Tag: ಬಾಗಿಲು

  • ಮತ್ತೊಂದು ಬಸ್ ಡೋರ್ ಮುರಿದ ನಾರಿಶಕ್ತಿ

    ಮತ್ತೊಂದು ಬಸ್ ಡೋರ್ ಮುರಿದ ನಾರಿಶಕ್ತಿ

    ಚಾಮರಾಜನಗರ: ಶಕ್ತಿ ಯೋಜನೆಯ (Shakti Scheme) ಪರಿಣಾಮ ಬಸ್ ಹತ್ತಲು ನೂಕುನುಗ್ಗಲು ಮಾಡಿ ನಾರಿಮಣಿಗಳು ಮತ್ತೊಂದು ಬಸ್ಸಿನ (Bus) ಬಾಗಿಲನ್ನು (Door) ಮುರಿದ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

    ಬಸ್ ಯಳಂದೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುತ್ತಿದ್ದು, ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ಸಾರಿಗೆ ಬಸ್ ಹತ್ತಲು ಮಹಿಳೆಯರು (Women) ಮುಗಿಬಿದ್ದಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ನಿಲ್ದಾಣದಲ್ಲಿ ಬಸ್ ಹತ್ತಲು ಮಹಿಳೆಯರು ನೂಕು ನುಗ್ಗಲು ಮಾಡಿದ್ದು, ಈ ಹಿನ್ನೆಲೆ ಬಸ್‌ನ ಬಾಗಿಲು ಮುರಿದು ಬಿದ್ದಿದೆ. ಭಾನುವಾರ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ: ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್

    ಕೆಲ ದಿನಗಳ ಹಿಂದೆ ಇದೇ ರೀತಿ ಕೊಳ್ಳೆಗಾಲದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಸಾರಿಗೆ ಬಸ್ ಬಾಗಿಲು ಮುರಿದು ಹೋಗಿತ್ತು. ಇಷ್ಟು ಮಾತ್ರವಲ್ಲದೇ ಮಹಿಳೆಯರ ತಳ್ಳಾಟ ನೂಕಾಟದಲ್ಲಿ ಬಸ್‌ಗೆ ಅಳವಡಿಸಿದ್ದ ಕಬ್ಬಿಣದ ರಾಡ್ ಕೂಡಾ ಕಿತ್ತು ಹಾಕಿದ್ದರು. ಇದನ್ನೂ ಓದಿ: ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು ಕೊನೆಯ ದಿನ

    ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು ಕೊನೆಯ ದಿನ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ದರ್ಶನಕ್ಕೆ ಇಂದು ಕಡೆಯ ದಿನಾಗಿದ್ದು ಬಾಗಿಲು ಹಾಕಲು ಕ್ಷಣಗಣನೆ ಆರಂಭವಾಗಿದೆ.

    ಇಂದು ಮಧ್ಯಾಹ್ನ 12:30ರ ನಂತರ ದೇವಾಲಯದ ಬಾಗಿಲು ಹಾಕಲಾಗುತ್ತೆ. ಬಾಗಿಲು ಹಾಕುವಾಗ ಹಚ್ಚಿಸಿಟ್ಟ ದೀಪ ಒಂದು ವರ್ಷದ ನಂತರ ಬಾಗಿಲು ತೆರೆದಾಗಲೂ ಬೆಳಗುತ್ತಿರುತ್ತದೆ. ದೇವರಿಗೆ ಮುಡಿಸಿದ ಹೂವು ವರ್ಷ ಕಳೆದರೂ ಬಾಡುವುದಿಲ್ಲ ಎಂಬ ನಂಬಿಕೆಯಿದೆ.

    ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ. ಹೀಗಾಗಿ ಬಹುತೇಕ ಭಕ್ತರು ಈ ವರ್ಷ ಹಾಸನಾಂಬೆ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಇದೇ ನವೆಂಬರ್ 5ರಂದು ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿದ್ದು ಇಂದು ಬಾಗಿಲನ್ನು ಹಾಕಲಾಗುತ್ತಿದೆ.

    ಕೊನೆಯ ದಿನವಾಗಿದ್ದರಿಂದ ಇಂದು ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಸಿಟಿ ರವಿ ದೇಗುಲ್ಲೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

  • ಸುಳ್ವಾಡಿ ಮಾರಮ್ಮನ ದೇವಸ್ಥಾನದ ಬಾಗಿಲು ತೆರೆಯಲು ಸಕಲ ಸಿದ್ಧತೆ

    ಸುಳ್ವಾಡಿ ಮಾರಮ್ಮನ ದೇವಸ್ಥಾನದ ಬಾಗಿಲು ತೆರೆಯಲು ಸಕಲ ಸಿದ್ಧತೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಸುಳ್ವಾಡಿ ವಿಷ ಪ್ರಸಾದ ದುರಂತದಿಂದಾಗಿ ಕಳೆದ ಒಂದು ವರ್ಷದಿಂದಲೂ ದೇವಾಲಯದ ಬಾಗಿಲು ಬಂದ್ ಆಗಿದೆ. ದೇವಾಲಯ ಬಾಗಿಲು ತೆರೆಯುವಂತೆ ಗ್ರಾಮಸ್ಥರು, ಅಪಾರ ಸಂಖ್ಯೆಯ ಭಕ್ತರು ಸರ್ಕಾರ ಹಾಗೂ ಜಿಲ್ಲಾಡಳಿತ ಬಳಿ ಹಲವು ಬಾರಿ ಮನವಿ ಸಲ್ಲಿಸಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ, ಜಿಲ್ಲಾಡಳಿತ ದೇವಾಲಯ ಬಾಗಿಲು ತೆರೆಯುವ ಕುರಿತು ಭರವಸೆ ನೀಡಿತ್ತು.

    ಅದರಂತೆ ದೇವಾಲಯದ ಅರ್ಚಕರಾಗಲು ಆಗಮಿಕ ಶಾಸ್ತ್ರ ಬರಬೇಕು ಅನ್ನೋ ನಿಯಮ ಹೊರಡಿಸಿದೆ. ಆ ಹಿನ್ನೆಲೆಯಲ್ಲಿ ಹಲವು ಜನ ಆಗಮಿಕ ಪಂಡಿತರು ಕೂಡ ದೇವಾಲಯದ ಅರ್ಚಕರಾಗಲೂ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

    ಇಂದು ರಾಜ್ಯ ಆಗಮಿಕ ಪಂಡಿತ್ ವಿದ್ವಾನ್ ಜಿ.ಎ.ವಿಜಯಕುಮಾರ್ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಳ್ವಾಡಿ ದೇವಾಸ್ಥಾನದ ಅರ್ಚಕರು, ಮುಖಂಡರು ಗ್ರಾಮಸ್ಥರಿಂದ ಅಭಿಪ್ರಾಯ ಸಂಗ್ರಹ ಮಾಡಿರೋದು ದೇವಾಲಯದ ಬಾಗಿಲು ತೆರೆಯುವ ಕನಸು ಚಿಗುರಿಸಿದೆ.

    ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ 17 ಜನ ಸಾವನ್ನಪ್ಪಿದ್ದು, 120 ಜನ ಅಸ್ವಸ್ಥರಾಗಿದ್ದರು. ಆ ನಂತರ ಸರ್ಕಾರ ಕಿಚ್ ಗುತ್ ಮಾರಮ್ಮನ ಟ್ರಸ್ಟ್ ಅನ್ನು ಮುಜರಾಯಿ ಇಲಾಖೆಯ ವಶಕ್ಕೆ ನೀಡಿತ್ತು.

  • ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಮೈಸೂರು: ಮನೆಯ ಬಾಗಿಲ ಮೇಲೆ ನೇತಾಡುತ್ತಿದ್ದ ನಾಗರಹಾವೊಂದನ್ನು ಕಂಡು ಮನೆಯವರೆನ್ನೆಲ್ಲ ಗಾಬರಿಗೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.

    ಶ್ರೀರಾಂಪುರದ ನಿವಾಸಿ ನಾಗೇಂದ್ರ ಅವರ ಮನೆಯ ಬಾಗಿಲ ಮೇಲೆ ನಾಗರಹಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಭಯಗೊಂಡ ಮನೆಯವರು ತಕ್ಷಣ ಮನೆಯಿಂದ ಹೊರ ಓಡಿಬಂದಿದ್ದಾರೆ. ಅಲ್ಲದೆ ಮನೆಯ ಬಾಗಿಲ ಮೇಲೆ ಆರಾಮಾಗಿ ಮಲಗಿದ್ದ ಹಾವಿನ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಇದನ್ನೂ ಓದಿ:ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ತಕ್ಷಣ ಉರಗ ತಜ್ಞ ಕೆಂಪರಾಜು ಅವರು ಸ್ಥಳಕ್ಕೆ ಆಗಮಿಸಿ, ಸುಮಾರು ಎರಡೂವರೆ ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

  • ಮನೆ ಬಾಗಿಲು ತಟ್ಟಿತು ಬರೋಬ್ಬರಿ 158 ಕೆ.ಜಿ ತೂಕದ ಮೊಸಳೆ!

