Tag: ಬಾಗಲೂರು

  • ವಿಚ್ಛೇದನಕ್ಕೆ ಒಪ್ಪದ ಪತ್ನಿಯ ಕೊಲೆಗೆ ಸ್ಕೆಚ್- ಅಪಘಾತಕ್ಕೆ ಯತ್ನಿಸಿ ಸಿಕ್ಕಿಬಿದ್ದ ಪತಿ

    ವಿಚ್ಛೇದನಕ್ಕೆ ಒಪ್ಪದ ಪತ್ನಿಯ ಕೊಲೆಗೆ ಸ್ಕೆಚ್- ಅಪಘಾತಕ್ಕೆ ಯತ್ನಿಸಿ ಸಿಕ್ಕಿಬಿದ್ದ ಪತಿ

    ಬೆಂಗಳೂರು: ವಿಚ್ಛೇದನ ಕೊಡಲು ಒಪ್ಪದ ಗರ್ಭಿಣಿ ಪತ್ನಿಯನ್ನು (Wife) ಕೊಲೆ ಮಾಡಲು ಯತ್ನಿಸಿ ಅಪಘಾತ ಎಂದು ಬಿಂಬಿಸಲು ಹೋಗಿ ಪತಿ (Husband) ಸಿಕ್ಕಿಬಿದ್ದ ಪ್ರಕರಣ ಬಾಗಲೂರಿನಲ್ಲಿ (Bagalur) ನಡೆದಿದೆ.

    ಕಳೆದ ಒಂದೂವರೆ ವರ್ಷದ ಹಿಂದೆ ಅರವಿಂದ್ ಹಾಗೂ ಚೈತನ್ಯ ವಿವಾಹವಾಗಿದ್ದರು. ಪತ್ನಿ ಅತ್ತೆ ಮಾವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಳು. ಇದರಿಂದ ಪತಿ, ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಅಸಮಾಧಾನ ಮಾಡಿಕೊಂಡಿದ್ದ. ಅಲ್ಲದೇ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ. ಆದರೆ ವಿಚ್ಛೇದನ ನೀಡಲು ಪತ್ನಿ ತಯಾರಿರಲಿಲ್ಲ. ಇದನ್ನೂ ಓದಿ:  ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ

    ಇದರಿಂದ ಪತ್ನಿಯನ್ನು ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ. ಅದಕ್ಕಾಗಿ ಹಳೆಯದೊಂದು ಟಾಟಾ ಸುಮೊ ಕಾರು ಖರೀದಿಸಿದ್ದ. ಅಲ್ಲದೇ ಅದಕ್ಕೆ ಒಬ್ಬ ಚಾಲಕನನ್ನ ನೇಮಿಸಿಕೊಂಡಿದ್ದ. ಅಲ್ಲದೇ ಆತನಿಗೆ ಪತ್ನಿಯನ್ನು ಅಪಘಾತವೆಸಗಿ ಕೊಲ್ಲುವಂತೆ ಸೂಚಿಸಿದ್ದ. ಇದಕ್ಕೆ ಚಾಲಕ ಉದಯ್ ಕುಮಾರ್ ಒಪ್ಪಿದ್ದ. ಅಪಘಾತ ಎಸಗಲು ಆಕೆ ಓಡಾಡುವ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಇರದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದ.

    ಬಳಿಕ ದಿನ ನಿಗದಿ ಮಾಡಿಕೊಂಡು ಬಾಗಲೂರಿನ ಕೆಐಡಿಬಿ ಲೇಔಟ್‍ನಲ್ಲಿ ಭರತನಾಟ್ಯ ತರಗತಿ ಮುಗಿಸಿ ಬೈಕ್‍ನಲ್ಲಿ ಬರುತ್ತಿದ್ದ ಚೈತನ್ಯಳಿಗೆ ಕಾರನ್ನು ಗುದ್ದಿಸಲಾಗಿತ್ತು. ಈ ವೇಳೆ ಕಾರಿನಲ್ಲಿ ಪತಿ ಅರವಿಂದ್ ಕೂಡ ಇದ್ದ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ದೇವನಹಳ್ಳಿ (Devanahalli) ಟ್ರಾಫಿಕ್ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆರಂಭಿಸಿದ್ದರು. ಬಳಿಕ ಪ್ರಕರಣದಲ್ಲಿ ಅನುಮಾನ ವ್ಯಕ್ತವಾಗಿದ್ದು ಬಾಗಲೂರು ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಿದ್ದರು. ಈ ವೇಳೆ ಕಾರನ್ನು ಗ್ಯಾರೆಜ್‍ನಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಕಾರಿನ ಹಿಂದಿನ ಮಾಲೀಕನನ್ನು ವಿಚಾರಿಸಿದ್ದಾರೆ. ಈ ವೇಳೆ ಕಾರನ್ನು ಮಾರಾಟ ಮಾಡಿದ್ದಾಗಿ ಆತ ತಿಳಿಸಿದ್ದಾನೆ.

