Tag: ಬಾಗಲ ಕೋಟೆ

  • 8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ‘ಲವ್ಲಿಬಾಯ್’ ಟಗರು ಹೃದಯಾಘಾತದಿಂದ ಸಾವು

    8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ‘ಲವ್ಲಿಬಾಯ್’ ಟಗರು ಹೃದಯಾಘಾತದಿಂದ ಸಾವು

    ಬಾಗಲಕೋಟೆ: ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಟಗರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸೀಗಿಕೇರಿ ಗ್ರಾಮದಲ್ಲಿ ನಡೆದಿದೆ.

    Tagaru

    8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ “ಲವ್ಲಿಬಾಯ್” ಟಗರು ಹೃದಯಾಘಾತದಿಂದ ಸಾವನ್ನಪ್ಪಿದೆ. ಮೂಲತಃ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ, ಕಲಾವಿದ ಹೆಚ್.ಎನ್. ಸೇಬಣ್ಣವರರಿಗೆ ಸೇರಿದ ಟಗರು ಇದ್ದಾಗಿದ್ದು, ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ

    Tagaru

    ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು, ಬೈಕ್, ಹೋರಿ, ಚಿನ್ನ, ಬೆಳ್ಳಿ, ನಗದು ಸೇರಿ ಸುಮಾರು ಹತ್ತು ಲಕ್ಷ ರೂ. ವರೆಗೆ ಬಹುಮಾನ ಗೆದ್ದು ಬೀಗಿತ್ತು. ಹಿಂದೆ ಈ ಟಗರನ್ನು ಯಾರೋ ಒಬ್ಬರು 8 ಲಕ್ಷ ರೂ.ಗೆ ಕೇಳಿದ್ದರು. ಟಗರಿನ ಮಾಲೀಕ ಶೇಬಣ್ಣವರ ಮಾತ್ರ ಟಗರು ಮಾರಾಟ ಮಾಡಿರಲಿಲ್ಲ. ಸದ್ಯ ಲವ್ಲಿಬಾಯ್ ಟಗರು ಜೀವಬಿಟ್ಟಿದೆ. ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ

    Tagaru

    6 ವರ್ಷದ ಲವ್ಲಿಬಾಯ್ ದೇಹದ ಮೇಲೆ ಹೂ ಮಾಲೆ, ಹಣೆಗೆ ಬೆಳ್ಳಿ ಖಡ್ಗ, ದೇಹದ ಭಾಗಕ್ಕೆ ಭಂಡಾರ ಬಳಿದು, ಪ್ರಶಸ್ತಿಗಳನ್ನು ಟಗರಿನ ಪಾರ್ಥಿವ ಶರೀರದ ಮುಂದೆ ಇಟ್ಟು ಗ್ರಾಮದಲ್ಲಿ ಶ್ರದ್ಧಾಂಜಲಿಗೆ ವ್ಯವಸ್ಥೆ ಮಾಡಲಾಗಿದೆ. ಟಗರು ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಟಗರು ಅಭಿಮಾನಿಗಳು ಹಾಗೂ ಸುತ್ತಮುತ್ತಲ ಜನರು ಬಂದು ಟಗರಿಗೆ ಪ್ರೀತಿಯ ವಿದಾಯ ಹೇಳುತ್ತಿದ್ದಾರೆ.

  • ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ : ಸಿದ್ದಲಿಂಗ ಸ್ವಾಮೀಜಿ

    ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ : ಸಿದ್ದಲಿಂಗ ಸ್ವಾಮೀಜಿ

    ಬಾಗಲಕೋಟೆ: ನಮ್ಮ ಮುರುಗೇಶ್ ನಿರಾಣಿ ಒಳ್ಳೆ ಮನುಷ್ಯ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿಎಂ ರೇಸ್ ನಲ್ಲಿ ಅವರು ಇದ್ದಾರಾ ಗೊತ್ತಿಲ್ಲ, ಆದರೆ ಮುರುಗೇಶ್ ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ ಎಂದು ಹರಿಹರ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿ ಪರೋಕ್ಷವಾಗಿ ಸಚಿವ ಮುರಗೇಶ್ ನಿರಾಣಿ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ರೇಸ್ ನಲ್ಲಿ ನಿರಾಣಿ ಅವರ ಹೆಸರಿದ್ದರೆ, ಖುಷಿ ಪಡೋಣ, ನಾನು ಸಂತೋಷ ಪಡುತ್ತೇನೆ. ನಿಮ್ಮಂತೆ ನಾನು ನಗುತ್ತೇನೆ. ಸಿಎಂ ಆದರೆ ಪೇಡ ಹಂಚೋಣ, ನಮ್ಮ ಭಾಗದ ಮನುಷ್ಯ ಆಗ್ತಾನೆ ಅಂತ ಸಿಹಿ ಹಂಚೋಣ. ಆಗದಿದ್ದರೂ ಹೆಸರು ಹೇಳುತ್ತಾರೆ ಅಂದರೆ ಮುಂದೆ ಒಂದಲ್ಲ ದಿನ ಆಗೇ ಆಗುತ್ತಾರೆ ಎಂದು ಪರೋಕ್ಷವಾಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಇಡೀ ರಾಜ್ಯವನ್ನು ನಿಭಾಯಿಸುವ ಶಕ್ತಿ ನಿರಾಣಿ ಅವರಿಗಿದೆ. ಅವರಂತೆ ಉತ್ತರ ಕರ್ನಾಟಕದಲ್ಲಿ ಅನೇಕ ರಾಜಕಾರಣಿಗಳಿಗೆ ಆ ಯೋಗ್ಯತೆ ಇದೆ. ನಿರಾಣಿ ಸಿಎಂ ಆದರೆ ನಮ್ಮಷ್ಟು ಸಂತೋಷ ಪಡುವವರು ಬೇರೆ ಯಾರು ಇಲ್ಲ ಎನ್ನುವ ಮೂಲಕ ಸಿದ್ದಲಿಂಗ ಸ್ವಾಮೀಜಿ ಮುರಗೇಶ್ ನಿರಾಣಿ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