    ಮನೆ ಬಾಗಿಲು ತಟ್ಟಿತು ಬರೋಬ್ಬರಿ 158 ಕೆ.ಜಿ ತೂಕದ ಮೊಸಳೆ!

    ಫ್ಲೋರಿಡಾ: ಬರೋಬ್ಬರಿ 158 ಕೆ.ಜಿ ತೂಕದ 10 ಅಡಿ ಉದ್ದದ ಮೊಸಳೆಯೊಂದು ಮಹಿಳೆಯೊಬ್ಬರ ಮನೆಯ ಬಾಗಿಲನ್ನು ತಟ್ಟಿ ಭಯಗೊಳಿಸಿರುವ ಘಟನೆ ಅಮೆರಿಕದ ಮೆರಿಟ್ ದ್ವೀಪದಲ್ಲಿ ನಡೆದಿದೆ.

    ಮಂಗಳವಾರ ಬೆಳಗ್ಗೆ ಮೆರಿಟ್ ದ್ವೀಪದಲ್ಲಿ ಗೆರಿ ಸ್ಟೇಪಲ್ಸ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಳ್ಳಂಬೆಳ್ಳಗ್ಗೆ ಯಾರೋ ಮನೆಯ ಬಾಗಿಲನ್ನು ಜೋರಾಗಿ ತಟ್ಟುತ್ತಿದ್ದ ಸದ್ದು ಕೇಳಿಬಂದಿದೆ. ಬಳಿಕ ಬಾಗಿಲನ್ನು ತೆಗೆಯುವ ಮುನ್ನ ಕಿಟಕಿಯಿಂದ ನೋಡಿದಾದ ಬೃಹತ್ ಗಾತ್ರದ ಮೊಸಳೆಯನ್ನು ಕಂಡು ಮಹಿಳೆ ಬೆಚ್ಚಿಬಿದ್ದಿದ್ದಾರೆ.

    ಬಳಿಕ ಮೊಸಳೆಯನ್ನು ಕಂಡು ಭಯದಿಂದ ಕೂಗಿದಾಗ ಅಕ್ಕಪಕ್ಕದ ಮನೆಯವರು ಬಂದು ಮೊಸಳೆಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಬರೋಬ್ಬರಿ 158 ಕೆ.ಜಿ ತೂಕವಿದ್ದ ಮೊಸಳೆಯನ್ನು ಅವರಿಂದ ಹಿಡಿಯಲು ಸಾಧ್ಯವಾಗಲಿಲ್ಲ.

    ನಂತರ ವನ್ಯ ಜೀವಿ ರಕ್ಷಣಾ ತಂಡದವರಿಗೆ ಮೊಸಳೆಯ ಬಗ್ಗೆ ಮಾಹಿತಿ ತಿಳಿಸಿದಾಗ, ಸಿಬ್ಬಂದಿ ಸ್ಥಳಕ್ಕೆ ಬಂದು ಮೊಸಳೆಗೆ ಚುಚ್ಚು ಮದ್ದು ನೀಡಿ ಅದನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    https://twitter.com/NickyZizaza/status/1095180439285874688?ref_src=twsrc%5Etfw%7Ctwcamp%5Etweetembed%7Ctwterm%5E1095180439285874688%7Ctwgr%5E363937393b70726f64756374696f6e&ref_url=https%3A%2F%2Fwww.ndtv.com%2Foffbeat%2Fwoman-hears-knocking-on-door-finds-10-foot-alligator-outside-1993353

    ಫ್ಲೋರಿಡಾ ರಾಜ್ಯದಲ್ಲಿ ಮೊಸಳೆಗಳು ಜನ ವಾಸಿಸುವ ಸ್ಥಳಗಳಲ್ಲಿ ಆಗಾಗ ಕಂಡು ಬರುತ್ತದೆ. ಆದರೇ ಕಳೆದ 20 ವರ್ಷಗಳಲ್ಲಿ ಇಷ್ಟು ದೊಡ್ಡ ಗಾತ್ರದ ಮೊಸಳೆ ಕಂಡುಬಂದಿರಲಿಲ್ಲ. ಈ ಹಿಂದೆ ಫ್ಲೋರಿಡಾದಲ್ಲಿ ಮನೆಯೊಂದರ ಈಜುಕೊಳದಲ್ಲಿ 9 ಅಡಿ ಉದ್ದದ ಮೊಸಳೆಯನ್ನು ಸೆರೆಹಿಡಿಯಲಾಗಿತ್ತು. ಅದರ ನಂತರ ಈ ಬಾರಿ ಸೆರೆಹಿಡಿದಿರುವ ಮೊಸಳೆ ಬೃಹತ್ ಗಾತ್ರದಾಗಿದೆ ಎಂದು ವನ್ಯ ಜೀವಿ ರಕ್ಷಣಾ ತಂಡದವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೆರೇಸ್ ಮೇಲೆ ಹೆಲಿಕಾಪ್ಟರ್ ಡೋರ್ ಬಿದ್ದಿದ್ದು ಕಂಡು ದಂಗಾದ್ರು ಜನ!