    ಬಳಿಕ ಚಾಲಕ ಉದಯ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಆತನ ಮನೆಯಲ್ಲೂ ಕೌಟುಂಬಿಕ ಕಲಹದಿಂದ ಪತಿ-ಪತ್ನಿ ನಡುವೆ ವಿಚ್ಛೇದನ ಮಾತುಕತೆ ನಡೆಯುತ್ತಿತ್ತು. ಇದೇ ಕಾರಾಣಕ್ಕೆ ಎಲ್ಲಾ ಪತ್ನಿಯರೂ ಹೀಗೆ ಎಂದು ಆತ ಈ ಕೊಲೆಗೆ ಒಪ್ಪಿದ್ದ ಎಂದು ತಿಳಿದು ಬಂದಿದೆ.

    ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಆರು ತಿಂಗಳ ಬಳಿಕ ಪ್ರಕರಣದ ಸತ್ಯ ಹೊರಬಂದಿದೆ. ಇದನ್ನೂ ಓದಿ: ಯುವತಿ ವಿಚಾರಕ್ಕೆ ಯುವಕರ ಮಧ್ಯೆ ಕಿರಿಕ್- ಎಣ್ಣೆ ಏಟಲ್ಲಿ ಗೆಳೆಯನ ತಲೆ ಒಡೆದ್ರು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವಿಜಯಪುರ: ಅಕ್ರಮವಾಗಿ ವನ್ಯಜೀವಿಗಳ (Wild Animals) ಅಂಗಾಂಗಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಂದಗಿ (Sindagi) ತಾಲ್ಲೂಕಿನ ಬಾಗಲೂರ (Bagalur) ಬಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಮಹಾರಾಷ್ಟ್ರದ (Maharashtra) ಅಸವಲದಾರಾ ಗ್ರಾಮದ ಪವನ್ ಹಾಗೂ ಭೋಸಲೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮಗಳು ಹಾಗೂ ವಿವಿಧ ಜಾತಿಯ ವನ್ಯ ಪ್ರಾಣಿಗಳ ಅಂಗಾಂಗಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ಆರೋಪಿಗಳ ಬಳಿ ಏನೆಲ್ಲ ಇತ್ತು?
    807 ಉಡದ ಶಿಶ್ನಗಳು, 116 ಇಂದ್ರಜಾಲಗಳು, 2 ಕಾಡು ಬೆಕ್ಕಿನ ಪಾದಗಳು, 2 ಕಾಡು ಬೆಕ್ಕು ಉಗುರುಗಳು, 3 ಕರಡಿಯ ಉಗುರುಗಳು, 28 ನೀರು ಪಕ್ಷಿಗಳ ಕಾಲುಗಳು, 2 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 4 ಕರಡಿಯ ಹಲ್ಲುಗಳು, 32 ಮುಂಗಸಿಯ ಕಾಲುಗಳು, 7 ಮುಂಗುಸಿಯ ದವಡೆಗಳು, 16 ಮುಂಗುಸಿಯ ಚರ್ಮದಿಂದ ಮಾಡಿದ ಉಂಡೆಗಳು, 26 ಕಾಡು ಹಂದಿಯ ಹಲ್ಲುಗಳು, 3 ಅಪರಿಚಿತ ಕಾಡು ಪ್ರಾಣಿಯ ಉಗುರುಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸಂಬಂಧ ಸಿಂದಗಿ ಸಿಐಡಿ ಅರಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

  • ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!

    ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!

