Tag: ಬಾಗಲಗುಂಟೆ ಪೊಲೀಸ್

  • ವೀಡಿಯೋ ಕಾಲ್‍ನಲ್ಲಿ ಪತ್ನಿಗೆ ಹೆದರಿಸಲು ಹೋಗಿ ನೇಣಿಗೆ ಬಲಿಯಾದ ಜಿಮ್ ಟ್ರೈನರ್

    ವೀಡಿಯೋ ಕಾಲ್‍ನಲ್ಲಿ ಪತ್ನಿಗೆ ಹೆದರಿಸಲು ಹೋಗಿ ನೇಣಿಗೆ ಬಲಿಯಾದ ಜಿಮ್ ಟ್ರೈನರ್

    ಬೆಂಗಳೂರು: ಪತ್ನಿಗೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಲು ಯತ್ನಿಸಿದ ಜಿಮ್ ಟ್ರೈನರ್ (Gym Trainer) ಸಾವಿಗೀಡಾದ ಘಟನೆ ನಗರದ ಬಾಗಲಗುಂಟೆಯಲ್ಲಿ (Bagalakunte) ನಡೆದಿದೆ.

    ಮೃತನನ್ನು ಬಿಹಾರ (Bihar) ಮೂಲದ ಅಮಿತ್ ಕುಮಾರ್ (28) ಎಂದು ಗುರುತಿಸಲಾಗಿದೆ. ಸುಮಾರು ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದ ಅಮಿತ್, ಹಾಸನ ಮೂಲದ ಯುವತಿಯನ್ನ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಹಾಗೂ ಅಮಿತ್ ನಡುವೆ ಗಲಾಟೆ ನಡೆದು, ಆಕೆ ತವರು ಮನೆ ಸೇರಿದ್ದಳು. ಇದರಿಂದ ಬೇಸತ್ತ ಅಮಿತ್ ಆಕೆಗೆ ವೀಡಿಯೋ ಕಾಲ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲು ಮುಂದಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದ್ದು, ನೇಣು ಬಿಗಿದುಕೊಂಡಿದೆ. ಇದರಿಂದ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮನೆಯ ಬಾತ್‌ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಕಳೆದ ಮೂರು ವರ್ಷಗಳ ಹಿಂದೆ ಅಮಿತ್ ಯುವತಿಯನ್ನು ಮದುವೆಯಾಗಿದ್ದ. ಮೂರು ತಿಂಗಳ ಹಿಂದೆ ಅಮಿತ್ ಪತ್ನಿ ನಸಿರ್ಂಗ್ ಕೆಲಸಕ್ಕೆ ಸೇರಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಈ ಹಿಂದೆ ಜಗಳ ನಡೆದಿತ್ತು. ಇದಾದ ಬಳಿ ಆಕೆ ತವರು ಮನೆ ಸೇರಿದ್ದಳು. ಕಳೆದ ವಾರ ಆಕೆಯನ್ನು ಕರೆದುಕೊಂಡು ಬಂದಿದ್ದ ಅಮಿತ್ ಮತ್ತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದ. ಇದರಿಂದ ಮನನೊಂದ ಮಹಿಳೆ ಮರಳಿ ತವರು ಮನೆಗೆ ಹೋಗಿದ್ದಳು.

    ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

  • ರೂಪಾ ವಿರುದ್ಧ ಕೇಸ್ ದಾಖಲಿಸಲು ಕಾನೂನು ತಜ್ಞರ ಮೊರೆ ಹೋದ ಪೊಲೀಸರು

    ರೂಪಾ ವಿರುದ್ಧ ಕೇಸ್ ದಾಖಲಿಸಲು ಕಾನೂನು ತಜ್ಞರ ಮೊರೆ ಹೋದ ಪೊಲೀಸರು

    ಬೆಂಗಳೂರು: ರೋಹಿಣಿ ಸಿಂಧೂರಿ (Rohini Sindhuri) ಪತಿ ಸುಧೀರ್ ರೆಡ್ಡಿ (Sudhir Reddy) ನೀಡಿದ ದೂರಿನ ಮೇರೆಗೆ ಪೆಟಿಷನ್ ಸಿದ್ಧಮಾಡಿಕೊಂಡಿರುವ ಬಾಗಲಗುಂಟೆ ಠಾಣೆ ಪೊಲೀಸರು, ಎಫ್‌ಐಆರ್ ಮಾಡಬೇಕಾ? ಬೇಡವಾ? ಅಂತಾ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

    ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (D Roopa Moudgil), ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಸುಧೀರ್ ರೆಡ್ಡಿ ಡಿ. ರೂಪಾ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಗೆ (Bagalagunte Police Station) ದೂರು ನೀಡಿದ್ದರು. ಈ ದೂರನ್ನ ಪೊಲೀಸ್ರು ಪೆಟಿಷನ್ ಮಾಡಿಕೊಂಡಿದ್ದಾರೆ.

