೇ.10ಕ್ಕೆ ಹೆಚ್ಚಿಸುತ್ತೇವೆ: ಕೆಸಿಆರ್

     

    ಬಾಗೇಪಲ್ಲಿ ಪಟ್ಟಣದಲ್ಲಿ ಸಿಪಿಐಎಂ ಪಕ್ಷದ ನಾಯಕರು ರಾಜ್ಯಮಟ್ಟದ ರಾಜಕೀಯ ಸಮಾವೇಶ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಬಾಗೇಪಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು, ಗಲ್ಲಿಗಳು ಕೆಂಬಾವೂಟದಿಂದ ಸಿಂಗರಿಸಿಕೊಂಡಿವೆ. ಸಮಾವೇಶದಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್ ಸೇರಿದಂತೆ ಪಕ್ಷದ ಕೇಂದ್ರ ನಾಯಕರು, ಕೇಂದ್ರದ ಪೊಲಿಟಿಕಲ್ ಬ್ಯೂರೋ ಸದಸ್ಯರಾದ ಎಂ.ಎ.ಬೇಬಿ, ಜಿವಿ.ರಾಘವುಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್, ರಾಜ್ಯ ಕಾರ್ಯದರ್ಶಿ ಬಸವರಾಜು ಸೇರಿದಂತೆ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ‌

     

    ಜಿ.ವಿ.ಶ್ರೀರಾಮರೆಡ್ಡಿ ಪಕ್ಷ ತೊರೆದು ನಿಧನರಾದ ನಂತರ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಪ್ರಭಾವಿಗಳು ಇಲ್ಲ. ಆದರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಸಿಪಿಐಎಂ ಪಕ್ಷದ ಕಾರ್ಯಕರ್ತರಿದ್ದಾರೆ. ಇದರಿಂದ ಮತ್ತೇ ಸಿಪಿಐಎಂ ಪಕ್ಷದ ಬಾವುಟ ಹಾರಿಸಲು ಯೋಜನೆ ರೂಪಿಸಿರುವ ಸಿಪಿಐಎಂ ನಾಯಕರು, ಕಾರ್ಮಿಕರು, ದುಡಿಯುವ ವರ್ಗ ಸೇರಿದಂತೆ ದೀನದಲಿತರನ್ನು ಒಂದುಗೂಡಿಸಿ ಪಕ್ಷದತ್ತ ಸೆಳೆಯಲು ಮುಂದಾಗಿದ್ದಾರೆ.

    ರಾಜ್ಯಕ್ಕೆ ಆಗಮಿಸಿರುವ ಪಿಣರಾಯ್‌ ವಿಜಯನ್‌ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ಈ ವೇಳೆ ಅಂತರರಾಜ್ಯ ಸಮಸ್ಯೆಗಳು ಹಾಗೂ ಹಿತಾಸಕ್ತಿಗಳ ಕುರಿತು ಚರ್ಚೆ ನಡೆಸಿದರು. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಯುಪಿ ಸಚಿವರಿಗೆ 500 ರೂ. ದಂಡ

    Live Tv
    [brid partner=56869869 player=32851 video=960834 autoplay=true]

  • ಸ್ನೇಹಿತನ ಬರ್ತ್ ಡೇಗೆ ಕ್ಯಾಂಡಲ್ ತರಲು ಹೋದವನ ಮೇಲೆ ಹಲ್ಲೆ

    ಸ್ನೇಹಿತನ ಬರ್ತ್ ಡೇಗೆ ಕ್ಯಾಂಡಲ್ ತರಲು ಹೋದವನ ಮೇಲೆ ಹಲ್ಲೆ

    ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.

    ಅರುಣ್ ಹಲ್ಲೆಗೊಳಗಾದ ವ್ಯಕ್ತಿ. ಅರುಣ್ ಸ್ನೇಹಿತನ ಬರ್ತ್ ಡೇ ಅಂಗವಾಗಿ ಕ್ಯಾಂಡಲ್ ತರಲು ಹೋಗಿದ್ದ. ಬಾಗೇಪಲ್ಲಿಯ ಮುಖ್ಯ ರಸ್ತೆಯ ಬಾರ್ ಬಳಿ ತನ್ನ ಸ್ನೇಹಿತ ರವಿ ನೋಡಿ ಮಾತನಾಡಲು ಬೈಕ್ ನಿಲ್ಲಿಸಿದ್ದಾನೆ.

    ಈ ವೇಳೆ ರವಿ ಜೊತೆ ಸಲುಗೆಯಿಂದ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದನ್ನು ಕಂಡ ರವಿಯ ಭಾವ ಯಾಕೆ ಅವಾಚ್ಯ ಪದ ಬಳಸ್ತೀಯಾ ಅಂತ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿದ್ದಾನೆ. ಈ ವೇಳೆ ರವಿಯ ಭಾವ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ನೂತನ ಲೋಕಾಯುಕ್ತರಾಗಿ ಭೀಮನಗೌಡ ಸಂಗನಗೌಡ ಪಾಟೀಲ್‌ ನೇಮಕ

    ಘಟನೆಯಿಂದಾಗಿ ತೀವ್ರ ರಕ್ತಸ್ರಾವವಾದ ಕಾರಣ ಅರುಣ್ ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾನೆ. ಹಲ್ಲೆ ಮಾಡಿದ ಆರೋಪಿಯನ್ನು ಬಾಗೇಪಲ್ಲಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರಾಯಚೂರು ನಗರಸಭೆ ಕಲುಷಿತ ನೀರಿಗೆ ಮತ್ತೊಂದು ಬಲಿ – ಸಾವಿನ ಸಂಖ್ಯೆ 6ಕ್ಕೆ ಏರಿಕೆ