    – ಹೋಂ ಮಿನಿಸ್ಟರ್, ಪೊಲೀಸ್ ಆಯುಕ್ತರು ನೋಡಲೇಬೇಕಾದ ಸುದ್ದಿ

    ಬೆಂಗಳೂರು: ಕೋಳಿ ಪಂದ್ಯ ಅಂದ್ರೆ ಎಲ್ಲೋ, ಹಳ್ಳಿ ಪ್ರದೇಶಗಳಲ್ಲೋ, ದೂರದ ಜಿಲ್ಲೆಗಳ ನಿರ್ಜನ ಪ್ರದೇಶದಲ್ಲೋ ಕದ್ದು ಮುಚ್ಚಿ ನಡೆಯೋದರ ಬಗ್ಗೆ ವರದಿ ಆಗಿರುತ್ತದೆ. ಬೆಂಗಳೂರು ಮಹಾನಗರದ ಕಮೀಷನರೆಟ್ ವ್ಯಾಪ್ತಿಯಲ್ಲೇ ದೊಡ್ಡ ಮಟ್ಟದಲ್ಲಿ ಕೋಳಿ ಪಂದ್ಯ ನಡೆಯುತ್ತದೆ. ಈ ಕೋಳಿ ಅಂಕದ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಬೆಂಗಳೂರು ಈಶಾನ್ಯ ಭಾಗದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾರಸಂದ್ರ ಗ್ರಾಮದ ಬಳಿ ಕೋಟಿ ಕೋಟಿ ವ್ಯವಹಾರ ಕೋಳಿ ಪಂದ್ಯ ನಡೆಯುತ್ತದೆ. ಬೆಂಗಳೂರು ವ್ಯಾಪ್ತಿಯಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೋಳಿ ಪಂದ್ಯ ನಡೆಯುತ್ತಿರುವ ವಿಚಾರ ತಿಳಿದ ನಿಮ್ಮ ಪಬ್ಲಿಕ್ ಟಿವಿ ತಂಡ ಆ ಹೈಫೈ ಕೋಳಿ ಪಂದ್ಯದ ಜಾಗಕ್ಕೆ ಹೋಗಿತ್ತು. ಮಾರಸಂದ್ರ ಗ್ರಾಮದ ಮೈನ್ ರೋಡ್ ನಿಂದ ಸುಮಾರು ಒಂದು ಕಿಲೋಮೀಟರ್ ನಷ್ಟು ಜಲ್ಲಿ ರಸ್ತೆಯ ನಿರ್ಜನ ಪ್ರದೇಶದ ಆ ಮಾವಿನ ತೋಟಕ್ಕೆ ಎಂಟ್ರಿಯಾದ ಒಂದಿಬ್ಬರು ಕಾಣಿಸುತ್ತಾರೆ.

    ನೆರೆಯ ರಾಜ್ಯದ ಫೈಟರ್ ಹುಂಜಗಳು:
    ತೋಟದಲ್ಲಿಯ ಕಬ್ಬಿಣದ ಬ್ಯಾರಿಗೇಡ್ ಹಾಕಿ ಶೆಡ್ ಹಾಕಲಾಗಿತ್ತು. ಮಧ್ಯಾಹ್ನ ಆಗುತ್ತಿದ್ದಂತೆ, ಕಾರು, ಬೈಕುಗಳಲ್ಲಿ ಫೈಟರ್ ಕೋಳಿಗಳ ಸಮೇತ ಹಂತ ಹಂತವಾಗಿ ಜನ ಆಗಮಿಸಿದರು. ಮೂರು ಗಂಟೆ ಹೊತ್ತಿಗೆ ಆ ಜಾಗಕ್ಕೆ ಬರೋಬ್ಬರಿ 300ಕ್ಕೂ ಹೆಚ್ಚು ಜನ ಸೇರಿದ್ದರು. ಇಲ್ಲಿಗೆ ಬರುವ ಫೈಟರ್ ಹುಂಜಗಳು ಸ್ಥಳೀಯದ್ದಲ್ಲ. ಬೆಂಗಳೂರು ಸಿಟಿ ಮಧ್ಯೆ ನಡೆಯೋ ಈ ಕೋಳಿ ಅಂಕಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಮಂಗಳೂರಿನಿಂದ ಬೇರೆ ಬೇರೆ ಜಾತಿಯ ಫೈಟರ್ ಹುಂಜಗಳನ್ನು ಕಾರುಗಳಲ್ಲಿ ತೆಗೆದುಕೊಂಡು ಬರಲಾಗುತ್ತದೆ, ಅದರಲ್ಲೂ ತಮಿಳುನಾಡಿನ ವ್ಯಕ್ತಿ ಕಾರಲ್ಲಿ ಬಟ್ಟೆ ಮುಚ್ಚಿ ಕೋಳಿ ತರೋದು ಹೆಚ್ಚು ಎಂಬ ಮಾತುಗಳ ಸಹ ಕೇಳಿ ಬಂದವು.