    D roopa

    ಸೋಮವಾರ ದೂರು ಪಡೆದಿದ್ದ ಬಾಗಲಗುಂಟೆ ಪೊಲೀಸರು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಪೆಟಿಷನ್ ಮಾಡ್ಕೊಂಡಿದ್ದಾರೆ. ಎನ್‌ಸಿಆರ್ ದಾಖಲಿಸಿದ್ದರೆ ಗಂಭೀರವಲ್ಲದ ಪ್ರಕರಣ ಅಂತ ಪರಿಗಣಿಸಬಹುದಿತ್ತು. ಹೀಗಾಗಿ ಪೆಟಿಷನ್ ಮಾಡ್ಕೊಂಡ್ರೆ ಮುಂದೆ ಎಫ್‌ಐಆರ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ

    ಪೆಟಿಷನ್ ಮಾಡ್ಕೊಂಡು ಮುಂದಿನ ನಡೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸುತ್ತಿದ್ದಾರೆ. ನಿನ್ನೆ ದೂರು ಕೊಟ್ಟಿದ್ದು ಇನ್ನೂ ಎಫ್‌ಐಆರ್ ಆಗದ ಹಿನ್ನೆಲೆಯಲ್ಲಿ ರೋಹಿಣಿ ಕುಟುಂಬ ಕೋರ್ಟ್ ಮೊರೆ ಹೋಗಿ ಎಫ್‌ಐಆರ್ (FIR) ಮಾಡಿಸಲು ತಯಾರಿ ಸಹ ನಡೆಸಿದೆ.

    rohini sindhuri roopa

    ಒಟ್ಟಿನಲ್ಲಿ ರೂಪಾ ವಿರುದ್ಧ ಎಫ್‌ಐಆರ್ ದಾಖಲಾದರೆ ಬಾಗಲಗುಂಟೆ ಠಾಣೆಗೆ ಹಾಜರಾಗಿ ರೂಪಾ ಮೊಬೈಲ್ ಹ್ಯಾಕ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ

    rohini sindhuri husband sudhir reddy

    ರೂಪಾ ವಿರುದ್ಧ ದೂರಿನಲ್ಲಿ ಏನಿತ್ತು?
    ನನ್ನ ಧರ್ಮಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ರೂಪಾ ಅವರು ಸಾಮಾಜಿಕ ಜಾಲಾತಾಣದಲ್ಲಿ ಹಾಕಿ ಸಿಂಧೂರಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ರೂಪಾ ಅವರು ವೈಯಕ್ತಿಕ ಫೋಟೋಗಳನ್ನ ಹಂಚಿಕೊಂಡಿರೋದು ನೋಡಿದ್ರೆ ಅವರೇ ಹ್ಯಾಕ್ ಮಾಡಿರುವ ಅನುಮಾನ ಗೋಚರಿಸುತ್ತಿದೆ. ಆದ್ದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವ ರೂಪಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಫೋಟೋಗಳು ಸಿಕ್ಕಿದ್ದರ ಹಿಂದಿನ ಸತ್ಯಾಸತ್ಯತೆಯನ್ನ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಸುಧೀರ್ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ

    ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕಿತ್ತಾಟದ ನಡುವೆ ಇದೀಗ ರೋಹಿಣಿ ಪತಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

    `ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಡಿ. ರೂಪಾ ಮೌದ್ಗಿಲ್, ಸಿಂಧೂರಿ ಅವರ ತೇಜೋವಧೆ ಮಾಡಿದ್ದಾರೆ’ ಎಂದು ಆರೋಪಿಸಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ (Sudhir Reddy) ದೂರು ನೀಡಿದ್ದಾರೆ. ಇದನ್ನೂ ಓದಿ: ರೋಹಿಣಿ ಬಗ್ಗೆ ಮಾತನಾಡೋದಕ್ಕೆ ರೂಪಾ ಯಾರು?: ಸುಧೀರ್ ರೆಡ್ಡಿ ಆಕ್ರೋಶ

    ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಸುಧೀರ್‌ ರೆಡ್ಡಿ ಬಾಗಲಗುಂಟೆ ಪೊಲೀಸ್ ಠಾಣೆಗೆ (Bagalagunte Police Station) ದೂರು ನೀಡಿದ್ದಾರೆ. ಇದನ್ನೂ ಓದಿ: ರೋಹಿಣಿ-ರೂಪಾ ವಿರುದ್ಧ ಕಾನೂನು ‌ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

    ನನ್ನ ಧರ್ಮಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ರೂಪಾ ಅವರು ಸಾಮಾಜಿಕ ಜಾಲಾತಾಣದಲ್ಲಿ (Social Media) ಹಾಕಿ ಸಿಂಧೂರಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ರೂಪಾ ಅವರು ವೈಯಕ್ತಿಕ ಫೋಟೋಗಳನ್ನ ಹಂಚಿಕೊಂಡಿರೋದು ನೋಡಿದ್ರೆ ಅವರೇ ಹ್ಯಾಕ್ ಮಾಡಿರುವ ಅನುಮಾನ ಗೋಚರಿಸುತ್ತಿದೆ. ಆದ್ದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವ ರೂಪಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಫೋಟೋಗಳು ಸಿಕ್ಕಿದ್ದರ ಹಿಂದಿನ ಸತ್ಯಾಸತ್ಯತೆಯನ್ನ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯ ಬಾಗಲಗುಂಟೆ ಪೊಲೀಸರು ಕೊಟ್ಟ ದೂರನ್ನ ಸ್ವೀಕರಿಸಿದ್ದು, ಕಾನೂನು ತಜ್ಞರ ಬಳಿ ಚರ್ಚಿಸಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಲಿಕಾನ್ ಸಿಟಿ ಜನರೇ ಎಚ್ಚರ- ಬೆಂಗ್ಳೂರಿಗೆ ಕಾಲಿಟ್ಟಿದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್

    ಸಿಲಿಕಾನ್ ಸಿಟಿ ಜನರೇ ಎಚ್ಚರ- ಬೆಂಗ್ಳೂರಿಗೆ ಕಾಲಿಟ್ಟಿದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್

    -ಮನೆ ಮುಂದೆ ನಿಲ್ಲಿಸುವ ಕಾರುಗಳೇ ಟಾರ್ಗೆಟ್
    -ಆನ್‍ಲೈನ್‍ನಲ್ಲಿ ಕೀ ಓಪನರ್ ಬುಕ್ ಮಾಡ್ತಿದ್ರು

    ಬೆಂಗಳೂರು: ಮನೆ ಮುಂದೆ ಕಾರ್ ನಿಲ್ಲಿಸುವ ಸಿಲಿಕಾನ್ ಸಿಟಿ ಮಂದಿ ಎಚ್ಚರದಿಂದಿರಿ. ಯಾಕಂದ್ರೆ ಬೆಂಗಳೂರಿಗೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್ ಕಾಲಿಟಿದ್ದು, ಕೇವಲ 5 ನಿಮಿಷದಲ್ಲಿ ನಿಮ್ಮ ಕಾರು ಕದ್ದು ಎಸ್ಕೇಪ್ ಆಗುತ್ತಾರೆ.

    ಹೌದು. ಈ ಖರ್ತನಾಕ್ ಗ್ಯಾಂಗ್ ಯೂಟ್ಯೂಬ್ ಪ್ರಿಯರು, ಯೂಟ್ಯೂಬ್ ನಿಂದಲೇ ಲಕ್ಷಾಂತರ ರೂ. ಸಂಪಾದನೆ ಮಾಡಿದವರು. ಆ ಯ್ಯೂಟ್ಯೂಬ್ ನಿಂದಲೇ ಈಗ ಜೈಲನ್ನೂ ಕೂಡ ಸೇರಿದ್ದಾರೆ. ಆಶ್ಚರ್ಯ ಎನಿಸಿದರು ಇದು ನಿಜ. ಈ ಖತರ್ನಾಕ್ ಕಳ್ಳರು ಯೂಟ್ಯೂಬ್ ನೋಡಿಕೊಂಡೆ ಕಳ್ಳತನ ಮಾಡುತ್ತಾರೆ. ಯಾವ ಕಾರು ಕದಿಯೋಕೆ ಯಾವ ಟೆಕ್ನಿಕ್ ಬೇಕು ಅನ್ನೋದು ಯೂಟ್ಯೂಬ್ ವಿಡಿಯೋಗಳನ್ನು ನೋಡಿಯೇ ಫೈನಲ್ ಮಾಡಿ, ಮನೆ ಮುಂದೆ ನಿಲ್ಲಿಸುವ ಕಾರುಗಳನ್ನು ಸಲೀಸಾಗಿ ಕದ್ದು ಪರಾರಿಯಾಗಿ ಬಿಡುತ್ತಿದ್ದರು.