    ಟೆರೇಸ್ ಮೇಲೆ ಹೆಲಿಕಾಪ್ಟರ್ ಡೋರ್ ಬಿದ್ದಿದ್ದು ಕಂಡು ದಂಗಾದ್ರು ಜನ!

    ಹೈದರಾಬಾದ್: ತೆಲಂಗಾಣ ರಾಜ್ಯ ವಿಮಾನಯಾನ ಅಕಾಡೆಮಿಗೆ ಸೇರಿದ ಹೆಲಿಕಾಪ್ಟರ್‍ವೊಂದರ ಡೋರ್ ಇಲ್ಲಿನ ಲಾಲಗುಡದ ಕಟ್ಟಡವೊಂದರ ಮೇಲೆ ಬಿದ್ದ ಘಟನೆ ಸೋಮವಾರದಂದು ನಡೆದಿದೆ.

    ಹೆಲಿಕಾಪ್ಟರ್ ಬಾಗಿಲು ಜೋರಾಗಿ ಶಬ್ದದೊಂದಿಗೆ ಕಟ್ಟಡವೊಂದರ ಮೇಲೆ ಬಿದ್ದಿದೆ. ಶಬ್ದ ಕೇಳಿ ಏನಾಯಿತೆಂದು ನೋಡಲು ಇಲ್ಲಿನ ನಿವಾಸಿಗಳು ಹೊರಬಂದಿದ್ದಾರೆ. ನಂತರ ಹೆಲಿಕಾಪ್ಟರ್ ಬಾಗಿಲು ಬಿದ್ದಿದ್ದ ಕಂಡು ಇಲ್ಲಿನ ಯಾದವ್ ಬಸ್ತಿಯ ನಿವಾಸಿಗಳು ಶಾಕ್ ಆಗಿದ್ರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇಲ್ಲಿನ ನಿವಾಸಿಗಳು ವಿಮಾನದ ಡೋರ್ ತೆಗೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದ್ದಾರೆ. ಈ ಬಾಗಿಲು ತರಬೇತುದಾರರ ಹೆಲಿಕಾಪ್ಟರ್‍ಗೆ ಸೇರಿದ್ದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

    ಜೋರಾದ ಶಬ್ದದೊಂದಿಗೆ ಹೆಲಿಕಾಪ್ಟರ್ ಬಾಗಿಲು ಬಿದ್ದಿದೆ. ಆದ್ರೆ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಲಾಲಗುಡ ಇನ್ಸ್ ಪೆಕ್ಟರ್ ಕೆ. ಕುಮಾರ್ ಸಿಂಗ್ ಹೇಳಿದ್ದಾರೆ. ಸದ್ಯ ಮುರಿದುಬಿದ್ದ ವಿಮಾನದ ಬಾಗಿಲನ್ನು ಅಕಾಡೆಮಿಗೆ ಹಸ್ತಾಂತರಿಸಲಾಗಿದೆ.

    ಘಟನೆ ನಡೆದಿರುವ ಬಗ್ಗೆ ಅಕಾಡೆಮಿಯ ಪ್ರಾಂಶುಪಾಲರಾದ ಚಂದ್ರಶೇಖರ್ ರಾವ್ ಖಚಿತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಘಟನೆ ಬಗ್ಗೆ ನಾಗರೀಕ ವಿಮಾನಯಾನದ ನಿರ್ದೇಶಕರು ತನಿಖೆ ಮಾಡಲಿದ್ದಾರೆ. ಘಟನೆ ನಡೆದ ವೇಳೆ ಮಲ್ಟಿ ಎಂಜಿನ್ ಡೈಮಂಡ್ ಡಿಎ-42 ಹೆಲಿಕಾಪ್ಟರ್‍ನಲ್ಲಿ ಹಿರಿಯ ಪೈಲಟ್ ಹಾಗೂ ತರಬೇತಿ ಪಡೆಯುವ ವ್ಯಕ್ತಿ ಇದ್ದರು. ಡೋರ್ ಮುರಿದುಬಿದ್ದ ನಂತರವೂ ಹಾರಾಟ ಮುಂದುವರೆಸಿದ್ದು, ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಅವರು ಹೇಳಿದ್ದಾರೆ.