    ಪ್ರವೇಶ ಫೀ 500 ರೂಪಾಯಿ:
    ಕನಿಷ್ಠ 20 ರಿಂದ 30 ಬೇರೆ ಬೇರೆ ಜಾತಿ ಹುಂಜಾಗಳನ್ನು ತಂದು ಮಸಾಜ್ ಶುರು ಮಾಡ್ತಾರೆ. ಒಬ್ಬ ವ್ಯಕ್ತಿಯ ಎಂಟ್ರಿಗೆ 500 ರೂಪಾಯಿ. ಆದ್ರೆ ಕೋಳಿ ಎಂಟ್ರಿಗೆ ಐದು ಸಾವಿರ ಕೊಡಬೇಕು. ಯಾವ ಹುಂಜದ ಮೇಲೆ ಯಾವ ಹುಂಜ ಫೈಟ್ ಮಾಡಬೇಕು ಅಂತಾ ಸ್ಥಳದಲ್ಲೇ ಬೆಡ್ಡಿಂಗ್ ಮಾಡಿ ನಿರ್ಧಾರ ಮಾಡಲಾಗುತ್ತದೆ. ನಂತರ ಮಂಗಳೂರಿನಿಂದ ಸ್ಪೆಷಲ್ ಆಗಿ ತಂದಿರೋ ಈ ಶಾರ್ಪ್ ಚಾಕುಗಳನ್ನು ಫೈಟ್‍ಗೆ ರೆಡಿಯಾದ ಹುಂಜಗಳ ಕಾಲಿಗೆ ಕಟ್ಟುತ್ತಾರೆ.

    ಒಂದೊಂದು ಫೈಟ್‍ಗೆ 5-15 ಲಕ್ಷ ಬೆಟ್ಟಿಂಗ್:
    ಒಂದೊಂದು ಹುಂಜ ಕೂಡ ಐದು ಕೆಜಿಗೆ ಮೇಲ್ಪಟ್ಟು ತೂಕ ಇರುತ್ತವೆ. ಒಂದೊಂದು ಫೈಟ್ ವೇಳೆಯೂ ಕನಿಷ್ಠ ಐದರಿಂದ ಹದಿನೈದು ಲಕ್ಷ ರೂ.ವರೆಗೆ ನಡೆಯುತ್ತದೆ. ಬೆಂಗಳೂರು, ಮಂಗಳೂರು, ಆಂಧ್ರ ಪ್ರದೇಶ, ತಮಿಳುನಾಡಿನಿಂದ ಬರುವ ಜನಗಳು ಹೆಚ್ಚಾಗಿ ಬರುತ್ತಾರೆ. ಇನ್ನೂ ಇಲ್ಲಿಗೆ ಬರುವ ಜನರಿಗೆ ಬಿಸಿ ಬಿಸಿ ರಾಗಿ ಮುದ್ದೆ, ಮಟನ್ ಸಾರು ರೆಡಿ ಇರುತ್ತದೆ. ಒಂದು ಊಟಕ್ಕೆ ಬರೋಬ್ಬರಿ ಇನ್ನೂರೈವತ್ತು ರೂ. ಕಾಸು ಫಿಕ್ಸ್ ಇರುತ್ತೆ. ಒಂದು ಸಿಗರೆಟ್ 40 ರೂ., ಅರ್ಧ ಲೀಟರ್ ನೀರಿನ ಬೆಲೆ ಮೂವತ್ತು ರೂಪಾಯಿ. ಒಂದು ಬಾಳೆಹಣ್ಣು 15 ರೂ. ಅಂತ ನಿಗದಿ ಮಾಡಲಾಗುತ್ತದೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಈ ಚಟುವಟಿಕೆಗಳ ಕಿಂಗ್‍ಪಿನ್ ಹೆಸರು ದೇವರಾಜ್. ಈ ಜಾಗಕ್ಕೆ ಅಪರಿಚಿತರು ಯಾರು ಬರದಂತೆ ಮತ್ತು ಇಲ್ಲಿ ಯಾವುದೇ ಗಲಾಟೆ ಆಗದಂತೆ ನೋಡಿಕೊಳ್ಳಲು ಸುಮಾರು 20 ಜನರನ್ನು ನೇಮಿಸಲಾಗಿದೆ. ಅವರೆಲ್ಲ ಅಂಕದ ಸುತ್ತಲೇ ನಿಂತು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಕೋಳಿ ಪಂದ್ಯದ ಜೊತೆ ಮಟ್ಕಾ ದಂಧೆ ಸಹ ನಡೆಯುತ್ತಿದೆ. ಇದನ್ನೂ ಓದಿ: ಸಿದ್ಧಾರ್ಥ್ ಶುಕ್ಲಾ ಕುಸಿದ ವೀಡಿಯೋ ವೈರಲ್ – ಸತ್ಯ ಇಲ್ಲಿದೆ

  • ಆದೇಶ ಪಾಲಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ

    ಆದೇಶ ಪಾಲಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ

    ನವದೆಹಲಿ: ಆದೇಶ ಪಾಲನೆ ಮಾಡದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ ಆಗಿದ್ದು, ಕೂಡಲೇ ಕಾರ್ಯಪ್ರವೃತ್ತರಾಗಿ ಕೆಲಸ ಆರಂಭಿಸುವಂತೆ ಖಡಕ್ ಎಚ್ಚರಿಕೆ ನೀಡಿದೆ.

    ನಗರದ ಬಾಗಲೂರು ಬಳಿ ಕಸ ವಿಲೇವಾರಿ ಮಾಡುತ್ತಿದ್ದ ಬಿಬಿಎಂಪಿ ವಿರುದ್ಧ ನ್ಯಾಯಾಲಯಕ್ಕೆ ಸ್ಥಳೀಯರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ಅಧಿಕಾರಿಗಳ ನಡೆಯನ್ನು ಹಸಿರು ನ್ಯಾಯಾಧಿಕರಣ ಪ್ರಶ್ನಿಸಿ ತರಾಟೆಗೆ ತಗೆದುಕೊಂಡಿದೆ.

    ಬಾಗಲೂರಿನಲ್ಲಿ ಬಿಬಿಎಂಪಿ ಡಂಪ್ (ವಿಲೇವಾರಿ) ಮಾಡಿದ್ದ ಎಲ್ಲ ಕಸವನ್ನು ಹೊರ ತೆಗೆದು, ಬೇರೆಡೆ ಸ್ಥಳಾಂತರ ಮಾಡುವಂತೆ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಸೂಚಿಸಿತ್ತು. ಆದರೆ ಬಿಬಿಎಂಪಿ ಮಾತ್ರ ಇದುವರೆಗೂ ಏನು ಕ್ರಮ ಕೈಗೊಂಡಿಲ್ಲ ಅಂತಾ ಅರ್ಜಿದಾರ ಶ್ರೀನಿವಾಸ ಪರ ವಕೀಲರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪರ ವಕೀಲರು ಈಗಾಗಲೇ ಬಾಗಲೂರಿನಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ಐದು ತಿಂಗಳಿನಿಂದ ಕಸ ತೆಗೆಯುವ ಕೆಲಸ ಮಾಡಲಾಗುತ್ತಿದ್ದು, ಶೀಘ್ರವೇ ಬಯೋ ಮೈನಿಂಗ್ ಮುಗಿಸುತ್ತೇವೆ ಅಂತಾ ವಾದ ಮಂಡಿಸಿದರು.

    ಬಿಬಿಎಂಪಿ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾ.ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠವು ಪರಿಗಣಿಸಲಿಲ್ಲ. ‘ನೀವು ಪದೇ ಪದೇ ಇದನ್ನೇ ಹೇಳುತ್ತಿರುವಿರಿ. ನಿಮಗೆ ಕೆಲಸ ಮಾಡಿ ಅಂತಾ ಎಷ್ಟು ಸಲ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿತು.

    ಕಸದ ರಾಶಿಯಿಂದ ಮಿಥೇನ್ ಉತ್ಪತ್ತಿಯಾಗಿ ಬೆಂಕಿ ತಗಲುವ ಸಾಧ್ಯತೆ ಇದೆ. ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣ ಬಯೋ ಮೈನಿಂಗ್ ಆಗಬೇಕು ಎಂದು ಬಿಬಿಎಂಪಿಗೆ ಆದೇಶಿಸಿದ ನ್ಯಾ.ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠವು ಅಕ್ಟೋಬರ್ 8ಕ್ಕೆ ವಿಚಾರಣೆ ಮುಂದೂಡಿತು.