    ಈ ಕುಖ್ಯಾತ ಕಾರು ಕಳ್ಳರ ಗ್ಯಾಂಗ್‍ನಲ್ಲಿದ್ದ ಮೂವರು ಸದ್ಯ ಬಾಗಲಗುಂಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ದಿಲೀಶ್, ಶಾಜಿ ಕೇಶವನ್, ಆಲಿ ಅಹಮ್ಮದ್ ಎಂದು ಗುರುತಿಸಲಾಗಿದೆ. ನಗರದ ಹಲವೆಡೆ ಸುಮಾರು 9ಕ್ಕೂ ಹೆಚ್ಚು ಕಾರನ್ನ ಆರೋಪಿಗಳು ಕಳ್ಳತನ ಮಾಡಿದ್ದರು. ಬಂಧಿತ ಆರೋಪಿ ದಿಲೀಶ್ ಆನ್ ಲೈನ್‍ನಲ್ಲಿ ಕೀ ಓಪನರ್ ಬುಕ್ ಮಾಡಿ, ತರಿಸಿ ಅದರ ಮೂಲಕ ಕಾರುಗಳನ್ನು ಕದಿಯುತ್ತಿದ್ದ. ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರ್ ಗ್ಲಾಸ್‍ನ್ನ ಒಡೆದು ಸ್ಟೇರಿಂಗ್ ವಯರ್‍ಗೆ ಕೀ ಓಪನರ್ ಅಟಾಚ್ ಮಾಡಿ ಈ ಗ್ಯಾಂಗ್ ಕಳ್ಳತನ ಮಾಡುತ್ತಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಮೂವರು ಖತರ್ನಾಕ್ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಯೂಟ್ಯೂಬ್ ಮೂಲಕ ಕಾರು ಕಳ್ಳತನ ಮಾಡುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

    ಈ ಗ್ಯಾಂಗ್ ಕದ್ದ ಕಾರುಗಳನ್ನ ಮಂಗಳೂರು, ಆಂಧ್ರಪ್ರದೇಶ ಹಾಗೂ ಇತರೆ ರಾಜ್ಯಗಳಿಗೆ ಮಾರಾಟ ಮಾಡಿದ್ದಾರೆ. ಕಾರು ಕಳ್ಳತನಕ್ಕೂ ಮುನ್ನ ಮೂರು, ಮೂರು ಬಾರಿ ವಿಡಿಯೋ ಅನ್ನು ಕೂಲಂಕುಷವಾಗಿ ನೋಡಿ ಕಳ್ಳತನಕ್ಕೆ ಆರೋಪಿಗಳು ತಯಾರಾಗುತ್ತಿದ್ದರು. ಕಾರು ಯಾವ ಮಾಡೆಲ್ ಇದೆ. ಹೇಗೆ ಕಳ್ಳತನ ಮಾಡಬಹುದು ಅನ್ನೋದನೆಲ್ಲಾ ಯೂಟ್ಯೂಬ್‍ನಲ್ಲಿ ನೋಡಿಕೊಂಡು, ಅದರಲ್ಲಿ ಇರುವ ಪ್ಲಾನ್ ರೀತಿಯಲ್ಲಿಯೇ ಕಾರನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು ಎಂದು ಪೊಲೀಸರ ಬಳಿ ಕಳ್ಳರು ಹೇಳಿದ್ದಾರೆ.

    ಜೊತೆಗೆ ಖತರ್ನಾಕ್ ಗ್ಯಾಂಗ್ ಸಾಕಷ್ಟು ಪ್ರಕರಣಗಳನ್ನು ಇದೇ ರೀತಿ ಮಾಡಿರುವುದು ವಿಚಾರಣೆ ವೇಳೆ ಬಯಲಾಗಿದೆ. ಈ ಕಳ್ಳರು ಅದೆಷ್ಟು ಖತರ್ನಾಕ್ ಎಂದರೆ ಯೂಟ್ಯೂಬ್ ವಿಡಿಯೋಗಳನ್ನು ಡೌನ್‍ಲೋಡ್ ಮಾಡಿಟ್ಟುಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ.