Tag: ಬಾಗಲಕುಂಟೆ

  • ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

    ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

    ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದು ತಾಯಿ (Mother) ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆ (Bagalkunte) ಬಳಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ.

    ಭುವನ್ (1), ಬೃಂದಾ (4), ತಾಯಿ ವಿಜಯಲಕ್ಷ್ಮಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ರಾತ್ರಿ ವಿಜಯಲಕ್ಷ್ಮಿ ತಂಗಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಮೂಲತಃ ರಾಯಚೂರು ಮಸ್ಕಿ ಮೂಲದ ರಮೇಶ್, ವಿಜಯಲಕ್ಷ್ಮಿ ಮದುವೆಯಾಗಿ ಐದು ವರ್ಷವಾಗಿತ್ತು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ:  MUDA Scam| ಕೈ ನಾಯಕ ಪಾಪಣ್ಣಗೆ ವಿಜಯನಗರದ 4ನೇ ಹಂತದಲ್ಲಿ ಹಂಚಿಕೆಯಾಗಿತ್ತು 31 ಸೈಟ್‌

     

    ಪತಿ ರಮೇಶ್ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸಾವಿನ ಬಗ್ಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಕಾಬೂಲ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

    ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪತಿಯೇ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ರಮೇಶ್‌ ಮತ್ತೊಂದು ಮದುವೆಯಾಗಿದ್ದು ಡಿವೋರ್ಸ್ ಕೊಡುವಂತೆ ಪತ್ನಿಗೆ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಪದೇ ಪದೇ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಈ ವಿಚಾರ ಕುಟುಂಬಸ್ಥರ ಬಳಿ ವಿಜಯಲಕ್ಷ್ಮಿ ಹೇಳಿದ್ದಳು. ಈತನ ಹಿಂಸೆಯಿಂದ ಬೇಸತ್ತು ವಿಜಯಲಕ್ಷ್ಮಿ ತನ್ನ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿದ್ದಾರೆ.

  • ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

    ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

    ಬೆಂಗಳೂರು: ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ ಟಿ.ದಾಸರಹಳ್ಳಿಯ ಬಾಗಲಗುಂಟೆ ಬಳಿ ಘಟನೆ ನಡೆದಿದೆ.

    ಕೆಂಡಕ್ಕೆ ಬಿದ್ದ ಮಹಿಳೆಯನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಬಾಗಲಗುಂಟೆ ಗ್ರಾಮದೇವತೆ ಉತ್ಸವದ ವೇಳೆ ಅವಘಡ ಸಂಭವಿಸಿದೆ.

    ಗೌರಮ್ಮ ಅವರು ದೇವರಿಗೆ ಹರಕೆ ಮಾಡಿಕೊಂಡಿದ್ದು, ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿ ಸಾರ್ವಜನಿಕರು ಆಕೆಯನ್ನು ಮೇಲಕ್ಕೆಳೆದು ರಕ್ಷಿಸಿದ್ದಾರೆ. ಆದರೆ ಅದಾಗಲೇ ಗಂಭೀರ ಗಾಯಗೊಂಡಿರುವ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮ ದೇವತೆಯ ಜಾತ್ರೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಇಂದು ಜಾತ್ರೆಯ ಕೊನೆ ಆಚರಣೆಯಾಗಿ ಕೆಂಡಾ ಹಾಯುವ ಸಾಂಪ್ರಾದಾಯಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಘಟನೆಯಿಂದ ದೇವಾಲಯದ ಆವರಣದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿದೆ.

    ಕಳೆದ ಎರಡು ವರ್ಷಗಳ ಹಿಂದೆ ದೇವಾಲಯದ ಆರ್ಚರು ಕೆಂಡ ಹಾಯುವಾಗ ಜಾರಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದರು.